ಹುತ್ತರಿ ಹಾಡು.
ಕೃತಿಕಾರರ ಪರಿಚಯ.
ಕವಿ : ಶ್ರೀ ಪಂಜೆ ಮಂಗೇಶರಾವ್.
ಕಾಲ : ಕ್ರಿ . ಶ . ೧೮೭೪.
ಸ್ಥಳ : ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಜನಿಸಿದರು.
ಕಾವ್ಯನಾಮ : ‘ ಕವಿಶಿಷ್ಯ ‘ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಶ್ರೀ ಪಂಜೆ ಮಂಗೇಶರಾವ್ ಅವರು ಮಕ್ಕಳ ಕವಿತೆಗಳ ಕಣ್ಮಣಿ ಎಂದು ಪ್ರಸಿದ್ಧರಾದರು.
ಕೃತಿಗಳು : ಹುತ್ತಲಿಯ ಹಾಡು , ನಾಗರ ಹಾವೇ , ಕೋಟಿ ಚೆನ್ನಯ್ಯ , ಗುಡುಗುಡು ಗುಮ್ಮಟ ದೇವರು , ಮಾತಾಡೋ ರಾಮಪ್ಪ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಇವರು ಸಾ . ಶ . ೧೯೩೪ ರಲ್ಲಿ ನಡೆದ ೨೦ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಅ. ಕೆಳಗಿರುವ ಪ್ರಶ್ನೆಗಳಿಗೆ ಉತ್ತರಿಸಿ.
1. ಕಾವೇರಿಯು ಹೇಗೆ ಹೊಳೆಯುತ್ತಾಳೆ?
ಕಾವೇರಿಯು ಮುಗಿಲಿನ ಮಿಂಚಿನಂತೆ ಹೊಳೆಯುತ್ತಾಳೆ.

2. ಸೋಲು ಸಾವರಿಯದವರು ಯಾರು?
ಸೋಲು ಸಾವರಿಯದವರು ಕೊಡಗಿನ ಕಡುಗಲಿ ಹಿರಿಯರು.

3. ಕೊಡಗು ಯಾವ ಗಿರಿಯಿಂದ ಯಾವ ಗಿರಿಯ ಪರ್ಯಂತ ಬೆಳೆದಿದೆ?.
ಕೊಡಗು ಬೊಮ್ಮಗಿರಿಯಿಂದ ಪುಷ್ಪಗಿರಿಯ ಪರ್ಯಂತ ಬೆಳೆದಿದೆ.

4. ಕಾವೇರಿಯ ತವರ್ಮನೆ ಯಾವುದು?.
ಕಾವೇರಿಯ ತವರ್ಮನೆ ಕೊಡಗು.

5. ಯಾವ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು? ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು.
ಕೃತಿಕಾರರ ಪರಿಚಯ.
ಕವಿ : ಡಾ . ಎಂ . ಅಕಬರ ಅಲಿ.
ಕಾಲ :1925 ರ ಮಾರ್ಚ್ 3.
ಸ್ಥಳ : ಬೆಳಗಾವಿ ಜಿಲ್ಲೆ , ಹುಕ್ಕೇರಿ ತಾಲ್ಲೂಕಿನ ಉಳ್ಳಾಗಡ್ಡಿ ಖಾನಾಪುರದಲ್ಲಿ ಜನಿಸಿದರು.
ಕೃತಿಗಳು : ಅಪ್ಪ ಪಟ್ಟದಿಗಳ ಸಂಗ್ರಹವನ್ನು ನವಚೇತನ , ‘ ಗಂಧ ಕೇಶರ ‘ , ‘ ಸುಮನ ಸೌರಭ ‘ ಎಂಬ ಕವನ ಸಂಗ್ರಹಗಳನ್ನು ಬರೆದಿದ್ದಾರೆ.
ಪ್ರಶಸ್ತಿಗಳು : 1989 ರಿಂದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದರು .ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ . ಮೈಸೂರುವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದೆ.
ಡಾ . ಎಂ . ಅಕಬರ ಅಲಿ ಅವರ ‘ ತಮಸಾ ನದಿ ಎಡಬಲದಿ ‘ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

ಪದಗಳ ಅರ್ಥ.
ನಿರ್ಭೀತ-ಭಯವಿಲ್ಲದ; ಮಸ್ತಕ-ತಲೆ; ಹೋಳು-ತುಂಡು; ಹರಹು-ವಿಸ್ತಾರ ; ವಾಹಿನಿ-ನದಿ: ಹರಿಗಡಿಯದೆ-ಹರಿಯುವಿಕೆಯು ನಿಲ್ಲದೆ; ವೈಶಾಲ್ಯ-ವಿಶಾಲತೆ; ಧ್ರುವತಾರೆ-ಧ್ರುವನಕ್ಷತ್ರ (ಸ್ಥಿರವಾದ ಲಕ್ಷ್ಯ): ನಿರ್ಮುಕ್ತ-ಸರ್ವಸ್ವತಂತ್ರ.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1 . ಸ್ವಾತಂತ್ರ್ಯ ಸ್ವರ್ಗದಲ್ಲಿ ಅಭಿಮಾನಧನವೆನಿಪ ಮಸ್ತಕವು ಹೇಗಿರುತ್ತದೆ?
ಸ್ವಾತಂತ್ರ್ಯ ಸ್ವರ್ಗದಲ್ಲಿ ಅಭಿಮಾನಧನವೆನಿಪ ಮಸ್ತಕವು ಜಗ್ಗದೆ, ಕುಗ್ಗದೆ, ತಗ್ಗೆದೆ, ಬಗ್ಗದೆ ನೀಟಾಗಿರಬೇಕು.

2. ಕವಿಯು ಬಾಳು ಹೇಗಿರಬೇಕೆಂದು ಆಶಿಸಿದ್ದಾರೆ?
ಕವಿಯ ಬಾಳು ಹೇಗಿರಬೇಕೆಂದರೆ ಅವರ ಅರಿವು ಸರ್ವ ಸ್ವತಂತ್ರವಾಗಿ ಸಂಕುಚಿತತೆ ನಾಶವಾಗಿ, ವಿಶ್ವ ಖಂಡ ಖಂಡವಾಗದೆ ಒಂದಾಗಿ ಚೆನ್ನಾಗಿ ಬಾಳಬೇಕು. ಅಂತಹ ನಾಡು ಎಂಬ ಸ್ವಾತಂತ್ರ್ಯ ಸ್ವರ್ಗದಲ್ಲಿರಬೇಕು ಎಂದು ಆಶಿಸುತ್ತಾರೆ.

3. ಕವಿಯು ಸಂಪ್ರದಾಯದ ಅನಿಷ್ಟ ರೂಢಿ ನಿಯಮಗಳನ್ನು ಏನೆಂದು ಕರೆಯುತ್ತಾರೆ?
ಸಂಪ್ರದಾಯದ ಅನಿಷ್ಟ ರೂಢಿ-ನಿಯಮಗಳು ನಿರ್ಜನಭರಿತ ಮರುಭೂಮಿಯಂತೆ, ಅಲ್ಲಿ ಸುವಿಚಾರಗಳೆಂಬ ವಾಹಿನಿಯು ಹರಿಯದಿದ್ದರೆ ಮುಂದುವರಿಯುವುದು ಹೇಗೆ? ಎಂದಿದ್ದಾರೆ.

4. ಧ್ರುವತಾರೆ ಎಂದು ಯಾರನ್ನು ಕರೆಯುತ್ತಾರೆ ?
ಎಲ್ಲಿ ವಿಶಾಲತೆಯ ನಡೆ-ನುಡಿಗಳಿರುವುದೋ, ಮನಸ್ಸು ಅರಳುವ ಮಾತು ಇರುವುದೋ, ಅಲ್ಲಿ ನಿನ್ನ- ಪ್ರೀತಿ, ದಯೆ, ಕೃಪೆಯಿದ್ದರೆ, ನಿನ್ನನ್ನೇ ಧ್ರುವತಾರೆ ಎಂದು ಕರೆಯುತ್ತಾರೆ.

ಆ. ಕೆಳಗಿನ ಪದಗಳಿಗೆ ಪದ್ಯದಲ್ಲಿರುವ ಸಮಾನಾರ್ಥಕ ಪದಗಳನ್ನು ಬರೆಯಿರಿ:
1. ಜಗ- ಜಗತ್ತು.
2. ಸತ್ಯ –ನಿಜ.
3. ಮರಳುಗಾಡು –ಮರುಭೂಮಿ.
4. ಪ್ರವಾಹ –ಜೋರಾಗಿ ಹರಿಯುವುದು.
5. ಒಲವು– ಪ್ರೇಮ.
6. ಅನುಗ್ರಹ – ಕೃಪೆ.

ಇ) ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿ:
1. ಸ್ವತಂತ್ರ : ಕಾಡಿನಲ್ಲಿ ಪ್ರಾಣಿಗಳು ಸ್ವತಂತ್ರವಾಗಿ ಬದುಕುತ್ತವೆ.
2. ವಿಶಾಲ : ಪ್ರಪಂಚ ತುಂಬಾ ವಿಶಾಲವಾಗಿದೆ.
3. ನವೀನ : ನಿತ್ಯವು ನವ ನವೀನ ಅವಕಾಶಗಳು ನಮಗೆ ದೊರೆಯುತ್ತವೆ.
4. ಕಠಿಣ : ಕೆಲವೊಂದು ಕಠಿಣ ಸಮಯವು ನಮ್ಮನ್ನು ಪರೀಕ್ಷಿಸುತ್ತದೆ.
5. ಮಧುರ : ನಾಳೆಯ ಮಧುರವಾದ ದಿನಕ್ಕೆ ಈ ದಿನ ಶ್ರಮಪಡಬೇಕು.
ಪದಗಳ ಅರ್ಥ.
ತವರು-ತಾಯಿಯ ಮನೆ: ಬಾಳೆ-ಬಾಳೆಯಗಿಡ; ಸೀಬೆ-ಪೇರಳೆ: ಮುತ್ತೈದೆ-ಮದುವೆಯಾದ ಹೆಣ್ಣು : ಕಂಚು-ಒಂದು ಲೋಹ; ಮಿಂಚಾಡು-ಹೊಳೆಯುವುದು; ಗಿಣಿ-ಗಿಳಿ: ಆಲೆ- ಕಬ್ಬಿನ ರಸ ತೆಗೆಯುವ ಯಂತ್ರ, ಗಾಣ: ಸಾರಂಗ-ಮೈಮೇಲೆ ಚುಕ್ಕೆಗಳಿರುವ ಜಿಂಕೆ; ಪಗಡೆ- ಒಂದು ರೀತಿಯ ಆಟ; ನಟ್ಟ ನಡುವೆ ಮಧ್ಯೆ: ಹಟ್ಟಿ-ಮನೆ; ಹಡೆದವ್ವ- ಹೆತ್ತ ತಾಯಿ; ಕೊಂಡೋಗು-ತೆಗೆದುಕೊಂಡುಹೋಗು.

