ರಾಮರಾಜ್ಯ
ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿರಿ ;-
1.ಯಾರೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ ?
ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ
2.ರಾಜನು ಯಾವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು ?
ರಾಜನು ಅಲ್ಪಪ್ರಯತ್ನದಿಂದ ಬಹುಫಲವನ್ನು ಕೊಡತಕ್ಕ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು.
3.ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಯಾರು ?
ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಪಂಡಿತ.
4.ಜನರು ಅರಸನನ್ನು ಹೇಗೆ ತಿರಸ್ಕರಿಸಬಹುದು ?
ಬಲಾತ್ಕಾರದಿಂದ ಕೆಲಸ ಮಾಡಿಸಿಕೊಂಡು ಶೋಷಿಸುವ ಯಜಮಾನನಂತೆ ಅರಸನು ವರ್ತಿಸಿದರೆ ಜನರು ತಿರಸ್ಕರಿಸಬಹುದು.
5.ಅಮಾತ್ಯರು ಯಾವ ವಿಷಯದಲ್ಲಿ ನಿಪುಣರಾಗಿರಬೇಕು?
ಅಮಾತ್ಯರು ರಾಜ್ಯಶಾಸ್ತ್ರದಲ್ಲಿ ನಿಪುಣರಾಗಿರಬೇಕು.
6.ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲವರು ಯಾರು ?
ದೇಶಭ್ರಷ್ಟಗೊಳಿಸಿದ ಶತ್ರುಗಳು ಮರಳಿ ದೇಶದೊಳಕ್ಕೆ ಸೇರಿಕೊಂಡರೆ ಅವರು ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲರು.
7.ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು ಯಾರು ?
ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಸಚಿವನು ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು.
ಆ ) ಈ ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ .
1.ಮಂತ್ರಾಲೋಚನೆಯನ್ನು ಹೇಗೆ ನಡೆಸಬೇಕೆಂದು ರಾಮನ ಅಭಿಪ್ರಾಯ ?
ರಾಜ್ಯಶಾಸ್ತ್ರ ನಿಪುಣರಾದ ಅಮಾತ್ಯರೊಂದಿಗೆ ಮಂತ್ರಾಲೋಚನೆಯನ್ನು ಗೌಪ್ಯವಾಗಿಮಾಡಬೇಕು.ಮಂತ್ರಾಲೋಚನೆಗೆ ಅಗತ್ಯಕ್ಕಿಂತ ಹೆಚ್ಚಿನ ಜನರನ್ನು ಸೇರಿಸಿಕೊಳ್ಳಬಾರದು .
ಮಂತ್ರಾಲೋಚನೆಯ ವಿಷಯ ಕಾರ್ಯರೂಪಕ್ಕೆ ಬರುವುದರೊಳಗೆ ರಾಷ್ಟ್ರದಲ್ಲಿ ಅದು ಬಹಿರಂಗವಾಗಬಾರದು . ಮೊದಲೇ ಸಾಮಂತರಾಜರಿಗೆ ತಿಳಿಯಬಾರದು.ಅದು ಸಾಮಂತರಿಗೆ ಗೊತ್ತಾಗುವಷ್ಟರಲ್ಲಿ ಪೂರ್ಣವಾಗಿ ನಡೆದು ಹೋಗಿರಬೇಕು ಅಥವಾ ಅರ್ಧದಷ್ಟಾದರೂ ಆಚರಣೆಯಲ್ಲಿ ಬರಬೇಕು.
2.ರಾಜ್ಯದ ಅಮಾತ್ಯರಲ್ಲಿ ಯಾವ ಗುಣಗಳಿರಬೇಕು ?
ಅಮಾತ್ಯನು ರಾಜ್ಯಶಾಸ್ತ್ರ ನಿಪುಣನಾಗಿರಬೇಕು.ಮಂತ್ರಾಲೋಚನೆಯನ್ನು ಗೌಪ್ಯವಾಗಿ ಇಡುವವನು ಆಗಿರಬೇಕು. ಮೇಧಾವಿಯೂ ಶೂರನೂ ಕಾರ್ಯದಕ್ಷನೂ ಆಗಿರಬೇಕು. ಲಂಚವನ್ನು ತೆಗೆದುಕೊಳ್ಳದವನು, ಪ್ರಾಮಾಣಿಕನೂ ಆಗಿರಬೇಕು. ರಾಜ್ಯದ ಆಡಳಿತ ಕಾರ್ಯವನ್ನು ಸರಿಯಾಗಿ ನಿರ್ವಹಿಸಿ ರಾಜನಿಗೆ ಶ್ರೇಯಸ್ಸನ್ನು ತಂದುಕೊಡುವ ಗುಣವನ್ನು ಹೊಂದಿರಬೇಕು.
3.ಯಾವ ಮೂರು ವ್ಯಕ್ತಿಗಳನ್ನು ರಾಜನು ತ್ಯಜಿಸಬೇಕು ? ಯಾಕೆ ?
ಉಪಾಯದಿಂದ ಹಣ ಕೀಳುವ ವೈದ್ಯನನ್ನೂ ಒಡೆಯನನ್ನು ದೂಷಿಸುವ ಸೇವಕನನ್ನೂ ಖಜಾನೆಯ ಐಶ್ವರ್ಯದ ಮೇಲೆ ಕಣ್ಣಿಟ್ಟಿರುವ ಸೈನಿಕನನ್ನೂ ರಾಜನು ತ್ಯಜಿಸಬೇಕು ಏಕೆಂದರೆ ಈ ವ್ಯಕ್ತಿಗಳ ಕುತಂತ್ರದಿಂದಲೇ ಒಡೆಯನನ್ನು ದೂಷಿಸುವ ಸೇವಕನನ್ನೂ ಖಜಾನೆಯ ಐಶ್ವರ್ಯದ ಮೇಲೆ ಕಣ್ಣಿಟ್ಟಿರುವ ಸೈನಿಕನನ್ನೂ ರಾಜನು ತ್ಯಜಿಸಬೇಕು ಏಕೆಂದರೆ ಈ ವ್ಯಕ್ತಿಗಳ ಕುತಂತ್ರದಿಂದಲೇ ರಾಜನು ವಿಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು.ಆದ್ದರಿಂದ ಇವರಿಗೆ ಉಗ್ರ ಶಿಕ್ಷೆಯನ್ನು ನೀಡಿ ರಾಜನು ತನ್ನಿಂದ ಇಂಥವರನ್ನು ದೂರವಿಡಬೇಕು
4.ದೂತನು ಹೇಗಿರಬೇಕು ?
ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ವಿದ್ಯಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು. ದೂತನು ಕಾರ್ಯ ಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು. ಹೇಳಿಕಳಿಸಿದ ಸಂದೇಶವನ್ನು ಮಾತ್ರ ತಿಳಿಸುವ ಸತ್ಯವಂತನಾಗಿರಬೇಕು . ವ್ಯಕ್ತಿಗಳ ಮತ್ತು ವಸ್ತುಗಳ ಮೌಲ್ಯವನ್ನೂ, ಯೋಗ್ಯತೆಯನ್ನೂ ಸರಿಯಾಗಿ ಗುರುತಿಸಬಲ್ಲ ನಿಷ್ಣಾವಂತನಾಗಿರಬೇಕು .
5..ಸೇವಕರ ವಿಷಯದಲ್ಲಿ ರಾಜನು ಹೇಗೆ ವರ್ತಿಸಬೇಕು ?
ಸೇವಕರು ನಿರ್ಭಯರಾಗಿ ಬಂದು ಎದುರಿಗೆ ನಿಲ್ಲುವಷ್ಟು ಸಲಿಗೆಯನ್ನು ಕೊಡಬಾರದು.ಅಥವಾ ಹತ್ತಿರವೇ ಸುಳಿಯದೆ ದೂರಕ್ಕೆ ಸರಿಯುವಂತೆಯೂ ಇರಬಾರದು.ಅವರ ವಿಷಯದಲ್ಲಿ ಹೆಚ್ಚು ಸಲಿಗೆಯೂ ಇರಬಾರದು ಹೆಚ್ಚು ಅಂಜಿಸುವುದೂ ಇರಬಾರದು ಇವೆರಡರ ನಡುದಾರಿಯನ್ನು ರಾಜನು ಕಾಯ್ದುಕೊಳ್ಳಬೇಕು ಎಂದು ರಾಮನು ಹೇಳುತ್ತಾನೆ.
6.ಖಜಾನೆಯನ್ನು ಹೇಗೆ ನಿಭಾಯಿಸಬೇಕೆಂದು ರಾಮನು ಹೇಳುತ್ತಾನೆ ?
ಆದಾಯವು ವ್ಯಯಕ್ಕಿಂತ ( ಖರ್ಚಿಗಿಂತ ) ಹೆಚ್ಚಿರಬೇಕು.ರಾಜ್ಯದ ಬೊಕ್ಕಸದಲ್ಲಿ ಸಂಗ್ರಹಿಸುವ ಸಂಪತ್ತು ರಾಜ್ಯದ ಅಭಿವೃದ್ಧಿಯ ಕೆಲಸಕಾರ್ಯಗಳಿಗೆ ವಿನಿಯೋಗವಾಗಬೇಕು . ಖಜಾನೆಯನ್ನು ಬರಿದುಗೊಳಿಸಬಾರದು . ಹಾಗೆಂದು ಅದನ್ನು ತುಳುಕುವಷ್ಟು ತುಂಬಿಸಿಕೊಳ್ಳಲು ಅನರ್ಥದ ಆದಾಯವು ಖರ್ಚಿಗಿಂತ ಹೆಚ್ಚಿರಬೇಕು.ರಾಜ್ಯದ ಬೊಕ್ಕಸದಲ್ಲಿ ಸಂಗ್ರಹಿಸುವ ಸಂಪತ್ತು ರಾಜ್ಯದ ಅಭಿವೃದ್ಧಿಯ ಕೆಲಸಕಾರ್ಯಗಳಿಗೆ ವಿನಿಯೋಗವಾಗಬೇಕು . ಖಜಾನೆಯನ್ನು ಬರಿದುಗೊಳಿಸಬಾರದು . ಹಾಗೆಂದು ಅದನ್ನು ತುಳುಕುವಷ್ಟು ತುಂಬಿಸಿಕೊಳ್ಳಲು ಅನರ್ಥ ಅನ್ಯಾಯಗಳ ಮಾರ್ಗವನ್ನು ಹಿಡಿಯಬಾರದು ಎಂದು ರಾಮನು ಖಜಾನೆಯನ್ನು ನಿಭಾಯಿಸುವ ಬಗ್ಗೆ ಹೇಳುತ್ತಾನೆ.
ಈ ಕೆಳಗಿನ ಪ್ರಶ್ನೆಗಳಿಗೆ 10 ವಾಕ್ಯಗಳಲ್ಲಿ ಉತ್ತರಿಸಿರಿ .
1.ರಾಜ್ಯಾಡಳಿತದ ವಿಷಯದಲ್ಲಿ ರಾಮನ ಉಪದೇಶವನ್ನು ಸಂಗ್ರಹವಾಗಿ ಬರೆಯಿರಿ .
ರಾಜ್ಯವನ್ನು ಆಳತಕ್ಕವರಿಗೆ ಮಂತ್ರಾಲೋಚನೆಯು ಮುಖ್ಯವಾದದ್ದು. ಆದ್ದರಿಂದ ವಿಷಯವನ್ನು ಗೌಪ್ಯವಾಗಿ ಇಟ್ಟಿರಬೇಕು.ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಆದ ಸಚಿವರನ್ನು ರಾಜನು ಹೊಂದಿರಬೇಕು . ಅವನು ಆಡಳಿತದಲ್ಲಿ ರಾಜನಿಗೆ ಶ್ರೇಯಸ್ಸನ್ನು ತಂದುಕೊಡುವನು ಅಧಿಕಾರಿಗಳನ್ನು ಅವರ ಕುಶಲತೆಗೆ, ಯೋಗ್ಯತೆಗೆ ತಕ್ಕಂತೆ ನೇಮಿಸಿಕೊಳ್ಳಬೇಕು . ಸೇನಾನಾಯಕರನ್ನು ಸೈನಿಕರನ್ನು ರಾಜನು ಚೆನ್ನಾಗಿ ನೋಡಿಕೊಳ್ಳಬೇಕು. ದೇಶದಲ್ಲಿಯೇ ಹುಟ್ಟಿ ಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು. ಶತ್ರು ಪಕ್ಷದಲ್ಲಿನ ಇಲಾಖೆಗಳನ್ನು ಗಮನಿಸಲು ಗೂಢಚಾರರನ್ನು ನೇಮಿಸಬೇಕು . ರಾಜ್ಯದ ಬೊಕ್ಕಸದಲ್ಲಿನ ಸಂಪತ್ತನ್ನು ಅಭಿವೃದ್ದಿಯ ಕೆಲಸಕಾರ್ಯಗಳಿಗೆ ಉಪಯೋಗಿಸಬೇಕು. ಖರ್ಚಿಗಿಂತ ಆದಾಯವು ಹೆಚ್ಚಿರುವ ಹಾಗೆ ರಾಜನು ನೋಡಿಕೊಳ್ಳಬೇಕು.ದೇಶದಲ್ಲಿಯೇ ಹುಟ್ಟಿಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು.ಶತ್ರು ಪಕ್ಷದಲ್ಲಿನ ಇಲಾಖೆಗಳನ್ನು ಗಮನಿಸಲು ಗೂಢಚಾರರನ್ನು ನೇಮಿಸಬೇಕು . ರಾಜ್ಯದ ಬೊಕ್ಕಸದಲ್ಲಿನ ಸಂಪತ್ತನ್ನು ಅಭಿವೃದ್ಧಿಯ ಕೆಲಸಕಾರ್ಯಗಳಿಗೆ ಉಪಯೋಗಿಸಬೇಕು. ಖರ್ಚಿಗಿಂತ ಆದಾಯವು ಹೆಚ್ಚಿರುವ ಹಾಗೆ ನೋಡಿಕೊಳ್ಳಬೇಕು.ರಾಜನು ಯಂತ್ರ ಯಂತ್ರಜ್ಞರನ್ನು ಶಿಲ್ಪಿಗಳನ್ನು ಆಯುಧಗಳನ್ನು ಧನುರ್ಧಾರಿಗಳಾದ ಸೈನಿಕರನ್ನು ಹೊಂದಿರಬೇಕು ಎಂದು ರಾಮನು ಉಪದೇಶ ನೀಡಿದನು.
2.ರಾಜನಲ್ಲಿ ತಲೆದೋರಬಹುದಾದ ಹದಿನಾಲ್ಕು ದೋಷಗಳ ಬಗ್ಗೆ ವಿವರಿಸಿ .
ರಾಜನಲ್ಲಿ ಸಂಭವಿಸಬಹುದಾದ ದೋಷಗಳು ಹದಿನಾಲ್ಕು , ಅವು ನಾಸ್ತಿಕಬುದ್ಧಿ , ಸುಳ್ಳು , ಸಿಟ್ಟು , ಅನವಧಾನ , ಚಟುವಟಿಕೆಯಿಲ್ಲದೆ ಕೆಲಸವನ್ನು ತಡಮಾಡುವುದು , ಪ್ರಾಜರಾದ ಸಜ್ಜನರೊಡನೆ ಸೇರದಿರುವುದು , ಸೋಮಾರಿತನ , ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗುವುದು , ಮಂತ್ರಿಗಳೊಡನೆ ಸಮಾಲೋಚಿಸದೆ ರಾಜ್ಯಕಾರ್ಯಗಳಲ್ಲಿ ತಾನೊಬ್ಬನೇ ನಿರ್ಧಾರವನ್ನು ತೆಗೆದುಕೊಳ್ಳುವುದು . ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು , ನಿಶ್ಚಯಿಸಿದ ಕಾರ್ಯಗಳನ್ನು ಆರಂಭಿಸುರುವರು , ಮಂತ್ರಾಲೋಚನೆಯನ್ನು ರಹಸ್ಯವಾಗಿಡದೆ ಬಹಿರಂಗಪಡಿಸುವುದು ಮಂಗಳಕರವಾದ ಶುಭಕಾರ್ಯವನ್ನು ಮಾಡದಿರುವುದು ಹಾಗೂ ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ – ಈ ಹದಿನಾಲ್ಕು ರಾಜದೋಷಗಳಿಗೆ ಅವಕಾಶವನ್ನು ಕೊಡಬಾರದು .
ಈ ಮಾತುಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ.
1.ಸಾವಿರ ಮೂರ್ಖರಿಗಿಂತ ಒಬ್ಬ ಪಂಡಿತ ಲೇಸು.
ಸಾವಿರ ಮೂರ್ಖರಿಗಿಂತಲೂ ಒಬ್ಬ ಪಂಡಿತನೇ ಲೇಸೆಂದು ತಿಳಿದು ಅವನನ್ನು ಆದರಿಸುವೆಯಾ? ಏಕೆಂದರೆ ಕಷ್ಟಕಾಲದಲ್ಲಿ ಪಂಡಿತನೊಬ್ಬನೇ ಸರಿಯಾದ ಉಪಾಯವನ್ನು ಬೋಧಿಸಿ ಕಾರ್ಯವನ್ನು ನಿರ್ವಹಿಸಬಲ್ಲ. ಮೂರ್ಖರ ಸಂಖ್ಯೆ ಸಾವಿರವಿರಲಿ, ಹತ್ತು ಸಾವಿರವೇ ಇರಲಿ, ರಾಜನಿಗೆ ಆದರಿಂದ ಯಾವ ಸಹಾಯವೂ ಆಗುವುದಿಲ್ಲ. ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಆದ ಸಚಿವನು ಒಬ್ಬನೇ ಆದರೂ ರಾಜನಿಗಾಗಲೀ ರಾಜ್ಯದ ಆಡಳಿತವನ್ನು ನಿರ್ವಹಿಸುವವನಿಗಾಗಲೀ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು.
2.. ದೂತನು ಕಾರ್ಯಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು.
ದೂತನು ಕಾರ್ಯಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು ಹೇಳಿಕಳಿಸಿದ ಸಂದೇಶವನ್ನು ಮಾತ್ರ ತಿಳಿಸುವಂತ ಸತ್ಯವಂತನಾಗಿರಬೇಕು. ವ್ಯಕ್ತಿ ವಸ್ತುಗಳ ಮೌಲ್ಯವನ್ನುಯೋಗ್ಯತೆಯನ್ನು ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು. ಹೀಗೆ ರಾಮನು ಹೇಳಿದಂತೆ ಚಾಣಾಕ್ಷತನವನ್ನು ಹೊಂದಿರುವ ದೂತನು ಇದ್ದರೆ ಆತನು ರಾಜನನ್ನು ಶತ್ರುಗಳ ಸಂಚಿನಿಂದ ಕಾಪಾಡಬಲ್ಲವನಾಗುವನು ಸುತ್ತಮುತ್ತಲಿನ ರಾಜ್ಯಗಳಲ್ಲಿ ನಡೆಯುವ ವಿಚಾರಗಳನ್ನು ಸರಿಯಾಗಿ ರಾಜನಿಗೆ ಮುಟ್ಟಿಸಬಲ್ಲವನಾಗಿರುತ್ತಾನೆ.
3.ಪೂರ್ವಿಕರ ವ್ಯಕ್ತಿತ್ವದ ಅತ್ಯುತ್ತಮ ಅಂಶಗಳನ್ನು ರಾಜನು ಅಳವಡಿಸಿಕೊಳ್ಳಬೇಕು.
ಇತಿಹಾಸವನ್ನು ಅವಲೋಕಿಸಿದಾಗ ನಮಗೆ ಅನೇಕ ಮಹಾನುಭಾವರ ಪರಿಚಯವಾಗುತ್ತದೆ. ಅವರೆಲ್ಲ ತಮ್ಮ ಉದಾತ್ತ ವ್ಯಕ್ತಿತ್ವದಿಂದ ನಮ್ಮ ಗಮನ ಸೆಳೆಯುತ್ತಾರೆ. ತಮ್ಮ ವ್ಯಕ್ತಿತ್ವದಿಂದಾಗಿ ಅಪೂರ್ವವಾದ ಸಾಧನೆಯನ್ನು ಆದಕಾರಣ ರಾಮನು ಸಹ ಭರತನಿಗೆ ರಾಜನ ಆಡಳಿತದ ಬಗ್ಗೆ ಹೇಳುವಾಗ ರಾಜನು ತನ್ನ ಪೂರ್ವಿಕರ ವ್ಯಕ್ತಿತ್ವದ ಅತ್ಯತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಾನೆ. ಈ ಅಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಆಡಳಿತವು ಸುಲಭವಾಗುತ್ತದೆ. ಮತ್ತು ಪ್ರಜೆಗಳು ಸಂತುಷ್ಟರಾಗುತ್ತಾರೆ. ಉತ್ತಮ ವ್ಯಕ್ತಿತ್ವವುಳ್ಳ ರಾಜನು ಪ್ರಜೆಗಳ ಪ್ರೀತಿಗೆ ಗೌರವಕ್ಕೆ ಪಾತ್ರನಾಗುತ್ತಾನೆ.
ಭಾಷಾಭ್ಯಾಸ
ಅ) ಈ ಕೆಳಗಿನ ಪದಗಳ ವಚನವನ್ನು ಬದಲಿಸಿ ಬರೆಯಿರಿ.
ಮಾದರಿ : ದೂತ- ದೂತರು,
ಅಮಾತ್ಯ - ಅಮಾತ್ಯರು,
ಪ್ರಶ್ನೆ - ಪ್ರಶ್ನೆಗಳು,
ಧನುರ್ಧಾರಿಗಳು - ಧನುರ್ಧಾರಿ,
ಮೌಲ್ಯ - ಮೌಲ್ಯಗಳು,
ಬಹುಮಾನಗಳು - ಬಹುಮಾನ ,
ಆ) ಈ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿರಿ.
ಕೃಶ= ಭರತನ ದೇಹವು ಸೊರಗಿ ಕೃಶವಾಗಿತ್ತು.
ನಿದ್ರಾವಶ = ರಾಮನು ಭರತನಿಗೆ ನೀನು ನಿದ್ರಾವಶನಾಗದೆ ಯುಕ್ತ ಸಮಯದಲ್ಲಿ ಎಚ್ಚರದಿಂದ ಇರಬೇಕು ಎಂದು ಭೋಧಿಸಿದನು.
ಏರ್ಪಾಡು = ಯುದ್ಧದ ಸಂದರ್ಭದಲ್ಲಿ ಎಲ್ಲಾ ರೀತಿಯಿಂದ ಯುದ್ಧ ಸಾಮಗ್ರಿಗಳನ್ನು ಏರ್ಪಾಡು ಮಾಡಬೇಕು.
ಚಾಪಲ್ಯ = ನಾವು ಪಂಚೇಂದ್ರಿಯಗಳಿಗೆ ಅಧೀನರಾಗಿ ಇಂದ್ರಿಯ ಚಾಪಲ್ಯಕ್ಕೆ ಮುಳಗುವುದು.
ಜ್ಞಾತಿ= ಎಲ್ಲರಿಗೂ ಜ್ಞಾತಿಗಳು (ಸಂಬಂಧಿಗಳು) ಇದ್ದೇ ಇರುತ್ತಾರೆ.
ಇ) ಈ ಕೆಳಗಿನ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ :
ದರ್ಶನವನ್ನು : ದರ್ಶನ +ಅನ್ನು =ಆಗಮಸಂಧಿ
ನಡೆಯುತ್ತಿದೆ+ಎಂಬುದನ್ನು= ಆಗಮ ಸಂಧಿ
ಜಾವದಲ್ಲೆದ್ದು : ಜಾವದಲ್ಲಿ+ಎದ್ದು = ಜಾವದಲ್ಲೆದ್ದು ಲೋಪಸಂಧಿ
ನಿರ್ಭಯವಾಗಿ : ನಿರ್ಭಯ+ಆಗಿ = ನಿರ್ಭಯವಾಗಿ = ಆಗಮಸಂಧಿ
ಕಣ್ಣಿಟ್ಟಿರು : ಕಣ್ಣು+ಇಟ್ಟಿರು = ಕಣ್ಣಿಟ್ಟಿರು = ಲೋಪ ಸಂಧಿ
ಭಾಷಾ ಚಟುವಟಿಕೆ
1 ಆಗಮ ಸಂಧಿ ಎಂದರೇನು? ಉದಾಹರಣೆ ಕೊಡಿ.
ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವ ಪದದ ಕೊನೆಯ ಸ್ವರ ಹಾಗೂ ಉತ್ತರ ಪದದ ಮೊದಲ ಸ್ವರಗಳ ಮಧ್ಯದಲ್ಲಿ ‘ಯ ಕಾರವನ್ನು ಅಥವಾ ‘ವ ಕಾರವನ್ನು ಹೊಸದಾಗಿ ಸೇರಿಸಿದರೆ ಅದು ಆಗಮ ಸಂಧಿ.
2ಆದೇಶ ಸಂಧಿ ಎಂದರೇನು? ಉದಾಹರಣೆ ಕೊಡಿ.
ಉತ್ತರ ಪದದ ಆದಿಯಲ್ಲಿರುವ ಕ, ತ, ಪ ವ್ಯಂಜನಗಳಿಗೆ ಕ್ರಮವಾಗಿ ಗ, ದ, ಬ ವ್ಯಂಜನಗಳು ಆದೇಶವಾಗುವವು ಇದನ್ನು ಆದೇಶ ಸಂಧಿ ಎನ್ನುತ್ತಾರೆ.
ಉದಾಹರಣೆ:
ತುದಿ+ಕಾಲಲ್ಲಿ = ತುದಿಗಾಲಲ್ಲಿ
ಹುಲಿ+ತೊಗಲು = ಹುಲಿದೊಗಲು
ನೀರ್+ಪನಿ = ನೀರ್ವನಿ
ಕಡು+ಬೆಳ್ಪು = = ಕಡುವೆಳ್ಪು
ಕೊಟ್ಟಿರುವ ಪದಗಳನ್ನು ಬಿಡಿಸಿ ಸಂಧಿಸಿ:
ಪಾತ್ರವನ್ನು = ಪಾತ್ರ+ಅನ್ನು = ಆಗಮಸಂಧಿ
ಶುದ್ಧಿಯನ್ನು = ಶುದ್ಧಿ+ಅನ್ನು = ಆಗಮಸಂಧಿ
ಚಳಿಗಾಲ = ಚಳಿ+ಕಾಲ = ಆದೇಶಸಂಧಿ
ಪಡೆದಿದ್ದೇನೆ. ಪಡೆದು+ಇದ್ದೇನೆ= ಲೋಪಸಂಧಿ
4 ಕೊಟ್ಟಿರುವ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
ಅಂಧಕಾರ: ನಮ್ಮ ದೇಶದಲ್ಲಿ ಇರುವ ಅಂಧಕಾರ ಹೋಗಲಾಡಿಸಬೇಕು .
ಹದಿನಾರಾಣೆ: ಹಿಂದಿನ ಕಾಲದಲ್ಲಿ ಹದಿನಾರಣೆಗೆ ಚಲಾವಣೆಯಲ್ಲಿ ಇತ್ತು .
ನಿಭಾಯಿಸು: ಕುಟುಂಬವನ್ನು ನಿಭಾಯಿಸಲು ತಂದೆ-ತಾಯಿಗಳು ಯಾವಾಗಲೂ ಶ್ರಮಿಸುತ್ತಾರೆ .
ಮುಸುಕಿರುವ: ಮಳೆಗಾಲದಲ್ಲಿ ಮೋಡ ಮುಸುಕಿದ ವಾತಾವರಣ ಯಾವಾಗಲೂ ಕಾಣಬಹುದು .
5 ಕೊಟ್ಟಿರುವ ಪದಗಳನ್ನು ವಿಗ್ರಹಿಸಿ, ಸಮಾಸ ಹೆಸರಿಸಿ,
ಮರದ+ಕಾಲು = ಮರಗಾಲು. ತತ್ಪುರುಷ ಸಮಾಸ
ಹಿರಿದು+ಮರ =ಹೆಮ್ಮರ. ಕರ್ಮಧಾರಯ ಸಮಾಸ
ಬಿಳಿದು+ಕೊಡೆ = ಬೆಳ್ಗೊಡೆ. ಕರ್ಮಧಾರಯ ಸಮಾಸ
ಒಡೆದ+ಕಟ್ಟು = ಒಗ್ಗಟ್ಟು ದ್ವಿಗು ಸಮಾಸ
ಸಪ್ತ+ಸ್ವರಗಳು = ಸಪ್ತಸ್ವರಗಳು. ದ್ವಿಗು ಸಮಾಸ
6. ಕೊಟ್ಟಿರುವ ಗಾದೆಯನ್ನು ವಿಸ್ತರಿಸಿ ಬರೆಯಿರಿ.
1. ತುಂಬಿದ ಕೊಡ ತುಳುಕುವುದಿಲ್ಲ.
ಪರಿಪೂರ್ಣ ಜ್ಞಾನವನ್ನು ಕುರಿತು ಈ ಗಾದೆಯು ಹೇಳುತ್ತದೆ. ಪರಿಪೂರ್ಣ ಜ್ಞಾನಿಯಾದವನು ಯಾವಾಗಲೂ ತನ್ನ ಕುರಿತಾಗಿ ಜಂಭಕೊಚ್ಚಿಕೊಳ್ಳುವುದಿಲ್ಲ. ಆದರೆ ಅರ್ಧಜ್ಞಾನಿಯಾದವನು ತಾನು ಎಲ್ಲವನ್ನು ಬಲ್ಲೆನೆಂದು ಅಹಂಕಾರ ಪಡುತ್ತಾನೆ. ಮೇಲಾಗಿ ಪೂರ್ಣ ಕುಂಭವು ಶುಭದ ಸಂಕೇತವಾಗಿದೆ. ನಾವು ಎಷ್ಟು ತಿಳಿದಿದ್ದೇವೆ ಎಂದರೂ ತಿಳಿಯಬೇಕಾದದ್ದು ಈ ದೇಶದ ಸಾಕಷ್ಟಿದೆ. ಆದ್ದರಿಂದ ನಾವು ಜ್ಞಾನವೇಷಿಯಾಗಿಯೇ ಇರಬೇಕು. ಜ್ಞಾನಕ್ಕೆ ಕೊನೆಯೆಂಬುದು ಇರುವುದಿಲ್ಲ. ವ್ಯಕ್ತಿಯ ಜೀವನಕ್ಕೆ ಒಂದು ಮಿತಿ ಇದೆ. ಆದರೆ ಜ್ಞಾನಕ್ಕೆ ಮಿತಿಯೆಂಬುದೇ ಇಲ್ಲ. ತುಂಬಿದ ಕೊಡದಂತಿರುವ ಮನುಷ್ಯನ ವ್ಯಕ್ತಿತ್ವವು ಭಿನ್ನವಾಗಿಯೇ ಇರುತ್ತದೆ.
2. ಬೆಳ್ಳಗಿರುವುದೆಲ್ಲ ಹಾಲಲ್ಲ.
ಯಾವುದೇ ಸಂಗತಿಯನ್ನು ಕುರಿತುನಾವು ನೇರವಾಗಿ ನಂಬಬಾರದು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು. ಸೇರಿದಂತೆ ಸಮಕಾಲೀನ ಸಮಾಜದಲ್ಲಿ ಮೋಸಗಾರರು ಹಾಗೂ ನಯವಂಚಕರೇ ಇದ್ದಾರೆ. ಕಾರಣ ಯಾವುದೇ ಅದನ್ನು ನಾವು ಸಾರಸರ ವಿಚಾರ ಮಾಡಿ ನಂಬಬೇಕು. ಕೇವಲ ಕುರುಡು ನಂಬಿಕೆಯಿಂದ ಸಾಗಿದರೆ ಮೋಸದ ಜಾಲದಲ್ಲಿ ಬೀಳುವುದು ನಿಶ್ಚಿತ. ಈ ಮಾತಿಗೆ ಹಲವಾರು ಐತಿಹಾಸಿಕ ನಿದರ್ಶನಗಳನ್ನು ಕೊಡಬಹುದು. ತಿಳಿಯುವ ಮುನ್ನ ಬರೆಯುವ ಮುನ್ನ ಸಾರಸರ ವಿಚಾರವನ್ನು ಮಾಡಬೇಕು. ಅಂದಾಗ ನಮ್ಮ ಜೀವನ ಸುರಕ್ಷಿತವಾಗಬಲ್ಲದು.
ಬೆಡಗಿನ ತಾಣ ಜಯಪುರ
ಕೃತಿಕಾರರ ಪರಿಚಯ:
ಕವಿ: ಕೆ . ಶಿವರಾಮಕಾರಂಶ
ಕಾಲ: ಕ್ರಿ ಶ 1902
ಸ್ಥಳ: ಉಡುಪಿ ಜಿಲ್ಲೆಯ ಕೋಟಾ
ಕೃತಿಗಳು : ಚೋಮನದುಡಿ , ಮರಳಿ ಮಣ್ಣಿಗೆ , ಬೆಟ್ಟದಜೀವ , ಅಳಿದಮೇಲೆ ಕಾದಂಬರಿಗಳು ಪ್ರಸಿದ್ಧವಾಗಿವೆ. ಹಸಿವು , ಹಾವು , ಕವಿ, ಕರ್ಮ- , ಕಥಾಸಂಕಲನಗಳನ್ನು ರಾಷ್ಟ್ರಗೀತ ಸುಧಾಕರ ಮತ್ತು ಸೀಳವನಗಳು –ಕವನ ಸಂಕಲನಗಳನ್ನು ರಚಿಸಿದ್ದಾರೆ. ನಾಟಕ , ಹರಟೆ , ಬಾಲಸಾಹಿತ್ಯ , ವಿಜ್ಞಾನ ಸಾಹಿತ್ಯ , ನಿಘಂಟು ರಚನೆಯನ್ನು ಮಾಡಿರುವ ಇವರು ಅಬುವಿನಿಂದ ಬರಾಮಕ್ಕೆ ಅಪೂರ್ವ ಪಶ್ಚಿಮ , ಅರಸಿಕರಲ್ಲ , ಪಾತಾಳಕ್ಕೆ ಪಯಣ ಮತ್ತು ಪ್ರವಾಸ ಕಥನಗಳು, ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಆತ್ಮಕಥನ , ಯಕ್ಷಗಾನ ಬಯಲಾಟ – ಜಾನಪದ ಸಾಹಿತ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿಗಳು: ಇವರ ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ , ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಮೈಮನಗಳ ಸುಳಿಯಲ್ಲಿ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ . ಶಿವರಾಮಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ – 32 , ಭಾಗ – 2 , ಗ್ರಂಥದ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆರಿಸಿ , ಸಂಪಾದಿಸಿ ; ನಿಗದಿಪಡಿಸಲಾಗಿದೆ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ;
1.ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು?
ರೈಗಳ ಮನೆ ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯ ಪ್ರದೇಶದಲ್ಲಿತ್ತು.
2.ಲೇಖಕರಿಗೆ ಜಯಪುರದ ಮನೆಗಳ ಮೇಲೆ ಮೋಹವೇಕೆ?
ಜಯಪುರದ ಮನೆಗಳು ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ.
3. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ?
ಜಯಪುರದ ಜನರಿಗೆ ಕೆಂಪು, ಕಿತ್ತಳೆ , ಹಳದಿ ಎಂದರೆ ಇಷ್ಟ.
4. ಜಯಪುರದ ಪೂರ್ವದ ರಾಜಧಾನಿ ಯಾವುದು?
ಜಯಪುರದ ಪೂರ್ವದ ರಾಜಧಾನಿ ಅಂಬೇರ.
5 , ಲೇಖಕರಿಗಿದ್ದ ಹಂಬಲವೇನು ?
ಜಯಪುರದ ಜಾನಪದ ನೃತ್ಯಗಳನ್ನು ನೋಡಬೇಕೆಂಬ ಹಂಬಲ ಲೇಖಕರಿಗಿತ್ತು.
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. ಜಯಪುರದಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ.
ಜಯಪುರದ ಮುಖ್ಯಬೀದಿಗಳು ಲೇಖಕರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿದವು . ನಗರದ ಬೀದಿಗಳು ಒಂದು ಶತಮಾನದ ಹಿಂದೆ ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬೀದಿಗಳವು : ನೇರವಾದವುಗಳು ಬಹುದೂರದಿಂದ ಕಾಣಿಸುವ ಅಂಗಡಿ – ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತದೆ .
ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ . ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ . ಇಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ, ಕೆಲವೊಂದು ಕಡೆಗಳಲ್ಲಿ ಮಹಾದ್ವಾರಗಳಿವೆ . ಎಂದು ಲೇಖಕರು ಹೇಳಿದ್ದಾರೆ .
2.ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು?
ಲೇಖಕರು ಹಿಂದೆ ಅಂಬೇರಕ್ಕೆ ಹೋಗಿದ್ದಾಗ ಅಲ್ಲಿ ಜನವಸತಿ ಇದ್ದಿರಲಿಲ್ಲ . ಆಗ ಅಲ್ಲಿನ ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ
ಮನೆಗಳಾಗಿದ್ದವು . ಆದರೆ ಈಗ ಹಾಗಿಲ್ಲ ,ನೂರಾರು ಸಿಂಧಿ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿವೆ .
3.ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ .
ಅಂಬೇರ ಬೆಟ್ಟದಲ್ಲಿ ಮೂರು ಅಂತಸ್ತಿನ ಅರಮನೆ ಇದೆ. ಈ ಅರಮನೆಯ ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲೇ ಕಾಣಿಸುತ್ತದೆ ಮೀರಾಬಾಯಿಯ ದೇವಾಲಯ . ಆಕೆ ಗಿರಿಧರನಾಗರನನ್ನು ಪೂಜಿಸಿದ ಸ್ಥಳವಿದು . ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ . ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ ಮತ್ತು ನವರಂಗಗಳಿವೆ.
4.ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ ,
ಲೇಖಕರಿಗೆ ಜಯಪುರದ ಜನಪದ ನೃತ್ಯ ನೋಡಬೇಕೆಂಬ ಹಂಬಲ ಇತ್ತು , ಊರಿನ ಜನಸಾಮಾನ್ಯರ ನೃತ್ಯ ಅದಾಗಿತ್ತು , ಇಬ್ಬರು ಯೌವನಸ್ಥರು ಸ್ತ್ರೀಯರ ಉಡುಗೆ ಉಟ್ಟಿದ್ದರು. ಮಾರವಾಡಿ ಸ್ತ್ರೀಯರಂತೆ ತಲೆಗೆ ಸೆರಗು ಹಾಕಿಕೊಂಡು ಮುಖತೋರಿಸದೆ ಕುಣಿಯತೊಡಗಿದರು .ಹಿಮ್ಮೇಳಕ್ಕೆ ಡೋಳು ತಮಟೆಗಳಿದ್ದವು . ಮುಂಭಾಗದಲ್ಲಿ ಸ್ತ್ರೀವೇಷದ ನರ್ತಕರು ಲಾಸ್ಯವೆಸಗಿದರು . ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾಣ್ಣೆ ಚೆಲುವುಗಳೆರಡೂ ಇದ್ದವು . ಅವರ ಜತೆಗೆ ಮೂರು , ನಾಲ್ಕು ಹುಡುಗರು ನಿತ್ಯದ ಉಡುಗೆಯಲ್ಲಿ ಕುಣಿದಾಡಿದರು , ಇದೇ ಜಯಪುರದ ಜನಪದ ನೃತ್ಯದ ಸೊಬಗು.
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ
1.ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ.
ಜಯಪುರ ಬಣ್ಣಗಾರರ ತವರೂರು , ಬಣ್ಣ ಹಾಕುವ ಕುಶಲಿಗರು ಆ ಊರಿನಲ್ಲಿ ಬಹಳ ಮಂದಿ ಇದ್ದಾರೆ . ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ . ಗಿಡಮರಗಳಿಲ್ಲದ ಸ್ಥಳದಲ್ಲಿ ವಾಸಿಸುವ ಜನರಿಗೆ , ಕಣ್ಣಿನ ತಣಿವು ಹೇಗೆ ಬರಬೇಕು ? ಹಾಗೆಂದೇ ಇಲ್ಲಿನ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು . ಅವರಿಗೆ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ.
ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ , ಗಂಡಸರೂ ರಂಗುರಾಯರೇ . ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುವುದುಂಟು. ಸುತ್ತುಸುತ್ತಿನ ಅವರ ದೇಶೀ ಮುಂಡಾಸನ್ನು ಚೆನ್ನಾಗಿ ಬಿಗಿದುಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ.
2.ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ .
ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಮೊದಲ ಅಂತಸ್ತಿನಲ್ಲಿ ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಿಂದ ಕೂಡಿದ ಪುಟ್ಟ ದೇವಾಲಯವಿದೆ . ಅದರ ಗೋಡೆ , ನೆಲ , ಸ್ತಂಭಗಳೂ ಹಾಲುಗಲ್ಲಿನವು . ಮೇಲಿನ ಅಂಗಳವನ್ನೇರಿ ಹೋದರೆ ಅಲ್ಲಿ ದೊಡ್ಡದಾದ , ವಿಶಾಲವಾದ ಹಾಲುಗಲ್ಲಿನ ಸಭಾಂಗಣ ಇದೆ. ಅದರ ಚಾವಣಿ , ರಜಪುತಾನದ ಶೈಲಿಯ ಕಮಾನು ಮತ್ತು ಕಂಬಗಳು ತುಂಬ ಲಲಿತವಾಗಿದ್ದು , ಪರಸ್ಪರ ಹೊಂದಿಕೊಂಡು ಸುಂದರವಾಗಿ ಕಾಣುತ್ತದೆ . ಎದುರಿಗೆ ಇರುವ ಅಂಗಣವೂ ಸಾಕಷ್ಟು ವಿಶಾಲವಾಗಿದೆ . ಅಲ್ಲಿಂದ ಮೂರನೆಯ ಅಂತಸ್ತಿಗೆ ಹೋದರೆ ರಾಜರ ಅಂತಃಪುರವಿದ್ದು ಅಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳು ಕಂಡುಬರುತ್ತವೆ . ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದ ಲತಾಪುಷ್ಪಗಳ ಚಿತ್ರಾವಳಿಗಳೂ ಇವೆ . ಇನ್ನೊಂದೆರಡು ಚಾವಡಿಗಳು ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿದ , ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಲ್ಪಟ್ಟಿವೆ . ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ ಆ ಲಕ್ಷೋಪಲಕ್ಷ ಗಾಜಿನ ತುಣುಕುಗಳು ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಟ್ಟು ಅರಮನೆಯ ಸೊಬಗನ್ನು ಹೆಚ್ಚಿಸಿವೆ.
3. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ.
ಜಂತ್ರ ಮಂತ್ರ‘ ಹಳೆಯ ಖಗೋಳವಿಜ್ಞಾನದ ಪರಿಶೀಲನಾಲಯ ,೪೦೦-೫೦೦ ವರ್ಷಗಳ ಪೂರ್ವದಲ್ಲಿ ಖಗೋಳಶಾಸ್ತ್ರಜ್ಞರು ಗ್ರಹ , ಸೂರ್ಯ ಚಂದ್ರ , ತಾರಾಮಂಡಲಗಳನ್ನು ಅಳೆದು , ಪರಿಶೀಲಿಸಿ ನೋಡುವ ಸಲುವಾಗಿ , ಇಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ .ಇಂಥ ಹತ್ತೆಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ . ಗಳಿಗೆ ಅಳೆಯವುದಕ್ಕೆ , ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ , ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏರ್ಪಾಟುಗಳು ಅದರಲ್ಲಿ ಇದೆ . ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಲಾಗಿದೆ .ದೂರದರ್ಶಿಯ ಸಹಾಯವಿಲ್ಲದೆ , ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು , ಸೂಕ್ಷ್ಮ ಪರಿಶೀಲನೆಗೂ ಗಣಿತಕ್ಕೂ ಹಿರಿಯರು ಸಲ್ಲಿಸಿದ ಕಾಣಿಕೆಯಾಗಿದೆ.
ಈ ] ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ
1. “ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ . ”
ಆಯ್ಕೆ - ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ಆಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ - ಕಾರಂತರುಜಯಪುರದಲ್ಲಿದ್ದ ತಮ್ಮ ಸ್ನೇಹಿತರಾದ ರೈಯವರ ಮನೆಗೆ ಹೋದಾಗ ಅಲ್ಲಿ ತಾವು ಬಿಸಿನೀರಿನಲ್ಲಿ ಸ್ನಾನ ಮಾಡಿದ ಬಗ್ಗೆ ತಿಳಿಸುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ . “ ರೈಯವರ ಮನೆ ಸುತ್ತಲೂ ಮರಳು ಹರಡಿದ್ದ ಮರುಭೂಮಿಯಲ್ಲಿತ್ತು . ಅಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ . ಏಕೆಂದರೆ ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರುತ್ತಿತ್ತು ” ಎಂದು ಹೇಳಿದ್ದಾರೆ.
ಸ್ವಾರಸ್ಯ -ಮರುಭೂಮಿಯಲ್ಲಿ ವಾಸಿಸುವವರ ಜೀವನ ಶೈಲಿಯ ಮೇಲೆ ಅಲ್ಲಿನ ವಾಯುಗುಣ ಬೀರುವ ಪ್ರಭಾವ ಇಲ್ಲಿ ಸ್ವಾರಸ್ಯಪೂರ್ಣವಾಗಿ ವ್ಯಕ್ತವಾಗಿದೆ.
2. “ ಗಂಡಸರೂ ರಂಗುರಾಯರೇ ”
ಆಯ್ಕೆ - ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ಅಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ಎ೦ಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ - ಲೇಖಕರು ಜಯಪುರದ ಜನರಿಗಿರುವ ಬಣ್ಣಗಳ ವ್ಯಾಮೋಹವನ್ನು ವರ್ಣಿಸುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ . ಜಯಪುರದ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ , ಪಾಯಿಜಾಮಾ , ಸೀರೆ , ರವಿಕೆ , ಮೇಲುದೆ ತೊಡುವ ಅಭ್ಯಾಸದವರು : ಅದರಲ್ಲೂ ಕೆಂಪು , ಕಿತ್ತಳೆ , ಹಳದಿ ಎಂದರೆ ಪ್ರಾಣ , ಗಂಡಸರೂ ರಂಗುರಾಯರೇ , ಅವರ ಪಂಚೆ , ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುತ್ತಾರೆ. ಎಂದು ಲೇಖಕರು ವರ್ಣಿಸಿದ್ದಾರೆ.
ಸ್ವಾರಸ್ಯ - ಜಯಪುರದಲ್ಲಿ ಬಣ್ಣದ ವ್ಯಾಮೋಹ ಹೊಂದಿರುವುದರಲ್ಲಿ ಹೆಂಗಸರಷ್ಟೇ ಅಲ್ಲ ಗಂಡಸರೂ ಮುಂದಿದ್ದಾರೆ ಎಂಬುದು ಲೇಖಕರ ಮಾತಿನಲ್ಲಿ ಸ್ವಾರಸ್ಯಕರವಾಗಿ ಮೂಡಿಬಂದಿದೆ.
3. “ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು ”
ಆಯ್ಕೆ - ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ಅಬುವಿನಿಂದ ಬರಾಮಕ್ಕೆ ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ -ಲೇಖಕರು ಹದಿನೈದು ವರ್ಷಗಳ ಹಿಂದೆ ಜಯಪುರಕ್ಕೆ ಹೋಗಿದ್ದರು . ಆಗ ಅಂಬೇರ ಬೆಟ್ಟದಲ್ಲಿ ಜನವಸತಿ ಇರಲಿಲ್ಲ .ಅಂದಿಗೂ ಇಂದಿಗೂ ಅಲ್ಲಿ ಉಂಟಾಗಿರುವ ಬದಲಾವಣೆಯನ್ನು ವಿವರಿಸುವ ಸಂದರ್ಭದಲ್ಲಿ ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು . ಎಂದು ಈ ಮಾತನ್ನು ಲೇಖಕರು ಹೇಳಿದ್ದಾರೆ.
ಸ್ವಾರಸ್ಯ - ಜಯಪುರವು ದಿನದಿಂದ ದಿನಕ್ಕೆ ಯಾವ ರೀತಿ ಅಭಿವೃದ್ಧಿಯಾಗಿದೆ ,ಈಗ ಜನರು ಅಲ್ಲಿ ವಾಸಿಸುತ್ತಾರೆ. ಜಯಪುರದ ಅಂಬೇರ ಬೆಟ್ಟದ ಗುಡಿಗೋಪುರದಲ್ಲಿ ಈಗ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಅಂಶ ಸ್ವಾರಸ್ಯಕರವಾಗಿದೆ.
