ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :
1. ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದು ಕೇಳಿದ ?
ಪುಟ್ಟಜ್ಜಿಯ ಬಳಿ ಹುಡುಗ ಯಾವುದಾದರೂ ಒಂದು ಹಾಡ್ಗತೆ ಹೇಳಬೇಕೆಂದು ಕೇಳಿದ.
2. ಯುವಕ ಮನೆಯ ಮುಂದೆ ಏನು ಮಾಡಿದ ?
ಯುವಕ ಮನೆಯ ಮುಂದೆ ತೋಟ ಮಾಡಿದ .
3. ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು ?
ಜಿಂಕೆಯ ಕುತ್ತಿಗೆಯಲ್ಲಿ ಒಂದು ಗೆಜ್ಜೆ ಇತ್ತು.
4 , ಹುಲಿ ಸೋತು ಏನು ಮಾಡಿತು ?
ಹುಲಿ ಸೋತು ಪಲಾಯನ ಮಾಡಿತು.
5 , ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿ ಏನು ಮಾಡಿತು ?
ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿಯು ಯುವಕನ ಮನೆಯೊಳಗೆ ಅವಿತುಕೊಂಡಿತು.
6. ಹಳ್ಳದ ದಂಡೆಯ ಮೇಲಿನ ಊರು ಏನಾಯಿತು ?
ಹಳ್ಳದ ದಂಡೆಯ ಮೇಲಿನ ಊರು ಬೆಳೆಯಿತು.
ಆ . ಕೆಳಗೆ ನೀಡಿರುವ ಪ್ರಶ್ನೆಗಳಿಗೆ ಎರಡು / ಮಾರು ವಾಕ್ಯಗಳಲ್ಲಿ ಉತ್ತರಿಸಿರಿ :
1. ಹಳ್ಳ ಹರಿದು ಊರ ಜನರನ್ನು ಏನು ಮಾಡಿದೆ?
ಹಳ್ಳವು ಹರಿದು ಊರ ಜನರನ್ನು ರಕ್ಷಿಸುತ್ತಿದೆ. ಜನರಿಗೆ ಬೇಕಾದ ನೀರಿನ ಸೌಕರ್ಯ ಆ ಹಳ್ಳದಿಂದ ಸಿಗುತ್ತಿದೆ. ಹಾಗೆ ಹಳ್ಳವು ಊರಿಗೆ ಸೊಬಗನ್ನು ನೀಡಿದೆ.
2. ಯುವಕ ಹಳ್ಳದ ಬಳಿಗೆ ಬಂದು ಏನು ಮಾಡಿದ?
ಯುವಕ ಹಳ್ಳದ ಬಳಿಗೆ ಬಂದು ಅಲ್ಲಿಯ ಸೊಬಗಿನ ದೃಶ್ಯವನ್ನು ಕಂಡು ಆಕರ್ಷಿತನಾಗಿ. ಜಾಗ ತುಂಬಾ ಚೆನ್ನಾಗಿದೆ ಎಂದುಕೊಂಡು ಅಲ್ಲಿಯೇ ಉಳಿಯುವ ಯೋಚನೆ ಮಾಡಿ ಮನೆಯನ್ನು ಕಟ್ಟಿದ. ನಂತರ ಮನೆಯ ಮುಂದೆ ತೋಟವನ್ನು ಮಾಡಿದ.
3. ಹುಲಿ ಮತ್ತು ಯುವಕನ ನಡುವೆ ನಡೆದ ಸಂಭಾಷಣೆ ಏನು ?
ಹುಲಿ ಯುವಕನಿಗೆ ಈ ಜಿಂಕೆ ನನ್ನ ಆಹಾರ, ಅದನ್ನು ನೀನು ರಕ್ಷಿಸುವಂತಿಲ್ಲ, ಹಾಗೆ ಮಾಡಿದರೆ ಅರಣ್ಯ ನಿಯಮಕ್ಕೆ ವಿರೋಧವಾಗುತ್ತದೆ. ಆದುದರಿಂದ ಜಿಂಕೆಯನ್ನು ಬಿಟ್ಟುಕೊಡು ಎಂದಾಗ ಯುವಕನು, ಈ ಜಿಂಕೆ ಅರಣ್ಯದ ಜಿಂಕೆಯಲ್ಲ , ಅದನ್ನು ಯಾರೋ ಸಾಕಿದ್ದಾರೆ. ಅದರ ಗುರುತಿಗಾಗಿ ಜಿಂಕೆಯ ಕುತ್ತಿಗೆಯಲ್ಲಿ ಗೆಜ್ಜೆಯನ್ನು ಕಟ್ಟಿದ್ದಾರೆ . ಇದನ್ನು ತಿನ್ನಲು ನಿನಗೆ ಅಧಿಕಾರವಿಲ್ಲ . ನಾನು ಈ ಜಿಂಕೆಯನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದನು .
