ಗದ್ಯಭಾಗ -1
ಮಗ್ಗದ ಸಾಹೇಬ
ಕೃತಿಕಾರರ ಪರಿಚಯ :
ಕವಿ ; ಬಾಗಲೋಡಿ ದೇವರಾಯ
ಕಾಲ : 1927
ಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ಬಾಗಲೋಡಿಯವರು.
ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದರು. ಆ ಕಾಲಕ್ಕೆ ಐ.ಎ.ಎಸ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ವಿದೇಶಿ ಸೇವೆಗೆ ಆಯ್ಕೆಯಾದರು. ಮಾಸ್ತಿ ಹಾಗೂ ಇವರೂ ಸಮಕಾಲೀನರು. ಅದಲ್ಲದೆ ಸಣ್ಣಕತೆಗಳನ್ನು ಬರೆದವರು. ಅವರು ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಫಿಲಿಫೈನ್ಸ್, ನ್ಯೂಜಿಲ್ಯಾಂಡ್, ಬಲ್ಗೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯನಿರ್ವಹಿಸಿದರು. ಅವರ ಕಥಾಸಂಗ್ರಹಗಳೆಂದರೆ : ಹುಚ್ಚು ಮುನಸೀಫ ಮತ್ತು ಇತರ ಕತೆಗಳು, ಆರಾಧನಾ, ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು. ಬಾಗಲೋಡಿ ದೇವರಾಯ ಅವರು ಒಟ್ಟು 26 ಕತೆಗಳನ್ನು ಬರೆದಿದ್ದಾರೆ. ಇವರು 1985 ರಲ್ಲಿ ನಿಧನರಾದರು.
ಪ್ರಕೃತ ಮಗ್ಗದ ಸಾಹೇಬ ಕಥೆಯನ್ನು ಬಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ (ಪುಟ 185-189 ) ಆಯ್ದ ಕಥೆಯನ್ನು ಸಂಪಾದಿಸಿ ನಿಗದಿಪಡಿಸಿದೆ.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ರಹೀಮ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು?
ರಹೀಮ ಮಗ್ಗವನ್ನು ಮುಟ್ಟದೆ ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿತ್ತು.
2. ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು?
ರಥೋತ್ಸವ ಸಮಯದಲ್ಲಿ ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿ ಎಲ್ಲರಿಗಿಂತ ಮೊದಲು ಪ್ರಸಾದ ಪಡೆಯುವ ಹಕ್ಕಿತ್ತು.
3. ಅಬ್ದುಲ್ ರಹೀಮನ ಹಠವೇನು?
ತನ್ನ ಮೂವರು ಗಂಡುಮಕ್ಕಳಿಗೆ ಒಂದಿಷ್ಟಾದರೂ ವಿದ್ಯಾಬ್ಯಾಸ ಕೊಡಿಸಿ ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬುದು ಅಬ್ದುಲ್ ರಹೀಮನ ಹಠವಾಗಿತ್ತು.
4. ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ?
ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ಒಬ್ಬ ಸರಕಾರಿ ಕಛೇರಿಯಲ್ಲಿ ಗುಮಾಸ್ತನಾಗಿ, ಮತ್ತೊಬ್ಬ ಪೋಸ್ಟ್ ಮಾಸ್ಟರ್ ಆಗಿ ನೆರವೇರಿಸಿದರು.
5. ರಹೀಮ ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ?
ರಹೀಮ ಮಗ್ಗದ ಹುಚ್ಚನ್ನು ಬಿಡಿಸಲು ಮಗನನ್ನು ಶಾಲೆಯಿಂದ ಬಿಡಿಸಿದನು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿ.
ಹುಸೇನ್ ಸಾಹೇಬರು ಅಬ್ದುಲ್ ರಹೀಮ್ ಸಾಹೇಬರ ಪೂರ್ವಜರಾಗಿದ್ದು ಜನಪ್ರಿಯ ಹಾಗೂ ಧನವಂತ ವ್ಯಕ್ತಿಯಾಗಿದ್ದರು. ಇವರು ಮಸೀದಿ ಮಾತ್ರವಲ್ಲ, ದೇವಸ್ಥಾನವನ್ನು ಕಟ್ಟಿಸಿದ್ದರು. ಇಂದಿಗೂ ಈ ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮೊದಲು ಪ್ರಸಾದವನ್ನು ಪಡೆಯುವ ಹಕ್ಕಿದೆ .
2. ಲೇಖಕರ ಹುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ಸವದ ಸಂಪ್ರದಾಯವೇನು?
ಲೇಖಕರ ಹುಟ್ಟೂರಿನ ಪಕ್ಕದಲ್ಲಿ ಮುಸಲ್ಮಾನರ ವಸತಿ ಇದೆ . ಅದರೊಳಗೆ ಒಂದು ಪವಿತ್ರ ಸ್ಥಾನವಿದೆ. ಅಲ್ಲಿ ‘ಉರ್ಸ್’ ಎಂಬ ಮುಸಲ್ಮಾನರ ಧಾರ್ಮಿಕ ಉತ್ಸವದ ಕಾಲದಲ್ಲಿ ಲೇಖಕರ ಮನೆತನದ ಒಬ್ಬ ಪ್ರತಿನಿಧಿ ಇದ್ದೇ ಇರಬೇಕೆಂಬ ಸಂಪ್ರದಾಯ ಇತ್ತು.
3. ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು?
ಲೇಖಕರ ತಾಯಿ ಕಾಯಿಲೆ ಬಿದ್ದ ಕಾರಣ ತಂದೆಯವರು ಅಂಗಡಿಯಿಂದ ಲಡ್ಡುಗಳನ್ನು ಕೊಂಡು ಕೊಟ್ಟುದಕ್ಕೆ ಅತಿಥಿಗಳಿಗೆ ಬಹಳ ಸಿಟ್ಟು ಬಂತು. ‘ರಾಯರೆ, ಅಂಗಡಿಯಿಂದ ತೆಗೆದುಕೊಳ್ಳಲು ನಮ್ಮಲ್ಲಿ ಹಣವಿಲ್ಲವೆ? ಮನೆಯಲ್ಲಿ ಕಾಯಿಲೆಯಿದ್ದರೆ ಒಂದು ತುಂಡು ಬೆಲ್ಲವನ್ನೋ ,ಕಲ್ಲುಸಕ್ಕರೆ ಹರಳನ್ನೋ ಕೊಡಿ. ನಿಮ್ಮ ಹಬ್ಬದ ಪೂಜೆಯ ಪ್ರಸಾದವನ್ನು ನಾವು ತೆಗೆದುಕೊಳ್ಳುವುದು ತಲತಲಾಂತರದಿಂದ ಬಂದ ಹಳೆಯ ಸಂಪ್ರದಾಯ. ಅಂಗಡಿಯ ಮಿಠಾಯಿಯನ್ನು ಪ್ರಸಾದವೆಂದು ಕೊಡುವುದು ಸರಿಯೇ?’ ಎಂದು ಆಕ್ಷೇಪ ಮಾಡಿದರು.
4. ಕರೀಮನಿಗೆ ಶಾಲೆಯಲ್ಲಿ ಮಗ್ಗ ಕಲಿತುದರಿಂದ ಆದ ಪ್ರಯೊಜನವೇನು?
ಕರೀಮನು ಶಾಲೆಯ ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿಬಿಟ್ಟಿದ್ದ. ಅದನ್ನು ಶಂಕರಪ್ಪ ಅವರು ಸ್ವಾಭಾವಿಕವಾಗಿಯೇ ಪ್ರಶಂಸೆ ಮಾಡಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು. ಅದರ ಫಲಸ್ವರೂಪವಾಗಿ ಸರಕಾರದಿಂದ ಹುಡುಗ ಕರೀಮ್ನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ಬಂದುಬಿಟ್ಟವು. ಇದರಿಂದ ಕರೀಮನ ಉತ್ಸಾಹ ಆಕಾಶಕ್ಕೇರಿತು. ಅಲ್ಲದೆ ಸಾಕಷ್ಟು ಪ್ರಶಂಸೆಯನ್ನು ಪಡೆದಿದ್ದನು.