4 “ ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತದೆ ”
ಆಯ್ಕೆ - ಈ ವಾಕ್ಯವನ್ನು ಶಿವರಾಮಕಾರಂತರು ಬರೆದಿರುವ ಅಬುವಿನಿಂದ ಬರಾಮಕ್ಕೆ ‘ಕೃತಿಯಿಂದ ಆರಿಸಲಾಗಿರುವ ಬೆಡಗಿನ ತಾಣ ಜಯಪುರ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ - ಮೂರನೆಯ ಅಂತಸ್ತಿನಲ್ಲಿ ರಾಜರ ಅಂತಃಪುರ ಇದೆ. ಈ ಅರಮನೆಯ ಚಾವಡಿಗಳಿಗೆ ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ, ಮುಚ್ಚಿಕೆಗಳುಳ್ಳ ರಚನೆ. ಕತ್ತಲಿನಲ್ಲಿ ದೀಪ ಹೊತ್ತಿಸಿದಾಗ , ಲಕೋಪಲಕ್ಷ ಈ ಗಾಜಿನ ತುಣುಕುಗಳು , ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ , ಆ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ - ರಜಪೂತ ಅರಸರುಗಳು ತಮ್ಮ ಅಂತಃಪುರದಲ್ಲಿಯೇ ನಕ್ಷತ್ರಲೋಕವನ್ನು ಸೃಷ್ಟಿಸಿರುವುದು . ಅವರ ರಸಿಕ ಜೀವನದ ದ್ಯೋತಕವಾಗಿರುವುದನ್ನು ಲೇಖಕರು ಇಲ್ಲಿ ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ.
ಉ ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬರಿ.
I ಜಯಪುರ ಬಣ್ಣಗಾರರ ತವರೂರು.
2 , ಚಿತ್ರಕೊರೆದು ಮಾಡಿದ ಹಾಲುಗಲ್ಲಿನ ನೀರ ಕಾಲುವೆಗಳು.
3 , ರಾಜರ ಅಂತಃಪುರದ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ.
4. ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು.
5. ಮಿತ್ರ ರೈಗಳ ಸತ್ಕಾರಕ್ಕೆ ವಂದನೆ ಸಲ್ಲಿಸಿದೆವು.
ಊ) ಹೊಂದಿಸಿಬರೆಯಿರಿ
ಅ ಪಟ್ಟಿ ಆ ಪಟ್ಟಿ
1.ಅಂಬೇರ --ಸುವರ್ಣ ದೀರ್ಘಸಂಧಿ
2.ಲಕ್ಷೇಪಲಕ್ಷ --ತತ್ಸಮ (5)
3.ಬಣ್ಣಬಣ್ಣ --ಪೂರ್ವದ ರಾಜಧಾನಿ (1)
4.ಜಂತ್ರ ಮಂತ್ರ --ದ್ವಿರುಕ್ತಿ (3)
5.ಶೃಂಗಾರ --ಖಗೋಳ ವೀಕ್ಷಣಾಲಯ (4)
ಮಂತ್ರವಾದಿ --ಗುಣಸಂಧಿ (2)
ಭಾಷಾ ಚಟುವಟಿಕೆ
ಅ, ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
1 ಸಂಸ್ಕೃತ ಸಂಧಿ ಎಂದರೇನು ? ಅದರ ವಿಧಗಳಾವುವು ?
ಸಂಸ್ಕೃತ ಪದಗಳೇ ಸೇರಿ ಸಂಧಿಯಾದರೆ ಅವುಗಳನ್ನು ಸಂಸ್ಕೃತಸಂಧಿ ಎಂದು ಕರೆಯಲಾಗುತ್ತದೆ . ಸಂಸ್ಕೃತ ಸಂಧಿಯಲ್ಲಿ ಎರಡು ವಿಧ.
1.ಸ್ವರಸಂಧಿ - ಎರಡು ಸ್ವರಗಳ ನಡುವೆ ಸಂಧಿಯಾದರೆ ಅದನ್ನು ಸ್ವರಸಂಧಿ ಎನ್ನುವರು .
2.ವ್ಯಂಜನಸಂಧಿ -ಸ್ವರಕ್ಕೆ ವ್ಯಂಜನ ಆಥವಾ ವ್ಯಂಜನಕ್ಕೆ ವ್ಯಂಜನ ಸೇರಿ ಸಂಧಿಯಾದರೆ ಅದನ್ನು ವ್ಯಂಜನಸಂಧಿ ಎನ್ನುವರು.
2 , ಸವರ್ಣದೀರ್ಘಸಂಧಿಎಂದರೇನು ?
ಒಂದೇ ಸ್ವರಗಳು ಒಂದರ ಮುಂದೆ ಇನ್ನೊಂದು ಸ್ವರ ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
3 , ಗುಣಸಂಧಿ ಎಂದರೇನು ? ಉದಾಹರಣೆ ಕೊಡಿ .
ಆ ಆ ಕಾರಗಳಿಗೆ ಆ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ ಐ ‘ ಕಾರವೂ ಈ ಊ ಕಾರಗಳು ಪರವಾದರೆ ‘ ಓ ‘ ಕಾರವೂ ‘ ಇ ‘ ಕಾರ ಪರವಾದರ ‘ ಆರ್ ‘ ಕಾರವೂ ಆದೇಶವಾಗಿ ಬಂದರೆ ಅದನ್ನು ಗುಣಸಂಧಿ ಎನ್ನುವರು.
ಉದಾಹರಣೆ:
ಸುರ + ಇಂದ್ರ = ಸುರೇಂದ್ರ
ಮಹಾ + ಋಷಿ = ಮಹರ್ಷಿ
ಮಹಾ + ಈಶ್ವರ = ಮಹೇಶ್ವರ
ದೇವ + ಋಷಿ = ದೇವರ್ಷಿ
ಚಂದ್ರ + ಉದಯ = ಚಂದ್ರೋದಯ
4 ಸಮಾಸ ಎಂದರೇನು ? ಅದರ ವಿಧಗಳಾವುವು ?
ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿಕೊಳ್ಳುವಾಗ ಮಧ್ಯದಲ್ಲಿರುವ ವಿಭಕ್ತಿ ಪ್ರತ್ಯಯ ಲೋಪವಾಗಿ ಒಂದು ಪದವಾಗುವುದಕ್ಕೆ ಸಮಾಸ ಎನ್ನುವರು . ಸಮಾಸದಲ್ಲಿ ಒಟ್ಟು 8 ವಿಧಗಳಿವೆ
1.ತತ್ಪುರುಷ ಸಮಾಸ
2.ಕರ್ಮಧಾರೆಯ ಸಮಾಸ
3.ದ್ವಿಗು ಸಮಾಸ
4.ಅಂಶಿ ಸಮಾಸ
5.ದ್ವಂದ ಸಮಾಸ
6.ಬಹುವ್ರಿಹೀ ಸಮಾಸ
7.ಕ್ರಿಯಾ ಸಮಾಸ
8.ಗಮಕ ಸಮಾಸ
5 ಅಂಶಿ ಸಮಾಸ ಎಂದರೇನು ? ಎರಡು ಉದಾಹರಣೆಗಳನ್ನು ಬರೆಯಿರಿ.
ಪೂರ್ವ ಮತ್ತು ಉತ್ತರ ಪದಗಳು ಅಂಶ ಮತ್ತು ಅಂಶಿ ಭಾವದಿಂದ ಸೇರಿದ್ದರೆ, ಅದನ್ನು ಅಂಶಿ ಸಮಾಸ ಎನ್ನುವರು.
ಉದಾ :
ಹಿಂದಲೆ= ತಲೆಯ+ಹಿಂದು
ನಡುಮನೆ= ಮನೆಯ+ನಡು
ಕೊನೆಹುಬ್ಬು= ಹುಬ್ಬಿನ+ಕೊನೆ
ತುದಿನಾಲಗೆ= ನಾಲಿಗೆಯ+ತುದಿ
6. ದ್ವಂದ್ವ ಸಮಾಸ ಎಂದರೇನು ? ಎರಡು ಉದಾಹರಣೆಗಳನ್ನು ಬರೆಯಿರಿ.
ಎರಡು ಅಥವಾ ಅನೇಕ ನಾಮ ಪದಗಳು ಸೇರಿ ಸಮಾಸವಾದಾಗ ಎಲ್ಲಾ ಪದಗಳ ಅರ್ಥಗಳು ಪ್ರಧಾನವಾಗಿದ್ದರೆ ಆ ಸಮಾಸಕ್ಕೆ ‘ದ್ವಂದ್ವ
ಸಮಾಸ’ ಎಂದು ಹೆಸರು.
ಉದಾ:
ಗಿಡವೂ + ಮರವೂ =ಗಿಡಮರ
ಕಸವೂ + ಕಡ್ಡಿಯೂ= ಕಸಕಡ್ಡಿ
ರಾಮನು + ಲಕ್ಷ್ಮಣನೂ= ರಾಮಲಕ್ಷ್ಮಣ
ಆ , ಕೊಟ್ಟಿರುವಪದಗಳಲ್ಲಿ ಅನುಸ್ವಾರ – ವಿಸರ್ಗ ಸಹಿತ ಅಕ್ಷರಗಳನ್ನು ಗುರುತಿಸಿ ಬರೆಯಿರಿ.
ಸ್ವತಃ ( ತಃ) | ಸುಂದರ (ಸುಂ ) |
ರಂಗುರಂಗಿನ ( ರಂ, ರಂ ) | ಕೆಂಪು ( ಕೆಂ ) |
ದುಃಖ ( ದುಃ ) | ಹಿಂದೊಮ್ಮೆ ( ಹಿಂ) |
ಗಂಡಸರು (ಗಂ) | ಆಂತಃಕರಣ ( ಅಂ,ತಃ ) |
ಪಂಚೆ ( ಪಂ ) | ಅಂಗಿ ( ಅಂ) |
ಮುಂಡಾಸು ( ಮುಂ) | ಆಂಬೇರ ( ಅಂ ) |
ಸಭಾಂಗಣ ( ಭಾಂ ) | ಅಂತಃಪುರ ( ಅಂ , ತಃ) |
ಪುನಃ (ನಃ) | ಜಂತ್ರಮಂತ್ರ ( ಜಂ,ಮಂ) |
ಅಂತಸ್ತು ( ಅಂ ) | ಅಂತಸ್ತು ( ಅಂ ) |
ಇ , ಕೊಟ್ಟಿರುವಪದಗಳಲ್ಲಿ ಅನುನಾಸಿಕ ಅಕ್ಷರಗಳನ್ನು ಗುರುತಿಸಿ ಬರೆಯಿರಿ
1 | ನಗರ ( ನ ) | ಮಧ್ಯ (ಮ) |
2 | ಪರಿಣಾಮ (ಣಾ ,ಮ) | ಬಣ್ಣ (ಣ್ಣ, ನ ) |
3 | ನಿತ್ಯ ( ನಿ) | ಜನ ( ನ ) |
4 | ಮನೆ (ಮ,ನ) | ಕಣಿವೆ (ಣಿ) |
5 | ಮಂದಿರ (ಮಂ,ವ) | ವಿಜ್ಞಾನ ( ಜ್ಞಾ,ನ |
1 , ಜನಸಂಖ್ಯೆ :
ಪೀಠಿಕೆ: ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯೂ ಇಂದು ವಿಶ್ವದಲ್ಲಿ ತಲೆದೋರಿರುವ ಅನೇಕ ಜಟಿಲ ಸಮಸ್ಯೆಗಳಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿದೆ . ಒಂದು ದೇಶದ ಮಿತಿಮೀರಿದ ಜನಸಂಖ್ಯಾ ಬೆಳೆವಣಿಗೆಯನ್ನು ಜನಸಂಖ್ಯಾ ಸ್ಫೋಟ ಎನ್ನುವರು .
ಭಾರತದಲ್ಲಿ ಜನಸಂಖ್ಯೆ ಮಿತಿಮೀರಿ ಬೆಳೆದು ದೇಶದ ಅಭಿವೃದ್ಧಿಯು ಕುಂಠಿತವಾಗಿದೆ .ಜನಸಂಖ್ಯೆಯು ಜನರ ಬದುಕಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ . ಇದು ದೇಶದ ಪ್ರಗತಿಗೆ ಮಾರಕವಾಗುತ್ತದೆ.
ವಿಷಯ ನಿರೂಪಣೆ :
– ಜನಸಂಖ್ಯಾ ಬೆಳವಣಿಗೆಗೆ ಕಾರಣವೇನೆಂದರೆ : ಬಡತನ, ಅನಕ್ಷರತೆ, ಹವಾಮಾನ , ಭೌಗೋಳಿಕ ಪರಿಸರ , ಬಾಲ್ಯವಿವಾಹ, ಅಜ್ಞಾನ , ವೈದ್ಯಕೀಯ ಕ್ಷೇತ್ರದ ಪ್ರಗತಿಯಿಂದ ಜನನದಲ್ಲಿ ಏರಿಕೆ – ಮರಣದಲ್ಲಿ ಇಳಿಕೆ, ಅವಿಭಕ್ತ ಕುಟುಂಬ ಪದ್ಧತಿ ,ಗಂಡು ಮಗುವಿನ ವ್ಯಾಮೋಹ , ಮೂಢನಂಬಿಕೆ ,ವಲಸೆ ,ಕುಟುಂಬ ಯೋಜನೆಯ ವಿಫಲತೆ ಇತ್ಯಾದಿ ಹತ್ತು ಹಲವು ಕಾರಣ ನೋಡಬಹುದು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ,ಅನಾರೋಗ್ಯ ಸಮಸ್ಯೆ , ಆಹಾರ ಸಮಸ್ಯೆ , ವಸತಿ ಸಮಸ್ಯೆ , ಶೈಕ್ಷಣಿಕ ಸಮಸ್ಯೆ ಮಿತಿಮೀರಿದ ಜನಸಂಖ್ಯಾ ಬೆಳೆವಣಿಗೆಯಿಂದಲೇ ಉಂಟಾಗುತ್ತದೆ , ಈ ಸಮಸ್ಯೆಯನ್ನು ನಾವು ತಡೆಗಟ್ಟಬೇಕು ಇಲ್ಲದೇ ಹೋದರೆ ದೇಶದ ಪ್ರಗತಿಗೆ ಮಾರಕವಾಗುತ್ತದೆ.
ಮನುಷ್ಯನಲ್ಲಿ ಚಿಕ್ಕ ಸಂಸಾರ ಚೊಕ್ಕ ಸಂಸಾರ ಅನ್ನೋ ಕಲ್ಪನೆ ಬರಬೇಕಿದೆ ಮಾನವ ಸಂಪತ್ತು ದೇಶದ ಆಸ್ತಿ ಆದರೆ ಇದೆ ಮಾನವ ಸಂಪತ್ತು ರಾಷ್ಟ್ರದ ಅಭಿವೃದ್ಧಿಗೆ ಮಾರಕವಾಗುತ್ತದೆ.
ಉಪಸಂಹಾರ : ಭಾರತ ದೇಶದ ಜನಸಂಖ್ಯೆಯು ದಿನದಿಂದ ದಿನಕ್ಕೆ ಬೆಳೆಯುವ ಪರಿ ನೋಡಿದರೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ . ಎಂಬುದು ಯಕ್ಷ ಪ್ರಶ್ನೆಯಾಗಿದೆ. ಇರುವ ಮಾನವ ಸಂಪನ್ಮೂಲಕ್ಕೆ ಕೆಲಸ ಕೊಟ್ಟರೆ ಅಷ್ಟು ಸಮಸ್ಯೆಯಾಗುವುದಿಲ್ಲ.
ಪ್ರತಿಯೊಬ್ಬ ನಾಗರಿಕನು ಶಿಕ್ಷಣವಂತನಾದರೆ ಈ ಜನಸಂಖ್ಯಾ ಸಮಸ್ಯೆಗೆ ಒಂದು ಸೂಕ್ತ ಪರಿಹಾರ ದೊರಕಬಹುದು ಎಂಬುದೆ ನನ್ನ ಅಭಿಪ್ರಾಯ.
2. ನಿರುದ್ಯೋಗ
ಪೀಠಿಕೆ:– ನಿರುದ್ಯೋಗ ಸಮಸ್ಯೆ ಇಂದು ನಿನ್ನೆಯದಲ್ಲ , ತಲತಲಾಂತರದಿಂದ ಆಧುನಿಕ ಸಮಾಜಕ್ಕಂಟಿದ ಶಾಪವಾಗಿದೆ . ನಿರುದ್ಯೋಗದಿಂದ ಹಸಿವು , ಬಡತನ ದರಿದ್ಯ ಅನಾಚಾರಗಳು , ಅಪರಾಧ , ಶೋಷಣೆ ಸುಲಿಗೆಗಳಂತಹ ಕೃತ್ಯಗಳು ಉಂಟಾಗಿ .ಅಸಹಾಯಕ ಸ್ಥಿತಿ ಅವನನ್ನು ಕಾಡುತ್ತದೆ . ದಿನದಿಂದ ದಿನಕ್ಕೆ ಅವನ ಬದುಕು ನರಕವಾಗಿ ಹೋಗುತ್ತದೆ .ನಿರುದ್ಯೋಗ ಎಲ್ಲಾಸಮಾಜಗಳು , ಅಭಿವೃದ್ಧಿ ಹೊದುತ್ತಿರುವ ರಾಷ್ಟಗಳು ಎದುರಿಸುತ್ತಿರುವ ಭೀಕರ ಸಮಸ್ಯೆಯಾಗಿದೆ.
ವಿಷಯ ನಿರೂಪಣೆ :–
ಮನುಷ್ಯನಿಗೆ ಕೆಲಸ ಮಾಡಲು ಶಕ್ತಿ ,ಸಾಮರ್ಥ್ಯ, ಮತ್ತು ಇಚ್ಚಾ ಶಕ್ತಿಗಳಿದ್ದು , ಕೆಲಸ ಮಾಡಲು ಯಾವುದೇಅವಕಾಶ ಸಿಗದಿರುವ ಸ್ಥಿತಿಗೆ ನಾವು ನಿರುದ್ಯೋಗ ಎನ್ನಬಹುದು . ಎಷ್ಟೋ ಜನರು ಪದವಿ ಡಬ್ಬಲ್ ಡಿಗ್ರಿಗಳನ್ನ ಪಡೆದು ಕೆಲಸಕ್ಕಾಗಿ ಬೀದಿ-ಬೀದಿ ಅಲೆಯುವ ಯುವ ಶಕ್ತಿ ಒಂದು ಕಡೆ , ಇವರಿಗೆ ಕೆಲಸ ಮಾಡುವ ಸಾಮರ್ಥ್ಯ , ಇಚ್ಚೆ , ನಿರಂತರ ಪ್ರಯತ್ನಗಳಿದ್ದರು ಸಹ ಕೆಲಸ ಸಿಗುವುದಿಲ್ಲ ,ದಿನವಿಡೀ ದುಡಿದರೂ ಹೊಟ್ಟೆ ಬಟ್ಟೆಗೆ ಸಾಲದೆ ರಸ್ತೆ , ಕೊಳೆಗೇರಿಗಳಲ್ಲಿ ಜೀವನ ತಳ್ಳುವ ಜನರು ಇನ್ನೊಂದು ಕಡೆ. ದೇಶದಲ್ಲಿ ಶಕ್ತಿ ಸಾಮರ್ಥ್ಯ ಮತ್ತು ಅರ್ಹತೆಗೆ ತಕ್ಕಂತೆ ಬೇಗನೆ ಕೆಲಸ ಸಿಗುವ ವಾತಾವರಣ ನಿರ್ಮಾವಾಗಬೇಕು , ಯುವ ಜನತೆಗೆ ವಿಧ್ಯಾಭ್ಯಾಸ ಮುಗಿದ ತಕ್ಷಣವೇ ಕೆಲಸ ಸಿಗುತ್ತದೆ ಎಂಬ ಭರವಸೆ ಮೂಡಿಸಬೇಕು . ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಬೇಕು ಕೆಲಸಕ್ಕೆ ಸರಿಸಮಾನವಾದ ವೇತನ ಸಿಗುವಂತಾಗಬೇಕು.
ಇಂತಹ ಸಮಾಜವನ್ನು ನಿರುದ್ಯೋಗ ರಹಿತ ಸಮಾಜವೆನ್ನಬಹುದು . ನಿರುದ್ಯೋಗಿಯ ಮನಸು ದೆವ್ವಗಳು ವಾಸಿಸುವ ಸ್ಮಶಾನವಾಗಿರುತ್ತದೆ. ಇಂತಹ ಮನಸ್ಥಿತಿಯಿಂದ ಸಮಾಜ ಬಾಹಿರ ಚಟುವಟಿಕೆಯು ಜರುಗುವುದೇ ಹೆಚ್ಚು ದೇಶದ್ರೋಹಿ ಕೆಲಸ , ಭಯೋತ್ಪದನಾ ಕೃತ್ಯಗಳು , ಕೊಲೆ ಸುಲಿಗೆ ಅಪರಾಧಗಳಂತಹ ಅಕ್ರಮ ಚಟುವಟಿಕೆಗಳಿಂದ ಸಮಾಜ ತಲೆತಗ್ಗಿಸಬೇಕಾಗುತ್ತದೆ.
ಇದು ವ್ಯಕ್ತಿ ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ . ನಿರುದ್ಯೋಗದಿಂದ ಮನುಷ್ಯನು ಅವಮಾನ , ನೋವು, ನಿಂದನೆ, ಆತ್ಮನಿಂದನೆ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಾನೆ .
ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತದೆ . ಈ ನಿರುದ್ಯೋಗಕ್ಕೆ ಕಾರಣಗಳನ್ನು ಗುರುತಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು ,ಬೀದಿ ಅಲೆಯುವ ಯುವ ಶಕ್ತಿ ಒಂದು ಕಡೆ , ಇವರಿಗೆ ಕೆಲಸ ಮಾಡುವ ಸಾಮರ್ಥ್ಯ, ಇಚ್ಛೆ, ನಿರಂತರ ಪ್ರಯತ್ನಗಳಿದ್ದರು ಸಹ ಕೆಲಸ ಸಿಗುವುದಿಲ್ಲ . ದೇಶದಲ್ಲಿ ಶಕ್ತಿ ಸಾಮರ್ಥ್ಯ ಮತ್ತು ಅರ್ಹತೆಗೆ ತಕ್ಕಂತೆ ಬೇಗನೆ ಕೆಲಸ ಸಿಗುವ ವಾತಾವರಣ ನಿರ್ಮಾವಾಗಬೇಕು ,
ಯುವ ಜನತೆಗೆ ವಿಧ್ಯಾಭ್ಯಾಸ ಮುಗಿದ ತಕ್ಷಣವೇ ಕೆಲಸ ಸಿಗುತ್ತದೆ ಎಂಬ ಭರವಸೆ ಮೂಡಿಸಬೇಕು . ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಬೇಕು ಕೆಲಸಕ್ಕೆ ಸರಿಸಮಾನವಾದ ವೇತನ ಸಿಗುವಂತಾಗಬೇಕು .ಇಂತಹ ಸಮಾಜವನ್ನು ನಿರುದ್ಯೋಗ ರಹಿತ ಸಮಾಜವೆನ್ನಬಹುದು . ನಿರುದ್ಯೋಗಿಯ ಮನಸು ದೆವ್ವಗಳು ವಾಸಿಸುವ ಸ್ಮಶಾನವಾಗಿರುತ್ತದೆ .
ಇಂತಹ ಮನಸ್ಥಿತಿಯಿಂದ ಸಮಾಜ ಬಾಹಿರ ಚಟುವಟಿಕೆಳು ಜರುಗುವುದೇ ಹೆಚ್ಚು ದೇಶದ್ರೋಹಿ ಕೆಲಸ , ಭಯೋತ್ಪದನಾ ಕೃತ್ಯಗಳು , ಕೊಲೆ ಸುಲಿಗೆ ಅಪರಾಧಗಳಂತಹ ಅಕ್ರಮ ಚಟುವಟಿಕೆಗಳಿಂದ ಸಮಾಜ ತಲೆತಗ್ಗಿಸಬೇಕಾಗುತ್ತದೆ .
