
ಜೂ.21 ರಂದು ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ನಾವು ಆಚರಿಸುತ್ತೇವೆ. ಹಲವು ಮಂದಿ ತಮ್ಮ ಸಂಪೂರ್ಣ ಆರೋಗ್ಯಕ್ಕೆ ದೈಹಿಕ ವ್ಯಾಯಾಮ, ಯೋಗಾಸನಗಳ ಪ್ರಾಮುಖ್ಯತೆಯನ್ನು ಅರಿತಿರುತ್ತಾರೆ. ಕೆಲವರು ವ್ಯಾಯಾಮವನ್ನೇ ರೂಢಿಸಿಕೊಳ್ಳದೇ ಇರುತ್ತಾರೆ. ಅಂತವರು ಪ್ರತಿ ದಿನ 15-30 ನಿಮಿಷಗಳವರೆಗಿನ ಬೆಳಗಿನ ನಡಿಗೆ ಅಥವಾ ಯೋಗ ಮಾಡುವುದರಿಂದ ಹೃದಯದ ಆರೋಗ್ಯ, ರೋಗನಿರೋಧಕ ಆರೋಗ್ಯ, ಮೆದುಳು, ಕೂದಲು, ಚರ್ಮ, ಚಯಾಪಚಯ ಪ್ರಕ್ರಿಯೆಯನ್ನು ಉತ್ತಮಗೊಳಿಸಿ, ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ.
ಪ್ರತಿ ದಿನ 15-30 ನಿಮಿಷಗಳ ಕಾಲ ವ್ಯಾಯಾಮ ಪ್ರಾರಂಭ ಮಾಡುವುದು ಸೂಕ್ತವಾದರೂ, ಒಂದು ಗಂಟೆಗಿಂತಲೂ ಹೆಚ್ಚಿನ ಕಾಲ ಒಂದೇ ಕಡೆಯಲ್ಲಿ ಕುಳಿತುಕೊಳ್ಳಬಾರದು ಎಂಬುದನ್ನು ನಾವು ಅರಿಯಬೇಕು. ದೈಹಿಕ ಚಟುವಟಿಕೆಗಳೇ ಇಲ್ಲದೇ ದಿನ ನಿತ್ಯ ಹೆಚ್ಚಿನ ಸಮಯ ಒಂದೇ ಕಡೆ ಕುಳಿತುಕೊಂಡರೆ ಅದು ಧೂಮಪಾನ ಮಾಡುವಷ್ಟೇ ಆರೋಗ್ಯಕ್ಕೆ ಹಾನಿಕರವಾಗಿದೆ.
ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ನಮ್ಮ ರಕ್ತಚಲನೆ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದ್ದು, ನಮ್ಮ ಅಂಗ ವಿನ್ಯಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ಲ್ಯಾಕ್ಟಿಕ್ ಆಮ್ಲ ಉತ್ಪಾದನೆಯಿಂದ ಸ್ನಾಯುಗಳಲ್ಲಿ ಸೆಳೆತ, ನೋವು ಮತ್ತು ಬಿಗಿತ, ಕೀಲುಗಳ ನೋವು ಪ್ರಾರಂಭವಾಗುತ್ತದೆ.
ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ನಮ್ಮ ರಕ್ತಚಲನೆ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದ್ದು, ನಮ್ಮ ಅಂಗ ವಿನ್ಯಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ಲ್ಯಾಕ್ಟಿಕ್ ಆಮ್ಲ ಉತ್ಪಾದನೆಯಿಂದ ಸ್ನಾಯುಗಳಲ್ಲಿ ಸೆಳೆತ, ನೋವು ಮತ್ತು ಬಿಗಿತ, ಕೀಲುಗಳ ನೋವು ಪ್ರಾರಂಭವಾಗುತ್ತದೆ.
