ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :
1. ಪುಟ್ಟಜ್ಜಿಯ ಬಳಿ ಹುಡುಗ ಯಾವ ಕತೆ ಹೇಳಬೇಕೆಂದು ಕೇಳಿದ ?
ಪುಟ್ಟಜ್ಜಿಯ ಬಳಿ ಹುಡುಗ ಯಾವುದಾದರೂ ಒಂದು ಹಾಡ್ಗತೆ ಹೇಳಬೇಕೆಂದು ಕೇಳಿದ.

2. ಯುವಕ ಮನೆಯ ಮುಂದೆ ಏನು ಮಾಡಿದ ?
ಯುವಕ ಮನೆಯ ಮುಂದೆ ತೋಟ ಮಾಡಿದ .

3. ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು ?
ಜಿಂಕೆಯ ಕುತ್ತಿಗೆಯಲ್ಲಿ ಒಂದು ಗೆಜ್ಜೆ ಇತ್ತು.

4 , ಹುಲಿ ಸೋತು ಏನು ಮಾಡಿತು ?
ಹುಲಿ ಸೋತು ಪಲಾಯನ ಮಾಡಿತು.

5 , ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿ ಏನು ಮಾಡಿತು ?
ಯುವತಿ ಕರೆದುಕೊಂಡು ಹೋಗುತ್ತೇನೆ ಎಂದಾಗ ಚುಕ್ಕಿಯು ಯುವಕನ ಮನೆಯೊಳಗೆ ಅವಿತುಕೊಂಡಿತು.
6. ಹಳ್ಳದ ದಂಡೆಯ ಮೇಲಿನ ಊರು ಏನಾಯಿತು ?
ಹಳ್ಳದ ದಂಡೆಯ ಮೇಲಿನ ಊರು ಬೆಳೆಯಿತು.

ಆ . ಕೆಳಗೆ ನೀಡಿರುವ ಪ್ರಶ್ನೆಗಳಿಗೆ ಎರಡು / ಮಾರು ವಾಕ್ಯಗಳಲ್ಲಿ ಉತ್ತರಿಸಿರಿ :
1. ಹಳ್ಳ ಹರಿದು ಊರ ಜನರನ್ನು ಏನು ಮಾಡಿದೆ?
ಹಳ್ಳವು ಹರಿದು ಊರ ಜನರನ್ನು ರಕ್ಷಿಸುತ್ತಿದೆ. ಜನರಿಗೆ ಬೇಕಾದ ನೀರಿನ ಸೌಕರ್ಯ ಆ ಹಳ್ಳದಿಂದ ಸಿಗುತ್ತಿದೆ. ಹಾಗೆ ಹಳ್ಳವು ಊರಿಗೆ ಸೊಬಗನ್ನು ನೀಡಿದೆ.

2. ಯುವಕ ಹಳ್ಳದ ಬಳಿಗೆ ಬಂದು ಏನು ಮಾಡಿದ?
ಯುವಕ ಹಳ್ಳದ ಬಳಿಗೆ ಬಂದು ಅಲ್ಲಿಯ ಸೊಬಗಿನ ದೃಶ್ಯವನ್ನು ಕಂಡು ಆಕರ್ಷಿತನಾಗಿ. ಜಾಗ ತುಂಬಾ ಚೆನ್ನಾಗಿದೆ ಎಂದುಕೊಂಡು ಅಲ್ಲಿಯೇ ಉಳಿಯುವ ಯೋಚನೆ ಮಾಡಿ ಮನೆಯನ್ನು ಕಟ್ಟಿದ. ನಂತರ ಮನೆಯ ಮುಂದೆ ತೋಟವನ್ನು ಮಾಡಿದ.

3. ಹುಲಿ ಮತ್ತು ಯುವಕನ ನಡುವೆ ನಡೆದ ಸಂಭಾಷಣೆ ಏನು ? ಹುಲಿ ಯುವಕನಿಗೆ ಈ ಜಿಂಕೆ ನನ್ನ ಆಹಾರ, ಅದನ್ನು ನೀನು ರಕ್ಷಿಸುವಂತಿಲ್ಲ, ಹಾಗೆ ಮಾಡಿದರೆ ಅರಣ್ಯ ನಿಯಮಕ್ಕೆ ವಿರೋಧವಾಗುತ್ತದೆ. ಆದುದರಿಂದ ಜಿಂಕೆಯನ್ನು ಬಿಟ್ಟುಕೊಡು ಎಂದಾಗ ಯುವಕನು, ಈ ಜಿಂಕೆ ಅರಣ್ಯದ ಜಿಂಕೆಯಲ್ಲ , ಅದನ್ನು ಯಾರೋ ಸಾಕಿದ್ದಾರೆ. ಅದರ ಗುರುತಿಗಾಗಿ ಜಿಂಕೆಯ ಕುತ್ತಿಗೆಯಲ್ಲಿ ಗೆಜ್ಜೆಯನ್ನು ಕಟ್ಟಿದ್ದಾರೆ . ಇದನ್ನು ತಿನ್ನಲು ನಿನಗೆ ಅಧಿಕಾರವಿಲ್ಲ . ನಾನು ಈ ಜಿಂಕೆಯನ್ನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದನು .

4. ಜಿಂಕೆಯನ್ನು ನೋಡಿದ ಯುವತಿ ಏನು ಮಾಡಿದಳು ?
ಜಿಂಕೆಯನ್ನು ನೋಡಿದ ಯುವತಿ ಓಡಿ ಬಂದು ಜಿಂಕೆಯನ್ನು ತಬ್ಬಿಕೊಂಡಳು, ಜಿಂಕೆ ಅವಳ ಕೈಯನ್ನು ನೆಕ್ಕುತ್ತದೆ. ಮೈಗೆ ಮೈ ತಾಗಿಸಿ ತಿಕ್ಕುತ್ತದೆ. ಯುವತಿ ಜಿಂಕೆ ಮುಖಕ್ಕೆ ಮುಖ ತಾಗಿಸಿ ಅಳುತ್ತಿದ್ದಾಳೆ. ಹೀಗೆ ಜಿಂಕೆ ಮತ್ತು ಯುವತಿ ತಮ್ಮ ಸಂತೋಷವನ್ನು ಹಂಚಿಕೊಳ್ಳುತ್ತಿದ್ದರು .

5. ಯುವಕ ಚುಕ್ಕಿಯ ಬಗೆಗೆ ಯುವತಿಗೆ ಏನು ಹೇಳಿದ ?
ಯುವಕ ತಾನು ಚುಕ್ಕಿಯನ್ನು ಹುಲಿಯ ಕೈಯಿಂದ ಹೇಗೆ ಪಾರು ಮಾಡಿದ ಕತೆಯನ್ನು ಹೇಳಿದ . ಹುಲಿಗೂ ತನಗೂ ಆದ ಹೋರಾಟದ ಗಾಯದ ಗುರುತುಗಳನ್ನು ತೋರಿಸಿದ . ಕಾಡಿನಲ್ಲಿ ಜಿಂಕೆಗೆ ಮದ್ದು ಮಾಡಿದ ರೀತಿಯನ್ನು ತಿಳಿಸಿದ.

ಇ , ಕೆಳಗೆ ನೀಡಿರುವ ವಾಕ್ಯಗಳನ್ನು ಯಾರು ? ಯಾರಿಗೆ ಹೇಳಿದರು ಎಂಬುದನ್ನು ಬರೆಯಿರಿ
1.” ಯಾವುದಾದರೊಂದು ಹಾಡ್ಗತೆ ಹೇಳು ”
ಈ ವಾಕ್ಯವನ್ನು ಹುಡುಗನು ಪುಟ್ಟಜ್ಜಿಗೆ ಹೇಳಿದನು.

2.” ಏಯ್ ಯುವಕ ಈ ಜಿಂಕೆ ನನ್ನ ಆಹಾರ ” .
ಈ ಮಾತನ್ನು ಹುಲಿಯು ಯುವಕನಿಗೆ ಹೇಳಿತು .

3 , ” ಇದು ನಾವು ಸಾಕಿಕೊಂಡ ಜಿಂಕೆ ” .
ಈ ಮಾತನ್ನು ಯುವತಿಯು ಯುವಕನಿಗೆ ಹೇಳಿದಳು .

4 , ” ನಾನು ಚುಕ್ಕಿಯನ್ನು ಬಿಟ್ಟು ಇರಲಾರೆ ”
ಈ ಮಾತನ್ನು ಯುವತಿಯು ಯುವಕನಿಗೆ ಹೇಳಿದಳು .

ಉ . ಕೆಳಗೆ ನೀಡಿರುವ ಸೂಚನೆಯಂತೆ ಉತ್ತರ ಬರೆಯಿರಿ
1. ಈ ಪಾಠದಲ್ಲಿ ಬಂದಿರುವ ಪ್ರಾಣಿಗಳ ಹೆಸರನ್ನು ಪಟ್ಟಿಮಾಡಿ.
ಹುಲಿ , ಚಿರತೆ , ಕಾಡುಕೋಣ , ಆನೆ , ಜಿಂಕೆ.

2. ಈ ಪಾಠದಲ್ಲಿ ಬಂದಿರುವ ವ್ಯಕ್ತಿಗಳ ಹೆಸರನ್ನು ಪಟ್ಟಿಮಾಡಿ.
ಪುಟ್ಟಜಿ ಹುಡುಗ , ಯುವಕ , ಯುವತಿ , ಹುಡುಗ , ಹುಡುಗಿ.

3. ಅಜ್ಜಿ ಮತ್ತು ಕತೆ ಕೇಳುವ ಹುಡುಗನ ಸಂಭಾಷಣೆ ಬರೆಯಿರಿ.
ಹುಡುಗ : ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳುತ್ತೀಯಾ ?
ಅಜ್ಜಿ : ಬಾ, ಮಗ ಹೇಳೀನಿ , ಒಂದೊಳ್ಳೆ ಕತೆ ಹೇಳುತ್ತೇನೆ.
ಹುಡುಗ : ( ಅಜ್ಜಿ ಮನೆ ಜಗುಲಿಯ ಕಂಬಕ್ಕೆ ಒರಗಿ ಕತೆ ಕೇಳಲು ಕುಳಿತುಕೊಳ್ಳುವನು )
ಅಜ್ಜಿ : ಯಾವ ಕತೆ ಹೇಳಲಿ ?
ಹುಡುಗ : ಯಾವುದಾದರೂ ಒಂದು ಹಾಡ್ಗತೆ ಹೇಳು.
ಅಜ್ಜಿ : ಪುಟ್ಟದೊಂದು ಊರ ಹೊರಗೆ ಒಂದು ಹಳ್ಳ ಹರಿದಿದೆ. ಎಂದು ಅಜ್ಜಿ ಕತೆ ಹೇಳಲು ಪ್ರಾಂಭಿಸುವಳು.

2. ಯುವಕ ಮತ್ತು ಯುವತಿಯ ನಡುವೆ ನಡೆದ ಸಂಭಾಷಣೆಯನ್ನು ಬರೆಯಿರಿ.
ಆ ಯುವತಿ ಈ ಯುವಕನನ್ನು ನೋಡಿದಾಗ ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ .ನಂತರ ಇವರ ನಡುವೆ ಸಂಭಾಷಣೆ ನಡೆಯುತ್ತದೆ.
ಯುವತಿ : ಇದು ನಾವು ಸಾಕಿಕೊಂಡ ಜಿಂಕೆ...ಇದರ ಮೇಲಿನ ಚುಕ್ಕೆಯ ಗುರುತಿಗೆ ನಾವು ಇದಕ್ಕೆ ಚುಕ್ಕಿ ಎಂದು ಕರೆಯುತ್ತೇವೆ. ಇದು ಕೆಲ ದಿನಗಳ ಹಿಂದೆ ಕಾಡಿಗೆ ಬಂದುಬಿಟ್ಟಿತು.. ಇದನ್ನು ಒಂದು ಹುಲಿ ಅಟ್ಟಿಸಿಕೊಂಡು ಬಂದುದನ್ನು ಕೆಲ ಹಳ್ಳಿ ಜನರು ನೋಡಿದರು . ಆಗ ನಾವು ಚುಕ್ಕಿಯ ಕತೆ ಮುಗಿಯಿತು ಎಂದುಕೊಂಡಿದ್ದೆವು . ಆದರೆ ನನಗೆ ನಂಬಿಕೆ ಇತ್ತು... ಚುಕ್ಕಿ ಬದುಕಿದೆ ಎಂದು...ನಾನು ಅವತ್ತಿನಿಂದ ಹುಡುಕುತ್ತಿದ್ದೆ ಇಂದು ಇದು ನನಗೆ ಸಿಕ್ಕಿದೆ.
ಯುವಕ : ಒಂದು ದಿನ ಈ ಜಿಂಕೆ ಹುಲಿಯಿಂದ ತಪ್ಪಿಸಿಕೊಂಡ ಓಡಿ ಬಂತು …. ತುಂಬಾ ಗಾಬರಿಯಾಗಿತ್ತು . ನಂತರ ಹಿಂದೆಯೇ ಹುಲಿ ಬಂದಿತು. ಆಗ ಹುಲಿಗೂ ನನಗೂ ಆದ ಹೋರಾಟದಲ್ಲಿ ತನಗಾದ ಗಾಯ ತೋರಿಸಿದನು. ಮತ್ತು ಹುಲಿಗೆ ಕಾಡಿನಲ್ಲಿ ಮದ್ದು ಮಾಡಿದ್ದನ್ನು ಹೇಳಿದನು. ಅಂದಿನಿಂದ ಇದನ್ನು ನಾನೇ ಸಾಕುತ್ತಿದ್ದೇನೆ.
ಯುವತಿ : ಇದು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿಯೇ ಬೆಳೆದು ಬಿಟ್ಟಿದೆ. ನಾನು ಇದನ್ನು ಬಿಟ್ಟು ಇರಲಾರೆ. ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ.
ಯುವಕ : ನಾನೂ ಸಹ ಅದನ್ನು ಬಿಟ್ಟು ಇರಲಾರೆ. ಹುಲಿಯ ಬಾಯಿಂದ ಕಾಪಾಡಿದ್ದೇನೆ . ಈಗ ಕೊಡಲಾರೆ.
ಯುವತಿ : ಹಾಗಾದರೆ ನಾನೂ ಇಲ್ಲಿಯೇ ಇರುತ್ತೇನೆ ಎಂದು ಮನೆಯೊಳಗೆ ಹೋಗಿ ಚುಕ್ಕಿಯನ್ನು ಅಪ್ಪಿಕೊಂಡಳು.