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಬಳೆಗಾರ ಎಲ್ಲಿಗೆ ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ?
ಬಳೆಗಾರ ತನ್ನ ತವರಿಗೆ ಹೋಗಿ ಬರಬೇಕೆಂದು ಹೆಣ್ಣು ಹೇಳುತ್ತಾಳೆ.

2. ತಾಯಿಯ ಮನೆ ಯಾವ ರೀತಿ ಇದೆ?
ತಾಯಿಯ ಮನೆ ಹೆಂಚಿನ ಮಾಡನ್ನು ಕಂಚಿನ ಕದವನ್ನು ಹೊಂದಿದೆ ಎನ್ನುತ್ತಾಳೆ.

3. ಚಪ್ಪರದ ನಡುವೆ ತಾಯಿ ಯಾವ ಆಟ ಆಡುತ್ತಾಳೆ?
ಚಪ್ಪರದ ನಡುವೆ ತಾಯಿ ಪಗಡೆಯಾಟ ಆಡುತ್ತಾಳೆ.

4. ಹಡೆದವ್ವನಿಗೆ ಯಾವ ಬಣ್ಣದ ಬಳೆ ಎಂದರೆ ಆಸೆ?
ಹಡೆದವ್ವನಿಗೆ ಅಚ್ಚಕೆಂಪು ಮತ್ತು ಹಸಿರು ಗೀರಿನ ಬಳೆ ಎಂದರೆ ಆಸೆ.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ವಾಕ್ಯಗಳಲ್ಲಿ ಉತ್ತರಿಸಿ:
1. ತವರು ಮನೆಗೆ ಹೋಗಲು ಗುರುತುಗಳೇನು?
ತವರು ಮನೆಗೆ ಹೋಗಬೇಕಾದರೆ ಬಲಕ್ಕೆ ಬಾಳೆ ತೋಟ ,ಸೀಬೆತೋಟ ಸಿಗುತ್ತದೆ . ಮಧ್ಯದ ದಾರಿಯಲ್ಲಿ ನಡೆದು ಹೋದರೆ ಎದುರಿಗೇ ತವರು ಮನೆ ಸಿಗುತ್ತದೆ.

2. ತವರ ಮನೆ ನೋಡಲು ಹೇಗಿದೆ?
ತವರು ಮನೆಯಲ್ಲಿ ಆಲೆ ಆಡುತ್ತಿರುತ್ತದೆ , ಗಾಣ ತಿರುಗುತ್ತಿರುತ್ತದೆ .ಹಂಚಿನ ಮನೆ , ಕಂಚಿನ ಬಾಗಿಲನ್ನು ಹೊಂದಿದೆ . ಮನೆಯ ಮುಂದೆ ಚಪ್ಪರ ಹಾಕಿರುತ್ತದೆ . ಚಪ್ಪರದ ಕೆಳಗೆ ತಾಯಿ ಕುಳಿತು ಪಗಡೆಯಾಡುತ್ತಿರುತ್ತಾಳೆ, ಹೀಗೆ ತವರು ಮನೆ ನೋಡಲು ಹಿತಕರವಾಗಿರುತ್ತದೆ.

ಉ. ಕೆಳಗಿನ ಪದ್ಯದಲ್ಲಿ ಇರುವ ವಾಕ್ಯಗಳಂತೆ ಅರ್ಥಕೊಡುವ ಸಾಲುಗಳನ್ನು ಗುರುತಿಸಿ.
ಪ್ರಶ್ನೆ.
1. ನಿನ್ನ ತವರೂರು ನನಗೇನು ಗೊತ್ತು?.
2. ಅಲ್ಲಿದೆ ನನ್ನ ತವರೂರು.
3. ನನ್ನ ತವರು ಮನೆಯ ಮಾಡು ಹಂಚಿನದು ; ನನ್ನ ತವರು ಮನೆಯ ಬಾಗಿಲು ಕಂಚಿನದು.
4. ಎಲೆ ಬಳೆಗಾರನೇ , ನವಿಲು ಸಾರಂಗ ಅಲ್ಲಿ ಕುಣಿಯುತ್ತವೆ.
ಉತ್ತರ :
1. ನಿನ್ನ ತವರೂರ ನಾನೇನು ಬಲ್ಲೆನು.
2. ಅಲ್ಲಿಹುದೇ ನನ್ನ ತವರೂರು.
3. ಹಂಚಿನ ಮನೆ ಕಾಣೋ , ಕಂಚಿನ ಕದ ಕಾಣೋ.
4. ನವಿಲು ಸಾರಂಗ ನಲಿತಾವೆ ಬಳೆಗಾರ.
5. ಅವಳೆ ಕಾಣೋ ಎನ್ನ ಹಡೆದವ್ವಾ.
6. ಕೊಂಡೋಗೊ ಎನ್ನ ತವರೀಗೆ.
7. ಅಚ್ಚ ಕೆಂಪಿನ ಬಳ ಹಸಿರು ಗೀರಿನ ಬಳೆ ಎನ್ನ ಹಡೆದವ್ಗ ಬಲು ಆಸೆ ಬಳೆಗಾರ.

ಕೆಳಗೆ ನೀಡಿರುವ ನುಡಿಗಟ್ಟುಗಳನ್ನು ಬಳಸಿ ವಾಕ್ಯ ರಚಿಸಿ.
1. ಅಡ್ಡದಾರಿ (ತಪ್ಪು ಕೆಲಸ ಮಾಡು ) : ಸಹವಾಸ ‘ ದೋಷದಿಂದ ಯುವಕರು ಅಡ್ಡ ದಾರಿ ಹಿಡಿಯುತ್ತಾರೆ.
2. ಎತ್ತಿದ ಕೈ ( ಪ್ರವೀಣ ) : ಹಳ್ಳಿಯ ಹುಡುಗರು ಆಟದಲ್ಲಿ ಎತ್ತಿದ ಕೈ.
3. ನೀರಿಗೆ ಹಾಕು ( ವ್ಯರ್ಥಮಾಡು ) : ಮೂರ್ಖರಿಗೆ ಮಾಡುವ ಉಪದೇಶ ನೀರಿಗೆ ಹಾಕಿದಂತಾಗುತ್ತದೆ.
4. ಬೇರೂರು ( ಸ್ಥಿರವಾಗಿರು ) : ಒಳ್ಳೆಯ ಅಭ್ಯಾಸಗಳು ಬಾಲ್ಯದಲ್ಲಿಯೇ ಬೇರೂರಬೇಕು.
5. ಮೈ ಬಗ್ಗಿಸು ( ಶ್ರಮಪಡು ) : ಮೈ ಬಗ್ಗಿಸಿ ಕೆಲಸ ಮಾಡಿದರೆ ದೈಹಿಕ ವ್ಯಾಯಾಮದ ಜೊತೆಗೆ ಆರೋಗ್ಯವೂ ಲಭಿಸುತ್ತದೆ.
ಕೃತಿಕಾರರ ಪರಿಚಯ.
ಜೇಡರ ದಾಸಿಮಯ್ಯ : ಹನ್ನೊಂದನೆಯ ಶತಮಾನದಲ್ಲಿದ್ದ ಹಿರಿಯ ಶಿವಶರಣ, ಯಾದಗಿರಿ ಸನಿಹದ ಮುದೇನೂರಿ ನವನು. ದಾಸಿಮಯ್ಯ ಪ್ರಥಮ ವಚನಕಾರನೆಂದೇ ಮಾನ್ಯನಾಗಿದ್ದಾನೆ. 'ರಾಮನಾಥ' ಎಂಬ ಅಂಕಿತದಿಂದ ರಚಿಸಿರುವ ಇವರ ೧೫೦ ವಚನಗಳು ದೊರೆತಿವೆ. ಸರಳ ಮತ್ತು ನೇರ ನಿರೂಪಣೆಯಿಂದ ಕೂಡಿದ ದಾಸಿಮಯ್ಯನವರ ವಚನಗಳು ಸಾಮಾಜಿಕ ಮೌಲ್ಯದಿಂದ ಜನಮಾನ್ಯವಾಗಿದೆ.
ಜೇಡರದಾಸಿಮಯ್ಯನವರ ಈ ವಚನದಲ್ಲಿ ಶಿವನು ತನ್ನ ಭಕ್ತರನ್ನು ಹೇಗೆ ಪರೀಕ್ಷೆಗೆ ಒಳಪಡಿಸಿ. ಪರಿಶುದ್ಧರನ್ನಾಗಿ ಮಾಡಿ ಕೈವಿಡಿದು ಕಾಯುತ್ತಾನೆಂಬುದನ್ನು ಉಪಮೆಗಳ ಮೂಲಕ ತಿಳಿಸಿದ್ದಾನೆ.

ಮಡಿವಾಳ ಮಾಚಯ್ಯ : ಮಡಿವಾಳ ಮಾಚಯ್ಯ ೧೨ನೇ ಶತಮಾನದ ಪ್ರಮುಖ ವಚನಕಾರರಲ್ಲಿ ಒಬ್ಬರು. ಇವರ ಜನ್ಮಸ್ಥಳ ವಿಜಯಪುರ ಜಿಲ್ಲೆಯ ಹಿಪ್ಪರಗಿ, ಬಸವಣ್ಣನವರ ಕೀರ್ತಿ ಕೇಳಿ ಹೊಸ ಧರ್ಮಕ್ಕೆ ಆಕರ್ಷಣೆಗೊಂಡು ಕಲ್ಯಾಣಕ್ಕೆ ಹೋದವರಲ್ಲಿ ಮೊದಲಿಗರು. ಮಾಚಯ್ಯ ಕಲ್ಯಾಣದಲ್ಲಿ ಶಿವಶರಣರ ಬಟ್ಟೆಗಳನ್ನು ಮಾತ್ರ ಮಡಿಮಾಡಿಕೊಂಡಿದ್ದವರು. ಇವರ ೩೫೩ ವಚನಗಳು ಉಪಲಬ್ದವಾಗಿವೆ. ಇವರ ವಚನಾಂಕಿತನಾಮ 'ಕಲಿದೇವರ ದೇವ' ಎಂಬುದು.

ಶಿವಭಕ್ತರು ಅನೇಕ ಸತ್ವಪರೀಕ್ಷೆಗಳಿಂದ ಪರಿಶುದ್ಧರಾಗಿದ್ದಾರೆ. ಅನ್ಯಾಯ ಮಾರ್ಗವನ್ನಿಡಿದು ನಡೆಯುವ ಸಾಮಾನ್ಯ ಮನುಷ್ಯರು ತಮ್ಮ ಹೀನ ಕೃತ್ಯಗಳಿಂದ ಅನೇಕ ಜನ್ಮಾಂತರಗಳಲ್ಲಿ ಬಳಲುತ್ತಾರೆ. ಶಿವಭಕ್ತರನ್ನು ಈ ಜನ್ಮಾಂತರಗಳಿಂದ ಬಳಲಿಸದೆ ಅವರಿಗೆ ಶಿವಾಚಾರದ ಸನ್ಮಾರ್ಗ ತೋರಿಸು ಎಂಬುದು ಈ ವಚನದಲ್ಲಿದೆ.

