ಧನಾತ್ಮಕ ಚಿಂತನೆ ನಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಸಂಬಂಧಿಸಿದ ಕಥೆಯಾಗಿದೆ, ಜೀವನ ಎನ್ನುವುದು ಏರಿಳಿತಗಳ ಸಮ್ಮಿಶ್ರಣ, ಜೀವನದಲ್ಲಿಏನಾದರೂ, ಆಶಾವಾದಿಯಾಗಿರುವುದು ಅತೀ ಅವಶ್ಯಕ.
ಒಮ್ಮೆ ಗರ್ಭ ಧರಿಸಿದ ಜಿಂಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು, ಸಂಜೆಯ ಸಮಯವಾಗಿದ್ದು, ಕಪ್ಪು ಮೋಡಗಳಿಂದ ಅವರಿಸಿಕೊಂಡಿದ್ದು, ಮೋಡಗಳ ಘರ್ಷಣೆಯಿಂದ ಕಾಡಿಗೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತ್ತು. ಕಾಡಿನ ಬೆಂಕಿಯಿಂದಾಗಿ ಜಿಂಕೆ ತನ್ನ ವಾಸ ಸ್ಠಳವನ್ನು ಬಿಡಬೇಕಾಯಿತು. ಜಿಂಕೆ ತನ್ನ ಮಕ್ಕಳಿಗೆ ಜನ್ಮ ನೀಡಲು ಜಾಗ ಹುಡುಕುತ್ತಾ ಬರುತ್ತಿರುವಾಗ ಧಣಿವಾರಿಸಿಕೊಳ್ಳಲು ನದಿಯ ಬಳಿ ನೀರು ಕುಡಿಯಲು ಬಂದಿತ್ತು. ಜಿಂಕೆಯು ನದಿಯಲ್ಲಿ ತನ್ನ ಮುಖವನ್ನು ನೋಡಿತು, ಮುಖದಲ್ಲಿ ಅತಂಕ ಎದ್ದು ಕಾಣುತ್ತಿತ್ತು, ಏಕೆಂದರೆ ತನ್ನ ವಾಸ ಸ್ಥಳಕ್ಕೆ ಬೆಂಕಿ ಬಿದ್ದಿದೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ತನ್ನ ಮಕ್ಕಳಿಗೆ ಜನ್ಮ ನೀಡಬೇಕಾದ ಸಂದರ್ಭ ಎದುರಾಗಿತ್ತು.
ಜಿಂಕೆ ಇದೇ ಯೋಚನೆಯಲ್ಲಿ ನೀರು ಕುಡಿಯುತ್ತಿರುವಾಗ, ಅದರ ಎಡಭಾಗದ ಪೊದೆಗಳ ಬಳಿ ಶಬ್ಧ ಕೇಳಿಸಿತು. ತಿರುಗಿ ನೋಡಿದಾಗ, ಪೊದೆಗಳ ಹಿಂದೆ ಬೇಟೆಗಾರ ಬಾಣದಿಂದ ತನ್ನನ್ನು ಗುರಿಯಾಗಿಸಿಕೊಂಡಿರುವುದನ್ನು ಗಮನಿಸಿತು. ಜಿಂಕೆಯು ಮೊದಲೇ ಉದ್ದಿಗ್ನಗೊಂಡಿತ್ತು, ಈಗ ಬೇಟೆಗಾರನನ್ನು ಕಂಡು ಇನ್ನಷ್ಟು ಭಯಗೊಂಡಿತು. ಜಿಂಕೆಯು ಇದರಿಂದ ತಪ್ಪಿಸಿಕೊಳ್ಳಲು ಬಲಕ್ಕೆ ತಿರುಗಿ ಓಡಬೇಕೆಂದು ಮನ್ಸಸಿನಲ್ಲಿ ಯೋಚಿಸಿ ಬಲಕ್ಕೆ ತಿರುಗಿದಾಗ, ಉಗ್ರ ಸಿಂಹವು ತನ್ನ ಮೇಲೆ ದಾಳಿ ಮಾಡಲು ಪೊದೆಗಳಲ್ಲಿ ಅಡಗಿಕೊಂಡಿರುವುದನ್ನು ನೋಡಿತು.
ಜಿಂಕೆಗೆ ಈಗ ಸುತ್ತಲೂ ಶತ್ರುಗಳು, ಒಂದು ಬದಿಯಲ್ಲಿ ಬೇಟೆಗಾರ, ಇನ್ನೊಂದು ಬದಿಯಲ್ಲಿ ಸಿಂಹ, ಮೂರನೇ ಬದಿಯಲ್ಲಿ ಕಾಡ್ಗಿಚ್ಚು ಮತ್ತು ನಾಲ್ಕನೇ ಬದಿಯಲ್ಲಿ ಆಳವಾದ ನದಿ, ಆ ನದಿಯಲ್ಲಿಯೂ ತುಂಬಾ ಮೋಸಳೆಗಳಿದ್ದವು. ಈಗ ಸಾವು ಖಚಿತ ಎಂದು ತನ್ನೊಳಗೆ ಯೋಚಿಸಿ, ಏಕೆ ಭಯ ಪಡಬೇಕು ಎಂದು ಧೈರ್ಯದಿಂದ ನೀರು ಕುಡಿಯಲು ಪ್ರಾರಂಭಿಸಿ ಬಳ್ಳೆಯದಕ್ಕಾಗಿ ಅಶಿಸತೊಡಗಿತು.
