ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ :
1. ಕನ್ನಡ ರಾಘವ ಎಂದು ಪ್ರಸಿದ್ಧರಾದವರು ಯಾರು ?
 ಮಹಮ್ಮದ್ ಪೀರ್ ಅವರು, ಕನ್ನಡ ರಾಘವ ಎಂದು ಪ್ರಸಿದ್ಧರಾದವರು.

2. ಮಹಮ್ಮದ್ ಪೀರ್ ಅವರು ಯಾರ ಆಶ್ರಯದಲ್ಲಿ ಬೆಳೆದರು?
ಮಹಮ್ಮದ್ ಪೀರ್ ಅವರು , ಅವರ ಸೋದರಮಾವನ ಆಶ್ರಯದಲ್ಲಿ ಬೆಳೆದರು.

3. ಮಹಮ್ಮದ್ ಪೀರ್ ಅವರಿಗೆ ನಾಟಕದ ಅಭಿರುಚಿ ಯಾವಾಗ ಹತ್ತಿತು? 
ಮಹಮ್ಮದ್ ಪೀರ್ ಅವರಿಗೆ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ನಾಟಕದ ಅಭಿರುಚಿ ಹತ್ತಿತು.

4. ಮಹಮ್ಮದ್ ಪೀರ್ ಅವರ ಯಾವ ಪಾತ್ರಗಳು ವಿಶೇಷ ಖ್ಯಾತಿಗೆ ಪಾತ್ರವಾಗಿವೆ?
ಸಂಸಾರ ನೌಕದಲ್ಲಿ ಸುಂದರನ ಪಾತ್ರ , ಷಾಜಹಾನ್ ನಲ್ಲಿ ದಾರಾ , ಗೌತಮ ಬುದ್ದದಲ್ಲಿ ಗೌತಮನ ಪಾತ್ರಗಳ ಅಭಿನಯ ವಿಷೇಶ ಖ್ಯಾತಿಗೆ ಪಾತ್ರವಾಗಿದೆ.

5. ಮಹಮ್ಮದ್ ಪೀರ್‌ರವರ ತಂದೆ ತಾಯಿ ಹೆಸರೇನು?
 ಮಹಮ್ಮದ್ ಪೀರ್‌ರವರ ತಂದೆ ಪೈಲ್ವಾನ್ ಮೊಹಿಯುದ್ದೀನ್ , ತಾಯಿ ಮುಬಾರಾಷ್ಕಿ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಕವಯಿತ್ರಿಯು ತಾಯಿಯ ಪಾದಕ್ಕೆ ಏನು ತರುತ್ತಾಳೆ?
ತಾಯಿಯ ಪಾದಕ್ಕೆ ಕವಯಿತ್ರಿಯು ಬೊಗಸೆ ತುಂಬಾ ಹೂವು ತಂದು ಪಾದಕಮಲಗಳಿಗೆರಗುತ್ತಾಳೆ.

2. ಜಗತ್ತಿನಲ್ಲಿ ಮಿಗಿಲಾದುದು ಯಾವುದು?
ಜಗತ್ತಿನಲ್ಲಿ ಎಲ್ಲಕ್ಕೂ ಮಿಗಿಲಾದುದು ತಾಯಿಯ ಹರಕೆ.

3. ತಾಯಿ ಮಗುವಿಗೆ ಏನನ್ನು ಕಲಿಸುತ್ತಾಳೆ?
ತಾಯಿ ಮಗುವಿಗೆ ಬುದ್ಧಿ ನೀಡಿ , ವಿದ್ಯೆ ಕಲಿಸಿ ಸಿದ್ದಿಪಡೆಯುವಂತೆ ಮಾಡುತ್ತಾಳೆ.

4. ಮಗು ಬಿದ್ದಾಗ ತಾಯಿ ಹೇಗೆ ರಮಿಸುತ್ತಾಳೆ?
 ಮಗು ಬಿದ್ದಾಗ ಓಡಿಬಂದು ಎತ್ತಿಕೊಂಡು ಸಂತೈಸಿ , ಮುದ್ದಾಡುತ್ತಾಳೆ.

