ಸಾಮಾನ್ಯವಾಗಿ ನಾವೆಲ್ಲರೂ ವ್ಯಾಯಾಮದ ಪ್ರಯೋಜನಗಳನ್ನು ತಿಳಿದಿದ್ದೇವೆ. ಆದರೆ ವ್ಯಾಯಾಮಗಳನ್ನು ಮಾಡದಿರುವುದರಿಂದ ಯಾವೆಲ್ಲ ನಷ್ಟಗಳು ಇದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಣ. ವ್ಯಾಯಾಮ ಮಾಡುವುದರಿಂದ ಉತ್ತಮವಾದ ದೇಹವನ್ನು ಹೊಂದಲು ಮತ್ತು ನಮ್ಮ ದೇಹದಲ್ಲಿರುವ ಎಲ್ಲಾ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಪ್ರತಿ ಆರೋಗ್ಯವಂತ ವ್ಯಕ್ತಿಯು ನಿಯಮಿತವಾಗಿ 40 ರಿಂದ 50 ನಿಮಿಷಗಳ ಕಾಲ ವ್ಯಾಯಾಮದಲ್ಲಿ ತೊಡಗಲು ಶಿಫಾರಸು ಮಾಡಲಾಗುತ್ತದೆ. ಆದರೆ ವ್ಯಾಯಾಮವನ್ನು ಮಾಡದಿರುವುದು ಯಾವ ಪರಿಣಾಮಗಳನ್ನು ಉಂಟುಮಾಡುತ್ತದೆ ನೋಡೋಣ.
ನಾವು ಜೀವನದಲ್ಲಿ ಎಷ್ಟೆಲ್ಲ ಉತ್ತಮ ಅಭ್ಯಾಸಗಳ ಬಗ್ಗೆ ತಿಳಿದಿದ್ದರೂ ಕೆಲವು ಸಮಯದಲ್ಲಿ ದುಶ್ಚಟಗಳಿಗೆದಾಸರಾಗುವುದು ಸಾಮಾನ್ಯ. ಈ ಕಾಲದಲ್ಲಿ ಒಬ್ಬ ವ್ಯಕ್ತಿಯು ಉತ್ತಮವಾದ ಆರೋಗ್ಯವನ್ನು ಹೊಂದಿದ್ದಾನೆ ಎಂದರೆ ಅದು ಕೋಟಿ ಹಣಕ್ಕೆ ಸಮವಾಗಿರುತ್ತದೆ. ಕುಡಿಯುವುದು, ಧೂಮಪಾನ ಮಾಡುವುದು,ಅತಿಯಾದ ಜಕ್ ಫುಡ್ ಸೇವನೆ ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಆದ್ದರಿಂದ ಪ್ರತಿನಿತ್ಯ ನಾವು ಸ್ವಲ್ಪ ಮಟ್ಟದಲ್ಲಾದರೂ ವ್ಯಾಯಾಮವನ್ನು ರೂಢಿಸಿಕೊಳ್ಳುವುದು ಮುಖ್ಯವಾಗಿದೆ.ನಿಯಮಿತವಾದ, ಚುರುಕಾದ ವ್ಯಾಯಾಮ ಮಾಡುವುದರಿಂದ ಇದು ವಯಸ್ಸಾಗುವಿಕೆಯನ್ನು ವಿಳಂಬಗೊಳಿಸುತ್ತದೆ ಎಂದು ಹೇಳಲಾಗುತ್ತದೆ.ಅಗತ್ಯವಾದ ದೈಹಿಕ ಚಟುವಟಿಕೆಯನ್ನು ಪೂರೈಸುತ್ತಿರುವುದು ನಿಜವಾಗಿಯೂ ಅಪಾಯವನ್ನು ಹೆಚ್ಚಿಸುತ್ತದೆ.ತಂಬಾಕು ಸೇವನೆ ಮಧುಮೇಹಕ್ಕಿಂತ ಜಾಗತಿಕವಾಗಿ ಹೆಚ್ಚಿನ ಸಾವುಗಳನ್ನು ಉಂಟುಮಾಡುತ್ತದೆ ಎಂದು ದಿ ಲ್ಯಾನೆಟ್ಸ್ ನಲ್ಲಿ ಪ್ರಕಟವಾದ ಅಧ್ಯಯನವೊಂದು ದೃಢಪಡಿಸಿದೆ.ನಮ್ಮ ದೇಹವು ಯಾವುದೇ ರೀತಿಯ ಚಟುವಟಿಕೆಗಳನ್ನು ನೀಡದೇ ಇದ್ದರೆ ಹೆಚ್ಚು ಹಾನಿಗೆ ಒಳಗಾಗುತ್ತದೆ ಎನ್ನುವುದು ನಮಗೆ ತಿಳಿದಿರುವುದು ಅತಿ ಅವಶ್ಯಕ.
