ಪಠ್ಯ ಪೂರಕ ಅಧ್ಯಯನ - 1 ಗುಣಸಾಗರಿ ಪಂಢರೀಬಾಯಿ ಕೃತಿಕಾರರ ಪರಿಚಯ : ಜಯಮಾಲಾ ಜಯಮಾಲಾ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ 28-02-1959ರಲ್ಲಿ ಜನಿಸಿದರು . ಕರ್ನಾಟಕ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ ಈ ವಿಷಯದಡಿಯಲ್ಲಿ ಪಿ. ಹೆಚ್ .ಡಿ ಪದವಿಯನ್ನು ಪಡೆದಿದ್ದಾರೆ. ನಾಯಕಿಯಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ . ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ,ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ, ಕೇಂದ್ರ ಸರ್ಕಾರ ಚಲನಚಿತ್ರ ಆಯ್ಕೆ ಸಮಿತಿಯ ಸದಸ್ಯರಾಗಿ ಹೀಗೆ ವಿವಿಧ ವಲಯಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ . ಅವರೇ ನಿರ್ಮಿಸಿ, ನಟಿಸಿದ ತಾಯಿ ಸಾಹೇಬ ಚಿತ್ರಕ್ಕೆ ಸ್ವರ್ಣ ಕಮಲ ಪ್ರಶಸ್ತಿ, ಅಭಿನಯಕ್ಕೆ ವಿಶೇಷ ರಾಷ್ಟ್ರ ಪ್ರಶಸ್ತಿ , ಅತ್ಯುತ್ತಮ ನಟಿ , ಅತ್ಯುತ್ತಮ ಚಿತ್ರ ಫಿಲಂಫೇರ್ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ . ಇದಲ್ಲದೆ ರಾಜೀವ್ ಗಾಂಧಿ , ರಾಷ್ಟ್ರೀಯ ಸೌಹಾರ್ದ ಪ್ರಶಸ್ತಿ , ಕನ್ನಡ ರಾಜ್ಯೋತ್ಸವ ಪ್ರಶಸ್ತಿ , ವಿ .ಶಾಂತರಾಂ ಬಂಗಾರದ ಪದಕ ಗ್ಲೋಬಲ್ ಮ್ಯಾನ್ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ . ಪ್ರಸ್ತುತ ಪಾಠವು ಜಯಮಾಲಾ ಅವರು ಬರೆದಿರುವ ಪಂಢರೀಬಾಯಿ ಕೃತಿಯ ಸಂಕ್ಷಿಪ್ತ ರೂಪವಾಗಿದೆ.
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ . 1. ಪಂಡರಿಬಾಯಿ ಅವರ ತಂದೆ-ತಾಯಿಯರ ಹೆಸರೇನು ? ಪಂಡರಿಬಾಯಿ ಅವರ ತಂದೆ ರಂಗರಾವ್ ಮತ್ತು ಕಾವೇರಿಬಾಯಿ .
2. ಪಂಡರಿಬಾಯಿಯವರು ನಟಿಸಿದ ಮೊದಲ ಚಿತ್ರದ ಹೆಸರೇನು ? ಪಂಡರಿಬಾಯಿಯವರು ನಟಿಸಿದ ಮೊದಲ ಚಿತ್ರ ವಾಣಿ.