5. ತಾಯಿ ಮಗುವಿಗೆ ಏನನ್ನು ಕುಡಿಸುತ್ತಾಳೆ?
ಮಗುವಿಗೆ ತಾಯಿ ತನ್ನ ಎದೆಯ ಹಾಲನ್ನು ಕುಡಿಸುತ್ತಾಳೆ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ವಿಜಿಗೆ ಗುಮ್ಮಗಳ ಬಗ್ಗೆ ಭಯ ಹುಟ್ಟಿದ್ದೇಕೆ?
ವಿಜಿ ಚಿಕ್ಕವಳಿದ್ದಾಗ ಹಾಲು ಕುಡಿಯದಿದ್ದರೆ, ಊಟ ಮಾಡದಿದ್ದರೆ ” ಗುಮ್ಮ ಬರುತ್ತದೆ ಬೇಗ ಬೇಗ ತಿನ್ನು” ಎಂದು ಹೆದರಿಸಲಾಗುತ್ತಿತ್ತು. ಅವರ ಮನೆಯ ಹತ್ತಿರವೇ ಮಳೆಗಾಲದ ರಾತ್ರಿಗಳಲ್ಲಿ ಗುಮ್ಮಗಳು ಊಂ ಎಂದು ಸತತವಾಗಿ ಕೂಗುವುದು ಕೇಳಿ ಗುಮ್ಮನ ಕುರಿತು ಭಯ ಅವಳಲ್ಲಿ ಹುಟ್ಟಿತು.

2. ಹಳ್ಳಿಯಲ್ಲಿ ರಾತ್ರಿಯ ಕತ್ತಲು ಹೇಗಿರುತ್ತದೆ?
ಹಳ್ಳಿಗಳಲ್ಲಿ ವಿದ್ಯತ್ತೇ ಇರುವುದಿಲ್ಲ. ಉರಿಯುವ ಚಿಮಣಿ ದೀಪ ಬಿಟ್ಟರೆ ಹೊರಗೆಲ್ಲ ದಟ್ಟ ಕತ್ತಲು ಹೇಗೆಂದರೆ ಜಗವೆಲ್ಲವೂ ಮಸಿಯಲ್ಲಿ ಅದ್ದಿಟ್ಟಂತೆ ಕಣ್ಣಿಗೆ ಕಣ್ಣು ತಾಗಿಸಿದರೂ ಕತ್ತಲಲ್ಲದೆ ಬೇರೆನೂ ಕಾಣುವುದಿಲ್ಲ. ಮಳೆಗಾಲ ಮತ್ತು ಅಮವಾಸ್ಯೆಯ ಸಂದರ್ಭದಲ್ಲಿ ಕತ್ತಲು ಮತ್ತಷ್ಟು ಕಟುವಾಗಿರುತ್ತದೆ. ಬೇಸಿಗೆಯ ಹುಣ್ಣಿಮೆಯ ದಿನಗಳಲ್ಲಿ ಒಳ್ಳೆಯ ತಿಂಗಳ ಬೆಳಕು ಚೆಲ್ಲಿಕೊಂಡು ಹೊರಗಿನ ಗದ್ದೆ, ಗಿಡ ಮರಗಳು ಕಾಣುತ್ತಿರುತ್ತವೆ.

3. ರಾತ್ರಿಯ ಕತ್ತಲಿನಲ್ಲಿ ಬೆಳಕು ಹುಟ್ಟಿಸಿಕೊಳ್ಳಲು ಹಳ್ಳಿಗರು ಏನೇನು ಉಪಾಯಗಳನ್ನು ಮಾಡುತ್ತಾರೆ?
ಹಳ್ಳಿಗರು ಸಂಜೆಯಾದೊಡನೆ ಚಿಮಣಿ ದೀಪಗಳು, ಒಂದೆರಡು ಲ್ಯಾಂಪ್ಗಳು, ದೇವರ ದೀಪವನ್ನು ಹಚ್ಚಿಬಿಡುತ್ತಿದ್ದರು. ದೂರ ಎಲ್ಲಾದರೂ ಹೋಗುತ್ತಿದ್ದರೆ ಬ್ಯಾಟರಿಯನ್ನು ಬಳಸುತ್ತಿದ್ದರು. ಎಲ್ಲರ ಮನೆಯಲ್ಲಿ ಬ್ಯಾಟರಿ ಇರಲಿಲ್ಲ. ಹೆಚ್ಚಿನವರು ದೂರದ ಪ್ರಯಾಣಕ್ಕೆ ಸೂಡಿಯನ್ನು ಬಳಸುತ್ತಿದ್ದರು. ತೆಂಗು, ಅಡಿಕೆಯ ಗರಿ ಬಾಳೆ ನಾರಿನಿಂದ ಸೂಡಿಯನ್ನು ತಯಾರಿಸಿ, ಸೂಡಿಯ ತುದಿಗೆ ಬೆಂಕಿ ಹಚ್ಚಿಕೊಂಡು, ಅದನ್ನು ಮೈಲಿಗಟ್ಟಲೆ ನಡೆಯುತ್ತಿದ್ದರು.