4. ಜಿಂಕೆಯನ್ನು ನೋಡಿದ ಯುವತಿ ಏನು ಮಾಡಿದಳು ?
ಜಿಂಕೆಯನ್ನು ನೋಡಿದ ಯುವತಿ ಓಡಿ ಬಂದು ಜಿಂಕೆಯನ್ನು ತಬ್ಬಿಕೊಂಡಳು, ಜಿಂಕೆ ಅವಳ ಕೈಯನ್ನು ನೆಕ್ಕುತ್ತದೆ. ಮೈಗೆ ಮೈ ತಾಗಿಸಿ ತಿಕ್ಕುತ್ತದೆ. ಯುವತಿ ಜಿಂಕೆ ಮುಖಕ್ಕೆ ಮುಖ ತಾಗಿಸಿ ಅಳುತ್ತಿದ್ದಾಳೆ. ಹೀಗೆ ಜಿಂಕೆ ಮತ್ತು ಯುವತಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು .
5. ಯುವಕ ಚುಕ್ಕಿಯ ಬಗೆಗೆ ಯುವತಿಗೆ ಏನು ಹೇಳಿದ ?
ಯುವಕ ತಾನು ಚುಕ್ಕಿಯನ್ನು ಹುಲಿಯ ಕೈಯಿಂದ ಹೇಗೆ ಪಾರು ಮಾಡಿದ ಕತೆಯನ್ನು ಹೇಳಿದ . ಹುಲಿಗೂ ತನಗೂ ಆದ ಹೋರಾಟದ ಗಾಯದ ಗುರುತುಗಳನ್ನು ತೋರಿಸಿದ . ಕಾಡಿನಲ್ಲಿ ಜಿಂಕೆಗೆ ಮದ್ದು ಮಾಡಿದ ರೀತಿಯನ್ನು ತಿಳಿಸಿದ.
ಇ , ಕೆಳಗೆ ನೀಡಿರುವ ವಾಕ್ಯಗಳನ್ನು ಯಾರು ? ಯಾರಿಗೆ ಹೇಳಿದರು ಎಂಬುದನ್ನು ಬರೆಯಿರಿ
1.” ಯಾವುದಾದರೊಂದು ಹಾಡ್ಗತೆ ಹೇಳು ”
ಈ ವಾಕ್ಯವನ್ನು ಹುಡುಗನು ಪುಟ್ಟಜ್ಜಿಗೆ ಹೇಳಿದನು.
2.” ಏಯ್ ಯುವಕ ಈ ಜಿಂಕೆ ನನ್ನ ಆಹಾರ ” .
ಈ ಮಾತನ್ನು ಹುಲಿಯು ಯುವಕನಿಗೆ ಹೇಳಿತು .
3 , ” ಇದು ನಾವು ಸಾಕಿಕೊಂಡ ಜಿಂಕೆ ” .
ಈ ಮಾತನ್ನು ಯುವತಿಯು ಯುವಕನಿಗೆ ಹೇಳಿದಳು .
4 , ” ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ ”
ಈ ಮಾತನ್ನು ಯುವತಿಯು ಯುವಕನಿಗೆ ಹೇಳಿದಳು .
ಉ . ಕೆಳಗೆ ನೀಡಿರುವ ಸೂಚನೆಯಂತೆ ಉತ್ತರ ಬರೆಯಿರಿ
1. ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ.
ಹುಲಿ , ಚಿರತೆ , ಕಾಡುಕೋಣ , ಆನೆ , ಜಿಂಕೆ.
2. ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಿ.
ಪುಟ್ಟಜಿ ಹುಡುಗ , ಯುವಕ , ಯುವತಿ , ಹುಡುಗ , ಹುಡುಗಿ.
