ಸಂಧಿ ಎಂದರೇನು? ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.
ಉದಾಹರಣೆ : ಹೊಸಗನ್ನಡ = ಹೊಸ + ಕನ್ನಡ, ಹೊಸ - ಪೂರ್ವಪದ, ಕನ್ನಡ - ಉತ್ತರಪದ ಪೂರ್ವಪದ + ಉತ್ತರಪದ = ಸಂಧಿಪದ.
ಕನ್ನಡ ಭಾಷೆಯಲ್ಲಿ ಹಲವಾರು ಸಂಸ್ಕೃತ ಶಬ್ಧಗಳು ಸೇರಿರುವುದರಿಂದ, ಕೆಲವು ಸಂಸ್ಕೃತ ಸಂಧಿಗಳನ್ನು ಕನ್ನಡದಲ್ಲಿ ಸೇರಿಸಲಾಗಿದೆ. ಸಂಧಿ ಕಾರ್ಯವು ಎರಡು ಕನ್ನಡ ಶಬ್ಧಗಳ ನಡುವೆ ಏರ್ಪಟ್ಟರೆ ಅವನ್ನು ಕನ್ನಡ ಸಂಧಿಯಾಗಿ ಮತ್ತು ಎರಡರಲ್ಲಿ ಒಂದು ಸಂಸ್ಕೃತ ಪದವಾಗಿದ್ದರೆ ಅವನ್ನು ಸಂಸ್ಕೃತ ಸಂಧಿಯಾಗಿ ಪರಿಗಣಿಸಲಾಗುತ್ತದೆ.