[ವ್ಯಂಜನ+ವ್ಯಂಜನ+ಸ್ವರ=ಸಂಯುಕ್ತಾಕ್ಷರ] "ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳನ್ನು (ಒತ್ತಕ್ಷರವನ್ನು) ಹೊಂದಿರುವ ಅಕ್ಷರಗಳೇ ಸಂಯುಕ್ತಾಕ್ಷರಗಳು." ವ್ಯಂಜನಗಳಿಗೆ ವ್ಯಂಜನಗಳೇ ಸೇರಿ ಸಂಯುಕ್ತಾಕ್ಷರವಾಗುತ್ತದೆ. ಇವನ್ನು ಒತ್ತಕ್ಷರ ಎಂದೂ ಕರೆಯಬಹುದು ಸಂಯುಕ್ತಾಕ್ಷರಗಳಲ್ಲಿ ಎರಡು ವಿಧ: 1) ಸಜಾತೀಯ ಸಂಯುಕ್ತಾಕ್ಷರ. 2) ವಿಜಾತೀಯ ಸಂಯುಕ್ತಾಕ್ಷರ.
1) ಸಜಾತೀಯ ಸಂಯುಕ್ತಾಕ್ಷರ:- "ಒಂದೇ ರೀತಿಯ ವ್ಯಂಜನಗಳನ್ನು ಹೊಂದಿರುವ ಸಂಯುಕ್ತಾಕ್ಷರಗಳನ್ನು 'ಸಜಾತೀಯ ಸಂಯುಕ್ತಾಕ್ಷರ' ಎಂದು ಹೇಳಲಾಗುತ್ತದೆ."
ಉದಾಹರಣೆ : ಅಪ್ಪ , ಅಮ್ಮ ಅಕ್ಕ , ಅಣ್ಣ , ಹಗ್ಗ , ಅಟ್ಟ , ಅಡ್ಡ ,ಅನ್ನ, ಹಬ್ಬ. ಅಪ್ಪ ಈ ಪದದಲ್ಲಿ ಪ್ಪ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ ಪ್+ಪ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು(ಪ್+ಪ್) ಒಂದೇ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಪ್ಪ ಎಂಬುದು ಸಜಾತೀಯ ಸಂಯುಕ್ತಾಕ್ಷರವಾಗಿದೆ.
2) ವಿಜಾತೀಯ ಸಂಯುಕ್ತಾಕ್ಷರ:- "ಬೇರೆ ಬೇರೆ ವ್ಯಂಜನಗಳನ್ನು ಹೊಂದಿರುವ ಸಂಯುಕ್ತಾಕ್ಷರಗಳನ್ನು ವಿಜಾತೀಯ ಸಂಯುಕ್ತಾಕ್ಷರಗಳೆಂದು ಕರೆಯಲಾಗುತ್ತದೆ." ಉದಾಹರಣೆ : ಶ್ರವಣ, ಪುಸ್ತಕ, ವ್ಯಾಕರಣ, ಆಶ್ಚರ್ಯ ಇತ್ಯಾದಿ... ಶ್ರವಣ ಈ ಪದದಲ್ಲಿ ಶ್ರ ಎಂಬ ಅಕ್ಷರವನ್ನು ಗಮನಿಸಿ ಇಲ್ಲಿ ಶ್+ರ್+ಅ ಎಂಬ ಮೂರು ಅಕ್ಷರಗಳಿವೆ. ಇವುಗಳಲ್ಲಿ ಮೊದಲೆರಡು (ಶ್+ರ್) ಬೇರೆ ಬೇರೆ ರೀತಿಯ ವ್ಯಂಜನಗಳಾಗಿವೆ. ಆದ್ದರಿಂದ ಶ್ರ ಎಂಬುದು ವಿಜಾತೀಯ ಸಂಯುಕ್ತಾಕ್ಷರವಾಗಿದೆ