ಊ.ಕೆಳಗಿನ ಪದಗಳಿಗೆ ಅರ್ಥ ಬರೆಯಿರಿ :
( ಪೊರೆ , ಪ್ರಾಣಿಗಿಂಡಿ , ಭಯ , ತೊಗಟೆ , ಮದ್ದು , ಯಾವತ್ತಾರೆ )
ಪೊರೆ = ರಕ್ಷಿಸು , ಸಲಹು ಕಾಪಾಡು . ಪ್ರಾಣಿಗಿಂಡಿ = ಕಾಡಿನಲ್ಲಿರುವ ಪ್ರಾಣಿಗಳು ನೀರನ್ನು ಕುಡಿಯುವುದಕ್ಕಾಗಿ ಹೋಗಲು ಮಾಡಿಕೊಂಡ ಕಿಂಡಿ.
ಭಯ = ಹೆದರಿಕೆ , ಅಂಜಿಕೆ
ತೊಗಟೆ = ಮರದ ಸಿಪ್ಪೆ ” .
ಮದ್ದು = ಔಷಧಿ
ಯವತ್ತಾರ = ಯಾವತ್ತಾದರೂ, ಇನ್ನೊಂದು ದಿನ.

ಋ. ಹೊಂದಿಸಿ ಬರೆಯಿರಿ :
ಅ ಆ 1. ಪುಟ್ಟಜ್ಜಿ - ಹುಲಿಗೂ – ಯುವಕನಿನಿಗೂ ( 6 )
2.ಕಾಡು – ಜಿಂಕೆ ( 2 )
3. ಚುಕ್ಕಿ – ಸೊಪ್ಪುಸದೆ , ಬೇರು , ತೊಗಟೆ ( 4 )
4. ಮದ್ದು – ಕತೆ ( 1 )
5. ಹಳ್ಳದ ದಂಡೆ – ಹುಲಿ , ಚಿರತೆ , ಕಾಡುಕೋಣ ( 5 )
6. ಜಗಳ – ಊರು ಬೆಳೆಯಿತು( 5 )

‘ ಅ ‘ ಮತ್ತು ‘ ಆ ‘ ಪಟ್ಟಿಯ ಪದಗಳನ್ನು ಹೊಂದಿಸಿ ನಂತರ ಅವುಗಳನ್ನು ಸೇರಿಸಿ ವಾಕ್ಯಗಳನ್ನು ರಚಿಸಿರಿ.
1. ಪುಟ್ಟಜ್ಜಿ ಕತೆಯನ್ನು ಹೇಳಿದಳು.
2. ಕಾಡಿನಲ್ಲಿ ಹುಲಿ , ಚಿರತೆ , ಕಾಡುಕೋಣಗಳು ವಾಸಿಸುತ್ತವೆ.
3. ಚುಕ್ಕಿ ಎಂಬುವುದು ಜಿಂಕೆಯ ಹೆಸರು.
4. ಮದ್ದು ಮಾಡಲು ಸೊಪ್ಪು , ಸದೆ , ಬೇರು , ತೊಗಟೆಗಳನ್ನು ಉಪಯೋಗಿಸಿದರು.
5. ಹಳ್ಳದ ದಂಡೆಯಲ್ಲಿ ಒಂದು ಊರು ಬೆಳೆಯಿತು.
6. ಜಗಳ ಹುಲಿಗೂ ಯುವಕನಿಗೂ ಮಧ್ಯೆ ನಡೆಯಿತು.

ಭಾಷಾಭ್ಯಾಸ
ಅ . ಕೆಳಗೆ ಕೆಲವು ಜೀವಿಗಳ ಹೆಸರುಗಳನ್ನು ನೀಡಲಾಗಿದೆ. ಇವುಗಳನ್ನು ಸಾಕುಪ್ರಾಣಿಗಳು ಮತ್ತು ಕಾಡುಪ್ರಾಣಿಗಳು ಎಂದು ವಿಂಗಡಿಸಿ ಪ್ರತೇಕ ಮಾಡಿರಿ.
( ಹುಲಿ , ಕತ್ತೆ , ಎಮ್ಮೆ , ಆಡು , ಮೇಕೆ , ಹಂದಿ , ಕರಡಿ , ಜಿಂಕೆ , ನಾಯಿ , ಕಾಡುಕೋಣ , ಬೆಕ್ಕು , ಜಿರಾಫೆ , ಮಂಗ , ಸಿಂಹ ಝೇಂಡಾಮೃಗ , ಚಿರತೆ , ಎತ್ತು , ಸಾರಂಗ , ಕೋಳಿ , ಆನೆ ).
ಸಾಕು ಪ್ರಾಣಿಗಳು ಕಾಡು ಪ್ರಾಣಿಗಳು
ಕತ್ತೆ ಹುಲಿ
ಎಮ್ಮೆ ಹಂದಿ
ಆಡು ಕರಡಿ
ಮೇಕೆ ಜಿಂಕೆ
ನಾಯಿ ಕಾಡುಕೋಣ
ಬೆಕ್ಕು ಜಿರಾಫೆ .
ಎತ್ತು ಮಂಗ
ಕೋಳಿ ಸಿಂಹ
ಫೇಂಡಾಮೃಗ
ಚಿರತೆ
ಆನೆ ಸಾರಂಗ

ಆ . ಕೆಳಗೆ ಪ್ರತೇಕ ಗುಂಪುಗಳಲ್ಲಿ ಕೆಲವು ಶಬ್ದಗಳಿವೆ. ಪ್ರತಿ ಗುಂಪಿಗೂ ಆ ಗುಂಪಿಗೆ ಸೇರದ ಒಂದೊಂದು ಶಬ್ದಗಳಿವೆ. ಈ ಶಬ್ದಗಳನ್ನು ಗುರುತಿಸಿ ಮತ್ತು ಆ ಶಬ್ದ ಆ ಗುಂಪಿಗೆ ಏಕೆ ಸೇರುವುದಿಲ್ಲ ಎಂದರೆ ಕಾರಣ ನೀಡಿ
ಗುಂಪು – 1 : ಹಸು , ಎಮ್ಮೆ , ಕರಡಿ , ಹಂದಿ
ಕರಡಿ – ಇದು ಗುಂಪಿಗೆ ಸೇರುವುದಿಲ್ಲ , ಏಕೆಂದರೆ ಇದು ಸಾಕು ಪ್ರಾಣಿಯಲ್ಲ.

ಗುಂಪು – 2 : ನಾನು , ನೀನು , ಅವನು , ರಮ್ಯ
ರಮ್ಯ - ಇದು ಸರ್ವನಾಮಗಳ ಗುಂಪಿಗೆ ಸೇರುವುದಿಲ್ಲ. ಇದು ಅಂಕಿತನಾಮ.

ಗುಂಪು – 3 : ಯುವಕ , ಯುವತಿ , ಮುದುಕ , ಅಣ್ಣ
ಯುವತಿ – ಇದು ಪುಲಿಂಗ ಪದವಲ್ಲ. ಸ್ತ್ರೀಲಿಂಗ.

ಗುಂಪು – 4 : ಕತೆ , ಕವನ , ಪೆನ್ಸಿಲು , ಕಾದಂಬರಿ
ಪೆನ್ಸಿಲು – ಇದು ಸಾಹಿತ್ಯ ಪ್ರಕಾರಕ್ಕೆ ಸೇರುವುದಿಲ್ಲ . ಇದು ಬರೆಯುವ ವಸ್ತು.

3 , ಕೆಳಗೆ ನೀಡಿರುವ ಕತೆಯಲ್ಲಿ ಕೆಲವು ಪದಗಳ ಜಾಗವನ್ನು ಖಾಲಿ ಬಿಡಲಾಗಿದೆ . ಬಿಟ್ಟ ಸ್ಥಳದಲ್ಲಿ ಇರಬೇಕಾದ ಪದಗಳನ್ನು ಕತೆಯ ಕೆಳಗೆ ನೀಡಲಾಗಿದೆ .ಸೂಕ್ತ ಪದವನ್ನು ಆರಿಸಿ ಬಿಟ್ಟ ಸ್ಥಳದಲ್ಲಿ ತುಂಬರಿ :

ಒಂದು ಕಾಗೆ .......... ಬಂದು ಒಂದು ........... ಮೇಲೆ ಕುಳಿತುಕೊಂಡು ........... ತಿನ್ನ ತೊಡಗಿತು. ಮೋಸಗಾರ ನರಿ ಕಾಗೆ ......... ರೊಟ್ಟಿಯನ್ನು ಕಂಡು ........... ತಿನ್ನಬೇಕೆಂದು .......... ಕೆಳಗೆ ನಿಂತು ಕಾಗೆಯನ್ನು ಹೊಗಳಿತು . ಎಲೈ ಕಾಗೆ ನೀನು ............. ಹಾಡುತ್ತೀಯೇ , ನಿನ್ನ ........... ತುಂಬಾ ಚಂದ. ನಿನ್ನ ಹಾಡನ್ನು ........... ಆಸೆ ನನಗೆ ಆಗಿದೆ ಎಂದು ಹೊಗಳಿತು . ಕಾಗೆ ಅದರ ಹೊಗಳಿಕೆಗೆ ಮಾರು ಹೋಗಿ ........... ಎಂದು ಹಾಡತೊಡಗಿತು .ಆಗ ಅದರ ............. ರೊಟ್ಟಿ ಕೆಳಗೆ ............ ಬಿದ್ದ ............ ಯನ್ನು ನರಿ ಕಚ್ಚಿಕೊಂಡು .............. ಹೋಯಿತು . ( ಹಾರಿ, ಮರದ, ಬಾಯಲ್ಲಿ , ರೊಟ್ಟಿ , ಚಂದ, ಹಾಡು , ಕೇಳುವ, ಕಾಕಾಕಾ , ಬಾಯಿಂದ, ಬಿದ್ದಿತು , ಓಡಿ , ಕಾಗೆ , ಕೊಂಬೆ )

ಉತ್ತರ :
ಒಂದು ಕಾಗೆ ಹಾರಿ ಬಂದು ಒಂದು ಮರದ ಮೇಲೆ ಕುಳಿತುಕೊಂಡು ರೊಟ್ಟಿ ತಿನ್ನ ತೊಡಗಿತು. ಮೋಸಗಾರ ನರಿ ಕಾಗೆ ಬಾಯಲ್ಲಿ ರೊಟ್ಟಿಯನ್ನು ಕಂಡು ರೊಟ್ಟಿ ತಿನ್ನಬೇಕೆಂದು ಮರದ ಕೊಂಬೆ ಕೆಳಗೆ ನಿಂತು ಕಾಗೆಯನ್ನು ಹೊಗಳಿತು . ಎಲೈ ಕಾಗೆ ನೀನು ಚಂದ ಹಾಡುತ್ತೀಯೇ , ನಿನ್ನ ಹಾಡು ತುಂಬಾ ಚಂದ. ನಿನ್ನ ಹಾಡನ್ನು ಕೇಳುವ ಆಸೆ ನನಗೆ ಆಗಿದೆ ಎಂದು ಹೊಗಳಿತು . ಕಾಗೆ ಅದರ ಹೊಗಳಿಕೆಗೆ ಮಾರು ಹೋಗಿ ಕಾಕಾಕಾ ಎಂದು ಹಾಡತೊಡಗಿತು .ಆಗ ಅದರ ಬಾಯಿಂದ ರೊಟ್ಟಿ ಕೆಳಗೆ ಬಿದ್ದಿತು, ಬಿದ್ದ ರೊಟ್ಟಿಯನ್ನು ನರಿ ಕಚ್ಚಿಕೊಂಡು ಓಡಿ ಹೋಯಿತು.
ಅ . ಕೆಳಗಿನ ಪ್ರಶ್ನೆಗಆಗಿ ಒಂದು ವಾಕ್ಯದಲ್ಲಿ ಉತ್ತರಿಸಿ :
1. ಮಾಂಡವಿ ಯಾರನ್ನು ಪರಿಚಯಿಸಿದರು?
ಮಾಂಡವಿ ಸೀನಸೆಟ್ಟರನ್ನು ಪರಿಚಯಿಸಿದಳು.

