ಪದ್ಯಭಾಗ - 1
ಕನ್ನಡಿಗರ ತಾಯಿ
ಕೃತಿಕಾರರ ಪರಿಚಯ :
ಕವಿ : ರಾಷ್ಟ್ರ ಕವಿ ಎಂ. ಗೋವಿಂದ ಪೈ
ಸ್ಥಳ : ಕಾಸರಗೋಡು ಜಿಲ್ಲೆಯ ಮಂಜೇಶ್ವರ
ಕಾಲ : 3/03/1883 . (ತಂದೆ ಸಾಹುಕಾರ ತಿಮ್ಮಪೈ, ತಾಯಿ ದೇವಕಿಯಮ್ಮ).
ಕೃತಿಗಳು : ಅವರ ಕವನ ಸಂಕಲನಗಳು: ಗಿಳಿವಿಂಡು, ನಂದಾದೀಪ ಮೊದಲಾದವು.
ಅನುವಾದಿತ ಕೃತಿಗಳು; ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ ಗದ್ಯಾನುವಾದ, 'ಸಿಂಗಾಲ ಸುತ್ತ' ಬೌದ್ಧ ಸೂತ್ರಗಳ ಕನ್ನಡ ಅನುವಾದ. ರವೀಂದ್ರನಾಥ ಠಾಕೂರ್, ಅಹಮ್ಮದ್ ಇಟ್ಬಾಲ್, ಉಮರ್ ಖಯ್ಯಾಂನ ರುಬಾಯಿಗಳನ್ನು ಭಾಷಾಂತರಿಸಿದ್ದಾರೆ.
ಇವಲ್ಲದೆ ವೈಶಾಖ ಮತ್ತು ಗೊಲ್ಗೊಥಾ ಖಂಡಕಾವ್ಯ, ಚಿತ್ರಭಾನು, ಹೆಬ್ಬೆರಳು, ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿಗಳು: 1949 ರಲ್ಲಿ ಮದ್ರಾಸ್ ಸರ್ಕಾರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಿದೆ. ಇವರು ಕನ್ನಡದ ಮೊದಲ ರಾಷ್ಟ್ರಕವಿ ಹೆಗ್ಗಳಿಕೆಗೆ ಪಾತ್ರರಾದವರು. 1950 ರಲ್ಲಿ ಬೊಂಬಾಯಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆ ವಹಿಸಿದ್ದರು.
ಪ್ರಸ್ತುತ ಪದ್ಯವನ್ನು ಎನ್. ಎಸ್. ರಘುನಾಥ್ ಅವರು ಸಂಪಾದಿಸಿರುವ ಶತಮಾನದ ಮಕ್ಕಳ ಸಾಹಿತ್ಯ ಸಂಕಲನದಿಂದ ಆರಿಸಿ ಸಂಪಾದಿಸಿ ನಿಗದಿಪಡಿಸಿದೆ.
ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
1. ನಮ್ಮನ್ನು ಆಳುವವಳು ಯಾರು?
ನಮ್ಮನ್ನು ಆಳುವವಳು ಕನ್ನಡ ತಾಯಿ.
2. ಲತೆ ಯಾವುದನೆಲ್ಲಾ ನೀಡುತ್ತದೆ?
ಲತೆಯು ಪತ್ರ, ಪುಷ್ಪಗಳನ್ನು ನೀಡುತ್ತದೆ.
3. ಕನ್ನಡ ತಾಯಿಯ ಬಸಿರ ಹೊನ್ನಗನಿ ಯಾರು?
ಕನ್ನಡ ತಾಯಿಯ ಬಸಿರ ಹೊನ್ನಗನಿ ವಿದ್ಯಾರಣ್ಯರು.
4. ಕನ್ನಡ ತಾಯಿಯ ಹಾಡನ್ನು ಯಾವುದರಿಂದ ಉಕ್ಕಿಸಬೇಕು?
