ಕನ್ನಡ ಭಾಷೆಯಲ್ಲಿ ಬಳಕೆಯಾಗುತ್ತಿರುವ ಪದಗಳಲ್ಲಿ ಯಾವ ಪದಗಳು ಸಂಸ್ಕೃತದಿಂದ ನೇರವಾಗಿ ಬಂದಿವೆಯೋ ಅಂತಹ ಪದಗಳನ್ನು ' ತತ್ಸಮ ' ಗಳೆಂದು ಕರೆಯುತ್ತಾರೆ .
ಕನ್ನಡ ಭಾಷೆಗೆ ಬಳಕೆಯಾಗುತ್ತಿರುವ ಪದಗಳು ಸಂಸ್ಕೃತದಿಂದ ಬಂದು ಅಲ್ಪ ಸ್ವಲ್ಪ ಬದಲಾವಣೆಯಿಂದ ಉಂಟಾದ ಪದಗಳನ್ನು ' ತದ್ಭವ ' ಗಳೆಂದು ಕರೆಯುತ್ತಾರೆ .
ತತ್ಸಮ - ತದ್ಬವ : ಉದಾಹರಣೆಗಳು
| ಸ್ವರ್ಗ - ಸಗ್ಗ | ಆಶ್ಚರ್ಯ - ಅಚ್ಚರಿ |
|---|---|
| ರತ್ನ - ರತುನ | ಶಯ್ಯಾ - ಸಜ್ಜೆ |
| ಸಾಹಸ - ಸಾಸ | ಭ್ರಮೆ - ಬೆಮೆ |
| ಕಾರ್ಯ - ಕಜ್ಜ | ಪ್ರಯಾಣ - ಪಯಣ |
| ಸ್ನೇಹ - ನೇಹ | ಪುಸ್ತಕ - ಹೊತ್ತಿಗೆ |
| ವಿಧಿ - ಬಿದಿ | ಪ್ರತಿ - ಪಡಿ |
| ಸಂಧ್ಯಾ - ಸಂಜೆ | ಆಕಾಶ - ಆಗಸ |
| ಬ್ರಹ್ಮ - ಬೊಮ್ಮ | ರಾಕ್ಷಸ - ರಕ್ಕಸ |
| ಮುಖ - ಮೊಗ | ಮೃತ್ಯು - ಮಿತ್ತು |
| ಬೀದಿ - ವೀದಿ | ಅದ್ಭುತ - ಅದುಬುತ |
| ಮುಸುಳಿದ - ಮುಬ್ಬಾದ | ಮಂಟಪ - ಮಂಡಪ |
| ಅಪ್ಪಣೆ - ಅಣತಿ | ಶೃಂಗಾರ - ಸಿಂಗಾರ |
| ಮತ್ಸರ - ಮಚ್ಚರ | ವರ್ಷ - ವರುಷ |
| ಪುಸ್ತಕ - ಹೊತ್ತಿಗೆ | ಪೃಥ್ವಿ - ಪೊಡವಿ |
|---|---|
| ಧ್ವನಿ - ದನಿ | ವನ - ಬನ |
| ಲಕ್ಷ್ಮಿ - ಲಕುಮಿ | ಸ್ಫಟಿಕ - ಪಟಿಕ |
| ಕ್ರೌಂಚೆ - ಕೊಂಚೆ | ಸ್ಫಟಿಕ - ಪಟಿಕ |
| ತಟ - ದಡ | ಪಲ್ಲಯಣ - ಹಲ್ಲಣ |
| ಹಂಸ - ಅಂಚೆ | ಆಕಾಶ - ಆಗಸ |
| ವಿದ್ಯಾ - ಬಿಜ್ಜೆ | ವೇದ - ಬೇದ |
| ತಪಸ್ವಿ - ತವಸಿ | ದಾಳಿಂಬೆ - ದಾಳಿಂಬ |
| ನಿತ್ಯ - ನಿಚ್ಚ | ದಂಷ್ರ್ಟಾ - ದಾಡೆ |
| ನಾಯಿ - ಗಾವಸಿಂಗ (ಗ್ರಾಮಸಿಂಗ) | ಶಿಲಾ - ಸಿಲೆ |
| ಚೀರಾ (ವಸ್ತ್ರ )- ಸೀರೆ | ಪರ್ವ - ಹಬ್ಬ |
| ಘೋಷಣೆ - ಗೋಸನೆ | ಶಿರಿ - ಸಿರಿ |
| ಮುಗ್ದೆ - ಮುಗುದೆ | . |