ಒಂದೇ ಕಡೆ ಕುಳಿತು ಕೆಲಸಗಳಲ್ಲಿ ನಿರತರಾಗುವ ಉದ್ಯೋಗಿಗಳಂತೂ ತೀವ್ರವಾದ ಬೆನ್ನು ನೋವು, ಭುಜದ ನೋವಿಗೆ ಒಳಗಾಗುತ್ತಾರೆ . ಬೆಳಗಿನ ನಡಿಗೆಯೂ ಕೆಲವೊಮ್ಮೆ ಲ್ಯಾಕ್ಟಿಕ್ ಆಮ್ಲ ಉತ್ಪಾದನೆಯಿಂದ ಮುಕ್ತಿ ನೀಡುವುದಿಲ್ಲ. ಹಾಗಂತ ಬೆಳಗಿನ ನಡಿಗೆ ವ್ಯಾಯಾಮಗಳನ್ನು ಬಿಟ್ಟುಬಿಡಿ ಎಂದು ಹೇಳುತ್ತಿಲ್ಲ. ಇದನ್ನು ಮುಂದುವರೆಸುವುದರಿಂದ ಸ್ನಾಯುಗಳ ಆರೋಗ್ಯ ಹಾಗೂ, ಚಯಾಪಚಯ ಪ್ರಕ್ರಿಯೆಯನ್ನು ಉತ್ತಮಗೊಳಿಸಬಹುದಾಗಿದೆ.
ಅಂತೆಯೇ, ದಿನಪೂರ್ತಿ ದೈಹಿಕವಾಗಿ ಚಟುವಟಿಕೆಯಿಂದ ಇರಲು ಹಾಗೂ ಆಗಾಗ್ಗೆ ನಿಮ್ಮ ಮೇಜಿನ ಸ್ಥಳದಿಂದ ಹೊರಬಂದು ನೀರು ಕುಡಿಯುವುದಕ್ಕೆ ಅಥವಾ ಅಲ್ಪ ವಿರಾಮ ತೆಗೆದುಕೊಳ್ಳುವುದಕ್ಕೆ ಅಡ್ಡಾಡುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕಿದೆ. ಅಥವಾ ಕುಳಿತಲ್ಲಿಯೇ ದೇಹದ ಭಾಗಗಳನ್ನು ಚಾಚುವ ಅಥವಾ ಸಣ್ಣ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಇದರೊಂದಿಗೆ ಊಟವಾದ ಬಳಿಕ 10 ನಿಮಿಷಗಳ ಕಾಲ ನಡೆಯುವುದೂ ಸಹ ಆರೋಗ್ಯಕ್ಕೆ ಒಳ್ಳೆಯದು.
ಇದರೊಂದಿಗೆ ನಿಂತುಕೊಂಡು ಕಾಲ್ಬೆರಳುಗಳನ್ನು ಮುಟ್ಟಲು ಯತ್ನಿಸುವ ವ್ಯಾಯಾಮವನ್ನು ದಿನಕ್ಕೆ ಒಮ್ಮೆಯಾದರೂ ಮಾಡುವುದು ಒಳಿತು. ಈ ರೀತಿ ಮಾಡುವುದರಿಂದ ದೇಹದಲ್ಲಿ ಲ್ಯಾಕ್ಟಿಕ್ ಆಸಿಡ್ ಉತ್ಪಾದನೆಯನ್ನು ಕಡಿಮೆ ಮಾಡಬಹುದಾಗಿದ್ದು ಈ ಮೂಲಕ ಕೀಲು ನೋವು, ಬಿಗಿತ ಮುಂತಾದ ಸಮಸ್ಯೆಗಳನ್ನು ದೂರಮಾಡಿಕೊಂಡು, ನಮ್ಮ ದೇಹವನ್ನು ಆರೋಗ್ಯದಿಂದ ಕಾಪಾಡಿಕೊಳ್ಳಬಹುದು .

ಕ್ಯಾರೆಟ್ ವರ್ಷ ವಿಡೀ ಸುಲಭವಾಗಿ ದೊರೆಯುತ್ತದೆ. ಇದರಲ್ಲಿ ಎ, ಸಿ ಮತ್ತು ಬಿ ವಿಟಮಿನ್ ಗಳಿವೆ . ಚಳಿಗಾಲ ಪ್ರಾರಂಭವಾದ ತಕ್ಷಣ ಕ್ಯಾರೆಟ್ ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇದು ಶಾಖಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ.
ಚಳಿಗಾಲ ಪ್ರಾರಂಭವಾದಾಗ ಪ್ರತಿದಿನ ಕ್ಯಾರೆಟ್ ಅಥವಾ ಅದರ ಜ್ಯೂಸ್ನನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದು
ಪ್ರತಿನಿತ್ಯ ಕ್ಯಾರೆಟ್ ತಿನ್ನುವುದರಿಂದ ವಸಡಿನ ರಕ್ತಸ್ರಾವವನ್ನು ನಿಲ್ಲಿಸಬಹುದು ಮತ್ತು ಇದರಿಂದ ನೀವು ಹೊಳೆಯುವ ಹಲ್ಲುಗಳನ್ನು ಪಡೆಯಬಹುದು.