ಕನ್ನಡ ತಾಯಿಯ ಹಾಡನ್ನು ಹೊಸತು ಕಿನ್ನರಿಯಿಂದ ಉಕ್ಕಿಸಬೇಕು.
5. ಕನ್ನಡಿಗರ ಪಾಡು ಏನು?
ಕನ್ನಡಿಗರ ಪಾಡು ಮೃಗದ ಸೇಡಿನಂತಾಗಿದೆ.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಕನ್ನಡ ನಾಡಿನ ಪ್ರಕೃತಿ ವೈಶಿಷ್ಟ್ಯವೇನು?
ಕನ್ನಡ ನಾಡಿನ ಪ್ರಕೃತಿಯು ಸಂಪದ್ಭರಿತವಾಗಿದ್ದು , ವಿವಿಧ ರೀತಿಯ ಹಣ್ಣು - ಕಾಯಿಗಳನ್ನು ನೀಡುವ ಮರಗಳು, ಪತ್ರ- ಪುಷ್ಪಗಳನ್ನು ನೀಡುವ ಬಗೆಬಗೆಯ ಬಳ್ಳಿಗಳಿಂದ ಕೂಡಿದೆ. ಅಲ್ಲದೆ ಕೆನೆಭರಿತವಾದ ಹಾಲೊನೆಗಳಿಂದ ಕೂಡಿದ ಬೆಳೆಗಳ ಮೇಲಿಂದ ಬೀಸಿ ಬರುವ ತಂಗಾಳಿ, ಪ್ರಾಣಿ-ಪಕ್ಷಿಗಳ ಸಮೂಹ, ನದಿಗಳು, ಪರ್ವತಗಳು , ನಗರಗಳು, ಹೀಗೆ ಇಲ್ಲಿ ಇಲ್ಲದಿರುವುದೇ ಇಲ್ಲ. ಸ್ವರ್ಗವೇ ಭೂಮಿಗಿಳಿದಂತೆ ಮನೋಹರವಾಗಿದೆ.
2.ಕನ್ನಡದ ಕವಿಶ್ರೇಷ್ಠರ ಹಿರಿಮೆಯೇನು?
ಕನ್ನಡ ನಾಡು ಹಲವಾರು ಕವಿಶ್ರೇಷ್ಠರ ಉದಯಕ್ಕೆ ಕಾರಣವಾಗಿದೆ. ನೃಪತುಂಗ, ಪಂಪ, ರನ್ನ, ಲಕ್ಷ್ಮೀಶ, ಜನ್ನ, ಷಡಕ್ಷರಿ. ಮುದ್ದಣ ಮೊದಲಾದ ಶ್ರೇಷ್ಠ ಕವಿಗಳು ಮಹಾಕಾವ್ಯಗಳನ್ನು ರಚಿಸಿದ್ದಾರೆ ಮಧ್ವಾಚಾರ್ಯ, ಕೊಂಡಕುಂದಾಚಾರ್ಯರು, ಬಸವಣ್ಣನವರಂತಹ ಆಚಾರ್ಯರು, ಇಲ್ಲಿ ಜನಿಸಿದ್ದಾರೆ. ಹಾಗೆಯೇ ದಾಸ ಶ್ರೇಷ್ಠರಾದ ಪುರಂದರದಾಸರು, ಕನಕದಾಸರು, ಮೊದಲಾದವರು ಭಕ್ತಿ ಪ್ರಧಾನವಾದ ಕೀರ್ತನೆಗಳನ್ನು ರಚಿಸಿ, ದಾಸ ಸಾಹಿತ್ಯವನ್ನು ಬೆಳೆಸಿದರು. ವಿದ್ಯಾರಣ್ಯರಂತಹ ಮಹಿಮರು ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಪ್ರೇರಕ ಶಕ್ತಿಯಾಗಿ ನಿಂತರು. ಹೀಗೆ ಈ ಕನ್ನಡ ತಾಯಿಯ ಹೊನ್ನಿನ ಗಣಿಯಂತಹ ಗರ್ಭದಲ್ಲಿ ಜನಿಸಿರುವುದು ಕವಿಶ್ರೇಷ್ಠರ ಹಿರಿಮೆಯಾಗಿದೆ.
