ಅ . ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ. 1. ಸೂರ್ಯ ಏಕೆ ದುಡಿಯುತ್ತಿದ್ದಾನೆ ? ಸೂರ್ಯನು ಇಳೆಗೆ ಮಳೆ ತರಲು ದುಡಿಯುತ್ತಿದ್ದಾನೆ.
2. ಭೂಮಿಯ ಪೋಷಕ ಯಾರು ? ಸೂರ್ಯ, ಭೂಮಿಯ ಪೋಷಕ .
3. ಸೂರ್ಯ ಮರೆಯದೆ ಯಾವ ಕರ್ತವ್ಯ ಮಾಡುವನು ? ಸೂರ್ಯನು ಮರೆಯದೆ ಇಳೆಗೆ ಬಿಸಿಲು – ಬೆಳಕು ನೀಡುವ ಕರ್ತವ್ಯ ಮಾಡುವನು.
4. ಬಿರು ಬಿಸಿಲಿಗೆ ಯಾವುವು ಕಂಗಾಲಾಗಿಲ್ಲ ? ಉತ್ತರ : ಬಿರು ಬಿಸಿಲಿಗೆ, ಮರ – ಗಿಡ , ಪೊದೆ – ಬಳ್ಳಿಗಳು ಕಂಗಾಲಾಗಿಲ್ಲ.
5. ಸೂರ್ಯನಿಂದ ಮಕ್ಕಳು ಕಲಿಯಬೇಕಾದ್ದೇನು ? ಉತ್ತರ : ಕಷ್ಟಕ್ಕೆ ಹೆದರದೆ, ನಮ್ಮ ಕರ್ತವ್ಯವನ್ನು ನಾವು ಮಾಡುತ್ತಾ ನಗುತ್ತಾ ನಲಿಯುತ, ಇತರರನ್ನು ನಗಿಸುತ್ತಾ ನಲಿಸುತ್ತಾ ಧನ್ಯತೆಯನ್ನು ಪಡೆಯಬೇಕು ಎಂಬುದನ್ನು ಸೂರ್ಯನಿಂದ ಮಕ್ಕಳು ಕಲಿಯಬೇಕು.
ಆ . ಕೆಳಗಿನ ಪದಗಳಿಗೆ ತಲಾ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ. ಸೂರ್ಯ : ನೇಸರ, ರವಿ. ಇಳೆ : ಭೂಮಿ , ಧರಣಿ. ಪ್ರಕೃತಿ : ನಿಸರ್ಗ , ನೈಸರ್ಗಿಕ ( ಸ್ವಾಭಾವಿಕ ). ಸಂಭ್ರಮ : ಸಡಗರ , ಉತ್ಸಾಹ.
ಇ . ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ಬರೆಯಿರಿ. 1. ಪೋಷಕರು : ನಮ್ಮ ಇಷ್ಟ- ಕಷ್ಟಗಳನ್ನು ನಮ್ಮ ಪೋಷಕರಿಗೆ ಚನ್ನಾಗಿ ತಿಳಿದಿರುತ್ತದೆ. 2. ಕರ್ತವ್ಯ : ವನ್ಯಜೇವಿಗಳ ರಕ್ಷಣೆ ನಮ್ಮಲ್ಲರ ಕರ್ತವ್ಯವಾಗಬೇಕು. 3. ಸಂಭ್ರಮ : ದೀಪಾವಳಿ ಹಬ್ಬ ಬಂತೆಂದರೆ ನಮಗೆಲ್ಲ ಸಂಭ್ರಮವೋ ಸಂಭ್ರಮ. 4. ಧನ್ಯತೆ : ನಾವು ಮಾಡುವ ಕೆಲಸದಲ್ಲಿಯೇ ಧನ್ಯತೆಯನ್ನು ಕಾಣಬೇಕು.
ಅ. ಬಿಟ್ಟ ಸ್ಥಳವನ್ನು ತುಂಬಿರಿ. ಒಂದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ರೆಕ್ಕೆ ಬಂದಿತ್ತು. ಹಾರುತ ತೇಲುತ ಮುಂದಕೆ ಸಾಗಿ ಚಂದ್ರನ ಮಡಿಲನು ಸೇರಿದಳು. ಪುಟ್ಟಿಯೇ ನಮ್ಮಿ ಮಂಗಳಗ್ರಹದ ದುರಂತ ಕಥೆಯನ್ನು ಕೇಳಿ ತಿಳಿ. ಹಸಿರನು ಅಳಿಸದೆ ಗಿಡಮರ ಬೆಳೆಸಿ ಉಳಿಸುವೆವೆಂದಳು ಈ ಧರೆಯ.
ಆ . ಒಂದು ವಾಕ್ಯದಲ್ಲಿ ಉತ್ತರಿಸಿರಿ. 1. ಪುಟ್ಟಿಗೆ ಯಾರ ಹಾಗೆ ಹಾರುವ ಮನಸ್ಸಿತ್ತು? ಹಕ್ಕಿಯ ಹಾಗೆ ಹಾರುವ ಮನಸ್ಸು ಪುಟ್ಟಿಗಿತ್ತು.
2. ಚಂದ್ರನ ಬಿಟ್ಟು ಮೇಲೆ ಹಾರಿದ ಪುಟ್ಟಿ ಎಲ್ಲಿಗೆ ಸೇರಿದಳು? ಚಂದ್ರನ ಬಿಟ್ಟು ಮೇಲೆ ಹಾರಿದ ಪುಟ್ಟಿ ಮಂಗಳನಂಗಳಕ್ಕೆ ಸೇರಿದಳು.
3. ಪುಟ್ಟಿ ಯೋಗಿಗೆ ಏನೆಂದು ಕೇಳಿದಳು? “ನೀನು ಹೇಗೆ ಇಲ್ಲಿಗೆ ಬಂದೆ? ಎಂದು ಪುಟ್ಟಿ ಯೋಗಿಗೆ ಕೇಳಿದಳು.
4. ಮಂಗಳ ಗ್ರಹದಲ್ಲಿ ಬರ ಏಕೆ ಬಂದಿತು? ಆಗಿನ ಜನತೆಯು ನಾಡನು ಕಟ್ಟಲು, ಮರಗಳನ್ನು ಕಡಿದು ಹಾಕಿದರು. ಇದರಿಂದಾಗಿ ಬರ ಬಂದಿತು.
5. ಪುಟ್ಟ ಜನರಲ್ಲಿ ಏನನ್ನು ಉಳಿಸಲು ಬೇಡಿದಳು? ಹಸಿರನ್ನು ಉಳಿಸಲು ಪುಟ್ಟಿ ಜನರಲ್ಲಿ ಬೇಡಿದಳು.
