ನಾತ್ಮಕ ಚಿಂತನೆ ನಮ್ಮ ಜೀವನವನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಸಂಬಂಧಿಸಿದ ಕಥೆಯಾಗಿದೆ, ಜೀವನ ಎನ್ನುವುದು ಏರಿಳಿತಗಳ ಸಮ್ಮಿಶ್ರಣ, ಜೀವನದಲ್ಲಿಏನಾದರೂ, ಆಶಾವಾದಿಯಾಗಿರುವುದು ಅತೀ ಅವಶ್ಯಕ.

ಒಮ್ಮೆ ಗರ್ಭ ಧರಿಸಿದ ಜಿಂಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತು, ಸಂಜೆಯ ಸಮಯವಾಗಿದ್ದು, ಕಪ್ಪು ಮೋಡಗಳಿಂದ ಅವರಿಸಿಕೊಂಡಿದ್ದು, ಮೋಡಗಳ ಘರ್ಷಣೆಯಿಂದ ಕಾಡಿಗೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡಿತ್ತು. ಕಾಡಿನ ಬೆಂಕಿಯಿಂದಾಗಿ ಜಿಂಕೆ ತನ್ನ ವಾಸ ಸ್ಠಳವನ್ನು ಬಿಡಬೇಕಾಯಿತು. ಜಿಂಕೆ ತನ್ನ ಮಕ್ಕಳಿಗೆ ಜನ್ಮ ನೀಡಲು ಜಾಗ ಹುಡುಕುತ್ತಾ ಬರುತ್ತಿರುವಾಗ ಧಣಿವಾರಿಸಿಕೊಳ್ಳಲು ನದಿಯ ಬಳಿ ನೀರು ಕುಡಿಯಲು ಬಂದಿತ್ತು. ಜಿಂಕೆಯು ನದಿಯಲ್ಲಿ ತನ್ನ ಮುಖವನ್ನು ನೋಡಿತು, ಮುಖದಲ್ಲಿ ಅತಂಕ ಎದ್ದು ಕಾಣುತ್ತಿತ್ತು, ಏಕೆಂದರೆ ತನ್ನ ವಾಸ ಸ್ಥಳಕ್ಕೆ ಬೆಂಕಿ ಬಿದ್ದಿದೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ತನ್ನ ಮಕ್ಕಳಿಗೆ ಜನ್ಮ ನೀಡಬೇಕಾದ ಸಂದರ್ಭ ಎದುರಾಗಿತ್ತು
ಜಿಂಕೆ ಇದೇ ಯೋಚನೆಯಲ್ಲಿ ನೀರು ಕುಡಿಯುತ್ತಿರುವಾಗ, ಅದರ ಎಡಭಾಗದ ಪೊದೆಗಳ ಬಳಿ ಶಬ್ಧ ಕೇಳಿಸಿತು. ತಿರುಗಿ ನೋಡಿದಾಗ, ಪೊದೆಗಳ ಹಿಂದೆ ಬೇಟೆಗಾರ ಬಾಣದಿಂದ ತನ್ನನ್ನು ಗುರಿಯಾಗಿಸಿಕೊಂಡಿರುವುದನ್ನು ಗಮನಿಸಿತು. ಜಿಂಕೆಯು ಮೊದಲೇ ಉದ್ದಿಗ್ನಗೊಂಡಿತ್ತು, ಈಗ ಬೇಟೆಗಾರನನ್ನು ಕಂಡು ಇನ್ನಷ್ಟು ಭಯಗೊಂಡಿತು. ಜಿಂಕೆಯು ಇದರಿಂದ ತಪ್ಪಿಸಿಕೊಳ್ಳಲು ಬಲಕ್ಕೆ ತಿರುಗಿ ಓಡಬೇಕೆಂದು ಮನ್ಸಸಿನಲ್ಲಿ ಯೋಚಿಸಿ ಬಲಕ್ಕೆ ತಿರುಗಿದಾಗ, ಉಗ್ರ ಸಿಂಹವು ತನ್ನ ಮೇಲೆ ದಾಳಿ ಮಾಡಲು ಪೊದೆಗಳಲ್ಲಿ ಅಡಗಿಕೊಂಡಿರುವುದನ್ನು ನೋಡಿತು.

ಜಿಂಕೆಗೆ ಈಗ ಸುತ್ತಲೂ ಶತ್ರುಗಳು, ಒಂದು ಬದಿಯಲ್ಲಿ ಬೇಟೆಗಾರ, ಇನ್ನೊಂದು ಬದಿಯಲ್ಲಿ ಸಿಂಹ, ಮೂರನೇ ಬದಿಯಲ್ಲಿ ಕಾಡ್ಗಿಚ್ಚು ಮತ್ತು ನಾಲ್ಕನೇ ಬದಿಯಲ್ಲಿ ಆಳವಾದ ನದಿ, ಆ ನದಿಯಲ್ಲಿಯೂ ತುಂಬಾ ಮೋಸಳೆಗಳಿದ್ದವು.  ಈಗ ಸಾವು ಖಚಿತ ಎಂದು ತನ್ನೊಳಗೆ ಯೋಚಿಸಿ, ಏಕೆ ಭಯ ಪಡಬೇಕು ಎಂದು ಧೈರ್ಯದಿಂದ ನೀರು ಕುಡಿಯಲು ಪ್ರಾರಂಭಿಸಿ ಬಳ್ಳೆಯದಕ್ಕಾಗಿ ಅಶಿಸತೊಡಗಿತು.                                                                                                 
ಬೇಟೆಗಾರನು ತನ್ನ ಬಾಣವನ್ನು ಬಿಡಲು ಮುಂದಾದಾಗ, ಆಕಾಶದಲ್ಲಿ ಬಲವಾದ ಮಿಂಚಿನ ಶಬ್ಧವು ಕೇಳಿಸಿತು. ಮಿಂಚಿನಿಂದ ಬೇಟೆಗಾರನ ಕೈಗಳು ನಡುಗಿ ಗುರಿಯನ್ನು ತಪ್ಪಿ ಬಾಣವು ಸಿಂಹಕ್ಕೆ ಹೊಡೆದ ಸಿಂಹವು ಗಾಯಗೊಂಡಿತು ಮತ್ತು ಸಿಂಹದ ಕಣ್ಣುಗಳು ಬೇಟೆಗಾರನ ಮೇಲೆ ಬಿತ್ತು. ಸಿಂಹವು ಬೇಟೆಗಾರನ ಮೇಲೆ ದಾಳಿ ಮಾಡಲು ಬೇಟೆಗಾರನ ಕಡೆಗೆ ಓಡಲಾರಂಭಿಸಿತು, ಬೇಟೆಗಾರ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಓಡಲು ಪ್ರಾರಂಭಿಸಿದನು ಅವನನ್ನು ಸಿಂಹವು ಹಿಂಬಾಲಿಸಲು ಅದೇ ಸಮಯಕ್ಕೆ  ಮಿಂಚು ಸಹಿತ ಭಾರೀ ಮಳೆ ಸುರಿಯಲಾರಂಭಿಸಿತು ಆಗ ಕಾಡ್ಗಿಚ್ಚು ನಂದಿತು. ಇತ್ತ  ಜಿಂಕೆಯು ನೀರು ಕುಡಿದು ಕತ್ತೆತ್ತಿ ನೋಡಲು ಬೇಟೆಗಾರನಾಗಲೀ ಅಥವಾ ಸಿಂಹವಾಗಲೀ ಇಲ್ಲದಿರುವುದನ್ನು ಕಂಡಿತು ಕಾಡ್ಗಿಚ್ಚು ಕೂಡ ನಂದಿಹೋಗಿತ್ತು. ಜಿಂಕೆ  ಸಮಯ ವ್ಯರ್ಥ ಮಾಡದೆ ಅಲ್ಲಿಂದ ಓಡಿಹೋಯಿತು. ಸುರಕ್ಷಿತ ಸ್ಥಳಕ್ಕೆ ತೆರಳಿ ಮೂರು ಮಕ್ಕಳಿಗೆ ಜನ್ಮ ನೀಡಿತು.                                                                                      
ನಮ್ಮ ಜೀವನದಲ್ಲಿ ಕೆಲವು ಬಾರಿ ಎಲ್ಲಾ ಕಡೆಯಿಂದ ತೊಂದರೆಗಳಿಂದ ಸುತ್ತುವರೆದಿರುವಾಗ ಮತ್ತು ಯಾವುದೇ ಮಾರ್ಗವನ್ನು ಇಲ್ಲದಿರುವಾಗ ನಾವು ಧೈರ್ಯ ಕಳೆದುಕೊಳ್ಳಬಾರದು, ಎಷ್ಟೇ ಸಮಸ್ಯೆಗಳು ಬಂದರೂ ಪರವಾಗಿಲ್ಲ. ಯಾವುದೇ ವಿಪತ್ತು ಶಾಶ್ವತವಾಗಿ ಉಳಿಯುವುದಿಲ್ಲ. ಓಡುವ ಅಥವಾ ಪ್ರತಿಕೂಲತೆಯನ್ನು ತಪ್ಪಿಸುವ ಬದಲು, ಅದನ್ನು ಮುಕ್ತವಾಗಿ  ಎದುರಿಸಿವ ಬಗ್ಗೆ.