ಮುಕ್ತಾಯಕ್ಕ : ೧೨ನೆಯ ಶತಮಾನದಲ್ಲಿದ್ದ ಅನುಭಾವಿ ಶಿವಶರಣೆ. ಮುಕ್ತಾಯಕ್ಕನ ಜನ್ಮಸ್ಥಳ ಲಕ್ಕುಂಡಿ, ಅಜಗಣ್ಣ ಅಂಕಿತವಿರುವ ಇವರ '೩೭ ವಚನಗಳು ದೊರೆತಿವೆ. ಅಧ್ಯಾತ್ಮ ಸಾಧನೆಯ ಗುಪ್ತಭಕ್ತ ಅಜಗಣ್ಣನು ಮುಕ್ತಾಯಕ್ಕನ ಸಹೋದರ ಮತ್ತು ಗುರು. ಇವರಿಬ್ಬರ ಅನುಭಾವಿ ನಿಲುವಿಗೆ ಸಂಬಂಧಿಸಿದಂತೆ ಸೂಕ್ಷ್ಮ ಪದರಗಳನ್ನು ಬಿಡಿಸಿ ತೋರುವ ವಚನಗಳಿವು.
ಶಿವಭಕ್ತನಿಗೆ ನಡೆ-ನುಡಿಗಳು ಬಹಳ ಮುಖ್ಯ, ನಡೆನುಡಿಗಳ ಪರಿಶುದ್ಧತೆಯೇ ನಿಜವಾದ ವ್ರತ. ಇದು ಮಹಾಜ್ಞಾನ ಸಂಪಾದನೆಯ ಮಾರ್ಗವೆಂಬುದು ಈ ವಚನದಲ್ಲಿ ವ್ಯಕ್ತವಾಗಿದೆ.

ಸತ್ಯಕ್ಕ : ೧೨ನೆಯ ಶತಮಾನದಲ್ಲಿದ್ದ ಶಿವಶರಣೆಯರಲ್ಲಿ ಒಬ್ಬಳು. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಸಮೀಪದ ಹಿರೇಜಂಬೂರು ಸತ್ಯಕ್ಕನ ಜನ್ಮಸ್ಥಳ, ಶಿವಭಕ್ತರ ಮನೆಯಂಗಳ ಕಸಗುಡಿಸುತ್ತ ಶಿವಭಕ್ತಿಯನ್ನು ಆಚರಿಸುವುದು ಇವರ ಕಾಯಕವಾಗಿತ್ತು. 'ಶಿವನಲ್ಲದೆ ಅನ್ಯ ದೈವವ ಪೂಜಿಸೆ; ಶಿವ ಶಬ್ದವಲ್ಲದೆ ಅನ್ಯ ದೈವದ ಶಬ್ದವ ಕೇಳೆ' ಎಂಬ ಪ್ರತಿಜ್ಞೆ ಅವರದಾಗಿತ್ತು. "ಶಂಭುಜಕ್ಕೇಶ್ವರ" ಎಂಬುದು ಸತ್ಯಕ್ಕನ ವಚನಗಳ ಅಂಕಿತನಾಮ. ಇವರ ೨೭ ವಚನಗಳು ದೊರಕಿವೆ.

ಪರರಧನ, ಪರಿಶ್ರಮವಿಲ್ಲದೆ ದೊರಕುವ ಯಾವುದೇ ಆಸೆ-ಆಮಿಷಗಳಿಗೆ ಶಿವಶರಣರು ಒಳಗಾಗಬಾರದು. ಹಾಗೇನಾದರೂ ಒಳಗಾದ ಪಕ್ಷದಲ್ಲಿ ಅಂಥವರಿಗೆ ನರಕ ತಪ್ಪಿದ್ದಲ್ಲ. ಅಂಥವರು ಶಿವಶರಣರೇ ಅಲ್ಲವೆಂಬ ಭಾವ ಪ್ರಕೃತ ವಚನದ್ದಾಗಿದೆ.
ಪದಗಳ ಅರ್ಥ.
ತಿರಿ-ಭಿಕ್ಷೆಬೇಡು, ತಿರುಗಾಡು:
ಮಿಸುನಿ-ಚಿನ್ನ, ಹೊನ್ನು:
ಅರೆದು-ತೇದು, ಉಜ್ಜಿ:
ಆರಿ-ಕತ್ತರಿಸು;
ಬೆದರು-ಹೆದರು, ಭಯಪಡು:
ಕರ-ಕೈ:
ಅಂಧಕಾರ-ಕತ್ತಲೆ, ತಿಮಿರಃ
ಪ್ರಭೆ-ಕಾಂತಿ, ಪ್ರಕಾಶ:
ನಿಂದಕರು- ನಿಂದಿಸುವವ, ಬಯ್ಯುವವ:
ಐಡಿಸಲು-ಛೇಡಿಸು, ಚೇಷ್ಟೆಮಾಡು:
ಕುತರ್ಕ-ನ್ಯಾಯವಿಲ್ಲದ ಮಾತು:
ಪಥ-ಮಾರ್ಗ, ದಾರಿ:
ವ್ರತ-ನಿಯಮ, ಪೂಜೆ, ಧಾರ್ಮಿಕ ಅನುಷ್ಠಾನ:
ಬಟ್ಟೆ-ಮಾರ್ಗ, ದಾರಿ:
ಪ್ರಮಥರು-ಶಿವನ ಭಕ್ತರು:
ಅಳಮನ-ದೃಢವಲ್ಲದ ಮನಸ್ಸು, ಅಸ್ಥಿರವಾದ ಮನಸ್ಸು;
ಅದ್ದಿ-ಮುಳುಗಿಸು, ತೋಯಿಸು;

ಅ . ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :
1 . ಹರನು ತನ್ನ ಭಕ್ತರನ್ನು ಹೇಗೆ ಪರೀಕ್ಷಿಸುತ್ತಾನೆ?
ಹರನು ತನ್ನ ಭಕ್ತರಿಗೆ ನಾನಾ ರೀತಿಯ ಪರೀಕ್ಷೆಗಳನ್ನು ಅಂದರೆ ಕಷ್ಟಗಳನ್ನು ಕೊಟ್ಟು ಪರೀಕ್ಷಿಸುತ್ತಾನೆ.

2 . ಶಿವನ ಮೇಲಿನ ಭಕ್ತಿ ಯಾವುದರಿಂದ ಪ್ರಭೆಯಾಯಿತು?
ಶಿವನ ಮೇಲಿನ ಭಕ್ತಿ ನಿಂದಕರ ನುಡಿಯಿಂದ ಛೇಡಿಸಿದಾಗ ಪ್ರಭೆಯಾಯಿತು.

3 . ಮಹಾಜ್ಞಾನದಾಚರಣೆ ಯಾವುದು?
ಮಹಾಜ್ಞಾನದಾಚರಣೆ ಹಿಡಿದ ವ್ರತವನ್ನು ಬಿಡದಿರುವುದು.

4 . ಯಾವುದಕ್ಕೆ ಆಸೆ ಮಾಡಿದರೆ ನರಕದಲ್ಲಿ ಅದ್ದ ಬೇಕು?
ಪರದ್ರವ್ಯಕ್ಕೆ ಆಸೆ ಮಾಡಿದರೆ ನರಕದಲ್ಲಿ ಅದ್ದಬೇಕು.

5 . ಹೊನ್ನು ವಸ್ತ್ರ ಎಲ್ಲಿ ಬಿದ್ದಿದ್ದರೆ ಕೈಮುಟ್ಟಿ ಎತ್ತುವುದಿಲ್ಲ?
ನನ್ನ ದಾರಿಯಲ್ಲಿಯೇ ಹೊನ್ನು ಮತ್ತು ವಸ್ತ್ರ ಬಿದ್ದಿದ್ದರೂ, ಅದನ್ನು ನಾನು ಮುಟ್ಟುವುದಿಲ್ಲ.

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು -ಮೂರು ವಾಕ್ಯದಲ್ಲಿ ಉತ್ತರಿಸಿ:
1. ಹರನು ತನ್ನ ಭಕ್ತರನ್ನು ಯಾವಾಗ ಕರವಿಡಿದು ಎತ್ತಿಕೊಳ್ಳುವನು?
ಹರನು ಕೊಟ್ಟ ಕರುಣೆ ತೋರಿ ಕೈಹಿಡಿದು ( ಭಕ್ತರ ) ಕಪ್ಪವನ್ನು ಪರೀಕ್ಷೆಯಲ್ಲೆಲ್ಲಾ ಗೆದ್ದು , ಬೆದರದೆ ಬೆಚ್ಚದೆ ಇದ್ದರೆ ಎತ್ತಿಕೊಳ್ಳುವನು ಎಂದರೆ ಅವರ ಭಕ್ತರ ಕಷ್ಟವನ್ನ ಹೋಗಲಾಡಿಸಿ ಉದ್ದಾರ ಮಾಡುವನು.

2. ಶಿವಾಚಾರದ ಪಥವನ್ನು ತೋರಿಸಲು ಏನು ಮಾಡಬೇಕು?
ಪಥವನ್ನು ಶಿವಾಚಾರ , ಗಲಾಡಿಸಿ ಉದ್ಧಾರ ಮಾಡುವನು . ಬೇರೆಯವರ ಹತ್ತಿರ ( ಕುತರ್ಕ ಶಾಸ್ತ್ರದಿಂದ ) ನ್ಯಾಯವಲ್ಲದ ರೀತಿಯಲ್ಲಿ ನಡೆದುಕೊಳ್ಳದಿದ್ದರೆ , ಅನ್ಯಾಯವನ್ನು ಮಾಡಿದಿದ್ದರೆ ಶಿವಾಚಾರದ ಪಥವನ್ನು ತೋರಿಸು ಎಂದು ಬೇಡಿಕೊಳ್ಳಬೇಕು.

3. ನಡೆ – ನುಡಿಗಳ ಬಗೆಗೆ ಮುಕ್ತಾಯಕ್ಕನ ಅಭಿಪ್ರಾಯವೇನು?
ಕೆಟ್ಟ ಮಾತುಗಳನ್ನಾಡಬಾರದು, ಕೆಟ್ಟ ನಡವಳಿಕೆಯನ್ನು ನಡೆಯಬಾರದು. ಹಿಡಿದ ವ್ರತವನ್ನು ಬಿಡಬಾರದು ಎಂಬುದು ಮುಕ್ತಾಯಕ್ಕನ ಅಭಿಪ್ರಾಯ.