ಇ . ಪದ್ಯಭಾಗವನ್ನು ಪೂರ್ಣಗೊಳಿಸಿರಿ. ಆಗಸದಲ್ಲಿ ಹಾರುವುದೆಂದರೆ ಪುಟಾಣಿ ಪುಟ್ಟಿಗೆ ಬಲು ಇಷ್ಟ ರೆಕ್ಕೆಗಳಿಲ್ಲದೆ ಹಾರಲು ಹೋದರೆ ಆಗದೆ ತೊಂದರೆ ? ಇದು ಕಷ್ಟ. ಮಳೆಬೆಳೆ ಕಾಣದೆ ಜೀವಿಯು ಅಳದು ಬಂದಿತು ನಮಗೆ ಇಂಥ ಸ್ಥಿತಿ ನಿಮ್ಮ ಭೂಮಿಯಲ್ಲಿ ಗಿಡಮರ ಅಳಿದರೆ ಮುಂದೆ ಒಂದು ದಿನ ಇದೇ ಗತಿ.
ಈ . ಸಿ.ಎಂ.ಗೋವಿಂದರೆಡ್ಡಿಯವರ ಸ್ಥಳ , ಕಾಲ , ಕೃತಿಗಳ ವಿವರ ತಿಳಿಸಿರಿ. ಸಿ.ಎಂ.ಗೋವಿಂದರೆಡ್ಡಿಯವರು 11.08.1958 ರಲ್ಲಿ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚೆನ್ನಿಗರಾಯನಪುರ ಎಂಬ ಗ್ರಾಮದಲ್ಲಿ ಜನಿಸಿದರು . ಪ್ರಸ್ತುತ ಇವರು ಬೆಂಗಳೂರಿನ ಕಾಡುಗೋಡಿನ ಪ್ರಥಮ ದರ್ಜೆಕಾಲೇಜಿನಲ್ಲಿ ಕನ್ನಡ ಸಹಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ . ಮಕ್ಕಳ ಸಾಹಿತ್ಯ ರಚನೆಯಲ್ಲಿ ವಿಷೇಶ ಆಸಕ್ತಿ ಹೊಂದಿದ ಇವರು ಬಣ್ಣದ ಚಿಟ್ಟೆ ‘ ಮಕ್ಕಳ ಮಂದಾರ ಪದ್ಯ ಹೇಳುವ ಮರ , ಮೊದಲಾದ ಕೃತಿಗಳನ್ನುರಚಿಸಿದ್ದಾರೆ . ಇವರಿಗೆ ‘ ಪೆರ್ಲ ಕಾವ್ಯ ಪ್ರಶಸ್ತಿ ‘ ‘ ಸಿಸು ಸಂಗಮೇಶದತ್ತಿ ಬಹುಮಾನ ‘ ಸೇರಿದಂತೆ ವಿವಿಧ ಬಹುಮಾನಗಳು ದೊರೆತಿವೆ.
ಉ . ನಾಮಪದ , ನಾಮಪ್ರಕೃತಿ , ಮತ್ತು ವಿಭಕ್ತಿ ಪ್ರತ್ಯಯಗಳನ್ನು ಗುರುತಿಸಿ ಬರೆಯಿರಿ. 1. ಗಗನ + ಅನ್ನು = ಗಗನವನ್ನು ನಾಮಪ್ರಕೃತಿ + ದ್ವಿತೀಯ ವಿಭಕ್ತಿ = ನಾಮಪದ 2. ಶಾಲೆ + ಇಂದ = ಶಾಲೆಯಿಂದ ನಾಮಪ್ರಕೃತಿ + ತೃತೀಯ ವಿಭಕ್ತಿ = ನಾಮಪದ
ಊ . ಕೊಟ್ಟಿರುವ ವಾಕ್ಯಗಳಲ್ಲಿರುವ ಗುಣವಾಚಕ ( ವಿಶೇಷಣ ) ಗಳನ್ನು ಗುರುತಿಸಿರಿ. ಉದಾ : ವಿವೇಕನಿಗೆ ಅಪಾರ ಬುದ್ಧಿವಂತಿಕೆಯಿದೆ . – ಅಪಾರ
ರಫೀಕ್‌ನದು ದೊಡ್ಡಮನೆ. ದೊಡ್ಡ. ಅವಳಿಗೆ ಹಸಿರು ಬಣ್ಣ ಇಷ್ಟ. ಹಸಿರು. ಪುಟ್ಟಿಯು ಕಂಡಳು ಕೆಂಪು ಬಂಡೆಯನು. ಕೆಂಪು.
ಋ . ಕೊಟ್ಟಿರುವ ವಾಕ್ಯಗಳಲ್ಲಿ ಸಂಖ್ಯಾವಾಚಕಗಳನ್ನು ಗುರುತಿಸಿ ಬರೆಯಿರಿ. ಡೇವಿಡ್ ಊರಿನಲ್ಲಿ ನೂರು ಹಸುಗಳಿವೆ. ನೂರು. ಪೂರ್ಣಚಂದ್ರನು ಬೆಳಿಗ್ಗೆ ಐದು ಗಂಟೆಗೆ ಏಳುತ್ತಾನೆ. ಐದು. ಒಂದು ದಿನ ಇದ್ದಕ್ಕಿದ್ದಂತೆ ಪುಟ್ಟಿಗೆ ರೆಕ್ಕೆಯು ಬಂದಿತ್ತು. ಒಂದು.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 1. ಮರವು ಮನುಷ್ಯನಿಗೆ ಏನೇನು ಕೊಡುತ್ತದೆ? ಮರವು ಮನುಷ್ಯನಿಗೆ ಹೂವು, ಹಣ್ಣು, ಸೊಪ್ಪು ಮತ್ತು ಸೌದೆಗಳನ್ನು ಕೊಡುತ್ತದೆ.
2. ಹಸುವಿಸಿಂದ ಮನುಷ್ಯನು ಪಡೆಯುವ ಪ್ರಯೋಜನಗಳಾವುವು? ಹಸುವಿನಿಂದ ಮನುಷ್ಯನು ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಮತ್ತು ಗೊಬ್ಬರವನ್ನು ಪಡೆಯುತ್ತಾನೆ.
3. ಗಿಡಬಳ್ಳಿಗಳು ಏನನ್ನು ಕೊಡುತ್ತವೆ? ಗಿಡಬಳ್ಳಿಗಳು ಹೂವು ಕೊಡುತ್ತವೆ.
4. ಪ್ರಕೃತಿಯಲ್ಲಿ ನಾನು, ನನ್ನದು ಎಂಬ ಮಾತಿಲ್ಲದೆ ಉಪಚರಿಸುತ್ತಿರುವರು ಯಾರು? ಪ್ರಾಣಿ, ಪಕ್ಷಿ, ಸಸ್ಯವರ್ಗ, ನದಿ, ಭಾನು, ಕಾಡು, ಬಾನು , ಸೂರ್ಯ ಮತ್ತು ಚಂದ್ರರು ನಾನು, ನನ್ನದು ಎಂಬ ಮಾತಿಲ್ಲದೆ ಉಪಚರಿಸುತ್ತಿರುವರು.