3. ಕನ್ನಡದ ಹೆಸರನ್ನು ಹೇಗೆ ಹಬ್ಬಿಸಬೇಕೆಂದು ಕವಿ ಆಶಿಸುತ್ತಾರೆ?
ಕನ್ನಡಿಗರು ಕನ್ನಡದಲ್ಲಿರುವ ಕಂಪನ್ನು ಅರಿಯದೆ ಬೇರೆ ಭಾಷೆಗಾಗಿ ಆಸೆಪಡುತ್ತಿದ್ದಾರೆ. ಆದ್ದರಿಂದ ಕವಿ "ಕನ್ನಡಾಂಬೆಯೇ, ಕನ್ನಡ ಕಸ್ತೂರಿಯನ್ನು ಹೊಸ ಮಾತಿನಿಂದ ತೀಡಿ. ಅದರಲ್ಲಿ ಪರಿಮಳವನ್ನು ಹೊರತೆಗೆದು, ಕಾಮಧೇನುವಿನ ಮೈಯಲ್ಲಿ ಹೊಮ್ಮಿದ ಶಕ್ತಿಯಂತೆ ಕನ್ನಡಿಗರಲ್ಲಿ ಹೊಸ ಶಕ್ತಿಯನ್ನು ತುಂಬಿ , ಹೊಸ ಪರಿಮಳದ ನಲ್ನುಡಿಗಳಿಂದ ಇಡೀ ಜಗತ್ತಿನಲ್ಲಿ ನಿನ್ನ ಹೆಸರನ್ನು ಹಬ್ಬಿಸಬೇಕು." ಎಂದು ಆಶಿಸಿದ್ದಾರೆ.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ.
1.ಕನ್ನಡ ತಾಯಿಯನ್ನು ಮರೆಯಲು ಸಾಧ್ಯವಿಲ್ಲ ಏಕೆ?
ಕನ್ನಡ ತಾಯಿಯನ್ನು ಮರೆಯಲು ಸಾಧ್ಯವಿಲ್ಲ. ಏಕೆಂದರೆ, ಕನ್ನಡಾಂಬೆಯು ಕನ್ನಡಿಗರ ಜನ್ಮದಾತೆಯಾಗಿದ್ದಾಳೆ. ಆ ತಾಯಿಯು ನಮ್ಮ ಪ್ರತಿಯೊಂದು ತಪ್ಪುಗಳನ್ನು ಸಹಿಸಿಕೊಂಡಿದ್ದಾಳೆ. ಬಹಳ ಪ್ರೀತಿಯಿಂದ ನಮ್ಮನ್ನು ಸಲಹಿದ್ದಾಳೆ. ಅವಳೇ ನಮ್ಮ ಜೀವನವಾಗಿದ್ದಾಳೆ. ನಮ್ಮ ತನುಕನ್ನಡ, ಮನಕನ್ನಡ, ನುಡಿಕನ್ನಡ ಎಲ್ಲವೂ ಕನ್ನಡವಾಗಿದೆ. ಆದ್ದರಿಂದ ಕನ್ನಡತಾಯಿಯನ್ನು ಮರೆಯಲು ಸಾಧ್ಯವಿಲ್ಲ.
2.ಕವಿ ಕನ್ನಡ ತಾಯಿಯಲ್ಲಿ ಏನೆಂದು ಕೋರುತ್ತಾರೆ?
ಕನ್ನಡಿಗರ ಹೃದಯ ಶ್ರೀಮಂತಿಕೆ ಹೆಚ್ಚುವಂತೆ, ನಾವು ಎಲ್ಲರೂ ಒಂದೇ ಎನ್ನವ ಭಾವನೆಯನ್ನು ಮೂಡಿಸುವಂತೆ, ಕನ್ನಡ ಭಾಷೆಗೆ ಹೊಸ ಶಕ್ತಿ ತುಂಬಿಸುವಂತೆ , ಕನ್ನಡದ ಹೆಸರನ್ನು ಜಗದಲ್ಲಿ ಹಬ್ಬಿಸುವ ಸಾಮರ್ಥ್ಯವನ್ನು ಕೊಡು ಎಂದು ಕವಿಗಳು ಕೋರುತ್ತಾರೆ.