ಪ್ರತಿದಿನ ಕ್ಯಾರೆಟ್ ತಿನ್ನುವುದರಿಂದ ಅಥವಾ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹೊಳೆಯುವ ಚರ್ಮ ನಿಮ್ಮದಾಗುತ್ತದೆ. ಏಕೆಂದರೆ ಕ್ಯಾರೆಟ್ ಟಾಕ್ಸಿನ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶಗಳು ಸಾಯುವುದನ್ನು ತಡೆಯುತ್ತದೆ. ಇದರಿಂದಾಗಿ ಚರ್ಮವು ಆರೋಗ್ಯಕರವಾಗಿರುತ್ತದೆ.
ಕ್ಯಾರೆಟ್ನಲ್ಲಿ ಶೇ. 10ರಷ್ಟು ಕಾರ್ಬೊಹೈಡ್ರೇಟ್ ಇದೆ. ಅಷ್ಟೇ ಅಲ್ಲದೇ ವಿಟಮಿನ್ ಎ, ಡಿ, ಇ, ಕೆ, ಪಿಪಿ, ಆಸ್ಕಾರ್ಬಿಕ್ ಆಸಿಡ್, ಸ್ಟೆರಾಲ್ ಮತ್ತು ಲೆಸಿತಿನ್ ಅಂಶವಿದೆ.
ಕ್ಯಾರೆಟ್ನಲ್ಲಿ ಫೈಬರ್ ಹೇರಳವಾಗಿದ್ದು, ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿದೆ. ಇದು ದೇಹದ ಜೀರ್ಣಕ್ರಿಯೆಯ ಆರೋಗ್ಯವನ್ನು ಕಾಪಾಡುತ್ತದೆ.
ಕ್ಯಾರೆಟ್‌ನಲ್ಲಿ ವಿಟಮಿನ್ ಎ ಅಧಿಕವಾಗಿರುವುದರಿಂದ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೃಷ್ಟಿ ಸುಧಾರಿಸುತ್ತದೆ.
ಕ್ಯಾರೆಟ್ ಜ್ಯೂಸ್‌ಗೆ ಸಕ್ಕರೆ ಮತ್ತು ಕಾಳುಮೆಣಸು ಬೆರೆಸಿ ಕುಡಿಯುವುದರಿಂದ ಕೆಮ್ಮು ಕಫ ನಿವಾರಣೆಯಾಗುತ್ತದೆ. ಕ್ಯಾರೆಟ್ ಸೇವನೆಯಿಂದ ಕೇವಲ ಕಣ್ಣಿನ ದೃಷ್ಟಿಗೆ ಮಾತ್ರವಲ್ಲ, ಮೆದುಳಿನ ಕ್ಷಮತೆ ಹೆಚ್ಚಿಸಲೂ ನೆರವಾಗುತ್ತದೆ. ವಯಸ್ಸಾದಂತೆ ಎದುರಾಗುವ ಸ್ಮರಣ ಶಕ್ತಿ ಕುಂದುವುದು, ಮರೆಗುಳಿತನ, ಅಲ್ಜೀಮರ್ಸ್ ಕಾಯಿಲೆ ಮೊದಲಾದವುಗಳು ಎದುರಾಗುವ ಸಾಧ್ಯತೆಯನ್ನು ತಗ್ಗಿಸಬಹುದು.

ಕಲ್ಪವೃಕ್ಷವೆಂದೇ ಕರೆಯಲಾಗುವ ತೆಂಗಿನ ಮರದ ಎಳನೀರು ಸರ್ವರೋಗಕ್ಕೂ ಮದ್ದಾಗಿದ್ದು, ಮನುಷ್ಯನ ದೇಹದ ಆಯಾಸವನ್ನು ದೂರಾಗಿಸಿ ಉಲ್ಲಾಸ ನೀಡುತ್ತದೆ. ನಿರ್ಜಲೀಕರಣ, ಅಜೀರ್ಣ, ಕಿಡ್ನಿಯಲ್ಲಿ ಕಲ್ಲು, ತಲೆನೋವುಗಳಂತಹ ನಾನಾ ರೋಗಗಳಿಗೆ ಎಳನೀರು ಸೇವನೆ ಉತ್ತಮ.