4. ಅಳಿಮನದಿಂದ ಉಂಟಾಗುವ ಪರಿಣಾಮವೇನು?
ಅಳಿಮನ ( ದೃಢವಿಲ್ಲದ ಮನಸ್ಸಿನಿಂದ ) ಬೇರೆಯವರ ದ್ರವ್ಯಕ್ಕೆ ಆಸೆ ಪಟ್ಟರೆ ಶಿವನು ನಮ್ಮನ್ನು ನರಕದಲ್ಲಿ ಅದ್ದುತ್ತಾನೆ.

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಐದು -ಆರು ವಾಕ್ಯಗಳಲ್ಲಿ ಉತ್ತರಿಸಿ:
1. ಶಿವನು ಯಾವಾಗ ತನ್ನ ಭಕ್ತರನ್ನು ಕರವಿಡಿದು ಎತ್ತಿಕೊಳ್ಳುತ್ತಾನೆ?
ಜೇಡರ ದಾಸಿಮಯ್ಯನು ಪರಮ ಶಿವಭಕ್ತ ಶಿವನು ತನ್ನ ಭಕ್ತರ ನಾನಾ ವಿಧಗಳಲ್ಲಿ ಪರೀಕ್ಷಿಸುತ್ತಾನೆ ಎಂದರೆ ಕಷ್ಟಕೊಟ್ಟು ಭಿಕ್ಷೆ ಬೇಡುವಂತೆ ಮಾಡುತ್ತಾನೆ . ಚಿನ್ನವನ್ನು ಪರೀಕ್ಷಿಸುವಂತೆ ಉಜ್ಜಿ ನೋಡುತ್ತಾನೆ . ಚಂದನದಂತೆ ಅರೆಯುತ್ತಾನೆ . ಕಬ್ಬಿನ ಕೋಲಿನಂತೆ ಕತ್ತರಿಸಿ ಹಿಂಡುತ್ತಾನೆ . ಇವೆಲ್ಲಕ್ಕೂ ಹೆದರದೆ ಇದ್ದರೆ ತಾನಿದ್ದೇನೆ ಎಂದು ಬಂದು ಕೈಹಿಡಿದು ಕಾಪಾಡುತ್ತಾನೆ . ಶಿವನ ಮೇಲೆ ಅಂತಹ ದೃಢವಾದ ಭಕ್ತಿಯಿರಬೇಕು , ಕಷ್ಟಗಳು ತಮ್ಮ ಉದ್ಧಾರಕ್ಕೆ ಬಂದಿರುವುದು ಎಂದು ದೇವರು ಕೊಟ್ಟ ಪರೀಕ್ಷೆಯಲ್ಲಿ ಗೆಲ್ಲಬೇಕು.

2. ಆಸೆ ಆಮಿಷಗಳಿಂದ ಮುಕ್ತರಾಗುವ ಬಗೆಯನ್ನು ಸತ್ಯಕ್ಕ ತನ್ನ ವಚನದಲ್ಲಿ ಹೇಗೆ ವ್ಯಕ್ತಗೊಳಿಸಿದ್ದಾಳೆ?
ಶಿವಭಕ್ತರಿಗೆ ಆಸೆ ಆಮಿಷಗಳು ಇರಬಾರದು . ಪರರ ಧನ ಪರಿಶ್ರಮವಿಲ್ಲದೆ ದೊರಕುವ ಯಾವುದೇ ಸೌಲಭ್ಯ ಅಥವಾ ವಸ್ತುಗಳಿಗೆ ಆಸೆ ಪಡಬಾರದು . ನಮ್ಮ ದಾರಿಯಲ್ಲಿ ಚಿನ್ನವೇ ಬಿದ್ದಿದ್ದರೂ ಅದನ್ನು ಕೈ ಮುಟ್ಟಿ ಎತ್ತಿಕೊಳ್ಳಬಾರದು, ಹಾಗಿಲ್ಲದಿದ್ದರೆ ಶಿವನು ನಮ್ಮನ್ನು ಮೆಚ್ಚುವುದಿಲ್ಲ, ಅದರ ಬದಲು ನಮಗೆ ಕಷ್ಟ ಎನ್ನುವ ನರಕದಲ್ಲಿ ಅದ್ದಲಿ ಈ ಆಸೆಗಳಿಂದ ಮುಕ್ತರಾಗಬೇಕಾದರೆ ನಾವು ಶಿವನ ಪೂಜಿಸಬೇಕು, ಧ್ಯಾನಿಸಬೇಕು ಎಂದು ಸತ್ಯಕ್ಕ ತನ್ನ ವಚನದಲ್ಲಿ ಹೇಳಿದ್ದಾಳೆ.

ಈ ) ಕೆಳಗಿನ ಪದ್ಯದ ವಾಕ್ಯಗಳನ್ನು ಪೂರ್ಣಗೊಳಿಸಿ :
1. ಅರೆದು ನೋಡುವ ಚಂದನದಂತೆ.
2. ಕುತರ್ಕಶಾಸ್ತ್ರದಿಂದ ಯಮಗತಿಗರ ಕೊಡೆ.
3. ನುಡಿಯಲುಬಾರದು ಕೆಟ್ಟ ನುಡಿಗಳ.
4. ಇಂತಲ್ಲದೆ ನಾನು ಆಳಿ ಮಾನವ ಮಾಡಿ.

ಉ ) ಮೊದಲೆರಡು ಪದಗಳಿಗಿರುವ ಪದದಂತೆ ಸಂಬಂಧಿಸಿದ ಪದ ಬರೆಯಿರಿ,
1. ಅರೆದು ನೋಡುವ : ಚಂದನದಂತೆ : : ಅರಿದು ನೋಡುವ : ಕಬ್ಬಿನ ಕೋಲಿನಂತೆ.
2. ನುಡಿಯಲು ಬಾರದು : ಕೆಟ್ಟ ನುಡಿಗಳ : : ನಡೆಯಲುಬಾರದು : ಕೆಟ್ಟ ನಡೆಗಳ.
3. ಬಟ್ಟೆ : ಮಾರ್ಗ : ಮಿಸುನಿ : ಚಿನ್ನ.
4. ಮುಕ್ತಾಯಕ್ಕ : ಅಜಗಣ್ಣ ತಂದೆ : : ಸತ್ಯಕ್ಕ : ಶಂಭುಕೇಶ್ವರಾ.
5. ಭಿಕ್ಷದಲ್ಲಿಪ್ಪೆನಾಗಿ : ಭಿಕ್ಷದಲ್ಲಿ + ಇಪ್ಪೆನಾಗಿ : : ಅಹುದೆಂದಡೆ : ಅಹುದು + ಎಂದಡೆ.
ಕೃತಿಕಾರರ ಪರಿಚಯ.
ಡಿ ಎಸ್ ಕರ್ಕಿಯವರು ರಚಿಸಿದ ಕವನ ಇದನ್ನು ಇವರ ‘ ನಕ್ಷತ್ರಗಾನ ‘ ಎಂಬ ಕವನ ಸಂಕಲನದಿಂದ ಆರಿಸಲಾಗಿದೆ. ಎಸ್ ಕರ್ಕಿಯವರು ಭಾವತೀರ್ಥ , ತನನತೋಂ ಗೀತಗೌರವ , ಕರಿಕೆ ಕಣಗಿಲು , ನಮನ , ಬಣ್ಣದಚೆಂಡು ಎಂಬ ಕವನ ಸಂಕಲನಗಳನ್ನು ಬರೆದಿದ್ದಾರೆ . ಗಡಿನಾಡನಲ್ಲಿದ್ದ ಇವರು ಅವರೆಲ್ಲರ ಪ್ರತಿನಿಧಿಯಾಗಿ ಏಕೀಕರಣದ ಕನಸ ಕಂಡವರು ಅದಕ್ಕಾಗಿಯೇ ಅನೇಕ ಕವನಗಳನ್ನು ಕಟ್ಟಿ ಜನರ ಮನದಲ್ಲಿ ಕೆಚ್ಚನ್ನು ಮೂಡಿಸಿದರು.

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಕನ್ನಡದ ಕಂಪನ್ನು ಸೂಸುವಲ್ಲಿ ಏನನ್ನು ಚಾಚುತ್ತೇವೆ?
ಕನ್ನಡದ ಕಂಪನ್ನು ಸೂಸುವಲ್ಲಿ ನಮ್ಮ ದೇಹವನ್ನು ಚಾಚುತ್ತೇವೆ.

2. ಕಲ್ಪನೆಯ ಕಣ್ಣು ಹರಿವ ತನಕ ಯಾವ ದೀಪಗಳನ್ನು ಹಚ್ಚುತ್ತೇವೆ?
ಕಲ್ಪನೆಯ ಕಣ್ಣು ಹರಿವ ತನಕ ಸಾಲು ದೀಪಗಳನ್ನು ಹಚ್ಚುತ್ತೇವೆ.

3. ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲರೂ ಏನು ಮಾಡಬೇಕು?
ನಮ್ಮವರು ಗಳಿಸಿದ ಹೆಸರುಳಿಸಲು ಕನ್ನಡಿಗರೆಲ್ಲರೂ ಒಂದುಗೂಡಿ ಕನ್ನಡ ಮಾತೆಯನ್ನು ಪೂಜಿಸಬೇಕು.

4. ನಮ್ಮುಸಿರು ತೀಡುವ ನಾಡಿನಲ್ಲಿ ಯಾವ ಗೀತೆ ಹಾಡುತ್ತೇವೆ?
ನಮ್ಮುಸಿರು ತೀಡುವ ನಾಡಿನಲ್ಲಿ ಮಂಗಳದ ಗೀತೆಯನ್ನು ಹಾಡುತ್ತೇವೆ.

5. ಕರುಳೆಂಬ ಕುಡಿಗೆ ಏನನ್ನು ಮುಡಿಸುತ್ತೇವೆ?
ಕರುಳೆಂಬ ಕುಡಿಗೆ ಮಿಂಚನ್ನು ಮುಡಿಸುತ್ತೇವೆ.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ.
1 . ಕನ್ನಡಿಗರು ಯಾವ ದೀಪವನ್ನು ಹಚ್ಚುತ್ತಾರೆ.
ಕನ್ನಡಿಗರು ಕನ್ನಡದ ಶ್ರೀಮಂತಿಕೆಯನ್ನು ತೋರುವ ಒಲವನ್ನು ಬೆಳಗುವ ದೀಪವನ್ನು ಹಚ್ಚುತ್ತಾರೆ.