3. ಗೋವಿಂದ ಪೈ ಅವರ ಪ್ರಮುಖ ಕೃತಿಗಳಾವುವು?
ಗಿಳಿವಿಂಡು, ನಂದಾದೀಪ ಮೊದಲಾದವು. ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ ಗದ್ಯಾನುವಾದ.‘ಸಿಂಗಾಲ ಸುತ್ತ’ ಬೌದ್ಧ ಸೂತ್ರಗಳ ಕನ್ನಡ ಅನುವಾದ. ಅಹಮ್ಮದ್ ಇಕ್ಬಾಲ್, ಉಮರ್ ಖಯ್ಯಾಂನ ರುಬಾಯಿಗಳನ್ನು ಭಾಷಾಂತರಿಸಿದ್ದಾರೆ. ವೈಶಾಖ ಮತ್ತು ಗೊಲ್ಗೊಥಾ ಖಂಡಕಾವ್ಯಗಳನ್ನು ಪ್ರಕಟಿಸಿದ್ದಾರೆ. ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವರಲ್ಲದೇ ಚಿತ್ರಭಾನು, ಹೆಬ್ಬೆರಳು, ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
ಈ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.
1. ಕನ್ನಡಿಗರ ತಾಯಿ ಮೊಗ ತೋರಬೇಕೆಂದು ಕವಿ ಏಕೆ ಬಯಸುತ್ತಾರೆ?
ಕನ್ನಡತಾಯಿ ತನ್ನ ಮುಖವನ್ನು ತೋರುವ ಮೂಲಕ ಕನ್ನಡದ ಮಕ್ಕಳನ್ನು ಒಂದಾಗಿಸಬೇಕು ಎನ್ನುವುದು ಪದ್ಯದ ಮುಖ್ಯ ಆಶಯ. ಕನ್ನಡಾಂಬೆಯು ಕನ್ನಡಿಗರೆಲ್ಲರ ಜನ್ಮದಾತೆಯಾಗಿದ್ದಾಳೆ. ಆ ತಾಯಿಯು ನಮ್ಮ ಪ್ರತಿಯೊಂದು ತಪ್ಪುಗಳನ್ನು ಸಹಿಸಿಕೊಂಡಿದ್ದಾಳೆ. ಬಹಳ ಪ್ರೀತಿಯಿಂದ ನಮ್ಮನ್ನು ಸಲಹಿದ್ದಾಳೆ. ಅವಳೇ ನಮ್ಮ ಜೀವನವಾಗಿದ್ದಾಳೆ. ನಮ್ಮ ತನುಕನ್ನಡ, ಮನಕನ್ನಡ, ನುಡಿಕನ್ನಡ ಎಲ್ಲವೂ ಕನ್ನಡವಾಗಿದೆ. ಅವಳನ್ನು ಮರೆಯಲು ಸಾಧ್ಯವಿಲ್ಲ.
ಕನ್ನಡ ನಾಡಿನ ಪ್ರಕೃತಿಯಲ್ಲಿ ಹಣ್ಣು-ಕಾಯಿಗಳನ್ನು ನೀಡುವ ವಿವಿಧ ರೀತಿಯ ಮರಗಳು, ಪತ್ರ-ಪುಷ್ಪಗಳನ್ನು ನೀಡುವ ಬಗೆಬಗೆಯ ಬಳ್ಳಿಗಳಿಂದ ಕೂಡಿದೆ. ಅಲ್ಲದೆ ಬೆಳೆಗಳ ಕೆನೆಭರಿತವಾದ ಹಾಲೊನೆಯ ಮೇಲಿಂದ ಬೀಸಿ ಬರುವ ತಂಗಾಳಿ, ಪ್ರಾಣಿ-ಪಕ್ಷಿಗಳ ಸಮೂಹ, ನದಿಗಳು, ನಗರಗಳು, ಪರ್ವತಗಳು ಹೀಗೆ ಇಲ್ಲಿ ಇಲ್ಲದಿರುವುದೇ ಇಲ್ಲ. ಸ್ವರ್ಗವೇ ಭೂಮಿಗಿಳಿದಂತೆ ಮನೋಹರವಾಗಿದೆ. ಆದ್ದರಿಂದ ಕವಿ ಕನ್ನಡಿಗರ ತಾಯಿ ಮೊಗ ತೋರಬೇಕೆಂದು ಹೇಳಿದ್ದಾರೆ.
