ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ. ಈ ಅಕ್ಷರಗಳನ್ನು ವರ್ಣಗಳೆಂದು ಕರೆಯುತ್ತಾರೆ. ಈ ಅಕ್ಷರಗಳ/ವರ್ಣಗಳ ಕ್ರಮಬದ್ಧ ಜೋಡಣೆಗೆ 'ವರ್ಣಮಾಲೆ' ಅಥವಾ 'ಅಕ್ಷರಮಾಲೆ' ಎಂದು ಹೆಸರು.

ಕನ್ನಡ ವರ್ಣಮಾಲೆಯಲ್ಲಿ 3 ವಿಧಗಳಿವೆ.
13 ಸ್ವರಗಳು – ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ
9 ಯೋಗವಾಹಗಳು – ಅಂ ಅಃ
25+9 ವ್ಯಂಜನಗಳು 
ಕ ಖ ಗ ಘ ಙ.
ಚ ಛ ಜ ಝ ಞ.
ಟ ಠ ಡ ಢ ಣ.
ತ ಥ ದ ಧ ನ.
ಪ ಫ ಬ ಭ ಮ.
ಯ ರ ಲ ವ ಶ ಷ ಸ ಹ ಳ.

ಸ್ವತಂತ್ರವಾಗಿ ಸ್ಪಷ್ಟವಾಗಿ ಉಚ್ಚರಿಸಲ್ಪಡುವ ಅಕ್ಷರಮಾಲೆಯನ್ನು ಸ್ವರಗಳು ಎನ್ನುತ್ತಾರೆ. ಸ್ವರಗಳು 13 ಅಕ್ಷರಗಳಿವೆ. ಅವುಗಳು ಯಾವೆಂದರೆ:- ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ.

ಕನ್ನಡ ವರ್ಣಮಾಲೆಗಳಲ್ಲಿ ಸ್ವರಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
1)ಹೃಸ್ವಸ್ವರಗಳು:- ಒಂದು ಮಾತ್ರ ಕಾಲದಲ್ಲಿ ಉಚ್ಚಿರಿಸಲ್ಪಡುವ ಅಕ್ಷರಗಳಿಗೆ ಹೃಸ್ವಸ್ವರ ಎನ್ನುತ್ತಾರೆ.
ಹೃಸ್ವ ಸ್ವರಗಳು ಉದಾ :-ಅ ಇ ಉ ಋ ಎ ಒ.

2)ದೀರ್ಘಸ್ವರಗಳು:-ಎರಡು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ದೀರ್ಘಸ್ವರಗಳು ಎನ್ನುತ್ತಾರೆ. ದೀರ್ಘ ಸ್ವರಗಳನ್ನು ಉಚ್ಚರಿಸಲು ದೀರ್ಘವಾದ ಉಸಿರು ಬೇಕಾಗುತ್ತದೆ.
ದೀರ್ಘ ಸ್ವರಗಳು ಉದಾ :- ಆ ಈ ಊ ಏ ಐ ಓ ಔ.

3)ಪ್ಳುತ್ವ ಸ್ವರಗಳು:- ಮೂರು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಪ್ಲತ್ವಸ್ವರ ಎನ್ನುತ್ತಾರೆ. ಇದರ ಸ್ವರಗಳನ್ನು ದೀರ್ಘವಾಗಿ ಹೇಳುವುದಕ್ಕೆ ಪ್ಲತ್ವಸ್ವರ ಎನ್ನುತ್ತಾರೆ. ಪ್ಳುತ್ವ ಸ್ವರಗಳು ಉದಾ :- ಅಪ್ಪಾ, ತಮ್ಮಾ.
ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ವ್ಯಂಜನಗಳು ಎನ್ನುತ್ತಾರೆ.
ವ್ಯಂಜನಗಳಲ್ಲಿ ಎರಡು ವಿಧಗಳು.
1.ವರ್ಗೀಯ ವ್ಯಂಜನಗಳು.
2.ಅವರ್ಗೀಯ ವ್ಯಂಜನಗಳು.

