ಪಠ್ಯ ಪೂರಕ ಅಧ್ಯಯನ - 1 ಕಟ್ಟುವೆವು ನಾವು ಕೃತಿಕಾರರ ಹೆಸರು : ಎಂ. ಗೋಪಾಲಕೃಷ್ಣ ಅಡಿಗ
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. 1. ಯಾವುದು ಬತ್ತಿಹೋಗುವ ಮುನ್ನ ಹೊಸನಾಡೊಂದನ್ನು ಕಟ್ಟಬೇಕು? ಉತ್ಸಾಹ ಸಾಹಸದ ಉತ್ತುಂಗ ಅಲೆಗಳು ಈ ಕ್ಷುಬ್ಧಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು.
2. ನಮ್ಮೆದೆಯ ಕಾಮಧೇನು ಯಾವುದು? ನಮ್ಮ ಕನಸುಗಳೇ ನಮ್ಮೆದೆಯ ಕಾಮಧೇನು.
3. ನಮ್ಮ ಸುತ್ತಲೂ ಇರುವ ಕಂದಕಗಳಾವುವು? ನಮ್ಮ ಸುತ್ತಲೂ ಜಾತಿ,ಮತ,ಭೇದಗಳ ಕಂದಕಗಳಿವೆ.
4. ಕೋಟೆಗೋಡೆಗೆ ಮೆಟ್ಟಿಲುಗಳು ಯಾವುದು? ನಮ್ಮ ಹೆಣಗಳೇ ಕೋಟೆಗೋಡೆಗೆ ಮೆಟ್ಟಿಲುಗಳು.
5. ಕವಿ ಯಾರಿಗೆ ವೀಳೆಯವನು ಕೊಡುವೆನೆಂದಿದ್ದಾರೆ? ಕೆಡೆ ನುಡಿವ, ಕೆಡೆ ಬಗೆವ ಕೆಡಕು ಜನರಿಗೆ ವೀಳೆಯವನು ಕೊಡುವೆನೆಂದಿದ್ದಾರೆ.
6. ಹೊಸನಾಡೊಂದನ್ನು ಕಟ್ಟ ಬಯಸುವ ಕವಿ ಉತ್ಸಾಹ ಉದ್ವೇಗದಲ್ಲಿ ಹೇಳುವ ಮಾತುಗಳಾವುವು? ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು. ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ, ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ, ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ಧಸಾಗರವು ಬತ್ತಿ ಹೋಗುವ ಮುನ್ನ ಕಟ್ಟುವೆವು ನಾವು ಹೊಸ ನಾಡೊಂದನು. ಅಂದರೆ ಉತ್ಸಾಹ, ಉದ್ವೇಗದ ವೀರ ಯುವಜನರೇ ನಾಡ ಬಾವುಟವು. ಆ ಬಾವುಟವು ಹಾರಾಟಕ್ಕೆ ಆಕಾಶವೇ ಗಡಿ. ಅದನ್ನು ಹಿಡಿಯುವ, ತಡೆಯುವ ಶಕ್ತಿ ಉಳ್ಳವರು, ಸಾಮರ್ಥ್ಯ ಉಳ್ಳವರು ಯಾರಾದರೂ ಸಹ ಬನ್ನಿರಿ, ಕೆಡೆ ನುಡಿವ, ಕೆಡೆ ಬಗೆವ ಕೆಡಕು ಜನರಿಗೆ ವೀಳೆಯವನು ಕೊಡುತ್ತಾರೆ. ನಿಮ್ಮೆಲ್ಲರನ್ನೂ ನಾಶ ಮಾಡಿ, ನಿಮ್ಮ ಸಮಾಧಿಗಳ ಮೇಲೆ ಭವ್ಯವಾದ ಸುಖದ ನಾಡೊಂದುನ್ನು ಕಟ್ಟುತ್ತೇನೆ. ಎಂದು ಕವಿ ಹೇಳಿದ್ದಾರೆ.
ಪಠ್ಯ ಪೂರಕ ಅಧ್ಯಯನ - 2 ಸಾರ್ಥಕ ಕೃತಿಕಾರರ ಹೆಸರು : ದಿನಕರ ದೇಸಾಯಿ ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. 1. ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಎಲ್ಲಿ ಬೀಳುತ್ತದೆ? ಗಾಳಿಯಲ್ಲಿ ಬೂದಿಯನ್ನು ತೂರಿದಾಗ ಭತ್ತ ಬೆಳೆಯುವ ನಾಡಿನಲ್ಲಿ ಹೋಗಿ ಬೀಳುತ್ತದೆ.
2. ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಯಾರಿಗೆ ಸಿಗುತ್ತದೆ? ಬೂದಿಯನ್ನು ಹೊಳೆಯಲ್ಲಿ ಹರಿಯಬಿಟ್ಟಾಗ ಮೀನಿನ ಬಾಯಿಗೆ ಸಿಗುತ್ತದೆ.