2.ಕನ್ನಡ ನಾಡಿನ ಕವಿ ಹಾಗೂ ಕಲೆಯ ಮಹತ್ವವೇನು? – ವಿವರಿಸಿ.
ಕನ್ನಡನಾಡು ಹಲವಾರು ಕವಿಶ್ರೇಷ್ಠರ ಉದಯಕ್ಕೆ ಕಾರಣವಾಗಿದೆ. ಕೊಂಡಕುಂದಾಚಾರ್ಯರು, ಮಧ್ವಾಚಾರ್ಯ, ಬಸವಣ್ಣನವರಂತಹ ಆಚಾರ್ಯರು, ನೃಪತುಂಗ, ಪಂಪ, ರನ್ನ, ಲಕ್ಷ್ಮೀಶ, ಜನ್ನೆ, ಷಡಕ್ಷರಿ. ಮುದ್ದಣ ಮೊದಲಾದ ಶ್ರೇಷ್ಠ ಕವಿಗಳು ಇಲ್ಲಿ ಜನಿಸಿದ್ದಾರೆ. ಹಾಗೆಯೇ ಪುರಂದರದಾಸರಂತಹ ದಾಸ ಶ್ರೇಷ್ಠರು, ವಿದ್ಯಾರಣ್ಯರಂತಹ ಮಹಿಮರು ಈ ಕನ್ನಡತಾಯಿಯ ಹೊನ್ನಿನ ಗಣಿಯಂತಹ ಗರ್ಭದಲ್ಲಿ ಜನಿಸಿರುವುದು ಹಿರಿಮೆಯಾಗಿದೆ.
ಕನ್ನಡ ನಾಡು ಭವ್ಯ ಶಿಲ್ಪಕಲೆಗಳ ಬೀಡಾಗಿದೆ. ಇಲ್ಲಿ ಇಲ್ಲದಿರುವ ಶಿಲ್ಪಕಲೆಯೇ ಇಲ್ಲ. ಹಳೆಬೀಡು-ಬೇಲೂರುಗಳಲ್ಲಿರುವ ದೇವಾಲಯಗಳು ಸುಂದರವಾಗಿವೆ. ಶ್ರವಣ ಬೆಳಗೊಳ, ಕಾರ್ಕಳ ಮುಂತಾದ ಸ್ಥಳಗಳಲ್ಲಿರುವ ಬಾಹುಬಲಿ ಮೂರ್ತಿಗಳು ಭವ್ಯವಾಗಿವೆ. ಇಲ್ಲಿ ಕಲ್ಲು ಕಲ್ಲುಗಳೂ ಕನ್ನಡ ನಾಡಿನ ಇತಿಹಾಸವನ್ನು ಸಾರುತ್ತವೆ. ಎಂದು ಕವಿಗಳು ಕನ್ನಡ ನಾಡಿನ ಕವಿ ಹಾಗೂ ಕಲೆಯ ಮಹತ್ವವನ್ನು ಕುರಿತು ಬಹು ಸ್ವಾರಸ್ಯ ಪೂರ್ಣವಾಗಿ ವಿವರಿಸಿದ್ದಾರೆ .
ಉ) ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ.