5. ಯಾವುದನ್ನು ಕವಿ ಮನುಷ್ಯನ ಭ್ರಮೆ ಎನ್ನುತ್ತಾನೆ? ಕೋಟೆ ಕಟ್ಟಿ ನಮ್ಮದೆನ್ನುವ ಭ್ರಮೆ ಮನುಷ್ಯನದು ಎಂದು ಕವಿ ಹೇಳುತ್ತಾರೆ.
ಆ. ಸ್ವಂತ ವಾಕ್ಯದಲ್ಲಿ ಬರೆಯಿರಿ. 1. ತ್ಯಾಗ: ಸ್ವಾತಂತ್ರ ಹೋರಾಟಗಾರರು ತಮ್ಮ ಜೀವದ ಹಂಗು ತೊರೆದು ದೇಶಕ್ಕೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. 2. ಪೊರೆ : ತಾಯಿ ತನ್ನ ಮಗುವನ್ನು ಪೊರೆಯುತ್ತಾಳೆ. 3. ದಾನ: ದಾನವು ನಮ್ಮ ಪುಣ್ಯ ಕಾರ್ಯಗಳಲ್ಲಿ ಒಂದು. 4. ಕೋಟೆ: ಕಿತ್ತೂರು ರಾಣಿ ಚೆನ್ನಮ್ಮ ನಿರ್ಮಿಸಿದ ಕೋಟೆ ಇಂದಿಗೂ ನೋಡಬಹುದಾಗಿದೆ.
ಇ. ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳನ್ನು ಬರೆಯಿರಿ. ಪ್ರಪಂಚದಲ್ಲಿರುವ ಎಲ್ಲ ಸಂಪತ್ತುಗಳು ತನ್ನವೇ, ಇಲ್ಲಿರುವ ಸಕಲ ಜೀವರಾಶಿಯೂ ತನಗಾಗಿಯೇ ಜೀವನ ನಡೆಸುತ್ತಿದೆ ಎಂಬ ಭಾವನೆ ಮನುಷ್ಯರಲ್ಲಿ ಇತ್ತೀಚೆಗೆ ಹೆಚ್ಚುತ್ತಿದೆ. ಇದರಿಂದ ಆತನ ಮನಸ್ಸು ಸಂಕುಚಿತಗೊಳ್ಳುತ್ತದೆ. ಸ್ವಾರ್ಥವು ನೆಲೆಗೊಳ್ಳುತ್ತದೆ. ಐಹಿಕ ಸುಖ ಸಂಪತ್ತುಗಳನ್ನು ಸಂಗ್ರಹಿಸುವುದೇ ಮನುಷ್ಯನ ಗುರಿಯಾಗುತ್ತಿದೆ. ಅದರೆ ಜಗತ್ತಿನ ಉಳಿದೆಲ್ಲ ಜೀವಿಗಳಿಗೂ ಸಂಪತ್ತಿನ ಕ್ರೂಢೀಕರಣ ಮಾಡದೇ ಸರಳವಾಗಿ ಬದುಕುತ್ತಿವೆ. ತಮ್ಮ ಬದುಕಿಗೆ ಬೇಕಾದಷ್ಟನ್ನು ಮಾತ್ರ ಬಳಸಿಕೊಂಡು ಉಳಿದಿರುವುದನ್ನು ಜಗತ್ತಿಗೆ ಬಿಡುತ್ತಿವೆ. ಬದುಕು ಮತ್ತು ಬದುಕಲು ಬಿಡು ಎಂಬ ಸಂದೇಶವನ್ನು ಪ್ರಕೃತಿಯೇ ಮನುಷ್ಯನಿಗೇ ಹೇಳುವಂತಿದೆ. ಪ್ರಸ್ತುತ ಕವಿತೆಯು ಮನುಷ್ಯನು ಸಕಲ ಜೀವರಾಶಿಗಳ ಜೊತೆ ಹೊಂದಿಕೊಂಡು ಬಾಳಬೇಕೆಂಬ ಆಶಯವನ್ನು ಹೊಂದಿವೆ.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ. 1. ಕಂಬಳಿಹುಳು ಅಳುತ್ತಾ ತನ್ನಮ್ಮನಲ್ಲಿ ಏನು ಹೇಳಿತು? ಕಂಬಳಿ ಹುಳು ತನ್ನಮ್ಮನಿಗೆ ಅಮ್ಮಾ… ತಾಯಿ ಚಿಟ್ಟೆ ಎಷ್ಟು ಚಂದ ನೀನು ಇದ್ದೀಯಾ, ಆದರೆ ನನಗೆ ಯಾಕೆ ಇಷ್ಟು ಕೆಟ್ಟ ರೂಪವನ್ನು ಕೊಟ್ಟೆ ಎಂದು ಹೇಳಿತು.
2. ಕಂಬಳಿಹುಳು ಹೇಗಿದೆ? ವಿವರಿಸಿ. ಕಪ್ಪಾದ ಮೈ, ಅದರ ಮೇಲೆ ಮುಳ್ಳಿನಂತೆ ಬೆಳೆದ ರೋಮಗಳು ( ಕೂದಲುಗಳು), ಎಣಿಸಲು ಆದಷ್ಟು ಕಾಲುಗಳು. ಹಿಗಿದೆ ಕಂಬಳಿಹುಳುವಿನ ರೂಪ.
3. ಕಂಬಳಿಹುಳುವಿನ ಮೀಸೆ ಹೇಗಿದೆ? ಕಂಬಳಿಹುಳುವಿನ ಮೀಸೆ ಪೊರಕೆಯಂತೆ ಇದೆ.
4. ಕಂಬಳಿಹುಳುವಿನ ಆಸೆ ಏನು? ಕಂಬಳಿ ಹುಳುವಿಗೆ ಚಿಟ್ಟೆಯಂತೆ ತೆಳುವಾದ ರೆಕ್ಕೆಯನ್ನು ಪಡೆದು ಮೆಲಕ್ಕೆ ಹಾರುವ ಆಸೆ.
5. ಅಮ್ಮ ಚಿಟ್ಟೆ ಕಂಬಳಿ ಹುಳುವಿಗೆ ಏನುತ್ತರ ಕೊಟ್ಟಿತು? ಆತುರ ಪಡಬೇಡ, ತಾಳಿಕೋ, ರೋಮ ( ಕೂದಲು) ಉದುರಿ ಚೆಲುವಾದ ಕೆಕ್ಕೆ ಮೂಡುವದು. ಏರುವ ಪ್ರಯತ್ನ ಮಾಡು, ಎಲ್ಲವೂ ಸಾಧ್ಯವಾಗುವುದು ಎಂದು ಅಮ್ಮ ಚಿಟ್ಟೆ ಕಂಬಳಿ ಹುಳುವಿಗೆ ಉತ್ತರ ಕೊಟ್ಟಿತು.
