ಕೃತಿಕಾರರ ಪರಿಚಯ :- ಕವಿ : ಡಾ.ಎಲ್.ಬಸವರಾಜು ಕಾಲ : ಕ್ರಿ.ಶ .1919 ಸ್ಥಳ : ಎಡಗೂರು ಗ್ರಾಮದಲ್ಲಿ ಜನಿಸಿದರು. ವೃತ್ತಿ : ಪ್ರಾಧ್ಯಾಪಕರು. ಕೃತಿಗಳು : ಶಿವದಾಸ ಗೀತಾಂಜಲಿ, ಬಸವಣ್ಣನವರ ವಚನಗಳು, ಭಾಸನ ಭಾರತ ರೂಪಕ, ಅಲ್ಲಮನ ವಚನಗಳು ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಪ್ರಶಸ್ತಿಗಳು : ಶ್ರೀಯುತರಿಗೆ ಪಂಪ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಬಸವ ಪುರಸ್ಕಾರ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಾರೆ . ಇವರು ಸಂಪಾದಿಸಿದ ‘ ಬಸವಣ್ಣನವರ ವಚನಗಳು ‘ ಎಂಬ ಕೃತಿಯ ಪೀಠಿಕೆಯಿಂದ ಪ್ರಸ್ತುತ ಪಾಠವನ್ನು ಆರಿಸಲಾಗಿದೆ.
ಅ . ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ . 1. ಬಸವಣ್ಣನವರ ತಂದೆ ತಾಯಿಯವರ ಹೆಸರೇನು ? ಬಸವಣ್ಣನವರ ತಂದೆ ಬಾಗೇವಾಡಿಯ ಮಾದಿರಾಜ ತಾಯಿ ಮಾದಾಂಬೆ.
2. ಬಸವಣ್ಣನವರು ಬಾಗೇವಾಡಿಯನ್ನು ಬಿಟ್ಟು ಎಲ್ಲಿಗೆ ಹೋದರು ? ಬಸವಣ್ಣನವರು ಬಾಗೇವಾಡಿಯನ್ನು ಬಿಟ್ಟು , ಕೂಡಲ ಸಂಗಮನಿರುವ ಕಪ್ಪಡಿ ಸಂಗಮಕ್ಕೆ ಹೋದರು.
3. ಈಶಾನ ಗುರುಗಳು ಬಸವಣ್ಣನವರಿಗೆ ಏನು ಹೇಳಿದರು ? ಈಶಾನ ಗುರುಗಳು ಬಸವಣ್ಣನವರಿಗೆ ನೀನೆಲ್ಲಿಗೂ ಹೋಗದೆ ಹೊಸ ಹೂವುಗಳು ಮತ್ತು ತಿಳಿನೀರು ತೆಗೆದುಕೊಂಡು ಹೋಗಿ ನಿತ್ಯವೂ ಸಂಗಮೇಶ್ವರನನ್ನು ಪೂಜಿಸಿ, ಪ್ರಸಾದ ಕಾಯಕನಾಗಿ ಸುಖವಾಗಿರು ಎಂದರು.
4. ಬಸವಣ್ಣನವರ ವಚನಗಳು ಏಕೆ ಪ್ರಸಿದ್ಧವಾಗಿವೆ ? ಬಸವಣ್ಣನವರ ವಚನಗಳಲ್ಲಿ ಭಾವತೀವ್ರತೆ, ಏಕಾಗ್ರತೆ ಮತ್ತು ಆತ್ಮೀಯತೆ ಪ್ರಶಂಸನೀಯವೂ ಆದುದರಿಂದ ಪ್ರಸಿದ್ಧವೂ ಆಗಿದೆ.
5. ಬಸವಣ್ಣನವರು ಬೋಧಿಸಿದ ಧರ್ಮದ ಜೀವಾಳ ಯಾವುದು ? ಬಸವಣ್ಣನವರು ಬೋಧಿಸಿದ ಧರ್ಮದ ಜೀವಾಳ ದಾನ, ದಯೆ ನಿರಾಡಂಬರ – ವಿನಯ – ಭಕ್ತಿ – ದುಡಿದು, ನಿಷ್ಕಾಮ – ಕರ್ಮ ಮತ್ತು ಸರಳಜೀವನ.