3. ದೇಹ ಏಕೆ ವ್ಯರ್ಥವಾಗಿದೆ? ತನ್ನ ದೇಹ ಸ್ವಾರ್ಥವ ನೆನೆದು ವ್ಯರ್ಥವಾಗಿದೆ.
4. ಬೂದಿಯನ್ನು ಕೊಳದಲ್ಲಿ ಬಿಡುವುದರಿಂದ ಬದುಕು ಧನ್ಯವಾಗುವುದು ಹೇಗೆ? – ವಿವರಿಸಿ. ನಮ್ಮ ಹೆಣದ ಬೂದಿಯನ್ನು ನೀರಿನಲ್ಲಿ ಬಿಡುವುದರಿಂದ ಅದು ಕೆಸರಿನೊಡನೆ ಕೂಡಿ ಫಲವತ್ತಾದ ಮಣ್ಣಾಗುತ್ತದೆ. ಅದರಲ್ಲಿ ಕಮಲ ಅರಳಿದಾಗ ನಾವು ಹುಟ್ಟು ಸಾವಿನಿಂದ ಮುಕ್ತರಾಗಿ ನಮ್ಮ ಬದುಕು ಧನ್ಯವಾಗುತ್ತದೆ.
5. ಸಾರ್ಥಕ ಪದ್ಯದ ಯಾವ ಅಂಶಗಳನ್ನು ನೀವು ಮೆಚ್ಚುವಿರಿ? ಮಾನವನು ತನ್ನ ಸ್ವಾರ್ಥ ಗುಣಗಳನ್ನು ತೊರೆದು ಪರೋಪಕಾರಿ ಗುಣಗಳನ್ನು ಬೆಳೆಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂಬ ಅಂಶವನ್ನು ನಾವು ಮೆಚ್ಚುಬಹುದು .
5. ಯುವಕನು ಬಡವರ ಹುಡುಗಿಯನ್ನು ಮದುವೆಯಾಗದಿರಲು ಕಾರಣಗಳೇನು? ಯುವಕನಿಗೆ ಲಂಡನ್ನಿನಲ್ಲಿ ಲಾ ಕಲಿತು, ಬ್ಯಾರಿಸ್ಟರ್ ಆಗಬೇಕೆಂಬ ಬಲವಾದ ಇಚ್ಚೆಯಿತ್ತು. ಆದ್ದರಿಂದ ಅವನು ಬಡವರ ಮನೆಯ ಹುಡುಗಿಯನ್ನು ಮದುವೆ ಆಗಲಿಲ್ಲ.
6. ಪತ್ರಿಕೆಯನ್ನು ತೋರಿಸಿ ವಿಜಯಳು ಅಣ್ಣನಿಗೆ ಏನು ಹೇಳಿದಳು? ಪತ್ರಿಕೆಯನ್ನು ತೋರಿಸಿ ವಿಜಯಳು ಅಣ್ಣನಿಗೆ ನೋಡುತ್ತಿದ್ದುದು ನೀನು ಕೊಂದ ಹುಡುಗಿಯನ್ನು ಎಂದು ಹೇಳಿದಳು
ಪಠ್ಯ ಪೂರಕ ಅಧ್ಯಯನ – 4 ಮಗಳಿಗೆ ಬರೆದ ಪತ್ರ ಮೂಲ : ಜವಹರಲಾಲ್ ನೆಹರು ಅನುವಾದ: – ತಿ.ತಾ. ಶರ್ಮ, ಸಿದ್ದನಹಳ್ಳಿ ಕೃಷ್ಣಶರ್ಮ. ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. 1. ಈ ಪತ್ರವನ್ನು ನೆಹರುರವರು ಯಾರಿಗೆ ಬರೆದಿದ್ದಾರೆ? ನೆಹರುರವರು ಈ ಪತ್ರವನ್ನು ಅವರ ಮಗಳಾದ ಇಂದಿರಾ ಪ್ರಿಯದರ್ಶಿನಿ ಅವರಿಗೆ ಬರೆದಿದ್ದಾರೆ.
3. ನಲಂದ ವಿಶ್ವವಿದ್ಯಾನಿಲಯವು ಎಲ್ಲಿತ್ತು? ನಲಂದ ವಿಶ್ವವಿದ್ಯಾನಿಲಯವು ಪಾಟಲೀಪುತ್ರದ ಬಳಿ ಇತ್ತು . ಈಗ ಅದನ್ನು ಪಾಟ್ನಾ ಎಂದು ಕರೆಯುವರು.