ಆ. ಬಿಟ್ಟ ಸ್ಥಳ ತುಂಬಿರಿ. 1. ದಪ್ಪಗಿರುವ ಮೈ ಅದರ ಮೇಲೆ ಮುಳ್ಳಂತೆ ಬೆಳೆದ ರೋಮ! 2. ನಿನ್ನ ಹಾಗೆ ತೆಳು ರೆಕ್ಕೆ ಪಡೆದು ಮೇಲಕ್ಕೆ ಹಾರಲಾಸೆ! 3. ಮೇಲಕ್ಕೇರುವ ಪ್ರಯತ್ನ ಮಾಡು ಎಲ್ಲವೂ ಸಾಧ್ಯ ಮಗು!
ಇ. ಈ ಪದಗಳನ್ನು ಬಿಡಿಸಿ ಬರೆಯಿರಿ. 1. ಕಪ್ಪಗಿರುವ = ಕಪ್ಪಗೆ+ಇರುವ 2. ಕಣ್ಣೆರಡು=ಕಣ್ಣು+ಎರಡು 3. ಹಾರಲಾಸೆ= ಹಾರಲು+ಆಸೆ 4. ಹಂಬಲವಿರಬೇಕು=ಹಂಬಲ+ಇರಬೇಕು 5. ಮೇಲಕ್ಕೇರುವ = ಮೇಲಕ್ಕೆ +ಏರುವ
ಈ. ಕೆಳಗಿನ ಪದ್ಯ ಭಾಗವನ್ನು ಪೂರ್ಣಗೊಳಿಸಿ ಚಿಟ್ಟೆ ಹೇಳಿತು: “ಆತುರ ಬೇಡ, ತಾಳಿಕೊಳ್ಳಬೇಕು; ರೋಮ ಉದುರಿ, ಚೆಲು ರೆಕ್ಕೆ ಮೂಡುವುದು; ಹಂಬಲವಿರಬೇಕು, ಮೇಲಕ್ಕೇರುವ ಪ್ರಯತ್ನ ಮಾಡು; ಎಲ್ಲವು ಸಾಧ್ಯ, ಮಗು! ಅಳುತ್ತ ಕುಳಿತರೆ ಏನಾಗುವುದು? ಎಲ್ಲಿ, ಕೊಂಚ ನಗು!”
ಅ. ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿಮಾಡಿರಿ. 1. ಗಾಂಧಿ ತಾತನ ಚಿತ್ರ ಗುಬ್ಬಚ್ಚಿಯನು ನಗುತ ನೋಡುತ್ತಿತ್ತು. 2. ಬೆಕ್ಕು ಹೊಂಚು ಹಾಕುತ ಬರಲು ಬುರ್ರನೆ ಹಾರಿ ತಾ ಪಾರಾಗುತ್ತಿತ್ತು. 3. ಸಲ್ಲಾಪವಾಡುತಿಹ ಹಕ್ಕಿ ಜೋಡಿಯು ಮನಕೆ ಮೋಜಿನಾಟ. 4. ಅಚ್ಚು ಮೆಚ್ಚಿನ ಜೋಡಿ ಅನುಕೂಲ ದಾಂಪತ್ಯ ಬೆರಗುಗೊಳಿಸುವ ಪ್ರತಿಭೆ ಗುಬ್ಬಿಗಳಿಗೆ. 5. ಸಜ್ಜಾದ ಗೂಡಿ ನಲಿ ಹೂಡಬೇಕೆಂಬಾಸೆ ಹೊಸ ಬಾಳನು.
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ. 1. ಗೋಡೆಯ ಮೇಲೆ ಯಾರ ಚಿತ್ರವಿತ್ತು? ಗೋಡೆಯ ಮೇಲೆ ಗಾಂಧೀ ತಾತನ ಚಿತ್ರವಿತ್ತು.
2. ಪುಟ್ಟಹಕ್ಕಿಯು ಏನನ್ನು ಹುಡುಕುತ್ತಿತ್ತು? ಪುಟ್ಟಹಕ್ಕಿಯು ಕಾಳುಗಳನ್ನು ಹುಡುಕುತ್ತಿತ್ತು.
3. ಗುಬ್ಬಚ್ಚಿಗಳದ್ದು ಯಾವ ಬಗೆಯ ದಾಂಪತ್ಯ? ಗುಬ್ಬಚ್ಚಿಗಳದ್ದು ಅನುಕೂಲವಾದ ಬಗೆಯ ದಾಂಪತ್ಯ.
4. ಗುಬ್ಬಚ್ಚಿಗಳು ಏನನ್ನು ಸಂಗ್ರಹಿಸುತ್ತಿದ್ದವು? ಗುಬ್ಬಚ್ಚಿಗಳು ಅರಳೆ, ಹುಲ್ಲು, ಕಡ್ಡಿಗಲನ್ನು ಸಂಗ್ರಹಿಸುತ್ತಿದ್ದವು.
5. ಈ ಕವನವನ್ನು ಯಾವ ಸಂಕಲನದಿಂದ ಆರಿಸಲಾಗಿದೆ? ಈ ಕವನವನ್ನು ಕುರ್ಕಾಲರವರು ಬರೆದಿರುವ “ಬರೆಯುವೆ ನಿನಗಾಗಿ” ಸಂಕಲನದಿಂದ ಆರಿಸಲಾಗಿದೆ.
ಇ. ಎರಡು/ಮೂರು ವಾಕ್ಯದಲ್ಲಿ ಉತ್ತರಿಸಿ. 1. ಗುಬ್ಬಚ್ಚಿಯು ಮನೆಯ ಅಂಗಳಕ್ಕೆ ಶೋಭೆ ಹೇಗೆ ತರುತ್ತಿತ್ತು? ಗುಬ್ಬಚ್ಚಿಯ ಮನೆಯ ಅಂಗಳದಲ್ಲಿ ಚಿಂವ್ ಚಿಂವ್ ಎನ್ನುತ್ತ ಹಾಡುತ್ತಿರುವುದು ಒಂದು ರೀತಿಯ ಶೋಭೆಯಾದರೆ, ಚಾವಡಿಯ ಗೋಡೆಯಲ್ಲಿ ಗಾಂಧಿ ತಾತನ ಚಿತ್ರ ಗುಬ್ಬಚ್ಚಿ ಈ ಹಾಡುತ್ತಿದುದ್ದನು ಕಂಡು ನಗುತ್ತಾ ನೋಡುತ್ತಿದ್ದು ಮನೆಯ ಅಂಗಳಕ್ಕೆ ಮತ್ತಷ್ಟು ಶೋಭೆಯನ್ನು ತಂದಿತ್ತು. ಗುಬ್ಬಚ್ಚಿಗಳು ಜೊತೆಯಾಗಿ ಆಡುವುದು ಹಾರುವುದು, ವಿಹರಿಸುವುದು ಅಂಗಳಕ್ಕೆ ಮತ್ತಷ್ಟು ಶೋಭೆ ತಂದಿತ್ತು.