ಕೃತಿಕಾರರ ಪರಿಚಯ :-ಕವಿ : ಆರ್ . ಎನ್ . ಜಯಗೋಪಾಲ್. ಕಾಲ : 1935 ರ ಆಗಸ್ಟ್ 17 ರಂದು ಜನಿಸಿದರು. ಇವರು ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರು.ಇವರ ತಂದೆ ಕನ್ನಡ ಚಿತ್ರರಂಗದ ಭೀಷ್ಮರೆನಿಸಿದ್ದ ಆರ್. ನಾಗೇಂದ್ರರಾಯರು . ಜಯಗೋಪಾಲರ ಓರ್ವ ಸೋದರ ಸುದರ್ಶನ್ ಪ್ರಸಿದ್ಧ ನಟ , ಇನ್ನೊಬ್ಬರು ಸೋದರರಾದ ಕೃಷ್ಣಪ್ರಸಾದ್ ಪ್ರಸಿದ್ಧ ಛಾಯಾಗ್ರಾಹಕರಾಗಿದ್ದರು . ಹೀಗೆ ಪ್ರತಿಭಾವಂತರ ಸಂಗದಲ್ಲಿ ಬೆಳೆದವರು ಜಯಗೋಪಾಲ್.
ಹಾಡೊಂದ ಹಾಡುವೆ ನೀ ಕೇಳು ಮಗುವೆ , ಗಗನವು ಎಲ್ಲೋ ಭೂಮಿಯು ಎಲ್ಲೋ , ಕರ್ಪೂರದಾ ಬೊಂಬೆ ನಾನು , ನೀರಿನಲ್ಲಿ ಅಲೆಯ ಉಂಗುರ , ಅಮ್ಮಾ ನಿನ್ನ ತೋಳಿನಲ್ಲಿ – ಮುಂತಾದವು ಇವರ ಪ್ರಸಿದ್ಧ ಚಿತ್ರಗೀತೆಗಳು . ರಾಗವಷ್ಟೇ ಅಲ್ಲದೆ ಹಾಡಿನ ಅರ್ಥಕ್ಕೆ ಜಯಗೋಪಾಲ್ ವಿಶೇಷ ಗಮನ ಕೊಡುತ್ತಿದ್ದರು . ತನ್ನ ವೃತ್ತಿಜೀವನದಲ್ಲಿ ಇವರು ೧೬೦೦ ಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದಾರೆ . “ ನಗುವ ನಯನ ಮಧುರ ಮೌನ ” ಇವರ ಗೀತೆಗಳ ಸಂಕಲನ . “ ಪಲ್ಲವಿ ಅನುಪಲ್ಲವಿ ” ಹಲವಾರು ರಾಜ್ಯ , ಅಂತರರಾಜ್ಯ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 1. ಜೀವನದಲ್ಲಿ ಸೋತವರಿಗೆ ಗೊಂಬೆಯು ಕೊಡುವ ಧೈರ್ಯವೇನು? ಜೀವನದಲ್ಲಿ ಸೋತವರಿಗೆ ಗೊಂಬೆಯು ಎಷ್ಟೇ ಏಳು-ಬೀಳುಗಳು ಬಂದರೂ ಸೋಲದೆ, ತಲೆ ಬಾಗದೆ ನಗುನಗುತಾ ಇರಬೇಕು ಎಂದು ಜೀವನದಲ್ಲಿ ಧೈರ್ಯ ಕೊಡುತ್ತದೆ.
2. ಗೊಂಬೆಯು ಹೇಗೆ ತೂಗುತ್ತಿರುತ್ತದೆ? ಗೊಂಬೆಯು ಕಷ್ಟವೇ ಇರಲಿ, ಸುಖವೇ ಇರಲಿ ಅಳುಕದೆ ಆಡಿ ತೂಗುತ್ತಿರುತ್ತದೆ.