3. ಪಂಡರಿಬಾಯಿ ನಾಟಕರಂಗಕ್ಕೆ ಪ್ರವೇಶಿಸಬೇಕಾಗಿ ಬಂದದ್ದು ಯಾಕೆ ? ಆದರ್ಶ ನಾಟಕ ಸಂಘ ಪ್ರದರ್ಶಿಸುತ್ತಿದ್ದ ನಾಟಕದಲ್ಲಿ ಅಭಿನಯಿಸುತ್ತಿದ್ದ ನಟಿ ಇನ್ನೇನು ನಾಟಕ ಆರಂಭಕ್ಕೆ ಅರ್ಧಗಂಟೆ ಬಾಕಿ ಇರುವಾಗ ನಾನು ಬರುವುದಿಲ್ಲ ಎಂಬ ಸುದ್ದಿ ಕಳುಹಿಸಿದಳು. ನಾಟಕದ ಟಿಕೆಟುಗಳು ಪೂರ್ತಿ ಮಾರಾಟವಾಗಿದ್ದವು. ನಾಟಕ ನಿಂತರೆ ಕುಟುಂಬ ಬಹುದೊಡ್ಡ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಿತ್ತು . ಆ ಪಾತ್ರವನ್ನು ತಂಗಿ ಪಂಡರಿಬಾಯಿ ಕೈಲಿ ಏಕೆ ಮಾಡಿಸಬಾರದು ? ಎಂಬ ಆಲೋಚನೆ ಅಣ್ಣ ವಿಮಲಾನಂದನಿಗೆ ಬಂತು . ಆದ್ದರಿಂದ ಪಂಡರಿಬಾಯಿ ಅವರು ನಾಟಕದಲ್ಲಿ ನಟಿಸುವ ಮೂಲಕ ನಾಟಕರಂಗಕ್ಕೆ ಪ್ರವೇಶಿಸಿದರು.
4. ಪಂಡರಿಬಾಯಿ ಅವರಿಗೆ ಜೀವಮಾನ ಸಾಧನೆಗಾಗಿ ಯಾವ ಪ್ರಶಸ್ತಿಯನ್ನು ನೀಡಲಾಗಿದೆ? ಪಂಡರಿಬಾಯಿ ಅವರಿಗೆ ಜೀವಮಾನ ಸಾಧನೆಗಾಗಿ 2000ದಲ್ಲಿ ಫಿಲ್ಮ್ ಫೇರ್ ಪ್ರಶಸ್ತಿಯನ್ನು ನೀಡಲಾಗಿದೆ.
5. ಪಂಡರಿಬಾಯಿಯವರು ಯಾರ ಮನಸ್ಸಿನಲ್ಲಿ ಅಮರರಾದರು ? ಪಂಡರಿಬಾಯಿಯವರು ಕಲಾ ರಸಿಕರ ಮನಸ್ಸಿನಲ್ಲಿ ಅಮರರಾದರು .
6. ಪಂಡರಿಬಾಯಿಯವರು ನಾಟಕದಲ್ಲಿ ಬಣ್ಣಹಚ್ಚಲು ಕಾರಣವೇನು ? ಪಂಡರೀಬಾಯಿಯವರಿಗೆ ಆಕಸ್ಮಿಕವಾಗಿ ಮದುವೆ ನಾಟಕದಲ್ಲಿ ಬಣ್ಣ ಹಚ್ಚುವ ಸನ್ನಿವೇಶ ಎದುರಾಯಿತು . ಆದರ್ಶ ನಾಟಕ ಸಂಘ ಪ್ರದರ್ಶಿಸುತ್ತಿದ್ದ ನಾಟಕದಲ್ಲಿ ಅಭಿನಯಿಸುತ್ತಿದ್ದ ನಟಿ ಇನ್ನೇನು ನಾಟಕ ಆರಂಭಕ್ಕೆ ಅರ್ಧಗಂಟೆ ಬಾಕಿ ಇರುವಾಗ ನಾನು ಬರುವುದಿಲ್ಲ ಎಂಬ ಸುದ್ದಿ ಕಳುಹಿಸಿದಳು. ನಾಟಕದ ಟಿಕೆಟುಗಳು ಪೂರ್ತಿ ಮಾರಾಟವಾಗಿದ್ದವು. ನಾಟಕ ನಿಂತರೆ ಕುಟುಂಬ ಬಹುದೊಡ್ಡ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತಿತ್ತು . ಆ ಪಾತ್ರವನ್ನು ತಂಗಿ ಪಂಡರಿಬಾಯಿ ಕೈಲಿ ಏಕೆ ಮಾಡಿಸಬಾರದು ? ಎಂಬ ಆಲೋಚನೆ ಅಣ್ಣ ವಿಮಲಾನಂದನಿಗೆ ಬಂತು . ಆದ್ದರಿಂದ ಪಂಡರಿಬಾಯಿಯವರು ನಾಟಕದಲ್ಲಿ ಬಣ್ಣಹಚ್ಚಲು ಕಾರಣವಾಯಿತು .