ಧನಾತ್ಮಕವಾಗಿ ಯೋಚಿಸಬೇಕು. ಇದರಿಂದ ನಾವು ಬದುಕಿನ ಭರವಸೆಯನ್ನು ಹೊಂದುತ್ತೇವೆ ಮತ್ತು ಓಮ್ಮೆ ನಾವು ಯಾವುದಾದರೂ ಸಾಧ್ಯ ಎಂದು ಭರವಸೆಯನ್ನು ಹೊಂದಿದರೆ, ಅದು ನಮ್ಮನ್ನು ಎಂತಹ ಕಷ್ಟವನ್ನಾದರೂ ಎದುರಿಸುವಂತೆ  ಮಾಡುತ್ತದೆ.
ನಾವು ಆಗಾಗ್ಗೆ ಸಮಯದ ಕೊರತೆಯ ಬಗ್ಗೆ ದೂರು ನೀಡುತ್ತೇವೆ, ಇದು ಸರಿಯೇ?  ಖಂಡಿತವಾಗಿಯೂ ಇಲ್ಲ,  ಸಮಯದ ಹಿಂದೆ ಓಡುವ ಭರದಲ್ಲಿ ಯಾವುದು ಮುಖ್ಯ, ಯಾವುದು ಅಮುಖ್ಯ ಎಂಬುದನ್ನು ಅರಿಯುವುದು ಜೀವನದಲ್ಲಿ ಬಹಳ ಮುಖ್ಯ. 