ಇದು ವ್ಯಕ್ತಿ ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ . ನಿರುದ್ಯೋಗದಿಂದ ಮನುಷ್ಯನು ಅವಮಾನನೋವು , ನಿಂದನೆ , ಆತ್ಮನಿಂದನೆ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಾನೆ . ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತದೆ, ಈ ನಿರುದ್ಯೋಗಕ್ಕೆ ಕಾರಣಗಳನ್ನು ಗುರುತಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು,
ಉಪಸಂಹಾರ : – ಮನುಷ್ಯನು ತನ್ನ ಸಾಮರ್ಥ್ಯ ಅರ್ಹತೆಗೆ ತಕ್ಕ ಉದ್ಯೋಗ ಸಿಗಬೇಕು ಎಂದು ಕಾಯುತ್ತಾ ಕುಳಿತುಕೊಳ್ಳಬಾರದು ,ಯಾವುದೇ ಕೆಲಸ ಮಾಡಿದರು ಅವಮಾನವಾಗುವುದಿಲ್ಲ .ಸಿಕ್ಕ ಕೆಲಸದಲ್ಲೇ ತೃಪ್ತಿ ಪಡಬೇಕು.ನಿರಂತರ ಹೆಚ್ಚುತ್ತಿರುವ ಜನಸಂಖ್ಯೆ ,ದೋಷಪೂರಿತ ಶಿಕ್ಷಣ ವ್ಯವಸ್ಥೆ, ತಾಂತ್ರಿಕ ಕೊರತೆ , ಆವಶ್ಯಕತೆಗಿಂತ ಕಡಿಮೆ ಉದ್ಯೋಗ ಸೃಷ್ಟಿ ಮುಂತಾದ ಕಾರಣಗಳು ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತವೆ
ನಾನು ಕಂಡಂತೆ ಡಾ ಬಿ. ಜಿ. ಎಲ್. ಸ್ವಾಮಿ
ಅ )ಒಂದು ವಾಕ್ಯದಲ್ಲಿ ಉತ್ತರಿಸಿ.
1. ಸ್ವಾಮಿಯವರಿಗೂ ಲೇಖಕರಿಗೂ ಪರಿಚಯವಾಗಿದ್ದು ಎಲ್ಲಿ?
ಸ್ವಾಮಿಯವರಿಗೂ ಲೇಖಕರಿಗೂ ಪರಿಚಯವಾಗಿದ್ದು ವೈಸೂರು ವಿಶ್ವವಿದ್ಯಾನಿಲಯದಲ್ಲಿ.
2. ಸ್ವಾಮಿಯವರು ನುಡಿಸುತ್ತಿದ್ದ ಸಂಗೀತವಾದ್ಯ ಯಾವುದು?
ಸ್ವಾಮಿಯವರು ನುಡಿಸುತ್ತಿದ್ದ ಸಂಗೀತವಾದ್ಯ ಪಿಟೀಲು.
3. ಸ್ವಾಮಿಯವರು ವಿಜ್ಞಾನದ ಯಾವ ವಿಭಾಗದಲ್ಲಿ ಪರಿಣಿತರಾಗಿದ್ದರು?
ಸ್ವಾಮಿಯವರು ವಿಜ್ಞಾನದ ಸಸ್ಯಶಾಸ್ತ್ರದ ವಿಭಾಗದಲ್ಲಿ ಪರಿಣಿತರಾಗಿದ್ದರು.
4. ಸ್ವಾಮಿಯವರಿಗೆ ಯಾರ ಪಿಟೀಲು ವಾದನವೆಂದರೆ ಬಹಳ ಆಸೆ?
ಸ್ವಾಮಿಯವರಿಗೆ ಎಹೂದಿ ಮೆನೂಹಿನ್ ರ ಪಿಟೀಲು ವಾದನವೆಂದರೆ ಬಹಳ ಆಸೆ.
ಆ) ಮೂರು /ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
1. ಸ್ವಾಮಿಯವರ ಸಂಗೀತಾಸಕ್ತಿಯನ್ನು ವಿವರಿಸಿ.
ಸ್ವಾಮಿಯವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿಯಿತ್ತು. ಅವರು ಬೆಳಗಿನ ಜಾವ ಪಿಟೀಲು ಅಭ್ಯಾಸ ಮಾಡುತ್ತಿದ್ದರು . ಪಿಟೀಲು ನುಡಿಸುವಾಗ ಅವರು ಶಬ್ದ ರಚನಾ ವೈಖರಿಯನ್ನು ಹುಡುಕುತ್ತಿದ್ದರು. ಸ್ವಾಮಿಯವರು ಲೇಖಕರ ಮನೆಗೆ ಬಂದಾಗ ಅವರಲ್ಲಿರುವ ಸಂಗೀತದ ರೆಕಾರ್ಡುಗಳನ್ನು ಕೇಳುವುದು ಮತ್ತು ಎಹೂದಿ ಮೆನೂಹಿನ್ ರ ಪಿಟೀಲು ರೆಕಾರ್ಡುಗಳನ್ನು ಕೇಳುವುದೆಂದರೆ ತುಂಬಾ ಇಷ್ಟ.
2. ಸ್ವಾಮಿಯವರ ಸಂಶೋಧನೆಯ ಆಸಕ್ತಿ ಹೇಗಿತ್ತು?
ಸ್ವಾಮಿಯವರು ಸಸ್ಯಗಳ ರಚನಾ ರಹಸ್ಯವನ್ನು ತಮ್ಮ ಕಲ್ಪನಾ ಶಕ್ತಿಗಳಿಂದ ರೂಪಿಸಿ, ರೂಢಿಸಿ ಬೆಳೆಸಿಕೊಂಡಿದ್ದರು. ಸೂಕ್ಷ್ಮ ದರ್ಶಕದ ಮೊದಲ ನೋಟದಲ್ಲೇ ಅವರು ಅದರ ಬಗ್ಗೆ ತಿಳಿಯುತ್ತಿದರು . ಕಲೆಯ ರಸ ಆನಂದ ಮತ್ತು ಕೌತುಕಗಳು ಅವರ ಸಂಶೋಧನೆಯ ಇನ್ನೊಂದು ಮುಖವಾಗಿರುತ್ತಿತ್ತು. ಅವರ ಸಂಶೋಧನಾ ಕ್ಷೇತ್ರ ತುಂಬಾ ವಿಸ್ಕೃತವಾದದ್ದು. ಇತಿಹಾಸ ಸಾಹಿತ್ಯ ಹಾಗೂ ಇತರ ಲಲಿತ ಕಲೆಗಳಲ್ಲಿ ಅವರ ಸಂಶೋಧಕ ಬುದ್ದೀ ಕೆಲಸ ಮಾಡುತ್ತಲೇ ಇತ್ತು.
3. ಸ್ವಾಮಿಯವರ ಸಾವು ಲೇಖಕರನ್ನು ಯಾಕೆ ಕಾಡಿತು?
ಲೇಖಕರು ಹೇಳಿದಂತೆ ಸಾವು ಯಾವತ್ತು ಅವರನ್ನು ದುಃಖದಲ್ಲಿ ಮುಳುಗಿಸಿಲ್ಲ. ಆದರೆ ಬಿ.ಜಿ.ಎಲ್. ಸ್ವಾಮಿಯವರ ಸಾವು ಪ್ರಶ್ನಾತೀತವಾಗಿ ಲೇಖಕರನ್ನು ಕಾಡಿತು. ಅವರು ಆಹಾರ ಪದ್ದತಿಯಲ್ಲಿ ಕ್ಲುಪ್ತವಾಗಿದ್ದವರು. ಸಿಗರೇಟು ಹೆಚ್ಚಾಗಿ ಸೇದುತ್ತಿರಲಿಲ್ಲ. ಸಂಶೋಧನೆ ಮತ್ತು ಬರಹಗಳಲ್ಲಿ ತಮ್ಮನ್ನು ತಾವು ಮಗ್ನರನ್ನಾಗಿಸಿಕೊಂಡು ಸಂತೋಷವಾಗಿರುತ್ತಿದರು . ಸ್ವಾಮಿಯವರು ಕ್ರಮವಾಗಿ ಲಘು ವ್ಯಾಯಾಮ ಮಾಡುತ್ತಿದ್ದರು. ಅನೇಕರು ಇದಾವದೂ ಇಲ್ಲದೆ ದೀರ್ಘಾಕಾಲ ಬಾಳಿದ್ದರೆ . ಸಾವಿನ ಕಾರಣವನ್ನು ಹುಡುಕುತ್ತಾ ಹೋಗುವುದು ದುಃಖವನ್ನು ತಗೆದು ಹಾಕಲು ನಾವು ಸೃಷ್ಟಿಸುವ ಒಂದು ನಿಮಿತ್ತ ಮಾತ್ರ ಎಂದು ಪರಿಪರಿಯಾಗಿ ಸ್ವಾಮಿ ಅವರ ಸಾವು ಲೇಖಕರಿಗೆ ಕಾಡಿತು.
ಇ) ಎಂಟು ವಾಕ್ಯಗಳಲ್ಲಿ ಉತ್ತರಿಸಿ.
1. ಸ್ವಾಮಿಯವರ ಸಂಗೀತಾಸಕ್ತಿಯನ್ನು ವಿವರಿಸಿ.
ಸ್ವಾಮಿಯವರಿಗೆ ಸಂಗೀತದಲ್ಲಿ ತುಂಬಾ ಆಸಕ್ತಿಯಿತ್ತು. ಅವರು ಬೆಳಗಿನ ಜಾವ ಪಿಟೀಲು ಅಭ್ಯಾಸ ಮಾಡುತ್ತಿದ್ದರು. ಪಿಟೀಲು ನುಡಿಸುವಾಗ ಅವರು ಹುಡುಕುತ್ತಿದ್ದುದು ಶಬ್ದ ರಚನಾ ವೈಖರಿ. ಅವರ ಮೇಲೆ ಎಹೂದಿ ಮೆನೂಹಿನ್ ರ ಪಿಟೀಲುವಾದನ ತುಂಬಾ ಪ್ರಭಾವ ಬೀರಿತ್ತು. ಲೇಖಕರ ಮನೆಗೆ ಬಂದಾಗೆಲ್ಲಾ ಅವರ ರೆಕಾರ್ಡುಗಳನ್ನು ಕೇಳುತ್ತಿದ್ದರೂ ಮತ್ತು ಅವರ ಹಾಗೆ ಪಿಟೀಲಿನ ಸರ್ವ ಸಾಧ್ಯತೆಗಳನ್ನು ಹುಡುಕಿ ಹುಡುಕಿ ಹೊರ ಹೊಮ್ಮಿಸುವ ವಾದಕ ಬೇರೆ ಯಾರಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ನಮ್ಮವರು ಪಿಟೀಲಿನಲ್ಲಿ ಬ್ರೋಚೇವರೆವರೂರಾ ನುಡಿಸಿದರೆ. ಅದು ಬ್ರೊಚೇವಾ ಕುಯ್ದ ಹಾಗೆ ಆಗುತ್ತದೆ, ಹೊರತು ಪಿಟೀಲು ನುಡಿಸಿದ ಹಾಗೆ ಆಗೋದಿಲ್ಲ . ಅದೇ ಕೃತಿಯನ್ನು ರಾಗಬಂಧ ಪಿಟೀಲಿನಲ್ಲೂ ಅದೇ ವೀಣೆಯಲ್ಲೂ ಅದೇ ಕ್ಲಾರಿಯೋನೆಟ್ ನಲ್ಲೂ ಹಾಡುಗಾರಿಕೆಯಲ್ಲೂ ಅದೇ ಆ ವಾದ್ಯದ ವಿಶೇಷವೇನು ಬಂತು? ನಮ್ಮ ಸಂಗೀತಗಾರರಿಗೆ ಇದು ತಿಳಿಯದು ಎಂಬುದು ಅವರು ಸಂಗೀತದಲ್ಲಿ ತಾವು ಕಂಡುಕೊಂಡ ಸತ್ಯ ವಿವರಿಸಿದ್ದಾರೆ.
ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದ ಬಿ.ಜಿ.ಎಲ್. ಸ್ವಾಮಿಯವರು ಲೇಖಕರ ಸಲಹೆಯ ಮೇರೆಗೆ ಎಲ್ಲಾ ಸಂಗೀತ ಪ್ರಿಯರು ಇಷ್ಟಪಡುವಂತಹ ಲೇಖನ ಬರೆಯುವ ಒಪ್ಪಂದವಾಯಿತು. ಸ್ವಾಮಿಯವರು ಸಂಗೀತ ಕಲಿಸುವ ಒಬ್ಬ ಯೋಗ್ಯ ಗುರುಗಳಿಗಾಗಿ ಸಾಕಷ್ಟು ಹುಡುಕಿದರು. ಆದರೆ ಪಿಟೀಲು ಕಲಿಸಲು ಯಾವ ಯೋಗ್ಯ ಗುರು ದೊರೆಯಲಿಲ್ಲ.
2. ಸ್ವಾಮಿಯವರ ಸಂಶೋಧನೆಯ ಬುದ್ಧಿ ಹೇಗಿತ್ತು?
ಸ್ವಾಮಿಯವರು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಅವರು ಅಧ್ಬುತ ಮೇಧಾಶಕ್ತಿಯುಳ್ಳವರಾಗಿದ್ದರು. ಒಮ್ಮೆ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ವಿದ್ಯುತ್ ಸೂಕ್ಷ್ಮದರ್ಶಕ ಯಂತ್ರ ಇದು ಕಡಿಮೆಯಾದಲ್ಲಿ ಇದರ ಸಹಾಯದಿಂದ ದೊಡ್ಡ ದೊಡ್ಡ ಸಂಶೋಧನೆ ಮಾಡಬಹುದು ಎಂಬುದು ಅವರ ಅಭಿಪ್ರಾಯವಾಗಿತ್ತು. ಎಷ್ಟೋ ಸಲ ಸ್ವಾಮಿಯವರ ಕಣ್ಣಿಗೆ ತಕ್ಷಣವೇ ಕಂಡದ್ದು ಅವರ ಸಹೋದ್ಯೋಗಿಗಳಿಗೆ ನೂರಾರು ಸಲ ನೋಡಿದಾಗ ಅದು ಕಾಣುತ್ತಿತ್ತು. ಏಕೆಂದರೆ ಏನನ್ನು ಹುಡುಕಬೇಕೆಂಬ ಅರ್ಧದಷ್ಟು ಕಲ್ಪನೆ ಸ್ವಾಮಿಯವರಿಗೆ ಮೊದಲೇ ಇರುತ್ತಿತ್ತು. ಸಸ್ಯದ ಕಾಂಡ, ನರ, ರಚನೆಗಳಲ್ಲಿರುವ ವಿನ್ಯಾಸಗಳನ್ನು ಗ್ರಹಿಸುವ ಕಲ್ಪನಾಶಕ್ತಿ ಅವರಿಗಿತ್ತು. ಒಂದು ಸಣ್ಣ ಕಾಂಡವನ್ನು ಕತ್ತರಿಸಿ ವಿದ್ಯುತ್ ಸೂಕ್ಷದರ್ಶಕದಲ್ಲಿ ನೋಡಿದರೆ ಎಂತಹ ಅದ್ಭುತ ರಚನಾ ವೈಖರಿ ಕಾಣುತ್ತೆ ಗೊತ್ತೇ! ಒಂದೊಂದು ಜಾತಿಯ ಸಸ್ಯದ ಕಾಂಡಕ್ಕೂ ತನ್ನದೇ ಆದ ರಚನಾ ವೈಖರಿ ಇರುತ್ತದೆ. ಪೋಟೋ ತೆಗೆದು ಮುದ್ರಿಸಿಕೊಂಡರೆ ನಮ್ಮ ಸೀರೆಯ ಬಣ್ಣಗಳನ್ನು ಮುದ್ರಿಸುವವರಿಗೆ ಎಂಥ ಸಿರಿಯ ಗಣಿ ಸಿಕ್ಕುತ್ತೆ ಅಂತೀರಿ ಅವರ ಸಂಶೋಧಕ ಮನೋಧರ್ಮವೇ ಅಂತಹದ್ದು.
ಸಸ್ಯ ಮತ್ತು ವನಗಳನ್ನು ಅವರೆಂದು ಒಣ ಸಂಶೋಧಕಗಾಗಿ ನೋಡುತ್ತಿರಲಿಲ್ಲ. ಕಲೆಯ ರಸ ಆನಂದ ಅವರು ಮತ್ತು ಕೌತುಕಗಳು ಅವರ ಸಂಶೋಧನೆಯ ಇನ್ನೊಂದು ಮುಖವಾಗಿರುತ್ತಿತ್ತು. ಇದೊಂದೇ ಅವರ ಸಂಶೋಧನೆಯ ಕ್ಷೇತ್ರವಾಗಿರಲಿಲ್ಲ. ಇತಿಹಾಸ, ಸಾಹಿತ್ಯ ಇತರ ಲಲಿತ ಕಲೆಗಳಲ್ಲಿಯೂ ಅವರ ಸಂಶೋಧಕ ಬುದ್ಧಿ ಕೆಲಸ ಮಾಡುತ್ತಲೇ ಇತ್ತು.
ಈ ) ಸ್ವಾರಸ್ಯ ವಿವರಿಸಿ ಬರೆಯಿರಿ.
1. “ಒಳಗೆ ಬಂದಿದ್ದರೆ ನೀವು ನುಡಿಸುತ್ತಿರಲಿಲ್ಲ”
ಆಯ್ಕೆ:- ಈ ಮೇಲಿನ ವಾಕ್ಯವನ್ನು ನಾಡಿನ ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಬರೆದಿರುವ “ನಾನು ಕಂಡಂತೆ ಡಾ. ಬಿ.ಜಿ.ಎಲ್. ಸ್ವಾಮಿ” ಎಂಬ ಗದ್ಯ ಪಾಠದಿಂದ ಆಯ್ದುಕೊಳ್ಳಲಾಗಿದೆ. ಈ ವಾಕ್ಯವನ್ನು ಎಸ್. ಎಲ್. ಭೈರಪ್ಪ ಅವರು ಬಿ.ಜಿ.ಎಲ್. ಸ್ವಾಮಿಯವರಿಗೆ ಹೇಳಿದರು .
ಸಂದರ್ಭ:- ಬಿ.ಜಿ.ಎಲ್. ಸ್ವಾಮಿಯವರು ತುಂಬಾ ಸಂಗೀತಾಸಕ್ತಿಯುಳ್ಳ ಬಹುಮುಖ ಪ್ರತಿಭಾವಂತರಾಗಿದ್ದರು. ಶ್ರೀಯುತರು ಗಂಗೋತ್ರಿಯ ಅತಿಥಿ ಗೃಹದ ಕೋಣೆಯೊಂದರಲ್ಲಿ ತಂಗಿದ್ದರು. ಮುಂಜಾನೆ ಐದೂವರೆ ಹೊತ್ತಿಗೆ ಲೇಖಕರು ಆ ಮಾರ್ಗವಾಗಿಯೇ ವಾಕಿಂಗ್ ಹೋಗುವಾಗ ಅವರ ಕೋಣೆಯ ಬಳಿಯಲ್ಲಿ ನಿಂತರು. ಕಿಟಕಿಯ ಬಾಗಿಲುಗಳನ್ನು ಮುಚ್ಚಿ ಸ್ವಾಮಿಯವರು ಪಿಟೀಲು ಅಭ್ಯಾಸ ಮಾಡುತ್ತಿದ್ದರು. ಅವರು ಪಿಟೀಲು ಗುರು ಹೇಳಿಕೊಟ್ಟದ್ದಕ್ಕೆ ಸೀಮಿತರಾಗಿದೆ ಹೊಸ-ಹೊಸದುದನ್ನು ಪಿಟೀಲಿನಲ್ಲಿ ಪ್ರಯೋಗಿಸಲು ಯತ್ನಿಸುತ್ತಿದ್ದರು. ಅರ್ಧಗಂಟೆಗೂ ಹೆಚ್ಚು ಸಮಯ ಅಲ್ಲಿಯೇ ನಿಂತು ಆಲಿಸಿದರು. ಮೇಟಿ ಕಾಫಿ ತಂದನಂತರ ಹೊರಬಂದ ಸ್ವಾಮಿಯವರು ” ನೀವೇಕೆ ಬಾಗಿಲು ತಟ್ಟಲಿಲ್ಲ? ಎಂದಾಗ ಲೇಖಕರು ಈ ಮೇಲಿನಂತೆ ನುಡಿದರು.
ಸ್ವಾರಸ್ಯ:- ಒಂದುವೇಳೆ ಲೇಖಕರ ಬಾಗಿಲು ತಟ್ಟಿ ಒಳಗಡೆ ಹೋಗಿದ್ದರೆ ಅದು ಸಂಗೀತ ನಿಲ್ಲುತ್ತಿತ್ತು. ಸಂಗೀತವು ಹೃದಯಕ್ಕೆ ಅಪ್ಯಾಯ ಮಾನವಾದದ್ದು. ಸಂಗಿತಗಾರರಿಗೆ ತೊಂದರೆಯಾಗದಂತೆ ಅದನ್ನು ಸವಿಯಬೇಕೆಂದು ಈ ವಾಕ್ಯದ ಸ್ವಾರಸ್ಯ.
2. “ಒಂದೊಂದು ಜಾತಿಯ ಸಸ್ಯದ ಒಂದೊಂದು ಕಾಂಡಕ್ಕೂ ತನ್ನದೇ ಆದ ರಚನಾ ವೈಖರಿ ಇರುತ್ತದೆ”
ಆಯ್ಕೆ:– ಈ ಮೇಲಿನ ವಾಕ್ಯವನ್ನು ನಾಡಿನ ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪ ಬರೆದಿರುವ “ನಾನು ಕಂಡಂತೆ ಡಾ. ಬಿ.ಜಿ.ಎಲ್. ಸ್ವಾಮಿ” ಎಂಬ ವ್ಯಕ್ತಿ ಚಿತ್ರಣ ಕುರಿತಾದ ಲೇಖನದಿಂದ ಆಯ್ದುಕೊಳ್ಳಲಾಗಿದೆ. ಪ್ರಸ್ತುತ ವಾಕ್ಯವನ್ನು ಡಾ. ಬಿ.ಜಿ.ಎಲ್. ಸ್ವಾಮಿಯವರು ಲೇಖಕರನ್ನು ಉದ್ದೇಶಿಸಿ ನುಡಿದರು.
ಸಂದರ್ಭ:- ವಿದ್ಯುತ್ ಸೂಕ್ಷ್ಮದರ್ಶಕ ಸಂಶೋಧಕನಿಗೆ ತೀರ ಅಗತ್ಯ ಸಾಧನ. ತಾನು ಏನನ್ನು ಹುಡುಕಬೇಕು ಕಲ್ಪನೆ ಸ್ವಾಮಿಗೆ ಸದಾ ಇರುತ್ತಿತ್ತು. ಒಂದು ಸಣ್ಣ ಕಾಂಡವನ್ನು ಕತ್ತರಿಸಿ ವಿದ್ಯುತ್ ಸೂಕ್ಷದರ್ಶಕದಲ್ಲಿ ನೋಡಿದರೆ ಎಂತಹ ಅದ್ಭುತ ರಚನಾ ವೈಖರಿ ಎಂದು ಅದನ್ನು ಕುರಿತಾಗಿ ಹೇಳುವಾಗ ಸ್ವಾಮಿಯವರು , ಒಂದೊಂದು ಸಸ್ಯದ ಕಾಂಡ ಇನ್ನೊಂದಕ್ಕಿಂತ ಭಿನ್ನವಾಗಿದೆ ಎನ್ನುವಲ್ಲಿ ಈ ಮೇಲಿನಂತೆ ಉದ್ಗರಿಸಿದರು.
ಸ್ವಾರಸ್ಯ:- ಪ್ರತಿಯೊಂದು ಸಸ್ಯದ ಕಾಂಡ ಗಮನಿಸಿದರೆ ಒಂದರಂತೆ ಒಂದಿಲ್ಲ. ತುಂಬಾ ವೈವಿಧ್ಯತೆಯ ರಚನೆ ಹೊಂದಿರುತ್ತವೆ. ಎಂಬುದು ಈ ಮಾತಿನ ಸ್ವಾರಸ್ಯವಾಗಿದೆ.
ಉ) ಬಿಟ್ಟ ಸ್ಥಳ ತುಂಬಿ ಬರೆಯಿರಿ.
1.ರೇಖೆ, ವರ್ಣಗಳ ಎಂಥೆಂಥ ರಚನಾ ಬಂಧಗಳನ್ನು ಸಾಧಿಸಬಹುದು.
2. ಹೊರಗಿನ ಬೆಳಕು ಬರದಂತೆ ಗಾಳಿ ಬಾಗಿಲಿನ ಗಾಜಿಗೆ ಕಪ್ಪು ಕಾಗದ ಅಂಟಿಸಿದ್ದರು.
ಊ) ವಿರುದ್ದಾರ್ಥಕ ಪದ ಬರೆಯಿರಿ.
ಕಲ್ಪನೆ X ನೈಜತೆ
ಪ್ರಸಿದ್ದ X ಅಪ್ರಸಿದ್ದ
ಧೀರ್ಘಾಯು X ಅಲ್ಪಾಯು
ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್.
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ರಾಧಾಕೃಷ್ಣನ್ ಅವರ ತಂದೆ ತಾಯಿಯರ ಹೆಸರೇನು?
ರಾಧಾಕೃಷ್ಣನ್ ಅವರ ತಂದೆ ವೀರಸ್ವಾಮಿ , ತಾಯಿ ಸೀತಮ್ಮ.