2. ಗುಬ್ಬಚ್ಚಿಯ ಪ್ರತಿಭೆಯನ್ನು ಕವಿ ಹೇಗೆ ವಿವರಿಸಿದ್ದಾರೆ? ಗುಬ್ಬಚ್ಚಿಯು ಪಾದರಸದಂತಿರುವ ಚುರುಕುತನ ಇನಿಯನ ಕೂಡಿ ಆಡುವ ಆಟ, ಜೊತೆ ಜೊತೆಯಾಗಿ ಹಾರಾಡಿ, ವಿಹರಿಸುತ್ತ ಅಂಗಳಕ್ಕೆ ಶೋಭೆಯನ್ನೇ ತರುತ್ತಿದ್ದವು. ಎಲ್ಲರನ್ನು ಬೆರಗುಗೊಳಿಸುಬ ಪ್ರತಿಭೆ ಗುಬ್ಬಿಗಳಿಗೆ ಯಾವುದು ಮಿಗಿಲು ಎಂದು ಹೇಳುವುದು ಸಾಧ್ಯ ಇಲ್ಲ. ಅರಳೆ, ಹುಲ್ಲು, ಕಡ್ಡಿಗಳನ್ನು ಕಟ್ಟಿ ಗಾಂಧೀ ಚಿತ್ರದ ಹಿಂದೆ ಸಜ್ಜಾದ ಗೂಡಿನಲ್ಲಿ ಹೊಸ ಬಾಳು ಪ್ರಾರಂಭಿಸಬೇಕೆಂಬ ಆಸೆ ಮೆಚ್ಚಬೇಕಾದುದು ಅದರ ಪ್ರತಿಭೆಗೆ ಸಾಕ್ಷಿಯಾಗಿದೆ. ಗುಬ್ಬಿಗಳ ಮೆಲುನಗೆ ಅವುಗಳ ಕಣ್ಣೋಟ, ಸಲ್ಲಾಪದಾಡುವ ರೀತಿ ಮನಸ್ಸಿಗೆ ಸಂತೋಷವನ್ನು ಕೊಡುತ್ತವೆ. ಎಂದು ಕವಿ ಹೇಳೀದ್ದಾನೆ.
ಈ. ಈ ಪದಗಳನ್ನು ಬಿಡಿಸಿ ಬರೆದು ಸಂಧಿ ಹೆಸರಿಸಿರಿ. 1. ಪಾತ್ರಾಭಿನಯ= ಪಾತ್ರ+ ಅಭಿನಯ=ಪಾತ್ರಾಭಿನಯ. ಸವರ್ಣದೀರ್ಘ ಸಂಧಿ.
2. ಮಹರ್ಷಿ=ಮಹಾ+ಋಷಿ= ಮಹರ್ಷಿ. ಗುಣ ಸಂಧಿ.
3. ಶಬ್ದಾಲಂಕಾರ=ಶಬ್ದ+ಅಲಂಕಾರ. ಸವರ್ಣದೀರ್ಘ ಸಂಧಿ.
4. ಚತುರೋಕ್ತಿ= ಚತುರ+ಉಕ್ತಿ= ಚತುರೋಕ್ತಿ. ಗುಣ ಸಂಧಿ.
ಉ. ಇವುಗಳಿಗೆ ತಲಾ ಎರಡು ಉದಾಹರಣೆಗಳನ್ನು ಬರೆಯಿರಿ.
1. ಸವರ್ಣದೀರ್ಘಸಂಧಿ. ಸುರ+ಅಸುರ=ಸುರಾಸುರ. ಗಿರಿ+ಈಶ=ಗಿರೀಶ. ಮಹಾ+ಆತ್ಮ=ಮಹಾತ್ಮ.
ಅ. ಬಿಟಸ್ಥಳವನ್ನು ಕೆಳಗೆ ನೀಡಲಾದ ಸೂಕ್ತ ಪದಗಳಿಂದ ಭರ್ತಿಮಾಡಿರಿ. ಬಾರವ್ವ ತಾಯಿ ಗಂಗವ್ವ ತಾಯಿ. ಹೊಳೆಯವ್ವ ತಾಯಿ ನೀರವ್ವ ತಾಯಿ. ಮೈಮನಸ ಹೊಲಸೆಲ್ಲ ತೊಳೆಯನ್ನ ತಾಯಿ, ನೀರವ್ವ ಗಂಗವ್ವ ಮಳೆಯಾಗಿ ಬಾರವ್ವ ಒಣಗೀದ ನೆಲದಾಗ ಹಸುರಾಗಿ ಹೊಳೆಯವ್ವ,
ಆ . ಸಮಾನಾರ್ಥಕ ಪದಗಳನ್ನು ಬರೆಯಿರಿ. ನೀರು : ಜಲ , ಗಂಗೆ ನಭ : ಆಕಾಶ , ಆಗಸ , ಬಾನು ಕುಣಿ : ಹೊಂಡ ತಾಯಿ : ಅಮ್ಮ ಅವ್ವ . ಮಾತೆ
ಇ . ಒಂದು ವಾಕ್ಯದಲ್ಲಿ ಉತ್ತರಿಸಿರಿ. 1. ನೀರು ಎಲ್ಲೆಲ್ಲಿ ತುಂಬಬೇಕು ಎಂದು ಕವಿ ಹೇಳುತ್ತಾರೆ? ಉತ್ತರ : ನೀರು ನೆಲದ ಕಣ ಕಣದಾಗ ಹಾಗೂ ಮನದ ಪದಪದರಾಗದಾಗ ತುಂಬಬೇಕು ಎಂದು ಕವಿ ಹೇಳುತ್ತಾರೆ.
2. ನೀರು ಹೇಗೆಲ್ಲ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ? ಉತ್ತರ : ನೀರು ನೆಲದ ಒಳ ಹೊರಹೆಲ್ಲ , ಪಾಣದ ತುಂಬೆಲ್ಲಾ ನಗುನಗುತ , ನಲಿಯುತ , ಪುಟಿಯುತ್ತ , ಕುಣಿಯುತ್ತ , ಚಿಮ್ಮುತ್ತಾ , ಜಿಗುಯುತ್ತಾ , ಹರಿಯುತ್ತಾ , ಸುರುಯುತ್ತಾ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ.