2 . ಮರೆವನ್ನು ಮರೆತು , ಒಲವನ್ನು ಎರೆದು , ಹೇಗೆ ಕನ್ನಡದ ದೀಪ ಹಚ್ಚುತ್ತಾರೆ?
ಕನ್ನಡಿಗರೆಲ್ಲರೂ ಈ ನಾಡಿಗಾಗಿ ಶ್ರಮಿಸುತ್ತ ಕಹಿಯನ್ನು ಮರೆತು ವಿಶಾಲವಾದ ಮನಸ್ಸಿನಿಂದ ನಾಡಿಗಾಗಿ ಒಲವನ್ನು ಎರೆದು ಕನ್ನಡದ ದೀಪವನ್ನು ಹಚ್ಚಿ ಅದರ ಕಾಂತಿಯನ್ನು ಎಲ್ಲೆಡೆ ಬೆಳಗುತ್ತಾರೆ.

3. ಕನ್ನಡ ಮಾತೆಯನ್ನು ಹೇಗೆ ಆದರಿಸುತ್ತಾರೆ ?
ಕನ್ನಡ ಮಾತೆಯನ್ನು ಕನ್ನಡಿಗರು ಗಳಿಸಿದ ಹೆಸರನ್ನು ಉಳಿಸಲು ಕನ್ನಡಿಗರೆಲ್ಲರೂ ನಾವೆಲ್ಲರೂ ಒಂದುಗೂಡಿ ಕನ್ನಡ ಮಾತೆಯನ್ನು ಪೂಜಿಸುತ್ತ ಕೆಟ್ಟದ್ದನ್ನು ನಾಶಮಾಡುವ ಸಂಕಲ್ಪದಿಂದ ಮಂಗಳಗೀತೆಯನ್ನು ಹಾಡುತ್ತಾ ಕನ್ನಡದ ಕಾಂತಿಯನ್ನು ಬೆಳಗುವುದರ ಮೂಲಕ ಕನ್ನಡ ಮಾತೆಯನ್ನು ಆದರಿಸುತ್ತಾರೆ.

ಇ . ಕೆಳಗಿನ ಸಾಲುಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1. ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು .
2. ಹಚ್ಚಿರುವ ದೀಪದಲಿ ತಾಯ ರೂಪ ಅಚ್ಚಳಿಯದಂತೆ ತೋರೇವು.
3. ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೆವು.
4. ಕರುಳೆಂಬ ಕುಡಿಗೆ ಇಂಚನ್ನೇ ಮುಡಿಸಿ ಹಚ್ಚೇವು ಕನ್ನಡ ದೀಪ.

ಈ . ಹಚ್ಚೇವು ಎಂಬ ಪದಕ್ಕೆ ಸರಿಹೊಂದುವ, ಪದ್ಯದಲ್ಲಿ ಇರುವ ಪ್ರಾಸಪದಗಳನ್ನು ಬರೆಯಿರಿ.
ಹಚ್ಚೇವು
ಕೊಚ್ಚೇವು =ಚಾಚೇವು=ಒಂದುಗೂಡೇವು.
ಮರೆತೇವು =ತೆರೆದೇವು =ಎರದೇವು.
ಬೀರೇವು=ತೋರೇವು=ತೂರೇವು.
ಮಾಡೇವು =ಹಾಡೇವು =ತೊರೆದೇವು.
ಕಡೆದೇವು=ಪಡೆದೇವು=ಕೊಡೇವು.

ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಪಟ್ಟಿ ಮಾಡಿ.
ಜಡಿಯೆ = ಬಡಿಯ.
ಕ್ಷಮಿಸುಯೆಂದು = ತಂದೆಗೆಂದು.
ಬದುಕಿದ = ತೊಡಗಿದ.
ಕೈಗೆ =ಕಾಲ್ಗೆ.
ಕೃತಿಕಾರರ ಪರಿಚಯ:
ಕವಿ : ಮುದೇನೂರು ಸಂಗಣ್ಣ.
ಕಾಲ : 17 ಮಾರ್ಚ್ 1927.
ಸ್ಥಳ : ಬಳ್ಳಾರಿ ಜಿಲ್ಲೆಗೆ ಸೇರಿದ ಹರಪ್ಪನಹಳ್ಳಿ ತಾಲ್ಲೂಕಿನ ಚಿಗಟೇರಿಯಲ್ಲಿ ಜನಿಸಿದರು.
ಬಾಲ್ಯದಿಂದಲೂ ಇವರಿಗೆ ಸಂಗೀತ ನಾಟಕದಲ್ಲಿ ಬಹಳ ಆಸಕ್ತಿ. ಹೀಗಾಗಿ ಇವರಿಗೆ ಶಿವರಾಮಕಾರಂತ, ಕೆ.ವಿ. ಸುಬ್ಬಣ್ಣನವರ ಜೊತೆ ಗೆಳೆತನವಿತ್ತು. ವ್ಯವಸಾಯ ಕೃಷಿಕರಾಗಿದ್ದರೂ ಸಹ ಸಾಹಿತ್ಯ ಕೃಷಿಮಾಡಿದ್ದಾರೆ.
ಕೃತಿಗಳು : ನವಿಲು ಕುಣಿದಾವ, ಬಾಳಬಿಕ್ಷುಕ, ಚಿತ್ರಪಟ ರಾಮಾಯಣ ಮೊದಲಾದ ನಾಟಕಗಳು, ಜನಪದ ಮುಕ್ತಕಗಳು, ಆ ಅಜ್ಜ ಈ ಮೊಮ್ಮಗ, ಗೊಂದಲಿಗ ದೇವೇಂದ್ರಪ್ಪನ ಹಾಡುಗಳು, ಚಿಗಟೇರಿ ಪದಕೋಶ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಪ್ರಶಸ್ತಿಗಳು : ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರಕಿವೆ.

ಪದಗಳ ಅರ್ಥ :
ಹಂಗು - ಋಣ, ಆಶ್ರಯ:
ಪಂಜರ - ಪಕ್ಷಿಗಳ ಬೋನು:
ಬಾನಾಡಿ ಪಕ್ಷಿ: ವಿಹರಿಸು ಸಂಚರಿಸು:
ಹರ್ಷ ಹಿಗ್ಗು, ಸಂತೋಷ:
ಸೊಕ್ಕಿ - ಗರ್ವ, ಜಂಭ:
ಕೊಳೆಗೊಂಡು ಮಾಲಿನ್ಯಗೊಂಡು, ತೃಪ್ತಿಗೊಂಡು:
ತಣಿಸು ತಂಪಾಗಿಸು, ತೃಪ್ತಿಗೊಳಿಸು;
ವಸನ - ವಸ್ತ್ರ, ಬಟ್ಟೆ;
ಹದ್ದು - ಎಲ್ಲೆ, ಗಡಿ;
ಕನಲು - ಕೋಪಗೊಳ್ಳು. ಸಿಟ್ಟಾಗು:
ಕೆಂಗಿಡಿ - ಉರಿಬೆಂಕಿ. ಕೆಂಪಾದ ಬೆಂಕಿ;
ಸದರೇರು - ಅಂಗಳ ಸೇರು, ಬಂದಮುಕ್ತವಾಗು;
ಸೆರೆ - ಬಂಧನ;
ಅಡಗು- ಕಾಣದಂತಾಗು:
ಕಾರಿರುಳು - ದಟ್ಟವಾದ ಕತ್ತಲೆ;
ಪಣ - ಒತ್ತೆ ಇಡು:
ತೊಲಗು - ಬಿಟ್ಟುಹೋಗು. ಹೊರಟುಹೋಗು;
ಗುಡಿ - ಬಾವುಟ, ಕೇತನ;
ಒಕ್ಕೊರಲು - ಒಗ್ಗಟ್ಟು, ಒಂದೇ ಧ್ವನಿಯಾಗು.

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಪಂಜರದ ಹಕ್ಕಿ ಯಾವುದರ ಸಂಕೇತವಾಗಿದೆ ?
ಪಂಜರದ ಹಕ್ಕಿ ಭಾರತೀಯರ ( ಬಂಧನದಲ್ಲಿರುವವರ ) ಸಂಕೇತವಾಗಿದೆ.

2. ಹಂಗಿನ ಅರಮನೆಯಲ್ಲಿ ಹಕ್ಕಿ ಹೇಗೆ ನರಳುತ್ತಿದೆ ?
ಹಂಗಿನರಮನೆಯಲ್ಲಿ ರೆಕ್ಕೆಗಳ ಬಿಗಿ ಹಿಡಿದು ನರಳುತ್ತಿದೆ.

3. ಮೃಗರಾಜ ಏನೆಂದು ಗೊಣಗುತ್ತಿದೆ ?
ಮೃಗರಾಜ ಇನ್ನು ಈ ಬಂಧನ ಸಾಕು ಎಂದು ಗೊಣಗುತ್ತಿದೆ.

4. ಯಾವುದು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ ?
ಕಾರಿರುಳು ತನ್ನ ಸೆರೆಯೊಳಗೆ ರವಿಕಿರಣಗಳನ್ನು ಅಡಗಿಸಿಟ್ಟುಕೊಂಡಿದೆ.

5. ನಮ್ಮ ಗುಡಿಯು ( ಬಾವುಟ ) ಎಷ್ಟು ಬಣ್ಣಗಳನ್ನು ಹೊಂದಿದೆ ?
ನಮ್ಮ ಬಾವುಟವು ಮೂರು ಬಣ್ಣಗಳನ್ನು ಹೊಂದಿದೆ.

ಆ. ಕೊಟ್ಟಿರುವ ಎರಡು – ಮೂರು ವಾಕ್ಯಗಳಲ್ಲಿಉತ್ತರಿಸಿ.
1. ಪಂಜರದಲ್ಲಿ ನರಳುತ್ತಿರುವ ಹಕ್ಕಿ ಹರ್ಷದಲ್ಲಿ ವಿಹರಿಸಲು ಏನು ಮಾಡಬೇಕು ?
ಪಂಜರದಲ್ಲಿ ನರಳುತ್ತಿರುವ ಹಕ್ಕಿ ಹರ್ಷದಲ್ಲಿ ವಿಹರಿಸಲು ಪಂಜರದ ಬಾಗಿಲನ್ನು ಮುರಿದು ಹೆಣೆದ ಬಂಧನದಿಂದ ಮುಕ್ತಿ ಹೊಂದುತ್ತದೆ . ಬಾನಾಡಿಯಾಗಿ ಆಕಾಶದಲ್ಲಿ ವಿಹರಿಸುತ್ತಾ ಖುಷಿಯಾಗಿರಲಿ ಎಂದು ಕವಿ ಹಾರೈಸುತ್ತಾರೆ.