1. “ಖಗ ಮೃಗೋರಗಾಳಿಯೋ"
ಆಯ್ಕೆ: ಈ ವಾಕ್ಯವನ್ನು ಶ್ರೀ ಎನ್. ಎಸ್. ರಘುನಾಥ್ ಅವರು ಸಂಪಾದಿಸಿರುವ ಶತಮಾನದ ಮಕ್ಕಳ ಸಾಹಿತ್ಯ ಎಂಬ ಸಂಕಲನದಿಂದ ಆಯ್ದು ಶ್ರೀ ಎಂ ಗೋವಿಂದ ಪೈ ಅವರು ರಚಿಸಿರುವ ಕನ್ನಡಿಗರ ತಾಯಿ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕವಿ ಕನ್ನಡ ನಾಡಿನಲ್ಲಿರುವ ಸಂಪದ್ಭರಿತ ಪ್ರಕೃತಿಯನ್ನು ವರ್ಣಿಸುವ ಸಂದರ್ಭದಲ್ಲಿ ಕನ್ನಡ ನಾಡಿನ ಪ್ರಕೃತಿಯಲ್ಲಿ ಹಣ್ಣು-ಕಾಯಿಗಳನ್ನು ನೀಡುವ ವಿವಿಧ ರೀತಿಯ ಮರಗಳು, ಪತ್ರ-ಪುಷ್ಪಗಳನ್ನು ನೀಡುವ ಬಗೆಬಗೆಯ ಬಳ್ಳಿಗಳನ್ನು ಹೊಂದಿರುವುದಲ್ಲದೆ ಪ್ರಾಣಿ-ಪಕ್ಷಿ-ಉರಗಗಳ ಸಮೂಹಗಳಿಂದ ಕೂಡಿದೆ' ಎಂದು ಹೇಳಿದ್ದಾರೆ.
ಸ್ವಾರಸ್ಯ: ನಮ್ಮ ಕನ್ನಡ ನಾಡಿನಲ್ಲಿ ಸಸ್ಯ ಸಂಪತ್ತು, ಪ್ರಾಣಿ-ಪಕ್ಷಿಗಳ ಸಂಪತ್ತು ತುಂಬಾ ಹೇರಳವಾಗಿ ಇದೆ. ಎಂಬುದು ಈ ಮಾತಿನ ಮೂಲಕ ಬಹು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ.
2. "ನಿನ್ನ ಕಲ್ಲೆ ನುಡಿವುದಲ್ಲ!"
ಆಯ್ಕೆ: ಈ ವಾಕ್ಯವನ್ನು ಶ್ರೀ ಎನ್. ಎಸ್. ರಘುನಾಥ್ ಅವರು ಸಂಪಾದಿಸಿರುವ ಶತಮಾನದ ಮಕ್ಕಳ ಸಾಹಿತ್ಯ ಎಂಬ ಸಂಕಲನದಿಂದ ಆಯ್ದು ಶ್ರೀ ಎಂ ಗೋವಿಂದ ಪೈ ಅವರು ರಚಿಸಿರುವ ಕನ್ನಡಿಗರ ತಾಯಿ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕವಿ ಕನ್ನಡನಾಡಿನ ವಾಸ್ತುಶಿಲ್ಪ, ಕಲಾ ವೈಭವವನ್ನು ವರ್ಣಿಸುವ ಸಂದರ್ಭದಲ್ಲಿ ಕನ್ನಡ ನಾಡು ಭವ್ಯ ಶಿಲ್ಪಕಲೆಗಳ ಬೀಡಾಗಿದೆ. ಇಲ್ಲಿ ಇಲ್ಲದಿರುವ ಶಿಲ್ಪಕಲೆಯೇ ಇಲ್ಲ. ಇಲ್ಲಿ ಕಲ್ಲು ಕಲ್ಲುಗಳೂ ನುಡಿಯುತ್ತವೆ' ಎಂದು ಹೇಳಿದ್ದಾರೆ.