2 , ರಾಧಾಕೃಷ್ಣನ್ ಅವರ ತಂದೆಯ ಅಪೇಕ್ಷೆ ಏನಾಗಿತ್ತು ?
ರಾಧಾಕೃಷ್ಣನ್ ಅವರ ತಂದೆಗೆ ತನ್ನ ಮಗನು ದೇಶೀ ಭಾಷೆಯಾಗಿದ್ದ ಸಂಸ್ಕೃತವನ್ನು ಕಲಿಯಲಿ ಎಂಬ ಅಪೇಕ್ಷೆಯಿತ್ತು.
3 , ರಾಷ್ಟ್ರಪತಿಗಳಾಗಿ ಪಡೆಯುತ್ತಿದ್ದ ವೇತನವನ್ನು ರಾಧಾಕೃಷ್ಣನ್ ಅವರು ಹೇಗೆ ಸದುಪಯೋಗ ಪಡಿಸಿಕೊಂಡರು ?
ಹತ್ತು ಸಾವಿರ ರೂಪಾಯಿಗಳ ವೇತನದಲ್ಲಿ ಎರಡು ಸಾವಿರದ ಐನೂರು ರೂಪಾಯಿಗಳನ್ನು ಮಾತ್ರ ಪಡೆದು , ಉಳಿದ ಹಣವನ್ನು ಪ್ರಧಾನಮಂತ್ರಿಗಳ ಪರಿಹಾರನಿಧಿಗೆ ವಂತಿಗೆಯಾಗಿ ನೀಡುತ್ತಿದ್ದರು .
4. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಯಾವ ಹೆಸರಿನಿಂದ ಆಚರಿಸಲಾಗುತ್ತಿದೆ ?
ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ‘ ರಾಷ್ಟ್ರೀಯ ಶಿಕ್ಷಕರ ದಿನ ‘ ಎಂಬ ಹೆಸರಿನಿಂದ ಆಚರಿಸಲಾಗುತ್ತಿದೆ.
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ;
1 , ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಏನು ಹೇಳಿದರು ?
“ ನೀವೊಬ್ಬರೇ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು . ನೀವು ನಮ್ಮನ್ನು ಬಿಟ್ಟು ಹೋಗುತ್ತಿರುವಿರಿ . ನನಗೆ ಇದು ದುಃಖ ನೀಡಿದೆ . ನೀವು ಹೆಚ್ಚು ಕಾಲ ಬಾಳಬೇಕೆಂಬುದೇ ನನ್ನಾಸೆ . ನಾನು ಹೆಚ್ಚು ಕಾಲ ಬಾಳುವುದಿಲ್ಲ ಎಂದು ” ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳಿದರು .
2. ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸ ಎಲ್ಲೆಲ್ಲಿ ನಡೆಯಿತು ?
ರಾಧಾಕೃಷ್ಣನ್ ಅವರ ವಿದ್ಯಾಭ್ಯಾಸವು ತಿರುಪತಿಯ ಹರ್ಮನ್ಸ್ ಬರ್ಗ್ ಮಿಷನರಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು , ವೆಲ್ಲೂರಿನ ವೂರ್ಸ್ ಕಾಲೇಜಿಗೆ ಬಿ . ಎ . ಪೂರ್ವದ ಎರಡು ವರ್ಷಗಳ ಕಾಲ ಪದವಿಗೆ ಸೇರಿದರು .ಮಿಷನರಿ ಶಾಲೆಯ ಶಿಸ್ತಿನ ತರಬೇತಿಯಿಂದ ರಾಧಾಕೃಷ್ಣನ್ ಅವರ ಮನಸ್ಸು ನಿಧಾನವಾಗಿ ಅಧ್ಯಯನದತ್ತ ವಾಲಿತು . ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ . ಎ . ಪದವಿಗೆ ಸೇರಿದರಲ್ಲದೆ ತತ್ತ್ವಶಾಸ್ತ್ರದ ಉತ್ತಮ ವಿದ್ಯಾರ್ಥಿ ಎನಿಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು . ತಮ್ಮ ಆಸಕ್ತಿಯ ವಿಷಯವಾದ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದರು .
3. ರಾಧಾಕೃಷ್ಣನ್ ಅವರ ವೇಷಭೂಷಣಗಳ ಬಗ್ಗೆ ಬರೆಯಿರಿ .
ರಾಧಾಕೃಷ್ಣನ್ ಅವರ ಬಾಹ್ಯರೂಪ ಎತ್ತರವಾದ ನಿಲುವು , ಬಿಸ್ಕೆಟ್ ಬಣ್ಣದ ರೇಷ್ಮೆಯ ನಿಲುವಂಗಿ , ಶುಭ್ರವೂ ನಿರಾಡಂಬರವೂ ಆದ ಬಿಳಿಯ ಪಂಚೆ ಮತ್ತು ರುಮಾಲು , ಕೋಪಸೂಚಕವಲ್ಲದ ಹುಬ್ಬು , ಯಾವುದೋ ಸಮಸ್ಯೆಯ ಒಳಹೋಗುವಂತಿರುವ ಕಣ್ಣನೋಟ , ಮುಗುಳುನಗೆಯ ಸುಳಿವು ಇವು ಭಾರತೀಯರೆಲ್ಲರಿಗೂ ಪರಿಚಿತ . ಪ್ರಪಂಚದ ಫ್ಯಾಷನ್ ಎಷ್ಟೇ ಬದಲಾದರೂ ರಾಧಾಕೃಷ್ಣನ್ ಅವರು ತಮ್ಮ ವೇಷಭೂಷಣಗಳನ್ನು ಕೊನೆಯವರೆಗೂ ಹಾಗೆ ಉಳಿಸಿಕೊಂಡಿದ್ದರು.
4. ಶಿಕ್ಷಣದ ಮಹತ್ವವನ್ನು ಕುರಿತು ರಾಧಾಕೃಷ್ಣನ್ ಅವರು ಏನು ಹೇಳಿದ್ದಾರೆ ?
ಶಿಕ್ಷಣದ ಮಹತ್ವವನ್ನು ಮನಗಂಡ ರಾಧಾಕೃಷ್ಣನ್ ಅವರು “ ಶಿಕ್ಷಣವು ಜೀವನದ ಅವಿಭಾಜ್ಯ ಅಂಗ , ಅದು ಮಾನವನನ್ನು ಪರಿಪೂರ್ಣತೆ ಹಾಗೂ ಸುಸಂಸ್ಕೃತಿಯತ್ತ ಒಯ್ಯುವ ಸಾಧನ ” ಎಂದಿದ್ದಾರೆ . ಮನುಷ್ಯನಿಗೆ ಕಣ್ಣು , ಕಿವಿ , ಬಾಯಿ , ಮುಂತಾದ ಅಂಗಗಳು ಎಷ್ಟು ಮುಖ್ಯವೋ ಅಷ್ಟೇ ಶಿಕ್ಷಣವೂ ಮುಖ್ಯ ಎಂದಿದ್ದಾರೆ .
5. ರಾಧಾಕೃಷ್ಣನ್ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು ಯಾವುವು ?
ರಾಧಾಕೃಷ್ಣನ್ ಅವರ ಸ್ಮರಣೀಯ ಸೇವೆಯನ್ನು ಗುರುತಿಸಿ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿಯಾದ ‘ ಭಾರತರತ್ನ’ವನ್ನು ನೀಡಿ ಗೌರವಿಸಲಾಯಿತು .ಬ್ರಸೆಲ್ಸ್ ನ ಫ್ರಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿತು .ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಭಾರತೀಯ ವಿದ್ಯಾಭವನದ ‘ ಬ್ರಹ್ಮವಿದ್ಯಾಭಾಸ್ಕರ ‘ ಬಿರುದಿಗೂ ಪಾತ್ರರಾದರು ಹೀಗೆ ಇವರಿಗೆ ದೇಶ ವಿದೇಶಗಳ ಹಲವಾರು ಗೌರವ ಪದವಿಗಳು , ಪುರಸ್ಕಾರಗಳು ದೊರಕಿದವು .
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1) ರಾಧಾಕೃಷ್ಣನ್ ಅವರು ಅಧ್ಯಾಪಕರಾಗಿ ಸಲ್ಲಿಸಿದ ಸೇವೆಯನ್ನು ಕುರಿತು ವಿವರಿಸಿ .
ರಾಧಾಕೃಷ್ಣನ್ ಅವರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು , ಸಯ್ಯದ್ ಪೇಟೆಯ ಟೀಚರ್ಸ್ ಟ್ರೈನಿಂಗ್ ಕಾಲೇಜು , ಆಂಧ್ರದ ಅನಂತಪುರ ಹಾಗೂ ರಾಜಮಂಡ್ರಿಯ ಸರ್ಕಾರಿ ಕಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತತ್ತ್ವಶಾಸ್ತ್ರದ ಉಪಪ್ರಾಧ್ಯಾಪಕರಾಗಿ ಹಾಗೂ ಕೋಲ್ಕೊತಾದಲ್ಲಿ ( ಹಿಂದಿನ ಕಲ್ಕತ್ತಾ ) ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಸ್ಮರಣೀಯ . ಇದಲ್ಲದೆ ಆಂಧ್ರ , ದೆಹಲಿ , ಬನಾರಸ್ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಯಾಗಿ ಸೇವೆ ಸಲ್ಲಿಸಿ , ಅವುಗಳ ಪುರೋಭಿವೃದ್ಧಿಗೆ ಶ್ರಮಿಸಿದರು .
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲೂ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು . ರಾಧಾಕೃಷ್ಣನ್ ಅವರ ಬೋಧನಾ ಶೈಲಿ , ನಿರರ್ಗಳತೆ , ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು ,ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು
2 ) ರಾಧಾಕೃಷ್ಣನ್ ಅವರಿಗೆ ಮೈಸೂರಿನಲ್ಲಿ ನೀಡಿದ ಬೀಳ್ಕೊಡುಗೆಯ ವಿಶೇಷತೆಯನ್ನು ಕುರಿತು ವಿವರಿಸಿ ,
ಕೋಲ್ಕೊತ ವಿಶ್ವವಿದ್ಯಾಲಯದ ತತ್ತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬೀಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು .ಅಂದಿನ ವಾತಾವರಣದಲ್ಲಿದ್ದುದು ವೈಭವಕ್ಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಹೊರಹೊಮ್ಮಿದ ಗುರುಪ್ರೇಮ , ವಿದ್ಯಾರ್ಥಿಗಳೆಲ್ಲರಲ್ಲೂ ಭಕ್ತಿಪ್ರೇಮದ ಚಿಲುಮೆ ಉಕ್ಕಿಬಂತು.
ರಾಧಾಕೃಷ್ಣನ್ ಅವರನ್ನು ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಲಿಲ್ಲ . ಸ್ವತಃ ವಿದ್ಯಾರ್ಥಿಗಳೇ ಎಳೆದೊಯ್ದರು .ರಾಧಾಕೃಷ್ಣನ್ ಅವರಿಗಾಗಿ ಕಾದಿರಿಸಿದ್ದ ಕಂಪಾರ್ಟ್‌ಮೆಂಟ್‌ನ್ನು ಒರಗು ದಿಂಬು ಹಾಗೂ ರತ್ನಗಂಬಳಿಯನ್ನು ಹಾಸಿ ಮಲಗುವ ಸೀಟನ್ನು ನೆಲವನ್ನು ಹೂವಿನಿಂದ ಸುಪ್ಪತ್ತಿಗೆಯಂತೆ ಮಾಡಿ ದೈವಮಂದಿರವನ್ನು ಭಕ್ತರು ಅಲಂಕಾರ ಮಾಡುವಂತೆ ಮಾಡಿದ್ದರು.“ ರಾಧಾಕೃಷ್ಣನ್ ಅವರಿಗೆ ಜಯವಾಗಲಿ ” ಎಂಬ ಕೂಗು ರೈಲ್ವೆ ಸ್ಟೇಷನ್ನಿನ ಆವರಣದಲ್ಲೆಲ್ಲ ಮೊಳಗುತ್ತಿತ್ತು . ಆ ದಿನ ಭಾವೋದ್ರೇಕದಿಂದ ಅದೆಷ್ಟು ಜನ ಅತ್ತರೋ !. ವಿದ್ಯಾರ್ಥಿಗಳು ತೋರಿದ ವಿಶ್ವಾಸ ಅವರ ಕಣ್ಣಿನಲ್ಲೂ ನೀರು ತಂದಿತು .
3) . ಹಿಂದೂ ಧರ್ಮ ಮತ್ತು ತತ್ತ್ವಶಾಸ್ತ್ರದ ಬಗ್ಗೆ ರಾಧಾಕೃಷ್ಣನ್ ಅಭಿಪ್ರಾಯವೇನು ? ವಿವರಿಸಿ
ರಾಧಾಕೃಷ್ಣನ್ ಅವರು ಹಿಂದೂ ಧರ್ಮದ ತತ್ವಶಾಸ್ತ್ರ ಮತ್ತು ಸಾಹಿತ್ಯವನ್ನೆಲ್ಲ ಅಧ್ಯಯನ ಮಾಡಿದರು . ಯೂರೋಪಿಯನ್ ತತ್ತ್ವಶಾಸ್ತ್ರ ಮತ್ತು ಸಾಹಿತ್ಯದ ಅಭಿವ್ಯಕ್ತ ವಿಚಾರಗಳಿಂದ ಅವರ ವಿಶ್ವದೃಷ್ಟಿ ಮತ್ತು ತಾತ್ವಿಕ ದೃಷ್ಟಿಕೋನ ಪ್ರಭಾವಿತವಾಯಿತು .ಸ್ವಾಮಿ ವಿವೇಕಾನಂದರ ವಿಚಾರಧಾರೆ ಅವರ ಮನವನ್ನು ಆಕರ್ಷಿಸಿತು . ಅವರು “ ಹಿಂದೂ ಧರ್ಮವು ಒಂದು ವೈಚಾರಿಕ ಜೀವನ ಮಾರ್ಗವೆಂದೂ , ನೈತಿಕ ಗುಣಾತ್ಮಕ ವಿಷಯಗಳಿಂದ ಕೂಡಿದ್ದು , ಮಾನವನ ಆಂತರಿಕ ಜೀವನದ ಬಗ್ಗೆ ಪ್ರಾಮುಖ್ಯತೆವುಳ್ಳದ್ದಾಗಿದೆ . ಹಿಂದೂಧರ್ಮವಾಗಲಿ , ವೇದಾಂತವಾಗಲಿ ಅಸತ್ಯವನ್ನು ಹೇಳುವುದಿಲ್ಲ . ಭಾರತೀಯ ಚಿಂತನೆಗಳು ಯಾವುದೇ ವಿಚಿತ್ರ ಮತ್ತು ನಿಗೂಢ ಪರಿಕಲ್ಪನೆಗಳಾಗಿಲ್ಲ, ಜೀವನದ ನಾಡಿಮಿಡಿತಗಳನ್ನು ಸೂಕ್ಷ್ಮ ಮನಸ್ಸಿನ ಚಿಂತನೆಗಳನ್ನು ತಿಳಿಯಪಡಿಸುವುದಾಗಿದೆ ” ಎಂದು ಸರಳವಾಗಿ ಹೇಳಿದರು .
ಈ ) ಕೊಟ್ಟಿರುವ ವಾಕ್ಯಗಳ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ ,
1 , ನೀವೊಬ್ಬರೆ ನನ್ನನ್ನು ಒಬ್ಬ ಮನುಷ್ಯನಂತೆ ಕಂಡು ವರ್ತಿಸಿದವರು
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ . ರತ್ನಮ್ಮ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ .
ಸಂದರ್ಭ: ರಾಧಾಕೃಷ್ಣನ್ ಅವರನ್ನು ಮಾಸ್ಕೋದಲ್ಲಿ ಭಾರತದ ರಾಯಭಾರಿಯಾಗಿ ನೇಮಕ ಗೊಂಡಾಗ , ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್ ಅವರ ಸ್ನೇಹ ಸೌಹಾರ್ದಗಳ ಭೇಟಿ ಫಲಪ್ರದವಾಗಿ ಮತ್ತೆ ಭಾರತಕ್ಕೆ ಹಿಂತಿರುಗುವ ಸಂದರ್ಭದಲ್ಲಿ ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಹೀಗೆ ಹೇಳಿದರು .
ಸ್ವಾರಸ್ಯ : ರಷ್ಯಾದ ಅಧ್ಯಕ್ಷರಾಗಿದ್ದ ಸ್ಟಾಲಿನ್ ಅವರನ್ನು ಇಡೀ ರಷ್ಯಾ ದೇಶವೇ ಒಂದು ರೀತಿ ನೋಡಿದರೆ ರಾಧಾಕೃಷ್ಣನ್ ಅವರು ಬೇರೆ ರೀತಿ ನೋಡಿದ್ದಾರೆ . ಇವರ ಸ್ನೇಹಪರತೆ , ಸನ್ನಡತೆಗಳು ಸ್ವಾರಸ್ಯಕರವಾಗಿದೆ.
2. “ ಆರ್ಥಿಕ ಪರಿಸ್ಥಿತಿ ತಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೊಡಕೆಂದು ಭಾವಿಸಲಿಲ್ಲ ”
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ . ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್ . ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ
ಸಂದರ್ಭ ; ರಾಧಾಕೃಷ್ಣನ್ ಅವರು ವಿದ್ಯಾರ್ಥಿಯಾಗಿದ್ದಾಗ ಮನೆಯ ಜವಾಬ್ದಾರಿ ಹೊತ್ತು , ಕಿರಿಯ ಸಹಪಾಠಿಗಳಿಗೆ ಮನೆಯ ಪಾಠ ಹೇಳಿ ಕೊಟ್ಟು ಹಣ ಸಂಪಾದಿಸುತ್ತಿದ್ದರು , ಅವರು ಆರ್ಥಿಕ ಪರಿಸ್ಥಿತಿ ತಮ್ಮ ಸಾಧನೆಯಲ್ಲಿ ನಿವಾರಿಸಲಾಗದ ತೊಡಕೆಂದು ಭಾವಿಸಲಿಲ್ಲ .ಬಡತನದ ಬೇಗೆಯಲ್ಲೇ ತಮ್ಮ ಆಸಕ್ತಿಯ ವಿಷಯವಾದ ತತ್ತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆದ ಸಂದರ್ಭದಲ್ಲಿ ಈ ಮಾತು ಹೇಳಿದ್ದಾರೆ.
ಸ್ವಾರಸ್ಯ : ಏನಾದರೂ ಒಂದು ಸಾಧನೆ ಮಾಡಲು ಮನಸೊಂದು ಇದ್ದರೆ ಸಾಕು, ರಾಧಾಕೃಷ್ಣನ್ ಅವರು ವಿದ್ಯಾಭ್ಯಾಸ ಮಾಡುವಾಗ ಅವರ ಮನೆಯ ಪರಿಸ್ಥಿತಿ ಅಷ್ಟು ಚೆನ್ನಾಗಿ ಇರಲಿಲ್ಲ ಆದರೂ ಮನೆ ಪಾಠ ಹೇಳಿ ತತ್ವಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿರುವುದನ್ನು ಸ್ವಾರಸ್ಯಕರವಾಗಿ ವರ್ಣಿಸಲಾಗಿದೆ.
3 “ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು ”
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ , ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್. ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ರಾಧಾಕೃಷ್ಣನ್ ಅವರಿಗೆ ವಿಷಯದ ಮೇಲಿನ ಪ್ರಭುತ್ವ ,ನಿರರ್ಗಳತೆ ,ಬೋಧನಾ ಶೈಲಿ , ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು . ತಮ್ಮ ಪ್ರಾಧ್ಯಾಪಕತ್ವವನ್ನು ಯಾವಾಗಲೆಂದರೆ ಆವಾಗ ಕಳಚಿ “ ಏರು ಜವ್ವನದ ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು ”. ಆ ಸಂದರ್ಭದಲ್ಲಿ ಈ ಮಾತು ಬಂದಿದೆ.
ಸ್ವಾರಸ್ಯ : ಶಿಕ್ಷಕನೊಬ್ಬನ ಗೌರವವು ಬೋಧನೆಯಿಂದ ವೃದ್ಧಿಸುತ್ತದೆ . ಮತ್ತು ವ್ಯಕ್ತಿತ್ವದ ಸೌಜನ್ಯ , ಸ್ನೇಹಶೀಲತೆ ಎಲ್ಲರ ಗಮನವನ್ನೂ ಸೆಳೆಯುತ್ತದೆ . ಎಂಬುದು ಸ್ವಾರಸ್ಯಕರವಾಗಿದೆ.
4. “ ಆಶೋಕನು ಕಳಿಂಗ ಯುದ್ಧದ ಅನಂತರ ಶ್ರೇಷ್ಠ ಮನುಷ್ಯನಾದಂತೆ ನೀವೂ ಆಗುವಿರಿ ”
ಆಯ್ಕೆ : ಈ ವಾಕ್ಯವನ್ನು ಕೆ , ಎಸ್ , ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್. ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : ರಷ್ಯಾ ದೇಶದ ಅಧ್ಯಕ್ಷ ಸ್ಟಾಲಿನ್ ಅವರು ರಾಧಾಕೃಷ್ಣನ್ ಅವರಿಗೆ ಮಾಸ್ಕೋದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಸ್ಟಾಲಿನ್ ಅವರು ಭಾಷಣ ಮಾಡುವ ಸಂದರ್ಭದಲ್ಲಿ ರಾಧಾಕೃಷ್ಣನ್ ಅವರ ಪ್ರಥಮ ಭೇಟಿಯ ಮಾತುಗಳನ್ನು ಸ್ಮರಿಸಿಕೊಂಡರು.
ಸ್ವಾರಸ್ಯ : ರಷ್ಯಾ ದೇಶದ ಅಧ್ಯಕ್ಷರಾದ ಸ್ಟಾಲಿನ್ ಅವರನ್ನು ಬೇರೆಯವರು ನೋಡಿ ಮಾತನಾಡಿಸಿದ ರೀತಿ ಬೇರೆ ಮತ್ತು ರಾಧಾಕೃಷ್ಣನ್ ಅವರು ನೋಡಿದ ರೀತಿಯೇ ಬೇರೆ ಎಂಬುದು ಇಲ್ಲಿ ಸ್ವಾರಸ್ಯಕರವಾಗಿದೆ.
5 , “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ”
ಆಯ್ಕೆ : ಈ ವಾಕ್ಯವನ್ನು ಕೆ . ಎಸ್ . ರತ್ನಮ್ಮ ಅವರ ಡಾ . ಎಸ್ . ರಾಧಾಕೃಷ್ಣನ್ – ಜೀವನ ಸಾಧನೆ ಮತ್ತು ಎ.ಎನ್. ಮೂರ್ತಿರಾವ್ ಅವರ ಚಿತ್ರಗಳು – ಪತ್ರಗಳು ಕೃತಿಗಳ ಆಧಾರದಿಂದ ಪಠ್ಯಪುಸ್ತಕ ರಚನಾ ಸಮಿತಿ ಸಿದ್ಧಪಡಿಸಿರುವ ‘ ಆದರ್ಶ ಶಿಕ್ಷಕ ಸರ್ವೇಪಲ್ಲಿ ರಾಧಾಕೃಷ್ಣನ್ ‘ ವ್ಯಕ್ತಿಚಿತ್ರ ಗದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ : “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ” ಎಂದು ಕೆನಡಾ ದೇಶದ ರೇಡಿಯೋ ಪ್ರಸಾರ ಭಾಷಣದಲ್ಲಿ ತಮ್ಮ ನಿಲುವನ್ನು ಅಭಿವ್ಯಕ್ತಿಸಿದ ಸಂದರ್ಭದಲ್ಲಿ ರಾಧಾಕೃಷ್ಣನ್ ಅವರು ಈ ಮಾತನ್ನು ಹೇಳಿದ್ದಾರೆ.
ಸ್ವಾರಸ್ಯ : ಪ್ರತಿಯೊಂದು ಧರ್ಮದ ಅಂತಿಮ ಸತ್ಯ ಮಾನವತೆಯೇ ಎಂಬುದು ರಾಧಾಕೃಷ್ಣನ್ ಅವರ ಮಾತಿನಲ್ಲಿ ಸ್ವಾರಸ್ಯಕರವಾಗಿ ಮೂಡಿಬಂದಿದೆ.
ಉ ) ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗೂ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ .
1. ರಾಧಾಕೃಷ್ಣನ್ ಅವರ ಸಾಧನೆಯಲ್ಲಿ ವಿಶೇಷ ಸಹಕಾರ ನೀಡಿದವರು…………………………….