7. ರಂಗರಾವ್ ಅವರು ಮಗಳ ಹೆಸರನ್ನು ಪಂಡರಿಬಾಯಿ ಎಂದು ಬದಲಾಯಿಸಲು ಕಾರಣವೇನು? ರಂಗರಾವ್ ಅವರಿಗೆ ಪಂಡರಾಪುರದ ಪಂಡರಿನಾಥನಲ್ಲಿ ಅತೀವ ಶ್ರದ್ಧೆ ಮತ್ತು ಭಕ್ತಿ. ಆದ್ದರಿಂದ ಗೀತಾ ಎಂಬ ಹೆಸರನ್ನು ಪಂಡರಿಬಾಯಿ ಎಂದು ಬದಲಾಯಿಸಿದರು .
8. ಪಂಡರೀಬಾಯಿಯವರು ಕಲಾವಿದೆಯಾಗಿ ರೂಪುಗೊಳ್ಳಲು ಸಹಕರಿಸಿದ ಅಂಶಗಳು ಯಾವುವು ? ಚಿಕ್ಕಂದಿನಿಂದಲೇ ಅವರಿಗೆ ಸಂಗೀತ ಅಭ್ಯಾಸವಾಗಿತ್ತು . ಹರಿಕಥೆ ಮಾಡುವುದನ್ನು ಹಾಗೂ ಕೀರ್ತನೆಯನ್ನು ಹಾಡುವುದನ್ನು ಇವರು ಕಲಿತಿದ್ದರು. ಅಲ್ಲದೇ ಮನೆಯಲ್ಲಿದ್ದ ಸೃಜನಶೀಲ ವಾತಾವರಣ ಪಂಡರಿಬಾಯಿಯವರ ಕಲಾವಿದೆ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರಲ್ಲಿದ್ದ ಪ್ರತಿಭೆ ಅಂತಃಕರಣ ಮತ್ತು ಹೃದಯ ಶ್ರೀಮಂತಿಕೆ ಅಪರೂಪದ ಕಲಾವಿದೆಯಾಗಿ ರೂಪುಗೊಳ್ಳಲು ಸಹಾಯಕವಾಯಿತು.
ಪಠ್ಯ ಪೂರಕ ಅಧ್ಯಯನ – 2 ಹೊಳೆಬಾಗಿಲು ಕೃತಿಕಾರರ ಹೆಸರು : ಸುಶ್ರುತ ದೊಡ್ಡೇರಿ ಸುಶ್ರುತ ದೊಡ್ಡೇರಿ ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನವರು , ಈಗ ಬೆಂಗಳೂರು ವಾಸಿ ಪ್ರಣತಿ - ಸಂಸ್ಥೆಯ ಜತೆ ಸಾಹಿತ್ಯ – ಸಂಸ್ಕೃತಿ – ಪ್ರಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು . ಚಿತ್ರಚಾಪ ( ಗೆಳೆಯರ ಜತೆ ) , ಹೊಳೆಬಾಗಿಲು ( ಲಲಿತ ಪ್ರಬಂಧಗಳು ) , ಬ್ಲಾಗಿಸು ಕನ್ನಡ ಡಿಂಡಿಮವ ( ಸಹ – ಸಂಪಾದಿತ ) ಇವರ ಪ್ರಕಟಿತ ಕೃತಿಗಳು . ಮೌನಗಾಳ ಎಂಬ ಬ್ಲಾಗಿನಲ್ಲಿ ಹಲವು ವರ್ಷಗಳಿಂದ ಬರೆಯುತ್ತಿದ್ದಾರೆ .
