ಸಂಸ್ಕೃತ ಸಂಧಿಗಳು : ಸಂಸ್ಕೃತ ಸಂಧಿಗಳಲ್ಲಿ ಮುಖ್ಯವಾಗಿ 2 ಭೇದಗಳು. ಸಂಸ್ಕೃತ ಸ್ವರಸಂಧಿಗಳು & ಸಂಸ್ಕೃತ ವ್ಯಂಜನಸಂಧಿಗಳು.
ಸಂಸ್ಕೃತ ಸ್ವರಸಂಧಿಗಳು 1 ಸವರ್ಣ ಧೀರ್ಘ ಸಂಧಿ 2 ಗುಣ ಸಂಧಿ 3 ವೃದ್ಧಿ ಸಂಧಿ 4 ಯಣ್ ಸಂಧಿ
ಸಂಸ್ಕೃತ ವ್ಯಂಜನಸಂಧಿಗಳು 1.ಜಶ್ತ್ವ ಸಂಧಿ 2.ಶ್ಚುತ್ವ ಸಂಧಿ 3.ಅನುನಾಸಿಕಸಂಧಿ
ಸಂಸ್ಕೃತ ಸ್ವರಸಂಧಿಗಳು 1.ಸವರ್ಣದೀರ್ಘಸಂಧಿ : ಎರಡು ಪದಗಳು ಸೇರುವಾಗ ಪೂರ್ವಪದದ ಕಡೆಯಲ್ಲಿ ಅ ಆ ಇ ಈ ಉ ಊ ಸ್ವರಗಳಿದ್ದು ಉತ್ತರ ಪದದ ಆದಿಯಲ್ಲಿ ಅದೇ ಅಕ್ಷರ ಎದುರಾದ ಎರಡು ಸ್ವರಗಳು ಸೇರಿ ಒಂದೇ ದೀರ್ಘಸ್ವರ ಬರುವುದು. ಸಂಧಿಕಾರ್ಯದಲ್ಲಿ ಸವರ್ಣಸ್ವರಗಳು ಸೇರುವದರಿಂದ ಇದನ್ನು ಸವರ್ಣದೀರ್ಘಸಂಧಿ ಎಂದು ಕರೆಯುವರು
ಉದಾಹರಣೆ : ದೇವ + ಅಸುರ = ದೇವಾಸುರ (ಅ + ಅ) ಸುರ + ಅಸುರ = ಸುರಾಸುರ (ಅ + ಅ) ಮಹಾ + ಆತ್ಮಾ = ಮಹಾತ್ಮ (ಆ + ಆ) ಕವಿ + ಇಂದ್ರ = ಕವೀಂದ್ರ (ಇ + ಇ) ಗಿರಿ + ಈಶ = ಗಿರೀಶ (ಇ + ಈ) ಲಕ್ಷೀ + ಈಶ = ಲಕ್ಷೀಶ (ಈ + ಈ) ಗುರು + ಉಪದೇಶ = ಗರೂಪದೇಶ (ಉ + ಉ)
2. ಗುಣಸಂಧಿ : ಪೂರ್ವಪದದ ಕಡೆಯಲ್ಲಿರುವ ಅ ಅ ಕಾರಗಳ ಮುಂದೆ ಇ ಈ ಕಾರಗಳು ಬಂದರೆ ಏಕಾರವು , ಉ,ಊ ಕಾರಗಳ ಮುಂದೆ ಓ ಕಾರವು, ೠ ಕಾರವು ಬಂದರೆ ಅರ್ ಎಂಬುದೂ ಆದೇಶವಾಗಿ ಬರುತ್ತದೆ ಇದನ್ನು ಗುಣಸಂಧಿ ಎಂದು ಕರೆಯುವರು
3 ವೃದ್ಧಿಸಂಧಿ : ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು. ಉದಾಹರಣೆ : ಲೋಕ + ಏಕವೀರ = ಲೋಕೈಕವೀರ (ಅ + ಏ) ಜನ + ಐಕ್ಯ = ಜನೈಕ್ಯ (ಅ + ಐ) ವಿದ್ಯಾ + ಐಶ್ವರ‍್ಯ = ವಿದ್ಯೈಶ್ವರ‍್ಯ (ಆ + ಐ) ಜಲ + ಓಘ = ಜಲೌಘ (ಅ + ಓ) ಘನ + ಔದಾರ‍್ಯ = ಘನೌದಾರ‍್ಯ (ಅ + ಔ) ಮಹಾ + ಔದಾರ‍್ಯ = ಮಹೌದಾರ‍್ಯ (ಆ + ಔ) ಏಕ + ಏಕ = ಏಕೈಕ (ಅ + ಏ) ಅಷ್ಟ + ಐಶ್ವರ‍್ಯ = ಅಷ್ಟೈಶ್ವರ‍್ಯ (ಅ + ಐ) ವನ + ಓಷಧಿ = ವನೌಷಧಿ (ಅ + ಓ) ಮಹಾ + ಔನ್ನತ್ಯ = ಮಹೌನ್ನತ್ಯ (ಆ + ಔ)