3. ಗೊಂಬೆಯು ಹೇಳುವ ನೀತಿಯ ಸಾರಾಂಶವೇನು? ಗೊಂಬೆಯು ಹೇಳುವ ನೀತಿಯ ಸಾರಾಂಶ ಜೀವನದಲ್ಲಿ ಎಷ್ಟೇ ಎಡರು-ತೊಡರುಗಳು, ಬಡತನ- ಸಿರಿತನ ಬಂದರೂ, ಅಳುಕದೆ ಅಂಜದೆ ತನ್ನ ಕಷ್ಟಗಳನ್ನು ನುಂಗಿ ಇತರರಿಗೆ ಒಳ್ಳೆಯದಾಗುವಂತೆ ಗೊಂಬೆ ತೋರಿಸಿಕೊಡುತ್ತದೆ.
4. ಗೊಂಬೆಯು ನಿಶ್ಚಲವಾಗುವುದು ಯಾವಾಗ? ಗೊಂಬೆಯು ನಿಶ್ಚಲವಾಗುವುದು ಆಡಿಸುವಾತ ಅಂದರೆ ಜೀವ ತುಂಬಿದ ದೇವರ ಕೈ ಸೋತಾಗ.
5. ತಾವು ಕಷ್ಟಪಟ್ಟರೂ ಲೋಕಕ್ಕೆ ಉಪಕಾರ ಮಾಡುವ ಮೂರು ಸಂಗತಿಗಳು ಯಾವುವು? ತಾವು ಕಷ್ಟಪಟ್ಟರೂ ಲೋಕಕ್ಕೆ ಉಪಕಾರ ಮಾಡುವ ಮೂರು ಸಂಗತಿಗಳು - 1.ಮೈಯನು ಹಿಂಡಿ ಸಿಹಿ ಕೊಡುವ ಕಬ್ಬು. 2. ತೇಯುತ್ತಿದ್ದರೂ ಪರಿಮಳ ನೀಡುವ ಗಂಧ. 3. ತಾನೇ ಉರಿದು ಮನೆಗೆ ಬೆಳಕು ಕೊಡುವ ದೀಪ.
ಕೃತಿಕಾರರ ಪರಿಚಯ ಕವಿ : ರಾಜಶೇಖರ ಅಲ್ಲೂರಕರ್. ಕಾಲ : 16 ಜುಲೈ 1966. ಸ್ಥಳ : ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕುಕ್ಕುಂದಾ ಗ್ರಾಮದವರು. ಕಾವ್ಯನಾಮ : ರಾಜಶೇಖರ ಕುಕ್ಕುಂದಾ. ವೃತ್ತಿ : ಅವರು ಮೂಲತಃ ಪ್ರಸ್ತುತ ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರು. ಶಿಶುಕಾವ್ಯದಲ್ಲಿ ಬಾಲ್ಯದಿಂದಲೂ ಆಸಕ್ತಿ ತಳೆದಿರುವ ಅವರು ತಮ್ಮ ಸಹಜ – ರಮ್ಯ – ವಿಶಿಷ್ಟ ಕಾವ್ಯಪ್ರಯೋಗಗಳಿಂದ ಕಾವ್ಯಾಸಕ್ತರ ಗಮನ ಸೆಳೆದವರು. ಕೃತಿಗಳು : ಚೆಲುವ ಚಂದಿರ , ಗೋಲ ಗುಮ್ಮಟ , ಪುಟಾಣಿ ಪ್ರಾಸಗಳು , ಸೋನ ಪಾಪಡಿ ಇತ್ಯಾದಿ ಕೃತಿಗಳ ಮೂಲಕ ಮಕ್ಕಳನ್ನು ಮುದಗೊಳಿಸಿದವರು . ಅವರ ಕವಿತೆಗಳು ಮತ್ತು ಲೇಖನಗಳು ಕನ್ನಡ ದಿನಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ, ಆಕಾಶವಾಣಿಯಲ್ಲಿ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ಪ್ರಸಾರಗೊಂಡಿವೆ . ಪ್ರಶಸ್ತಿಗಳು : ಶಿವಮೊಗ್ಗ ಕರ್ನಾಟಕ ಸಂಘವು ಮಕ್ಕಳ ಸಾಹಿತ್ಯಕ್ಕೆ ನೀಡುವ ೨೦೧೨ ನೇ ಸಾಲಿನ ನಾ . ಡಿಸೋಜಾ ಪುರಸ್ಕಾರ , ೨೦೧೩ ನೇ ಸಾಲಿನ ಅಮ್ಮ ಪುರಸ್ಕಾರಗಳು ಇವರಿಗೆ ಸಂದಿವೆ.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 1. ಗೋಲಗುಮ್ಮಟದ ವಿಶೇಷ ಏನು? ಗೋಲಗುಮ್ಮಟದ ವಿಶೇಷ ಏನೆಂದರೆ, ಗೋಲಗುಮ್ಮಟವನ್ನು ಹತ್ತಿ ನೋಡಿದರೆ ಒಳಗಿನ ಗುಮ್ಮಟ ಅದ್ಭುತವಾಗಿ ಕಾಣುತ್ತದೆ.