2. ತಿಳಿನೀರ ಮಳೆ ಏಕೆ ಸುರಿಯಬೇಕು ?
ತಿಳಿನೀರ ಮಳೆ ಕಾರಿರುಳಿನಿಂದ ಜಡಗೊಂಡ ಮೈ ಹಾಗೂ ಮನಸ್ಸುಗಳು ತನ್ನ ಮಲಿನತೆಯನ್ನು ಕಳೆದುಕೊಳ್ಳಲು ಸುರಿಯಬೇಕು . ಈ ರೀತಿ ಸುರಿದ ಮಳೆಯಿಂದ ಕೊಳಕು ಮಾಯವಾಗುತ್ತದೆ . ಒಳ ಹೊರಗೆ ಶುಚಿಯಾಗಬೇಕಾದರೆ ತಿಳಿ ನೀರ ಮಳೆ ಸುರಿಯಬೇಕಾಗುತ್ತದೆ.

3. ಕಡಲುಗಳ ರಾಣಿಗೆ ಇನ್ನು ಉಳಿಗಾಲವಿಲ್ಲವೇಕೆ ?
ಶತ ಶತಮಾನಗಳಿಂದ ಮೆರೆದ ಕಡಲುಗಳ ರಾಣಿಗೆ ಇನ್ನು ಮುಂದೆ ಉಳಿಗಾಲವಿಲ್ಲ ಏಕೆಂದರೆ ಭಾರತೀಯರಲ್ಲಿ ಇಂದು ಐಕ್ಯತೆಯಿದೆ . ಅವರೆಲ್ಲ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಿಡಿಲ ಹೋರಾಟ ಮಾಡುತ್ತಿದ್ದಾರೆ . ಅದೂ ತಾಯಿ ಭಾರತೀಯ ಮೇಲೆ ಆಣೆ ಹಾಕಿ & ಬ್ರಿಟಿಷರನ್ನು ನಮ್ಮ ದೇಶದಿಂದ ತೊಲಗಿಸಿ ಧೈಯದಿಂದ ಹೋರಾಡುತ್ತಿರುವುದರಿಂದ ಕಡಲ ರಾಣಿಗೆ ಉಳಿಗಾಲವಿಲ್ಲ.

4. ಕವಿ ಒಕ್ಕೊರಲ ಹಾಡನ್ನು ಹೇಗೆ ಹಾಡಬೇಕೆಂದು ಕವಿ ಬಯಸುತ್ತಾನೆ?
ಜಾತಿ ಮತಗಳ ಬೇಧವಿಲ್ಲದೆ ನಾವೆಲ್ಲಾ ಒಂದೇ ಎಂಬ ಮನೋಭಾವದಿಂದ ಮನುಜಮತವನ್ನು ಎತ್ತಿ ಹಿಡಿದಿದ್ದೇವೆ . ನಮ್ಮ ಮೂರು ಬಣ್ಣದ ಬಾವುಟವನ್ನು ಹಾರಿಸುತ್ತಾ ಸರ್ವರಿಗೂ ನಾವು ಸಮ ಎಂದು ಮನದುಂಬಿ ದನಿಯೆತ್ತಿ ಒಕ್ಕೊರಲ ಹಾಡನ್ನು ಹಾಡಬೇಕು ಎಂದು ಕವಿ ಬಯಸುತ್ತಾರೆ.

ಇ ) ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿರಿ.
1. ಚಡಪಡಿಸುತಿದೆ ಮುನ್ನಡೆವ ಹಾದಿ ಹುಡುಕಿ.
2. ಸೆರೆಯಿಂದ ನಾ ಜಿಗಿದು ಸದರೇರಬೇಕು.
3. ಇನ್ನೆಲ್ಲ ನೀನೇಳು ಕಡಲುಗಳ ರಾಣಿ.
4. ಹಾಡುವೆವು ಬಿಡುಗಡೆಯ ಒಕ್ಕೊರಲ ಹಾಡು.
ಕೃತಿಕಾರರ ಪರಿಚಯ.
ಮುಪ್ಪಿನ ಷಡಕ್ಷರಿ : ಇವರು ಸಾ.ಶ. ೧೫೦೦ರ ಸುಮಾರಿಗೆ ಜೀವಿಸಿದ್ದರು. ಕಾವೇರಿ ತೀರದ ಶಂಭುಲಿಂಗ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ್ದಾಗಿ ಹೇಳಲಾಗುತ್ತಿದೆ. ಇವರು ಕೊಳ್ಳೆಗಾಲದವರು. ಸ್ವರವಚನಗಳ ಸಂಗ್ರಹವಾದ ಸುಭೋದ ಸಾರ ಇವರ ಕೃತಿ. ಇವರು ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ.

ಪದಗಳ ಅರ್ಥ :
ತಿರುಕ - ಭಿಕ್ಷುಕ;
ಮುರುಕು - ಪಾಳುಬಿದ್ದ, ಮುರಿದು ಬಿದ್ದ;
ಪುರ - ಪಟ್ಟಣ, ನಗರ:
ಕರಿ - ಆನೆ;
ಕುಸುಮಮಾಲೆ - ಹೂವಿನಮಾಲೆ;
ಧರ್ಮಶಾಲೆ - ಅನ್ನಛತ್ರ;
ತೊಡರಿಸು - ಧರಿಸು, ಹಾಕು;
ಪಟ್ಟ - ಸಿಂಹಾಸನ:
ಒಡೆಯ - ರಾಜ, ದೊರೆ;
ಮಾಳಪೆವು - ಮಾಡುವೆವು:
ಒಡನೆ - ತಕ್ಷಣ:
ಪೊಡವಿ - ರಾಜ್ಯ:
ಆಣ್ಣ - ಒಡೆಯ. ರಾಜ;
ಹಿಗ್ಗು - ಸಂತೋಷಪಡು, ಹರ್ಷಿಸು:
ನೃಪ-ರಾಜ, ದೊರೆ :
ಭಟ್ಟಿನಿಗಳು - ಹೆಂಡತಿಯರು. ಪಟ್ಟಮಹಿಷಿಯಲ್ಲದ ರಾಣಿಯರು;
ನಲ್ಲ - ಪ್ರಿಯತಮ:
ಓಲಗ - ರಾಜಸಭೆ:
ಲೀಲೆ - ವಿನೋದ, ವಿಲಾಸ:
ಚಾತುರಂಗ ಅಂಗಗಳು - ಆನೆ, ಕುದುರೆ, ರಥ, ಕಾಲಾಳಿನ ಬಲ.
ಲೋಲ ಸೈನ್ಯದ ನಾಲ್ಕು ಉತ್ಸುಕ, ಸಂತೋಷ:
ಜೀಯ - ಸ್ವಾಮಿ, ಒಡೆಯ:
ಸಕಲ - ಎಲ್ಲಾ : ಸಂಭ್ರಮ ಹರ್ಷ, ಉಲ್ಲಾಸ:
ಅಖಿಲ - ಸಕಲ. ಎಲ್ಲಾ :
ರಾಯ - ರಾಜ, ಅರಸ :
ಮೆಚ್ಚು - ಒಪ್ಪು, ಮೆಚ್ಚಿಕೊಳ್ಳು:
ಅಂದದಿ - ರೀತಿಯಲ್ಲಿ:
ಧನ - ಹಣ, ಸಂಪತ್ತು:
ಮದ - ಗರ್ವ, ಅಹಂಕಾರ:
ತನುಜ - ಮಗ:
ಜನಿತ - ಹುಟ್ಟು, ಜನ್ಮತಾಳು :
ಆನಿತರೊಳಗೆ - ಅಷ್ಟರಲ್ಲಿ:
ದಂಡು -ಸೈನ್ಯ:
ಮುತ್ತು - ಅವರಿಸು. ಸುತ್ತುವರಿ:

ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ತಿರುಕನು ಎಲ್ಲಿ ಕನಸನ್ನು ಕಂಡನು?
ತಿರುಕನು ಮುರುಕು ಧರ್ಮಶಾಲೆಯಲ್ಲಿ ಒರಗಿರುವಾಗ ( ಮಲಗಿರುವಾಗ ) ಬಂದು ಕನಸನ್ನು ಕಂಡನು.

2. ಆನೆಯು ಯಾರ ಕೊರಳಿಗೆ ಮಾಲೆಯನ್ನ ಹಾಕಿತು?
ಆನೆಯು ತಿರುಕನ ಕೊರಳಿಗೆ ಮಾಲೆಯನ್ನು ಹಾಕಿತು.

3. ತಿರುಕನಿಗೆ ಪಟ್ಟವನ್ನು ಕಟ್ಟಿದವರು ಯಾರು?
ತಿರುಕನಿಗೆ ಅರಮನೆಯ ಅಧಿಕಾರಗಳು ಪಟ್ಟವನ್ನು ಕಟ್ಟಿದರು.

4. ರಾಜ ಲೋಲನಾಗಿ ಮಂತ್ರಿಗೆ ಏನೆಂದು ನುಡಿದನು?
ರಾಜ ಲೋಲನಾಗಿ ಸಂತೋಷದಿಂದ ಮಂತ್ರಿಗೆ ತನ್ನ ಮಕ್ಕಳಿಗೆ ಮದುವೆ ಮಾಡಲು ಸಂಬಂಧವನ್ನು ನೋಡಲು ಹೇಳಿದನು.

5. ತಿರುಕನ ಕನಸು ಈ ಪದ್ಯವನ್ನು ಬರೆದ ಕವಿ ಯಾರು?
ತಿರುಕನ ಕನಸು ಪದ್ಯವನ್ನು ಮುಪ್ಪಿನ ಷಡಕ್ಷರಿಯವರು ಬರೆದಿದ್ದಾರೆ.

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು – ಮುಾರು ವಾಕ್ಯಗಳಲ್ಲಿ ಉತ್ತರಿಸಿ.
1. ಕರಿಯ ಕೈಗೆ ಕುಸುಮ ಮಾಲೆಯನ್ನು ಕೊಡಲು ಕಾರಣವೇನು?
ಆ ಪಟ್ಟಣದ ರಾಜನು ಸತ್ತಾಗ ಅವನಿಗೆ ಮಕ್ಕಳಿಲ್ಲದ್ದರಿಂದಕ ಅರಮನೆಯವರು ಯೋಚಿಸಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಪಟ್ಟದಾನೆಯ ಸೊಂಡಿಲಿಗೆ ಹಾರವನ್ನು ಕೊಟ್ಟು, ಅದು ಯಾರ ಕೊರಳಿಗೆ ಹಾಕುವುದೋ ಅವರೇ ರಾಜನಾಗಬೇಕೆಂದು ಆದ್ದರಿಂದ ಕರಿಯ (ಆನೆಯ) ಗೆ ಕುಸುಮ ಮಾಲೆಯನ್ನು ಕೊಡುತ್ತಾರೆ.