ಹೃದಯವು ಮಾನವ ದೇಹದ ಮುಖ್ಯ ಅಂಗವಾಗಿದೆ, ಜೀವನದುದ್ದಕ್ಕೂ ವಿಶ್ರಾಂತಿಯಿಲ್ಲದೇ ರಕ್ತವನ್ನು ದೇಹದ ಎಲ್ಲಾ ಭಾಗಗಳಿಗೆ ಸಾಗಿಸುವುದು ಇದರ ಪ್ರಮುಖ ಕೆಲಸ. ಮಾನವನ ದೇಹದಲ್ಲಿ ಹೃದಯವು ಅತ್ಯಂತ ಮುಖ್ಯವಾದ ಅಂಗವಾಗಿದೆ. ನಿಯಮಿತವಾಗಿ ಮಾಡುವ ಏರೋಬಿಕ್ ಮತ್ತು ಕಾರ್ಡಿಯೋ ವ್ಯಾಯಾಮಗಳು ಉತ್ತಮ ಹೃದಯ ಬಡಿತ ಮತ್ತು ಹೃದಯದ ಕಾಯಿಲೆಗಳ ಅಪಾಯಕ್ಕೆ ಸಂಬಂಧಿಸಿದೆ. ನಾವು ಯಾವುದೇ ರೀತಿಯ ದೈಹಿಕ ಚಟುವಟಿಕೆ ಅಥವಾ ವ್ಯಾಯಾಮ ಮಾಡದಿದ್ದರೆ, ನಮ್ಮ ಹೃದಯವು ಕಳಪೆಯಾಗಿ ಕಾರ್ಯನಿರ್ವಹಿಸುತ್ತದೆ . ಇದು ನಮ್ಮ ದೈನಂದಿನ ಕಾರ್ಯಗಳ ಮೇಲೆ ಪ್ರಭಾವ ಬೀರುತ್ತದೆ ಇದರ ಜೊತೆಗೆ ಕಳಪೆ ಆಹಾರದ ಸೇವನೆಯಿಂದ ಹೆಚ್ಚಿನ ಹೃದಯ ಸಮಸ್ಯೆಗಳು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ ಹಾಗೂ ನಮ್ಮ ಉಸಿರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.
ನಮ್ಮ ದೇಹದಲ್ಲಿರುವ ಸ್ನಾಯು ಕೋಶಗಳನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಮತ್ತು ಅವುಗಳನ್ನು ಬಲಪಡಿಸುವುದು ವ್ಯಾಯಾಮದ ಪ್ರಮುಖ ಗುರಿಗಳಲ್ಲಿ ಒಂದಾಗಿದೆ. ನಾವು ವ್ಯಾಯಾಮ ಮಾಡದಿದ್ದಾಗ ಅಥವಾ ಯಾವುದೇ ರೀತಿಯ ದೈಹಿಕ ಚಟುವಟಿಕೆಯನ್ನು ನಮ್ಮ ದೇಹಕ್ಕೆ ನೀಡದಿದ್ದಾಗ, ದೇಹದಲ್ಲಿರುವ ಸ್ನಾಯುಬಲ ಕಡಿಮೆಯಾಗುತ್ತದೆ ಮತ್ತು ತುಂಬಾ ದುರ್ಬಲರನ್ನಾಗಿ ಮಾಡುತ್ತದೆ. ಇದು ಮುಂದುವರೆದರೆ ಚಲನೆಯ ಕಾರ್ಯಕ್ಕೆ ಇದು ಅಡ್ಡಿಯನ್ನುಂಟು ಮಾಡುತ್ತದೆ ಮತ್ತು ದುರ್ಬಲ ಸ್ನಾಯುಗಳು ನಮಗೆ ದೈನಂದಿನ ಕಾರ್ಯಗಳು ಮತ್ತು ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟ ನೀಡುವ ಸಾಧ್ಯತೆ ಹೆಚ್ಚು.