ಒಂದು ದಿನ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿ ಗಳಿಗೆ ತಮ್ಮ ಜೀವನದಲ್ಲಿ ಎಂದಿಗೂ ಮರೆಯದೆ ಉಳಿಯುವ  ಸಮಯ ನಿರ್ವಹಣೆಯ ಬಗ್ಗೆ ಉಪನ್ಯಾಸ ನೀಡಲು ಪ್ರಾರಂಭಿಸಿದರು, ಪ್ರಾಧ್ಯಾಪಕರು ವಿದ್ಯಾರ್ಥಿಗಳ ಮುಂದೆ ಖಾಲಿ ಜಾರ್ ಅನ್ನು ಹೊರತೆಗೆದು ತನ್ನ ಮುಂದೆ ಮೇಜಿನ ಮೇಲೆ ಇಟ್ಟರು. ಅವರು ಮುಷ್ಟಿಯ ಗಾತ್ರದ ಕಲ್ಲುಗಳನ್ನು ಜಾರ್‌ಗೆ ಹಾಕಿದರು. ಜಾರ್ ತುಂಬಿದ ಮೇಲೆ, “ಜಾರ್ ತುಂಬಿದೆಯೇ?” ಎಂದು ಕೇಳಿದರು. ಹೌದು, ಜಾರ್ ತುಂಬಿದೆ ಎಂದು ವಿದ್ಯಾರ್ಥಿಗಳು ಹೇಳಿದರು.  
ಇಲ್ಲ ಎಂದು ಉತ್ತರಿಸುತ್ತಾ ಅವರು ಜಾರ್‌ಗೆ ಸಣ್ಣ ಬೆಣಚುಕಲ್ಲುಗಳನ್ನು ಸೇರಿಸಿ ಜಾರ್‌ನ್ನು ಸ್ವಲ್ಪ ಅಲುಗಾಡಿಸಿದರು ನಂತರ ಅವರು ಮತ್ತೆ ಕೇಳಿದರು, "ಈಗ ಜಾರ್ ತುಂಬಿದೆಯೇ?" ಹೌದು ಎಂಬ ಉತ್ತರ ಮತ್ತೆ ಕೆಲ ವಿದ್ಯಾರ್ಥಿಗಳು ಹೇಳಿದರು. ಇಲ್ಲ ಎಂದ ಪ್ರಾಧ್ಯಾಪಕರು ಉಳಿದ ಖಾಲಿ ಜಾಗವನ್ನು ತುಂಬಲು ಜಾರ್‌ಗೆ ಮರಳನ್ನು ಸುರಿದರು. ನಂತರ ಜಾರ್ ಸಂಪೂರ್ಣವಾಗಿ ತುಂಬಿದೆ ಎಂದು ಉತ್ತರಿಸಿದ ಎಲ್ಲಾ ವಿದ್ಯಾರ್ಥಿಗಳು ಆಗ ಪ್ರಾಧ್ಯಾಪಕರು  "ಈ ಪ್ರಯೋಗದ  ಅರ್ಥವೇನು?" ಎಂದು ಮರು ಪ್ರಶ್ನಿಸಿದ್ದಾಗ, ಒಬ್ಬ ವಿದ್ಯಾರ್ಥಿಯು ಉತ್ತರಿಸಿದ, "ನಾವು ಏಷ್ಟೇ  ಕಾರ್ಯನಿರತವಾಗಿದ್ದರೂ  ನಾವು ಯಾವಾಗಲೂ ಹೆಚ್ಚು ಕೆಲಸ ನಿರ್ವಹಿಸಲು ಸದಾ ಸಿದ್ದರಾಗಿರಬೇಕು
ಆ ವಿದ್ಯಾರ್ಥಿಯ ಉತ್ತರ ತಪ್ಪು ಎಂದು  ಹೇಳಿ ಅದರ ವಿವರಣೆ ಯನ್ನು ಈ ರೀತಿ ಕೊಡುತ್ತಾ ಮುಂದುವರೆದರು ಜಾರ್ ಒಬ್ಬರ ಜೀವನದಲ್ಲಿ ಇರುವ ಎಲ್ಲವನ್ನೂ ಪ್ರತಿನಿಧಿಸುತ್ತದೆ, ಕಲ್ಲುಗಳು ಜೀವನದ ಪ್ರಮುಖ ವಿಷಯಗಳಿಗೆ ಸಮನಾಗಿರುತ್ತವೆ,  ಉದಾಹರಣೆಗೆ ಸರಿಯಾದ ಆರೋಗ್ಯ, ಶಿಕ್ಷಣ, ಉತ್ತಮ ಹವ್ಯಾಸಗಳು ಮತ್ತು ನಮ್ಮ ಜೀವನದ ಗುರಿ ಪ್ರತಿನಿಧಿಸುತ್ತವೆ, ಬೆಣಚುಕಲ್ಲುಗಳು ಕೆಲಸ, ಮನೆ, ಹಣ, ವ್ಯಾಪಾರ ಮತ್ತು ಸ್ನೇಹದಂತಹ ನಮ್ಮ ಜೀವನಕ್ಕೆ ಅರ್ಥವನ್ನು ನೀಡುವ ವಸ್ತುಗಳು  ಪ್ರತಿನಿಧಿಸಿದ್ದರೆ ಅಂತಿಮವಾಗಿ, ಮರಳು ಜೀವನದ ಉಳಿದ ವಿಷಯ ಗಳನ್ನು  ಉದಾಹರಣೆ, ದೂರದರ್ಶನ, ಚಲನಚಿತ್ರಗಳನ್ನು ವೀಕ್ಷಿಸುವುದು, ಸಾಮಾಜಿಕ  ಜಾಲತಾಣ  ಬ್ರೌಸಿಂಗ್ ಮತ್ತು ಇಂಟರ್ನೆಟ್ ಆಟಗಳನ್ನು ಆಡುವಂತಹ  ಒಟ್ಟಾರೆಯಾಗಿ ನಮ್ಮ ಜೀವನಕ್ಕೆ ಹೆಚ್ಚು ಅರ್ಥವಿಲ್ಲದ  ಮತ್ತು ಸಮಯವನ್ನು ವ್ಯರ್ಥ  ಮಾಡುವ ವಿಷಯಗಳನ್ನು ಪ್ರತಿನಿಧಿಸುತ್ತವೆ.
ಇದೇ ಪ್ರಯೋಗವನ್ನು ನಾವು ಹಿಂದಿನಿಂದ ಪ್ರಾರಂಭಿಸಿದರೆ ಉದಾಹರಣೆಗೆ ನಾವು ಜಾರ್‌ಗೆ ಮರಳನ್ನು ಹಾಕಲು ಪ್ರಾರಂಭಿಸಿದರೆ, ನಮಗೆ ಜಾರ್ನಲ್ಲಿ ಕಲ್ಲುಗಳು ಮತ್ತು ಬೆಣಚುಕಲ್ಲುಗಳಿಗೆ ಸ್ಥಳವಿರುವುದಿಲ್ಲ. ಇದರ ಒಟ್ಟಾರೆ ಅರ್ಥ ಕಲ್ಲುಗಳು ನಮ್ಮ ಮುಂದಿನ ಜೀವನದಲ್ಲಿ ನಿಜವಾದ ಮತ್ತು ಪ್ರಮುಖ ವಿಷಯಗಳು ಈ ಅಗತ್ಯ ವಿಷಯಗಳಿಗೆ ನಾವು ಹೆಚ್ಚು ಪ್ರಾಮುಖ್ಯತೆ ನೀಡಬೇಕು ಮತ್ತು ಅವು ನಮ್ಮ ದೀರ್ಘಾವಧಿಯ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿವೆ. ಬೆಣಚುಕಲ್ಲುಗಳು ನಮ್ಮ ಜೀವನಕ್ಕೆ ಅರ್ಥವನ್ನು ನೀಡುತ್ತವೆ   ಆದರೆ ಅವು ನಿರ್ಣಾಯಕವಲ್ಲ, ಈ ವಿಷಯಗಳು ಆಗಾಗ್ಗೆ ಬರುತ್ತವೆ ಮತ್ತು ಹೋಗುತ್ತವೆ ಮತ್ತು ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಅಷ್ಟು ಮುಖ್ಯವಲ್ಲ ಉತ್ತಮ ಆರೋಗ್ಯ, ಶಿಕ್ಷಣ, ಮತ್ತು ಹವ್ಯಾಸಗಳಿಂದ ಅವುಗಳನ್ನು ನಾವು ಮತ್ತೆ ಪಡೆಯಬಹುದು ಅದ್ದರಿಂದ  ಅಷ್ಟು ಮುಖ್ಯವಲ್ಲದ ಇತರ ವಿಷಯಗಳನ್ನು ಮುಂದೂಡಬೇಕು ಇವುಗಳನ್ನು ನಂತರ ಪಡೆಯುವ ಅವಕಾಶವಿರುತ್ತದೆ   ಎಂದು ಹೇಳುತ್ತಾ ತಮ್ಮ ಉಪನ್ಯಾಸವನ್ನು ಮುಗಿಸಿದರು. ಈ ಉಪನ್ಯಾಸದಿಂದ ವಿದ್ಯಾರ್ಥಿಗಳಿಗೆ  ಸಮಯದ ಮಹತ್ವ ಅರ್ಥವಾಯಿತು
ಒಂದು ದಿನ ಮಗ ತನ್ನ ತಂದೆ ಬಳಿ ಹೋಗಿ  'ನನ್ನ ಜೀವನದ ಬೆಲೆ ಏನು?'  ಎಂದು ತಂದೆಗೆ ಪ್ರಶ್ನೆಸುತ್ತಾನೆ.  ಅವನ ತಂದೆಯು ಅವನಿಗೆ ಒಂದು ಹರಳನ್ನು ಕೊಟ್ಟು  ನಿನ್ನ ಜೀವನದ ಮೌಲ್ಯವನ್ನು ನೀನು ತಿಳಿದುಕೊಳ್ಳ ಬಯಸಿದರೆ ಈ ಹರಳನ್ನು ನಾನು ಹೇಳುವ ಸ್ಠಳಗಳಿಗೆ ತೆಗೆದುಕೊಂದು ಹೋಗು ಮತ್ತು ಯಾರಾದರೂ ಇದರ ಬೆಲೆ ಕೇಳಿದರೆ ಮಾತನಾಡದೆ ಎರಡು ಬೆರಳುಗಳನ್ನು ಮೇಲಕ್ಕೆತ್ತು ಎಂದು ಮಗನಿಗೆ ಹೇಳುತ್ತಾ, ಮೊದಲು ಮಾರುಕಟ್ಟೆಗೆ ಹೋಗಲು ಸೂಚಿಸುತ್ತಾನೆ.