2 . ತಿರುಕ ಪೊಡವಿಯಾಣ್ಮನಾದುದು ಹೇಗೆ?
ಪಟ್ಟದಾನೆಯು ತನ್ನ ಸೊಂಡಿಲಿಗೆ ತೊಡರಿಸಿದ ಮಾಲೆಯನ್ನು ತೆಗೆದುಕೊಂಡು ಎಲ್ಲಾ ಕಡೆಯೂ ಸುತ್ತಿ, ಕೊನೆಗೆ ತಿರುಕನ ಕೊರಳಿಗೆ ಹಾಕುತ್ತದೆ. ನಿರ್ಣಯದಂತೆ ಅರಮನೆಯವರು ತಿರುಕನನ್ನು ರಾಜ್ಯದ ರಾಜನನ್ನಾಗಿ ಮಾಡುತ್ತಾರೆ. ಹೀಗೆ ತಿರುಕನು ಪೊಡವಿಯಾಣ್ಮನಾದನು.

3. ಕನಸು ಕಾಣುತ್ತಿದ್ದ ತಿರುಕನು ಹೆದರಿ ಏಕೆ ಕಣ್ಣು ತೆರೆದನು?
ಸುಖದ ಸುಪ್ಪತ್ತಿಗೆಯಲ್ಲಿರುವಾಗ ಎಂದರೆ ಎಲ್ಲಾ ರೀತಿಯ ಸುಖ ಸಂತೋಷವನ್ನು ಹೊಂದಿರುತ್ತಾನೆ. ರಾಣಿಯರು, ಜೊತೆಗಾರರಾದ ಮದುಮಕ್ಕಳು ಹೀಗೆ ಸಂತೋಷ ಸಂಭ್ರಮದಲ್ಲಿರುವಾಗಲೇ ಶತ್ರು ಸೈನ್ಯದವರು ಸೈನ್ಯದೊಡನೆ ಬಂದು ಆಕ್ರಮಣ ಮಾಡುತ್ತಾರೆ. ಅದನ್ನು ಕಂಡು ಹೆದರಿ ತಿರುಕನು ಕಣ್ಣು ತೆರೆಯುತ್ತಾನೆ.

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿ .
1 . ತಿರುಕನು ರಾಜನಾದದ್ದು ಹೇಗೆ ?
ತಿರುಕನು ಎಂದಿನಂತೆ ಹಾಳುಬಿದ್ದ , ಮುರಿದ ಬಿದ್ದ ಧರ್ಮಶಾಲೆಯ ಗೋಡೆಯ ಬದಿಗೆ ಮಲಗಿರುತ್ತಾನೆ ಆ ಊರಿನ ರಾಜ ಸತ್ತು ಹೋಗಿ ಅವನಿಗೆ ಮಕ್ಕಳಿಲ್ಲದಿರುವುದರಿಂದ ಪಟ್ಟದಾನೆಯ ಸೊಂಡಿಲಿಗೆ ಕುಸುಮಮಾಲೆಯನ್ನು ಕೊಟ್ಟು ಕಳುಹಿಸುತ್ತಾರೆ . ಅದು ಇವನ ಕೊರಳಿಗೆ ಕುಸುಮಮಾಲೆಯನ್ನು ಹಾಕುತ್ತದೆ . ಅದರ ಪ್ರಕಾರ ಅವನಿಗೆ ರಾಜ್ಯ ಪಟ್ಟವನ್ನು ಕಟ್ಟಿ ರಾಜನನ್ನಾಗಿ ಮಾಡುತ್ತಾರೆ . ಹೀಗೆ ತಿರುಕನು ರಾಜನಾಗುತ್ತಾನೆ .

2 . ತಿರುಕನು ಕನಸಿನಲ್ಲಿ ರಾಜ್ಯವನ್ನು ಆಳಿದ ರೀತಿಯನ್ನು ವಿವರಿಸಿ .
ತಿರುಕನು ಕನಸಿನಲ್ಲಿಯೇ ತಾನು ರಾಜನಾದುದಕ್ಕೆ ಹೆಮ್ಮೆಪಟ್ಟುಕೊಳ್ಳುತ್ತಾನೆ . ರಾಜನಾದ ಮೇಲೆ ಇತರ ರಾಜರು ಇವನಿಗೆ ತಮ್ಮ ಕನ್ನೆಯರನ್ನು ಕೊಟ್ಟು ಮದುವೆ ಮಾಡುತ್ತಾರೆ . ರಾಜ್ಯವನ್ನು ಚೆನ್ನಾಗಿ ಆಳುತ್ತಾ , ತನ್ನ ಪತ್ನಿಯರೊಂದಿಗೆ ಸುಖವಾಗಿರುತ್ತಾನೆ . ರಾಜ್ಯಭಾರ ಮಾಡುತ್ತಾ ಕುಳಿತುಕೊಂಡಿರುವಾಗ ಇವನ ಮಕ್ಕಳು ಬಂದು ತೊಡೆಯೇರಿ ಕುಳಿತು ಆಟವಾಡುತ್ತಿದ್ದರು .ಈ ರೀತಿ ಚೆನ್ನಾಗಿ ರಾಜ್ಯವನ್ನಾಳುತ್ತಿದ್ದನು.

ಈ ) ಈ ಪದ್ಯಭಾಗವನ್ನು ಪೂರ್ಣಗೊಳಿಸಿ ,
ನಡೆದು ಯಾರ ಕೊರಳಿನಲ್ಲಿ.
ತೊಡರಿಸುವುದೊ ಅವರ ಪಟ್ಟ
ಕೊಡೆಯರನು ಮಾಳ್ಪೆವೆಂದು ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ
ತೊಡರಿಸಲ್ಕೆ ಕಂಡು ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು.

ಉ . ಮಾದರಿಯಂತೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆಯಿರಿ.
ಮಾದರಿ : ತಿರುಕನೋರ್ವನೂರಮುಂದೆ = ತಿರುಕನು + ಒರ್ವನು + ಊರ + ಮುಂದೆ
1. ಒರಗಿರಲೊಂದು = ಒರಗಿ + ಇರುತ್ತಲಿ + ಒಂದು.
2. ವರಕುಮಾರರಿಲ್ಲದಿರಲು = ವರ ಕುಮಾರರು + ಇಲ್ಲದೆ + ಇರಲು.
3. ಪೊಡವಿಯಾಣ್ಮನಾದನೆಂದು = ಪೊಡವಿಯ + ಅಣ್ಯನು +ಆದೆನು + ಎಂದು.
4. ನಿಮ್ಮಸುಖದೊಳಿರಲವಂಗೆ = ನಿಮ್ಮ ಸುಖದೊಳ್ +ಇರಲು+ ಅವಂಗೆ.
ಕೃತಿಕಾರರ ಪರಿಚಯ:
ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ "ಗದುಗಿನ ನಾರಣಪ್ಪ" ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಕರೆಯಲಾಗುತ್ತದೆ. ಕವಿಯ ಕಾವ್ಯನಾಮ ಕುಮಾರವ್ಯಾಸ, ಕಾಲ ಸುಮಾರು ಸಾ.ಶ. ೧೪೩೦ಎಂದು ನಿಗದಿಪಡಿಸಲಾಗಿದೆ.

ಕುಮಾರವ್ಯಾಸ ಕವಿಯ ಹುಟ್ಟೂರು ಈಗಿನ ಗದಗ ಜಿಲ್ಲೆಯಲ್ಲಿರುವ ಕೋಳಿವಾಡ ಗ್ರಾಮ. ಕಾವ್ಯರಚನೆಯನ್ನು ಮಾಡಿದ್ದು ಗದುಗಿನ ವೀರನಾರಾಯಣನ ಗುಡಿಯಲ್ಲಿ, ಈಗಲೂ ಸಹ ಆ ಗುಡಿಯಲ್ಲಿರುವ ಒಂದು ಕಂಬಕ್ಕೆ ಕುಮಾರವ್ಯಾಸನ ಕಂಬ ಎಂದು ಕರೆಯಲಾಗುತ್ತದೆ. ಕುಮಾರವ್ಯಾಸ ಈ ಕಂಬದೆ ಅಡಿಯಲ್ಲೇ ಈ ಕಾವ್ಯವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಇದೆ.

ಕುಮಾರವ್ಯಾಸನ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಕರೆಯಲಾಗುತ್ತದೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ ಹತ್ತು ಪರ್ವಗಳನ್ನು ಒಳಗೊಂಡಿದೆ. ಸಂಪೂರ್ಣ ಕಾವ್ಯ ಭಾಮಿನಿ ಷಟ್ಟದಿ ಛಂದಸ್ಸಿನಲ್ಲಿ ರಚಿತವಾಗಿದೆ. ಕವಿಯ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ರೂಪಕಗಳಲ್ಲಿ, ಇದೇ ಕಾರಣಕ್ಕಾಗಿ ಕುಮಾರವ್ಯಾಸ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಖ್ಯಾತಿ ಪಡೆದಿದ್ದಾರೆ. ಕುಮಾರವ್ಯಾಸ ಈ ಪ್ರತಿಭೆಗೆ ಕನ್ನಡಿಯಾಗಿ ರಾಷ್ಟ್ರಕವಿ ಕುವೆಂಪು ಅವರ ಈ ಸಾಲುಗಳನ್ನು ನೋಡಿ.
ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು ಭಾರತ ಕಣ್ಣಲಿ ಕುಣಿಯುವುದು ಮೈಯ್ಯಲಿ ಮಿಂಚಿನ ಹೊಳೆ ತುಳುಕಾಡುವುದು.