ಪ್ರತೀನಿತ್ಯ ಒಂದೊಂದು ಎಳನೀರು ಕುಡಿಯುವ ಅಭ್ಯಾಸವಿಟ್ಟುಕೊಂಡರೆ, ದೇಹಕ್ಕೆ ಎದುರಾಗುವ ಸಾಕಷ್ಟು ರೋಗಗಳಿಂದ ದೂರ ಇರಬಹುದು. ವರ್ಷದ ಎಲ್ಲಾ ದಿನಗಳಲ್ಲೂ ಸಿಗುವ ಎಳನೀರಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ.ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ.
ಎಳನೀರಿನಲ್ಲಿರುವ ವಿವಿಧ ಖನಿಜ, ಸಕ್ಕರೆ ಹಾಗೂ ಲವಣಾಂಶ ಅಗತ್ಯ ಪ್ರಮಾಣದಲ್ಲಿ ಇರುವುದರಿಂದಲೇ ಇದೊಂದು ಅಮೃತಪಾನವಾಗಿದೆ. ಇದು ಬೇಸಿಗೆಯಲ್ಲಿ ದೇಹದ ತಾಪವನ್ನು ನೇರವಾಗಿ ನೀಗಿಸಬಲ್ಲ ಎಳನೀರು ದೈವದತ್ತವಾದುದು.
ಸರ್ವರೋಗಕ್ಕೂ ಮದ್ದಾಗಿರುವ ಎಳನೀರಿನ ಕೆಲ ಉಪಯೋಗಗಳನ್ನು ಇಲ್ಲಿ ಇಲ್ಲಿವೆ. ಪ್ರತಿದಿನ ಎಳನೀರನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದಲ್ಲದೆ, ನಿಶಕ್ತಿ ಕಡಿಮೆಯಾಗಿ ನವ ಚೈತನ್ಯ ಇರುತ್ತದೆ. ಅಜೀರ್ಣ ಮತ್ತು ಹೊಟ್ಟೆಗೆ ಸಂಬಂದಿಸಿದ ಸಮಸ್ಯೆಗಳಿಗೆ ಎಳನೀರು ಒಳ್ಳೆಯ ಪರಿಣಾಮ ನೀಡುತ್ತದೆ.
ಪ್ರತಿದಿನ ಎಳನೀರು ಸೇವಿಸಿದರೆ ಅಜೀರ್ಣ ಸಮಸ್ಯೆ ಮತ್ತು ಹೊಟ್ಟೆ ನೋವು ನಿವಾರಣೆ ಆಗುತ್ತದೆ.ಎಳನೀರು ಚರ್ಮಕ್ಕೂ ಅಷ್ಟೇ ಉತ್ತಮ ಪರಿಹಾರಗಳನ್ನು ನೀಡುತ್ತದೆ, ಸುಕ್ಕುಗಟ್ಟಿದ ಚರ್ಮವನ್ನು ಎಳನೀರಿನಿಂದ ತೊಳೆದರೆ ಚರ್ಮದ ಸುಕ್ಕು ನಿವಾರಣೆಯಾಗುತ್ತದೆ.
ಎಳನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಮತ್ತು ಮಧುಮೇಹ ರೋಗಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.
ಎಳನೀರಿನಲ್ಲಿರುವ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಕೂದಲನ್ನು ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಮತ್ತು ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತವೆ. ಕೂದಲು ಉದುರುವುದು ಕಡಿಮೆಯಾಗಿ ಕೂದಲ ಹೊಳಪು ಹೆಚ್ಚುತ್ತದೆ.
ಮುಖದ ಮೇಲೆ ಹೊಳಪನ್ನು ಕಾಪಾಡಿಕೊಳ್ಳಲು ಎಳನೀರು ಸಹಾಯ ಮಾಡುತ್ತದೆ. ಎಳನೀರು ದೇಹಕ್ಕೆ ತೇವಾಂಶವನ್ನು ನೀಡುವುದರಿಂದ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿ, ಮೂತ್ರನಾಳದ ಸೋಂಕಿನಿಂದ ನಿಮಗೆ ರಕ್ಷಣೆಯನ್ನು ನೀಡುತ್ತದೆ.