2. ಜಾಣ ಎಂದು ಹೇಳಿದಾಗ ಏನಾಯಿತು? ಜಾಣ ಎಂದು ಹೇಳಿದಾಗ “ಜಾಣ, ಜಾಣ, ಜಾಣ” ಎನ್ನುವ ದನಿ ಕೇಳಿ ಬಂತು.
ಕೃತಿಕಾರರ ಪರಿಚಯ ಕವಿ : ರಮಾನಂದ ಆಚಾರ್ಯರು. ಇವರು ಕಾರ್ಕಳ ಕನ್ನಡದ ಹಿರಿಯ ಲೇಖಕರು , ಬಹುಭಾಷಾ ವಿದ್ವಾಂಸರು , ಪತ್ರಕರ್ತರು ಮತ್ತು ಚಿಂತಕರು , ಇವರು ಕಳೆದ ಮೂರ್ನಾಲ್ಕು ದಶಕಗಳಿಂದ ಕನ್ನಡದ ಹಲವು ಪತ್ರಿಕೆಗಳಲ್ಲಿ ವೈಚಾರಿಕ ಲೇಖನಗಳನ್ನು ಬರೆಯುತ್ತ ಬಂದಿದ್ದಾರೆ . ಮದ್ರಾಸ್ ವಿಶ್ವವಿದ್ಯಾಲಯದಿಂದ ೧೯೫೬ ರಲ್ಲಿ ಬಿ.ಎಸ್ಸಿ . ಪದವಿಯನ್ನು ಪಡೆದರು . ೫೮ ವರ್ಷಗಳಷ್ಟು ದೀರ್ಘಕಾಲ ವಿಕ್ರಮ ವಾರಪತ್ರಿಕೆಯಲ್ಲಿ ಕೆಲಸ ಮಾಡಿದ್ದಾರೆ . ಇವರು ವಿವಿಧ ಭಾಷೆಗಳಿಂದ ಇದುವರೆಗೆ ೨೦೦೦ ಕ್ಕೂ ಹೆಚ್ಚು ಲೇಖನಗಳನ್ನು ಅನುವಾದಿಸಿದ್ದಾರೆ.
( ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ: 1. ಪುಸ್ತಕದ ಹಾಳೆಗಳನ್ನು ತಿರುವಿಹಾಕುತ್ತಿದ್ದ ಸಾವಿತ್ರಿಬಾಯಿಗೆ ತಂದೆ ಏನು ಹೇಳಿದರು? ಪುಸ್ತಕದ ಹಾಳೆಗಳನ್ನು ತಿರುವಿಹಾಕುತ್ತಿದ್ದ ಸಾವಿತ್ರಿಬಾಯಿಗೆ ತಂದೆ ಪುಸ್ತಕವನ್ನು ಕಿತ್ತು ಮನೆಯಿಂದಾಚೆ ಎಸೆದು ಶಿಕ್ಷಣದ ಆಕಾರವು ಕೇವಲ ಉಚ್ಚಜಾತಿಯ ಪುರುಷರಿಗಷ್ಟೆ ಇದೆ. ದಲಿತರು ಮತ್ತು ಮಹಿಳೆಯರು ಶಿಕ್ಷಣ ಪಡೆಯುವುದು ಪಾಪವಾಗಿದೆ ಎಂದರು.