( ತಂದೆ , ತಾಯಿ , ಪತ್ನಿ , ಸಹೋದರಿ )
ಉತ್ತರ : ಪತ್ನಿ
2. ಮದಾಸ್ತಿನ ಕಿಶ್ಚಿಯನ್ ಶಾಲೆಯಲ್ಲಿ ರಾಧಾಕೃಷ್ಣನ್ ಅವರು ಉತ್ತಮ ವಿದ್ಯಾರ್ಥಿ ಎಂದು ಪರಿಗಣಿಸಲ್ಪಟ್ಟ ವಿಷಯ………………………
( ಸಮಾಜಶಾಸ್ತ್ರ , ರಾಜ್ಯಶಾಸ್ತ್ರ , ಧರ್ಮಶಾಸ್ತ್ರ , ತತ್ತ್ವಶಾಸ್ತ್ರ )
ಉತ್ತರ : ತತ್ತ್ವಶಾಸ್ತ್ರ
3. ರಾಧಾಕೃಷ್ಣನ್ ಅವರು ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ ವಿಶ್ವವಿದ್ಯಾನಿಲಯ…………….( ಬನಾರಸ್ , ಕೇಂಬ್ರಿಡ್ , ಆಕ್ಸ್‌ಫರ್ಡ್ , ಉಸ್ಮಾನಿಯ )
ಉತ್ತರ : ಆಕ್ಸ್‌ಫರ್ಡ್
4 , “ ಮಾನವತೆಯೇ ವಿಶ್ವ ಅನುಸರಿಸಬೇಕಾದ ಮಾರ್ಗ ” ಎಂದು ರಾಧಾಕೃಷ್ಣನ್ ಅವರು ರೇಡಿಯೋ ಪ್ರಸಾರ ಭಾಷಣ ಮಾಡಿದ ದೇ………………………( ಇಂಗ್ಲೆಂಡ್ , ಕೆನಡಾ , ಆಮೇರಿಕ , ರಷ್ಯಾ )
ಉತ್ತರ : ಕೆನಡಾ
5. ಭಾರತ ಮತ್ತು ರಷ್ಯಾದ ಬಾಂಧವ್ಯವನ್ನು ವೃದ್ಧಿಗೊಳಿಸಿದ ರಾಧಾಕೃಷ್ಣನ್ ಅವರನ್ನು ಪ್ರಶಂಸಿಸಿದವರು…………….( ಮಹಾತ್ಮಗಾಂಧೀಜಿ , ಜವಾಹರಲಾಲ್ ನೆಹರು , ಸ್ಟಾಲಿನ್ , ಸಿಇ.ಎಂ , ಜೋಡ್ )
ಉತ್ತರ : ಸ್ಟಾಲಿನ್
ಊ) ಹೊಂದಿಸಿ ಬರೆಯಿರಿ , | |
ಅ - ಪಟ್ಟಿ | ಆ - ಪಟ್ಟಿ |
1. ಸ್ಟಾಲಿನ್ | ರಾ.ಶಿಕ್ಷಕರ ದಿನಾಚರಣೆ (5) |
2. ಹರ್ಮನ್ಸ್ ಬರ್ಗ್ | ಮಿಷನರಿ ಶಾಲೆ (2) |
3. ಭಾರತೀಯ ವಿದ್ಯಾಭವನ | ಮಾಸ್ಕೊ (1) |
4. ಆಕ್ಸ್‌ಫರ್ಡ್ | ವಿಶ್ವವಿದ್ಯಾಲಯ (4) |
5. ಸೆಪ್ಟೆಂಬರ್ 05 | ಬ್ರಹ್ಮವಿದ್ಯಾಭಾಸ್ಕರ (3) |
| ಸ್ವಾತಂತ್ರ್ಯ ದಿನಾಚರಣೆ |
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ 1. ಜಶ್ತ್ವ ಸಂಧಿಯ ಸೂತ್ರವೇನು ?
ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಮೂರನೆಯ ಅಕ್ಷರ ಬಂದಾಗ ಜಶ್ತ್ವ ಸಂಧಿ ಆಗುತ್ತದೆ. ಪೂರ್ವಪದದ ಕೊನೆಯಲ್ಲಿರುವ ಪ್ರಥಮ ವರ್ಗಗಳಿಗೆ ಅಂದರೆ ಕ,ಚ,ಟ,ತ,ಪ ಗಳಿಗೆ ಇತರೆ ವರ್ಗಗಳು ಪರವಾದರೆ ಅವುಗಳ ಸ್ಥಾನದಲ್ಲಿ ಅದೇ ವರ್ಗದ ಮೂರನೆಯ ವರ್ಗವು ಆದೇಶವಾಗಿ ಬಂದರೆ ಅದೇ ಜಶ್ತ್ವ ಸಂಧಿ .
2. ಶ್ಚುತ್ವ ಸಂಧಿಯನ್ನು ನಿದರ್ಶನದೊಂದಿಗೆ ವಿವರಿಸಿ.
'ಶ್ಚು' ಎಂದರೆ 'ಶ' -ಕಾರ ಮತ್ತು 'ಚ' ವರ್ಗಾಕ್ಷರಗಳು. ಸಂಧಿ ಕಾರ್ಯ ನಡೆಯುವಾಗ ಪೂರ್ವ ಪದದ ಕೊನೆಯಲ್ಲಿ 'ಸ' ಅಥವಾ 'ತ' ಅಕ್ಷರಗಳಿರುವಾಗ ಉತ್ತರ ಪದದ ಮೊದಲಿಗೆ 'ಶ' -ಕಾರ ಅಥವಾ 'ಚ' -ವರ್ಗದ ಅಕ್ಷರಗಳು ಬರುತ್ತವೆ. 'ಸ' -ಕಾರವಿದ್ದ ಕಡೆ 'ಶ' -ಕಾರವೂ ಮತ್ತು 'ತ' -ವರ್ಗದ ಅಕ್ಷರಗಳಿದ್ದ ಕಡೆ 'ಚ' -ವರ್ಗದ ಅಕ್ಷರಗಳೂ ಆದೇಶವಾಗಿ ಬರುವುದನ್ನು ಶ್ಚುತ್ವ ಸಂಧಿ ಎನ್ನುತ್ತೇವೆ.
ಉದಾಹರಣೆ :
ಮನಸ್ + ಶಾಂತಿ = ಮನಶ್ಯಾಂತಿ
ಸತ್ + ಚಿತ್ರ = ಸಚ್ಚಿತ್ರ
ಶರತ್ + ಚಂದ್ರ = ಶರಚ್ಚಂದ್ರ
ಸತ್ + ಚಿದಾನಂದ = ಸಚ್ಚಿದಾನಂದ
ಜಗತ್ + ಜ್ಯೋತಿ = ಜಗಜ್ಯೋತಿ
ಆ ) ಕೊಟ್ಟಿರುವ ಪದಗಳ ಸಮಾಸ ಹೆಸರಿಸಿ ,
ಮುಕ್ಕಣ್ಣ , ಹಣೆಗಣ್ಣ
ಮೂರು + ಕಣ್ಣು ಉಳ್ಳವನು = ಮುಕ್ಕಣ್ಣ = ಶಿವ - ಬಹುವ್ರೀಹಿ ಸಮಾಸ
ಹಣೆಯಲ್ಲಿ + ಕಣ್ಣುಳ್ಳವನು = ಹಣೆಗಣ್ಣ = ಶಿವ - ಬಹುವ್ರೀಹಿ ಸಮಾಸ
ಇ ) ಕೊಟ್ಟಿರುವ ಪದಗಳ ಸಂಧಿ ಹೆಸರಿಸಿ
ವಾಗ್ದೇವಿ ಚಿದಾನಂದ
ವಾಕ್ + ದೇವಿ = ವಾಗ್ದೇವಿ - ಜಶ್ತ್ವ ಸಂಧಿ
ಚಿತ್ + ಆನಂದ = ಚಿದಾನಂದ - . ಜಶ್ತ್ವ ಸಂಧಿ
ಪ್ರಜಾನಿಷ್ಠೆ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಚೋಳರು ಮತ್ತು ಹೊಯ್ಸಳರ ನಡುವೆ ಎಲ್ಲಿ ಯುದ್ಧ ನಡೆಯಿತು ?
ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು.
2. ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ಯಾರು ?
ಸಾಮ್ರಾಟನು ರಾಜಧಾನಿಯಲ್ಲಿ ಇಲ್ಲದಿದ್ದಾಗ ರಾಜ್ಯದ ಸಂರಕ್ಷಕರಾಗಿ ನಿಂತಿದ್ದವರು ರಾಣಿ ಶಾಂತಲಾದೇವಿ.
3. ಬನದಮ್ಮನ ಹಳ್ಳಿಯ ಜನರು ಎಲ್ಲಿ ಪಂಚಾಯಿತಿ ಸೇರಿದ್ದರು ?
ಬನದಮ್ಮನ ಹಳ್ಳಿಯ ಜನರು ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ಪಂಚಾಯಿತಿ ಸೇರಿದ್ದರು.
4. ಬನದಮ್ಮನಹಳ್ಳಿಯ ಪಂಚಾಯಿತಿಯಲ್ಲಿ ಯಾವ್ಯಾರ ನಡುವಿನ ನ್ಯಾಯ ತೀರ್ಮಾನವಾಗುತ್ತಿತ್ತು ?
ಬನದಮ್ಮನಹಳ್ಳಿಯ ಪಂಚಾಯಿತಿಯಲ್ಲಿ ಈರಣ್ಣ ಮತ್ತು ಬೀರಣ್ಣನ ನಡುವೆ ನ್ಯಾಯ ತೀರ್ಮಾನವಾಗುತ್ತಿತ್ತು.
ಆ )ಕೊಟ್ಟಿರುವ ಪ್ರಶ್ನೆಗಳಿಗೆ 3-4 ವಾಕ್ಯದಲ್ಲಿ ಉತ್ತರಿಸಿ .
1. ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ವಿಷ್ಣುವರ್ಧನನು ಏನೆಂದು ಹೇಳಿದನು ?
ಹಲವರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ದೊರೆ ವಿಷ್ಣುವರ್ಧನನು ಸುಲಭವಾಗಿ ತಲಕಾಡನ್ನು ವಶಪಡಿಸಿಕೊಂಡನು . ಸಮಸ್ತ ಸೇನೆಯು ‘ ತಲಕಾಡುಗೊಂಡನಿಗೆ ಜಯವಾಗಲಿ ‘ ಎಂದು ಜೈಕಾರ ಹಾಕಿತು , ಹಲವರು ತಲಕಾಡು ನಗರವನ್ನು ಲೂಟಿ ಮಾಡಬೇಕೆಂದು ಇಚ್ಚಿಸಿದರು . ಆದರೆ ವಿಷ್ಣುವರ್ಧನ ಅದಕ್ಕೆ ಆಸ್ಪದ ಕೊಡಲಿಲ್ಲ .ಆಗ ವಿಷ್ಣುವರ್ಧನನು “ ಕೆಚ್ಚೆದೆಯ ಕಟ್ಟಾಳುಗಳೇ , ಇದು ನಮ್ಮ ವಿಜಯದ ದಿನವೆಂದು ತಿಳಿದು ಮೈಮರೆಯಬಾರದು ಎಂದು ಹೇಳಿದನು.
ಇದು ನಮ್ಮ ಸತ್ತ್ವ ಪರೀಕ್ಷೆಯ ಸಮಯವೂ ಹೌದು . ಆದ್ದರಿಂದ ಎಷ್ಟೇ ಸ್ಥಾನಮಾನ ಪದವಿ ಪ್ರಶಸ್ತಿಗಳು ಲಭಿಸಲಿ , ಮಾನವ ತನ್ನ ಮಾನವೀಯ ಗುಣಗಳನ್ನು ಮಾತ್ರ ಗಾಳಿಯಲ್ಲಿ ತೂರಿಬಿಡಬಾರದು . ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮ ಅಲ್ಲ ; ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು ಯುದ್ಧ ಧರ್ಮವಲ್ಲ . ಆ ಕಾರಣ ನೀವೆಲ್ಲರೂ ತಲಕಾಡಿನವರನ್ನು ತಮ್ಮವರೆಂದೇ ತಿಳಿದು ನಡೆಸಿಕೊಳ್ಳಿ. ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ , ನಾಲ್ಕು ದಿನಗಳಾದ ಮೇಲೆ ರಾಜಧಾನಿಗೆ ಹಿಂದಿರುಗೋಣ , ” ಎಂದು ಹೇಳಿದರು .
2. ತಲಕಾಡಿನ ಲೂಟಿಯ ವಿಚಾರದಲ್ಲಿ ವಿಷ್ಣುವರ್ಧನನ ನಿಲುವೇನು ?
ಮಳವಳ್ಳಿ ಮುಡುಕುತೊರೆಗಳ ಬಳಿಯಲ್ಲಿ ಚೋಳರು ಮತ್ತು ಹೊಯ್ಸಳರ ನಡುವೆ ಘನಘೋರ ಯುದ್ಧ ನಡೆಯಿತು .ಈ ಯುದ್ಧದಲ್ಲಿ ಹೊಯ್ಸಳರ ಕೈ ಮೇಲಾಗಿ ,ಚೋಳಸೇನೆ ಕಂಗಾಲಾಗಿ ಆದಿಯಮನು ಯುದ್ಧದಲ್ಲಿ ಮಡಿದನು , ತಲಕಾಡು ವಿಷ್ಣುವರ್ಧನನ ಕೈ ವಶವಾಯಿತು . ಅನೇಕರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ವಿಷ್ಣುವರ್ಧನನು ಅದಕ್ಕೆ ಅವಕಾಶ ಕೊಡಲಿಲ್ಲ . “ ಸೆರೆ ಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮವಲ್ಲ . ಸೋತ ಸಾಮ್ರಾಜ್ಯವನ್ನು ಲೂಟಿ ಮಾಡುವುದು ಯುದ್ಧ ಧರ್ಮವಲ್ಲ . ಆದ್ದರಿಂದ ತಲಕಾಡಿನ ಜನ ತಮ್ಮವರೆಂದೇ ತಿಳಿದು ನಡೆದುಕೊಳ್ಳಿ , ಅವರ ಮನೋಭೀತಿಯನ್ನು ದೂರ ಮಾಡಿ ಶಾಂತಿ ಸ್ಥಾಪನೆ ಮಾಡಿ ” ಎಂದು ವಿಷ್ಣವರ್ಧನನು ತನ್ನ ಸೈನಿಕರಿಗೆ ಹೇಳಿದನು.
3. ಬನದಮ್ಮನ ಹಳ್ಳಿಯ ದೇವಾಲಯದ ಮುಂದೆ ಯಾವ ವಿಚಾರವಾಗಿ ಚರ್ಚೆ ನಡೆದಿತ್ತು ?
ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ನೂರಾರು ಜನರು ಒಂದು ಪಂಚಾಯಿತಿ ಸೇರಿದ್ದರು . ಎರಡು ವರ್ಷಗಳ ಹಿಂದೆ ಬೀರಣ್ಣ ತನ್ನ ಮೂಡಲ ದಿಕ್ಕಿನಲ್ಲಿರುವ ಹಳ್ಳಿ ಹೊಲವನ್ನು ಈರಣ್ಣನಿಗೆ ನೂರಾ ಎಂಟು ಹೊನ್ನಿಗೆ ಕೊಟ್ಟಿದ್ದ – ಹೊಲದಲ್ಲಿ ಉಳುಮೆ ಮಾಡೋವಾಗ ನಿನ್ನೆ ದಿನಾ ಒಂದು ಕೊಪ್ಪರಿಗೆ ಬಂಗಾರ ಸಿಗುತ್ತದೆ . ಇದನ್ನು ಈರಣ್ಣ ಪೂಜೆ ಮಾಡಿ ಬೀರಣ್ಣನ ಮನೆಗೆ ತೆಗೆದುಕೊಂಡು ಹೋಗಿ ತೆಗೆದುಕೋ ಇದು ನೀನು ಕೊಟ್ಟ ಹೊಲದಾಗೆ ಸಿಕ್ಕಿತು … ಯಾರೋ ನಿನ್ನ ಪೂರ್ವಿಕರು ನಿನಗಾಗಿ ಇಟ್ಟಿದು ಅಂತಾ ಕಾಣಿಸುತ್ತದೆ ‘ ಎಂದು ಹೇಳಿದನು . ಆದರೆ ಹೊಲ ಮಾರಿದ ಮೇಲೆ ಆ ನೆಲದ ಹಕ್ಕು ತನಗಿಲ್ಲ ಎಂದು ಬೀರಣ್ಣ ವಾದಿಸಿದನು . ಹೀಗೆ ಬೀರಣ್ಣ ಕೊಪ್ಪರಿಗೆಯ ಬಂಗಾರ ನನಗೆ ಬೇಡ ಎಂದು . ಈರಣ್ಣನೂ ಸಹ ನನಗೂ ಬೇಡ ಎಂದಾಗ ಈ ವಿಚಾರವಾಗಿ ಚರ್ಚೆ ನಡೆದಿತ್ತು .
4. ದೈವದವರ ತೀರ್ಪಿನ ಬಗೆಗೆ ಶಾಂತಲೆಯ ಅಭಿಪ್ರಾಯವೇನು ?
ಈರಣ್ಣ ಮತ್ತು ಬೀರಣ್ಣ ಇಬ್ಬರೂ ಕೊಪ್ಪರಿಗೆ ಬಂಗಾರವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಒಪ್ಪದಿದ್ದಾಗ ಗ್ರಾಮದ ಮುಖ್ಯಸ್ಥ ಕೇತುಮಲ್ಲ ‘ ಇಬ್ಬರಿಗೂ ಬೇಡವಾದ ಹಣ ರಾಜ್ಯದ ಬೊಕ್ಕಸ ಸೇರಲಿ ‘ ಎಂದನು . ನ್ಯಾಯ ತೀರ್ಮಾನ ಮಾಡುತ್ತಾನೆ. ಕೂಡಲೆ ಮರದ ಮರೆಯಲ್ಲಿದ್ದ ಶಾಂತಲೆ ಮುಂದೆ ಬಂದು , “ ಕೂಡದು … ಕೂಡದು …ಎಂದು ಕೂಗಿದಳು . ಬೊಕ್ಕಸಕ್ಕೆ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ … ಅವರ ಬೆವರಿನ ಫಲ ಅಲ್ಲ … ಅದು ಪ್ರಜೆಗಳ ಬೆವರಿನ ಫಲ ” ಆದ್ದರಿಂದ ಅದು ನಿಮ್ಮ ಊರಿನ ಹಣ ನಿಮೂರಿನ ಏಳಿಗೆಗಾಗಿಯೇ ವಿನಿಯೋಗವಾಗಲಿ . ” ಎಂದು ಅಭಿಪ್ರಾಯ ಪಟ್ಟಳು.
5. ಶಾಂತಲೆಯು ನೀಡಿದ ತೀರ್ಪೇನು ?
ಕೊಪ್ಪರಿಗೆ ಹಣವು ರಾಜ್ಯದ ಬೊಕ್ಕಸಕ್ಕೆ ಸೇರಬೇಕೆಂದು ಕೇತುಮಲ್ಲ ತೀರ್ಪನ್ನು ನೀಡಿದಾಗ ಶಾಂತಲೆ “ ಅಣ್ಣಂದಿರಾ , ತಾಯಂದಿರೆ , ಇದೋ ಈ ಹೊನ್ನನ್ನು ನೇರವಾಗಿ ನಾನು ರಾಜ್ಯದ ಕೋಶಕ್ಕೆ ಸೇರಿಸುವುದಿಲ್ಲ … ಇದು ದೈವದ ದುಡ್ಡು, ದೇವಕಾರ್ಯಕ್ಕೆ ವಿನಿಯೋಗವಾಗಬೇಕಾದ್ದು ಧರ್ಮ … ಕೇಳಿ , ನನಗೆ ಬಹಳ ದಿನಗಳಿಂದಲೂ ಒಂದು ಆಸೆ ಇದೆ … ನಮ್ಮ ಸಂಸ್ಕೃತಿಯ ಶ್ರೀಮಂತಿಕೆಗೆ ಸಾಕ್ಷಿಯಾಗಿ ಒಂದು ಕಲಾದೇಗುಲವನ್ನು ರಾಜಧಾನಿ ದ್ವಾರಸಮುದ್ರದಲ್ಲಿ ನಿರ್ಮಿಸಬೇಕು ಎಂದು . ಅವಳಿ ದೇಗುಲಗಳ ಶಿಲ್ಪಕಲೆ ಹೊಯ್ಸಳರ ಶೈಲಿಗೆ ಮಾದರಿಯಾಗಿರಬೇಕು … ವೇಲಾಪುರಿಯ ಚೆನ್ನಕೇಶವ ದೇವಾಲಯದಲ್ಲಿ ಲಾಲಿತ್ಯವಿದ್ದರೆ , ದ್ವಾರಸಮುದ್ರದ ದೇಗುಲದಲ್ಲಿ ಭವ್ಯತೆ ನೆಲೆಗೊಂಡಿರಬೇಕು .ಅಂತಹ ಒಂದು ಕಲಾಪೂರ್ಣ ದೇವಾಲಯಕ್ಕಾಗಿ ಈ ಹೊನ್ನು ವಿನಿಯೋಗವಾಗಲಿ..ಎಂದು ಶಾಂತಲೆ ತೀರ್ಪು ನೀಡಿದಳು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ
1. ಚೋಳ ದೊರೆ ಕುಲೋತ್ತುಂಗನು ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಲು ಇದ್ದ ಕಾರಣ ಹಾಗೂ ಪರಿಣಾಮವನ್ನು ವಿವರಿಸಿ.
ಹೊಯ್ಸಳ ಸಾಮ್ರಾಜ್ಯದ ಪ್ರಗತಿಯನ್ನು ಕಂಡ ಪರರಾಜರ ಕಣ್ಣುಗಳು ಕೆಂಪಾದವು , ಅದರಲ್ಲೂ ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಿರುವ ವಿಷ್ಣುವರ್ಧನ ಭೂಪಾಲನನ್ನು ಬಡಿಯಬೇಕೆಂದು ಶತ್ರು ರಾಜರುಗಳನೇಕರು ಹವಣಿಸುತ್ತಿದ್ದರು .ಅವರಲ್ಲಿ ಚೋಳಮಂಡಲದ ಕುಲೋತ್ತುಂಗನು ಪ್ರಮುಖನಾದವನು . ಗಂಗರ ತಲಕಾಡು ಅವನ ಸ್ವಾಧೀನದಲ್ಲಿತ್ತು. ಕುಲೋತ್ತುಂಗ ಪ್ರಚಂಡ ಆಶಾವಾದಿ . ಅಖಂಡ ಭರತಖಂಡದ ಒಡೆತನವನ್ನು ಬಯಸುತ್ತಿದ್ದ ದುರಾಶಾಪಿಶಾಚಿ.
ಹೊಯ್ಸಳ ಸಾಮ್ರಾಜ್ಯವನ್ನು ತನ್ನ ವಶ ಮಾಡಿಕೊಳ್ಳಲೆಂದು ಬಯಸಿ , ಹೊಯ್ಸಳ ಸಾಮ್ರಾಜ್ಯದ ಮೇಲೆ ಯುದ್ಧ ಸಾರಿದನು , ಚೋಳರಿಗೂ ಮತ್ತು ಹೊಯ್ಸಳರಿಗೂ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆದು ; ಹೊಯ್ಸಳರ ಕೈ ಮೇಲಾಗಿ ಚೋಳಸೇನೆ ಕಂಗಾಲಾಯಿತು.ಆದಿಯಮ ಯುದ್ಧದಲ್ಲಿ ಮಡಿದ . ಅವನ ಸತ್ತ ಸುದ್ದಿ ತಿಳಿಯುತ್ತಲೆ ಚೋಳಸೇನೆ ದಿಕ್ಕಾಪಾಲಾಗಿ ಓಡಿತು . ತಲಕಾಡ ಕೋಟೆ ಸುಲಭವಾಗಿ ವಿಷ್ಣುವರ್ಧನ ಭೂಪಾಲನ ಕೈವಶವಾಯಿತು . ಸಮಸ್ತ ಸೇನೆಯು “ ತಲಕಾಡುಗೊಂಡನಿಗೆ ಜಯವಾಗಲಿ ‘ ಎಂದು ಜೈಕಾರ ಹಾಕಿತು .
2. ಬನದಮ್ಮನ ಹಳ್ಳಿಯ ಪಂಚಾಯಿತಿಯಲ್ಲಿ ನಡೆದ ನ್ಯಾಯ ಹಾಗೂ ಅದರ ತೀರ್ಪಿನ ಬಗ್ಗೆ ವಿವರಿಸಿ.