3. ಒಣಗಿದ ನೆಲದಲ್ಲಿ ನೀರು ಹೇಗೆ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ? ಉತ್ತರ : ಒಣಗಿದ ನೆಲದಲ್ಲಿ ಹಸುರಾಗಿ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ.
4. ಈ ಕವನವನ್ನು ಬರೆದವರು ಯಾರು ? ಉತ್ತರ : ಈ ಕವನವನ್ನು ಬರೆದವರು ಡಾ || ಸಿದ್ದಲಿಂಗ ಪಟ್ಟಣಶೆಟ್ಟಿಯವರು.
ಈ . ಕೊಟ್ಟಿರುವ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು? 1. ನೆಲದ ಕಣಕಣದಾಗ ಮನದ ಪದಪದರಾಗ. ಉತ್ತರ : ಮಳೆ ಬಾರದೆ ಇದ್ದಾಗ ರೈತರು ಗಂಗವ್ವನನ್ನು ಕವಿಯ ಮೂಲಕ ಕರೆದಿದ್ದಾರೆ.
2. ಹರಿಯುತ್ತ ಸುರಿಯುತ್ತ ಧೋಧೋ ಬಾರವ್ವ. ಉತರ : ಜನತೆ ಗಂಗವ್ವನನ್ನು ಮಳೆಯಾಗಿ ಸುರಿಯುವಂತೆ ಹೇಳಿರುವುದನ್ನು ಕವಿ ಕವಿತೆಯ ಮೂಲಕ ಕರೆದಿದ್ದಾರೆ.
3. ಒಣಗೀದ ನೆಲದಾಗ ಹಸಿರುಸಿರು ಉಳಿಸಾಕ. ಉತ್ತರ : ಗಂಗವ್ವ ಮಳೆಯಾಗಿ ಏಕೆ ಸುರಿಯಬೇಕೆನ್ನುವ ಪ್ರಶ್ನೆಗೆ ಉತ್ತರವಾಗಿ ಕಎ ಗಂಗವ್ವ ಒಣಗಿರುವ ನೆಲಕ್ಕೆ ಹಸಿರು ಬೆಳೆಯುವಂತೆ ಮಾಡಲು ಬರಬೇಕೆಂದು ರೈತರ ಪ್ರತಿನಿಧಿಯಾಗಿ ಕವಿ ಗಂಗವ್ವನನ್ನು ಕರೆಯುತ್ತಿದ್ದಾರೆ.
4. ಜೀವದಾ ತುಣಕಾಗಿ ಮೈಮನಸ ಹೊಲಸೆಲ್ಲ. ಉತ್ತರ : ಜೀವನದಲ್ಲಿ ಉಂಟಾಗಿರುವ ಎಲ್ಲಾ ರೀತಿಯ ಮೈ ಮನಸ್ಸಿನ ಕೊಳೆಯೆಲ್ಲ ತೆಗೆಯಲು ಗಂಗವ್ವ ಧರೆಗೆ ಇಳಿದು ಬಾ ಎಂದು ಕಏ ಗಂಗವ್ವನಿಗೆ ಕರೆದಿದ್ದಾರೆ.
ಈ . ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿರಿ. 1. ಗಂಗವ್ವ ಇದ್ದರೆ ಎಲ್ಲೆಲ್ಲಿ , ಏನೇನು ಆಗುವುದೆಂದು ಕವಿ ಹೇಳಿದ್ದಾರೆ? ಉತ್ತರ : ಗಂಗವ್ವ ಇದ್ದರೆ ಒಣಗಿದ ನೆಲದಲ್ಲಿ ಹಸಿರು ಅಲಂಕರಿಸುವುದು , ಹಸಿರು ಹಸಿರಾಗಿ ಬೆಳೆದು ಎಲ್ಲರ ಉಸಿರು ಉಳಿಸುವುದು , ಗಂಗವ್ವ ಬಂದರೆ ಜನರ ಮೈ ಮನಸ್ಸಿನ ಕೊಳೆಯೆಲ್ಲಾ ತೊಳೆಯಲ್ಪಟ್ಟು ಅವರು ಪರಿಶುದ್ಧರಾಗುವರು . ನದಿಯಾಗಿ ಹರಿದಾಗ ಹನಿ ಹನಿ ಕಣ ಕಣವೆಲ್ಲಾ ಜಗಿಸಿ ಎಲ್ಲೆಲ್ಲೂ ಸಂತೋಷ , ನಗು ನಲಿವು ಕಂಡುಬರುತ್ತದೆ.
2. ನೀರು ಯಾವ ಯಾವ ಕೆಲಸಕ್ಕೆ ಬೇಕು ಎಂದು ಕವಿ ಹೇಳಿದ್ದಾರೆ? ಉತ್ತರ : ನೀರು ಜನರ ಉಪಯೋಗಕ್ಕೆ ಪ್ರಾಣವಾಯುವಿನಷ್ಟೆ ಅಗತ್ಯವಾಗಿ ಮನುಷ್ಯನಿಗೆ ಕುಡಿಯಲು ಬೇಕು , ಮಳೆಯಾಗಿ ಸುರಿದರೆ ಮಾತ್ರ ನೆಲ ಹಸಿರಾಗುತ್ತದೆ . ಹಸಿರು ನೆಡಲು ಸಾಧ್ಯವಾಗುತ್ತದೆ . ಹಸಿರು ಎಲ್ಲರಿಗೂ ಬೇಕಾದ ಆಹಾರ ಕೊಟ್ಟು ಜೀವಿಗಳ ಉಸಿರನ್ನು ಉಳಿಸುತ್ತದೆ ನೀರು ಇಲ್ಲದೆ ಜನರ ಮೈಗಳು ಕೊಳಕಾಗಿದ್ದರೆ , ಅದನ್ನು ಸ್ವಚ್ಛಗೊಳಿಸಲು ನೀರು ಅಗತ್ಯವಾಗಿ ಬೇಕು , ನೀರು ಇಲ್ಲದೆ ಬರಗಾಲ ಬಂದಲ್ಲಿ ಜನರು ಮನಸ್ಸು ತೊಡಗಿಸುತ್ತಾರೆ . ಅದರ ಬದಲು ಎಲ್ಲರಿಗೂ ತೃಪ್ತಿಯಾಗಿ ಊಟ – ಬಟ್ಟೆ ಸಿಕ್ಕಲ್ಲಿ ಅವರ ಮನಸ್ಸು ಇಂಥಹ ಕೆಲಸಗಳಿಗೆ ಎಡೆ ಮಾಡುವುದಿಲ್ಲ , ಹೀಗೆ ಜನಕ್ಕೆ ಎಲ್ಲರಿಗೂ ಕವಿ ಹೇಳಿದಾಗ ನೀರು ಬೇಕು ಎಂದು.