5. ಶಾಲಾ ವಾರ್ಷಿಕೋತ್ಸವದಂದು ಕರೀಮ ಮಾಡಿದ ಕೆಲಸವೇನು?
ಒಂದು ದಿನ ಶಾಲೆಯ ವಾರ್ಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು ನಾಟಕವಿತ್ತು. ಅದರಲ್ಲಿ ಕರೀಮನದ್ದು ಸ್ತ್ರೀ ಪಾತ್ರ. ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ಅಲಂಕಾರಕ್ಕೆಂದು ಎರವಲು ತೆಗೆದುಕೊಂಡು ಹೋಗಿದ್ದನು. ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ. ಎಲ್ಲೋ ಮಾಯವಾಗಿ ಹೋಗಿದನು .
ಇ.ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ.
1. ನವೀನ ಶಿಕ್ಷಣದ ವೈಶಿಷ್ಟ್ಯತೆ ?
ಮಹಾತ್ಮಾ ಗಾಂಧೀಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ನವೀನ ಶಿಕ್ಷಣವು ಪ್ರಾರಂಭವಾಯಿತು. ಈ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು ಕೊಡುವುದು, ಅವರಲ್ಲಿ ಹಸ್ತಕೌಶಲ್ಯವನ್ನು, ದೇಹಶ್ರಮದಲ್ಲಿ ಗೌರವ ಭಾವವನ್ನು ಉಂಟು ಮಾಡುವುದು ಒಂದು ಭಾಗವಾಗಿತ್ತು. ಕೆಲವರಿಗೆ ಬಡಗಿಯ ಕೆಲಸ, ಕೆಲವರಿಗೆ ಬೆತ್ತದ ಕುರ್ಚಿ ಕೆಲಸ ಇತ್ಯಾದಿ ಸಾಮಗ್ರಿಗಳನ್ನು ಮಾಡುವ, ಕೆಲವರಿಗೆ ಕೃಷಿ, ಕೆಲವರಿಗೆ ಮಗ್ಗದ ಕೆಲಸವನ್ನು ಕಲಿಸಲಾಗುತ್ತಿತ್ತು .
2. ಶಂಕರಪ್ಪ ಅವರು ರಹೀಮನ ಬಳಿಗೆ ಸಂಧಾನಕ್ಕಾಗಿ ಬಂದ ಪ್ರಸಂಗವನ್ನು ತಿಳಿಸಿ .
ಒಂದು ದಿನ ಶಾಲೆಯ ವಾರ್ಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು ನಾಟಕವಿತ್ತು. ಅದರಲ್ಲಿ ಕರೀಮನದ್ದು ಸ್ತ್ರೀ ಪಾತ್ರ. ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ಅಲಂಕಾರಕ್ಕೆಂದು ಎರವಲು ತೆಗೆದುಕೊಂಡು ಹೋಗಿದ್ದನು. .ಕರೀಮನು ವಾರ್ಷಿಕೋತ್ಸದ ಮುಗಿದ ನಂತರ ಮನೆಗೆ ಬರದೇ ಎಲ್ಲೋ ಹೊರಟು ಹೋಗಿದ್ದನು. ಇದಾದ ಕೆಲವು ವರ್ಷಗಳ ನಂತರ ಬೆಳೆದು ಯುವಕನಾಗಿದ್ದ ಕರೀಮನು ಅಮ್ಮನ ಸರವನ್ನು ಅದರೊಡನೆ ಹತ್ತು ಸಾವಿರ ರೂಪಾಯಿಗಳನ್ನು ತಂದಿದ್ದನು. ಕರೀಮನು ಮನೆಗೆ ಬಂದು ಬಾಗಿಲು ತಟ್ಟಿದಾಗ ತಂದೆ ಅಬ್ದುಲ್ ರಹೀಮನು ಬಾಗಿಲು ತೆರೆದು ನೋಡಿ, ಘಟಾರನೆ ಬಾಗಿಲು ಮುಚ್ಚಿದ ಒಳಗೆ ಬಿಟ್ಟುಕೊಳ್ಳಲಿಲ್ಲ. ಕರೀಮನು ಎಷ್ಟು ಬೇಡಿಕೊಂಡರು ತಂದೆ ಅಬ್ದುಲ್ ರಹೀಮನ ಮನಸ್ಸು ಕರಗಲಿಲ್ಲ . ಆಗ ಕರೀಮನು ನಿವೃತ್ತರಾಗಿದ್ದ ಶಂಕರಪ್ಪ ಗುರುಗಳ ಮನೆಗೆ ಹೋಗಿ, ‘ಸಂಧಾನ ಮಾಡಿಸಿರಿ’ ಎಂದು ನಿವೇದಿಸಿಕೊಂಡನು . ಶಂಕರಪ್ಪ ಗುರುಗಳು ಅಬ್ದುಲ್ ರಹೀಮನ ಮನೆಗೆ ಬಂದು ,ಒಂದು ಗಂಟೆ ಕಾಲ ಗೋಗರೆದರು ,ನಿವೇದಿಸಿದರು, ತರ್ಕಿಸಿದರು , ಚರ್ಚಿಸಿದರು, ಆದರೆ ಏನು ಪ್ರಯೋಜನವಾಗಲಿಲ್ಲ .
ಈ. ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಕರೀಮ ಧನವಂತನಾದ ಬಗೆ ಹೇಗೆ? ವಿವರಿಸಿ.
ಕರೀಮನು ಶಾಲಾ ವಾರ್ಷಿಕೋತ್ಸವದ ದಿನ ತನ್ನ ತಾಯಿಯ ಚಿನ್ನದ ಸರದೊಂದಿಗೆ ಮನೆ ಬಿಟ್ಟು ಎಲ್ಲೋ ಹೋದವನು. ಕರೀಮ ಸಣ್ಣ ಪ್ರಾಯದಲ್ಲೇ ಮಗ್ಗದ ಸಹಕಾರಿ ಸಂಘವೊಂದನ್ನು ಸ್ಥಾಪಿಸಿ, ಅದರ ಅಧ್ಯಕ್ಷನಾಗಿದ್ದನು. ಮಗ್ಗದ ಯಂತ್ರದ ಪ್ರಯೋಗದಲ್ಲಿ ಹೊಸಹೊಸ ಸುಧಾರಣೆ , ಪರಿವರ್ತನೆಗಳನ್ನು ತಂದು ಹೆಸರು ಮಾಡಿದ್ದನು. ಇದರಿಂದಾಗಿ ಆತನು ಸಾಕಷ್ಟು ಧನವಂತನೂ, ಯಶಸ್ವಿಯೂ ಆಗಿ ಪ್ರಖ್ಯಾತನಾಗಿದ್ದನು. ಕೊನೆಗೆ ಸಣ್ಣ ಪ್ರಯತ್ನದಲ್ಲಿ ಭಾರತ ಸರ್ಕಾರದಿಂದ “ಪದ್ಮಭೂಷಣ”ಪ್ರಶಸ್ತಿಗೂ ಪಾತ್ರನಾದನು.
2. ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು?