3. ಅಜ್ಜಿ ಮತ್ತು ಕತೆ ಕೇಳುವ ಹುಡುಗನ ಸಂಭಾಷಣೆ ಬರೆಯಿರಿ.
ಹುಡುಗ : ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳುತ್ತೀಯಾ ?
ಅಜ್ಜಿ : ಬಾ, ಮಗ ಹೇಳೀನಿ , ಒಂದೊಳ್ಳೆ ಕತೆ ಹೇಳುತ್ತೇನೆ.
ಹುಡುಗ : ( ಅಜ್ಜಿ ಮನೆ ಜಗುಲಿಯ ಕಂಬಕ್ಕೆ ಒರಗಿ ಕತೆ ಕೇಳಲು ಕುಳಿತುಕೊಳ್ಳುವನು )
ಅಜ್ಜಿ : ಯಾವ ಕತೆ ಹೇಳಲಿ ?
ಹುಡುಗ : ಯಾವುದಾದರೂ ಒಂದು ಹಾಡ್ಗತೆ ಹೇಳು.
ಅಜ್ಜಿ : ಪುಟ್ಟದೊಂದು ಊರ ಹೊರಗೆ ಒಂದು ಹಳ್ಳ ಹರಿದಿದೆ. ಎಂದು ಅಜ್ಜಿ ಕತೆ ಹೇಳಲು ಪ್ರಾಂಭಿಸುವಳು.
2. ಯುವಕ ಮತ್ತು ಯುವತಿಯ ನಡುವೆ ನಡೆದ ಸಂಭಾಷಣೆಯನ್ನು ಬರೆಯಿರಿ.
ಆ ಯುವತಿ ಈ ಯುವಕನನ್ನು ನೋಡಿದಾಗ ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ .ನಂತರ ಇವರ ನಡುವೆ ಸಂಭಾಷಣೆ ನಡೆಯುತ್ತದೆ.
ಯುವತಿ : ಇದು ನಾವು ಸಾಕಿಕೊಂಡ ಜಿಂಕೆ...ಇದರ ಮೇಲಿನ ಚುಕ್ಕೆಯ ಗುರುತಿಗೆ ನಾವು ಇದಕ್ಕೆ ಚುಕ್ಕಿ ಎಂದು ಕರೆಯುತ್ತೇವೆ. ಇದು ಕೆಲ ದಿನಗಳ ಹಿಂದೆ ಕಾಡಿಗೆ ಬಂದುಬಿಟ್ಟಿತು.. ಇದನ್ನು ಒಂದು ಹುಲಿ ಅಟ್ಟಿಸಿಕೊಂಡು ಬಂದುದನ್ನು ಕೆಲ ಹಳ್ಳಿ ಜನರು ನೋಡಿದರು . ಆಗ ನಾವು ಚುಕ್ಕಿಯ ಕತೆ ಮುಗಿಯಿತು ಎಂದುಕೊಂಡಿದ್ದೆವು . ಆದರೆ ನನಗೆ ನಂಬಿಕೆ ಇತ್ತು... ಚುಕ್ಕಿ ಬದುಕಿದೆ ಎಂದು...ನಾನು ಅವತ್ತಿನಿಂದ ಹುಡುಕುತ್ತಿದ್ದೆ ಇಂದು ಇದು ನನಗೆ ಸಿಕ್ಕಿದೆ.
ಯುವಕ : ಒಂದು ದಿನ ಈ ಜಿಂಕೆ ಹುಲಿಯಿಂದ ತಪ್ಪಿಸಿಕೊಂಡ ಓಡಿ ಬಂತು …. ತುಂಬಾ ಗಾಬರಿಯಾಗಿತ್ತು . ನಂತರ ಹಿಂದೆಯೇ ಹುಲಿ ಬಂದಿತು. ಆಗ ಹುಲಿಗೂ ನನಗೂ ಆದ ಹೋರಾಟದಲ್ಲಿ ತನಗಾದ ಗಾಯ ತೋರಿಸಿದನು. ಮತ್ತು ಹುಲಿಗೆ ಕಾಡಿನಲ್ಲಿ ಮದ್ದು ಮಾಡಿದ್ದನ್ನು ಹೇಳಿದನು. ಅಂದಿನಿಂದ ಇದನ್ನು ನಾನೇ ಸಾಕುತ್ತಿದ್ದೇನೆ.