4. ಯಕ್ಷಗಾನ ನೊಡಲು ಹೋಗಿ ಬರುವ ರಾತ್ರಿಗಳ ಅನುಭವಗಳೇನು?
ವಿಜಿ ಸ್ವಲ್ಪ ಬೆಳೆದು ದೊಡ್ಡವಳಾದ ಮೇಲೆ ಅಮ್ಮ ದೊಡ್ಡಮ್ಮ ತಂಗಿ ನೀಲಿಮಾ ಇವರ ಜೊತೆಗೆ ಯಕ್ಷಗಾನಕ್ಕೆ ಹೋಗುತ್ತಿದ್ದಳು. ಅವಳ ಆಗಿನ ಖುಷಿ ವರ್ಣಿಸಲು ಅಸಾಧ್ಯ. ಆ ನೀರವ ರಾತ್ರಿಯಲ್ಲಿ ಬ್ಯಾಟರಿ ಹಿಡಿದು ಕಾಡುಗಳಲ್ಲಿ ನಡೆದು ಹೋಗುವಾಗ ಕಾಡಿನ ಗಾಳಿಯನ್ನು ಹೀರಿಕೊಳ್ಳುತ್ತಿದ್ದಳು. ಹಾಗೆ ಯಕ್ಷಗಾನಕ್ಕೆ ಹೋಗುವಾಗ ಅವತ್ತಿನ ಯಕ್ಷಗಾನ ಹೇಗಿರಬಹುದು ಎಂದು ಚರ್ಚೆಯಾದರೆ, ವಾಪಸ್ಸು ಬರುವಾಗ ನೋಡಿದ ಯಕ್ಷಗಾನದ ಕುರಿತು ವಿಮರ್ಶೆಗಳು ಟೀಕೆ ಟಿಪ್ಪಣಿಗಳು ಇರುತ್ತಿದ್ದವು.

5. ವಿಜಿ ಕತ್ತಲಿನ ಭಯವನ್ನು ಹೇಗೆ ಗೆದ್ದಳು? ವಿಜಿ ಸ್ವಲ್ಪ ಬೆಳೆದು ದೊಡ್ಡವಳಾದ ಮೇಲೆ ಗುಮ್ಮನ ಹೆದರಿಕೆ ದೂರಾಯಿತು. ಕಗ್ಗತ್ತಲ ರಾತ್ತಿಗಳಲ್ಲಿ ಎಲ್ಲಿಗಾದರೂ ಹೋಗುವುದು ಅವಳಿಗೆ ಇಷ್ಟವಾಗತೊಡಗಿತು. ಕಾಡು ಮತ್ತು ಕತ್ತಲಿನ ವಾತಾವರಣದಲ್ಲಿ ಬಾಲ್ಯದಿಂದಲೂ ಬೆಳೆದಿದ್ದರಿಂದ ತೋಟದ ತನಕ ಕತ್ತಲಿನಲ್ಲಿ ಒಬ್ಬಳೆ ಬ್ಯಾಟರಿ ಹಿಡಿದು ಹೋಗಿ ಬರುವ ಧೈರ್ಯ ಬೆಳೆಸಿಕೊಂಡಳು. ಒಂಬತ್ತನೇ ತರಗತಿಗೆ ಬಂದಾಗ ರಾತ್ರಿ ಒಬ್ಬಳೇ ಉಪ್ಪರಿಗೆಯಲ್ಲಿ ಕತ್ತಲನ್ನು ದಿಟ್ಟಿಸುತ್ತಾ ಮಲಗುವುದು ಅವಳಿಗೆ ಅಭ್ಯಾಸವಾಗಿತ್ತು. ಹೀಗೆ ಅವಳು ಕತ್ತಲಿನ ಭಯವನ್ನು ಗೆದ್ದಳು.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ಮೊದಲನೆಯ ಪತ್ರದಲ್ಲಿ ಭಾಷಣಕಾರರು ಯಾವ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ ?
ಉತ್ತರ : ಮೊದಲನೇ ಪತ್ರದಲ್ಲಿ ಭಾಷಣಕಾರು ತಮ್ಮ ಪ್ರವಾಸದ ಖರ್ಚು ಮತ್ತು ತಮ್ಮ ಮೂರನೆಯ ಮಗುವನ್ನು ಕರೆದುಕೊಂಡೇ ಬರಬೇಕಾದ ಅನಿವಾರತೆಯನ್ನು ತಿಳಿಸುತ್ತಾರೆ . ಇದರಿಂದ ಅವರ ಆರ್ಥಿಕ ಪರಿಸ್ಥಿತಿಯು ಪರೋಕ್ಷವಾಗಿ ಪ್ರತಿಧ್ವನಿಸುತ್ತಿರುತ್ತದೆ.

2. ಭಾಷಣಕಾರರ ಭಾಷಣದ ವಿಷಯವೇನು?
ಭಾಷಣಕಾರರ ಭಾಷಣದ ವಿಷಯ ‘ ನಮ್ಮ ಆರ್ಥಿಕ ದುಃಸ್ಥಿತಿ ‘. 

