ಕನ್ನಡ ಕಾಗುಣಿತವು ಕನ್ನಡ ಅಕ್ಷರಮಾಲೆಯಲ್ಲಿನ ಪ್ರತಿಯೊಂದು ವ್ಯಂಜನಗಳಿಗೂ ಪ್ರತಿಯೊಂದು ಸ್ವರವನ್ನು ಸೇರಿಸುವುದು ಹೇಗೆ ಎಂದು ತಿಳಿಸಿಕೊಡುವ ವ್ಯಾಕರಣದ ಕ್ರಮವೇ ಕನ್ನಡ ಕಾಗುಣಿತ / ಗುಣಿತಾಕ್ಷರ ಎಂದು ಕರೆಯಲಾಗುತ್ತದೆ. ಉದಾ: ಕ್ ವ್ಯಂಜನಕ್ಕೆ ಅ ಸ್ವರವನ್ನು ಸೇರಿಸಿದಾಗ, ಕ ಬರುತ್ತದೆ. ಕ್ ವ್ಯಂಜನಕ್ಕೆ ಓ ಸ್ವರವನ್ನು ಸೇರಿಸಿದಾಗ, ಕೋ ಬರುತ್ತದೆ. ಒಂದು ವ್ಯಂಜನದ ಸಂಪೂರ್ಣ ಕಾಗುಣಿತ, ಆ ವ್ಯಂಜನದ ಎಲ್ಲಾ ಸ್ವರಗಳೊಂದಿಗಿನ ಸಂಬಂಧವನ್ನು ತೋರಿಸುತ್ತದೆ.