ವಿಷ್ಣುವರ್ಧನ ಭೂಪಾಲನು ರಾಜ್ಯದಲ್ಲಿ ಇಲ್ಲದಿದ್ದಾಗ ರಾಜಧಾನಿಯಲ್ಲಿ ಸಂರಕ್ಷಕಳಾಗಿ ನಿಂತಿದ್ದ ದೇವತೆ ಎಂದರೆ ಮಹಾರಾಣಿ ಶಾಂತಲಾದೇವಿ . ಒಮ್ಮೆ ಗಂಡುಡೆಗೆಯನ್ನುಟ್ಟು ಯುವರಾಜ ಕುಮಾರ ಉದಯಾದಿತ್ಯನನ್ನು ಜೊತೆಯಲ್ಲಿ ಕರೆದುಕೊಂಡು ಬೆಳಗಿನ ಜಾವ ರಾಜ್ಯ ಸಂಚಾರ ಮಾಡಲು ಹೊರಟಳು . ಬನದಮ್ಮನಳ್ಳಿಯ ಬನಶಂಕರಿಯ ದೇವಾಲಯದ ಮುಂಭಾಗದ ಕಟ್ಟೆಯ ಮೇಲೆ ನೂರಾರು ಜನರು ಒಂದು ಪಂಚಾಯಿತಿ ನೆರೆದಿದ್ದುದು ಕಂಡು ಬಂತು ,ಕಾರಣ ಬೀರಣ್ಣ ಎಂಬುವವನು ತನ್ನ ಹೊಲವನ್ನು ಈರಣ್ಣನಿಗೆ ಮಾರಾಟ ಮಾಡಿದ್ದ ,ಈರಣ್ಣ ಹೊಲವನ್ನು ಉಳುಮೆ ಮಾಡುತ್ತಿರುವಾಗ ಅವನಿಗೆ ಒಂದು ಕೊಪ್ಪರಿಗೆ ಬಂಗಾರ ಸಿಕ್ಕಿತು. ಅದನ್ನು ಈರಣ್ಣ ಬಳಿ ಇಟ್ಟುಕೊಳ್ಳಲಿಲ್ಲ.
ಈ ವಿಚಾರವಾಗಿ ಪಂಚಾಯಿತಿಯಲ್ಲಿ ಚರ್ಚೆ ನಡೆದ ಮೇಲೆ ಮುಖ್ಯಸ್ಥನಾದ ಕೇತುಮಲ್ಲ ಹೋಗಲಿ ಬಿಡಿ...ಇಬ್ಬರಿಗೂ ಬೇಡವಾದ ಈ 'ಹೊನ್ನು ರಾಜ್ಯದ ಬೊಕ್ಕಸ ಸೇರಲಿ ‘ ಎಂದು ಹೇಳಿದ . ಜನರೆಲ್ಲರೂ ಒಪ್ಪಿದರು . ಆದರೆ ಮಾರುವೇಷದಲ್ಲಿದ್ದ ಶಾಂತಲೆ “ ಈ ಕೊಪ್ಪರಿಗೆಯ ಬಂಗಾರ ರಾಜ್ಯದ ಬೊಕ್ಕಸ ಸೇರಲು ಇದು ಸಾಮ್ರಾಟರ ದುಡಿಮೆಯಲ್ಲ ” ಎಂದಾಗ , ನಾವೆಲ್ಲರೂ ಹೊಯ್ಸಳೇಶ್ವರನ ಮಕ್ಕಳು ಎಂದ ಮೇಲೆ ಇದು ಅವರಿಗೆ ಸೇರಬೇಕು ಎಂದು ಕೇತುಮಲ್ಲ ಹೇಳಿದ.
“ಅಣ್ಣಗಳಿರಾ ನಿಮ್ಮಂತಹ ಪುಣ್ಯವಂತ ಪ್ರಜೆಗಳನ್ನು ಪಡೆದ ರಾಜ ಅದೆಷ್ಟು ಭಾಗ್ಯವಂತನೋ ” ಎಂದಳು ಶಾಂತಲೆ. ಆಗ ಶಾಂತಲೆ ಮುಂಡಾಸು ತೆಗೆದಳು . ಜನರೆಲ್ಲರಿಗೂ ಬಹಳ ಸಂತೋಷವಾಯಿತು , ನಂತರ ಶಾಂತಲೆ ಕೊಪ್ಪರಿಗೆ ಬಂಗಾರವು ದೇವ ಕಾರ್ಯಕ್ಕೆ ವಿನಿಯೋಗವಾಗಬೇಕು ಎಂದು ಹೇಳಿ, ಕೇತುಮಲ್ಲ ನಾಯಕರು ನಮಗೆಲ್ಲರಿಗೂ ಹಿರಿಯರು ದ್ವಾರ ಸಮುದ್ರದಲ್ಲಿ ನಿರ್ಮಾಣವಾಗುವ ಅವಳಿ ದೇವಾಲಯಗಳು ಅವರ ಹೆಸರಿನಲ್ಲಿಯೇ ನಿರ್ಮಾಣವಾಗಲಿ ಎಂದು ಹೇಳಿದಳು . ಕಟ್ಟುವ ದೇವಾಲಯಗಳು ಹೊಯ್ಸಳೇಶ್ವರ, ಶಾಂತಲೇಶ್ವರ ಎಂಬ ಹೆಸರಿನಲ್ಲಿರಲಿ ಎಂದು ಒಕ್ಕೊರಲಿನಿಂದ ಜನರೆಲ್ಲರೂ ಕೂಗಿದರು.
ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
1 , “ತಲಕಾಡುಗೊಂಡನ ಜಯವಾಗಲಿ”
ಆಯ್ಕೆ : ಈ ವಾಕ್ಯವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಹೊಯ್ಸಳರ ರಾಜನಾದ ವಿಷ್ಣುವರ್ಧನನು ಚೋಳರ ದಂಡನಾಯಕನಾದ ಆದಿಯಮನನ್ನು ಯುದ್ಧದಲ್ಲಿ ಸೋಲಿಸಿ ತಲಕಾಡನ್ನು ತನ್ನ ಕೈ ವಶಮಾಡಿಕೊಳ್ಳುತ್ತಾನೆ . ಆ ಸಂದರ್ಭದಲ್ಲಿ ಗೆದ್ದ ರಾಜನಿಗೆ ತನ್ನ ಸೈನಿಕರು ಈ ಮೇಲಿನಂತೆ ಜೈಕಾರ ಹಾಕಿದರು.
ಸ್ವಾರಸ್ಯ : ಹೊಯ್ಸಳರ ರಾಜನಾದ ವಿಷ್ಣುವರ್ಧನ ಮೇಲೆ ಸೈನಿಕರು ಇಟ್ಟ ಪ್ರೀತಿ , ಗೌರವ , ಅಭಿಮಾನ , ಯುದ್ಧ ಗೆದ್ದಾಗ ಆದ ಹರ್ಷವನ್ನು ವ್ಯಕ್ತ ಪಡಿಸಿರುವುದು ಇಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ
2. “ ಸೆರೆಸಿಕ್ಕ ಸೈನಿಕರ ಮೇಲೆ ದೌರ್ಜನ್ಯ ನಡೆಸುವುದು ಯೋಧ ಧರ್ಮವಲ್ಲ”
ಆಯ್ಕೆ : ಈ ವಾಕ್ಯವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಚೋಳರು ಮತ್ತು ಹೊಯ್ಸಳರ ನಡುವೆ ಮಳವಳ್ಳಿ , ಮುಡುಕುತೊರೆಗಳ ಬಳಿಯಲ್ಲಿ ಘನಘೋರ ಯುದ್ಧ ನಡೆಯಿತು . ಈ ಯುದ್ಧದಲ್ಲಿ ಆದಿಯಮನು ಮಡಿದು , ತಲಕಾಡು ವಿಷ್ಣುವರ್ಧನನ ಕೈ ವಶವಾಯಿತು. ಅನೇಕರು ತಲಕಾಡನ್ನು ಲೂಟಿ ಮಾಡಬೇಕೆಂದು ಹೇಳಿದಾಗ ವಿಷ್ಣುವರ್ಧನನು ಅದಕ್ಕೆ ಅವಕಾಶ ಕೊಡಲಿಲ್ಲ . ಆ ಸಂದರ್ಭದಲ್ಲಿ ವಿಷ್ಣುವರ್ಧನನು ಈ ಮೇಲಿನ ಮಾತನ್ನು ಹೇಳಿದನು.
ಸ್ವಾರಸ್ಯ : ಸಾಮಾನ್ಯವಾಗಿ ಗೆದ್ದ ರಾಜ್ಯವನ್ನು ಲೂಟಿ ಮಾಡುವುದು , ಸೆರೆ ಸಿಕ್ಕ ಸೈನಿಕರನ್ನು ಹಿಂಸೆ ಕೊಡುವುದನ್ನು ಕಾಣುತ್ತೇವೆ . ಆದರೆ ಇಲ್ಲಿ ಸೋತ ರಾಜ್ಯದ ಮೇಲೆ ವಿಷ್ಣುವರ್ಧನನಿಗೆ ಇರುವ ಭಾವನೆಯು ಸ್ವಾರಸ್ಯಕರವಾಗಿದೆ .
3 , “ ತಂಬುಲ ಆಗದ ಮ್ಯಾಲೆ ಮತ್ತೆ ಎತ್ತಿ ಬಾಯಿಗಾಕೊಳೋ ಕೆಟ್ಟತನ ಬ್ಯಾಡಾ “
ಆಯ್ಕೆ : ಈ ವಾಕ್ಯವನ್ನು ಸಾ . ಶಿ . ಮರುಳಯ್ಯ ಅವರು ರಚಿಸಿರುವ ‘ ನಾಟ್ಯ ಮಯೂರಿ ‘ ಎಂಬ ಕೃತಿಯಿಂದ ಆಯ್ದ ‘ ಪ್ರಜಾನಿಷ್ಠೆ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಈರಣ್ಣನು ಬೀರಣ್ಣನಿಂದ ಕ್ರಯಕ್ಕೆ ತೆಗೆದು ಕೊಂಡ ಹೊಲದಲ್ಲಿ ಉಳುಮೆ ಮಾಡುತ್ತಿರುವಾಗ ಒಂದು ಕೊಪ್ಪರಿಗೆ ಬಂಗಾರ ಸಿಗುತ್ತದೆ . ಅದಕ್ಕೆ ಪೂಜೆ ಮಾಡಿ ಈರಣ್ಣನು ಬೀರಣ್ಣನಿಗೆ “ ಇದು ನಿನ್ನ ಹೊಲದಲ್ಲಿ ಸಿಕ್ಕಿದ ಕೊಪ್ಪರಿಗೆ ತೆಗೆದು ಕೊ ‘ ಎಂದು ಕೊಡಲು ಬಂದ ಸಂದರ್ಭದಲ್ಲಿ ಬೀರಣ್ಣನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ : ಬನದಮ್ಮನಹಳ್ಳಿಯ ರೈತರಾದ ಬೀರಣ್ಣ , ಈರಣ್ಣನ ಪ್ರಾಮಾಣಿಕತೆಯು ಇಲ್ಲಿ ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ.
ಉ ) ಬಿಟ್ಟ ಸ್ಥಳದಲ್ಲಿ ಸೂಕ್ತಪದವನ್ನು ತುಂಬಿರಿ ,
1. ದ್ವಾರಸಮುದ್ರದ ಸೇನೆ ತಲಕಾಡಿನ ಕಡೆಗೆ ಚೈತ್ರಯಾತ್ರೆ ಹೊರಟಿತು .
2. ಮಾನವ ತನ್ನ ಮಾನವೀಯ ಗುಣಗಳನ್ನು ಗಾಳಿಯಲ್ಲಿ ತೂರಿಬಿಡಬಾರದು .
3.ನಿಮ್ಮ ಊರಿನ ಹಣ ನಮ್ಮೂರಿನ ಏಳಿಗೆಗಾಗಿಯೇ ವಿನಿಯೋಗವಾಗಲಿ ,
4. ಬನದಮ್ಮನ ಹಳ್ಳಿಯ ಜನರಿಗೆ ಸ್ವರ್ಗ ಒಂದೇ ಮೆಟ್ಟಿಲಲ್ಲಿ ಉಳಿಯಿತು .
ಭಾಷಾ ಚಟುವಟಿಕೆ
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
1. ಅನುನಾಸಿಕ ಸಂಧಿ ಎಂದರೇನು ? ಉದಾಹರಣೆ ಕೊಡಿ.
ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಎನ್ನುವರು.
ಉದಾಹರಣೆಗೆ :
ತತ್ + ಮಾಯ = ತನ್ಮಯ
ವಾಕ್ + ಮಯ = ವಾಙ್ಮಯ
ಜಗತ್ + ಮಾತಾ = ಜಗನ್ಮಾತಾ
2. ಕ್ರಿಯಾಸಮಾಸ ಎಂದರೇನು ? ಉದಾಹರಣೆ ಕೊಡಿ,
.ಕ್ರಿಯಾಸಮಾಸ- (ಉತ್ತರ ಪದಾರ್ಥ ಮುಖ್ಯ) ಪೂರ್ವಪದವು ಕಾರಕವಾಗಿದ್ದು ಉತ್ತರಪದವು ಕ್ರಿಯಾವಾಚಿಯಾಗಿದ್ದರೆ ಆಗುವ ಸಮಾಸವೇ ಕ್ರಿಯಾಸಮಾಸ.
ಉದಾಹರಣೆ :
ಮೈಯನ್ನು + ತಡವಿ = ಮೈದಡವಿ (ತಕಾರಕ್ಕೆ ದಕಾರಾದೇಶ)
ಕಣ್ಣನ್ನು + ಮುಚ್ಚಿ = ಕಣ್ಣುಮುಚ್ಚಿ
ತಲೆಯನ್ನು + ಕೊಡವಿ = ತಲೆಗೊಡವಿ ( ಕಕಾರಕ್ಕೆ ಗಕಾರಾದೇಶ )
ತಲೆಯನ್ನು + ತೆಗೆದನು = ತಲೆದೆಗೆದನು (ತಕಾರಕ್ಕೆ ದಕಾರಾದೇಶ )
ಕಣ್ಣನ್ನು + ತೆರೆದನು = ಕಣ್ಣು ತೆರೆದನು
ಕೈಯನ್ನು + ಪಿಡಿದು = ಕೈವಿಡಿದು (ಪಕಾರಕ್ಕೆ ವಕಾರಾದೇಶ )
ಕೈಯನ್ನು + ಕೊಟ್ಟನು = ಕೈಕೊಟ್ಟನು
ದಾರಿಯನ್ನು + ಕಾಣನು = ದಾರಿಗಾಣನು (ಕಕಾರಕ್ಕೆ ಗಕಾರಾದೇಶ )
ಆ ) ಕೊಟ್ಟಿರುವ ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ನಾಲ್ಕನೆಯ ಪದವನ್ನು ಬರೆಯಿರಿ.
1. ಯ್,ರ್,ಲ್,ವ್ : ಅವರ್ಗೀಯ ವ್ಯಂಜನಗಳು :: ಙ್, ಞ್, ಣ್, ನ್, ಮ್ : ಅನುನಾಸಿಕಾಕ್ಷರಗಳು.
2. ಷಡಂಗ : ಜಶ್ತ್ವ ಸಂಧಿ :: ಷಣ್ಮಾಸ : ಅನುನಾಸಿಕ ಸಂಧಿ.
3. ಈ ಹೊನ್ನು : ಗಮಕ ಸಮಾಸ :: ಸ್ಥಾಪನೆ ಮಾಡು : ಕ್ರಿಯಾಸಮಾಸ.
4. ವಾಗ್ದೇವಿ : ಜಶ್ತ್ವ ಸಂಧಿ :: ಜಗಜ್ಯೋತಿ : ಶ್ಚುತ್ವ ಸಂಧಿ.
ಕೃತಿಕಾರರ ಪರಿಚಯ
ಪ್ರಕೃತ ಜನಪದ ಕಲೆಗಳ ವೈಭವ – ಜಾನಪದ ಗದ್ಯ ಭಾಗವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕರ್ನಾಟಕ ಹೊರತಂದಿರುವ ‘ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ – ಕನ್ನಡ ಭಾಷ ” ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಈ ಗದ್ಯ ಭಾಗವನ್ನು ನಿಗದಿಪಡಿಸಿದೆ
ಅ ) ಕೊಟ್ಟಿರುವ ಪ್ರಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1 , ವೀರಗಾಸೆಯಲ್ಲಿ ಬಳಸುವ ವಾದ್ಯಗಳು ಯಾವುವು ?
ವೀರಗಾಸೆಯಲ್ಲಿ ಬಳಸುವ ವಾದ್ಯಗಳು ತಾಳ , ಶ್ರುತಿ , ಚಮಾಳ , ಓಲಗ , ಕರಡೆ ಬಳಕೆಯಾಗುತ್ತವೆ.
2 , ‘ ಕಂಸಾಳೆ ‘ ಎಂಬ ಹೆಸರು ಹೇಗೆ ಬಂದಿತು ?
ಕಂಸಾಳೆ ಎಂಬ ಪದ ಕಾಂಸತಾಲ್ಯ ಎಂಬ ಪದದ ತದ್ಭವ ರೂಪದಿಂದ ಬಂದಿದೆ .
3 , ಡೊಳ್ಳು ಕುಣಿತ ಯಾವ ಸಂಪ್ರದಾಯಕ್ಕೆ ಸೇರಿದ ಕುಣಿತವಾಗಿದೆ ?
ಡೊಳ್ಳು ಕುಣಿತವು ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತವಾಗಿದೆ .
4. ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಯಾವಾಗ ನಡೆಯುತ್ತದೆ ?
ಭರಮ ದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮವು ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವ ಕಾಲದಲ್ಲಿ ನಡೆಯುತ್ತದೆ.
5 , ಯಕ್ಷಗಾನದ ಮೂರು ಶೈಲಿಗಳು ಯಾವುವು ?
ಯಕ್ಷಗಾನದ ಮೂರು ಶೈಲಿಗಳು ತೆಂಕುತಿಟ್ಟು , ಬಡಗುತಿಟ್ಟು ಮತ್ತು ಬಡಬಡಗುತಿಟ್ಟು .
ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ .
1 , ವೀರಗಾಸೆ ಕುಣಿತದ ವೇಷಭೂಷಣಗಳು ಹೇಗಿರುತ್ತವೆ ? ವಿವರಿಸಿ.
ವೀರಗಾಸೆ ಕುಣಿತದವರ ವೇಷಭೂಷಣ ವಿಶೇಷವಾಗಿರುತ್ತದೆ . ಬಿಳಿಯ ಪಂಚೆಯ ವೀರಗಚ್ಚಿ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು , ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದ್ರಾಕ್ಷಿ ಸರ , ಹಣೆಗೆ ವಿಭೂತಿ , ಕರ್ಣಕುಂಡಲ , ಸೊಂಟಪಟ್ಟಿ , ಬಿಚ್ಚುಗತ್ತಿ , ಕಾಲ್ಗೆಜ್ಜೆ ಧರಿಸುತ್ತಾರೆ.
2 . ದೇವರಗುಡ್ಡರಿಗೆ ಕಂಸಾಳೆಯ ಬಗ್ಗೆ ಇರುವ ಗೌರವ ಭಾವನೆ ಹೇಗೆ ವ್ಯಕ್ತಗೊಂಡಿದೆ ? ವಿವರಿಸಿ.
ದೇವರಗುಡ್ಡರಿಗೆ ಕಂಸಾಳೆಯ ಬಗ್ಗೆ ಇರುವ ಗೌರವ ಭಾವನೆ ಏನೆಂದರೆ : ಕಂಸಾಳೆಯು ಮಲೆಯ ಮಹದೇಶ್ವರನ ಭಕ್ತರಾದ ದೇವರ ಗುಡ್ಡರು ಎಂಬ ಧಾರ್ಮಿಕ ವೃತ್ತಿಗಾಯಕರು ಬಳಸುವ ಕಂಚಿನ ತಾಳಗಳು . ಇದೊಂದು ಧಾರ್ಮಿಕ ಜನಪದವಾದ್ಯ ,ವೃತ್ತಿಗಾಯಕರು ಬಳಸುವ ವಾದ್ಯಗಳಲ್ಲೆಲ್ಲಾ ಕಾಣಿಕೆ ಪಡೆಯುವ ಪಾತ್ರೆಯಾಗಿಯೂ ಬಳಕೆಯಾಗುವ ಏಕಮಾತ್ರ ಸಾಧನ ಕಂಸಾಳೆ , ಗುಡ್ಡರು ಕಂಸಾಳೆಯ ಬಟ್ಟಲನ್ನು ಮಾತ್ರ ಮುಂದೆ ಒಡ್ಡಿ ಕಾಣಿಕೆಯನ್ನು ಸ್ವೀಕರಿಸಿ ಅನಂತರ ಜೋಳಿಗೆಗೆ ಸುರಿದುಕೊಳ್ಳುತ್ತಾರೆ.
ಇದೊಂದು ಪವಿತ್ರ ಸಾಧನವಾದುದರಿಂದ ಅರ್ಪಿಸುವ ಕಾಣಿಕೆ ಮಲೆಯ ಮಹದೇಶ್ವರನಿಗೆ ಸಮರ್ಪಿತವಾದಂತೆಯೇ ಎಂಬ ಭಾವನೆ ಗುಡ್ಡರಿಗೂ, ದಾನಿಗಳಿಗೂ ಇರುತ್ತದೆ . ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಪೂಜಿಸುತ್ತಾರೆ . ಕಂಸಾಳೆ ಕೈಗೆತ್ತಿಕೊಳ್ಳುವ ಮೊದಲು “ ಏಳ್ಳಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ ” ಎಂದು ನಮಸ್ಕರಿಸಿ ಕಣ್ಣಿಗೊತ್ತಿಕೊಂಡು ಆನಂತರ ಭಾರಿಸಲು ಪ್ರಾರಂಭಿಸುವರು.
3. ಭರಮದೇವರ ಗುಡಿಯ ಮುಂದೆ ಡೊಳ್ಳಿನ ಹಾಡುಗಳ ಕಾರ್ಯಕ್ರಮ ಹೇಗೆ ನಡೆಯುತ್ತದೆ ?ವಿವರಿಸಿ
ಭರಮದೇವರ ಗುಡಿಯ ಮುಂದೆ ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದವರು ಭರಮದೇವರ ಬ್ರಹ್ಮಪಲ್ಲಕ್ಕಿ ಉತ್ಸವ ಕಾಲದಲ್ಲಿ , ಶ್ರಾವಣ ಸೋಮವಾರ , ಅಮಾವಾಸ್ಯೆಯ ದಿನ ಮತ್ತು ಯುಗಾದಿಯಂದು ಡೊಳ್ಳು ಕುಣಿತ ,ಚರ್ಮವಾದ್ಯ ,ಕಾರ್ಯಕ್ರಮಗಳನ್ನು ನಡೆಸುತ್ತಾರೆ . ಅದರಂತೆ ಭಕ್ತರು ದೇವರ ಮುಮ್ಮೇಳದವರಾಗಿ ಒಬ್ಬರು ಡೊಳ್ಳು ಬಾರಿಸುತ್ತ ಹಾಡು ಹೇಳುತ್ತಾರೆ . ಹಿಮ್ಮೇಳದಲ್ಲಿ ಹಲವರು ತಾಳ ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ.
4, ಬಡಗುತಿಟ್ಟುಗಳ ವೈಶಿಷ್ಟ್ಯವೇನು ? ವಿವರಿಸಿ
ಯಕ್ಷಗಾನದ ಶೈಲಿಗಳು ತೆಂಕುತಿಟ್ಟು , ಬಡಗುತಿಟ್ಟು ಮತ್ತು ಬಡಬಡಗುತಿಟ್ಟು , ತೆಂಕುತಿಟ್ಟಿನ ಚಂಡೆ ವಾದಕನಿಗೆ ಆಸನದ ವ್ಯವಸ್ಥೆಯಿರುವುದಿಲ್ಲ . ಪಾತ್ರಧಾರಿಗಳಿಗೆ ಒಂದು ಸಿಂಹಾಸನವಿರುತ್ತದೆ . ಬಡಗುತಿಟ್ಟಿನಲ್ಲಿ ಇದರ ಬದಲಿಗೆ ರಥದ ಆಕೃತಿಯ ಆಸನವನ್ನು ಸಾಂಪ್ರದಾಯಿಕವಾಗಿ ಬಳಸುತ್ತಿದ್ದರು . ಹಿಮ್ಮೇಳದ ಪ್ರಮುಖ ವಾದ್ಯ ಪರಿಕರಗಳೆಂದರೆ ಚಂಡೆ , ಮದ್ದಳೆ , ಶ್ರುತಿ , ತಾಳ ಅಥವಾ ಜಾಗಟೆ . ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳು ತಿಟ್ಟು ಮತ್ತು ಪಾತ್ರಕ್ಕನುಗುಣವಾಗಿ ವೈವಿಧ್ಯಮಯವಾಗಿರುತ್ತವೆ . ತೆಂಕಿನಲ್ಲಿ ಅರ್ಥಗಾರಿಕೆಗೆ ಪ್ರಾಧಾನ್ಯತೆ ಇದ್ದು , ದೊಡ್ಡ ದೊಡ್ಡ ಹೆಜ್ಜೆ ಹಾಕಿ ಗಿರಕಿ ಹೊಡೆಯುವುದು ಇದರ ವೈಶಿಷ್ಟ್ಯ . ಬಡಗಿನಲ್ಲಿ ಕುಣಿತ ಹಾಗೂ ಅಭಿನಯಕ್ಕೆ ಪ್ರಾಧಾನ್ಯತೆ ಇದ್ದು, ಚಕ್ರಮಂಡಿ ಕುಣಿತವಿರುತ್ತದೆ .