ಸ್ವಾರಸ್ಯ: ನಮ್ಮ ಕನ್ನಡ ನಾಡಿನಲ್ಲಿ ಶಿಲ್ಪ ಕಲಾಕೃತಿಗಳು ಕನ್ನಡ ನಾಡಿನ ಭವ್ಯ ಇತಿಹಾಸದ ಹಿನ್ನೆಲೆಯ ಕತೆಯನ್ನು ಹೇಳುವುದು ಸ್ವಾರಸ್ಯ ಪೂರ್ಣವಾಗಿ ಮೂಡಿ ಬಂದಿದೆ.
3) “ನಮ್ಮ ಮನಮನೊಂದೆ ಕಲಸು!"
ಆಯ್ಕೆ: ಈ ವಾಕ್ಯವನ್ನು ಶ್ರೀ ಎನ್. ಎಸ್. ರಘುನಾಥ್ ಅವರು ಸಂಪಾದಿಸಿರುವ ಶತಮಾನದ ಮಕ್ಕಳ ಸಾಹಿತ್ಯ ಎಂಬ ಸಂಕಲನದಿಂದ ಆಯ್ದು ಶ್ರೀ ಎಂ ಗೋವಿಂದ ಪೈ ಅವರು ರಚಿಸಿರುವ ಕನ್ನಡಿಗರ ತಾಯಿ ಎಂಬ ಪದ್ಯ ಭಾಗದಿಂದ ಆರಿಸಲಾಗಿದೆ.
ಸಂದರ್ಭ: ಕವಿ ಕನ್ನಡಾಂಬೆಯನ್ನು ಕುರಿತು ನಮ್ಮ ಎದೆಯನ್ನು ಗಟ್ಟಿಗೊಳಿಸಿ. ಎಲ್ಲರ ಬಾಯಲ್ಲಿ ನೆಲಸಿ, ನಮ್ಮೆಲ್ಲರ ಮನಸ್ಸುಗಳನ್ನು ಒಂದುಗೂಡಿಸು. ಎಂದು ಹೇಳುವ ಸಂದರ್ಭದಲ್ಲಿ ನಿನ್ನ ಮೂರ್ತಿ ಜಗತ್ತಿನಲ್ಲೆಲ್ಲ ಕೀರ್ತಿಗಳಿಸುವಂತೆ ಎಂದು ತೋರುವೆ ಎಂದು ಕೋರುತ್ತಾರೆ.
ಸ್ವಾರಸ್ಯ: ಕನ್ನಡ ಭಾಷೆ ಕೇವಲ ಕನ್ನಡ ನಾಡಿಗೆ ಸೀಮಿತವಾಗದೆ ಇಡೀ ಜಗತ್ತಿನಲ್ಲಿ ಕೀರ್ತಿಗಳಿಸಬೇಕೆಂಬ ಕವಿ ಆಶಯ ಇಲ್ಲಿ ಸ್ವಾರಸ್ಯಪೂರ್ಣವಾಗಿದೆ.
ಊ) ಹೊಂದಿಸಿ ಬರೆಯಿರಿ.
ಊ) ಹೊಂದಿಸಿ ಬರೆಯಿರಿ. | |
ಅ | ಬ |
1. ಬೇಲನಾಡು | ಬಾಹುಬಲಿ |
2. ಶರ್ವ | ಖಂಡಕಾವ್ಯ(3) |
3. ಗೊಲ್ಗೊಥಾ | ಕವನಸಂಕಲನ(4) |
4. ಗಿಳಿವಿಂಡು | ಹಳೆಬೀಡು |
ಬೇಲೂರು(1) | |
| ನೃಪತುಂಗ(2) |
1. ಹರಸು ತಾಯೆ ಸುತರ ಕಾಯೆ
2. ಹಾಲು ಹರಿವ ದಿವಂ ಭೂಮಿಗಿಳಿದುದೆ?
3. ಜೈನರಾದ ಪೂಜ್ಯಪಾದ ಕೊಂಡುಕುಂದವರ್ಯರ
4. ಮೃಗದ ಸೇಡು ನಮ್ಮ ಪಾಡು.