ತನ್ನ ತಂದೆ ಹೇಳಿದಂತೆ ಮಗ ಮಾರುಕಟ್ಟೆಗೆ ಹೋಗುತ್ತಾನೆ. ಅಲ್ಲಿದ್ದ ಒಬ್ಬ ಮುದುಕಿ ಅವನ ಬಳಿ ಬಂದು, ಈ ಹರಳಿನ ಬೆಲೆ  ಎಷ್ಟು? ಎಂದು ಕೇಳುತ್ತಾಳೆ. ಆ ಹುಡುಗ ಎರಡು ಬೆರಳನ್ನು ಮೇಲೆ ಎತ್ತುತ್ತಾನೆ  ಅದನ್ನು ಗಮನಿಸಿದ ಮುದುಕಿ 200 ರೂಪಾಯಿ? ನಾನು ಅದನ್ನು ತೆಗೆದುಕೊಳ್ಳುತ್ತೇನೆ ಎಂದಳು.  ಇದರಿಂದ ಆಶ್ಚಯ ಚಿಕಿತನಾಗಿ ತನ್ನ ತಂದೆ ಬಳಿ ಬಂದು ನೆಡೆದ ವಿಷಯವನ್ನು ವಿವರಿಸುತ್ತಾನೆ. ಆಗ ತಂದೆಯು ಮಗನಿಗೆ ವಸ್ತುಸಂಗ್ರಹಾಲಯದ ಬಳಿ ಹೋಗಲು ಸೂಚಿಸಿ ಮೊದಲಿನಂತೆ ಮಾಡಲು ಸೂಚಿಸುತ್ತಾನೆ.
ನಂತರ ಮಗ ಹರಳನ್ನು ತೆಗೆದುಕೊಂಡು ವಸ್ತುಸಂಗ್ರಹಾಲಯಕ್ಕೆ ಹೋಗುತ್ತಾನೆ. ಅಲ್ಲಿ ಒಬ್ಬ ಮಧ್ಯವಯಸ್ಕ ಹುಡುಗನ ಹತ್ತಿರ ಬಂದು ಈ ಹರಳಿನ ಬೆಲೆ ಎಷ್ಟು? ಎಂದು ಕೇಳಲು ಹುಡುಗ ಎರಡು ಬೆರಳು ಮೇಲೆ ಎತ್ತುತ್ತಾನೆ. ಆ ವ್ಯಕ್ತಿ 2000 ರೂಪಾಯಿ?  ನಾನು ಅದನ್ನು ತೆಗೆದುಕೊಳ್ಳುತ್ತೇನೆ ಎಂದನು ಇದ್ದರಿಂದ ಅಶ್ವರ್ಯಚಿಕಿತ ಗೊಂಡು   ಈ ವಿಷಯವನ್ನು ಸಹ ತನ್ನ ತಂದೆ ಬಳಿ ಹೇಳುತ್ತಾನೆ. ಆಗ ತಂದೆ ನೀನು ಹೋಗಬೇಕಿರುವ ಮುಂದಿನ ಸ್ಠಳ ಹರಳುಗಳನ್ನು ಮಾರುವ ಸ್ಠಳ ಎಂದು ತಿಳಿಸುತ್ತಾನೆ.

ತಂದೆಯ ಸೂಚನೆಯಂತೆ ಮಗ ಹರಳುಗಳನ್ನು ಮಾರುವ ಅಂಗಡಿಗೆ ಹೋದನು. ಅಲ್ಲಿ ಕೌಂಟರ್ ನಲ್ಲಿ ಇದ್ದ ಮುದುಕ ಈ ಹುಡುಗನ ಬಳಿ ಬಂದು ಇಂತಹ ಅಮೂಲ್ಯವಾದ ಹರಳು ನಿಮ್ಮಲ್ಲಿ ಇದೆಯೇ? ಇದರ ಬೆಲೆ ಎಷ್ಟು ? ಎಂದಾಗ ಹುಡುಗ ಎರಡು ಬೆರಳುಗಳನ್ನು ಮೇಲೆ ಎತ್ತುತ್ತಾನೆ ಆಗ ಮುದುಗ 2 ಲಕ್ಷ ರೂಪಾಯಿ? ನಾನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದಾಗ ಹುಡುಗನಿಗೆ ನಂಬಲಾಗಲಿಲ್ಲ. ಅವನು ಮತ್ತೆ ತನ್ನ ತಂದೆ ಬಳಿ ಬಂದು ನೆಡೆದುದ್ದನು ವಿವರಿಸುತ್ತಾನೆ.
ಆಗ ತಂದೆ ನಿನ್ನ ಜೀವನದ ಬೆಲೆ ನಿನಗೆ ಈಗ ಅರ್ಥವಾಗಿದೆಯೇ?. ಜೀವನವು ನಿನ್ನನ್ನು ನೀನು ಎಲ್ಲಿ ಇರಿಸಿಕೊಳ್ಳುವೆ ಎಂಬುದರ ಮೇಲೆ ನಿರ್ಧಾರವಾಗಿರುತ್ತದೆ. ಅದು ನೀನು 200 ರೂಪಾಯಿ ಯ ಹರಳೋ ಅಥವಾ 2 ಲಕ್ಷ ರೂಪಾಯಿಗಳ ಹರಳೋ? ಆಗಬೇಕೆ. ಎಂದು ನೀನು ನಿರ್ಧರಿಸಬೇಕು ಎಂದು ಹೇಳಿದನು.

ಕೆಲವು ಜನರು ನಮ್ಮ ಯೋಗ್ಯತೆಗೆ ಬೆಲೆ ಕೊಡುತ್ತಾರೆ ಮತ್ತು  ಕೆಲವರು ನಮ್ಮನ್ನು ಅವರ ಅವಶ್ಯಕತೆಗೆ ಬಳಸಿಕೊಳ್ಳುತ್ತಾರೆ. ಆದ್ದರಿಂದ ನಾವು ಇರಬೇಕಾದ ಸ್ಠಳವನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಇಲ್ಲದೆ  ಆಯ್ಕೆ ಬದಲಿಸಿ ನಮ್ಮಗೆ ಯೋಗ್ಯತೆ ಸಿಗದ  ಸ್ಠಳ ಆಯ್ಕೆಮಾಡಿಕೊಂಡು ನಮ್ಮನ್ನು ನಾವು ಮೂರ್ಖರನ್ನಾಗಿ ಮಾಡಿಕೊಂಡು ನಮ್ಮ ಜೀವನವನ್ನು ದೂಷಿಸಬಾರದು
ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿತ್ತು. ಆದರೆ ಕರ್ಣನ ಬಾಣ ತಾಗಿದಾಗ ಅರ್ಜುನನ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿತ್ತು. ಪ್ರತಿಬಾರಿ ಕರ್ಣನ ಬಾಣ ತಾಗಿ ಅರ್ಜುನನ ರಥವು ಏಳು ಅಡಿ ಹಿಂದಕ್ಕೆ ಹೋಗುವಾಗಲೂ ಸಾರಥಿಯಾದ ಶ್ರೀಕೃಷ್ಣನು ಹೇಳುತ್ತಿದ್ದ 'ಎಷ್ಟು ವೀರಶಾಲಿಯಾಗಿದ್ದಾನೆ ಕರ್ಣ'