2. ಸೀನಸೆಟ್ಟರು ಜಮೀನಿನಲ್ಲಿ ಏನನ್ನು ಬೆಳೆಯುತ್ತಿದ್ದರು?
ಸೀನಸೆಟ್ಟರು ತಮ್ಮ ಜಮೀನಿನಲ್ಲಿ ಸಾಸಿವೆಯನ್ನು ಬೆಳೆಯುತ್ತಿದ್ದ ಒಬ್ಬರೇ ರೈತರಾಗಿದ್ದರು.

3. ಮಕ್ಕಳು ಏನನ್ನು ಹಾಕಿಕೊಂಡು ಗದ್ದೆಗೆ ಇಳಿದರು?.
ಮಕ್ಕಳು ಕಂಬಳಿಗೊಪ್ಪೆಯನ್ನು ಹಾಕಿಕೊಂಡು ಗದ್ದೆಗೆ ಇಳಿದರು.

4. ಹಾಲಪ್ಪನ ಕಾಲನ್ನು ಏನು ಕಚ್ಚಿತು?
ಹಾಲಪ್ಪನ ಕಾಲನ್ನು ಒಂದು ನೀರಾವು ಕಚ್ಚಿತು.

5. ಮನೆಯ ಅಟ್ಟ ಮಕ್ಕಳಿಗೆ ಯಾವ ಟವರ್‌ ಆಗಿ – ಪರಿವರ್ತಿತಗೊಂಡಿತ್ತು?. ಮನೆಯ ಅಟ್ಟ ಮಕ್ಕಳಿಗೆ ಗದ್ದೆ ವೀಕ್ಷಣೆಯ ಟವರ್‌ ಆಗಿ ಪರಿವರ್ತಿತಗೊಂಡಿತ್ತು.

ಆ , ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯದಲ್ಲಿ ಉತ್ತರಿಸಿರಿ.
1. ಸೀನಸೆಟ್ಟರ ವೇಷ ಹೇಗಿತ್ತು?.
ಸೀನಸೆಟ್ಟರು ಹಳೆಯದಾದ ಪಂಚೆಯೊಂದನ್ನು ಸೊಂಟಕ್ಕೆ ಸುತ್ತಿ ಮೇಲಕ್ಕೆತ್ತಿ ಕಟ್ಟಿದ್ದರು . ಚೌಕುಳಿ ಚೌಕುಳಿಯ ಅಂಗಿ ಹೆಗಲ ಮೇಲೆ ಟವಲೊಂದನ್ನು ಹೊದ್ದಿದ್ದರು . ಇನ್ನೊಂದು ಹಳೆಯ ಟವಲಿನಿಂದ ತಲೆಗೆ ಲಪ್ಪಟೆ ಸುತ್ತಿಕೊಂಡಿದ್ದರು . ಅವರ ವೇಷ ಟೀಚರ್‌ರಂತೆ ಇರದೆ , ರೈತನಂತಿತ್ತು.

2. ದೊಡ್ಡ ತರಗತಿಗಳಿಗೆ ಹೋದಂತೆ ಮಕ್ಕಳು ಏನಾಗುತ್ತಾರೆಂದು ಮಾಂಡವಿಗೆ ಅನಿಸಿತ್ತು?
ದೊಡ್ಡ ತರಗತಿಗಳಿಗೆ ಹೋದಂತೆ ಕ್ರಮೇಣ ಮಕ್ಕಳು ಶಾಲಾ ಶಿಕ್ಷಣಕ್ಕೂ ತಮ್ಮ ಮಣ್ಣಿನ ಬದುಕಿಗೂ ಏನೇನೂ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದರು . ಹೀಗಾಗಿ ಇತ್ತ ಕೆಲಸವೂ ಇಲ್ಲ ಅತ್ತ ಕುಲಕಸುಬುಗಳೂ ಇಲ್ಲದೆ ಎಡಬಿಡಂಗಿಗಳಂತೆ ಆಗುತ್ತಿದ್ದರು.

3. ಮಕ್ಕಳು ಸಸಿ ಕಿತ್ತ ಬಗೆ ಹೇಗಿತ್ತು?
ಮೊದ ಮೊದಲು ಮಕ್ಕಳಿಗೆ ಹಿಡಿ ತುಂಬಾ ಸಸಿಗಳನ್ನು ಬುಡ ಸಮೇತ ಕೀಳುವುದು ಸಾಧ್ಯವಾಗಲಿಲ್ಲ . ಅನೇಕ ಸಸಿಗಳು ಹಾಳಾಯಿತು . ಹತ್ತಾರು ಬಾರಿ ಕಿತ್ತು ಕಿತ್ತು ಪ್ರಯತ್ನಿಸಿದಾಗ ಕೀಳುವುದು ಸಲೀಸಾಯಿತು. ಹಾಗೆಯೇ ಅವರ ಕೆಲಸದ ವೇಗವೂ ಹೆಚ್ಚಾಯಿತು.

4. ಹಾಲಪ್ಪನಿಗೆ ಹಾವು ಕಚ್ಚಿದಾಗ ಸೀನಸೆಟ್ಟರು ಏನು ಹೇಳಿದರು?.
ಹಾಲಪ್ಪನಿಗೆ ಹಾವು ಕಚ್ಚಿದಾಗ ಗಾಬರಿಯಾಯಿತು. ಆಗ ಸೀನಸೆಟ್ಟು ಹದರಬೇಡ , ಏನೂ ಆಗವುದಿಲ್ಲ , ಅದು ಹಾವಲ್ಲ ನೀರಾವು ವಿಷ ಇರುವುದಿಲ್ಲ. ಒಂದು ಮೀನು ಕಚ್ಚಿದ ಹಾಗೆ ಆಗುತ್ತದೆ ಎಂದು ಸಮಾಧಾನ ಹೇಳಿದರು.

ಇ ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿ
1. ‘ ಹಂಗಾರೆ ಸೀನಸೆಟ್ಟು ನಮ್ಮ ಟೀಚರು ‘
ಈ ಮಾತುಗಳನ್ನು ತುಂಗಾ ತನ್ನ ಉಪಾಧ್ಯಾಯಿನಿ ಹಾಗೂ ವಿದ್ಯಾರ್ಥಿಗಳ ಮುಂದೆ ಹೇಳಿದಳು.

2. ‘ ಮುಂಚೆ ಸಸಿಗಳನ್ನು ಕೀಳಾಣ ‘ . ಈ ಮಾತನ್ನು ಸೀನಸೆಟ್ಟರು ಮಕ್ಕಳನ್ನು ಉದ್ದೇಶಿಸಿ ಹೇಳಿದರು.

3. “ ಇವತ್ತು ಪೂರಾ ಕಿತ್ತೇ ಹೋಗಾಣ ‘ .
ಈ ಮಾತನ್ನು ಮಕ್ಕಳೆಲ್ಲರೂ ಒಕ್ಕೊರಲಿನಿಂದ ಸೀನಸೆಟ್ಟರಿಗೆ ಹೇಳಿದರು.

4 .‘ ಕೈ ಎಲ್ಲಿಗ್ ಹೋತು ಈ ಮಾತನ್ನು ಯಶೋಧ ಮಕ್ಕಳೆಲ್ಲರಿಗೂ ಆಟ ಆಡಿಸುವಾಗ ಕೇಳಿದ ಮಾತು .
ಕೃತಿಕಾರರ ಪರಿಚಯ.
ಕವಿ : ಶಶಿಧರ ವಿಶ್ವಾಮಿತ್ರ.
ಕಾಲ : ೧೯೪೦.
ಸ್ಥಳ : ಮೈಸೂರು.
ಸೆಂಟ್ರಲ್ ಕಾಲೇಜಿನಲ್ಲಿ ಪದವೀಧರರಾದ ಮೇಲೆ ಭಾರತ ಸರಕಾರದ ರಾಷ್ಟ್ರೀಯ ಕ್ಷಯರೋಗ ಸಂಸ್ಥೆಯಲ್ಲಿ ಸಂಶೋಧಕರಾಗಿ ವೃತ್ತಿಜೀವನ ಪ್ರಾರಂಭಿಸಿದರು . ಕ್ಷಯರೋಗಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳಲ್ಲಿ , ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ . ಖಿಲ , ಪದ ಕುಸಿಯೆ ನೆಲವಿಹುದೆ , ಹಿಂದೂ ಧರ್ಮ , ಸೃಷ್ಟಿಯ ರಂಗವಲ್ಲಿ – ಮುಂತಾದವು ಇವರ ಕೆಲವು ಪ್ರಕಟಿತ ಕೃತಿಗಳು , ಸಂಚಿ ಎಂಬ ಆತ್ಮಕತೆಯನ್ನು ಬರೆದಿದ್ದಾರೆ.

ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಹಿಲ್ಟನ್‌ ಹೆಡ್‌ ದ್ವೀಪ ಯಾವ ಸಾಗರದಲ್ಲಿದೆ?.
ಹಿಲ್ಟನ್‌ ಹೆಡ್‌ ದ್ವೀಪ ಅಟ್ಲಾಂಟಿಕ್‌ ಸಾಗರದಲ್ಲಿದೆ.

2. ಅಮೆರಿಕಾದಲ್ಲಿ ವಾಸವಾಗಿದ್ದ ಮೂಲ ನಿವಾಸಿಗಳನ್ನು ಏನೆನ್ನುತ್ತಾರೆ?.
ಅಮೆರಿಕಾದಲ್ಲಿ ವಾಸವಾಗಿದ್ದ ಮೂಲ ನಿವಾಸಿಗಳನ್ನು ಅಮೆರಿಂಡಿಯನ್ನರು ಎನ್ನುವರು.

3. ಹಿಲ್ಟನ್‌ ಹೆಡ್ ನಲ್ಲಿ ಬಂದಿಳಿಯುವ ಶ್ರೀಮಂತರ ಉಡುಗೆ ತೊಡುಗೆ ಹೇಗಿತ್ತು?.
ಹೆಲ್ಟನ್‌ ಹೆಡ್‌ ನಲ್ಲಿ ಬಂದಿಳಿಯುವ ಶ್ರೀಮಂತರು ಬೂಟು, ಚಡ್ಡಿ ,ಟೀಶರ್ಟು, ಕೂಲಿಂಗ್‌ ಗ್ಲಾಸ್‌, ಸ್ಕಲ್‌ ಕ್ಯಾಪ್‌ ಹಾಕಿಕೊಳ್ಳುತ್ತಿದ್ದರು.

4. ಹಿಲ್ಟನ್‌ ಹೆಡ್‌ ದ್ವೀಪದಲ್ಲಿ ಏನೇನು ಕ್ರೀಡೆಗಳನ್ನು ಆಯೋಜಿಸಲಾಗುತ್ತಿತ್ತು?.
ಹಿಲ್ಟನ್‌ ಹೆಡ್ ದ್ವೀಪದಲ್ಲಿ ಬೋಟಿಂಗ್‌ ಹಾಗೂ ವಿವಿಧ ರೀತಿಯ ಕ್ರೀಡಾ ವಿನೋದಗಳನ್ನು ಆಯೋಜಿಸಲಾಗುತ್ತಿತ್ತು.

5. ಕಡಲತಡಿಯ ಲೈಟ್‌ ಹೌಸನ್ನೇರಿದರೆ ಯಾವ ಚಿತ್ರಣವು ಕಾಣ ಸಿಗುತ್ತದೆ?.
ಕಡಲತಡಿಯ ಲೈಟ್‌ ಹೌಸನ್ನೇರಿದರೆ ಅಟ್ಲಾಂಟಿಕ್‌ ಮಹಾಸಾಗರ ಸಮುದ್ರದಲ್ಲೋಡಾಡುತ್ತಿದ್ದ ನೌಕೆಗಳು, ಕಡಲ ಕಾಗೆಗಳು, ನಮ್ಮ ಬಡ್ಡೆಗೇ ಬಂದಿಳಿಯುವ ರೇವನ್, ಮೈನಾಗಳು ಕಾಣಸಿಗುತ್ತವೆ.