ಮಗ್ಗದ ಸಾಹೇಬ ಅಂದರೆ ಅಬ್ದುಲ್ ರಹೀಮ್ ಸಾಹೇಬ್. ಅವನು ಮಗ್ಗವನ್ನು ಮುಟ್ಟದೆ ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿದ್ದರೂ ಸಹ ಆ ಊರಿನ ಜನರು ಅವನನ್ನು ಮಗ್ಗದ ಸಾಹೇಬನೆಂದೇ ಕರೆಯುತ್ತಿದ್ದರು. ಇದರಿಂದ ಅಬ್ದಲ್ ರಹೀಮ್ನಿಗೆ ಬಹು ಸಿಟ್ಟು ಬರುತ್ತಿತ್ತು. “ಅನಿಷ್ಟ ಮಗ್ಗದ ಹೆಸರೆತ್ತಬೇಡಿ " " ಮಗ್ಗವಲ್ಲ ಕೊರಳಿಗೆ ಹಗ್ಗ "ಎಂಬುವುದು ಆತನ ನಿರಾಶೆ ,ರೋಷಗಳ ಉದ್ಗಾರವಾಗಿತ್ತು . ಏಕೆಂದರೆ ಅವನ ಅಜ್ಜನ ಕಾಲದಲ್ಲಿ ಬ್ರಿಟಿಷರು ಅಗ್ಗದ ವಿಲಾಯತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಹೇರಿಬಿಟ್ಟರು. ಒಂದು ವರ್ಷದೊಳಗೇ ಕಳೇಬರಗಳಾಗಿ ಹರಕು ಚಿಂದಿಯಾಗುವುವು. ಬಣ್ಣವೋ ಒಂದೇ ತಿಂಗಳಲ್ಲಿ ವಿವರ್ಣವಾಗಿ ಎರಡೇ ತಿಂಗಳಲ್ಲಿ ಮಾಯವಾಗುವುದು. ಆದರೇನು? ಬಹು ಅಗ್ಗ. ಜನರಿಗೆ ಬೇಕಾದುದು ಅಗ್ಗದ ವಸ್ತು. ಗುಣವನ್ನು ಯಾರು ಕೇಳುತ್ತಾರೆ? ಅಗ್ಗದ ಮಾಲಿನದೇ ಆಧಿಪತ್ಯವಾಯಿತು. ಮಗ್ಗದವರು ಭಿಕಾರಿಗಳಾದರು. ಅವರ ಅನ್ನಕ್ಕೆ ಸಂಚಕಾರವಾಯಿತು. ಅದ್ದರಿಂದ ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಯಿತು.
ಉ. ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1. “ಮಗ್ಗವಲ್ಲ ಕೊರಳಿಗೆ ಹಗ್ಗ!”
ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಮಗ್ಗದ ಸಾಹೇಬ ಅಂದರೆ ಅಬ್ದುಲ್ ರಹೀಮ್ ಸಾಹೇಬ್. ಅವನು ಮಗ್ಗವನ್ನು ಮುಟ್ಟದೆ ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿದ್ದರೂ ಸಹ ಆ ಊರಿನ ಜನರು ಅವನನ್ನು ಮಗ್ಗದ ಸಾಹೇಬನೆಂದೇ ಕರೆಯುತ್ತಿದ್ದರು. ಇದರಿಂದ ಅಬ್ದಲ್ ರಹೀಮ್ನಿಗೆ ಬಹಳ ಸಿಟ್ಟು ಬರುತ್ತಿತ್ತು. ಆ ಸಂದರ್ಭದಲ್ಲಿ “ಅನಿಷ್ಟ ಮಗ್ಗದ ಹೆಸರೆತ್ತಬೇಡಿ”-“ಮಗ್ಗವಲ್ಲ ಕೊರಳಿಗೆ ಹಗ್ಗ!” ಎಂದು ಲೇಖಕರು ಹೇಳಿದ್ದಾರೆ
ಸ್ವಾರಸ್ಯ : ಮಗ್ಗವನ್ನು ಮುಟ್ಟದೆ ಇಪ್ಪತ್ತು ವರ್ಷಕ್ಕೂ ಹೆಚ್ಚಾಗಿ ಮಗ್ಗದ ಕೆಲಸ ನಿಂತು ಹೋಗಿ, ಸಂಪಾದನೆಯಾಗದೆ ಊಟಕ್ಕೂ ಕಷ್ಟ ಪಡಬೇಕಾದ ಪರಿಸ್ಥಿತಿ ಉಂಟಾಗಿ , ಅನ್ನ ಸಂಪಾದಿಸಿ ಕೊಡುತ್ತಿದ್ದ ಮಗ್ಗ ಈಗ ಸಾಯುವ ಸ್ಥಿತಿಯನ್ನು ತಂದಿರುವುದು ಸ್ವಾರಸ್ಯಕರವಾಗಿದೆ .
2. “ಕಳ್ಳನಾದವನು, ಮನೆ ಬಿಟ್ಟು ಓಡಿ ಹೋದವನು ಮಗನೇ ಅಲ್ಲ”
ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಒಂದು ದಿನ ಶಾಲೆಯ ವಾರ್ಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು ನಾಟಕವಿತ್ತು. ಅದರಲ್ಲಿ ಕರೀಮನದ್ದು ಸ್ತ್ರೀ ಪಾತ್ರ. ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ಅಲಂಕಾರಕ್ಕೆಂದು ಎರವಲು ತೆಗೆದುಕೊಂಡು ಹೋಗಿದ್ದನು. .ಕರೀಮನು ವಾರ್ಷಿಕೋತ್ಸದ ಮುಗಿದ ನಂತರ ಮನೆಗೆ ಬರದೇ ಎಲ್ಲೋ ಹೊರಟು ಹೋಗಿದ್ದನು. ಈ ವಿಷಯ ಅಬ್ದುಲ್ ರಹೀಮ್ನಿಗೆ ಗೊತ್ತಾಯಿತು. ಆ ಸಂದರ್ಭದಲ್ಲಿ “ಹಾಳಾಗಿ ಹೋಗಲಿ! ಹಠಮಾರಿ. ತಂದೆಯ ಮಾತನ್ನು ಉಲ್ಲಂಘಿಸಿದವನು ಎಂದು ಮಾತ್ರ ತಿಳಿದಿದ್ದೆ, ಈಗ ಕಳ್ಳನೆಂದೂ ತಿಳಿಯಿತು. ನನಗೆ ಇಬ್ಬರೇ ಗಂಡು ಮಕ್ಕಳು ; ಕಳ್ಳನಾದವನು, ಮನೆಬಿಟ್ಟು ಓಡಿಹೋದವನು ಮಗನೇ ಅಲ್ಲ” ಎಂದು ಆಣೆ ಹಾಕಿದನು.
ಸ್ವಾರಸ್ಯ : ಕರೀಮ್ನು ತನ್ನ ತಾಯಿಯ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿ, ನಮ್ಮ ಮನೆತನಕ್ಕೆ ಕೆಟ್ಟ ಹೆಸರು ತಂದಿದ್ದಾನೆ ಇಂತವನು ನನ್ನ ಮಗನೇ ಅಲ್ಲ ಎಂದು ತಂದೆ ಹೇಳುವ ಮಾತು ಸ್ವಾರಸ್ಯಕರವಾಗಿ ಮೂಡಿ ಬಂದಿದೆ.
3. “ನಿಮ್ಮ ಹಳೆಯ ಶಿಷ್ಯನಿಗೆ ಇದೊಂದು ಉಪಕಾರ ಮಾಡಿ”
ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಕರೀಮನು ಮನೆಗೆ ಬಂದು ಬಾಗಿಲು ತಟ್ಟಿದಾಗ ತಂದೆ ಅಬ್ದುಲ್ ರಹೀಮನು ಬಾಗಿಲು ತೆರೆದು ನೋಡಿ, ಘಟಾರನೆ ಬಾಗಿಲು ಮುಚ್ಚಿದ ಒಳಗೆ ಬಿಟ್ಟುಕೊಳ್ಳಲಿಲ್ಲ. ಕರೀಮನು ಎಷ್ಟು ಬೇಡಿಕೊಂಡರು ತಂದೆ ಅಬ್ದುಲ್ ರಹೀಮನ ಮನಸ್ಸು ಕರಗಲಿಲ್ಲ . ಆಗ ಕರೀಮನು ನಿವೃತ್ತರಾಗಿದ್ದ ಶಂಕರಪ್ಪ ಗುರುಗಳ ಮನೆಗೆ ಹೋಗಿ, ‘ಸಂಧಾನ ಮಾಡಿಸಿರಿ’ ಎಂದು ನಿವೇದಿಸಿಕೊಂಡನು . ಆ ಸಂದರ್ಭದಲ್ಲಿ ಕರೀಮ್ನು ಈ ಮಾತನ್ನು ಹೇಳಿದ್ದಾನೆ.