ಊ . ಕೊಟ್ಟಿರುವ ಪದ್ಯದಲ್ಲಿ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ. ಬೆಳ್ಳಾನ ಎರಡೆತ್ತು ಬೆಳ್ಳಿಯ ಬಾರುಕೋಲು ಹಳ್ಳಾದ ಮಾಗಿ ಹೊಡೆದಾವು | ಎತ್ತಿನ ತೆಜ್ಞಾನ ಹೊಟ್ಟಿ ಹಸಿದಾವು. ಮೊದಲು . ಎರಡನೇ ಹಾಗೂ ಮೂರನೇ ಸಾಲಿನ ಎರಡನೇ ಅಕ್ಷರ ‘ ಳ್ಳಾ ‘ ಪುನರಾವರ್ತನೆ ಆಗಿರುವುದರಿಂದ ಇದು ‘ ಆದಿ ಪ್ರಾಸ ‘ ಇದೆ.
ಅ. ಪದಗಳ ಅರ್ಥ ಬರೆಯಿರಿ. ಉಪಕರಿಸು : ಉಪಕಾರ ಮಾಡು , ನೆರವು ನೀಡು. ಮೊರೆವ : ಗರ್ಜಿಸುವ. ನಿರಾಳ : ಶಾಂತಿ , ನೆಮ್ಮದಿ. ಸಾಧಿತ : ಸಾಧಿಸಿದ. ಬಹುರೂಪಿ : ಹಲವು ರೂಪಗಳಿಂದ ಕೂಡಿ ಕಾಣಿಸಿಕೊಳ್ಳುವಾತ.
ಆ. ಕೊಟ್ಟಿರುವ ವಚನವನ್ನು ಪೂರ್ಣಗೊಳಿಸಿರಿ ಎನಿತು ಭಾಷೆಗಳ ಕಲಿತಡೇನು.
ಹೃದಯದ ಭಾಷೆ ಕಲಿಯದನ್ನಕ? ಎನಿತು ನುಡಿ ಸಡಗರ ತೋರ್ದಡೆನು
ಎದೆಯ ಮಿಡಿತವರಿಯದನ್ನಕ. ಎನಿತು ಶೋಧನೆಗೈದಡೇನು ಹೃದಯ
ಶೋಧನೆಗೈಯದನ್ನಕ ? ಎನಿತು ಸಾಧನೆಗೈದಡೇನು ಹೃದಯದ – ಬೆಸುಗೆ
ಸಾಧಿತವಾಗದನ್ನಕ? ಇವೆಲ್ಲಕ್ಕೂ ಜೀವಭಾವದಾತ ನೀನೆ ಕಣ ಹೃದಯೇಶ ಸೋಮೇಶಾ.
ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ. 1. ಯಾವ ಚಾಳಿಯನ್ನು ದೂರವಿಡಿ ಎಂದು ಅಮೃತ ಸೋಮೇಶ್ವರರು ಹೇಳುತ್ತಾರೆ? ಉತ್ತರ : ಓಲೈಕೆಯ ಚಾಳಿಯನ್ನು ದೂರವಿಡಿ ಎಂದು ಅಮೃತ ಸೋಮೇಶ್ವರರು ಹೇಳುತ್ತಾರೆ.
2. ಹೃದಯದ ಬೆಸುಗೆ ಸಾಧಿತವಾಗುವುದು ಯಾವಾಗ? ಉತ್ತರ : ಹೃದಯದ ಭಾಷೆ ಕಲಿತಾಗ , ಹೃದಯದ ಮಿಡಿತ ಅರಿವಾದಾಗ ಹೃದಯೇಶ ಸೋಮೇಶನ ಅನುಗ್ರಹವಾದಾಗ ಹೃದಯದ ಬೆಸುಗೆ ಸಾಧಿತವಾಗುತ್ತದೆ.
3. ಅಂಕಿತನಾಮವು ವಚನದ ಯಾವ ಭಾಗದಲ್ಲಿ ಬರುತ್ತದೆ? ಉತ್ತರ : ಅಂಕಿತನಾಮವು ವಚನದ ಕೊನೆಯ ಸಾಲಿನಲ್ಲಿ ಕೊನೆಯ ಪದವಾಗಿ ಬರುತ್ತದೆ.
4. ನಾವು ಮೊದಲು ಯಾವ ಭಾಷೆಯನ್ನು ಕಲಿಯಬೇಕು? ಉತ್ತರ : ನಾವು ಮೊದಲು ಹೃದಯದ ಭಾಷೆಯನ್ನು ಕಲಿಯಬೇಕು.
5. ಜನ ಕೆರಳಿ ಜರೆಯುವುದು ಯಾವಾಗ? ಉತ್ತರ : ಒಂಭತ್ತು ಬಾರಿ ಅಂದರೆ ಹಲವು ಬಾರಿ ಉಪಕಾರ ಮಾಡಿ ಒಂದು ಬಾರಿ ಮರೆತರೆ , ಹಾಗೂ ಹತ್ತು ಸಾರಿ ಅಂದರೆ ಬಹಳಷ್ಟು ಸಾರಿ ಹೊಗಳಿ , ಒಮ್ಮೆ ಯಾವಾಗಲಾದರೂ ಅವರ ತಪ್ಪನ್ನು ತೋರಿಸಿದರೆ ಜನ ಕೆರಳಿ ಜರೆಯುವರು.
ಈ. ವಚನವನ್ನು ಕಂಠಪಾಠ ಮಾಡಿರಿ. ಒಂಬತ್ತು ತಡವೆ ಉಪಕರಿಸಿ ತಪ್ಪಲು. ಮೊದಲಿನೆಲ್ಲವ ಮರೆವರಯ್ಯ. ಹತ್ತು ಬಾರಿ ಮೆಚ್ಚಿ ಮಯತ್ತೊಂದು ಬಾರಿ ಟೀಕಿಸಲು. ಕೆರಳಿ ಜರೆವರಯ್ಯ ಸುತ್ತಿಗೆ ತಲೆಯೊಲೆಯಿಸಿ. ನಲಿ ದೊಲಿವುದಯ್ಯ ಲೋಕ. ಓಲೈಕೆಯ ಚಾಳಿಯ ದೂರೀಲರಿಸಯ್ಯ ಸ್ತೋತ್ರಾತೀಯ. ಹೃದಯೇಶ ಸೋಮೇಶಾ
ಅ. ಬಿಟ್ಟ ಸ್ಥಳ ತುಂಬಿರಿ . ಅನ್ನಕ್ಕೆ ಬಂದಿರುವ ಕುನ್ನಿಗಳ ಮನ್ನಿಸದೆ. ಹೋದರಿ ಸಿರಿನಾಡು ಪರಕೀಯರಾ ವಶಕೆ !. ಕರಿನೆಲದ ಗರಿಮೆಯನ್ನು ತೋರಿಸಲು ಬಿಳಿಯರಿಗೆ. ಮಮ್ಮಲನೆ ಮರುಗಿದಳು ಮನನೊಂದು ಕೊರಗಿದಳು.
