ಸಮಾಸ ಎದರೇನು?
ಎರಡು ಅಥವಾ ಅನೇಕ ಪದಗಳು ಕೂಡಿ, ಒಂದು ಅರ್ಥವನ್ನು ಹೇಳುವಾಗ, ವಿಭಕ್ತಿ ಪ್ರತ್ಯಯಗಳು ಲೋಪವಾಗಿ, ಒಂದು ಪದ ಆಗುವುದನ್ನು ಸಮಾಸ ಎನ್ನಲಾಗುವುದು.
ಸಮಾಸ ಪದದಲ್ಲಿ ಮುಖ್ಯವಾಗಿ ಎರಡು ಪದಗಳಿರುತ್ತವೆ. ಮೊದಲು ಬರುವ ಪದ ಪೂರ್ವ ಪದ ಆಗಿರುತ್ತದೆ. ಆನಂತರದಲ್ಲಿ ಬರುವ ಪದ ಉತ್ತರ ಪದ ಆಗಿರುತ್ತದೆ. ಸಮಾಸ ಪದವನ್ನು ಬಿಡಿಸಿ ಬರೆದಾಗ ವಿಗ್ರಹ ವಾಕ್ಯ ಎನಿಸುವುದು.
 ಉದಾಹರಣೆ :
ಪೂರ್ವಪದ - ಉತ್ತರಪದ – ಸಮಾಸಪದ
ಮಳೆಯ + ಕಾಲ = ಮಳೆಗಾಲ
ಹಿರಿಯ + ಜೇನು = ಹೆಚ್ಚೇನು
ನೀಲವಾದ + ಉತ್ಪಲ = ನೀಲೋತ್ಪಲ
ದನಗಳೂ + ಕರುಗಳೂ = ದನಕರುಗಳೂ

 ಸಮಾಸ ಪದಗಳಾಗುವ ಬಗೆ,
1.ಎರಡು ಸಂಸ್ಕೃತ ಪದಗಳ ಸೇರ್ಪಡೆಯಿಂದ.
2.ಎರಡು ಕನ್ನಡ ಪದಗಳು ಪರಸ್ಪರ ಸೇರುವುದರಿಂದ.
3.ತದ್ಭವ-ತದ್ಭವ ಪದಗಳು ಕೂಡುವುದರಿಂದ.
4.ಕನ್ನಡ ಪದದೊಂದಿಗೆ ತದ್ಭವ ಪದವು ಸೇರಿದಾಗ.

 ಸಮಾಸದಲ್ಲಿ ವಿಧಗಳು
1.ತತ್ಪುರುಷ ಸಮಾಸ
2.ಕರ್ಮಧಾರಯ ಸಮಾಸ
3,ಬಹುವ್ರೀಹಿ ಸಮಾಸ
4.ಕ್ರಿಯಾ ಸಮಾಸ
5.ಅಂಶಿಸಮಾಸ
6.ದ್ವಿಗುಸಮಾಸ
7.ದ್ವಂದ್ವಸಮಾಸ
8.ಗಮಕ ಸಮಾಸ

1. ತತ್ಪುರುಷ ಸಮಾಸ-
ಎರಡು ನಾಮ ಪದಗಳು ಸೇರಿದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ, ತತ್ಪುರುಷ ಸಮಾಸ ಆಗುವುದು.
ಉದಾಹರಣೆ:
ಉತ್ತಮರಲ್ಲಿ + ಉತ್ತಮ = ಉತ್ತಮೋತ್ತಮ
ದೇವರ + ಮಂದಿರ = ದೇವಮಂದಿರ
ಕಣ್ಣಿನಿಂದ + ಕುರುಡ = ಕಣ್ಣುಕುರುಡ
ಬೆಟ್ಟದ + ತಾವರೆ = ಬೆಟ್ಟದಾವರೆ
ವ್ಯಾಘ್ರದ ದೆಸೆಯಿಂದ + ಭಯ = ವ್ಯಾಘ್ರಭಯ
ಇಂದ್ರನ + ಲೋಕ = ಇಂದ್ರಲೋಕ