4. ಯಣ್ ಸಂಧಿ: ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ ಕಾರ ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು. ಉದಾಹರಣೆ ಅತಿ + ಅಂತ = ಅತ್ಯಂತ (ಇ + ಅ = ಯ್‌ಅ) ಮನು + ಅಂತರ = ಮನ್ವಂತರ (ಉ + ಅ =ವ್‌ಅ) ಪಿತೃ + ಆರ್ಜಿತ =ಪಿತ್ರಾರ್ಜಿತ (ಋ + ಆ = ರ್‌ಆ) ಅತಿ + ಅವಸರ = ಅತ್ಯವಸರ (ಇ + ಅ) ಜಾತಿ + ಅತೀತ = ಜಾತ್ಯಾತೀತ (ಇ + ಅ) ಕೋಟಿ + ಅಧೀಷ = ಕೋಟ್ಯಧೀಶ (ಇ + ಅ) ಗತಿ + ಅಂತರ = ಗತ್ಯಂತರ (ಇ + ಅ) ಪ್ರತಿ + ಉತ್ತರ = ಪ್ರತ್ಯುತ್ತರ (ಇ + ಉ) ಪತಿ + ಅರ್ಥ = ಪತ್ಯರ್ಥ (ಇ + ಅ) ಅತಿ + ಆಶೆ = ಅತ್ಯಾಶೆ (ಇ + ಆ) ಗುರು + ಆಜ್ಞೆ = ಗುರ‍್ವಾಜ್ಞೆ (ಉ + ಆ)
ವ್ಯಂಜನ ಸಂಧಿಗಳು 1.ಜಶ್ತ್ವ ಸಂಧಿ : ಪೂರ್ವಪದದ ಕೊನೆಯಲ್ಲಿರುವ ವರ್ಗದ ಪ್ರಥಮಾಕ್ಷರಗಳಿಗೆ ಯಾವ ವರ್ಣ ( ಕ , ಚ , ಟ , ತ , ಪ ) ಎದುರಾದರೂ ಅದೇ ವರ್ಗದ ಮೂರನೇ ಅಕ್ಷರ ( ಗ , ಜ , ಡ , ದ , ಬ ) ಆದೇಶವಾಗಿ ಬಂದು ಜಶ್ತ್ವ ಸಂಧಿಯಾಗುವುದು. ಪ್ರತಿ ವರ್ಗದ ಮೂರನೇ ಅಕ್ಷರ ಎಂದರ್ಥ . ಉದಾಹರಣೆ : ದಿಕ್ + ಅಂತ = ದಿಗಂತ (ಕ್ + ಅ = ಗ್‌ಅ) ಅಚ್ + ಅಂತ = ಅಜಂತ (ಚ್ + ಅ = ಜ್‌ಅ) ಷಟ್ + ಆನನ =ಷಡಾನನ (ಟ್ + ಅ = ಡ್‌ಅ) ಸತ್ + ಆನಂದ =ಸದಾನಂದ (ತ್ + ಆ = ದ್‌ಆ) ಅಪ್ + ಧಿ = ಅಬ್ಧಿ (ಪ್ + ಧಿ = ಬ್‌ಧಿ)
2. ಶ್ಚುತ್ವ ಸಂಧಿ : ‘ ಶ್ಚು ‘ ಎಂದರೆ ಶಕಾರ ಚವರ್ಗಾಕ್ಷರಗಳು . ( ಶ್ = ಶಕಾರ , ಚು = ಚ ಛ ಜ ಝು ಇ ) ಈ ಆರು ಅಕ್ಷರಗಳೇ ‘ ಶ್ಚು ‘ ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ . ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು . ಉದಾಹರಣೆ : ಮನಸ್ +ಶುದ್ಧಿ = ಮನಶುದ್ಧಿ ( ಸಕಾರಕ್ಕೆ ಶಕಾರ ) ಯಶಸ್ + ಚಂದ್ರಿಕೆ = ಯಶಶ್ಚಂದ್ರಿಕೆ ( ಸಕಾರಕ್ಕೆ ಚಕಾರ ) ಸತ್ + ಚಿತ್ರ = ಸಚ್ಚಿತ್ರ ( ತಕಾರಕ್ಕೆ ಚಕಾರ ) ಬೃಹತ್ + ಛತ್ರ =ಬೃಹಕೃತ್ರ ( ತಕಾರಕ್ಕೆ ಛಕಾರ )
3 ಅನುನಾಸಿಕಸಂಧಿ : (೨೬) ವರ್ಗ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರ ಪರವಾದರೂ, ಅವುಗಳಿಗೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶಗಳಾಗಿ ಬರುತ್ತವೆ. ಉದಾಹರಣೆಗೆ:- ಷಟ್ + ಮಾಸ = ಷಣ್ಮಾಸ ಚಿತ್ + ಮಯ = ಚಿನ್ಮಯ ಸತ್ + ಮಣಿ = ಸನ್ಮಣಿ