2. ಸಾವಿತ್ರಿಯ ಪ್ರಥಮ ಶಿಕ್ಷಣ ಎಲ್ಲಿ ನಡೆಯಿತು? ಸಾವಿತ್ರಿಯ ಪ್ರಥಮ ಶಿಕ್ಷಣ ಅವರದೇ ಹೊಲದ ಒಂದು ಮಾವಿನ ಮರದ ಕೆಳಗೆ ನಡೆಯಿತು.
3. ಜ್ಯೋತಿಬಾ, ಸಾವಿತ್ರಿಗೆ ಏನೇನು ವಿಷಯಗಳನ್ನು ಕಲಿಸಿದರು? ಜ್ಯೋತಿಬಾ, ಸಾವಿತ್ರಿಗೆ ಜಾನಪದ ಪ್ರಸಂಗಗಳನ್ನು ಹೇಳಿ ಭಾಷೆ, ಗಣಿತ ಮತ್ತು ಸಾಮಾನ್ಯ ಜ್ಞಾನ ವಿಷಯಗಳನ್ನು ಕಲಿಸಿದರು.
4. ಸಾವಿತ್ರಿಬಾಯಿಯವರು ಉಪೇಕ್ಷಿತ ವರ್ಗದ ಮಕ್ಕಳನ್ನು ಶಾಲೆಗೆ ಸೇರುವಂತೆ ಹೇಗೆ ಪ್ರೋತ್ಸಾಹಿಸಿದರು? ಸಾವಿತ್ರಿಭಾಯಿಯವರು ಉಪೇಕ್ಷಿತ ವರ್ಗಗಳ ಮಕ್ಕಳಿಗೆ ತಮ್ಮ ವಿದ್ಯಾಲಯಗಳಲ್ಲಿ ಶಿಕ್ಷಣ ನೀಡಿ, ವಿಧವೆಯರ ಮಕ್ಕಳಿಗೆ ಪೋಷಣೆ ಒದಗಿಸುದುದೇ ಅವರು ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿಯಾಗಿದೆ.
೫. ಸಾವಿತ್ರಿಬಾಯಿಯವರು ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ ಯಾವುದು? ವಿಧವೆ ಕಾಶಿಭಾಯಿಯ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆದು ಅವಳಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿ, ಅವಳ ಹೆರಿಗೆಗೆ ವ್ಯವಸ್ಥೆ ಮಾಡಿ ಅವಳ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಪೋಷಣೆ ಮಾಡಿದುದೇ ಸಮಾಜಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿಯಾಗಿದೆ.
( ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರ್ನಾಲ್ಕು ವಾಕ್ಯದಲ್ಲಿ ಉತ್ತರಿಸಿ : 1. ಸಾವಿತ್ರಿಬಾಯಿಯ ಸಮಾಜದಲ್ಲಿ ಹೆಣ್ಣುಮಕ್ಕಳ ಪರಿಸ್ಥಿತಿ ಹೇಗಿತ್ತು? ಸಾವಿತ್ರಿಬಾಯಿಯ ಸಮಾಜದಲ್ಲಿ ಮಹಿಳೆಯರ ಶಿಕ್ಷಣ ಪಡೆಯುವುದು ಪಾಪ ಎಂದು ತಿಳಿಯಲಾಗುತ್ತಿತ್ತು. ಆಗ ಶಿಕ್ಷಣವಿಲ್ಲದೆ ಬದುಕುವ ಮಹಿಳೆಯರಿಗೆ ಸತಿ ಪದ್ದತಿ, ಬಾಲ್ಯವಿವಾಹ ಮತ್ತು ವಿಧವೆಯರ ದುರವ್ಯವಸ್ಥೆ ಹೀಗೆ ಹತ್ತು ಹಲವು ವ್ಯವಸ್ಥೆಗಳು ಮಹಿಳೆಯರನ್ನು ಶೋಷಿಸುತ್ತಿದ್ದವು.