2. ಕರ್ಮಧಾರಯ ಸಮಾಸ-
ಪೂರ್ವ ಹಾಗೂ ಉತ್ತರ ಪದಗಳು ಲಿಂಗವಚನ, ವಿಭಕ್ತಿಗಳಿಂದ ಸಮಾಸವಾಗಿರುತ್ತದೆ. ವಿಶೇಷಣ-ವಿಶೇಷ ಸಂಬಂಧದಿಂದ ಕೂಡಿರುತ್ತದೆ. ಇದನ್ನೇ ಕರ್ಮಧಾರಯ ಸಮಾಸ ಎನ್ನಲಾಗುವುದು.
ಉದಾಹರಣೆ :
ಕೆಂಪಾದ + ತಾವರೆ = ಕೆಂದಾವರೆ
ನೀಲವಾದ + ಸಮುದ್ರ = ನೀಲ ಸಮುದ್ರ
ಚಿಕ್ಕದು + ಮಗು = ಚಿಕ್ಕಮಗು
ಹಿರಿದಾದ + ಮರ = ಹೆಮ್ಮರ
ಇನಿದು + ಸರ = ಇಂಚರ

3. ಬಹುವ್ರೀಹಿ ಸಮಾಸ –
ಎರಡು ಇಲ್ಲವೇ ಅನೇಕ ಪದಗಳು ಕೂಡಿಕೊಂಡು ಸಮಾಸ ಆದಾಗ ಬೇರೊಂದು ಅರ್ಥದ ಪದವು ಪ್ರಧಾನವಾಗಿ ಬಂದರೆ, ಅಂತಹ ಸಮಾಸವನ್ನು ಬಹುವ್ರೀಹಿ ಸಮಾಸ ಎನ್ನುವರು.
ಉದಾಹರಣೆ:
ಹಣೆಯಲ್ಲಿ ಕಣ್ಣು ಉಳ್ಳವನು ಅವನು ಹಣೆಗಣ್ಣ (ಈಶ್ವರ)
ಪೀತವಾದ ಅಂಬರವನ್ನು ಯಾರು ಧರಿಸಿರುವರೋ ಅವರು ಪೀತಾಂಬರಿ (ವಿಷ್ಣು)
ಚಕ್ರವನ್ನು = ಪಾಣಿಯಲ್ಲಿ ಯಾರು ಧರಿಸಿರುವರೋ ಅವರು ಚಕ್ರಪಾಣಿ (ವಿಷ್ಣು)
ಪೂರ್ವ- ಉತ್ತರ ಪದಗಳೆರಡೂ ಒಂದೇ ವಿಭಕ್ತಿಯಲ್ಲಿ ಇರುತ್ತವೆ.

4. ಕ್ರಿಯಾಸಮಾಸ-
ಪೂರ್ವ ಪದವು ಸಾಮಾನ್ಯವಾಗಿ ದ್ವಿತೀಯಾ ವಿಭಕ್ತಿಯಲ್ಲಿದ್ದು ಉತ್ತರ ಪದವು ಕ್ರಿಯಾಪದ ಆಗಿದ್ದರೆ, ಅಂತಹ ಸಮಾಸವು ಕ್ರಿಯಾಸಮಾಸ ಎನಿಸುವುದು.
ಉದಾಹರಣೆ :
ಕೈಯನ್ನು + ಹಿಡಿದು = ಕೈಹಿಡಿದು
ಮೈಯನ್ನು + ತೊಳೆದು = ಮೈತೊಳೆದು
ಆಟವನ್ನು + ಅಡಿ = ಆಟವಾಡಿ
ಪೂಜೆಯನ್ನು + ಮುಗಿಸಿ = ಪೂಜೆಮುಗಿಸಿ
ಕಣ್ಣಿನಿಂದ + ಕೆಡು = ಕಂಗೆಡು

5.ಅಂಶಿಸಮಾಸ
ಅವ್ಯಯ ಮತ್ತು ನಾಮಪದಗಳು ಒಟ್ಟಿಗೆ ಸೇರಿ ಬಂದಾಗ ಅಂಶಿಸಮಾಸ ಆಗುವುದು :ತಲೆಯಮುಂದು ಮುಂದಲೆಕಾಲಿನ ಹಿಂದುಹಿಂಗಾಲು ತಲೆಯಹಿಂದು ಹಿಂದಲೆನೋಟದ ಮುಂದುಮುನ್ನೋಟ ಅಂಶಿ ಅಂದರೆ ಭಾಗಶಃ ಎಂದು ಅರ್ಥಆಗುತ್ತದೆ ಮೇಲಿನ ಉದಾಹರಣೆಗಳು ಈರೀತಿಯ ಭಾಗಗಳು ಸೇರಿಪೂರ್ಣ ಪದ ಎನಿಸಿವೆ.