1.ವರ್ಗೀಯ ವ್ಯಂಜನಗಳು:
ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ವ್ಯಂಜನಾಕ್ಷರಗಳಿಗೆ ವರ್ಗೀಯ ವ್ಯಂಜನಗಳು ಎನ್ನುತ್ತಾರೆ.
ಉದಾ :-
ಕ ಖ ಗ ಘ.
ಚ ಛ ಜ ಝ ಞ.
ಟ ಠ ಡ ಢ ಣ.
ತ ಥ ದ ಧ ನ.
ಪ ಫ ಬ ಭ ಮ.
ವರ್ಗೀಯ ವ್ಯಂಜನಗಳಲ್ಲಿ 3 ವಿಧಗಳು.
1)ಅಲ್ಪಪ್ರಾಣ.
2)ಮಹಾಪ್ರಾಣ.
3)ಅನುನಾಸಿಕಗಳು.
1)ಅಲ್ಪಪ್ರಾಣ :- ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಅಲ್ಪಪ್ರಾಣ ಎನ್ನುತ್ತಾರೆ.
ಉದಾ :- ಕ,ಚ,ಟ,ತ,ಪ ಗ,ಜ,ದ,ಡ,ಬ.

2)ಮಹಾಪ್ರಾಣ :- ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಮಹಾಪ್ರಾಣ ಎನ್ನುತ್ತಾರೆ. ಉದಾ :- ಖ,ಛ,ಠ,ಥ,ಫ ಘ,ಝ,ಧ,ಢ,ಭ.

3)ಅನುನಾಸಿಕಗಳು :- ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ವ್ಯಂಜನಗಳಿಗೆ ಅನುನಾಸಿಕಗಳು ಎನ್ನುತ್ತಾರೆ. ಉದಾ :- ಙ,ಞ,ಣ,ನ,ಮ.

2.ಅವರ್ಗಿಯ ವ್ಯಂಜನಗಳು:
ವರ್ಗಗಳನ್ನು ಮಾಡಲು ಸಾಧ್ಯವಿಲ್ಲದ ವ್ಯಂಜನಗಳಿಗೆ ಅವರ್ಗಿಯ ವ್ಯಂಜನಗಳು ಎನ್ನುತ್ತಾರೆ.
ಉದಾ :- ಯ ರ ಲ ವ ಶ ಷ ಸ ಹ ಳ.
ಬೇರೆ ಅಕ್ಷರಗಳ ಸಹಯೋಗದಿಂದ ಉಚ್ಚರಿಸಲ್ಪಡುವ ವರ್ಣಗಳಿಗೆ ಅಥವಾ ಅಕ್ಷರಗಳಿಗೆ ಯೋಗವಾಹಕಗಳು ಎನ್ನುತ್ತಾರೆ. ಯೋಗವಾಹಕಗಳು
ಅನುಸ್ವರ (ಅಂ)
ವಿಸರ್ಗ (ಅ:)

1)ಅನುಸ್ವರ :- ಯಾವುದೇ ಅಕ್ಷರವು ಅಥವಾ ಪದವು ಒಂದೇ ಬಿಂದುವನ್ನು ಹೊಂದಿದರೆ.ಅವುಗಳನ್ನು ಅನುಸ್ವರ ಎನ್ನುವರು. ಉದಾ :- ಲಿಂಗ, ಅಂಗ, ಕಂಕಣ, ಗುಂಪು, ತಂದೆ.

2)ವಿಸರ್ಗ :- ಯಾವುದೇ ಅಕ್ಷರವು ಅಥವಾ ಪದವು ಎರಡು ಬಿಂದುಗಳನ್ನು ಹೊಂದಿದರೆ ಅವುಗಳನ್ನು ವಿಸರ್ಗ ಎನ್ನುವರು. ಉದಾ :- ದುಃಖ, ಪುನಃ, ನಮಃ, ಅಂತಃಪುರ,
Please enable JavaScript in your browser to complete this form.
Full Name
Scroll to Top