ಯುವತಿ : ಇದು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿಯೇ ಬೆಳೆದು ಬಿಟ್ಟಿದೆ. ನಾನು ಇದನ್ನು ಬಿಟ್ಟು ಇರಲಾರೆ. ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ.
ಯುವಕ : ನಾನೂ ಸಹ ಅದನ್ನು ಬಿಟ್ಟು ಇರಲಾರೆ. ಹುಲಿಯ ಬಾಯಿಂದ ಕಾಪಾಡಿದ್ದೇನೆ . ಈಗ ಕೊಡಲಾರೆ.
ಯುವತಿ : ಹಾಗಾದರೆ ನಾನೂ ಇಲ್ಲಿಯೇ ಇರುತ್ತೇನೆ ಎಂದು ಮನೆಯೊಳಗೆ ಹೋಗಿ ಚುಕ್ಕಿಯನ್ನು ಅಪ್ಪಿಕೊಂಡಳು.
ಊ.ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ :
( ಪೊರೆ , ಪ್ರಾಣಿಗಿಂಡಿ , ಭಯ , ತೊಗಟೆ , ಮದ್ದು , ಯಾವತ್ತಾರೆ )
ಪೊರೆ = ರಕ್ಷಿಸು , ಸಲಹು ಕಾಪಾಡು .
ಪ್ರಾಣಿಗಿಂಡಿ = ಕಾಡಿನಲ್ಲಿರುವ ಪ್ರಾಣಿಗಳು ನೀರನ್ನು ಕುಡಿಯುವುದಕ್ಕಾಗಿ ಹೋಗಲು ಮಾಡಿಕೊಂಡ ಕಿಂಡಿ.
ಭಯ = ಹೆದರಿಕೆ , ಅಂಜಿಕೆ
ತೊಗಟೆ = ಮರದ ಸಿಪ್ಪೆ ” .
ಮದ್ದು = ಔಷಧಿ
ಯವತ್ತಾರ = ಯಾವತ್ತಾದರೂ, ಇನ್ನೊಂದು ದಿನ.
ಋ. ಹೊಂದಿಸಿ ಬರೆಯಿರಿ :
ಅ ಆ
1. ಪುಟ್ಟಜ್ಜಿ - ಹುಲಿಗೂ – ಯುವಕನಿನಿಗೂ ( 6 )
2.ಕಾಡು – ಜಿಂಕೆ ( 2 )
3. ಚುಕ್ಕಿ – ಸೊಪ್ಪುಸದೆ , ಬೇರು , ತೊಗಟೆ ( 4 )
4. ಮದ್ದು – ಕತೆ ( 1 )
5. ಹಳ್ಳದ ದಂಡೆ – ಹುಲಿ , ಚಿರತೆ , ಕಾಡುಕೋಣ ( 5 )
6. ಜಗಳ – ಊರು ಬೆಳೆಯಿತು( 5 )
‘ ಅ ‘ ಮತ್ತು ‘ ಆ ‘ ಪಟ್ಟಿಯ ಪದಗಳನ್ನು ಹೊಂದಿಸಿ ನಂತರ ಅವುಗಳನ್ನು ಸೇರಿಸಿ ವಾಕ್ಯಗಳನ್ನು ರಚಿಸಿರಿ.
1. ಪುಟ್ಟಜ್ಜಿ ಕತೆಯನ್ನು ಹೇಳಿದಳು.
2. ಕಾಡಿನಲ್ಲಿ ಹುಲಿ , ಚಿರತೆ , ಕಾಡುಕೋಣಗಳು ವಾಸಿಸುತ್ತವೆ.
3. ಚುಕ್ಕಿ ಎಂಬುವುದು ಜಿಂಕೆಯ ಹೆಸರು.
4. ಮದ್ದು ಮಾಡಲು ಸೊಪ್ಪು , ಸದೆ , ಬೇರು , ತೊಗಟೆಗಳನ್ನು ಉಪಯೋಗಿಸಿದರು.
5. ಹಳ್ಳದ ದಂಡೆಯಲ್ಲಿ ಒಂದು ಊರು ಬೆಳೆಯಿತು.