ಸ್ವಾರಸ್ಯ : ಕರೀಮನಿಗೆ ಮಗ್ಗದ ಬಗ್ಗೆ ಇದ್ದ ಅಪಾರವಾದ ಆಸಕ್ತಿಯನ್ನು ಕಂಡು, ಶಂಕರಪ್ಪ ಗುರುಗಳು ಇವನಿಗೆ ಉತ್ತೇಜಿಸಿ ಪ್ರೋತ್ಸಾಹಿಸಿದ್ದರು. ಆದ್ದರಿಂದ ಕರೀಮನಿಗೆ ಶಂಕರಪ್ಪ ಮೇಷ್ಟು ಬಗ್ಗೆ ಬಹಳ ಭಕ್ತಿ ಹಾಗೂ ಗೌರವ, ವಿಶ್ವಾಸವಿರುವದು ¸ ಸ್ವಾರಸ್ಯಕರವಾಗಿದೆ .
4 :“ದೇವರು ದೊಡ್ಡವನು ದೇವರು ದಯಾಳು”
ಆಯ್ಕೆ : ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ ಆಯ್ದ ‘ಮಗ್ಗದ ಸಾಹೇಬ’ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ‘ಪದ್ಮಭೂಷಣ’ ಅಂದರೆ ಸಾಹೇಬ್ ಬಹಾದ್ದೂರ್ಗಿಂತಲೂ ಮೇಲಿನ ಬಿರುದು. ಖಾನ್ ಸಾಹೇಬ್, ಖಾನ್ ಬಹಾದ್ದೂರ್, ದಿವಾನ್ ಬಹಾದ್ದೂರ್ ಇವೆಲ್ಲದರಿಂದಲೂ ಮೇಲೆ, ದೊಡ್ಡ ಬಿರುದು!” ಎಂದು ಅಬ್ದುಲ್ ರಹೀಮನಿಗೆ ತಿಳಿದ ಮೇಲೆ " ಕರೀಮ್ ! ನನ್ನ ಕರೀಮ್ ! ಸಾಹೇಬ್ ಬಹಾದ್ದೂರ್ಗಿಂತಲೂ ಮೇಲಾದನೇ? ಎಂದು ಪ್ರಶ್ನಿಸಿದ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ದೇವರ ಬಗ್ಗೆ ಇದ್ದ ನಂಬಿಕೆ, ತಂದೆಗೆ ಮಗನಬಗ್ಗೆ ಇದ್ದ ಪ್ರೀತಿ – ವಾತ್ಸಲ್ಯವು ಇಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ.
ಊ. ಬಿಟ್ಟ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
1. ಅಬ್ದುಲ್ ರಹೀಮನಿಗೆ ಮಗ್ಗದ ಸಾಹೇಬ ಎಂದು ಹೇಳಿದರೆ ಬಹು ಸಿಟ್ಟು ಬರುತ್ತಿತ್ತು.
2. ಮನೆಯಲ್ಲಿ ಊಟಕ್ಕೆ ಇದೆಯೋ ಇಲ್ಲವೋ ಎಂಬಂತಾಗಿದೆ
3. ಹುಡುಗನ ಉತ್ಸಾಹ ಆಕಾಶಕ್ಕೇರಿತು.
4. ಶಂಕರಪ್ಪ ಅವರು ಮುಖಬಾಡಿಸಿಕೊಂಡು ಹಿಂತೆರಳಿದರು.
5. ನನಗೆ ಎರಡೇ ಮಕ್ಕಳು, ಕಳ್ಳರ ಪರಿಚಯ ನನಗಿಲ್ಲ.
ಅಭ್ಯಾಸ ಚಟುವಟಿಕೆ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1. ಕನ್ನಡ ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ? ಅವುಗಳನ್ನು ಹೇಗೆ ವರ್ಗೀಕರಿಸುವಿರಿ? ವಿವರಿಸಿ.
ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು 49 ಅಕ್ಷರಗಳಿವೆ . ಅವುಗಳನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು.
1. ಸ್ವರಗಳು
2. ವ್ಯಂಜನಗಳು
3. ಯೋಗವಾಹಕಗಳು. ಎಂದು ಮೂರು ಭಾಗಗಳಾಗಿ ವರ್ಗೀಕರಿಸಬಹುದು.
2. ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವ ಹಾಗೂ ದೀರ್ಘ ಸ್ವರಗಳನ್ನು ಬರೆಯಿರಿ.
ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳೆಂದರೆ – ಅ, ಇ, ಉ, ಋ, ಎ, ಒ
ಧೀರ್ಘಸ್ವರಗಳೆಂದರೆ: ಆ, ಈ, ಊ, ಏ, ಐ, ಓ, ಔ
3. ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳನ್ನು ಬರೆಯಿರಿ.
ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣ ಅಕ್ಷರಗಳೆಂದರೆ – ಖ್, ಘ, ಛ, ಝ, ಠ, ಢ, ಥ, ಧ, ಫ, ಭ
4. ಕನ್ನಡ ವರ್ಣಮಾಲೆಯಲ್ಲಿರುವ ವರ್ಗೀಯ ಅಕ್ಷರಗಳನ್ನು ತಿಳಿಸಿ.
‘ಕ’ ವರ್ಗ – ಕ, ಖ, ಗ, ಘ, ಙ
‘ಚ’ ವರ್ಗ – ಚ, ಛ , ಜ, ಝ , ಞ
‘ಟ’ ವರ್ಗ – ಟ, ಠ, ಡ, ಢ, ಣ
‘ತ’ ವರ್ಗ – ತ, ಥ, ದ, ಧ, ನ
‘ಪ’ ವರ್ಗ – ಪ, ಫ, ಬ, ಭ, ಮ
5. ಕನ್ನಡ ವರ್ಣಮಾಲೆಯಲ್ಲಿರುವ ಅನುನಾಸಿಕಗಳನ್ನು ಪಟ್ಟಿಮಾಡಿ.
ಙ, ಞ, ಣ್ , ನ್, ಮ್
ಆ. ಕೊಟ್ಟಿರುವ ಪದಗಳಲ್ಲಿರುವ ಸ್ವರಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.
ಅಬ್ದುಲ್ = ( ಅ ) ಸ್ವರಾಕ್ಷರ ಅವನು = ( ಅ ) ಸ್ವರಾಕ್ಷರ
ಇಪ್ಪತ್ತು = ( ಇ ) ಸ್ವರಾಕ್ಷರ ಆದರೂ = (ಆ ) ಸ್ವರಾಕ್ಷರ
ಅವನನ್ನು = ( ಅ ) ಸ್ವರಾಕ್ಷರ ಇತ್ಯಾದಿ = ( ಇ ) ಸ್ವರಾಕ್ಷರ
ಇರಲಿ = ( ಇ ) ಸ್ವರಾಕ್ಷರ ಏಕೆಂದರೆ = ( ಏ ) ಸ್ವರಾಕ್ಷರ
ಓಡಿಹೋದ =( ಓ) ಸ್ವರಾಕ್ಷರ ಈಗ = ( ಈ ) ಸ್ವರಾಕ್ಷರ
ಏನೂ=( ಏ )ಸ್ವರಾಕ್ಷರ
. ಕೊಟ್ಟಿರುವ ಪದಗಳಲ್ಲಿರುವ ಮಹಾಪ್ರಾಣಾಕ್ಷರಗಳನ್ನು ಬರೆಯಿರಿ.