ಅರ್ಜುನನ ಬಾಣ ತಾಗಿ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದ್ದರೂ ಶ್ರೀಕೃಷ್ಣನು ಏನೂ ಹೇಳದೆ ಸುಮ್ಮನೆ ಇರುತ್ತಿದ್ದ.

ಹಲವು ಬಾರಿ ಇದು ಪುನರಾವರ್ತನೆಯಾದಾಗ ಅರ್ಜುನ ಅಸ್ವಸ್ಥನಾಗಿ ಕೃಷ್ಣನಿಗೆ ಹೇಳುತ್ತಾನೆ, 'ಓ ವಾಸುದೇವಾ ತಾವು ಎಂತಹಾ ಪಕ್ಷಬೇಧ ಮಾಡುತ್ತಿದ್ದೀರಾ? ನಮ್ಮ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿರುವುದು. ಆದರೆ, ನನ್ನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದೆ. ಅದನ್ನು ನೋಡಿಯೂ ಕೂಡ ತಾವು 'ಮಹಾವೀರ ಕರ್ಣ' ಅಂತ ಹೊಗುಳುತ್ತಿರುವುದೇಕೆ?

ಮಂದಹಾಸವನ್ನು ಬೀರುತ್ತಾ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ, 'ಏ ಪಾರ್ಥ ನಾನು ಹೇಳಿದ್ದು ಸರಿ.
ಕರ್ಣನು ಮಹಾವೀರನಾಗಿದ್ದಾನೆ. ನೀನು ಮೇಲಕ್ಕೆ ನೋಡು. ನಿನ್ನ ರಥದ ತುದಿಯಲ್ಲಿ ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ ಮತ್ತು ಮುಂದೆ ನಿನಗೆ ಸಾರಥಿಯಾಗಿ ನಾನು ಇದ್ದರೂ ಕೂಡಾ ಕರ್ಣನ ಬಾಣ ತಾಗಿ ರಥವು ಏಳು ಅಡಿ ಹಿಂದಕ್ಕೆ ಹೋಗುತ್ತಿದೆ.

ಆದರೆ, ನಾವು ಇಲ್ಲವಾಗಿದ್ದರೆ, ನಿನ್ನ ರಥ ಪರಿಸ್ಥಿತಿ ಏನಾಗುತ್ತಿತ್ತು? ಎಂದು ಪ್ರಶ್ನೆಸಿದ ಶ್ರೀಕೃಷ್ಣ. ಸತ್ಯವನ್ನು ಅರಿತಾಗ ಅರ್ಜುನ ಸುಮ್ಮನಾದ. ಆದರೆ ತನ್ನ ಪ್ರತಿಭೆಯಲ್ಲಿ ತುಂಬಾ ವಿಶ್ವಾಸ ಇಟ್ಟಿದ್ದ ಅರ್ಜುನನಿಗೆ ಯುದ್ಧದ ಕೊನೆಯ ದಿನ ಆ ಸತ್ಯದ ಅರಿವಾಯಿತು.
ಸಾಧಾರಣವಾಗಿ ಎಲ್ಲಾ ದಿನವೂ ಯುದ್ಧ ಮುಗಿದಾಗ ಸಾರಥಿಯಾಗಿದ್ದ ಕೃಷ್ಣನು ರಥದಿಂದ ಇಳಿದು ನಂತರ ಅರ್ಜುನನಿಗಾಗಿ ಬಾಗಿಲನ್ನು ತೆರೆಯುತ್ತಿದ್ದ. ಆದರೆ, ಯುದ್ಧದ ಕೊನೆಯ ದಿನ ಕೃಷ್ಣನು ರಥದಲ್ಲಿಯೇ ಕುಳಿತು ಅರ್ಜುನನಿಗೆ ಇಳಿದು ದೂರ ನಡೆಯಲು ಹೇಳುತ್ತಾನೆ. ಅರ್ಜುನ ಇಳಿದು ಸ್ವಲ್ಪ ದೂರ ನಡೆದು ಸಾಗಿದ ನಂತರ ಕೃಷ್ಣನು ರಥದಿಂದ ಇಳಿಯುತ್ತಾನೆ. ತಕ್ಷಣ ರಥವು ಉರಿದು ಭಸ್ಮವಾಯಿತು. ಇದನ್ನು ನೋಡಿದ ಅರ್ಜುನ ಆಶ್ಚರ್ಯದಿಂದ ಕೃಷ್ಣನನ್ನು ನೋಡಿದ.