3. ಭಾಷಣಕಾರರಿಗೆ ಪತ್ರ ಬರೆದವರು ಯಾರು ?
ಭಾಷಣಕಾರರಿಗೆ ಕರ್ನಾಟಕದಲ್ಲೊಂದೂರಿನ ನಾಡಹಬ್ಬ ಸಮಿತಿಯ ಕಾರ್ಯದರ್ಶಿಗಳು ಪತ್ರ ಬರೆದಿದ್ದರು.

4. ಭಾಷಣಕಾರರ ಭಾಷಣ ರದ್ದು ಪಡಿಸಲು ಕಾರಣವೇನು?
ಭಾಷಣಕಾರರ ಭಾಷಣ ರದ್ದು ಪಡಿಸಲು ನಾಡಹಬ್ಬ ಸಮಿತಿಯ ಆರ್ಥಿಕ ದುಃಸ್ಥಿತಿ ಕಾರಣವಾಯಿತು.

5. ಭಾಷಣಕಾರರ ಸಮಸ್ಯೆಗೆ ಕಾರ್ಯದರ್ಶಿಗಳ ಕೊನೆಯ ಉತ್ತರವೇನು?
ಭಾಷಣಕಾರರ ಸಮಸ್ಯೆಗೆ ಕಾರ್ಯದರ್ಶಿಗಳ ಕೊನೆಯ ಉತ್ತರ ಭಾಷಣಕಾರರು ಭಾಷಣಕ್ಕಾಗಿ ಹೊರಡದಿರುವುದು ಏಕೆಂದರೆ ಅವರ ಭಾಷಣದ ಕಾರ್ಯಕ್ರಮವನ್ನು ರದ್ದುಗೊಳಿಸುತ್ತಾರೆ.
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1.ಇರುವೆ ಯಾವ ಯಾವ ಊರುಗಳನ್ನು ನೋಡಿ ಬಂದಿದೆ?
ಇರುವೆಯು ಬಾಗಿಲಸಂದು, ಗೋಡೆಯ ಬಿರುಕು, ಬೆಲ್ಲದ ಡಬ್ಬ, ಹಿತ್ತಲು, ತಿಂಡಿ ಇರೋ ಹುಡುಗನ ಜೇಬು, ಹಾಲಿನ ಪಾತ್ರೆಯ ಸುತ್ತಲೂ ಹೀಗೆ ಮುಂತಾದವುಗಳನ್ನು ನೋಡಿ ಬಂದಿದೆ.

2. ಬಸ್ಸೇ ಇಲ್ಲದ ಊರಿಗೆ ಇರುವೆ ಹೋಗಿ ಬಂದದ್ದು ಹೇಗೆ?
ಬಸ್ಸೇ ಇಲ್ಲದ ಊರಿಗೆ ಇರುವೆ ನಡೆದುಕೊಂಡೇ ಹೋಗಿ ಬಂದಿದೆ.

3. ಹುಡುಗನ ಜೇಬಿನತ್ತ ಇರುವೆ ಹೋಗಿದ್ದೇಕೆ?
ಹುಡುಗನ ಜೇಬಿನತ್ತ ಹತ್ತಿರ ತಿಂಡಿ ಇರುವುದರಿಂದ ಇರುವೆಯು ಹೋಯಿತು.

4. ಹಾಲಿನ ಲೋಟವು ಇರುವೆಗೆ ಹೇಗೆ ಕಾಣಿಸುತ್ತದೆ?
ಹಾಲಿನ ಲೋಟವು ಇರುವೆಗೆ ಬಾವಿಯಂತೆ ಕಾಣಿಸುತ್ತದೆ.

5. ಇರುವೆ ಯಾವುದನ್ನು ಬಂಡೆ, ಬೆಟ್ಟ ಎಂದು ಹೇಳುತ್ತಿದೆ?
ಇರುವೆಯು ಸಕ್ಕರೆಯನ್ನು ಬಂಡೆ, ಬೆಲ್ಲವನ್ನುಬೆಟ್ಟ ಎಂದು ಹೇಳುತ್ತಿದೆ.

6. ಇರುವೆಯ ಕಣ್ಣಲ್ಲಿ ಸಣ್ಣ ಸಂಗತಿಗಳೂ ಹೇಗೆ ಬೃಹತ್ತಾಗಿ ಕಾಣುತ್ತವೆ ಎಂಬುದನ್ನುಉದಾಹರಣೆ ಸಹಿತ ವಿವರಿಸಿ.
ಇರುವೆ ಕಣ್ಣಿಗೆ ಸಕ್ಕರೆಯು ಬಂಡೆಯಂತೆ, ಬೆಲ್ಲವು ಬೆಟ್ಟದಂತೆ, ಹಾಲಿನ ಲೋಟ ಬಾವಿಯಂತೆ ಬೃಹತ್ತಾಗಿ ಕಾಣುತ್ತಿದೆ.
Please enable JavaScript in your browser to complete this form.
Full Name
Scroll to Top