6. ಹಿಲ್ಟನ್‌ ಹೆಡ್‌ ನಲ್ಲಿರುವ ಸ್ಮಾರಕ ಯಾವುದು?.
ಹಿಲ್ಟನ್‌ ಹೆಡ್‌ ನಲ್ಲಿರುವ ಸ್ಮಾರಕ ಲಿಬರ್ಟಿ ಓಕ್‌ ಮರದ್ದಾಗಿದೆ.

ಆ ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಯುರೋಪಿಯನ್ನರು ಬಂದ ಮೇಲೆ ಏನೇನು ಬದಲಾವಣೆಗಳಾದವು? ಯುರೋಪಿಯನ್ನರು ಬಂದ ಮೇಲೆ ಹಿಲ್ಟನ್‌ ಹೆಡ್‌ ನಲ್ಲಿ ಪ್ರಾಕೃತಿಕ ಸೌಂದರ್ಯ ಅಳಿಸಿ ಹೋಯಿತು. ಆ ಸ್ಥಳದಲ್ಲಿ ಸೀ ಬೀಚ್‌ ಹೋಟೆಲ್‌ ಗಳು, ಸ್ಟೇ ಹೋಂಗಳು, ಗಾಲ್ಫ ಕೋರ್ಸುಗಳು ಮತ್ತು ಲಕ್ಸುರಿ ಹೋಟೆಲ್‌ ಗಳು ತಲೆಯೆತ್ತಿದ್ದವು.

2. ಹಿಲ್ಟನ್‌ ಹೆಡ್‌ ಮೊದಲು ಹೇಗಿತ್ತು?.
ಹಿಲ್ಟನ್‌ ಹೆಡ್‌ ಮೊದಲು ಒಂದು ಸುಂದರ ದ್ವೀಪವಾಗಿತ್ತು. ಅಲ್ಲಿ ಪುರಾತನ ಸಸ್ಯ ಸಂಪತ್ತು ಹಳೆಯ ಕಾಲದ ಹೊಂಡಗಳು ಹಿನ್ನೀರಿನ ಕೋವುಗಳು ಕಡಲ ತೀರದ ಸಸ್ಯಗಳು ಮತ್ತು ಕಾಡಿನ ಮರಗಳು ಇದ್ದವು.

3. ಹಿಲ್ಟನ್‌ ಹೆಡ್‌ ಡ್ಯಾಮ್‌ ಸ್ಮಾರಕ ಮರದ ಬಗ್ಗೆ ವಿವರಿಸಿ.
ಹಿಲ್ಟನ್‌ ಹೆಡ್‌ ಡ್ಯಾಮ್‌ ಸ್ಮಾರಕ ಮರದ ( ಲಿಬರ್ಟಿ ಓಕ್‌ ಮರ) ಐವತ್ತರ ದಶಕದಲ್ಲಿ ಪರಿಸರ ರಕ್ಷಣೆಗಾಗಿ ಜನ ಒಗ್ಗೂಡಿ ಪಣತೊಟ್ಟಿದ್ದು ಈ ಮರದಲ್ಲಿಯೇ ಇದು ಸಂರಕ್ಷಿತ ಜಾಗ ದಯವಿಟ್ಟು ಕಟ-ಕಟೆಯ ಒಳಗೆ ಪ್ರವೇಶ ಬೇಡ ಎನ್ನುವ ಫಲಕವನ್ನು ನೆಟ್ಟಿದ್ದರು. ನಂತರ ಈ ಮರದ ಸಾನಿಧ್ಯ ಎಷ್ಟು ಪ್ರಸಿದ್ದವಾಯಿತು ಎಂದರೆ ಎಷ್ಟೋ ವಿವಾಹಗಳಾಗಿವೆ ಎಂದು ಲೇಖಕರು ಹೇಳುತ್ತಾರೆ.

4. ಹಿಲ್ಟನ್‌ ಹೆಡ್‌ ದ್ವೀಪದಲ್ಲಿ ಏನೇನು ಕಟ್ಟಡಗಳು ನಿರ್ಮಾಣಗೊಂಡವು?
ಹಿಲ್ಟನ್‌ ಹೆಡ್‌ ದ್ವೀಪದಲ್ಲಿ ಸೀ ಬೀಚ್‌ ಹೋಟೆಲ್‌ ಗಳು , ಸ್ಟೇ ಹೋಂಗಳು, ಗಾಲ್ಫ್‌ ಕೋರ್ಸ್ ಗಳು, ರೆಸಾರ್ಟುಗಳು ಹೀಗೆ ಹಲವಾರು ಕಟ್ಟಡಗಳು ನಿರ್ಮಾಣಗೊಂಡವು. ಈ ಕಟ್ಟಡಗಳ ಜೊತೆಗೆ ರಸ್ತೆಗಳು ಸೇತುವೆಗಳು ಕೂಡ ನಿರ್ಮಾಣಗೊಂಡವು.

5. ಹಿಲ್ಟನ್‌ ಹೆಡ್‌ ನಲ್ಲಿ ಪರಿಸರ ಹೋರಾಟ ಹೇಗೆ ಪ್ರಾರಂಭವಾಯಿತು?.
ಪುರಾತನ ಸಸ್ಯಗಳು ಹಳೆಯ ಕಾಲದ ಹೊಂಡಗಳು ಹಿನ್ನೀರಿನ ಕೋವುಗಳೂ ಕಡಲ ತೀರದ ಸಸ್ಯಗಳು ಮತ್ತು ಕಾಡಿನ ಮರಗಳನ್ನು ಕಡಿದು ರೆಸಾರ್ಟ್‌ ಹೋಟೆಲ್‌ ಇತ್ಯಾದಿ ಮಾಡುವುದನ್ನು ಪರಿಸರ ಅಭಿಮಾನಿಗಳು ವಿರೋಧಿಸಿ ಚಳುವಳಿ ಆರಂಭಿಸಿದರು. ದುಡ್ಡು ಮತ್ತು ದೌಲತ್ತುಗಳಿಂದ ಪರ್ಯಾವರಣದ ಚಳುವಳಿಗೆ ಮೊದಲು ನೆಲದಲ್ಲಾಳಿ ಹಾಗೂ ಅಭಿಯಂತರರು ಆಸಕ್ತಿ ತೋರಿ ತಾವು ಈ ಚಳುವಳಿಯಲ್ಲಿ ಸೇರಿಕೊಂಡರು. ಚಳುವಳಿ ಕೊನೆಗೆ ಯಶಸ್ವಿಯಾಯಿತು.

ಇ) ಬಿಟ್ಟಸ್ಥಳ ತುಂಬಿರಿ.
1. ಯುರೋಪಿಯನ್ನರ ಅಗಮನವಾದ ಮೇಲೆ ಅಮೆರಿಂಡಿಯನ್ನರ ಸಮುದಾಯವು ಧೂಳಿಪಟ ಆಯಿತು.
(ಅಭಿವೃದ್ಧಿ, ಶಿಕ್ಷಿತ,ಧೂಳಿಪಟ).

2. ಅಟ್ಲಾಂಟಿಕ್‌ ಸಾಗರವು ಅಮೆರಿಕದ ಪೂರ್ವ ಭಾಗದಲ್ಲಿದೆ.
( ಪೂರ್ವ, ಉತ್ತರ, ಪಶ್ಚಿಮ).

3. ವಿಧಿಯಿಲ್ಲದೆ ಕೊನೆಗೆ ನ್ಯಾಯಲಯದ ಮೊರೆ ಹೋಗಬೇಕಾಯಿತು.
( ಧನಿಕರ, ಅಮೆರಿಕಾಧ್ಯಕ್ಷರ, ನ್ಯಾಯಾಲಯದ).

4. ಕಟ್ಟಡಗಳಿಗೆ ತೋರುತ್ತಿದ್ದ ಅಭಿಯಂತರ ಶ್ರದ್ದೆಯನ್ನೇ ಜನ ಪರಿಸರಕ್ಕೂ ನೀಡತೊಡಗಿದರು.
( ಪಾರಂಪರಿಕ , ಅಭಿಯಂತರ, ರಾಜಕೀಯ).

5. ದ್ವೀಪದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಮೊದಲು ಎಲ್ಲರೂ ಸೇರಿ ಮಂತ್ರಾಲೋಚನೆ ನಡೆಸಿದರು.
(ಮಂತ್ರಾಲೋಚನೆ, ಜಾಥಾ, ಪ್ರತಿಭಟನೆ).

6. ಹೋರಾಟ ಮುಂದುವರಿದ ಬಳಿಕ ಹಿಲ್ಟನ್‌ ಹೆಡ್ ನಂದನವನದಂತೆ ಕಂಗೊಳಿಸತೊಡಗಿತು.
( ರಾಜಧಾನಿಯಂತೆ, ನಂದನವನದಂತೆ, ಅಭಯಾರಣ್ಯದಂತೆ)

ಈ) ಕೆಳಗಿನ ಶಬ್ದಗಳಿಗೆ ವಿರುದ್ಧಾರ್ಥಕ ಶಬ್ದಗಳನ್ನು ಬರೆಯಿರಿ.
ಮಾದರಿ : ಆಗಮನ X ನಿರ್ಗಮನ.
1. ಲಾಭ X ಹಾನಿ.
2. ಚುರುಕು X ಮಂದ.
3. ಪುರಾತನ X ನವೀನ.
4. ಪ್ರಸಿದ್ದ X ಸಾಮಾನ್ಯ.
5. ಸಾಧಾರಣ X ಶ್ರೇಷ್ಠ.

ಉ. ಈ ಕೆಳಗಿನ ಪದಗಳನ್ನು ಬಳಸಿಕೊಂಡು ವಾಕ್ಯಗಳನ್ನು ರಚಿಸಿರಿ.
1.ಭರಾಟೆ : ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿರುತ್ತದೆ.
2.ಸುಧಾರಣೆ : ರಾಜಕೀಯ ನಾಯಕರುಗಳು ತಮ್ಮ ಕ್ಷೇತ್ರದಲ್ಲಿ ಕೆಲವು ಸುಧಾರಣೆಗಳನ್ನು ಮಾಡಬೇಕೆಂದು ಜನ ಬಯಸುತ್ತಾರೆ.
3. ಸಾರ್ವಭೌಮ : ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು.
4. ದೌಲತ್ತು : ಶ್ರೀಮಂತರು ದೌಲತ್ತು ತೋರಿಸದೆ ಬಡವರಿಗೆ ನೆರವಾಗಬೇಕು.
5. ಹೊಯ್ದಾಟ : ಪರೀಕ್ಷೆಯಲ್ಲಿ ಸರಿಯಾದ ಉತ್ತರ ತಿಳಿಯದೆ ಮನಸ್ಸಿನಲ್ಲಿ ಬಹಳ ಹೊಯ್ದಾಟವಾಯಿತು.
6. ಪಣತೊಡು : ದುರ್ಯೋಧನನು ಪಾಂಡವರನ್ನು ಸೋಲಿಸಲು ಪಣತೊಡುವುದಾಗಿ ಹೇಳಿದನು.
7. ಅಭಿಮಾನಿ : ಸ್ವಾಮೀಜಿಗಳಿಗೆ ಬಹಳ ಜನ ಅಭಿಮಾನಿಗಳಿದ್ದಾರೆ.
ಕೃತಿಕಾರರ ಪರಿಚಯ.
ಕವಿ :ಡಾ . ಕೃಪಾನಂದ ಕಾಮತ್.
ಕಾಲ : 29.9.1934.
ಸ್ಥಳ : ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಜನಿಸಿದರು.
ಕೃತಿಗಳು : ಪ್ರಾಣಿ ಪರಿಸರ, ಕೀಟ ಜಗತ್ತು , ಸಸ್ಯ ಪರಿಸರ , ಇರುವೆಯ ಇರವು , ಸರ್ಪ ಸಂಕುಲ ಮತ್ತು ಕಾವಿ ಕಲೆ ಇತ್ಯಾದಿ.
ಪ್ರಶಸ್ತಿಗಳು : ಇವರಿಗೆ ರಾಜ್ಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ.
ಡಾಕ್ಟರೇಟ್ ಪದವಿಯನ್ನು ಪಡೆದು , ಉದಯಪುರ ಮತ್ತು ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್‌ವೆಲ್ತ್ ಇನ್ಸ್ಟೂಟ್ ಆಫ್ ಬಯಲಾಜಿಕಲ್ ಕಂಟ್ರೋಲ್ ಸಂಸ್ಥೆಯ ಕೀಟ ಸಂಶೋಧನಾಧಿಕಾರಿ ಮತ್ತು ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಬೆಂಗಳೂರಿನಲ್ಲಿ ವೈಜ್ಞಾನಿಕ ಛಾಯಾಗ್ರಹಣ ಲ್ಯಾಬೊರೇಟರಿ ಪ್ರಾರಂಭಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಗಳ ಛಾಯಾಗ್ರಹಣ ಮಾಡಿದ್ದಾರೆ.