ಆಗ ಕೃಷ್ಣ ಹೇಳುತ್ತಾನೆ, “ಅರ್ಜುನಾ ನಿನ್ನ ರಥವು ಭೀಷ್ಮ, ಕೃಪಾಚಾರ್ಯ, ದ್ರೋಣ, ಕರ್ಣ ಇವರೆಲ್ಲರ ದಿವ್ಯಾಸ್ತ್ರಗಳಿಂದ ಬಹಳ ಮುಂಚೆಯೇ ಭಸ್ಮವಾಗಿ ಹೋಗಿತ್ತು. ಆದರೆ, ನಾನು ನನ್ನ ಯೋಗಶಕ್ತಿಯಿಂದ ಒಂದು ಸಂಕಲ್ಪ ರಥವನ್ನು ಸೃಷ್ಟಿಸಿದೆ'. ಎಂದಾಗ, ಅರ್ಜುನನಿಗೆ ಭೂಮಿ ಒಡೆದು ಪಾತಾಳಕ್ಕೆ ಹೋಗುವ ಹಾಗೇ ಅನಿಸಿತು.
ಪ್ರತಿಯೊಬ್ಬರ ಜೀವನದಲ್ಲಿ 'ನಾನು ಎಂಬ ಅಹಂ ಕೆಲವೊಮ್ಮೆ ಅರ್ಜುನನ ಹಾಗೇ ವರ್ತಿಸುತ್ತದೆ. ಈ ಲೋಕದಲ್ಲಿ ಎಲ್ಲವೂ ನಮ್ಮ ಹಿಡಿತದಲ್ಲಿ ಇರುವುದೆಂಬ ಅಹಂಕಾರ. ಇಲ್ಲಿ ರಥ ನಮ್ಮ ಶರೀರ ಮತ್ತು ಯುದ್ಧವು ನಮ್ಮ ಮಾನಸಿಕ ಸಂಘರ್ಷಗಳಾಗಿವೆ. ಒಮ್ಮೆ ಜೀವನ ಯುದ್ಧ ಮುಗಿಸಿ ಜೀವನಾತ್ಮವಾಗಿರುವ ಅರ್ಜುನನು ಶರೀರವಾಗಿರುವ ರಥ(ದೇಹ)ದಿಂದ ಇಳಿಯುವುದು. ನಂತರ ನಮ್ಮನ್ನು ರಕ್ಷಿಸುವ ಪರಮಾತ್ಮ ನಮ್ಮಿಂದ ದೂರಗುತ್ತಾನೆ  ಅಲ್ಲಿಗೆ ರಥ(ದೇಹ)ವು ನಾಶವಾಗುವುದು'       ಪರಮಾತ್ಮ ನಮ್ಮ ಜೀವನ ಪೂರ್ತಿ ನಮ್ಮ ಜೊತೆ ಅತ್ಮದಂತೆ ಇರುತ್ತಾನೆ, ನಾವು ಮಾಡುವ ಒಳ್ಳೆ ಕೆಲಸ, ದರ್ಮ ಪರವಾದ ಕೆಲಸ ಹೀಗೆ ಶಕ್ತಿಯನ್ನು ತುಂಬುತ್ತಾನೆ, ಕೆಲವೂಮ್ಮೆ ನಮ್ಮಗೆ ಸಿಕ್ಕ ಚಿಕ್ಕ ಗೆಲುವೆಗೆ ನಾವೇ ಕಾರಣ ಎಂದು ಬೇರೆಯಾವರಿಗೆ ಹೊಲಿಕೆ ಮಾಡಿ ಸಂಬ್ರಮಿಸುತ್ತೆವೆ. ಅದರೆ ಇದು ತಪ್ಪು ಇಂದಿನ ಸೊಲು ನಾಳೆ ಗೆಲುವಿಗೆ ಕಾರಣವಾಗಬಹುದು. ಇಂದಿನ ಅಹಂಕಾರ ನಾಳೆ,ನಮ್ಮ ಅವನತಿಗೂ ಕಾರಣ ಅಗಬಹುದು
ಒಂದು ರಾತ್ರಿ ಒಬ್ಬ ಬಡಿಗನ ಬಅಂಗಡಿಯಲ್ಲಿ ಒಂದು ಹಾವು ಬಂತು. ಅದು ಕತ್ತಲೆಯಲ್ಲಿ ಹರಿದಾಡುತ್ತಿದಂತೆ ಗರಗಸದ ಹತ್ತಿರ ಸುಳಿಯಿತು, ಗರಗಸದ ಮೊನಚಾದ ಒಂದು ಹಲ್ಲಿಗೆ ಅದರ ಬಾಲ ತಾಗಿ ಸ್ವಲ್ಪ ಗಾಯವಾಯಿತು. ತಕ್ಷಣವೇ ಅದು ತಿರುಗಿ ಗರಗಸವನ್ನು ಕಡಿಯಲು ಅದರಿಂದ ಹಾವಿನ ಬಾಯಿಗೆ ಪ್ರಯತ್ನಿಸಿತು. ಗಾಯವಾಯಿತು. ಗಾಯದಿಂದ ವಿಚಲಿತವಾದ ಹಾವು ಕೋಪದಲ್ಲಿ ಏನು ನಡೆಯುತ್ತಿದೆ ಎಂದು ಸರಿಯಾಗಿ ತಿಳಿಯದೇ, ಗರಗಸ ತನ್ನನ್ನು ಕಚ್ಚುತ್ತಿದೆ ಎಂದು ಭಾವಿಸಿತು. ಗರಗಸವನ್ನು ಉಸಿರುಗಟ್ಟಿಸಿ ಸಾಯಿಸುವ ಉದ್ದೇಶದಿಂದ ಅದು ಗರಗಸವನ್ನು ಸುತ್ತಿಕೊಳ್ಳಲು ಶುರುಮಾಡಿತು. ಗಾಯ ಹೆಚ್ಚಾದಂತೆ ಗರಗಸವನ್ನು ಮತ್ತಷ್ಟು ಶಕ್ತಿ ಮೀರಿ ಬಿಗಿಯಾಗಿಸಿತು. ಆದರೇ ಮೈಯೆಲ್ಲಾ ಗಾಯವಾಗಿದ್ದು ಹಾವಿಗೆ ಹೊರತು. ಗರಗಸಕ್ಕೇನೂ ಆಗಲಿಲ್ಲ, ಗಾಯದಿಂದ ಅತಿಯಾದ ರಕ್ತಸ್ರಾವವಾಗಿ ಹಾವು ಸತ್ತೇಹೋಯಿತು.

ಹೀಗೆ ಒಮ್ಮೊಮ್ಮೆ ನಮಗೆ ತೊಂದರೆ ಮಾಡಿದವರನ್ನು ಶಿಕ್ಷಿಸುವ ಭರದಲ್ಲಿ ನಾವು ಉದ್ವೇಗಗೊಳ್ಳುತ್ತೇವೆ. ಕೋಪದಲ್ಲಿ ಪ್ರತಿಕ್ರಿಯಿಸಿ ಅವರಿಗೆ ಹಾನಿ ಮಾಡಲು ಪ್ರಯತ್ನಿಸುತ್ತೇವೆ. ಆದರೆ ನಿಜವಾಗಿಯೂ ನಾವು ನಮಗೇ ಶಿಕ್ಷಿಸಿಕೊಂಡಿರುತ್ತೇವೆ. ನಮಗೇನೆ ಹಾನಿಯಾಗಿರುತ್ತದೆ. ಕೆಲ ಅಹಿತಕರ ಘಟನೆಗಳನ್ನು, ಕೆಲವು ನಮಗಾಗದ ವ್ಯಕ್ತಿಗಳನ್ನು ಅವರ ಕಟು ಮಾತುಗಳನ್ನು ನಿರ್ಲಕ್ಷಿಸುವುದು ಒಳ್ಳೆಯದು. ನಮಗಾದ ಕ್ಷಣಿಕ ನೋವಿನಿಂದ ನಾವು ತಪ್ಪು ಹೆಜ್ಜೆ ಇಟ್ಟು ಪರಿತಪಿಸುವಂತೆ ಆಗಬಾರದು. ದ್ವೇಷ, ಉದ್ವೇಗಕ್ಕಿಂತ ಪ್ರೀತಿ ಸಹನೆ ದೊಡ್ಡವು
ಅಪ್ಪ ಗೋಡೆ ಹಿಡಿದುಕೊಂಡು ಹೋಗುತ್ತಿದ್ದರು. ಅಪ್ಪ ಕೈಯಿಟ್ಟಲ್ಲೆಲ್ಲ ಗೋಡೆಯ ಬಣ್ಣ ಸ್ವಲ್ಪ ಸ್ವಲ್ಪವೇ ಮಸುಕಾಗುತ್ತಿತ್ತು.  ಇದನ್ನು ಕಂಡು ಹೆಂಡತಿಯ ಮುಖಭಾವ ಬದಲಾಗುತ್ತಿದ್ದುದನ್ನು ನಾನು ಗಮನಿಸಿದೆ. ಅದೊಂದು ದಿನ ಅಪ್ಪ ಎಂದಿನಂತೆಯೇ ಗೋಡೆಯ ಮೇಲೆ ಕೈ ಇಟ್ಟಿದ್ದರು. ಮಂಡಿ ನೋವಿಗೆ ಎಣ್ಣೆ ಹಚ್ಚಿದ್ದರೋ ಏನೋ ಕೈ ಗುರುತು ಗೋಡೆ ಮೇಲೆ ಗಾಢವಾಗಿ ಅಂಟಿಕೊಂಡಿತು.  ಹೆಂಡತಿ ಒಳಗೆ ಬಂದು ನನ್ನೊಡನೆ ರೇಗಿಯೇ ಬಿಟ್ಟಳು. ನನಗೂ ಅಂದು ಏನಾಯಿತೋ ಏನೋ. ಅಪ್ಪನ ರೂಮಿಗೆ ಹೋದೆ.. ಅಪ್ಪಾ  ನಡೆಯುವಾಗ ಗೋಡೆ ಹಿಡಿಯದೆ ನಡೆಯಲು ಪ್ರಯತ್ನಿಸಬಾರದೇ ಎಂದೆ.. ಧ್ವನಿಯಲ್ಲಿದ್ದ ಅಸಹನೆ ಅತಿಯಾಯಿತೇನೋ ಅನಿಸಿತು.