6. ಜಗಳ ಹುಲಿಗೂ ಯುವಕನಿಗೂ ಮಧ್ಯೆ ನಡೆಯಿತು.
ಭಾಷಾಭ್ಯಾಸ
ಅ . ಕೆಳಗೆ ಕೆಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ. ಇವುಗಳನ್ನು ಸಾಕುಪ್ರಾಣಿಗಳು ಮತ್ತು ಕಾಡುಪ್ರಾಣಿಗಳು ಎಂದು ವಿಂಗಡಿಸಿ ಪ್ರತೇಕ ಮಾಡಿರಿ.
( ಹುಲಿ , ಕತ್ತೆ , ಎಮ್ಮೆ , ಆಡು , ಮೇಕೆ , ಹಂದಿ , ಕರಡಿ , ಜಿಂಕೆ , ನಾಯಿ , ಕಾಡುಕೋಣ , ಬೆಕ್ಕು , ಜಿರಾಫೆ , ಮಂಗ , ಸಿಂಹ ಝೇಂಡಾಮೃಗ , ಚಿರತೆ , ಎತ್ತು , ಸಾರಂಗ , ಕೋಳಿ , ಆನೆ ).
ಸಾಕು ಪ್ರಾಣಿಗಳು ಕಾಡು ಪ್ರಾಣಿಗಳು
ಕತ್ತೆ ಹುಲಿ
ಎಮ್ಮೆ ಹಂದಿ
ಆಡು ಕರಡಿ
ಮೇಕೆ ಜಿಂಕೆ
ನಾಯಿ ಕಾಡುಕೋಣ
ಬೆಕ್ಕು ಜಿರಾಫೆ .
ಎತ್ತು ಮಂಗ
ಕೋಳಿ ಸಿಂಹ
ಫೇಂಡಾಮೃಗ
ಚಿರತೆ
ಆನೆ ಸಾರಂಗ
ಆ . ಕೆಳಗೆ ಪ್ರತೇಕ ಗುಂಪುಗಳಲ್ಲಿ ಕೆಲವು ಶಬ್ದಗಳಿವೆ. ಪ್ರತಿ ಗುಂಪಿಗೂ ಆ ಗುಂಪಿಗೆ ಸೇರದ ಒಂದೊಂದು ಶಬ್ದಗಳಿವೆ. ಈ ಶಬ್ದಗಳನ್ನು ಗುರುತಿಸಿ ಮತ್ತು ಆ ಶಬ್ದ ಆ ಗುಂಪಿಗೆ ಏಕೆ ಸೇರುವುದಿಲ್ಲ ಎಂದರೆ ಕಾರಣ ನೀಡಿ
ಗುಂಪು – 1 : ಹಸು , ಎಮ್ಮೆ , ಕರಡಿ , ಹಂದಿ
ಕರಡಿ – ಇದು ಗುಂಪಿಗೆ ಸೇರುವುದಿಲ್ಲ , ಏಕೆಂದರೆ ಇದು ಸಾಕು ಪ್ರಾಣಿಯಲ್ಲ.
ಗುಂಪು – 2 : ನಾನು , ನೀನು , ಅವನು , ರಮ್ಯ
ರಮ್ಯ - ಇದು ಸರ್ವನಾಮಗಳ ಗುಂಪಿಗೆ ಸೇರುವುದಿಲ್ಲ. ಇದು ಅಂಕಿತನಾಮ.
ಗುಂಪು – 3 : ಯುವಕ , ಯುವತಿ , ಮುದುಕ , ಅಣ್ಣ
ಯುವತಿ – ಇದು ಪುಲಿಂಗ ಪದವಲ್ಲ. ಸ್ತ್ರೀಲಿಂಗ.
ಗುಂಪು – 4 : ಕತೆ , ಕವನ , ಪೆನ್ಸಿಲು , ಕಾದಂಬರಿ
ಪೆನ್ಸಿಲು – ಇದು ಸಾಹಿತ್ಯ ಪ್ರಕಾರಕ್ಕೆ ಸೇರುವುದಿಲ್ಲ . ಇದು ಬರೆಯುವ ವಸ್ತು.