ಅ . ಕೊಟ್ಟಿರುವ ಪ್ರಶ್ನೆಗಳಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಆನೆ ಎಷ್ಟು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ?
ಆನೆ ಐದು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ.

2. ಪ್ರಾಣಿ – ಪ್ರಾಣಿಗಳ ನಡುವೆ ಯಾವುದಕ್ಕಾಗಿ ಸ್ಪರ್ಧೆ ನಡೆಯುತ್ತದೆ?
ಪ್ರಾಣಿ – ಪ್ರಾಣಿಗಳ ನಡುವೆ ಆಹಾರಕ್ಕಾಗಿ ಸ್ಪರ್ಧೆ ನಡೆಯುತ್ತದೆ.

3. ಬೀಜ ಪ್ರಸರಣ ಯಾವುದರ ಮೂಲಕ ನಡೆಯುತ್ತದೆ?
ಬೀಜ ಪ್ರಸರಣ ಕೀಟ , ವಾಯು , ನೀರು ಮೊದಲಾದವುಗಳ ಮೂಲಕ ನಡೆಯುತ್ತದೆ.

4. ದಟ್ಟವಾದ ಕಾಡು ಎಲ್ಲಿ ಬೆಳೆಯುತ್ತದೆ?
ದಟ್ಟವಾದ ಕಾಡು ವಿಪುಲವಾದ ನೀರು , ಆರ್ದತೆ ಇರುವಲ್ಲಿ ಬೆಳೆಯುತ್ತದೆ.

5. ಎಲ್ಲಿ ಬಿದ್ದ ಬೀಜಗಳು ನಾಶವಾಗುತ್ತವೆ?
ಮರುಭೂಮಿ , ರಸ್ತೆ ಮತ್ತು ಕಟ್ಟಡಗಳ ಮೇಲೆ ಬಿದ್ದ ಬೀಜಗಳು ನಾಶವಾಗುತ್ತವೆ.

6. ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ ಯಾವುದು?
ಪ್ರಾಣಿಗಳಲ್ಲಿಯೇ ದೊಡ್ಡ ಪ್ರಾಣಿ ತಿಮಿಂಗಿಲ.

ಆ . ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
1. ಜಿರಾಫೆ ಹೇಗೆ ಆಹಾರ ಸ್ಪರ್ಧೆಯಲ್ಲಿ ಯಶಸ್ವಿಯಾಗುತ್ತದೆ?
ಜಿರಾಫೆ ಹನ್ನೆರಡು ಅಡಿಗೂ ಎತ್ತರದವಲ್ಲಿದ್ದ ಪರ್ಣ ( ಎಲೆ) ತಿನ್ನುವಷ್ಟು ಉದ್ದ ಕಾಲು , ಉದ್ದಗೋಣು ಪಡೆದದ್ದರಿಂದ,ಆಹಾರ ಸ್ಪರ್ಧೆಯಲ್ಲಿ ಯಶಸ್ವಿಯಾಗುತ್ತದೆ.

2. ವನ್ಯಜೀವಿ ಸಂರಕ್ಷಣೆಯನ್ನು ಹೇಗೆ ಮಾಡುತ್ತಿದ್ದಾರೆ?
ಮಾನವ ತನ್ನ ಸ್ವಾರ್ಥಕ್ಕಾಗಿ ಎಷ್ಟೋ ಪ್ರಾಣಿಗಳನ್ನು ನಿರ್ನಾಮ ಮಾಡಿದ್ದಾನೆ. ಆದ್ದರಿಂದ ವನ್ಯಜೀವಿಗಳ ಸಂರಕ್ಷಣೆಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಮೊಸಳೆಗಳಿಗಾಗಿ ಕರ್ನಾಟಕದ ಬೆಂಗಳೂರಿನ ಹತ್ತಿರವಿರುವ ಬನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಆಲಯವನ್ನು ಸ್ಥಾಪಿಸಿ ಪೋಪಿಸುತ್ತಿದ್ದಾರೆ . ಕೆಲವು ಜಾತಿಯ ಹಾವುಗಳು ನಶಿಸಿ ಹೋಗಿದ್ದರಿಂದ ವಿಷಕಾರಿ ಹಾವುಗಳನ್ನು ಸಾಕುವ ಕೇಂದ್ರಗಳನ್ನು ಮುಂಬಯಿ ಮತ್ತು ಮದ್ರಾಸಿನಲ್ಲಿ ಪ್ರಾರಂಭಿಸಿದ್ದಾರೆ.

3. ಸರೋವರ , ಕೆರೆ ಮತ್ತು ಹೊಂಡಗಳು ಬೇರೆ ಕೆಲಸಕ್ಕೆ ಬಳಕೆಯಾಗುತ್ತಿವೆ , ಏಕೆ?
ಮಾನವ ವಿಮಾನ , ರೈಲ್ವೆ ಮತ್ತು ಮೋಟಾರು ನಿಲ್ದಾಣಗಳನ್ನು ಕಟ್ಟುವುದರಿಂದ , ಹೆದ್ದಾರಿಗಳನ್ನು ಮಾಡುವುದರಿಂದ ಬಹಳ ಕಾಲಗಳಿಂದ ಇದ್ದ ಸರೋವರ , ಕೆರೆ ಮತ್ತು ಹೊಂಡಗಳನ್ನು ಬೇರೆ ಕೆಲಸಕ್ಕೆ ಬಳಕೆ ಮಾಡುವುದು ವಾಡಿಕೆ. ಆದ್ದರಿಂದ ಅವುಗಳನ್ನು ಮುಚ್ಚುತ್ತಿದ್ದಾರೆ . ಕಾರ್ಖಾನೆ , ಊರುಗಳನ್ನು ಬೆಳೆಸುವುದಕ್ಕೆ ಕಾಡು, ಗಿಡ , ಗಂಟಿಗಳನ್ನು ಕಡಿಯುವುದರಿಂದ ಆಗುವ ಲಾಭಕ್ಕಿಂತ ಹಾನಿಯೇ ಹೆಚ್ಚು ಎಂಬುವುದು ಜನಸಾಮಾನ್ಯರಿಗೆ ಅರಿವಾಗುವುದೇ ಇಲ್ಲ.

4. ಯೋಜನೆ ತಯಾರಿಸುವ ವಿಜ್ಞಾನಿಗಳು ಯಾವ ರೀತಿಯ ಮುನ್ನಚ್ಚರಿಕೆ ವಹಿಸಬೇಕು?
ಮುಂದಿನ ಪೀಳಿಗೆಗಾಗಿ ಇಂದೇ ಯೋಜನೆಯನ್ನು ತಯಾರಿಸುವ ವಿಜ್ಞಾನಿಗಳು ನಿಸರ್ಗದ ಆಗುಹೋಗುಗಳನ್ನು ವಿವರವಾಗಿ ಅಭ್ಯಸಿಸಿ ಮಾನವನ ಚಟುವಟಿಕೆ ಮಾನವನಿಗೆ ಕಂಟಕಪ್ರಾಯವಾಗದಂತೆ ಮುನ್ನೆಚ್ಚರಿಕೆ ವಹಿಸಿ , ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು.

ಇ . ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ.
1. ಮೊಸಳೆ , ಹಾವುಗಳ ಸಂರಕ್ಷಣಾ ಕ್ರಮಗಳನ್ನು ತಿಳಿಸಿ.
ಮೊಸಳೆಗಳ ಚರ್ಮಕ್ಕೆ ಪಾಶ್ಚಾತ್ಯರು ಮನ ಸೋತಿದ್ದಾರೆ ಮತ್ತು ಅದರಿಂದ ಅಪಾರವಾದ ಹಣವನ್ನು ಪಡೆಯಲು ಅತಿಯಾಗಿ ಅವುಗಳು ವಿನಾಶದ ಅಂಚನ್ನು ತಲುಪುವ ಸ್ಥಿತಿಗೆ ಬಂದಿತು. ಬನೇರುಘಟ್ಟದ ರಾಷ್ಟ್ರೀಯ ಉದ್ಯಾನದಲ್ಲಿ . ಅವುಗಳನ್ನು ಹೆಚ್ಚಿನ ದಕ್ಷತೆಯಿಂದ ಪಾಲನೆ ಪೋಷಣೆಯನ್ನು ಮಾಡುತ್ತಿದ್ದಾರೆ . ಅದೇ ರೀತಿ ಹಾವುಗಳನ್ನು ಕಂಡ ಕಂಡ ಕಡೆಯಲ್ಲೆಲ್ಲ ಕೊಂದು , ಕೆಲವು ಜಾತಿಯ ಹಾವುಗಳು ನಶಿಸಿ ಹೋಗಿರುವುದರಿಂದ ವಿಷಕಾರಿ ಹಾವುಗಳನ್ನು ಸಾಕುವ ಕೇಂದ್ರಗಳನ್ನು ಮುಂಬಯಿ ಮತ್ತು ಮದ್ರಾಸಿನಲ್ಲಿ ಪ್ರಾರಂಭಿಸಿದ್ಯಾರೆ.

2. ಕಾಡನ್ನು ನಾಶ ಮಾಡುವುದರಿಂದ ಆಗುವ ದುಪ್ಪರಿಣಾಮಗಳೇನು?
ಕಾಡನ್ನು ನಾಶ ಮಾಡುವುದರಿಂದ ಅಲ್ಲಿದ್ದ ಹಕ್ಕಿ ‘ ಪಕ್ಷಿಗಳು ಬೇರೆ ತಾಣಕ್ಕೆ ಹೋಗಬೇಕಾಗುತ್ತದೆ . ಮೇವು ಇಲ್ಲದ್ದರಿಂದ ಚಿಗರೆಗಳು ಮಾಯವಾಗುತ್ತವೆ . ಈ ಚಿಗರೆಗಳನ್ನು ಬೇಟೆಯಾಡಿ ಜೀವಿಸುತ್ತಿದ್ದ ಹುಲಿ , ಚಿರತೆ ಮತ್ತು ಸಿಂಹಗಳು ನಾಶವಾಗುತ್ತದೆ . ಅಲ್ಲಿ ಮರೆ ಇಲ್ಲದ್ದರಿಂದ ತೋಳ ಕರಡಿಗಳು ಓಡಿ ಹೋಗುತ್ತವೆ . ಹಣ್ಣುಹಂಪಲುಗಳು ಸಿಗದಿರುವುದರಿಂದ ಇಣಚಿ – ಕಣ್ಮು ಕಪ್ಪಡಿಗಳು ಬೇರೆ ಕಡೆಗೆ ಪ್ರಯಾಣ, ಬೆಳೆ ಕಾಡು – ಪ್ರಾಣಿಗಳಿಗೆ ಆಹಾರ ವಸತಿಯ ಕೊರತೆಯಿಂದ ವಿನಾಶವಾಗುತ್ತದೆ . ಕಾಡುಗಳ ಅಲಭ್ಯತೆಯಿಂದ ಮಳ ಕಡಿಮೆಯಾಗಿ ಬೆ ಜಲ ಅಂತ ರ್ಜಲ ) ಕಡಿಮೆಯಾಗುತ್ತದೆ . ಆಮಜನಕದ ಕೊರತೆ ಮತ್ತು ಇಂಗಾಲದ ಡೈ ಆಕ್ಸಿಡ್ ಹೆಚ್ಚಿ ವಾಯುಮಾಲಿನ್ಯ ಉಂಟಾಗುತ್ತದೆ . ಪ್ರಕೃತಿಯ ಸಮತೋಲನ ತಪ್ಪಿ , ಅಸಮತೋಲನದಿಂದ ಅನೇಕ ದುಪ್ಪರಿಣಾಮಗಳಾಗುತ್ತದೆ.