ಆ . ಕೊಟ್ಟಿರುವ ಪದ ಬಳಸಿ ಸಂತ ವಾಕ್ಯ ಬರೆಯಿರಿ. ನಮ್ಮ ದೇಶದ ಚರಿತ್ರೆಯನ್ನು ಓದಿದಾಗ ರೋಮಾಂಚನವಾಗುತ್ತದೆ. ಸ್ವಾತಂತ್ರ ಬಂದಾಗ , ಭಾರತ ಮಾತೆ – ಜಯಮಾಲೆಯನ್ನು ಧರಿಸಿದಳು. ದೇಶಭಕ್ತರಾಗಿ ಸೇವೆ ಸಲ್ಲಿಸಿದಾಗ ನಾವು ಸ್ವಲ್ಪವಾದರೂ ಋಣ ಮುಕ್ತರಾಗಬಹುದು.
ಇ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ. 1. ಚೆನ್ನಮ್ಮ ಏನೆಂದು ಕನವರಿಸಿ ಹಲ್ಲು ಕಡಿದಳು. ತಮ್ಮ ಸಿರಿನಾಡು ಪರಕೀಯರವಶವಾದಂತೆ ಇದರಿಂದ ಮಲ್ಲಸರ್ಜನ ಮನಸ್ಸಿಗೆ ನೋವಾಗುತ್ತದೆ ಎಂದು ಕನವರಿಸುತ್ತಾ ಹಲ್ಲು ಕಡಿದಳು.
2. ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಯಾರು?. ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಬ್ರಿಟಿಷರು.
3. ಚೆನ್ನಮ್ಮ ಸೈನಿಕರನ್ನು ಕುರಿತು ಏನೆಂದು ಹೇಳಿದಳು?. ಚೆನ್ನಮ್ಮ ಛಲತೊಟ್ಟು ಹುಲಿಯಂತೆ ನುಗೋಣ , ಎಂದು ಹೇಳಿದಳು.
4. ಯಾರ ಕೃಪೆಯಿಂದ ಸೈನ್ಯವನ್ನು ಕಟ್ಟಲಾಯಿತು?. ರಾಜಗುರುವಿನ ಕೃಪೆಯಿಂದ ಸೈನ್ಯವನ್ನು ಕಟ್ಟಿದರು.
5. ಮರುಜನ್ಮ ನೀಡೆಂದು ಚೆನ್ನಮ್ಮ ಯಾರಲ್ಲಿ , ಯಾಕೆ ಕೇಳಿದಳು?. ಕರುನಾಡ ಒಡತಿಯ ಹತ್ತಿರ ಮರುಜನ್ಮ ನೀಡು ಹೆಣ್ಣಾಗಿ ಇದೆ ನೆಲದಲ್ಲಿ ಹುಟ್ಟಿ ನಿನ್ನ ಋಣವನ್ನು ತೀರಿಸುತ್ತೇನೆ ಎಂದು ಕೇಳಿಕೊಂಡಳು.
6. ಕಿತ್ತೂರ ಕೇಸರಿ ಕಣ್ಮುಚ್ಚಿ ಏನೆಂದು ಬೇಡಿಕೊಂಡಳು?. ಈ ಮಣ್ಣಿನಲ್ಲಿ ಹುಟ್ಟುವಂತೆ ನೀಡನೆಗೆ ‘ ಎಂದು ಕಿತ್ತೂರ ಕೇಸರಿ ಕಣ್ಮುಚ್ಚಿಕೊಂಡು ಭುವನೇಶ್ವರಿಯನ್ನು ಕಂಡುಕೊಂಡಳು.
ಈ ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ – ಉತ್ತರಿಸಿರಿ. 1. ರಾಣಿಚೆನ್ನಮ್ಮ ಹಲ್ಲು ಕಡಿದದ್ದು ಯಾಕೆ?. ತಮ್ಮ ಸಿರಿನಾಡು ಪರಕೀಯರ ವಶವಾದಂತೆ ಕನಸಿನಲ್ಲಿ ಕನವರಿಸಿದಳು . ಇದರಿಂದ ಮಲ್ಲಸರ್ಜನ ಮನ ಎಷ್ಟೊಂದು ನೊಂದಿರಬಹುದ ಬಗ್ಗೆಕಟಕಟನೆ ಹಲ್ಲು ಕಡಿದಳು.
2. ಕೆಚ್ಚೆದೆಯ ಕಲಿಗಳಿಗೆ ಹೇಳಿದಳು?. ಪರಕೀಯರ ಏನೆಂದು ಕೆಚ್ಚೆದೆಯ ಕಲಿಗಳಿಗೆ ಚೆನ್ನಮ್ಮ ‘ ಏಳಿರೆ ಕೆಚ್ಚೆದೆಯ ಕಲಿಗಳೇ ನೀವು ! ಕರಿ ನೆಲದ ಗರಿಮೆಯನ್ನು ತೋರಿಸಲು ಬಿಳಿಯರಿಗೆ ಛಲತೊಟ್ಟು ಹುಲಿಯಂತೆ ನುಗ್ಗೋಣ ‘ ಎಂಬುದಾಗಿ ಹೇಳಿದಳು.
3. ಚೆನ್ನಮ್ಮನಿಗೆ ನೋವಾಗಲು ಕಾರಣವೇನು?. ಚೆನ್ನಮ್ಮ ಛಲದಿಂಧ ಗಳಿಸಿದ ಜಯಮಾಲೆ ಕೆಲವೇ ದಿನಗಳಲ್ಲಿ ದುರ್ಮತಿಯದಿಂದ ಸೋಲಾಗಿ ತಾಯಿ ನೆಲದ ರಕ್ಷಣೆ ಕೈ ಮೀರಿತೆಂದು ಅವಳಿಗೆ ನೋವಾಯಿತು.
4. ಕಿತ್ತೂರ ಕೇಸರಿ ಕಣ್ಮುಚ್ಚಿ ಏನೆಂದು ಬೇಡಿಕೊಂಡಳು? ಈ ಮಣ್ಣಿನಲ್ಲಿ ಹೆಣ್ಣಾಗಿ ಹುಟ್ಟುವಂತೆ ಮರುಜನ್ಮ ನೀಡನೆಗೆ ‘ ಎಂದು ಕಿತ್ತೂರ ಕೇಸರಿ ಕಣ್ಮುಚ್ಚಿಕೊಂಡು ಕರುನಾಡ ಒಡತಿ ಭುವನೇಶ್ವರಿಯನ್ನು ಕಂಡುಕೊಂಡಳು