ಉತ್ತಮ ಗುಣಮಟ್ಟದ ವ್ಯಾಯಾಮವು ನಿದ್ರೆಯೊಂದಿಗೆ ಸಂಬಂಧ ಹೊಂದಿದೆ, ಉತ್ತಮ ಗುಣಮಟ್ಟದ ವ್ಯಾಯಾಮವನ್ನು ಮಾಡುವುದರಿಂದ ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯಲು ಸಾಧ್ಯ .ಇದರ ಜೊತೆ ನಾವು ಉತ್ತಮ ಚಟುವಟಕೆಯಿಂದ ಮತ್ತು ಉತ್ತಮ ಆಹಾರ ಸೇವಿಸಿದರೆ ನಮ್ಮ ದೇಹ ನಿದ್ರೆಯನ್ನು ಉತ್ತೇಜಿಸುತ್ತದೆ. ಇದೆಲ್ಲದರ ಜೊತೆಗೆ ವ್ಯಾಯಾಮ ನಮ್ಮ ಸ್ನಾಯುಗಳು ಆರೋಗ್ಯವಾಗಿ ಇರುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಮ್ಮ ಸ್ನಾಯುಗಳಿಗೆ ಯಾವುದೇ ರೀತಿಯ ಚಟುವಟಿಕೆಗಳನ್ನು ನೀಡದಿದ್ದಾಗ ಸರಿಯಾಗಿ ನಿದ್ದೆ ಬರುವುದಿಲ್ಲ. ನಿದ್ರೆಯು ಎಲ್ಲಾ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ಉತ್ತಮ ನಿದ್ರೆಯನ್ನು ಮಾಡುವುದರಿಂದ ಆ ದಿನದಲ್ಲಿ ನಾವು ಹೊಂದಿದ ಎಲ್ಲಾ ಒತ್ತಡಗಳನ್ನು ತೊಡೆದುಹಾಕುತ್ತದೆ. ಇದರ ಜೊತೆಗೆ ಕಳಪೆ ಗುಣಮಟ್ಟದ ನಿದ್ರೆ ಯಿಂದ ನಾವು ಮಧುಮೇಹದ ಅಪಾಯ, ತೂಕ ಹೆಚ್ಚಾಗುವುದು, ಕಳಪೆ ಮಾನಸಿಕ ಆರೋಗ್ಯ ಸೇರಿದಂತೆ ಚಯಾಪಚಯ ಮತ್ತು ಹಾರ್ಮೋನುಗಳ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನಿದ್ರೆಯು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಉತ್ತಮವಾದ ನಿದ್ರೆಯನ್ನು ಹೊಂದುವುದು ಪ್ರಮುಖವಾಗಿದೆ. .
ನೀವು ಪ್ರತಿ ನಿತ್ಯ ವ್ಯಾಯಾಮವನ್ನು ಮಾಡುವುದರಿಂದ ಇದು ಉತ್ತಮ ಮನಸ್ಥಿತಿಯನ್ನು ಪ್ರಚೋದಿಸುತ್ತದೆ. ನೀವು ವ್ಯಾಯಾಮ ಮಾಡದೇ ಇದ್ದರೆ ಎಲ್ಲಾ ರೀತಿಯ ಲಾಭಗಳನ್ನು ಕಳೆದುಕೊಂಡಿರಿ ಎಂದರ್ಥ. ಇದರಿಂದ ಆರೋಗ್ಯದ ವಿಷಯದಲ್ಲಿ ನೀವು ಹೆಚ್ಚಿನ ನಷ್ಟವನ್ನು ಹೊಂದುತ್ತೀರಿ. ದೈಹಿಕವಾಗಿ ವ್ಯಾಯಾಮ ಮಾಡುವುದರಿಂದ ನೀವು ಮಾನಸಿಕ ನೆಮ್ಮದಿಯನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಮಾನಸಿಕ ನೆಮ್ಮದಿಗೋಸ್ಕರ ಜನರು ಕಷ್ಟ ಪಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ.ವ್ಯಾಯಾಮ ಮಾಡುವುದರಿಂದ ಇಷ್ಟೆಲ್ಲ ಲಾಭಗಳನ್ನು ಪಡೆಯುವುದರಿಂದ ನೀವು ಪ್ರತಿನಿತ್ಯ ನಿಮ್ಮ ಇತರ ಕೆಲಸಗಳ ಜೊತೆಗೆ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ನಾವು ಪ್ರತಿ ನಿತ್ಯ ವ್ಯಾಯಾಮವನ್ನು ಮಾಡುವುದರಿಂದ ಇದು ಉತ್ತಮ ಮನಸ್ಥಿತಿಯನ್ನು ಹೊಂದಿರುತ್ತೇವೆ. ಒಂದು ವೇಳೆ ವ್ಯಾಯಾಮ ಮಾಡದೇ ಇದ್ದರೆ ಎಲ್ಲಾ ರೀತಿಯ ಲಾಭಗಳನ್ನು ಕಳೆದುಕೊಳ್ಳುತ್ತೇವೆ ಎಂದರ್ಥ. ಇದರಿಂದ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನಷ್ಟವನ್ನು ಹೊಂದುತ್ತೇವೆ. ಮುಖ್ಯವಾಗಿ ದೈಹಿಕವಾಗಿ ವ್ಯಾಯಾಮ ಮಾಡುವುದರಿಂದ ಮಾನಸಿಕ ನೆಮ್ಮದಿಯನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಮಾನಸಿಕ ನೆಮ್ಮದಿಗೋಸ್ಕರ ಜನರು ಕಷ್ಟ ಪಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ.ವ್ಯಾಯಾಮ ಮಾಡುವುದರಿಂದ ಇಷ್ಟೆಲ್ಲ ಲಾಭಗಳನ್ನು ಪಡೆಯುವುದರಿಂದ ಪ್ರತಿನಿತ್ಯ ನಮ್ಮ ಇತರ ಕೆಲಸಗಳ ಜೊತೆಗೆ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುಬೇಕು.
ಮಾನವನ ದೇಹದಲ್ಲಿರುವ ಅಂಗಗಳು ಒಂದು ರೀತಿಯ ಯಂತ್ರವಿದ್ದಂತೆ. ಅಂಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾದರೆ ವ್ಯಾಯಾಮವನ್ನು ಮಾಡುವುದು ಪ್ರಮುಖವಾಗಿದೆ. ಯಾವುದೇ ಒಂದು ಯಂತ್ರವು ಹೆಚ್ಚು ದಿನಗಳ ಕಾಲ ಕೆಲಸ ನೀಡದಿದ್ದರೆ ಹೇಗೆ ಕೆಲಸ ನಿಲ್ಲಿಸಿಬಿಡುತ್ತದೆಯೊ ನಮ್ಮ ದೇಹವು ಹಾಗೆ. ನಮ್ಮ ದೇಹಕ್ಕೆ ಚಟುವಟಿಕೆಗಳನ್ನು ನೀಡಿದಾಗ ಮಾತ್ರ ಅದು ಮತ್ತಷ್ಟು ಚುರುಕುಗೊಳ್ಳಲು ಸಾಧ್ಯ. ಆದರಿಂದ ಯಾವಾಗಲೂ ನಮ್ಮ ದೇಹಕ್ಕೆ ಅಗತ್ಯವಾದಷ್ಟು ದೈಹಿಕ ಚಟುವಟಿಕೆಗಳನ್ನು ನೀಡಬೇಕು.
ಒಂದು ವೇಳೆ ಯಾವುದೇ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ ಇದ್ದರೆ ನಮ್ಮ ದೇಹದಲ್ಲಿರುವ ಸ್ನಾಯುಗಳು ಬಲಹೀನ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿನಿತ್ಯದಲ್ಲಿ ಕನಿಷ್ಠ 40ರಿಂದ 45 ನಿಮಿಷ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ, ಒಂದುವೇಳೆ ಪ್ರತಿನಿತ್ಯ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ಒಂದು ವಾರಕ್ಕೆ ಕನಿಷ್ಠ ನಾಲ್ಕು ದಿನವಾದರೂ ವ್ಯಾಯಾಮ ಮಾಡಲೇಬೇಕು.