ಈ , ಕೊಟ್ಟಿರುವ ಪದಗಳನ್ನು ಬಳಸಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಿ.
( ನಿರ್ಮಾಣ, ಶತಮಾನ, ಮನಸೋಲು, ಹಿಂಬಾಲಿಸು )
1. ಅಯೋಧ್ಯದಲ್ಲಿ ಸುಂದರ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ.
2. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಹಲವು ಶತಮಾನಗಳಿಂದ ಪ್ರಸಿದ್ಧಿಯನ್ನು ಪಡೆದಿದೆ.
3. ಆಗುಂಬೆಯ ಸುಂದರವಾದ ನಿಸರ್ಗದ ಮಡಿಲಿನಲ್ಲಿ ಸೂರ್ಯಾಸ್ತಮಾನವನ್ನು ನೋಡಿ ಮನಸೋತ್ತಿದ್ದೇನೆ.
4. ತಾಯಿಯನ್ನು ಮಗು ಹಿಂಬಾಲಿಸುತ್ತದೆ.
ಪದಗಳ ಅರ್ಥ
ಟೊಪ್ಪಿಗೆ-ಟೋಪಿ
ಕಿತ್ತಿ ಬರತಾರ-ಕಿತ್ತು ಬರುತ್ತಾರೆ:
ಉತ್ಸಾಹದಿಂದ ಬರುತ್ತಾರೆ;
ಚಿಕ್ಕವಯಸಿದ್ರು-ಚಿಕ್ಕ ವಯಸ್ಸಿದ್ದರೂ;
ಚೊಕ್ಕ-ಚೆನ್ನಾಗಿ, ಅಚ್ಚುಕಟ್ಟಾಗಿ;
ಚಂದ-ಚೆನ್ನ:
ಚೊಕ್ಕಬಂಗಾರ-ಅಪ್ಪಟ ಬಂಗಾರ, ಅಪರಂಜಿ;
ಧಕ್ಕೆ-ತೊಂದರೆ; ಅಣಿಯಾಗು-ಸಿದ್ಧವಾಗು;
ಶೋಧ-ಹುಡುಕಾಟ:
ತುಕಡಿ-ಸೈನ್ಯ:
ಕಾಳಗ-ಯುದ್ಧ,
ಹೋರಾಟ;
ಮಡು-ಕೊಳ್ಳ :
ಕಾಲೆಗೆ ಓಡಿಹೋಗು;
ದಿಟ್ಟತನ-ಧೈರ್ಯ:
ಖಜಾನೆ-ಬೊಕ್ಕಸ;
ಖಾದಿ-ಕೈನೂಲಿನಿಂದ ನೆಯ್ದಬಟ್ಟೆ :
ಓಟಕೀಳು ಓಡಿಹೋಗು :
ಗುನುಗು-ಸತತವಾಗಿ ಧ್ವನಿಮಾಡು ;
ಜೈಲು-ಸೆರೆಮನೆ, ಬಂಧೀಖಾನೆ:
ಬಲಿದಾನ - ಪ್ರಾಣತ್ಯಾಗ;
ಸೋಸಿದರು-ಅನುಭವಿಸಿದರು.

ಅ . ಕೊಟ್ಟಿರುವ ಪ್ರಶ್ನೆಗಳಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಮೋಟೆಬೆನ್ನೂರು ಎಂಬುವುದು ಯಾವ ಜಿಲ್ಲೆಯಲ್ಲಿದೆ?
ಮೋಟೆಬೆನ್ನೂರು ಎಂಬುವುದು ಹಾವೇರಿ ಜಿಲ್ಲೆಯಲ್ಲಿದೆ.

2. ಯಾವ ಬಟ್ಟೆಗಳ ವಿಚಾರ ಯಾವಾಗಲೂ ಮೈಲಾರರ ಮನಸ್ಸಿನಲ್ಲಿ ಗುನುಗುಡುತ್ತಿತ್ತು?
ಖಾದಿ ಬಟ್ಟೆಗಳ ವಿಚಾರ ಯಾವಾಗಲೂ ಮೈಲಾರರ ಮನಸ್ಸಿನಲ್ಲಿ ಗುನುಗುಡುತ್ತಿತ್ತು.

3. ಮಹಾದೇವನಿಗೆ ಗಾಂಧಿಯವರೊಡನೆ ಯಾವ ಆಶ್ರಮದಲ್ಲಿ ಇರಬೇಕೆಂದು ಆಸೆಯಾಯಿತು?
ಮಹಾದೇವನಿಗೆ ಗಾಂಧಿಯವರೊಡನೆ ಸಬರಮತಿ ಆಶ್ರಮದಲ್ಲಿ ಇರಬೇಕೆಂದು ಆಸೆಯಾಯಿತು.

4. ವಿಜಯಪುರ ಜಿಲ್ಲೆಯಲ್ಲಿ ಯಾವ ಗ್ರಾಮದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು?
ವಿಜಯಪುರ ಜಿಲ್ಲೆಯ ‘ ಕಲಾದಗಿ ‘ ಗ್ರಾಮದಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು.

5. ೧೯೪೨ರಲ್ಲಿ ಗಾಂಧೀಜಿಯವರು ಯಾವ ಘೋಷಣೆ ಮಾಡಿದರು?
೧೯೪೨ರಲ್ಲಿ ಗಾಂಧೀಜಿಯವರು ಬ್ರಿಟಿಷರಿಗೆ , ‘ ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ‘ ಅಂದರೆ Quit India ಎಂಬ ಘೋಷಣೆ ಮಾಡಿದರು.

6. ಮಹಾದೇವ ಅವರು ಎಲ್ಲಿ ಪೊಲೀಸರ ಬಂದೂಕು ಅಪಹರಿಸಿದರು?
ಮಹಾದೇವ ಅವರು ಹೊನ್ನತ್ತಿ ಎಂಬಲ್ಲಿ ಪೊಲೀಸರ ಬಂದೂಕು ಅಪಹರಿಸಿದರು.

ಆ ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ:
1. ಮಹಾದೇವ ಕಲಾದಗಿ ಎಂಬ ಒಂದು ಗ್ರಾಮಕ್ಕೆ ಹೋಗಿ ಏನು ತಿಳಿದುಕೊಂಡರು?
ಮಹಾದೇವನು 12-13 ರ ವಯಸ್ಸಿನಲ್ಲಿ ವಿಜಾಪುರ ಜಿಲ್ಲೆಯ ಕಲಾದಗಿ ಎಂಬ ಗ್ರಾಮಕ್ಕೆ ಹೋದನು .ಅಲ್ಲಿ ಖಾದಿ ಬಟ್ಟೆಗಳನ್ನು ತಯಾರು ಮಾಡುತ್ತಿದ್ದರು. ಮಹಾದೇವನು ಖಾದಿ ಬಟ್ಟೆ ತಯಾರು ಮಾಡುವುದನ್ನು ಕಲಿತು ತಿಳಿದುಕೊಂಡರು.

2 . ದಂಡಿಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಹಾದೇವರಿಗೆ ಆದ.ಶಿಕ್ಷೆ ಏನು?
ದಂಡಿಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಹಾದೇವರಿಗೆ ಸೆರೆಮನೆ ವಾಸದ ಶಿಕ್ಷೆಯಾಯಿತು.

3. ಮಹಾದೇವ ಮತ್ತು ಸಿದ್ದಮತಿ ಇಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಮಾಡಿದ ಕೆಲಸಗಳೇನು?
ಮಹಾದೇವ ಮತ್ತು ಸಿದ್ದಮತಿ ಇಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಅನೇಕ ಕೆಲಸಗಳನ್ನು ಮಾಡಿದರು .ಚರಕದಿಂದ ನೂಲು ತೆಗೆಯುವುದು , ಪ್ರಕೃತಿ ಚಿಕಿತ್ಸೆ , ವ್ಯಾಯಾಮ ಮುಂತಾದವನ್ನು ಹಳ್ಳಿಯ ಜನರಿಗೆ ಅಭ್ಯಾಸ ಮಾಡಿಸಿದರು. ಇಲ್ಲಿ ತಯಾರಾಗುತ್ತಿದ್ದ ಖಾದಿಯನ್ನು ಊರೂರಿಗೆ ಹೊತ್ತು ಮಾರುತ್ತಿದ್ದರು.

4. ಮಹಾದೇವ ರಕ್ತದ ಮಡುವಿನಲ್ಲಿ ಬಿದ್ದದ್ದು ಏಕೆ?
1943 ನೇ ಏಪ್ರಿಲ್ 1 ರಂದು ಹೊಸರಿತ್ತಿಯಲ್ಲಿ ಬ್ರಿಟಿಷರನ್ನು ಎದುರಿಸ ಬೇಕೆಂದು ಯೋಜನೆ ಹಾಕಿಕೊಂಡಿದ್ದರು . ದೇವಸ್ಥಾನದ ಪಕ್ಕದಲ್ಲೇ ಖಜಾನೆಯಿತ್ತು . ಮಹಾದೇವರು ಆಕ್ರಮಣ ಖಜಾನೆಯ ಬೀಗ ಮುರಿಯಲು ನಿರತರಾದಾಗ ಪೊಲಿಸರಲ್ಲೊಬ್ಬನು ಹಾರಿಸಿದ ಗುಂಡು ಮಹಾದೇವರ ಎದೆಯನ್ನು ತೂರಿತು.

ಇ ) ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ:
1. ಮಹಾದೇವ ಅವರು ಜೈಲಿನಿಂದ ಬಿಡುಗಡೆಯಾದ ಮೇಲೆ ಮಾಡುದ ಕಾರ್ಯವೇನು?
ಮಹಾದೇವರಿಗೆ ಜೈಲಿನಿಂದ ಬಿಡುಗಡೆಯಾಯಿತು. ಹಲವಾರು ಬಾರಿ ಜೈಲಿಗೆ ಹೋಗಿದ್ದರಿಂದ ದೇಹದ ಆರೋಗ್ಯದ ಬಗೆಗೆ ಅವರಿಗೆ ಕಾಳಜಿ ಉಂಟಾಯಿತು. ಶಿಸ್ತುಬದ್ಧವಾದ ವ್ಯಾಯಾಮವನ್ನು ಕಲಿಯಬೇಕೆನಿಸಿತು. ವ್ಯಾಯಾಮವನ್ನು ಕಲಿತರು. ವ್ಯಾಯಾಮ ಕಲಿಯುವಾಗಲೇ ಔಷಧಗಳ ಶಾಸ್ತ್ರವನ್ನು ಅಭ್ಯಾಸ ಮಾಡಿದರು. ಹಳ್ಳಿಗರ ಸೇವೆ ಮಾಡುವ ಉದ್ದೇಶದಿಂದ ಒಂದು ಸೇವಾಶ್ರಮವನ್ನು ಪ್ರಾರಂಭಿಸಿದರು. ಗಂಡ-ಹೆಂಡತಿ ಇಬ್ಬರೂ ಸೇವಾಶ್ರಮದ ಸಂಚಾಲಕರಾಗಿ ಚರಕದಿಂದ ನೂಲು ತೆಗೆಯುವುದು, ಪ್ರಕೃತಿ ಚಿಕಿತ್ಸೆ, ವ್ಯಾಯಾಮ ಮುಂತಾದವುಗಳನ್ನು ಹಳ್ಳಿಯ ಜನರಿಗೆ ಅಭ್ಯಾಸ ಮಾಡಿಸಿದರು. ಸೇವಾಶ್ರಮದಲ್ಲಿ ತಯಾರಿಯಾಗುತ್ತಿದ್ದ ಖಾದಿಯನ್ನು ಊರೂರಿಗೆ ಕೊಂಡು ಹೋಗಿ ಮಾರಾಟ ಮಾಡಿದರು. 'ಮಹಾದೇವನ ಖಾದಿ' ಎಂದೇ ಇದು ಪ್ರಸಿದ್ದಿಯಾಯಿತು

2. ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕಾದರೆ ಏನು ಮಾಡಬೇಕೆಂದು ಮಹಾದೇವ ಯೋಚಿಸಿದರು?
ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕಾದರೆ ಅವರು ನಡೆಸುತ್ತಿರುವ ಆಡಳಿತಕ್ಕೆ ಧಕ್ಕೆ ಉಂಟುಮಾಡಿ ಅವರಿಗೆ ಆಡಳಿತ ನಡೆಸುವುದು ಸಾಧ್ಯವಿಲ್ಲ ಎನಿಸಬೇಕಿತ್ತು. ಮಹಾದೇವ ತಮ್ಮ ಸಂಗಡಿಗರೊಂದಿಗೆ ಇಂಥ ಸಾಹಸಕ್ಕೆ ಅಣಿಯಾದರು. ರೈಲು ಓಡಾಟದ ಮೇಲೆ ಇವರು ಗಮನವಿಟ್ಟರು. ಸವಣೂರು ಎಂಬಲ್ಲಿ ರೈಲು ನಿಲ್ದಾಣವನ್ನು ಬ್ರಿಟಿಷ್ ಪೊಲೀಸರಿಗೆ ಗೊತ್ತಾಗದಂತೆ ಸುಟ್ಟುಹಾಕಿದರು. ಹೊನ್ನತ್ತಿ ಎಂಬಲ್ಲಿ ಪೊಲೀಸರ ಬಂದೂಕು ಅಪಹರಿಸಿದರು. ಬಾಳೆಹೊಸೂರಿನ ಪೊಲೀಸ್ ಕೇಂದ್ರವನ್ನು ಸುಟ್ಟರು. ಮಹಾದೇವ ಮತ್ತು ಸಂಗಡಿಗರ ಈ ಕೃತ್ಯಗಳಿಂದ ಬ್ರಿಟಿಷ್ ಸರ್ಕಾರ ನಡುಗಿತು. ಈ ರೀತಿ ಬ್ರಿಟಿಷರಿಗೆ ತೊಂದರೆ ಕೊಟ್ಟರು.