2. ಸಮಾಜದ ಹಟವಾದಿಗಳು ಸಾವಿತ್ರಿಬಾಯಿಯನ್ನು ಹೇಗೆ ವಿರೋಧಿಸಿದರು? ಸಮಾಜದ ಹಟವಾದಿಗಳು ಸುಧಾರಣೆಗೆ ಹೆಜ್ಜೆಯನ್ನಿಡುತ್ತಿದ್ದ ಸಾವಿತ್ರಿಬಾಯಿಯ ಕಾರ್ಯಗಳನ್ನು ವಿರೋಧಿಸತೊಡಗಿದರು. ಆಕೆಯ ಬಗ್ಗೆ ವ್ಯಂಗ್ಯ, ಚುಚ್ಚುಮಾತುಗಳನ್ನು ಆಡುತ್ತಾ, ಅವಳ ಕಡೆ ಕಲ್ಲು, ಸಗಣಿ ಎಸೆದರು. ಆದರೂ ಆಕೆ ದೃತಿಗೆಡದೇ ತನ್ನ ಕಾರ್ಯದಲ್ಲಿ ಮುಂದುವರೆದರು. ಪುಣೆಯ ಸಮೀಪ 18 ವಿಶ್ವವಿದ್ಯಾನಿಲಯಗಳನ್ನು ಪುಲೇ ದಂಪತಿಗಳು ನಡೆಸತೊಡಗಿದರು. ಇದರಿಂದ ಕೆರಳಿದ ವಿರೋಧಿಗಳು, ಜ್ಯೋತಿಬಾ ಅವರ ತಂದೆಯ ಕಿವಿಯೂದಿದ ಪರಿಣಾಮವಾಗಿ ಅವರ ತಂದೆಯವರು ಜ್ಯೋತಿಬಾ ಮತ್ತು ಸಾವಿತ್ರಿಬಾಯಿಯನ್ನು ಮನೆಯಿಂದ ಹೊರಹಾಕಿದರು.
3. ಸಮಾಜದ ಕೆಳವರ್ಗಗಳ ಮಕ್ಕಳನ್ನು ಶಾಲೆಗೆ ಸೇರಿಸಲು ಸಾವಿತ್ರಿಬಾಯಿಯವರು ಹೇಗೆ ಶ್ರಮಿಸಿದರು? ಸಮಾಜದ ಕೆಳವರ್ಗಗಳ ಮಕ್ಕಳನ್ನು ಶಾಲೆಗೆ ಸೇರಿಸಲು ಸಾವಿತ್ರಿಬಾಯಿಯವರು ಪುಣೆಯ ಸಮೀಪ 18 ವಿದ್ಯಾಲಯಗಳನ್ನು ಪುಲೆ ದಂಪತಿಗಳು ನಡೆಸತೊಡಗಿದರು. ಉಪೇಕ್ಷಿತ ವರ್ಗದವರ ವಸತಿ ಕ್ಷೇತ್ರಗಳಿಗೆ ಭೇಡಿ ನೀಡುತ್ತಾ ಅವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ತನ್ನ ಭಾಷಣಗಳಿಂದ ಪ್ರೇರೇಪಿಸಿದಳು. ವಿಧವೆಯರ ಆತ್ಮಹತ್ಯೆ ತಡೆದು, ಅವರ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡು ಶಿಕ್ಷಣ ನೀಡಿದರು. ವಿಧವೆ ಕಾಶೀಭಾಯಿಯ ಮಗ ಯಶವಂತನನ್ನು ದತ್ತು ತೆಗೆದುಕೊಂಡು ಪೋಷಿಸತೊಡಗಿದರು. ಅವರು ಸ್ಥಾಪಿಸಿದ ಸತ್ಯಶೋಧನ ಸಮಾಜದ ವಿದ್ಯಾರ್ಥಿನಿಲಯದಲ್ಲಿ ಸಹಸ್ರಾರು ಮಕ್ಕಳಿಗೆ ಆಶ್ರಯ ನೀಡಲಾಯಿತು.