ಧನವಂತ = ( ಧ ) ಮಹಾಪ್ರಾಣಾಕ್ಷರ ರಥ = ( ಥ ) ಮಹಾಪ್ರಾಣಾಕ್ಷರ
ಘನತೆ = ( ಘ )ಮಹಾಪ್ರಾಣಾಕ್ಷರ ಧರ್ಮ = ( ಧ ಮಹಾಪ್ರಾಣಾಕ್ಷರ
ಮುಖ್ಯ = ( ಖ್ಯ ) ಮಹಾಪ್ರಾಣಾಕ್ಷರ ಭಕ್ಶ್ಯ= ( ಭ )ಮಹಾಪ್ರಾಣಾಕ್ಷರ
ಹಠ = ( ಠ ) ಮಹಾಪ್ರಾಣಾಕ್ಷರ ಪಾಠ = ( ಠ ) ಮಹಾಪ್ರಾಣಾಕ್ಷರ
ಹಸನ್ಮುಖ = ( ಖ )ಮಹಾಪ್ರಾಣಾಕ್ಷರ ಫಲ= ( ಫ )ಮಹಾಪ್ರಾಣಾಕ್ಷರ
ಈ. ಕೊಟ್ಟಿರುವ ಪದಗಳಲ್ಲಿರುವ ಅವರ್ಗೀಯ ವ್ಯಂಜನಗಳನ್ನು ಬರೆಯಿರಿ.
ಅವನ = ( ವ ) ಅವರ್ಗೀಯ ವ್ಯಂಜನ ಇಂತಹ = ( ಹ )ಅವರ್ಗೀಯ ವ್ಯಂಜನ
ಅದರ = ( ರ ) ಅವರ್ಗೀಯ ವ್ಯಂಜನ ಒಳಗೆ = ( ಳ )ಅವರ್ಗೀಯ ವ್ಯಂಜನ
ಕುಶಲ = ( ಶ ) ಅವರ್ಗೀಯ ವ್ಯಂಜನ ಹಬ್ಬ = ( ಹ )ಅವರ್ಗೀಯ ವ್ಯಂಜನ
ಬಹಳ = ( ಳ ) ಅವರ್ಗೀಯ ವ್ಯಂಜನ ತಲ = ( ಲ )ಅವರ್ಗೀಯ ವ್ಯಂಜನ
ಸಮಯ = ( ಸ, ಯ)ಅವರ್ಗೀಯ ವ್ಯಂಜನ ಕಾಲ = ( ಲ )ಅವರ್ಗೀಯ ವ್ಯಂಜನ
ಗದ್ಯಭಾಗ -2 ನೀರು ಕೊಡದ ನಾಡಿನಲ್ಲಿ
ಕೃತಿಕಾರರ ಪರಿಚಯ :
ಕವಿ : ಶ್ರೀಮತಿ ನೇಮಿಚಂದ್ರ
ಕಾಲ : 16 ಜುಲೈ 1959
ಸ್ಥಳ : ಚಿತ್ರದುರ್ಗ
ಕೃತಿಗಳು : ಯಾದ್ ವಶೇಮ್ – ಕಾದಂಬರಿ, ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಮತ್ತೇ ಬರೆದ ಕಥೆಗಳು, ನೇಮಿಚಂದ್ರರ ಕಥೆಗಳು ಮುಂತಾದ ಕಥಾಸಂಕಲನಗಳು. ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ – ಪ್ರವಾಸ ಕಥನಗಳು. ಬದುಕು ಬದಲಿಸಬಹುದು ಅಂಕಣ ಬರಹಗಳು, ಇತ್ಯಾದಿ ಕನ್ನಡದಲ್ಲಿ ಚಿಂತನ ಪೂರ್ಣ ಲೇಖನ, ಪುಸ್ತಕಗಳನ್ನು ಬರೆಯುತ್ತಿದ್ದಾರೆ.
ಪ್ರಶಸ್ತಿಗಳು : ಪೆರುವಿನ ಪವಿತ್ರ ಕಣಿವೆಯಲ್ಲಿ ಕೃತಿಗೆ ‘ಕರ್ನಾಟಕ ಸಾಹಿತ್ಯ ಪ್ರಶಸ್ತಿ’ ನೃಪತುಂಗ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ‘ನೀರು ಕೊಡದ ನಾಡಿನಲ್ಲಿ’ ಅಂಕಣ ಬರಹವನ್ನು ಶ್ರೀಮತಿ ನೇಮಿಚಂದ್ರ ಅವರ ‘ಬದುಕು ಬದಲಿಸಬಹುದು’ ಕೃತಿಯಿಂದ ಆಯ್ದು ಸಂಪಾದಿಸಿ ನಿಗದಿಪಡಿಸಿದೆ.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಎಲ್ಲೆಲ್ಲಿ ನೀರು ಕೊಡುವ ಸಂಪ್ರದಾಯವಿಲ್ಲ?
ಯುರೋಪ್ ರಾಷ್ಟ್ರಗಳಲ್ಲಿ , ಅಮೇರಿಕಾದಲ್ಲಿ ಎಲ್ಲಿಯೂ ನೀರು ಕೊಡುವ ಸಂಪ್ರದಾಯವಿಲ್ಲ.
2. ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ?
ಮನೆಗೆ ಬಂದವರನ್ನು ತಣ್ಣನೆಯ ನೀರು ತಂದು ಕೊಟ್ಟು ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ.
3. ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದೇನು?
ವಿದೇಶಗಳಲ್ಲಿ ನೀರಿಗಿಂತ ಅಗ್ಗವಾಗಿ ಸಿಗುವುದು ಕೋಲಾ.
4. ಭಾರತದಲ್ಲಿ ಇತ್ತೀಚೆಗೆ ಯಾವ ಹುನ್ನಾರ ನಡೆದಿದೆ?
ಭಾರತದಲ್ಲಿ ಇತ್ತೀಚೆಗೆ ಬಾಟಲಿಯಲ್ಲಿ ನೀರನ್ನು ಕೊಂಡು ಕುಡಿಯುವ ಹುನ್ನಾರ ನಡೆದಿದೆ.
5. ಸರ್ವರಿಗೂ ವೇದ್ಯವಾಗಿರುವ ಅಂಶಗಳಾವುವು?
ಮದರ್ಸ್ ಡೇ ,ಫಾದರ್ಸ್ ಡೇ ,ವ್ಯಾಲೆಂಟೈನ್ ಡೇ ಆಚರಣೆಯಲ್ಲಿ ಗಿಫ್ಟ್, ಗ್ರೀಟಿಂಗ್ ಕಾರ್ಡ್ ಮಾರುವ ಹೊಸ ಹುನ್ನಾರ ಎಂಬ ಅಂಶಗಳು ಸರ್ವರಿಗೂ ವೇದ್ಯವಾಗಿದೆ.
6. ಲೇಖಕಿಗೆ ಹೋಟೆಲ್‌ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಆದ ಅನುಭವವೇನು?
ಲೇಖಕಿಗೆ ಹೋಟೆಲ್‌ನಲ್ಲಿ ನಾಲ್ಕು ಲೋಟ ನೀರು ತಂದಿಟ್ಟಾಗ ಬರೀ ಬಾಯಲ್ಲ , ಮನಸ್ಸೂ ಕೂಡ ತಂಪಾದ ಅನುಭವಾಯಿತು.
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ವಿದೇಶಗಳಲ್ಲಿ ಬಾಯಾರಿಕೆಗೆ ಧಾರಾಳವಾಗಿ ಏನೇನು ದೊರೆಯುವವು?
ವಿದೇಶಗಳಲ್ಲಿ ಬಾಯಾರಿಕೆಗೆ ಕೋಲಾಗಳು, ಫ್ರೆಂಚ್ ವೈನ್, ಬಿಯರ್, ಬಾಟಲಿಯಲ್ಲಿ ಹಣ್ಣಿನ ರಸ ಧಾರಾಳವಾಗಿ ದೊರೆಯುತ್ತವೆ.ನಮ್ಮ ದೇಶದಲ್ಲಿ ಸಿಗುವಂತೆ ಬಾಯಾರಿಕೆಯಾದಾಗ ನೀರು ಸಿಗುವುದಿಲ್ಲ. ಮತ್ತು ನೀರು ಕೊಡುವ ಸಂಪ್ರದಾಯವಿಲ್ಲ.