ಬೇಟೆಗಾರನು ತನ್ನ ಬಾಣವನ್ನು ಬಿಡಲು ಮುಂದಾದಾಗ, ಆಕಾಶದಲ್ಲಿ ಬಲವಾದ ಮಿಂಚಿನ ಶಬ್ಧವು ಕೇಳಿಸಿತು. ಮಿಂಚಿನಿಂದ ಬೇಟೆಗಾರನ ಕೈಗಳು ನಡುಗಿ ಗುರಿಯನ್ನು ತಪ್ಪಿ ಬಾಣವು ಸಿಂಹಕ್ಕೆ ಹೊಡೆದ ಸಿಂಹವು ಗಾಯಗೊಂಡಿತು ಮತ್ತು ಸಿಂಹದ ಕಣ್ಣುಗಳು ಬೇಟೆಗಾರನ ಮೇಲೆ ಬಿತ್ತು. ಸಿಂಹವು ಬೇಟೆಗಾರನ ಮೇಲೆ ದಾಳಿ ಮಾಡಲು ಬೇಟೆಗಾರನ ಕಡೆಗೆ ಓಡಲಾರಂಭಿಸಿತು, ಬೇಟೆಗಾರ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಓಡಲು ಪ್ರಾರಂಭಿಸಿದನು ಅವನನ್ನು ಸಿಂಹವು ಹಿಂಬಾಲಿಸಲು ಅದೇ ಸಮಯಕ್ಕೆ ಮಿಂಚು ಸಹಿತ ಭಾರೀ ಮಳೆ ಸುರಿಯಲಾರಂಭಿಸಿತು ಆಗ ಕಾಡ್ಗಿಚ್ಚು ನಂದಿತು.
ಇತ್ತ ಜಿಂಕೆಯು ನೀರು ಕುಡಿದು ಕತ್ತೆತ್ತಿ ನೋಡಲು ಬೇಟೆಗಾರನಾಗಲೀ ಅಥವಾ ಸಿಂಹವಾಗಲೀ ಇಲ್ಲದಿರುವುದನ್ನು ಕಂಡಿತು ಕಾಡ್ಗಿಚ್ಚು ಕೂಡ ನಂದಿಹೋಗಿತ್ತು. ಜಿಂಕೆ, ಸಮಯ ವ್ಯರ್ಥ ಮಾಡದೆ ಅಲ್ಲಿಂದ ಓಡಿಹೋಯಿತು. ಸುರಕ್ಷಿತ ಸ್ಥಳಕ್ಕೆ ತೆರಳಿ ಮೂರು ಮಕ್ಕಳಿಗೆ ಜನ್ಮ ನೀಡಿತು.
ನಮ್ಮ ಜೀವನದಲ್ಲಿ ಕೆಲವು ಬಾರಿ ಎಲ್ಲಾ ಕಡೆಯಿಂದ ತೊಂದರೆಗಳಿಂದ ಸುತ್ತುವರೆದಿರುವಾಗ ಮತ್ತು ಯಾವುದೇ ಮಾರ್ಗವನ್ನು ಇಲ್ಲದಿರುವಾಗ ನಾವು ಧೈರ್ಯ ಕಳೆದುಕೊಳ್ಳಬಾರದು, ಎಷ್ಟೇ ಸಮಸ್ಯೆಗಳು ಬಂದರೂ ಪರವಾಗಿಲ್ಲ. ಯಾವುದೇ ವಿಪತ್ತು ಶಾಶ್ವತವಾಗಿ ಉಳಿಯುವುದಿಲ್ಲ. ಓಡುವ ಅಥವಾ ಪ್ರತಿಕೂಲತೆಯನ್ನು ತಪ್ಪಿಸುವ ಬದಲು, ಅದನ್ನು ಮುಕ್ತವಾಗಿ ಎದುರಿಸಿವ ಬಗ್ಗೆ.ಧನಾತ್ಮಕವಾಗಿ ಯೋಚಿಸಬೇಕು. ಇದರಿಂದ ನಾವು ಬದುಕಿನ ಭರವಸೆಯನ್ನು ಹೊಂದುತ್ತೇವೆ ಮತ್ತು ಓಮ್ಮೆ ನಾವು ಯಾವುದಾದರೂ ಸಾಧ್ಯ ಎಂದು ಭರವಸೆಯನ್ನು ಹೊಂದಿದರೆ, ಅದು ನಮ್ಮನ್ನು ಎಂತಹ ಕಷ್ಟವನ್ನಾದರೂ ಎದುರಿಸುವಂತೆ ಮಾಡುತ್ತದೆ.