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ. 1. ಲಾಂಚು ಬರುವವರೆಗೆ ಹೊತ್ತು ಕಳೆಯಲು ಏನೆಲ್ಲ ಚಟುವಟಿಕೆಯನ್ನು ಮಾಡಬಹುದು? ಲಾಂಚು ಬರುವವರೆಗೆ ಹೊತ್ತು ಕಳೆಯಲು ದಂಡೆಯಲ್ಲಿ ಅಡ್ಡಾಡ್ಡುತ್ತಾ ಕಪ್ಪೆ ಚಿಪ್ಪು ಮತ್ತು ನುಣ್ಣನೆ ಉರುಟು ಕಲ್ಲುಗಳನ್ನು ಹೆಕ್ಕಬಹುದು. ಹೆಕ್ಕಿದ ಕಲ್ಲನ್ನು ಹೊಳೆಗೆ ಎಸೆಯಬಹುದು. ಕಲ್ಲು ಬಿದ್ದ ಜಾಗದಲ್ಲಿ ಎದ್ದ ಅಲೆಯು , ಅಲೆ ಅಲೆಯಾಗಿ ನಿಮ್ಮತ್ತಲೇ ತೇಲಿಬರುವುದನ್ನು ನೋಡುತ್ತಾ ಮೈಮರೆಯಬಹುದು.
2. ಲಾಂಚು ಹೊಳೆಯ ದಡಕ್ಕೆ ಬಂದು ನಿಂತಾಗ ಜನರ ಗಡಿಬಿಡಿ ಹೇಗಿರುತ್ತದೆ? ಲಾಂಚು ಹೊಳೆಯ ದಡಕ್ಕೆ ಬಂದು ನಿಂತಾಗ ಮೊದಲು ಜನರೆಲ್ಲ ಓಡಿ ಹೋಗಿ ಹತ್ತುತ್ತಾರೆ .ಆಮೇಲೆ ವಾಹನಗಳೆಲ್ಲ ಒಂದೊಂದಾಗಿ ಬರುತ್ತವೆ. ಎಲ್ಲಾ ವಾಹನಗಳು ಹಿಡಿಸುವುದಿಲ್ಲ. ಒಂದು ಕಾರಿಗೆ ಜಾಗ ಇಲ್ಲದೆ ಮುಂದಿನ ಟ್ರಿಪ್ಪಿನವರೆಗೂ ಕಾಯಬೇಕಾಯಿತು. ಲಾಂಚು ಇನ್ನೇನು ಹೊರಟಿತು. ಅನ್ನುವಷ್ಟರಲ್ಲಿ ಒಂದು ಬೈಕು ಹಾರನ್ನು ಮಾಡಿಕೊಂಡು ಬಂತು . ಅದನ್ನು ಸಹ ಹತ್ತಿಸಿಕೊಂಡಾಗ, ಬಂದವನು ಬೈಕಿನಲ್ಲಿ ಬಂದಿದ್ದರೂ ಓಡಿ ಬಂದು ಹತ್ತಿದವನಂತೆ ಏದುಸಿರು ಬಿಡುತ್ತಿದ್ದಾನೆ.