4. ದಕ್ಷಿಣ ದೇಶದಿಂದ ಬಂದ ಯಾತ್ರಿಕ ಅವನ ವೇಷದ ಬಗ್ಗೆ ಏನು ಹೇಳುತ್ತಿದ್ದನು? ದಕ್ಷಿಣ ದೇಶದಿಂದ ಬಂದ ಯಾತ್ರಿಕ ಅವನ ವೇಷದ ಬಗ್ಗೆ , “ ನನ್ನ ಜ್ಞಾನವಷ್ಟಿದೆ . ಈ ತಾಮ್ರದ ರೇಕುಗಳನ್ನು ಬಿಗಿಸದೆಹೋದೆನಾದರೆ ನನ್ನ ಹೊಟ್ಟೆ ಬಿರಿದೀತು . ನನ್ನ ಸುತ್ತ ಸುಳಿವ ಅಜ್ಞಾನಿಗಳ ಕಂಡೆನಗೆ ‘ ಅಯ್ಯೋ ‘ ಅನಿಸುತ್ತದೆ ಆವರೆಲ್ಲ ಕತ್ತಲೆಯಲ್ಲಿ ತಡವಿ ಆಡುತ್ತಿದ್ದಾರೆ . ಅವರಿಗಾಗಿ ನಾ ನನ್ನ ನೆತ್ತಿಯಮೇಲೆ ದೀಪ ಹೊತ್ತಿದ್ದೇನೆ ” ಎನ್ನುತ್ತಿದ್ದನು .
ಪಠ್ಯ ಪೂರಕ ಅಧ್ಯಯನ - 5 ಆಟೋರಿಕ್ಷಾದ ರಸಪ್ರಸಂಗಗಳು ಕೃತಿಕಾರರ ಹೆಸರು : ಎಚ್. ನರಸಿಂಹಯ್ಯ
ಅ). ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. 1. ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರ ಅಭಿಪ್ರಾಯವೇನು? ಬೆಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೇ ಒಂದು ಪ್ರಯಾಸದ ಕೆಲಸ. ಎಂದು ಬೆಂಗಳೂರಿನ ಸಂಚಾರದ ಬಗ್ಗೆ ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.
2. ದೇಹಕ್ಕೆಲ್ಲ ನಟ್ಟು ಬೋಲ್ಟ್ ಹಾಕಿಸಿಕೊಳ್ಳುವುದಕ್ಕಿಂತ ಯಾವುದು ಲೇಸು? ಕೈಕಾಲು ಮುರಿದುಕೊಂಡು ಮೂಳೆ ವೈದ್ಯರ ಕೈಗೆ ಸಿಕ್ಕಿ ದೇಹದಲ್ಲಿ ನಟ್ಟೂ, ಬೋಲ್ಟೂ ಹಾಕಿಸಿಕೊಂಡು ಬದುಕುವುದಕ್ಕಿಂತ ಅಲ್ಲಿಯೇ ಭಗವಂತನ ಪಾದಾರವಿಂದವನ್ನು ಸೇರುವುದೇ ಲೇಸು.
3. ಸಿಡುಕಿನಿಂದ ಆಟೋ ಸ್ಟಾರ್ಟ್ ಮಾಡಿದ ಆಟೋ ಚಾಲಕ ಏನೆಂದು ಹೇಳಿದ ? ಸಿಡುಕಿನಿಂದ ಆಟೋ ಸ್ಟಾರ್ಟ್ ಮಾಡಿದ ಆಟೋ ಚಾಲಕ “ರೀ ಸ್ವಾಮಿ, ಸುಮ್ಮನೆ ಕುಳಿತುಕೊಳ್ಳಿ, ನಿಮ್ಮಂತವರಿಂದಲೇ ಆಕ್ಸಿಡೆಂಟ್ ಆಗುವುದು. ಹತ್ತುವುದಕ್ಕಿಂತ ಮುಂಚೇನೆ ಅಪಶಕುನ” ಎಂದು ಹೇಳಿದ .
4. ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿಲ್ಲವೇಕೆ? “ಇಲ್ಲಪ್ಪ, ನನಗೇನೂ ಅಲ್ಲಿ ಭಯವಾಗುವುದಿಲ್ಲ. ಯಾಕೆಂದರೆ ವಿಮಾನಕ್ಕೆ ಯಾವಾಗಲೂ ಎಮ್ಮೆ, ಹಸು, ಜನ ಅಡ್ಡ ಬರಲಿಲ್ಲ. ಜೊತೆಗೆ ವಿಮಾನವನ್ನು ಓವರ್‌ಟೇಕ್ ಮಾಡಿದ ಪ್ರಸಂಗವೂ ಇಲ್ಲ” ಅದಕ್ಕಾಗಿ ಲೇಖಕರಿಗೆ ವಿಮಾನ ಯಾನದ ಬಗ್ಗೆ ಭಯವಿರಲಿಲ್ಲ.