5, ಚೌಕಿಯಲ್ಲಿ ನಡೆಯುವ ವಿಶೇಷಗಳೇನು ?
ರಂಗಸ್ಥಳ ಸಮೀಪವಿರುವ ನೇಪಥ್ಯವೇ ಚೌಕಿ ಅಥವಾ ಬಣ್ಣದ ಮನೆ . ಭಾಗವತರು ಹಿಮ್ಮೇಳ ಹಾಗೂ ಪಾತ್ರಧಾರಿಗಳೊಂದಿಗೆ ಇಲ್ಲಿಗೆ ಆಗಮಿಸುತ್ತಾರೆ. ಪಾತ್ರಧಾರಿಗಳು ತಮ್ಮ ಬಣ್ಣಗಳನ್ನು ತಾವೇ ಹಚ್ಚಿಕೊಳ್ಳುತ್ತಾರೆ . ಮೊದಲು ಚೌಕಿಯಲ್ಲಿ ಗಣಪತಿ ಪೂಜೆ ನಡೆಯುತ್ತದೆ . ನಂತರ ಕೋಡಂಗಿಗಳು ರಂಗ ಪ್ರವೇಶಿಸುತ್ತಾರೆ . ಗಣಪತಿ ಸ್ತುತಿಯ ಬಳಿಕ ವಿಷ್ಣು , ಪರಮೇಶ್ವರ, ದುರ್ಗೆ ಮೊದಲಾದ ದೇವತೆಗಳ ಸ್ತುತಿಯನ್ನು ಭಾಗವತರು ಮಾಡುತ್ತಾರೆ . ಹಾಡಿನ ನಂತರ ಭಾಗವತರು ಸಭಾವಂದನೆ ಮಾಡುತ್ತಾರೆ ಆನಂತರ ಕೋಡಂಗಿಗಳು ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ.
ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ .
1. ವೀರಗಾಸೆ ನರ್ತಕನ ಒಡಪಿನೊಂದಿಗಿನ ಕುಣಿತ ಹೇಗಿರುತ್ತದೆ ?
ವೀರಗಾಸೆ ನರ್ತಕನ ಒಡಪಿನೊಂದಿಗಿನ ಕುಣಿತ ಇಬ್ಬರಿಂದ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುತ್ತಾರೆ .ವೀರಗಾಸೆ ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ . ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಜನಪದ ಕಲೆಯಾಗಿದೆ . ಸಾಮಾನ್ಯವಾಗಿ ವೀರಗಾಸೆಯವರು ಬಿಳಿಯ ಪಂಚೆಯ ವೀರಗಚ್ಚೆ , ತಲೆಗೆ ಅರಿಶಿಣ ಅಥವಾ ನೀಲಿ ಬಣ್ಣದ ರುಮಾಲು , ಕಾವಿ ಬಣ್ಣದ ಕಸೆಯಂಗಿ , ಕೊರಳಲ್ಲಿ ರುದ್ರಾಕ್ಷಿ ಸರ , ಹಣೆಗೆ ವಿಭೂತಿ , ಕರ್ಣಕುಂಡಲ , ಸೊಂಟಪಟ್ಟಿ , ಬಿಚ್ಚುಗತ್ತಿ , ಕಾಲ್ಗೆಜ್ಜೆ ಧರಿಸುತ್ತಾರೆ.
“ ಆಹಹಹಾ ರುದ್ರಾ ಅಹಹಹಾ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ . ಈ ಕುಣಿತದಲ್ಲಿ ವೀರಭದ್ರನ ಹುಟ್ಟಿದ ಸಂದರ್ಭದ ವರ್ಣನೆಯನ್ನು ಮಾಡುತ್ತಾರೆ ” ವೀರಭದ್ರದೇವನು ಹುಟ್ಟಿದ ರೂಪ ಎಂತು ಎಂದೊಡೆ ಹುಟ್ಟಿಗಾದಲೇ ಹೂವಿನಗಾಸೆ ಮಂಜುಳಗಾಸೆ , ಬ್ರಹ್ಮಗಾಸೆ , ವಿಷ್ಣಗಾಸೆ , ರುದ್ರಗಾಸೆ , ಮೆಟ್ಟಿದ ಹೊನ್ನಾವಿಗೆ , ಸಾವಿರ ಶಿರ ,ಮೂರು ಸಾವಿರ ನಯನ ,ಎರಡು ಸಾವಿರ ಭುಜ , ಕೆಕ್ಕರಿಸಿದ ಕಣ್ಣು , ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರದೇವರು ಹೋಮದ ಕುಂಡದ ಒಳಗೆ ಹೇಗೆ ಬರುತ್ತಾರೆಂದರೆ ಎಂದು ಹೇಳುತ್ತಾ ಕುಣಿತ ಮಾಡುತ್ತಾರೆ.
2. ಬೀಸು ಕಂಸಾಳೆಯ ವೈಶಿಷ್ಟ್ಯತೆಯನ್ನು ,ವಿವರಿಸಿ
ಬೀಸುಕಂಸಾಳೆ ದೇವರಗುಡ್ಡರ ವಿಶಿಷ್ಟ ನೃತ್ಯ , ಕರ್ನಾಟಕದ ಜನಪದ ನೃತ್ಯಗಳಲ್ಲಿ ಅಪೂರ್ವವಾದುದು . ಇದರಲ್ಲಿ ತಾರ್ ಬಟ್ಲು , ತಟ್ ಬಟ್ಲು ಮುಂತಾದ ಬಗೆಗಳಿವೆ . ನಾಲ್ಕು ಮಂದಿ ಗುಡ್ಡರು ಒಂದು ಕಡೆ ನಿಂತು ಲಿಂಗ ಬಾ , ಮುದ್ದುಲಿಂಗ ಬಾ , ನಮ್ಮ ಮುದ್ದು ಮಾದಯ್ಯ ಲಿಂಗ ಬಾ ಎಂದು ಹಾಡುತ್ತಾರೆ . ಕಂಸಾಳೆ ಹಿಡಿದ ಗುಡ್ಡ ತಾಳಕ್ಕೆ ತಕ್ಕಂತೆ ವಿವಿಧ ವಿನ್ಯಾಸದಲ್ಲಿ ಬಾರಿಸುತ್ತಾ ಕುಣಿಯುತ್ತಾನೆ . ತಲೆಯು ಮೇಲೆ , ಬೆನ್ನಹಿಂದೆ , ಕಾಲ ಕೆಳಗೆ, ಕುಳಿತು , ನಿಂತು , ಬಾಗಿ , ಬಳುಕಿ ತೀವ್ರಗತಿಯಲ್ಲಿ ನರ್ತಿಸುವ ಭಂಗಿ ಆಶ್ಚರ್ಯಕರ ಹಾಗೂ ಅದ್ಭುತ . ಒಮ್ಮೊಮ್ಮೆ ಇಬ್ಬರು ಗುಡ್ಡರು ಕಲೆತು ನರ್ತಿಸುವುದುಂಟು . ಒಬ್ಬರ ಕಂಸಾಳೆಗೆ ಮತ್ತೊಬ್ಬರು ಕುಟ್ಟುತ್ತಾ ಕುಣಿಯುವ ವೈಖರಿ ಆಕರ್ಷಕವಾಗಿರುತ್ತದೆ .
3. ಡೊಳ್ಳು ಬಾರಿಸುವ ಕಲಾವಿದರ ವೇಷಭೂಷಣಗಳು ಹೇಗಿರುತ್ತವೆ ?
ಡೊಳ್ಳು ಬಾರಿಸುವ ಕಲಾವಿದರ ವೇಷಭೂಷಣಗಳು ವಿಶಿಷ್ಟವಾಗಿರುತ್ತವೆ. ಬೀರೇಶ್ವರ ಸಂಪ್ರದಾಯಕ್ಕೆ ಸೇರಿದ ಹಾಲುಮತ ಸಮುದಾಯದ ಕುಣಿತವಾಗಿದೆ. ಸಾಮಾನ್ಯವಾಗಿ ಡೊಳ್ಳು ಬಾರಿಸುವವರು ದೇಹದ ಮೇಲುಭಾಗಕ್ಕೆ ಕರಿಯ ಕಂಬಳಿಯನ್ನು ಸೊಂಟದ ಭಾಗಕ್ಕೆ ಮೊಳಕಾಲು ಮೇಲೆ ಬರುವಂತೆ ಕಚ್ಚೆಪಂಚೆಯನ್ನು ಉಡುತ್ತಾರೆ . ಕೆಲವೊಮ್ಮೆ ಹುಲಿಯ ಚರ್ಮದ ರೀತಿಯ ಉಡುಪನ್ನು ಧರಿಸುತ್ತಾರೆ . ಕುಣಿತದ ಕಾಲಕ್ಕೆ ವಾದ್ಯಗಾರರು ಹಸಿರು ಇಲ್ಲವೇ ಕೆಂಪು ಬಣ್ಣದ ಗಗ್ಗರಿ , ಅಂಗಿ ಟೊಪ್ಪಿಗೆ ಕೊಡುವರು . ಎರಡು ಕೈಗಳಲ್ಲೂ ಅದೇ ಬಣ್ಣದ ಕರವಸ್ತ್ರ ಹಿಡಿದಿರುತ್ತಾರೆ .
4. ಯಕ್ಷಗಾನದ ವೈಶಿಷ್ಟ್ಯ ಹಾಗೂ ಪೂರ್ವರಂಗದ ಉದ್ದೇಶವೇನು ?
ಯಕ್ಷಗಾನಕ್ಕೆ ದಶಾವತಾರ , ಬಯಲಾಟ , ಭಾಗವತರಾಟ ಎಂಬ ಹೆಸರೂ ಇವೆ . ಸಾಮಾನ್ಯವಾಗಿ ಬಯಲಾಟ ಪ್ರದರ್ಶಿತವಾಗುವುದು ಹಳ್ಳಿಯ ಬಯಲಿನಲ್ಲಿ . ಆದ್ದರಿಂದ ಅದು ಬಯಲಾಟ , ಯಕ್ಷಗಾನ ಕಲಿಸುವವನೇ ಭಾಗವತನಾದ್ದರಿಂದ ಭಾಗವತರಾಟ ಎಂಬ ಹೆಸರು ಬಂದಿದೆ. ಗೀತ , ಕುಣಿತ , ವೇಷಭೂಷಣ , ಮಾತುಗಾರಿಕೆ , ವಾದ್ಯ ಇವು ಬಯಲಾಟದ ಪಂಚ ಅಂಗಗಳು , ಯಕ್ಷಗಾನದಲ್ಲಿ ಸಾಮಾನ್ಯವಾಗಿ ಕಾಳಗ , ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂಧಿಸಿದ ಪ್ರಸಂಗಗಳು ಇರುತ್ತವೆ .
ಪುರುಷರೇ ಸ್ತ್ರೀ ವೇಷಹಾಕುವುದು ಯಕ್ಷಗಾನದ ವೈಶಿಷ್ಟ್ಯ . ಯಕ್ಷಗಾನದ ಪೂರ್ವರಂಗ ಎಂದು ಕರೆಯಲಾಗುವ ಬಾಲಗೋಪಾಲ , ಸ್ತ್ರೀ ವೇಷಗಳ ಉದ್ದೇಶ ಮುಂದಿನ ಕಥಾ ಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣಿಗೊಳಿಸುವುದೇ ಆಗಿದೆ. ಮತ್ತೆ ದೇವತಾಸುತ್ತಿ ಆದನಂತರ ಅಂದಿನ ಪ್ರಸಂಗಕ್ಕೆ ಸಂಬಂಧಿಸಿದಂತೆ ಒಡ್ಡೋಲಗ ಪ್ರಾರಂಭವಾಗುತ್ತದೆ . ಪಾತ್ರಧಾರಿಗಳು ಭಾಗವತರಿಗೆ , ಅನಂತರ ರಂಗಸ್ಥಳಕ್ಕೆ ವಂದಿಸಿ ಕುಣಿದು ತಮ್ಮ ಸಾಮರ್ಥ್ಯ ಪ್ರದರ್ಶಿಸುವರು.
ಈ ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ
1, ” ಆಹಹಾ ರುದ್ರಾ ಆಹಹಾ ದೇವಾ ”
ಆಯ್ಕೆ : ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ ಕನ್ನಡ ಭಾಷೆ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ಜನಪದ ಕಲೆಗಳ ವೈಭವ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ಅಹಹ ರುದ್ರಾ ಆಹಹ ದೇವಾ ” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ . ಈ ಕುಣಿತದಲ್ಲಿ ವೀರಭದ್ರನ ಹುಟ್ಟಿದ ಸಂದರ್ಭದ ವರ್ಣನೆಯನ್ನು ಮಾಡುತ್ತಾರೆ ” ಆ ಸಂದರ್ಭದಲ್ಲಿ ವೀರಗಾಸೆಯ ವೇಷಧಾರಿಗಳು ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ವೀರಗಾಸೆಯ ಅವರ ಕುಣಿತವು ರೌದ್ರಮಯವಾಗಿರುತ್ತದೆ . ವೀರಭದ್ರನ ಹುಟ್ಟಿನ ವರ್ಣನೆಯನ್ನು ನೃತ್ಯದ ಮೂಲಕ ಸ್ವಾರಸ್ಯಪೂರ್ಣವಾಗಿ ವರ್ಣಿಸಿಲಾಗಿದೆ.
2. “ ಭಲರೇ ವೀರ , ಆಹಹಾವೀರ ”
ಆಯ್ಕೆ : ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ ಕನ್ನಡ ಭಾಷೆ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ಜನಪದ ಕಲೆಗಳ ವೈಭವ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ವೀರಭದ್ರ ವೇಷಧಾರಿ ದಕ್ಷಯಾಗ , ವೀರಭದ್ರನ ಜನನ ಮತ್ತು ವೀರಭದ್ರನ ವಿಜಯ ಮುಂತಾದ ಒಡಪುಗಳನ್ನು ಹೇಳುತ್ತಾನೆ . ಮತ್ತೊಬ್ಬ ವ್ಯಕ್ತಿ “ ಭಲರೇ ವೀರ , ಆಹಹಾ ವೀರ ” ಎಂದು ಕಾಕು ಹೇಳುತ್ತ ಜಾಗಟೆ ಬಡಿಯುತ್ತ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ . ಆ ಸಂದರ್ಭದಲ್ಲಿ ಈ ಮಾತುನ್ನು ಬಂದಿದೆ.
ಸ್ವಾರಸ್ಯ : ವೀರಭದ್ರನ ವಿಜಯವನ್ನು ವೀರಗಾಸೆಯ ವೇಷಧಾರಿಯು ಕುಣಿಯುತ್ತಾ ಒಡಪಿಗೆ ತಕ್ಕಂತೆ ಕಾಲು ಹಾಕುತ್ತಾ ಕುಣಿಯುವುದು ರೋಮಾಂಚನಕಾರಿಯಾಗಿರುತ್ತದೆ ಎಂಬ ಅಂಶವು ಸ್ವಾರಸ್ಯ ಪೂರ್ವವಾಗಿ ಮೂಡಿ ಬಂದಿದೆ.
3. ಏಳ್ಮಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ.
ಆಯ್ಕೆ : ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ ಕನ್ನಡ ಭಾಷೆ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ಜನಪದ ಕಲೆಗಳ ವೈಭವ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.
ಸಂದರ್ಭ : ದೇವರ ಗುಡ್ಡರು ಕಾಣಿಕೆಯನ್ನು ಪಡೆಯುವ ಮೊದಲು ಕಂಸಾಳೆ ಬಟ್ಟಲನ್ನು ಮುಂದೆ ಚಾಚಿ ಕಾಣಿಕೆಯನ್ನು ಪಡೆಯುತ್ತಾರೆ , ಕಂಸಾಳೆಯ ಮಹಿಮೆ ಅಪಾರ ಎಂದು ಭಾವಿಸುವ ಗುಡ್ಡರು ಅದನ್ನು ಪೂಜಿಸುತ್ತಾರೆ , ಕೈಗೆತ್ತಿಕೊಳ್ಳುವ ಮೊದಲು ಏಳ್ಮಲೆ ಹೆತ್ತಯ್ಯ ನಮ್ಮಪ್ಪಾಜಿ ಮಾಯ್ಕಾರ ಮಾದೇವ ನಿನ್ನ ಪಾದವೇ ಗತಿಕಣಪ್ಪ ಶರಣು ಶರಣಾರ್ಥಿ. ಎಂದು ನಮಸ್ಕರಿಸುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ : ದೇವರ ಗುಡ್ಡರು ಮಲೆಮಹೇಶ್ವರನ ಮೇಲೆ ಇಟ್ಟಿರುವ ಭಕ್ತಿಯಷ್ಟೆ ಕಂಸಾಳೆಯ ಮೇಲೂ ಇಟ್ಟಿದ್ದಾರೆ ಎಂಬುದು ಇಲ್ಲಿ ಸ್ವಾರಸ್ಯಕರವಾಗಿ ಮೂಡಿಬಂದಿದೆ .
4. “ ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ ”
ಆಯ್ಕೆ : ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ ಕನ್ನಡ ಭಾಷೆ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ಜನಪದ ಕಲೆಗಳ ವೈಭವ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಹಿಮ್ಮೇಳದಲ್ಲಿ ಹಲವರು ತಾಳ ಮತ್ತು ಕೊಳಲು ಬಾರಿಸುತ್ತ ಮುಮ್ಮೇಳದವರು ಹೇಳಿಕೊಟ್ಟ ಹಾಡಿನ ಭಾಗವನ್ನು ಹೇಳುತ್ತಾರೆ , ಕಥೆಗಳನ್ನು ರಗಳೆಯ ಧಾಟಿಯಲ್ಲಿ ಹಾಡುವಾಗ ಈ ಸಾಲುಗಳನ್ನು ಹಾಡುತ್ತಾರೆ ಆ ಸಂದರ್ಭದಲ್ಲಿ ಈ ರೀತಿ ಹಾಡಿದ್ದಾರೆ .
ಸ್ವಾರಸ್ಯ : ಸಾಮಾನ್ಯವಾಗಿ ಹಾಡಿನ ವಿಷಯ ದೈವಮಹಿಮೆ ಅಥವಾ ದೈವಭಕ್ತರ ಕಥೆಯಾಗಿರುತ್ತದೆ . ಎಂಬುದನ್ನು ಸ್ವಾರಸ್ಯಕರವಾಗಿ ಮೂಡಿ ಬಂದಿದೆ .
5 , “ ದುಷ್ಟ ನಿಗ್ರಹ , ಶಿಷ್ಟ ಪರಿಪಾಲನೆ ”
ಆಯ್ಕೆ : ಈ ವಾಕ್ಯವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಕಟಿಸಿರುವ ಜಾನಪದ ವಿಷಯ ವಿಶ್ವಕೋಶ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಹೊರತಂದಿರುವ ವಿಷಯ ಸಂಪದೀಕರಣ ಸಂಪನ್ಮೂಲ ಸಾಹಿತ್ಯ ಕನ್ನಡ ಭಾಷೆ ಕೃತಿಗಳಲ್ಲಿರುವ ಸಂಪನ್ಮೂಲದ ಆಧಾರದಿಂದ ಆಯ್ದ ಜನಪದ ಕಲೆಗಳ ವೈಭವ ಎಂಬ ಗದ್ಯಭಾಗದಿಂದ ಆರಿಸಲಾಗಿದೆ .
ಸಂದರ್ಭ : ಕಾಳಗ , ಸಂಹಾರ ಮತ್ತು ಕಲ್ಯಾಣಗಳಿಗೆ ಸಂಬಂಧ ಪಟ್ಟ ಏಕ ಪ್ರಸಂಗಗಳೇ ಹೆಚ್ಚು ಕಾಳಗವಿಲ್ಲದೇ ಯಕ್ಷಗಾನವಾಗಲೀ, ಬಯಲಾಟವಾಗಲೀ ಇರುವುದಿಲ್ಲ , ಯಕ್ಷಗಾನ ಪ್ರಸಂಗ ರಚಿಸಿದವರು ದುಷ್ಟನಿಗ್ರಹ ಶಿಷ್ಟಪರಿಪಾಲನೆ ತತ್ವಗಳನ್ನು ಪ್ರಸಂಗಗಳಲ್ಲಿ ಅಳವಡಿಸಿರುತ್ತಾರೆ. ಆ ಸಂದರ್ಭದಲ್ಲಿ ಈ ಮೇಲಿನ ಮಾತು ಬಂದಿದೆ .
ಸ್ವಾರಸ್ಯ : ಯಕ್ಷಗಾನ ಜನರಲ್ಲಿ ಧಾರ್ಮಿಕ ಮತ್ತು ನೀತಿ ಪ್ರಶ್ನೆಗಳನ್ನು ಬೆಳೆಸಲು ಸಹಕಾರಿಯಾಗಿದೆ . ಎಂಬುದು ಸ್ವಾರಸ್ಯ ಪೂರ್ಣವಾಗಿ ವರ್ಣಿಸಲಾಗಿದೆ .
ಉ) ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ ,
1.ವೀರಗಾಸೆ ......... ಸಂಪ್ರದಾಯಕ್ಕೆ ಸೇರಿದ ನೃತ್ಯ .
( ಶೈವ . ವೈಷ್ಣವ , ಬೀರೇಶ್ವರ . ಶ್ರೀವೈಷ್ಣವ )
2. ಕಂಸಾಳೆಗುಡ್ಡರು ಕಂಸಾಳೆಯನ್ನು ಕೈಗೆತ್ತಿಕೊಳ್ಳವ ಮೊದಲು ......... ದೇವರನ್ನು ಸ್ಮರಿಸುತ್ತಾರೆ .
( ಭೈರವೇಶ್ವರ , ಮಹದೇಶ್ವರ , ನಂಜುಡೇಶ್ವರ , ವೈದ್ಯೇಶ್ವರ )
3 , ಡೊಳ್ಳು ಕುಣಿತದ ಕಲಾವಿದರು ಹಾಡುವ ಬೀರೇಶ್ವರ ದೇವರ ಹಾಡು ......... ಗೆ ಉದಾಹರಣೆ .
( ಭಕ್ತಿಗೀತೆ , ಭಾವಗೀತೆ ,ಕಾವ್ಯಗೀತೆ, ಜನಪದಗೀತೆ )
4. ಯಕ್ಷಗಾನದಲ್ಲಿ ರಂಗಸ್ಥಳದ ಸಮೀಪವಿರುವ ನೇಪಥ್ಯವನ್ನು .......... ಎಂದು ಕರೆಯುತ್ತಾರೆ
( ವೇದಿಕೆ , ತೆರೆ , ಸಭಾಮಂಟಪ , ಚೌಕಿ )
ಊ) ಹೊಂದಿಸಿ ಬರೆಯಿರಿ | ||
ಅ ಪಟ್ಟಿ | ಆ ಪಟ್ಟಿ | |
1 | ವೀರಭದ್ರ | ಕಾಂಸತಾಲ್ಯ (2) |
2 | ಕಂಸಾಳೆ | ಚರ್ಮವಾದ್ಯ (3) |
3 | ಡೊಳ್ಳು | ಮಹಾಕಾವ್ಯ |
4 | ಯಕ್ಷಗಾನ | ಒಡಪು (1) |
5 | ಮಹದೇಶ್ವರ | ವೇಷಭೂಷಣ |
| ಭಾಗವತ (4) | |
ಏಳ್ಮಲೆ ಹೆತ್ತಯ್ಯ (5) | ||
|
| ದೀವಟಿಗೆ |