ಪದಗಳ ಅರ್ಥ :
ಜನಪ-ರಾಜ (ಇಲ್ಲಿ ಧರ್ಮರಾಯ);
ಅಂಫ್ರಿ-ಪಾದ;
ಮಣಿ-ನಮಸ್ಕರಿಸು;
ಬೆಸಸು-ಅಪ್ಪಣೆ ಮಾಡು;
ಬೊಪ್ಪ-ತಂದೆ.(ಇಲ್ಲಿ ದೊಡ್ಡಪ್ಪ):
ಆಹವ-ಯುದ್ಧ;
ಭೇದನ-ಮುರಿಯುವುದು;
ಅನುವರ-ಯುದ್ಧ;
ಕೃತಾಂತ-ಯಮ;
ಅಹಿತರು-ಹಿತವಲ್ಲದವರು. ವೈರಿಗಳು;
ಕಾಳಗ-ಯುದ್ಧ;
ಹಸುಳೆ-ಮಗು:
ಆದಟು-ಪರಾಕ್ರಮ,ಶೌರ್ಯ;
ಘನ-ದೊಡ್ಡ:
ಶಿಶು-ಮಗು;
ಕಾದುವರು-ಯುದ್ಧ ಮಾಡುವವರು;
ಅಸಮಬಲ-ಸಮಾನವಲ್ಲದ ಶಕ್ತಿ ಉಳ್ಳವರು:
ಎಸುಗೆ-ಬಾಣ ಪ್ರಯೋಗ:
ಸೈರಿಸು-ತಡೆದುಕೊಳ್ಳು;
ಆಪೆ-ಸಮರ್ಥನಾಗುವೆ;
ತೊರೆ-ನದಿ, ಹೊಳೆ:
ಮರೀಚಿ-ಮೃಗಜಲ (ನೀರು ಎಂಬ ಭ್ರಮೆಯ ಸೃಷ್ಟಿ):
ಹರುಗೋಲ- ನಾವೆ. ದೋಣಿ:
ಲೆಪ್ಪ-ವಿಗ್ರಹಗಳನ್ನು ಮಾಡಲು ಬಳಸುವ ಎರಕ;
ಉರಗ-ಹಾವು:
ಕೊಡನ ಮಗ- ದ್ರೋಣ;
ಕುಮಂತ್ರ-ಮೋಸದ ಆಲೋಚನೆ:
ದಂಡು-ಸೈನ್ಯ;
ಅಂಜು-ಹೆದರು:
ವೆಗ್ಗಳ- ಅತಿಯಾಗಿ;
ಅಮ್ಮೆ-ಸಾಧ್ಯವಿಲ್ಲ.
ವೈರಿ-ಶತ್ರು;
ವ್ಯೂಹ-ಸೈನ್ಯವನ್ನು ಒಂದು ವಿಶಿಷ್ಟ ರೀತಿಯಲ್ಲಿ ನಿಲ್ಲಿಸುವ ಕ್ರಮ;
ಅಸೆದ-ಅಸಾಧ್ಯ.ಅತಿಶಯ:
ಇಂದುಧರ-ಚಂದ್ರವನ್ನು ಧರಿಸಿರುವವ, ಶಿವ;
ಅಡಹಾಯ್ದರೂ-ಮೇಲೆ ಬಿದ್ದು ಬಂದರೂ: ಸಮರ-ಯುದ್ಧ.
ಬೆಮರು-ಬೆವರು;
ವಹಿದ್ದಾಲೆ-ಬೆಂಕಿಯ ಜ್ವಾಲೆ:
ಹಿಮ-ಚಳಿಗಾಲ,
ಮಂಜಿನ ಹನಿ:
ಅಂಜು-ಹೆದರು:
ಮಂಜು-ಇಬ್ಬನಿ,
ಮೇಲುಗಾಳೆಗ-ಸ್ಪರ್ಧಾತ್ಮಕವಾದ ಯುದ್ಧ:
ದುಗುಡ-ಚಿಂತೆ. ಆತಂಕ;
ನಿಮ್ಮಡಿ ಆಲಿ-ನಿಮ್ಮ ಕಣ್ಣುಗಳಿಗೆ;
ಔತಣ-ವಿಶೇಷ ಭೋಜನ:
ಇಕ್ಕು-ಇಡು.ಬಡಿಸು:
ಒರಸಿ-ನಾಶಮಾಡಿ:
ರಿಪುಬಲ-ವೈರಿ ಸೈನ್ಯ. ಆರಿಬಲ-ವೈರಿ ಸೈನ್ಯ:
ಖಂಡಿಗೆಳೆ-ನಾಶಪಡಿಸು:
ಮೋಹರ-ಸೈನ್ಯ:
ನೇಮ-ಅಪ್ಪಣೆ: ಆಪವ-ಯುದ್ಧ;

ಆ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ:
1. ಧರ್ಮರಾಯನಿಗೆ ನಮಸ್ಕರಿಸಿದ ಅಭಿಮನ್ಯು ಹೇಳುವುದೇನು?
ಧರ್ಮರಾಯನಿಗೆ ನಮಸ್ಕರಿಸಿದ ಅಭಿಮನ್ಯು ತಾನು ಯುದ್ಧಕ್ಕೆ ಹೋಗಿ ಪದ್ಮವ್ಯೂಹವನ್ನು ಭೇದಿಸುವೆನು ಮತ್ತು ವೈರಿಗಳನ್ನು ಯಮನ ಮನೆಗೆ ಕಳುಹಿಸುವೆನು ಎಂದು ಹೇಳಿದನು.

2. ಅಭಿಮನ್ಯುವಿನ ಮಾತನ್ನು ಕೇಳಿ ಧರ್ಮರಾಯ ಏನು ಹೇಳುತ್ತಾನೆ?
ಧರ್ಮಜನು ಅಭಿಮನ್ಯುವನ್ನು ಬಿಗಿದಪ್ಪಿ "ನೀನಿನ್ನು ಮಗು, ಯುದ್ಧವನ್ನು ಮಾಡುತ್ತಿರುವರು ಅತ್ಯಂತ ಬಲಶಾಲಿಗಳು ಅವರ ಬಾಣ ಪ್ರಯೋಗವನ್ನು ಎದುರಿಸಲು ಸಾಧ್ಯವೇ ಎಂದು ಹೇಳಿದನು.

3. ಧರ್ಮರಾಯನ ಮಾತಿಗೆ ಅಭಿಮನ್ಯು ಕೊಡುವ ಉತ್ತರವೇನು?
ಅಭಿಮನ್ನು ಧರ್ಮಜನಿಗೆ, ಮರೀಚಿಯ ತೊಲೆಗೆ ಹರಿಗೋಲು ಇಡುವವರು ಉಂಟೇ ? ಆಟದ ಹಾವನ್ನು ಹಿಡಿಯಲು ಗರುಡ ಮಂತ್ರಬೇಕೆ ? ದ್ರೋಣನ ಇಂತಹ ಮೋಸದ ಆಲೋಚನೆಗಳಿಗೆ ನಾನು ಹೆದರುವುದಿಲ್ಲ, ಸುಮ್ಮನೆ ನನ್ನನ್ನು ಯುದ್ಧಕ್ಕೆ ಕಳುಹಿಸು ಎಂದು ಹೇಳುತ್ತಾನೆ.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು - ಮೂರು ವಾಕ್ಯದಲ್ಲಿ ಉತ್ತರಿಸಿರಿ.
1. ಲೆಪ್ಪದುರುಗನ ಹಿಡಿಯಲೇತಕೆ ಗರುಡಮಂತ್ರವು ಎಂದರೇನು?
ದೋಣನು ರಚಿಸದ ಚಕ್ರವ್ಯೂಹವನ್ನು ಭೇದಿಸಲು ತಿಳಿಯದೆ ಧರ್ಮಜನು ಚಿಂತಿತನಾಗಿದ್ದನು. ಆಗ ಅಭಿಮನ್ಯು “ತಾನು ಚಕ್ರವ್ಯೂಹವನ್ನು ಭೇದಿಸುವೆನು ನನ್ನನ್ನು ಯುದ್ಧಕ್ಕೆ ಕಳುಹಿಸು ಎಂದಾಗ ಧರ್ಮರಾಯ ನೀನಿನ್ನು ಬಾಲಕ ಎಂದು ಹೇಳಿದನು. ಆಟದ ಹಾವನ್ನು ಹಿಡಿಯಲು ಗರುಡ ಮಂತ್ರ ಏಕೆ ಬೇಕು ನಾನೊಬ್ಬ ಪರಾಕ್ರಮಿ ನನ್ನನ್ನು ಯುದ್ಧಕ್ಕೆ ಕಳುಹಿಸು ಎಂದು ಅಭಿಮನ್ನು ಹೇಳುವ ಮಾತಿನ ಅರ್ಥವು ಇದಾಗಿದೆ.

2. ನಿಮ್ಮ ಆಲಿಗಳಿಗೆ ಏನು ಇಕ್ಕುವೆ ಎಂದು ಅಭಿಮನ್ಯು ಹೇಳುತ್ತಾನೆ?
ವೈರಿಗಳೊಡನೆ ಕಾದಾಡಿ ಅವರನ್ನು ನಾಶಪಡಿಸಿ ನಿಮ್ಮ ಆಲಿಗಳಿಗೆ ಔತಣವಿಕ್ಕುವೆ ಎಂದು ಅಭಿಮನ್ನು ಧರ್ಮಜನಿಗೆ ಹೇಳುತ್ತಾನೆ.

3. ವೈರಿವ್ಯೂಹದೊಳಗೆ ಇರುವ ವೀರರು ಯಾರು?
ವೈರಿವ್ಯೂಹದೊಳಗೆ ಕೃಪಾಚಾರ್ಯರು, ಅಶ್ವತ್ಥಾಮ, ಕರ್ಣ, ಭೂರಿಶ್ರವ, ಜಯದ್ರಥ ಮುಂತಾದವರು ಇದ್ದಾರೆ.

ಇ. ಕೆಳಗಿನ ವಾಕ್ಯಗಳನ್ನು ಯಾರು , ಯಾರಿಗೆ ಹೇಳಿದರು ತಿಳಿಸಿ.
1. ಶಿಶುವು ನೀನೆಲೆ ಮಗನೆ ಕಾದುವರಸಮಬಲರು ಕಣಾ !
ಈ ಮಾತನ್ನು ಧರ್ಮರಾಯನು ಅಭಿಮನ್ಯು ಹೇಳಿದನು.

2. ಕೊಡನ ಮಗನ ಕುಮಂತ್ರದೊಡ್ಡಿನ ಕಡಿತಕಾನಂಜುವೆನೆ ?
ಈ ಮಾತನ್ನು ಅಭಿಮನ್ಯು ಧರ್ಮರಾಯನಿಗೆ ಹೇಳಿದನು.

3 . ನೀಗೆಲುವಂದವೆಂತೈ ಸಮರವಿದು ಸಾಮಾನ್ಯವಲ್ಲೆಂದ. ಈ ಮಾತನ್ನು ಧರ್ಮರಾಯನು ಅಭಿಮನ್ಯುವಿಗೆ ಹೇಳಿದನು.

4 . ಬಾಲನಿವನೆನ್ನದಿರು ದುಗುಡವ ತಾಳಲಾಗದು ಬೊಪ್ಪ
ಈ ಮಾತನ್ನು ಅಭಿಮನ್ಯುವು ಧರ್ಮರಾಯನಿಗೆ ಹೇಳಿದನು.

ಈ. ಹೊಂದಿಸಿ ಬರೆಯಿರಿ :
ಅ ಪಟ್ಟಿ ಆ ಪಟ್ಟಿ
1. ಅದಟು -ಅಪ್ಪಣೆ (6)
2. ಸೈರಿಸಲಾಪೆ -ನಾಶಮಾಡು (5)
3. ಅಮ್ಮೆನು -ಪರಾಕ್ರಮ (1)
4. ಅಸದಳ -ಸಾಧ್ಯವಾಗುವುದಿಲ್ಲ (3)
5. ಖಂಡಿಗೆಳೆ -ಅಸಾಧ್ಯ (4)
6. ನೇಮ -ತಡೆದುಕೊಳ್ಳಲು ಸಾಧ್ಯ (2)
Please enable JavaScript in your browser to complete this form.
Full Name
Scroll to Top