6.ದ್ವಿಗುಸಮಾಸ
ಪೂರ್ವಪದವು ಸಂಖ್ಯಾವಾಚಕವೂ ಉತ್ತರಪದವು ನಾಮಪದವೂ ಆಗಿದ್ದರೆ ಪರಸ್ಪರ ಸೇರ್ಪಡೆ ಆಗಿದ್ದರೆ ದ್ವಿಗುಸಮಾಸ ಎನಿಸುವುದು. ಉದಾಹರಣೆ:
ಎರಡು + ಮಡಿ = ಇಮ್ಮಡಿ
ಹತ್ತು + ರೂಪಾಯಿಗಳು = ಹತ್ತುರೂಪಾಯಿಗಳು
ದಶ + ದಿಸೆಗಳು = ದಶದಿಸೆಗಳು
ಸಪ್ತ + ಸಮುದ್ರಗಳು = ಸಪ್ತಸಮುದ್ರಗಳು
ಮೂರು + ಗಾವುದ = ಮೂರು ಗಾವುದ

7. ದ್ವಂದ್ವ ಸಮಾಸ
ಪೂರ್ವ-ಉತ್ತರ ಪದಗಳೆರಡೂ ಸಮಾಸ ಆಗುವಾಗ ಪ್ರಮುಖ ಎನಿಸಿದ್ದರೆ, ಅಂತಹ ಸಮಾಸವನ್ನು ದ್ವಂದ್ವ ಸಮಾಸ ಎನ್ನುವರು. ಉದಾಹರಣೆ :
ಆನೆಗಳೂ, ಕುದುರೆಗಳೂ, ಒಂಟೆಗಳೂ = ಆನೆ ಕುದುರೆ ಒಂಟೆಗಳು
ಕೆರೆಗಳೂ, ಕಟ್ಟೆಗಳೂ, ಬಾವಿಗಳೂ = ಕೆರೆ ಕಟ್ಟೆ ಬಾವಿಗಳು
ಮರವೂ, ಗಿಡವೂ, ಬಳ್ಳಿಯೂ = ಮರ ಗಿಡ ಬಳ್ಳಿಗಳು
ಸೂರ್ಯನೂ, ಚಂದ್ರನೂ, ನಕ್ಷತ್ರವೂ = ಸೂರ್ಯ ಚಂದ್ರ ನಕ್ಷತ್ರಗಳೂ

8. ಗಮಕ ಸಮಾಸ
ಪೂರ್ವಪದವು ಸರ್ವನಾಮವೋ, ಕೃದಂತವೋ ಆಗಿದ್ದು, ಉತ್ತರ ಪದ ನಾಮಪದವೆನಿಸಿದ್ದು, ಎರಡೂ ಪದಗಳ ಸೇರ್ಪಡೆ ಆಗಿದ್ದರೆ, ಅಂತಹ ಸಮಾಸವು ಗಮಕ ಸಮಾಸ ಎನಿಸುವುದು.
ಉದಾಹರಣೆ:
ಅದು + ಮನೆ = ಆ ಮನೆ
ಇದು + ಹಣ್ಣು = ಈ ಹಣ್ಣು
ಇವನು + ಹುಡುಗ = ಈ ಹುಡುಗ
ಅವರು + ಸಹೋದರರು = ಆ ಸಹೋದರರು
ಇವು + ಪುಸ್ತಕಗಳು = ಈ ಪುಸ್ತಕಗಳು
ಅವನು + ಮನುಷ್ಯ = ಆ ಮನುಷ್ಯ

8ಅ. ಅರಿ ಸಮಾಸ: ಈ ಎರಡೂ ಸಮಾಸಗಳಲ್ಲದೆ ಅರಿ ಸಮಾಸ ಎಂಬ ಇನ್ನೂ ಒಂದು ಭೇದ ಉಂಟು. ಕನ್ನಡ ಪದದೊಂದಿಗೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಿದಾಗ, ಅರಿಸಮಾಸ ಆಗುವುದು.
ಉದಾಹರಣೆ:
ಕನ್ನಡಪದ + ಸಂಸ್ಕೃತಪದ = ಅರಿ ಸಮಾಸ
ಮಳೆಯ + ಕಾಲ = ಮಳೆಗಾಲ
ತುರಗದ + ದಳ = ತುರಗದಳ
ದಳದ + ಪತಿ = ದಳಪತಿ
Please enable JavaScript in your browser to complete this form.
Full Name
Scroll to Top