3. ನದಿಯಲ್ಲಿ ಲಾಂಚು ಚಲಿಸುತ್ತಿರುವಾಗ ಅದರಲ್ಲಿ ಕೂತವರ ಮಧ್ಯೆ ಏನೇನು ಮಾತುಕತೆಗಳು ನಡೆದಿರುತ್ತವೆ? ನದಿಯಲ್ಲಿ ಲಾಂಚು ಚಲಿಸುತ್ತಿರುವಾಗ ಅದರಲ್ಲಿ ಕೂತವರ ಮಧ್ಯೆ ನಡೆದ ಮಾತುಕತೆಗಳು ಅಜ್ಜಿ ಒಂದು ಕೈ ಮುಗಿದು ” ದೇವರೇ ಸುಖವಾಗಿ ಆ ದಡ ತಲುಪಿಸಪ್ಪಾ” ಎನ್ನುತ್ತಿದೆ. ಹುಡುಗನೊಬ್ಬ ಅಪ್ಪನಿಗೆ ” ಅಪ್ಪ ಇಷ್ಟು ದೊಡ್ಡ ಲಾಂಚನ್ನು ಇಲ್ಲಿಗೆ ಹೇಗೆ ತಂದರು? ಲಾರಿಯಲ್ಲೂ ಹಿಡಿಯುವುದಿಲ್ಲ ” ಎಂದು ಕೇಳುತ್ತಿದ್ದಾನೆ. ಅಪ್ಪನಿಗೆ ಏನು ತಿಳಿಯದಿದ್ದರೂ ” ಇದನ್ನು ದೂರದ ಸಮುದ್ರದಿಂದ ಡ್ರೈವ್ ಮಾಡಿಕೊಂಡು ಬಂದದ್ದು ಈ ಹೊಳೆ ಹೋಗಿ ಸಮುದ್ರಕ್ಕೆ ಸೇರುತ್ತಲ ಅಲ್ಲಿಂದ ಬಂದದ್ದು ” ಎಂದು ಏನೋ ಸಮಜಾಯಿಷಿ ಕೊಡುತ್ತಿದ್ದನು .
4. ಲಾಂಚು ತನ್ನ ಪಯಣ ಮುಗಿಸಿದಾಗ ಜನರು ಹೇಗೆ ಹೊರಡುತ್ತಾರೆ ? ಲಾಂಚು ತನ್ನ ಪಯಣ ಮುಗಿಸಿದಾಗ ಜನರು ಲಾಂಚಿಂದ ಎಲ್ಲಾ ಆಚೆ ದಡಕ್ಕೆ ಜಿಗಿಯುತ್ತಾರೆ. ಬಸ್ಸು ಕಾರು ಬೈಕುಗಳು ಬುರಬುನೆ ದಡ ಸೇರುತ್ತವೆ. ಎಲ್ಲರೂ ಹೋಟೆಲ್ಲಿಗೆ ಹೋಗಿ ಮಾಣಿ ಇವತ್ತು ಏನು ವಿಶೇಷ ಮಾಡಿದ್ರಾ? ಎಂದು ಕೇಳುತ್ತಿದ್ದಾರೆ . ಭಟ್ಟರ ಮಗನ ಬಳಿ ತಿಂಡಿ ತಿಂದು, ಕಾಫಿ ಕುಡಿದು, ಎಲ್ಲರೂ ಮತ್ತೆ ಬಸ್ಸು ಹತ್ತುತ್ತಾರೆ. ಅಲ್ಲಿಲ್ಲಿ ಚದುರಿ ಹೋಗಿದ್ದವರೆನ್ನಲ್ಲ ಕರೆ ಕರೆದು ಬಸ್ಸಿಗೆ ಹತ್ತಿಸಿಕೊಂಡು ಬಸ್ಸು ಹೊರಟಿದೆ. ಹೊಳೆ ದಾಟಿದ ಖುಷಿಯಲ್ಲಿ ನಾಗಾಲೋಟದಲ್ಲಿ ಓಡತೊಡಗಿದೆ. ಎಂದು ಲಾಂಚಿನ ಪಯಣ ಮುಗಿಸಿದ ಜನರ ಸಂಭ್ರಮವನ್ನು ಲೇಖಕರು ವರ್ಣಿಸಿದ್ದಾರೆ.