2. ಗುರುದ್ವಾರಗಳ ಬಳಿ ಸ್ವಯಂ ಸೇವಕರು ಏನು ಮಾಡುತ್ತಿದ್ದರು?
ಲೇಖಕಿಯವರು ವಿದೇಶಕ್ಕೆ ಹೋಗಲು ದೆಹಲಿಗೆ ಬಂದಿದ್ದರು. ರೋತಕ್ ರಸ್ತೆಯ ಅವರ ಅತ್ತೆಯ ಮನೆಗೆ ಹೋಗುವಾಗ ಗುರುದ್ವಾರಗಳ ಬಳಿ ನೀರಿನ ದೊಡ್ಡ ಕೊಳಾಯಿ ಹಿಡಿದು ಕೊಂಡು ನಿಲ್ಲಿಸಿದ ಆಟೋ, ಬಸ್ ಹಾಗೂ ದಾರಿಹೋಕರಿಗೆಲ್ಲ ನೀರು ತುಂಬಿ ತುಂಬಿ ಕುಡಿಸುತ್ತಿದ್ದರು.
3. ಕೋಲಾಗಳ ಆಸೆಯಿಂದ ನಾವು ಏನೆಲ್ಲವನ್ನು ತೊರೆಯುತ್ತಿದ್ದೇವೆ?
ಕೋಲಾಗಳ ಆಸೆಯಿಂದ ನಾವು ಮುಖ್ಯವಾಗಿ ನೀರು ಕುಡಿಯುವುದನ್ನೇ ಮರೆಯುತ್ತಿದ್ದೇವೆ.ಅದರೊಂದಿಗೆ ರುಚಿಯಾದ ಮಜ್ಜಿಗೆ, ಎಳನೀರು,ಪಾನಕ, ಕಬ್ಬಿನ ಹಾಲು ,ತಾಜಾ ಹಣ್ಣನ ರಸ ಎಲ್ಲವನ್ನು ತೊರೆಯುತ್ತಿದ್ದೇವೆ.
4. ನಾಗರೀಕತೆಯ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿರುವ ಆಚರಣೆಗಳಾವುವು?
ಕೊಳ್ಳುಬಾಕತನ, ಲಾಭಕೋರತನದ ರೋಗಗಳು ಸಾಂಕ್ರಾಮಿಕವಾಗಿ ಎಲ್ಲ ನೆಲದಲ್ಲೂ ಹರಡಿ ,ಭಾರತಕ್ಕೂ ಲಗ್ಗೆ ಇಟ್ಟಿವೆ .ಎಂದು ನಮ್ಮೆಲ್ಲರಿಗೂ ಅನುಭವವಾಗಿದೆ .‘ಸಂಸ್ಕೃತಿಯ ಮೇಲೆ ದಾಳಿ’ ಮಾಡುತ್ತಿವೆ. ನಾಗರಿಕತೆ ಸಂಸ್ಕೃತಿಯ ದಾಳಿಯಿಂದ ಮದರ್ಸ್ ಡೇ, ಫಾದರ್ಸ್ ಡೇ, ವ್ಯಾಲೇಂಟೈನ್ ಡೇ ಆಚರಿಸುವುದು ಪ್ರೀತಿಯ ದ್ಯೋತಕದಿಂದ ಅಲ್ಲ. ಗಿಫ್ಟ್, ಗ್ರೀಟಿಂಗ್ ಕಾರ್ಡ್, ಮಾರುವ ಹೊಸ ಹುನ್ನಾರಕ್ಕಾಗಿ ಈ ಆಚರಣೆ ಲಾಭಕೋರತನ ಇದರ ಮುಖ್ಯ ಉದ್ದೇಶವಾಗಿದೆ. ಅಷ್ಟೇ ಅಲ್ಲದೆ ಮಾರುಕಟ್ಟೆಗೆ ಬಂದ ವಸ್ತುಗಳೆಲ್ಲವೂ ಬೇಕೇಬೇಕು ಎಂಬ ದುರಾಸೆ ದೊಡ್ಡ ಅನಾಹುತಗಳಾಗಿ ಕಾಣಿಸಿಕೊಳ್ಳುತ್ತಿವೆ
5.ಜನಪ್ರಿಯ ಹೋಟೆಲಿನ ಮಾಲೀಕನಿಗೆ ತಂಪುಪಾನೀಯ ಕಂಪನಿ ಹೇಳಿದ್ದೇನು?
ಜನಪ್ರಿಯ ಹೋಟಲಿನ ಮಾಲೀಕನಿಗೆ ತಂಪು ಪಾನೀಯದ ಕಂಪನಿಯೊಂದು ಆತನನ್ನು ಸಂಪರ್ಕಿಸಿ‘ನೀವು ಗ್ರಾಹಕರಿಗೆ ಬಂದೊಡನೆ ನೀರು ಕೊಡುವುದನ್ನು ನಿಲ್ಲಿಸಿದರೆ, ಇಷ್ಟು ಹಣ ಕೊಡುವುದಾಗಿ ಹೇಳಿತ್ತಂತೆ!
ಇ. ಕೊಟ್ಟಿರುವ ಪ್ರಶ್ನೆಗಳಿಗೆ ಐದು-ಆರು ವಾಕ್ಯಗಳಲ್ಲಿ ಉತ್ತರಿಸಿ.
1. ದುಡ್ಡಿಲ್ಲದೇ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರ ಅಭಿಪ್ರಾಯವೇನು?
ದುಡ್ಡಿಲ್ಲದೇ ಕುಡಿಯಬಲ್ಲ ನೀರು ಸಿಗುತ್ತಿದ್ದ ಕಾಲದ ಬಗ್ಗೆ ಲೇಖಕರು ನಮ್ಮ ನಾಡಿನಲ್ಲಿ ರೈಲು ನಿಲ್ದಾಣಗಳಲ್ಲಿ, ಬಸ್ಸು ನಿಲ್ದಾಣಗಳಲ್ಲಿ, ವಿಮಾನ ನಿಲ್ದಾಣಗಳಲ್ಲೂ ‘ದುಡ್ಡಿಲ್ಲದೆ ಕುಡಿಯಬಲ್ಲ ’ ನೀರನ್ನು ಇರಿಸುತ್ತಿದ್ದರು. ಬಾಯಾರಿದಾಗ ಈಗಲೂ ಹೋಟೆಲು ಒಂದಕ್ಕೆ ಹೋಗಿ ನೀರು ಕುಡಿದು ಬರಬಹುದು. ಮನೆಯ ಹೊರಗೆ ಕಾಂಪೌಂಡ್ ಗೋಡೆಗೆ ಸಣ್ಣ ತೊಟ್ಟಿ ಕಟ್ಟಿ “ದನಕರಗಳು ನೀರು ಕುಡಿದುಹೋಗಲಿ” ಎಂದು ನೀರು ತುಂಬಿಡುತ್ತಿದ್ದರು. ಅಲ್ಲಲ್ಲಿ ಅಂಗಡಿಗಳಲ್ಲಿಯೂ ಸಹ ಮಣ್ಣಿನ ಮಡಿಕೆಯಲ್ಲಿ ನೀರು ತುಂಬಿಡುತ್ತಿದ್ದರು. ಅನೇಕ ಗುರುದ್ವಾರದ ಬಳಿ ಸ್ವಯಂ ಸೇವಕರು ನೀರಿನ ದೊಡ್ಡ ಕೊಳಾಯಿ ಹಿಡಿದು,ನಿಲ್ಲಿಸಿದ ಆಟೋ, ಬಸ್, ಹಾಗೂ ದಾರಿಹೋಕರಿಗೆಲ್ಲ ಉಚಿತವಾಗಿ ನೀರು ತುಂಬಿ ತುಂಬಿ ಕೊಡುತ್ತಿದ್ದರು . ಇವೆಲ್ಲವನ್ನು ನಾವು ಕೇವಲ ಭಾರತದಲ್ಲಿ ಕಾಣುತ್ತೇವೆ. ಆದರೆ ವಿದೇಶಗಳಲ್ಲಿ ದುಡ್ಡು ಕೊಟ್ಟರೂ ಸಹ ನೀರು ಸಿಗುವುದಿಲ್ಲ.