ಅಪ್ಪ ನನ್ನೆಡೆಗೆ ನೋಡಿದರು.  80 ವರ್ಷದ ಅಪ್ಪನ ಮುಖ ಚಿಕ್ಕ ಮಗು ತಪ್ಪು ಮಾಡಿದಂತಿತ್ತು. ಅಪ್ಪ ಮೌನವಾಗಿ ತಲೆತಗ್ಗಿಸಿದರು.… ಛೇ ನಾನು ಹಾಗನ್ನಬಾರದಿತ್ತು ಎಂದೆನಿಸಿತು… ಸ್ವಾಭಿಮಾನಿಯಾಗಿದ್ದ ಅಪ್ಪ  ಮುಂದೆ ಮೌನಿಯಾದರು. ಆ ಮೇಲೆ ಗೋಡೆ ಹಿಡಿದು ನಡೆಯಲಿಲ್ಲ.. ಅದೊಂದು  ದಿನ ಅಪ್ಪ ಆಯತಪ್ಪಿ ಬಿದ್ದು ಹಾಸಿಗೆ ಹಿಡಿದರು. ಮತ್ತೆರಡು ದಿನದಲ್ಲಿ ಇಹಲೋಕವನ್ನು ತ್ಯಜಿಸಿದರು. ಗೋಡೆಯಲ್ಲಿ ಮೂಡಿದ್ದ ಅಪ್ಪನ ಕೈ ಗುರುತು ಕಾಣುವಾಗ ಎದೆಯೊಳಗೆ ಏನೋ ಸಿಕ್ಕಿದಂತಾಗುತ್ತಿತ್ತು.    
ದಿನಗಳು ಉರುಳುತ್ತಿತ್ತು. ಅದೊಂದು ದಿನ ಹೆಂಡತಿ ಎಲ್ಲಾ ಗೋಡೆಗಳಿಗೆ ಬಣ್ಣ ಹೊಡೆಯಬೇಕೆಂದಳು..ಬಣ್ಣ ಹೊಡೆಯುವವರೂ ಬಂದರು. ನನ್ನ ಐದು ವರ್ಷದ ಮಗ ಜೀತ್ ಗೆ  ತಾತನೆಂದರೆ ಪ್ರಾಣ. ಏನು ಮಾಡಿದರೂ ತಾತನ ಕೈಯ ಗುರುತನ್ನು ಅಳಿಸಲು ಅವನು ಬಿಡಲೇ ಇಲ್ಲ . ಅವನ ರಂಪಾಟ ಕಂಡು ಬಣ್ಣ ಬಳಿಯುವವರು ಸರ್ ಆ ಕೈ ಗುರುತಿನ ಸುತ್ತ ಪೇಂಟ್ ಮೂಲಕ ಡಿಸೈನ್ ಮಾಡಿ ಸುಂದರವಾಗಿ ಮಾಡಿ ಕೊಡುತ್ತೇವೆ..ನೀವೂ ಇಷ್ಟ ಪಡುತ್ತೀರಿ   ಎಂದರು. ಮಗನ ಹಟಕ್ಕೆ ಮಣಿಯಬೇಕಾಯಿತು.ನಿಜವಾಗಿಯೂ ಬಣ್ಣ ಬಳಿಯುವವರು ಅದಕ್ಕೊಂದು ಹೊಸ ರೂಪ ನೀಡಿದ್ದರು.ಅದು ಮನೆಗೆ ಬಂದವರ ಗಮನ ಸೆಳೆಯುತ್ತಿತ್ತು.

ಎಲ್ಲರೂ ಅದರ ಬಗ್ಗೆ  ಸಂತಸ ವ್ಯಕ್ತಪಡಿಸುತ್ತಿದ್ದರು.ಮುಂದೆ ಪ್ರತಿ ಬಾರಿ ಬಣ್ಣ ಬಳಿಯುವಾಗಲೂ ಆ ಜಾಗವನ್ನು ಮಾತ್ರಾ ವಿಶೇಷವಾಗಿ‌ ಪೆಯಿಂಟ್ ಮಾಡಲಾಗುತ್ತಿತ್ತು… ಮೊದಮೊದಲು ಮಗನ ಒತ್ತಾಯಕ್ಕಾಗಿದ್ದರೂ ಈಗೀಗ ಅದರ ಮೇಲೆ   ವ್ಯಾಮೋಹ ಬೆಳೆದಿತ್ತು, ವರುಷಗಳುರುಳುತ್ತಿದ್ದವು.
ಮಗನಿಗೆ ಮದುವೆಯಾಗಿದೆ. ಅಂದು ಅಪ್ಪ ಇದ್ದ ಸ್ಥಾನದಲ್ಲಿ ಈಗ ನಾನಿದ್ದೆ…ಅವರಷ್ಟು ವಯಸ್ಸಾಗಿರದಿದ್ದರೂ 70ರ ಆಸುಪಾಸಿನಲ್ಲಿದ್ದ ನನಗೆ ಆಗಲೇ ನಡೆಯುವಾಗ ಗೋಡೆಗೊಂದು ಕೈಕೊಟ್ಟು ನಡೆಯಬೇಕೆನಿಸುತ್ತಿತ್ತು….ಆದರೂ ನಾನು ಅಂದು ಸಿಡಿಮಿಡಿಗೊಂಡಿದ್ದು ನೆನಪಾಗುತ್ತಿತ್ತು.ಗೋಡೆಗೆಲ್ಲಿ ಕೈತಾಗುವುದೋ ಎಂದು ಗೋಡೆ ಬಿಟ್ಟು ದೂರದಲ್ಲೇ ನಡೆಯುತ್ತಿದ್ದೆ…ಅದೊಂದು ದಿನ ನನ್ನ ರೂಮಿನಿಂದ ಹೊರಗೆ ಬಂದು ಎರಡು ಹೆಜ್ಜೆ ಇಡುವಷ್ಟರಲ್ಲಿ ಮೈವಾಲಿತ್ತು..ಆಧಾರಕ್ಕಾಗಿ ಕೈಚಾಚಿದ್ದಷ್ಟೇ..ನಿಮಿಷದಲ್ಲಿ ಓಡಿ ಬಂದ ಮಗನ ತೋಳಿನಲ್ಲಿ ನಾನಿದ್ದೆ.