5. ಹೊಳೆ ಮತ್ತು ಲಾಂಚಿನ ಒಟ್ಟಾರೆ ದಿನಚರಿಯ ಬಗ್ಗೆ ಲೇಖಕರ ಅನಿಸಿಕೆಯೇನು? ಹೊಳೆ ದಾಟಲು ಲಾಂಚ್ ಅನಿವಾರ್ಯ ನೀವು ಎಷ್ಟೆ ವೇಗವಾಗಿ ಬಂದರೂ ಹೊಳೆ ನಿಮ್ಮನ್ನು ತಡೆದು ನಿಲ್ಲಿಸುತ್ತದೆ ಅವಸರ ಮಾಡುವಂತಿಲ್ಲ. ದಿನವೂ ಅದೇ ಲಾಂಚ್ ಅದು ಅಲ್ಲಿಂದ ಜನರ ವಾಹನಗಳನ್ನೆಲ್ಲ ಹತ್ತಿಸಿಕೊಂಡು ನಿಧಾನವಾಗಿ ಈಚೆ ದಡಕ್ಕೆ ಬರಬೇಕು. ಲಾಂಚಿನಲ್ಲಿ ಡ್ರೈವರ್ ಎಲ್ಲಿ ಕುಳಿತಿರುತ್ತಾನೆ. ಇದೇ ಲಾಂಚನ್ನು ಇದೇ ರೂಟಿನಲ್ಲಿ ಪ್ರತಿದಿನವು ಓಡಿಸಿಕೊಂಡಿರಲಿಕ್ಕೆ ಅವನಿಗೆ ಬೇಸರವಾಗುವುದಿಲ್ಲವಾ? ಎನ್ನುವ ಮಾತಿನಲ್ಲಿ ಒಂದೇ ತರಹದ ದಿನಚರಿಯಿಂದ ಆಗುವ ಬೇಸರವನ್ನು ಲೇಖಕರು ಹೊರಹಾಕುತ್ತಾರೆ.
ಪಠ್ಯಪೂರಕ ಅಧ್ಯಯನ -3 ನನ್ನಾಸೆ ಕೃತಿಕಾರರ ಪರಿಚಯ : ಇಂದುಮತಿ ಲಮಾಣಿ ಇಂದುಮತಿ ಲಮಾಣಿ ಅವರು 1959 ರಲ್ಲಿ ವಿಜಯಪುರ ಜಿಲ್ಲೆ ಬರಟಗಿ ಮೂರನೇ ತಾಂಡದಲ್ಲಿ ಜನಿಸಿದರು. ದಲಿತ ಸಾಹಿತ್ಯ ಪ್ರಕಾರದ ಪ್ರಮುಖ ಕವಯಿತ್ರಿ . ಇವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ , ಡಾಟರ್ ಆಫ್ ನೈನ್ ಪ್ರಶಸ್ತಿ, ಮೈತ್ರಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ. ತಾಯಿ ಲೋಕ, ಭಾವಲೋಕ , ಏಕಾದಶ ಕೊರಡು ಕೊನರುವುದು , ಬರಡು ಹಯನಹುದಯ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ.
ಪಠ್ಯಪೂರಕ ಅಧ್ಯಯನ - 4 ಉರಿದ ಬದುಕು ಕೃತಿಕಾರರ ಪರಿಚಯ : ಶಾಂತರಸ ಶಾಂತರಸ ಅವರು ಕ್ರಿಸ್ತಶಕ 1924 ರಲ್ಲಿ ರಾಯಚೂರು ಹತ್ತಿರದ ಹೆಂಬೇರಾಳಿ ಎಂಬಲ್ಲಿ ಜನಿಸಿದರು. ಶಿಕ್ಷಕರಾಗಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸಿರುವರು . ಕವಿ , ಕತೆಗಾರ , ಸಂಶೋಧಕ ನಾಟಕಕಾರ , ಅನುವಾದಕ , ಸಂಪಾದಕರಾಗಿ ಉರಿದ ಬದುಕು , ಸತ್ಯ ಸ್ನೇಹ , ನಂಜು ನೊರೆವಾಲು , ಬಹುರೂಪ , ಬೆನ್ನ ಹಿಂದಿನ ಬೆಳಕು , ಕಲ್ಯಾಣ ದೀಪ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ . ಇವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ . 2005 ರಲ್ಲಿ ಬೀದರಿನಲ್ಲಿ ಜರುಗಿದ 72ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಾಹಿತ್ಯದ ಮೂಲಕ ಸಮಾಜದ ಚರಿತ್ರೆಯನ್ನು ಕಟ್ಟಿಕೊಳ್ಳಬಹುದಾದ ಕತೆಗಳನ್ನು ಬರೆದ ಕೆಲವೇ ಜನ ಲೇಖಕರಲ್ಲಿ ಇವರೂ ಒಬ್ಬರಾಗಿದ್ದಾರೆ.
ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿರಿ . 1. ಅರ್ಧ ಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ ಏನೆಂದು ಹೇಳಿದಳು ? ಅರ್ಧ ಬಾಗಿಲು ತೆಗೆದು ಅನ್ನವ್ವ ತಿಪ್ಪಣ್ಣನಿಗೆ “ ಬೇಡ ಅಣ್ಣ ಕಾಲಿಗೆ ಬೀಳುತ್ತೇನೆ ; ಒಳಗೆ ಬರಬೇಡ ನಮ್ಮನ್ನೆಲ್ಲ ಸಾವಿನ ಬಾಯಿಯಲ್ಲಿ ತುರಕಬೇಡ ” ಎಂದು ಹೇಳಿದಳು .
2. ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಯಾರು ? ತಿಪ್ಪಣ್ಣನನ್ನು ಗಪ್ಪನೆ ಬಲವಾಗಿ ಹಿಡಿದುಕೊಂಡವರು ಶಂಕ್ರಣ್ಣ
3. ದುರ್ಗಪ್ಪ ಯಾರು? ಶಾಂತರಸ ದುರ್ಗಪ್ಪ ಭಜನೆ , ತತ್ವಪದ ಹಾಡುವವನು ಹಾಗೂ ತಿಪ್ಪಣ್ಣ ಮೊದಲಾದ ಹೋರಾಟಗಾರರಿಗೆ ಆಶ್ರಯ ನೀಡಿದವನು.
4. ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗ್ಗೆ ಹೇಳಿದ ನೀತಿ ಮಾತುಗಳಾವುವು ? ದುರ್ಗಪ್ಪನು ಶಂಕ್ರಣ್ಣನಿಗೆ ಕುಲದ ಬಗೆಗೆ “ ಕುಡಿ ತಮ್ಮ ಮೊದಲು ಜೀವ ಬದುಕಲಿ . ಜೀವಕ್ಕೆ ಯಾವ ಕುಲನೂ ಇಲ್ಲ . ಗಾಳಿಗೆ ಕುಲ ಇದೀಯಾ ತಮ್ಮ ? ನೀರಿಗೆ ಕುಲ ಇದೀಯಾ ? ನೆಲಕ್ಕೆ ಕುಲ ಇದೀಯಾ ? ಇದೆಲ್ಲ ನಾವು ಮಾಡಿಕೊಂಡಿದ್ದು ” ಎಂಬ ನೀತಿಯ ಮಾತುಗಳಾಡಿದರು.
5. ದುರ್ಗಪ್ಪನ ಯಾವ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂಗೆ ಆಗುವಂತೆ ಮಾಡುತ್ತಿದ್ದವು? ಗೆಲುವು ನಮಗೆ , ಬದುಕಿದ್ದರೇ ಸ್ವತಂತ್ರ ನೋಡೋಣ ಸತ್ತರೆ ದೇಶಕ್ಕಾಗಿ ಸತ್ತ ಎಂದು ಹೇಳುತ್ತಾರೆ . ಇಂತಹ ಸಾವು ಯಾರಿಗುಂಟು ಯಾರಿಗಿಲ್ಲ . ಅದು ಪುಣ್ಯದ ಕೆಲಸ , ನಮ್ಮ ಮುಂದಿನವರಾದರೂ ಸ್ವತಂತ್ರ ನೋಡ್ತಾರಲ್ಲ ” ಎಂಬ ದುರ್ಗಪ್ಪನ ಈ ಮಾತುಗಳು ಹೋರಾಟಗಾರರ ಕೈಕಾಲು ಉಕ್ಕಿನಂಗೆ ಆಗುವಂತೆ ಮಾಡುತ್ತಿದ್ದವು .