3. ಹೊಸರಿತ್ತಿಯಲ್ಲಿ ನಡೆದ ಘಟನೆಗಳಾವುವು?
ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಕಂದಾಯವನ್ನು ಬಲವಂತವಾಗಿ ವಸೂಲಿ ಮಾಡಿ ಜನರನ್ನು ಹಿಂಸಿಸುತ್ತಿದ್ದ ಸರಕಾರದ ಕೇಂದ್ರವಿತ್ತು. ಅದನ್ನು ಆಕ್ರಮಿಸಿಕೊಳ್ಳಬೇಕೆಂದು ನಿರ್ಧಾರವಾಯಿತು. ತಮ್ಮೊಟ್ಟಿಗೇ ಇದ್ದ ಪತ್ನಿ ಸಿದ್ದಮ್ಮನನ್ನು ಹಾಗೂ ಮಗಳಾದ ಕಸ್ತೂರಿದೇವಿಯನ್ನು ಹುಬ್ಬಳ್ಳಿಗೆ ಕಳುಹಿಸಿದರು. ೧೯೪೩ರ ಏಪ್ರಿಲ್ ೧ ರಂದು ಬೆಳಗಿನ ಸಮಯ. ಹೊಸರಿತ್ತಿಯ ಸಮೀಪದ ವೀರಭದ್ರ ದೇವಾಲಯದಲ್ಲಿ ಪೊಲೀಸರ ತುಕಡಿಯಿತ್ತು. ಅದರ ಪಕ್ಕದಲ್ಲೇ ಖಜಾನೆ. ಮಹಾದೇವ ತನ್ನ ಸಂಗಡಿಗರೊಂದಿಗೆ ಮುತ್ತಿಗೆ ಹಾಕಿದರು. ಮಹಾದೇವ ಅವರ ಧೈರ್ಯಕ್ಕೆ ಹೆದರಿ ಹಲವು ಪೊಲೀಸರು ಓಟ ಕಿತ್ತರು. ಮಹಾದೇವ ಖಜಾನೆಯ ಬೀಗ ಮುರಿಯುವುದರಲ್ಲಿ ನಿರತರಾಗಿದ್ದರು. ಅಡಗಿ ಕುಳಿತಿದ್ದ ಒಬ್ಬ ಪೊಲೀಸ್ ಮಹಾದೇವನ ಎದೆಗೆ ಗುಂಡು ಹೊಡೆದ. ಮಹಾದೇವ ರಕ್ತದ ಮಡುವಿನಲ್ಲಿ ಬಿದ್ದು ಬಲಿಯಾದರು.

ಈ ) ಖಾಲಿ ಜಾಗವನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ:
1. ಪ್ರಾಥಮಿಕ ನಂತರದ ವಿದ್ಯಾಭ್ಯಾಸಕ್ಕಾಗಿ ಮಹಾದೇವ ಹಂಸಭಾವಿ ಶಾಲೆಗೆ ಹೋದರು.
2. ಮಹಾದೇವ ದಂಡಿ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿ ಜೈಲು ಸೇರಿದರು.
3. ಹಾವೇರಿ ಜಿಲ್ಲಾ ಹೊಸರಿತ್ತಿಯಲ್ಲಿದ್ದ ಸರಕಾರದ ಕೇಂದ್ರ ಕಂದಾಯ ವಸೂಲಿ ಮಾಡುತ್ತಿತ್ತು.
4. ಸ್ವಾತಂತ್ರ್ಯ ಚಳುವಳಿಗೆ ಬಾಳು ಮೀಸಲಾಗಿಸಬೇಕು.

ಉ ) ಸ್ವಾತಂತ್ರ್ಯ ಚಳುವಳಿಗೆ ಸಂಬಂಧಪಟ್ಟ ಹತ್ತು ಪದಗಳನ್ನು ಬರೆಯಿರಿ:
ದೇಶಭಕ್ತರು – ಸಾಹಸ - ಸತ್ಯಾಗ್ರಹ – ತ್ಯಾಗ - ಘೋಷಣೆ – ಚಳುವಳಿ - ಬಂದೂಕು – ಧೈರ್ಯ - ಜೈಲುವಾಸ – ಹೋರಾಟ

ಊ ) ಕೆಳಗೆ ಸೂಚಿಸಿರುವ ಊರುಗಳು ಯಾವ ಜಿಲ್ಲೆಯಲ್ಲಿವೆ ಎಂಬುದನ್ನು ಬರೆಯಿರಿ:
1. ಮೋಟೆಬೆನ್ನೂರು – ಹಾವೇರಿ ಜಿಲ್ಲೆ.
2. ಹೊಸರಿತ್ತಿ – ಹಾವೇರಿ ಜಿಲ್ಲೆ.
3. ಕಲಾದಗಿ – ವಿಜಾಪುರ ಜಿಲ್ಲೆ.
ಕೃತಿಕಾರರ ಪರಿಚಯ.
ಕವಿ : ಕೆ.ಪಿ. ಪೂರ್ಣಚಂದ್ರ ತೇಜಸ್ವಿ . ( ರಾಷ್ಟ್ರ ಕವಿ ಕುವೆಂಪುರವರ ಪುತ್ರ ).
ಕಾಲ : 1938 ರ ಸೆಪ್ಟೆಂಬರ್ 08 ರಂದು.
ಸ್ಥಳ : ಶಿವಮೊಗ್ಗದಲ್ಲಿ ಜನಿಸಿದರು.
ಕೃತಿಗಳು : ತೋಟಗಾರಿಕೆ,ಛಾಯಾಗ್ರಹಣ , ಬರವಣಿಗೆ ಚಿತ್ರಕಲೆ ಇವರ ಹವ್ಯಾಸ . ಕತೆ , ಪರಿಸರ , ಶಿಕಾರಿ ಸಂಬಂಧಿತ ಬರಹಗಳು ಹೀಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿಗಳು : ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಭಾರತೀಯ ಭಾಪ್ರಾ ಪರಿಷತ್ ಪ್ರಶಸ್ತಿ ದೊರೆತಿವೆ . ಇವರ ಸಮಗ್ರ ಸಾಹಿತ್ಯಕ್ಕಾಗಿ ‘ ಪಂಪ ಪ್ರಶಸ್ತಿ ‘ ನೀಡಲಾಗಿದೆ.
ಇಂದಿನ ಮಕ್ಕಳು ಪರಿಸರವನ್ನು ವೀಕ್ಷಿಸುವುದು ಕಡಿಮೆ. ನಮ್ಮ ಸುತ್ತಮುತ್ತಲು ಅನೇಕ ಕೌತುಕಗಳು ಘಟಿಸುತ್ತಲೇ ಇರುತ್ತದೆ. ಅನೇಕ ಜೀವಿಗಳಿಂದ ನಾವು ಕಲಿಯಬೇಕಾದುದು ಬಹಳಪ್ಪಿರುತ್ತದೆ . ಅದನ್ನು ಕಲಿಯುವ ನಿಟ್ಟಿನಲ್ಲಿ ಈ ಗದ್ಯಪಾಠವೊಂದು ಪ್ರಯತ್ನ ಇಲ್ಲಿ ಲೇಖಕರು ಚಗಳಿ ಇರುವೆಗಳ ಪರಿಚಯ ಮಾಡಿಕೊಟ್ಟಿದ್ದಾರೆ.

ಪದಗಳ ಅರ್ಥ : ವರ್ಗ-ಗುಂಪು, ಸಮೂಹ; ವರ್ಣನೆ-ಬಣ್ಣನೆ; ಸಂಕೀರ್ಣ-ಜಟಿಲವಾದ. ನಾನಾ ವಿಧವಾದ; ಅಂಚು-ಕೊನೆ. ತುದಿ: ಸ್ರವಿಸು-ಒಸರು, ಜಿನುಗು; ಬೆಸೆ-ಕೂಡಿಸು, ಸೇರಿಸು; ಮಾಳಿಗೆ-ಮಹಡಿ; ಹಿಮ್ಮೆಟ್ಟಿಸು-ಹಿಂದಕ್ಕೆ ಸರಿಸು, ಸೋಲಿಸು: ಸಿಂಪರಿಸು-ಚಿಮುಕಿಸು. ಲೇಪಿಸು; ಆಜುಬಾಜು-ಅಕ್ಕಪಕ್ಕ, ನೆರೆಹೊರೆ: ಸನ್ನದ್ಧ-ಸಿದ್ಧವಾಗು; ಉಚ್ಛಿಷ್ಠ-ಎಂಜಲು; ಮಧು-ಸಿಹಿ: ವಾಹಕ-ಸಾಗಿಸುವ; ಒಸರು-ಜಿನುಗು.

ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
1. ಕೊಟ್ಟೆ ಎಂದರೇನು?.
ಕೊಟ್ಟೆ ಎಂದರೆ ಚಗಳಿ ಇರುವೆಗಳು ಎಲೆಗಳನ್ನು ಒಂದಕ್ಕೊಂದು ಸೇರಿಸಿ ಕಟ್ಟುವ ಗೂಡು.

2. ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ಏನನ್ನು ಬಳಸುತ್ತವೆ?
ಚಗಳಿ ಇರುವೆಗಳು ಎಲೆಗಳನ್ನು ಅಂಟಿಸಲು ತಮ್ಮ ದೇಹದಿಂದ ಉತ್ಪತ್ತಿಯಾಗುವ ರೇಷ್ಮೆಯಂತ ನೂಲನ್ನು ಬಳಸುತ್ತದೆ.

3. ಇವು ತಮ್ಮ ಸಂಗಡಿಗರಿಗೆ ಯಾವ ರಾಸಾಯನಿಕದ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ?.
ಚಗಳಿ ಇರುವೆಗಳು ತಮ್ಮ ಸಂಗಡಿಗರಿಗೆ ಫಿರಮೊನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸುವುದರ ಮೂಲಕ ಸಂದೇಶಗಳನ್ನು ತಲುಪಿಸುತ್ತವೆ.
4. ಚಗಳಿ ಇರುವೆಗಳಂತೆಯೇ ಸಂಘ ಜೀವನವನ್ನು ನಡೆಸುವ ಇತರ ಜೀವಿಗಳು ಯಾವುವು ?
ಚಗಳಿ ಇರುವೆಗಳಂತೆಯೇ ಸಂಘ ಜೀವನವನ್ನು ನಡೆಸುವ ಇತರ ಜೀವಿಗಳು ಜೇನುಹುಳು , ಕರಿಗೊದ್ದ . ಕೆಂಪು ಇರುವೆ …. ಇತ್ಯಾದಿ.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
1. ಚಗಳಿ ಇರುವೆಗಳ ಶಿಸ್ತಿಗೆ ಒಂದು ಉದಾಹರಣೆ ಕೊಡಿ.
ಚಗಳಿ ಇರುವೆಗಳು ಗೂಡು ಕಟ್ಟುವಾಗ ನಿಜವಾಗಲೂ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡುತ್ತದೆ . ಎಲೆಯನ್ನು ಬಗ್ಗಿಸಿ ಇರುವೆಗಳು ಒಂದರ ಕಾಲು ಇನ್ನೊಂದು ಹಿಡಿದುಕೊಂಡು ಜೋತಾಡುತ್ತಾ ಗೂಡನ್ನು ಕಟ್ಟುತ್ತವೆ.

2. ಕೆಲಸಗಾರ ಇರುವೆಗಳ ಕೆಲಸವೇನು ?
ಕೆಲಸಗಾರ ಇರುವೆಗಳು ತಿಗಣೆ ಮತ್ತು ಜಿಗಿ ಹುಳುಗಳನ್ನು ಹಿಡಿದು ತಂದು ತಾವು ಕೊಟ್ಟೆ ಕಟ್ಟಿದ ಮರದ ಕೊಂಬೆಗಳ ಮೇಲೆ ಅವುಗಳನ್ನು ಸಾಕುವುದು , ಚಗಳಿಗಳ ಜೀವನದಲ್ಲಿ ಇದಕ್ಕೆ ಅಪಾರ ಪ್ರಾಮುಖ್ಯತೆ ಇದೆ . ಅವು ತರುವ ಕೀಟಗಳ ಉಚ್ಚಿಷ್ಟ ( ಎಂಜಲು) ಸಿಹಿಯಾದ ಮಧುವಾಗಿರುವುದರಿಂದ ಅದು ಇರುವೆಗಳಿಗೆ ಆಹಾರವಾಗುತ್ತದೆ.