ಅಪ್ಪಾ …ಹೊರಗೆ ಬರುವಾಗ ಗೋಡೆ ಹಿಡಿದುಕೊಂಡು ಮೆಲ್ಲನೆ ಬರಬಾರದೇ ನೋಡಿ ಈಗ ಬಿದ್ದು ಬಿಡ್ತಾ ಇದ್ರಿ. ಎಂದು ನುಡಿದಾಗ ಅಚ್ಚರಿಯಿಂದ ಅವನ ಮುಖ ನೋಡಿದೆ. ಅವನ ಮುಖದಲ್ಲಿ ಆತಂಕ ವಿತ್ತು.  ಸ್ವಲ್ಪವೂ ಅಸಹನೆಯಿರಲಿಲ್ಲ.. ಅಪ್ಪನ ಕೈ ಗುರುತು ಅಲ್ಲೇ ಸ್ವಲ್ಪ ದೂರದ ಗೋಡೆಯಲ್ಲಿತ್ತು… ನೋಡಿದೆ..ಅಪ್ಪನ ಮುಖ ಕಣ್ಣಮುಂದೆ ಬಂತು.. ನಾನು ಅಪ್ಪನಿಗೆ ಅಂದು ಗದರದೆ ಇದ್ದಿದ್ದರೆ ಅಪ್ಪ ಇನ್ನೂ ಸ್ವಲ್ಪ ದಿನ ಬದುಕುತ್ತಿದ್ದರೇನೋ ಅನಿಸಿತು.. ಕಣ್ಣು ತುಂಬುತ್ತಿತ್ತು…
ಓಡಿ ಬಂದ 8 ವರ್ಷದ  ಮೊಮ್ಮಗಳು ತಾತ ನನ್ನ ಹೆಗಲು ಹಿಡ್ಕೊಂಡು ನಡೆಯಿರಿ ಎಂದು ನನ್ನ ಕೈಯನ್ನು ಅವಳ ಹೆಗಲ ಮೇಲೆ ಇರಿಸಿಕೊಂಡು ಮುದ್ದಾಗಿ  ನಕ್ಕಳು.

ಹಾಲ್ ನಲ್ಲಿ ಸೋಫಾ ಮೇಲೆ ಕುಳಿತೆ. ಮೊಮ್ಮಗಳು ಅವಳ ಡ್ರಾಯಿಂಗ್ ಪುಸ್ತಕ ತಂದು ತಾತ ಇವತ್ತು ಕ್ಲಾಸಲ್ಲಿ ಡ್ರಾಯಿಂಗ್ ಅಲ್ಲಿ ನಂಗೆ ಫಸ್ಟ್ ಪ್ರೈಸ್ ಬಂತು.. ಎಂದಳು.. ಹೌದಾ.. ಯಾವ ಚಿತ್ರ ಬರೆದೆ ತೋರಿಸು.. ಎಂದೆ…ತೆರೆದು ತೋರಿಸಿದಳು.. ಗೋಡೆಯ ಮೇಲೆ ಅಪ್ಪನ ಕೈ ಗುರುತಿಗೆ ಸುಂದರವಾಗಿ ಡಿಸೈನ್ ಮಾಡಿದ ಚಿತ್ರವನ್ನು ಮೊಮ್ಮಗಳು ಗೋಡೆಯಲಿದ್ದಂತೆ ಬರೆದಿದ್ದಳು. ಮೊಮ್ಮಗಳು ಮತ್ತೆ ಹೇಳಿದಳು, ತಾತ, ಮಿಸ್ ಕೇಳಿದ್ರು ಇದು ಏನು ಅಂತ… ಅದಕ್ಕೆ ನಾನಂದೆ ಇದು ನನ್ನ ಪಪ್ಪನ ತಾತನ ಕೈ ಗುರುತು ಅಂತ. ನಮ್ಮ ಮನೆ ಗೋಡೆ ಮೇಲೆ ಈಗಲೂ ಇದೆ ಎಂದೆ.. ಅದಕ್ಕೆ ಮಿಸ್, ಮಕ್ಕಳು ಚಿಕ್ಕವರಿರುವಾಗ ಮನೆಯ ಗೋಡೆಯಲ್ಲೆಲ್ಲಾ ಗೀಚಿದ ಗೆರೆಗಳು, ಚಿತ್ರಗಳು, ಹೆಜ್ಜೆ ಗುರುತು, ಕೈ ಗುರುತು..  ಇವುಗಳನ್ನೆಲ್ಲಾ ನೋಡಿ ನಮ್ಮ ಅಪ್ಪ-ಅಮ್ಮ ಪ್ರೀತಿಯಿಂದ ಸಂಭ್ರಮ ಪಡುತ್ತಾರೆ. ಹಾಗೆಯೇ ನಾವು ಅವರಿಗೆ ವಯಸ್ಸಾದ ನಂತರ ಅವರನ್ನು ಅದೇ ರೀತಿ ಪ್ರೀತಿಸಬೇಕು.. ಎಂದು ಎಲ್ಲಾ ಮಕ್ಕಳಿಗೆ ಹೇಳಿಕೊಟ್ಟರು.  ನಂಗೆ ವೆರಿ ಗುಡ್ ಶ್ರೇಯಾ ಎಂದರು.. ಎಂದು ಮುದ್ದು ಮುದ್ದಾಗಿ ನುಡಿದಳು.
ಮಗ ಮೊಮ್ಮಗಳ ಮುಂದೆ ತೀರ ಚಿಕ್ಕವನಾದಂತೆ ಎನಿಸಿತು ರೂಮಿಗೆ ಬಂದೆ. ಬಾಗಿಲು‌ಮುಚ್ಚಿ ಅಪ್ಪಾ ನನ್ನ ಕ್ಷಮಿಸಿ ಬಿಡಿ ಅಪ್ಪಾ ಎಂದು ಮನಸ್ಸು ಹಗುರಾಗುವವರೆಗೂ ಅತ್ತೆ.  ನೆನಪಾದಾಗಲೆಲ್ಲಾ ಅಳುತ್ತಿರುತ್ತೇನೆ…
Please enable JavaScript in your browser to complete this form.
Full Name
Scroll to Top