5. ಪ್ರಾರ್ಥನೆಯಿಂದ ಮಳೆ ಬರಿಸುವುದಾಗಿ ಹೇಳಿದ್ದವನಾರು? ಪ್ರಾರ್ಥನೆಯಿಂದ ಮಳೆ ಬರಿಸುವುದಾಗಿ ಹೇಳಿದವರು ಶಿವ ಬಾಲಯೋಗಿ .
6. ಆಟೋ ಚಾಲಕರಲ್ಲಿಯೂ ಮಾನವೀಯತೆಯನ್ನುರಿತ ಪ್ರಸಂಗದ ಬಗ್ಗೆ ತಿಳಿಸಿ. ಒಂದು ಸಂಜೆ ಜಯನಗರದಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಒಂದು ಕಾರ್ಯಕ್ರಮವಿತ್ತು. ಅದು ಮುಗಿಯುವುದು ರಾತ್ರಿ 10 ಘಂಟೆಯಾಯಿತು. ಆಟೋಗಾಗಿ ಕಾಲೇಜಿನ ಹತ್ತಿರ ಅಲ್ಲಿಯ ಕೆಲವು ಉಪಾಧ್ಯಾಯರೊಂದಿಗೆ ಕಾದು ನಿಂತಿದರು . ಆಗ “ಇಷ್ಟು ಹೊತ್ತಿನಲ್ಲಿ ಹಾಸ್ಟೆಲ್‌ನಲ್ಲಿ ಊಟ ಇರುವುದಿಲ್ಲ; ಆದುದರಿಂದ ನಮ್ಮ ಮನೆಗೆ ಬಂದು ಊಟಮಾಡಿಕೊಂಡು ಹೋಗಿ” ಎಂದು ಒಬ್ಬಿಬ್ಬ ಉಪಾಧ್ಯಾಯರು ಒತ್ತಾಯಪಡಿಸುತ್ತಿದ್ದರು. “ಪರವಾಗಿಲ್ಲ, ಒಂದು ಹೊತ್ತು ಊಟ ಇಲ್ಲದೇ ಇದ್ದರೆ ಚಿಂತೆ ಇಲ್ಲ. ತುಂಬಾ ಹೊತ್ತಾಗಿದೆ” ಎಂದು ಹೇಳಿ ಅಲ್ಲಿಂದ ಹೊರಟರು . ಆಟೋ ಚಾಲಕರು ಸ್ವಲ್ಪ ವಯಸ್ಸಾದವರು. ಇದೆನ್ನೆಲ್ಲಾ ಸಾವಧಾನವಾಗಿ ಕೇಳುತ್ತಿದ್ದರು. ‘ಯಾಕೆ ಸಾರ್, ನಿಮಗೆ ಮನೆ ಇಲ್ಲವೇ? ಊಟ ಇಲ್ಲದೇ ಇದ್ದರೂ ಪರವಾಗಿಲ್ಲ ಅಂತ ಹೇಳುತ್ತಿದ್ದೀರಿ” ಎಂದು ಕೇಳಿದರು. “ಇಲ್ಲಪ್ಪ, ನನಗೆ ಮನೆ-ಗಿನೆ ಇಲ್ಲ, ನ್ಯಾಷನಲ್ ಕಾಲೇಜ್ ಹಾಸ್ಟೆಲಿನಲ್ಲಿದ್ದೇನೆ” ಅಂದರು . “ಇಷ್ಟು ಹೊತ್ತಿನಲ್ಲಿ ಉಪವಾಸ ಮಲಗಿಕೊಳ್ಳಬಾರದು ಸಾರ್. ವಿಶ್ವೇಶ್ವರಪುರದಲ್ಲಿರುವ ಸಜ್ಜನರಾವ್ ಸರ್ಕಲ್‌ಗೆ ಹೋಗೋಣ ಬನ್ನಿ. ಅಲ್ಲಿ ಇಡ್ಲಿ ಮಾರುತ್ತಾರೆ. ನೀವು ಇಡ್ಲಿ ತಿನ್ನುವ ತನಕ ಕಾಯುತ್ತೇನೆ ". ಎಂದು ತುಂಬಾ ಆತ್ಮೀಯವಾಗಿ ವಿನಂತಿಸಿಕೊಂಡರು . "ತುಂಬಾ ಥ್ಯಾಂಕ್ಸ್ , ನಿಮ್ಮಂತವರು ಬಹಳ ಅಪರೂಪ . ಆಟೋದವರಿಗೆ ಮಾನವೀಯತೆ ಇಲ್ಲ ಎಂದು ಹೇಳುತ್ತಾರೆ . ನೀವು ಅದಕ್ಕೆ ಅಪವಾದ " ಎಂದು ವಂದಿಸಿದೆ .