4. ವಿಧವೆಯರ ಪರವಾಗಿ ಸಾವಿತ್ರಿಬಾಯಿಯವರು ಹೋರಾಡಿದ ಬಗೆಯನ್ನು ವಿವರಿಸಿ. ವಿಧವೆಯರ ಪರವಾಗಿ 1873 ರಲ್ಲಿ ಪುಲೆ ದಂಪತಿಗಳು ಸತ್ಯಶೋಧನ ಸಮಾಜವನ್ನು ಸ್ಥಾಪಿಸಿ, ಅದರ ಮೂಲಕ ವಿಧವಾ ವಿವಾಹದ ಪರಂಪರೆಯನ್ನು ಆರಂಭಿಸಿದರು. ಈ ಸಂಸ್ಥೆಯಿಂದ ಮೊದಲ ವಿಧವಾ ಪುನರ್ವಿವಾಹವನ್ನು 5 ಡಿಸೆಂಬರ್ 1873 ರಂದು ಮಾಡಲಾಯಿತು. ಸಾವಿತ್ರಿಬಾಯಿ ವಿಧವೆಯರ ಕೇಶಮುಂಡನೆ ಮಾಡದಂತೆ ಕ್ಷೌರಿಕರ ಮನವೊಲಿಸಿದಳು. ಹೀಗೆ ವಿಧವೆಯರ ಬಾಳಿಗೊಂದು ಬೆಳಕಾದಳು.
ಕೃತಿಕಾರರ ಪರಿಚಯ ಕವಿ : ಚನ್ನಮಲ್ಲಪ್ಪ ಹಲಸಂಗಿ ಕಾಲ : ಸಾ.ಶ ೧೯೦೩ ಸ್ಥಳ : ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಲಸಂಗಿ ಗ್ರಾಮದವರು. ಕಾವ್ಯನಾಮ : ಮಧುರಚೆನ್ನ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಇವರು ಸ್ವಂತ ಪರಿಶ್ರಮದಿಂದ ಬಂಗಾಳಿ , ಇಂಗ್ಲಿಷ್ ,ಮರಾಠಿ ,ಪರ್ಷಿಯನ್ ಭಾಷೆಗಳನ್ನು ಕಲಿತಿದ್ದರು . ವಚನ ವಾಜ್ಯವನ್ನು ವಿಸ್ತಾರವಾಗಿ ಅಧ್ಯಯನ ಮಾಡಿದ್ದರು. ಕೃತಿಗಳು : ಇವರು ಪೂರ್ವರಂಗ, ಪೂರ್ವಯೋಗದ ಪಥದಲ್ಲಿ ಕಾಳರಾತ್ರಿ ಬೆಳಗು, ನನ್ನ ನಲ್ಲ ಇವರ ಕವನ ಸಂಕಲನ. ಜನಪದಗೀತೆಗಳ ಸಂಕಲನಗಳನ್ನು ಸಂಪಾದಿಸಿದ್ದಾರೆ . ಸಿಂಪಿಲಿಂಗಣ್ಣನವರೊಂದಿಗೆ ಕನ್ನಡದ ಕುಲಗುರು ವಿದ್ಯಾರಣ್ಯ ಕೃತಿಯನ್ನು ರಚಿಸಿದ್ದಾರೆ.
( ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ : 1. ‘ ರಮ್ಯಸೃಷ್ಟಿ ‘ ಕವಿತೆಯಲ್ಲಿ ಯಾವ ಸಂದರ್ಭವನ್ನು ವರ್ಣಿಸಲಾಗಿದೆ ? ಈ ಕವಿತೆಯಲ್ಲಿ ಮುಂಜಾವಿನಲ್ಲಿ ಪುಕೃತಿಯ ಮತ್ತು ಸೂರ್ಯೋದಯ ( ಸೂರ್ಯನ ) ಪ್ರಭಾವವನ್ನ ವರ್ಣಿಸಲಾಗಿದೆ.
2. ಸೂರ್ಯ ಎಲ್ಲಿ ವಿರಾಜಿಸುತ್ತಿದ್ದಾನೆ ? ಸೂರ್ಯನು ಸಭಾಂಗಣದಿ ಆಕಾಶವೆಂಬ ಅಂಗಳದಲ್ಲಿ ಭಾವವನ್ನು ವರ್ಣಿಸತ್ತಾ ವಿರಾಜಿಸುತ್ತಿದ್ದಾನೆ.