3 , ಕೆಳಗೆ ನೀಡಿರುವ ಕತೆಯಲ್ಲಿ ಕೆಲವು ಪದಗಳ ಜಾಗವನ್ನು ಖಾಲಿ ಬಿಡಲಾಗಿದೆ . ಬಿಟ್ಟ ಸ್ಥಳದಲ್ಲಿ ಇರಬೇಕಾದ ಪದಗಳನ್ನು ಕತೆಯ ಕೆಳಗೆ ನೀಡಲಾಗಿದೆ .ಸೂಕ್ತ ಪದವನ್ನು ಆರಿಸಿ ಬಿಟ್ಟ ಸ್ಥಳದಲ್ಲಿ ತುಂಬರಿ :
ಒಂದು ಕಾಗೆ .......... ಬಂದು ಒಂದು ........... ಮೇಲೆ ಕುಳಿತುಕೊಂಡು ........... ತಿನ್ನ ತೊಡಗಿತು. ಮೋಸಗಾರ ನರಿ ಕಾಗೆ ......... ರೊಟ್ಟಿಯನ್ನು ಕಂಡು ........... ತಿನ್ನಬೇಕೆಂದು .......... ಕೆಳಗೆ ನಿಂತು ಕಾಗೆಯನ್ನು ಹೊಗಳಿತು . ಎಲೈ ಕಾಗೆ ನೀನು ............. ಹಾಡುತ್ತೀಯೇ , ನಿನ್ನ ........... ತುಂಬಾ ಚಂದ. ನಿನ್ನ ಹಾಡನ್ನು ........... ಆಸೆ ನನಗೆ ಆಗಿದೆ ಎಂದು ಹೊಗಳಿತು . ಕಾಗೆ ಅದರ ಹೊಗಳಿಕೆಗೆ ಮಾರು ಹೋಗಿ ........... ಎಂದು ಹಾಡತೊಡಗಿತು .ಆಗ ಅದರ ............. ರೊಟ್ಟಿ ಕೆಳಗೆ ............ ಬಿದ್ದ ............ ಯನ್ನು ನರಿ ಕಚ್ಚಿಕೊಂಡು .............. ಹೋಯಿತು .
( ಹಾರಿ, ಮರದ, ಬಾಯಲ್ಲಿ , ರೊಟ್ಟಿ , ಚಂದ, ಹಾಡು , ಕೇಳುವ, ಕಾಕಾಕಾ , ಬಾಯಿಂದ, ಬಿದ್ದಿತು , ಓಡಿ , ಕಾಗೆ , ಕೊಂಬೆ )
ಉತ್ತರ :
ಒಂದು ಕಾಗೆ ಹಾರಿ ಬಂದು ಒಂದು ಮರದ ಮೇಲೆ ಕುಳಿತುಕೊಂಡು ರೊಟ್ಟಿ ತಿನ್ನ ತೊಡಗಿತು. ಮೋಸಗಾರ ನರಿ ಕಾಗೆ ಬಾಯಲ್ಲಿ ರೊಟ್ಟಿಯನ್ನು ಕಂಡು ರೊಟ್ಟಿ ತಿನ್ನಬೇಕೆಂದು ಮರದ ಕೊಂಬೆ ಕೆಳಗೆ ನಿಂತು ಕಾಗೆಯನ್ನು ಹೊಗಳಿತು . ಎಲೈ ಕಾಗೆ ನೀನು ಚಂದ ಹಾಡುತ್ತೀಯೇ , ನಿನ್ನ ಹಾಡು ತುಂಬಾ ಚಂದ. ನಿನ್ನ ಹಾಡನ್ನು ಕೇಳುವ ಆಸೆ ನನಗೆ ಆಗಿದೆ ಎಂದು ಹೊಗಳಿತು . ಕಾಗೆ ಅದರ ಹೊಗಳಿಕೆಗೆ ಮಾರು ಹೋಗಿ ಕಾಕಾಕಾ ಎಂದು ಹಾಡತೊಡಗಿತು .ಆಗ ಅದರ ಬಾಯಿಂದ ರೊಟ್ಟಿ ಕೆಳಗೆ ಬಿದ್ದಿತು, ಬಿದ್ದ ರೊಟ್ಟಿಯನ್ನು ನರಿ ಕಚ್ಚಿಕೊಂಡು ಓಡಿ ಹೋಯಿತು.