2. ಕಂಪನಿಗಳು ಅಪ್ಪಟ ಅಗತ್ಯದ ವಸ್ತುಗಳನ್ನು ‘ಇವಿಲ್ಲದೆ ಬದುಕಿಲ್ಲ’ ಎಂಬಂತೆ ಹೇಗೆ ಬಿಂಬಿಸುತ್ತಿವೆ ?
ಕೊಳ್ಳುಬಾಕತನ ,ಲಾಭಕೋರತನದ ರೋಗಗಳು ಸಾಂಕ್ರಾಮಿಕವಾಗಿ ಎಲ್ಲಾ ನೆಲದಲ್ಲೂ ಹರಡಿ , ನಮ್ಮ ಭಾರತೀಯ ಸಂಸ್ಕೃತಿಯ ಬುನಾದಿಯನ್ನು ಜೀವನಶೈಲಿಯನ್ನು, ನಂಬಿಕೆಗಳನ್ನು,ಮೌಲ್ಯಗಳನ್ನು, ಸಂಸ್ಕೃತಿಯ ಬುನಾದಿಯನ್ನು ಅಲುಗಿಸುವ ‘ಕೊಳ್ಳುಬಾಕತನ’. ಅಗತ್ಯಗಳಲ್ಲಿ ನಡೆದು ಹೋಗುತ್ತಿದ್ದ ಬದುಕು, ಇಂದು ‘ಬೇಕು’ಗಳ ಬಲೆಗೆ ಬಿದ್ದಿದೆ. ಮಾರುಕಟ್ಟೆಗೆ ಬಂದದ್ದೆಲ್ಲವು ಬೇಕು. ಬೇಕುಗಳನ್ನು ‘ಅಗತ್ಯ’ಗಳಾಗಿ, ಜಾಹೀರಾತಿನಲ್ಲಿ ಕೊಳ್ಳುವಂತೆ ಬಿಂಬಿಸುತ್ತವೆ. ಆರಾಮ, ಐಷಾರಾಮದ, ಅಪ್ಪಟ ಅನಗತ್ಯದ ವಸ್ತುಗಳನ್ನು ‘ಇವಿಲ್ಲದೆ ಬದುಕಿಲ್ಲ’ ಎಂಬಂತೆ ಬಿಂಬಿಸುತ್ತಾರೆ. ‘ಡಿಓಡರೆಂಟ್’ ಹಾಕಿಕೊಳ್ಳದೆ ಇದ್ದರೆ ‘ತಾನು ನಾತ ಬಡಿಯುತ್ತೇನೆ’ ಎಂಬಷ್ಟು ಕೀಳಿರುಮೆಯನ್ನು ಹುಟ್ಟಿಸಬಲ್ಲರು . ಕೊನೆಗೆ ಎಲ್ಲವೂ ನಿಮ್ಮನ್ನು ಕೊಳ್ಳುವಂತೆ ಪ್ರೇರೇಪಿಸುತ್ತವೆ.
3. ಲೇಖಕಿಗೆ ಬೆಂಗಳೂರಿನಲ್ಲಿ ‘ನೀರು ಕೊಡದ ಸಂಸ್ಕೃತಿಯ’ ಬಗ್ಗೆ ಆದ ಅನುಭವವನ್ನು ಬರೆಯಿರಿ.
ಒಂದು ದಿನ ಲೇಖಕಿ ಮತ್ತು ಅವರ ಮಗಳು ಮಹಾತ್ಮಾ ಗಾಂಧಿ ರಸ್ತೆಯ ‘ಬಾಂಬೆ ಬಜಾರ್’ ಎದುರಿನ ಪುಟ್ಟ ಜಾಯಿಂಟ್‌ನಲ್ಲಿ ಹೋಗಿ ಕುಳಿತರು . ಇಲ್ಲಿ ನೀರು ತಂದಿಡಲಿಲ್ಲ. ಐಸ್‌ಕ್ರೀಂ ತಿಂದ ಇವರು ‘ನೀರು ಬೇಕು’ಎಂದು ಕೇಳಿದರು. ‘ಮಿನಿರಲ್ ವಾಟರ್?’ ವೇಟರ್ ಪ್ರಶ್ನಿಸಿದನು. ‘ ಇಲ್ಲಪ್ಪ ಸಾಮಾನ್ಯ ನೀರು’ಎಂದರು. ಮಾಯವಾದ ವೇಟರ್ ಹದಿನೈದು ನಿಮಿಷ ಕಾದರೂ ಬರಲೇ ಇಲ್ಲ. ಕಾದು ಕಾದು ಸುಸ್ತಾಗಿ ಕೊನೆಗೆ ಕೌಟರಿಗೇ ಹೋಗಿ, ಬಿಲ್ಲು ಕೊಟ್ಟು ಹೊರಬಂದರು. ಅದೇ ವೇಟರ್, ಪುಟ್ಟ ಪುಟ್ಟ ಬಾಟಲಿಗಳಲ್ಲಿ ಮಿನರಲ್ವಾಟರುಗಳನ್ನು ಬೇರೆ ಬೇರೆ ಮೇಜಿಗೆ ಸರಬರಾಜು ಮಾಡುವುದು ಕಂಡಿತು. ‘ಮಿನಿರಲ್ ವಾಟರ್?’ ಎಂದಅವರು ಕೇಳುವ ಭಂಗಿ ಭಾವ ಹೇಗಿರುತ್ತದೆ ಎಂದರೆ ನಿಮಗೆ ‘ಆರ್ಡಿನರಿ ವಾಟರ್’ಎಂದು ಹೇಳಲೂ ಹಿಂಜರಿಕೆಯಾಗಬೇಕು.
ಮತ್ತೊಂದು ದಿನ ಮಾಲತಿಯೊಡನೆ ಇಂದಿರಾನಗರದ ಪುಟ್ಟ ಜಾಯಿಂಟ್‌ಗೆ ಹೋಗಿ ‘ಮಿಸಿಸಿಪಿ ಮಡ್ ಪೀ’ ಆರ್ಡರ್ ಮಾಡಿದರು. ದೊಡ್ಡ ಬಿಳಿ ಪಿಂಗಾಣಿ ತಟ್ಟೆಯಲ್ಲಿ ಕೇಕ್ ಮತ್ತು ಐಸ್‌ಕ್ರೀಂ ಇರಿಸಿ, ಮೇಲೆ ಕೋಕೋ ಪುಡಿ ಉದುರಿಸಿ ಆಕರ್ಷಕವಾಗಿ ತಂದಿಟ್ಟರು. ಇಲ್ಲೂ ನೀರು ಕೊಟ್ಟಿರಲಿಲ್ಲ . ‘ನೀರು ಕೊಡಿ’ ಎಂದರು ‘ಮಿನಿರಲ್ ವಾಟರ್?’ ಎಂದಳು .ಸರ್ವ್ ಮಾಡುತ್ತಿದ್ದ ಹುಡುಗಿ. ‘ಇಲ್ಲ ಸಾಧಾರಣ ನೀರು’ ಎಂದರೆ, ನಮ್ಮಲ್ಲಿ ಸಾಧಾರಣ ನೀರು ಇಲ್ಲ ಎಂದಳು. ಮತ್ತೇ ಲೇಖಕಿಯವರು ‘ಬನ್ನಿ ಮಾಲತಿ ಸಾಗರ್‌ಗೆ, ಪಾನಿಪುರಿ ತಿನ್ನೋಣ’ ಎಂದೆ. ಎದುರಿಗೊಂದು ‘ಸಾಗರ್’ ಹೋಟೆಲಿತ್ತು. ನುಗ್ಗಿದರು. ಕುಳಿತೊಡನೆ ವೇಟರ್ ಬಂದು ನಾಲ್ಕು ಲೋಟ ನೀರು ತಂದಿಟ್ಟ. ಬರೀ ಬಾಯಲ್ಲ ಮನಸ್ಸೂ ತಂಪಾಯಿತು.