3. ಸೂರ್ಯೋದಯದ ಪ್ರಕೃತಿ ಸೌಂದರ್ಯ ಹೇಗಿದೆ ? ಸೂರ್ಯೋದಯದ ಪ್ರಕೃತಿಯು ರಮ್ಯವಾಗಿದೆ . ಮುಂಜಾನೆಯ ಸೂರ್ಯನ ಹೊಂಗಿರಣಗಳು ( ಚಿನ್ನದ ಬಣ್ಣ ) ರತ್ನದಂತಹ ನೆಲದ ಮೇಲೆ ಪಸರಿಸಿ ( ಹರಡಿ ) ಹಸಿರು ಹುಲ್ಲು , ಮರ , ಗಿಡಗಳು ಸುಂದರವಾಗಿ ಕಾಣುವಂತೆ ಮಾಡಿದೆ .ಇಂತಹ ಸುಂದರ ವಾತಾವರಣದಲ್ಲಿ ಪ್ರಾಣಿ ಪಕ್ಷಿಗಳು ಠೀವಿಯಿಂದಮೇವನ್ನು ಮೇಯುತ್ತಿದೆ. ಎಲ್ಲವೂ ಸೊಗಸಾಗಿ ಕಾಣುತ್ತಿದೆ.
4. ಜೀವರಾಶಿಯ ವರ್ಣನೆ ‘ ರಮ್ಯಸೃಷ್ಟಿ ‘ ಕವನದಲ್ಲಿ ಹೇಗೆ ಮೂಡಿಬಂದಿದೆ? ಸೂರ್ಯೋದಯದ ಸುಂದರವಾದ ಪರಿಸರದಲ್ಲಿ ಎಂದರೆ ಗಿಡ ಮರಗಳು ಜೀವರಾಶಿಗಳು ಎಲ್ಲಾ ಪ್ರಾಣಿಗಳು ತಮ್ಮ ಪತಿಯುತ್ತಿರುತ್ತವೆ ಹಚ್ಚಹಸುರಾದ ಹುಲ್ಲೂ ಸಹ ಮೋಹಕವಾಗಿ ಕಾಣುತ್ತದೆ . ಚ ಮೇಯುತ್ತಿರುತ್ತವೆ .ಜೀವರಾಶಿಗಳು ಟಾಕು – ಠೀಕಾಗಿ ಸುಖ ಸಮೃದ್ಧಿಯಿಂದಿರುತ್ತದೆ.
5. ‘ ರಮ್ಯಸೃಷ್ಟಿ ‘ ಪದ್ಯದಲ್ಲಿ ಯಾವ ಯಾವ ಪ್ರಾಣಿಗಳು ಮೇಯುವ ಠೀವಿಯಿಂದ ವರ್ಣಿಸಲಾಗಿದೆ ? ಈ ಕವನದಲ್ಲಿ ಇವೆಲ್ಲವೂ ಮೇಯುತ್ತಿವೆ . ಚೆಲುವಾದ ಪಕ್ಷಿಗಳು , ಮೇಕೆ , ಎತ್ತು , ಎಮ್ಮೆ , ಆಡು ಚಿತ್ತಗೊಟ್ಟು ಎಂದರೆ ಮನಸ್ಸಿನಿಂದ ಠೀವಿಯಿಂದ ಮೇಯುತ್ತಿವೆ.
6. ಯಾವುದರ ಚೆಲುವಿಗೆ ಮಿಗಿಲಿಲ್ಲದಂತಾಗಿದೆ ?
ಪ್ರಕೃತಿಯ ಪರಿಸರದಲ್ಲಿ ಗಿಡಮರ ಪಶುಪಕ್ಷಿಗಳ ಜೊತೆ ಮನುಜರು , ಗಂಡು , ಹೆಣ್ಣು ಮತ್ತು ಮಕ್ಕಳು ಎಲ್ಲರೂ ಚಂದವಾಗಿರುವರು . ಈ ರೀತಿ ಎಲ್ಲವನ್ನೂ ಹೊಂದಿರುವ ಸೊಗಸು , ಚೆಲುವು ಇದಕ್ಕಿಂತ ಬೇರೇನೂ ಬೇಕು ಎಂದು ಕವಿ ಕೇಳುತ್ತಿದ್ದಾರೆ . ಪುಕೃತಿಯ ಸೊಗಸಿಗೆ ಮಿಗಿಲಿಲ್ಲ