ಈ. ಖಾಲಿಬಿಟ್ಟ ಜಾಗಗಳನ್ನು ಸೂಕ್ತ ಉತ್ತರಗಳಿಂದ ಭರ್ತಿ ಮಾಡಿರಿ.
1. ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು ನೀರು ಕೊಡದ ನಾಡುಗಳು .
2. ಈ ದೇಶಗಳಲ್ಲಿ ಮನೆಯ ನಲ್ಲಿ ಯಲ್ಲಿ ಬರುವ ನೀರನ್ನು ಕುಡಿಯುವುದಿಲ್ಲ.
3. ಗ್ರೀಟಿಂಗ್ಸ್ ಕಾರ್ಡ್ ಮಾರುವ ಹೊಸ ಹುನ್ನಾರ ಗಳೆಂದು ಸರ್ವರಿಗೂ ವೇದ್ಯವಾಗಿದೆ.
4. ಸ್ಯಾಂಡ್ವಿಚ್ ಬರ್ಗರ್ ಜೊತೆಗೆ ದೊಡ್ಡ ಗಾತ್ರದ ಕೋಲಾ ನೀಡುತ್ತಾರೆ.
ಅಭ್ಯಾಸ ಚಟುವಟಿಕೆ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1. ಗುಣಿತಾಕ್ಷರ ಎಂದರೇನು?
ವ್ಯಂಜನಕ್ಕೆ ಸ್ವರ ಸೇರಿದಾಗ ಆಗುವ ಅಕ್ಷರವೇ ಗುಣಿತಾಕ್ಷರ.
2. ಸಂಯುಕ್ತಾಕ್ಷರ ಎಂದರೇನು? ಉದಾಹರಣೆ ನೀಡಿ.
ಎರಡು ಮತ್ತು ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವೇ ಸಂಯುಕ್ತಾಕ್ಷರ ಅಥವಾ ಒತ್ತಕ್ಷರ ಎನ್ನುವರು.
ಉದಾ : ಅಕ್ಷರ ,ಅಪ್ಪ, ಅಮ್ಮ, ಅಸ್ತ್ರ,
3. ದೇಶ್ಯ ಮತ್ತು ಅನ್ಯ ದೇಶ್ಯ ಪದಗಳನ್ನು ಪಟ್ಟಿ ಮಾಡಿ.
ದೇಶ್ಯ ಪದಗಳು : ಅಪ್ಪ, ಅಮ್ಮ, ಚಿಕ್ಕಪ್ಪ, ಅಜ್ಜ, ಅಜ್ಜಿ, ಅಣ್ಣ, ಕೈ, ಕಾಲು, ಬಾಯಿ, ಇತ್ಯಾದಿ.
ಅನ್ಯದೇಶ್ಯ ಪದಗಳು : ಕೋರ್ಟು, ಬ್ಯಾಂಕು, ಹೋಟೆಲು, ಸಾಬೂನು, ಮೇಜು, ಹಾರ್ಮೋನಿಯಂ, ಅಲಮಾರು,
4. ಕನ್ನಡದಲ್ಲಿರುವ ಯಾವುದಾದರು ಐದು ತದ್ಭವ ಪದಗಳನ್ನು ಪಟ್ಟಿ ಮಾಡಿ.
ಉತ್ತರ : ಬಸವ, ಬಸದಿ, ಬೇಸಗೆ, ಬಿನ್ನಣ, ಕೊಡಲಿ,
ಪ್ರಾಯೋಗಿಕ ಭಾಷಾಭ್ಯಾಸ
1. ಕೊಟ್ಟಿರುವ ಪದಗಳಲ್ಲಿರುವ ಗುಣಿತಾಕ್ಷರಗಳನ್ನು ಪ್ರತ್ಯೇಕಿಸಿ ಬರೆಯಿರಿ.
( ಹೋಟೆಲ್, ಮಾಲೀಕ , ಇವರು , ಪುಣ್ಯಾತ್ಮ , ರಸ್ತೆ , ಗ್ರಾಹಕ ,)
ಹೋಟೆಲ್ = ಹ್+ಓ+ಟ್+ಎ+ಲ್
ಮಾಲೀಕ = ಮ್+ಆ+ಲ್+ಈ+ಕ್+ಅ
ಇವರು = ಇ+ವ್+ಅ+ರ್+ಉ
ಪುಣ್ಯಾತ್ಮ = ಪ್+ಉ+ಣ್+ಯ್+ಆ+ತ್+ಮ್+ಅ
ರಸ್ತೆ = ರ್+ಸ್+ತ್+ಎ
ಗ್ರಾಹಕ = ಗ್+ರ್+ಆ+ಹ್+ಅ+ಕ್+ಅ
2. ಕೊಟ್ಟಿರುವ ಪದಗಳಲ್ಲಿರುವ ಸಜಾತೀಯ ಮತ್ತು ವಿಜಾತೀಯ ಸಂಯುಕ್ತಾಕ್ಷರಗಳನ್ನು ಆರಿಸಿ ಬರೆಯಿರಿ.
( ದಿನಪತ್ರಿಕೆ , ಅಗತ್ಯ , ಅಮ್ಮ , ವಸ್ತು, ಪುಕ್ಕಟೆ , ಹಣ್ಣಿನರಸ , ನಿಲ್ದಾಣ , ಮಣ್ಣು, ಸಂಪ್ರದಾಯ, ಶುದ್ಧ , ಅಗ್ಗ, ಸಂಸ್ಕೃತಿ, ಪ್ರವಾಸ , ಶಕ್ತಿ, ಹುನ್ನಾರ ) .
ಸಜಾತೀಯ ಸಂಯುಕ್ತಾಕ್ಷರ | ವಿಜಾತೀಯ ಸಂಯುಕ್ತಾಕ್ಷರ | |
ಅಮ್ಮ | ದಿನಪತ್ರಿಕೆ | |
ಪುಕ್ಕಟ್ಟೆ | ಅಗತ್ಯ | |
ಹಣ್ಣಿನರಸ | ವಸ್ತು | |
ಮಣ್ಣು | ನಿಲ್ದಾಣ | |
ಶುದ್ಧ | ಸಂಪ್ರದಾಯ | |
ಅಗ್ಗ | ಸಂಸ್ಕೃತಿ | |
ಹುನ್ನಾರ | ಪ್ರವಾಸ | |
| ಶಕ್ತಿ |
ವರ್ಷ – ವರುಷ
ಪ್ರಾಣ – ಹರಣ
ಶಕ್ತಿ – ಶಕುತಿ
ಪುಣ್ಯ – ಹೂನ
4. ಕೊಟ್ಟಿರುವ ಪದಗಳಲ್ಲಿರುವ ದೇಶೀಯ ಮತ್ತು ಅನ್ಯದೇಶೀಯ ಪದಗಳನ್ನು ಆರಿಸಿ ಬರೆಯಿರಿ
( ದೊಡ್ಡದು, ಬಸ್ಸು, ಬರ್ಗರ್, ಪಾನಕ, ವಾಟರ್, ಸಣ್ಣ ,ಹುನ್ನಾರ )
ದೇಶೀಯ ಪದಗಳು : ದೊಡ್ಡದು, ಪಾನಕ, ಸಣ್ಣ, ಹುನ್ನಾರ.
ಅನ್ಯ ದೇಶೀಯ ಪದಗಳು : ಬರ್ಗರ್, ಬಸ್ಸು, ವಾಟರ್.