3. ಚಗಳಿ ಇರುವೆಗಳನ್ನು ಹಿಮ್ಮೆಟ್ಟಿಸುವುದು ಮನುಷ್ಕರಿಗೂ ಏಕೆ ಕಷ್ಟ ? ಏಕೆ ?
ಈ ಇರುವೆಗಳ ಶಿಸ್ತು, ಧೈರ್ಯ ಮತ್ತು ಒಗ್ಗಟ್ಟುಗಳ ದೆಸೆಯಿಂದ ಇವನ್ನು ಮನುಷ್ಯರಿಗೂ ಸಹ ಹಿಮ್ಮೆಟ್ಟಿಸುವುದು ಕಷ್ಟ ಬೇರೆ ಇರುವೆಗಳನ್ನು ನೀವು ಹಿಡಿಯಲು ಹೋದರೆ ಅವು ತಲೆ ತಪ್ಪಿಸಿಕೊಂಡು ಓಡಿಹೋಗಲು ನೋಡುತ್ತವೆ. ಆದರೆ ಚಗಳಿ ಇರುವೆಗಳನ್ನು ಹಿಡಿಯಲು ಹೋದರೆ ಅವು ಓಡುವುದಿಲ್ಲ. ಬದಲಿಗೆ ತಿರುಗಿ ನಿಂತು ನೆಗೆದು ಕಚ್ಚಲು ಸಿದ್ಧವಾಗುತ್ತವೆ. ಅಷ್ಟೇ ಅಲ್ಲದೆ ತನ್ನ ಹಿಂಭಾಗವನ್ನು ಮೇಲೆತ್ತಿ ಹೊಟ್ಟೆ ಅಡಿಯಲ್ಲಿರುವ ಗ್ರಂಥಿಗಳಿಂದ ಅಪಾಯದ ಫಿರಮೋನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸುತ್ತವೆ. ಕೆಲವೇ ಕ್ಷಣಗಳಲ್ಲಿ ಆಜುಬಾಜಿನಲ್ಲಿರುವ ಎಲ್ಲ ಚಗಳಿ ಇರುವೆಗಳೂ ಯುದ್ಧ ಸನ್ನದ್ದರಾಗಿ ಹಾಜರಾಗುತ್ತವೆ.

ಇ. ಕೆಳಗಿನ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ.
1. ಚಗಳಿ ಇರುವೆಗಳು ತಮ್ಮ ಗೂಡನ್ನು ಹೇಗೆ ನಿರ್ಮಿಸುತ್ತವೆ?
ಚಗಳಿ ಇರುವೆಗಳು ಎಲ್ಲಿ ಗೂಡು ಕಟ್ಟಬೇಕು ಎಂದು ನಿರ್ಧರಿಸಿ , ಮೊದಲು ಎರಡೋ ಮೂರೋ ಅಕ್ಕಪಕ್ಕದ ಎಲೆಗಳನ್ನು ಸೇರಿಸಿ ಪೊಟ್ಟಣ ಕಟ್ಟಿದಂತೆ ಗೂಡು ಕಟ್ಟುತ್ತವೆ . ನಂತರ ಅಕ್ಕಪಕ್ಕದ ಹಲವಾರು ಎಲೆಗಳನ್ನು ಹೊಂದಿಸಿ ಮಾಳಿಗೆಗಳನ್ನು ನಿರ್ಮಿಸುತ್ತಾ ಗೂಡನ್ನು ದೊಡ್ಡ ಮಾಡುತ್ತವೆ . ಇದರ ಶರೀರಕ್ಕಿಂತ ನೂರಾರು ಪಟ್ಟು ವಿಸ್ತಾರವಾಗಿಯೂಬಲವಾಗಿಯೂ ಇರುವ ಎಲೆಗಳನ್ನು ಬಗ್ಗಿಸಿ ಅದನ್ನು ದಾರದಿಂದಅಂಚನ್ನು ಹೊಲೆಯಲು ಅನೇಕ ಇರುವೆಗಳು ಒಂದರ ಕಾಲನ್ನುಇನ್ನೊಂದು ಹಿಡಿದುಕೊಂಡು ಜೋತಾಡುತ್ತಾ ಮೇಲಿನಿಂದ ಕೆಳಗೆ ಬರುತ್ತದೆ . ಈ ಕಾರ್ಯದಲ್ಲಿ ಶಿಸ್ತಿನ ಸಿಪಾಯಿಯಂತೆ ಕರಾರುವಕ್ಕಾಗಿ ಕೆಲಸ ಮಾಡುತ್ತವೆ . ಈ ರೀತಿ ಗೂಡನ್ನು ನಿರ್ಮಿಸುತ್ತದೆ.

2. ಚಗಳಿ ಇರುವೆಗಳು ಉಪಕಾರಿಯೂ ಹೌದು , ಉಪದ್ರವಕಾರಿಯೂ ಹೌದು .ಈ ಹೇಳಿಕೆಯನ್ನು ವಿವರಿಸಿ.
ಚಗಳಿ ಇರುವೆಗಳು ತಮ್ಮ ಆಹಾರಕ್ಕಾಗಿ ಲಕ್ಷಾಂತರ ಕೀಟಗಳನ್ನು ಹಿಡಿದು ತಂದು ಕೊಲ್ಲುವುದರಿಂದ ಸಹಾಯ ಮಾಡಿದಂತಾಗುತ್ತದೆ . ಈ ಕೀಟಗಳಿಂದ ಆಗುವ ಹಾನಿಗಳು ತಪ್ಪಿ ಇರುವೆಗಳು ರೈತಮಿತ್ರ ಎನಿಸಿಕೊಳ್ಳುತ್ತದೆ . ಹಾಗೆಯೇ ಜಿಗಿ ಹುಳುಗಳನ್ನೂ , ತಿಗಣೆಗಳನ್ನು ಗೂಡು ಮಾಡಿರುವ ಮರ ಗಿಡಗಳಲ್ಲೆಲ್ಲಾ ತಂದು ಸಾಕುವುದರಿಂದ ಈ ಉಪದ್ರವಕಾರಿ . ಹಚ್ಚಿ ತೊಂದರೆ ಕೊಡುತ್ತದೆ . ಆದುದರಿಂದ ಇದನ್ನು ಉಪಕ್ರಿಯೂ ಹೌದು ಉಪದ್ರಕಾರಿಗಳು ಹೌದು ಎಂಬುದನ್ನು ತಿಳಿಯಬಹುದು.

3. ಕಷ್ಟಕ್ಕೆ ಹೆದರಿ ಓಡಬಾರದು , ತಿರುಗಿ ನಿಂತು ಎದುರಿಸಬೇಕೆಂಬ ಸಂದೇಶವನ್ನು ನಾವು ಇವುಗಳ ಜೀವನದಿಂದ ಹೇಗೆ ಕಲಿಯಬಹುದು?
ಮನುಷ್ಕನೇನಾದರೂ ಚಗಳಿ ಇರುವೆಗಳನ್ನು ಹಿಡಿಯಲು ಅಥವಾ ಹಿಂಸಿಸಲು ಹೋದರೆ , ಅವು ತಮ್ಮ ಸ್ವಾರ್ಥವನ್ನು ಮಾತ್ರ ನೋಡಿಕೊಂಡು ಓಡಿ ಹೋಗುವುದಿಲ್ಲ . ಈ ಇರುವೆಗಳ ಶಿಸ್ತು, ಧೈರ್ಯ ಮತ್ತು ಒಗ್ಗಟ್ಟುಗಳ ದೆಸೆಯಿಂದ ಇವನ್ನು ಮನುಷ್ಯರಿಗೂ ಸಹ ಹಿಮ್ಮೆಟ್ಟಿಸುವುದು ಕಷ್ಟ ಬೇರೆ ಇರುವೆಗಳನ್ನು ನೀವು ಹಿಡಿಯಲು ಹೋದರೆ ಅವು ತಲೆ ತಪ್ಪಿಸಿಕೊಂಡು ಓಡಿಹೋಗಲು ನೋಡುತ್ತವೆ. ಆದರೆ ಚಗಳಿ ಇರುವೆಗಳನ್ನು ಹಿಡಿಯಲು ಹೋದರೆ ಅವು ಓಡುವುದಿಲ್ಲ. ಬದಲಿಗೆ ತಿರುಗಿ ನಿಂತು ನೆಗೆದು ಕಚ್ಚಲು ಸಿದ್ಧವಾಗುತ್ತವೆ. ಅಷ್ಟೇ ಅಲ್ಲದೆ ತನ್ನ ಹಿಂಭಾಗವನ್ನು ಮೇಲೆತ್ತಿ ಹೊಟ್ಟೆ ಅಡಿಯಲ್ಲಿರುವ ಗ್ರಂಥಿಗಳಿಂದ ಅಪಾಯದ ಫಿರಮೋನ್ ರಾಸಾಯನಿಕವನ್ನು ಗಾಳಿಯಲ್ಲಿ ಸಿಂಪಡಿಸುತ್ತವೆ. ಕೆಲವೇ ಕ್ಷಣಗಳಲ್ಲಿ ಆಜುಬಾಜಿನಲ್ಲಿರುವ ಎಲ್ಲ ಚಗಳಿ ಇರುವೆಗಳೂ ಯುದ್ಧ ಸನ್ನದ್ದರಾಗಿ ಹಾಜರಾಗುತ್ತವೆ. ಇದನ್ನು ನೋಡಿ ನಾವು ಕಷ್ಟಕ್ಕೆ ಹೆದರಿ ಓಡಬಾರದು , ತಿರುಗಿ ನಿಂತು ಎದುರಿಸಬೇಕೆಂಬ ಸಂದೇಶವನ್ನು ನಾವು ಇವುಗಳ ಜೀವನದಿಂದ ಕಲಿಯಬಹುದು.

ಈ ) ಖಾಲಿ ಜಾಗವನ್ನು ಸೂಕ್ತ ಪದಗಳಿಂದ ಭರ್ತಿ ಮಾಡಿ.
1. ಚಗಳಿ ಇರುವೆಗಳಿಗೆ ಮೂಲ ರಾಣಿ ಇರುವೆ.
2. ದನ ಸಾಕುವ ಗೋಪಾಲಕರನ್ನು ಹೋಲುವ ಇರುವೆಗಳು ಕೆಲಸಗಾರ ಇರುವೆಗಳು.
3. ಚಗಳಿ ಇರುವೆಗಳ ಗೂಡನ್ನು ಕೊಟ್ಟೆ ಎಂದು ಕರೆಯುತ್ತಾರೆ.
4. ಒಂದು ಚಗಳಿ ಇರುವೆ ಗೂಡಿನಲ್ಲಿ ಸುಮಾರು 5 ರಿಂದ 10 ಲಕ್ಷ ಇರುವೆಗಳು ಇರುತ್ತವೆ.
5. ಇರುವೆಗಳಿಂದ ಒಸರುವ ರಾಸಾಯನಿಕ ಫಿರಮೋನ್.
ಕೃತಿಕಾರರ ಪರಿಚಯ.
ಕವಿ :ಡಾ. ಎಚ್. ಎಸ್. ವೆಂಕಟೇಶಮೂರ್ತಿ.
ಕಾಲ : (೧೯೪೪).
ಸ್ಥಳ : ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿ ಜನಿಸಿದರು.
ಕೃತಿಗಳು : ಕನ್ನಡ ಪ್ರಾಧ್ಯಾಪಕರಾಗಿದ್ದ ಇವರು ಬಹುಮುಖ ಪ್ರತಿಭೆಯ ಸಾಹಿತಿ, ಇವರ ಸಿಂದಾಬಾದನ ಆತ್ಮಕಥೆ, ಕ್ರಿಯಾಪರ್ವ, ಒಣಮರದ ಗಿಳಿಗಳು, ಋತುವಿಲಾಸ, ಎಷ್ಟೊಂದು ಮುಗಿಲು, ಅಮೆರಿಕಾದಲ್ಲಿ ಬಿಲ್ಲಹಬ್ಬ, ಭೂಮಿಯೂ ಒಂದು ಆಕಾಶ ಮೊದಲಾದವು ಕವನ ಸಂಕಲನಗಳು, ಒಂದು ಸೈನಿಕ ವೃತ್ತಾಂತ, ಕತ್ತಲೆಗೆ ಎಷ್ಟು ಮುಖ, ಚಿತ್ರಪಟ, ಅಳಿಲು ರಾಮಾಯಣ, ಸುಣ್ಣದ ಸುತ್ತು, ಊರ್ಮಿಳಾ ಹೂವಿ ಮತ್ತು ಸಂಧಾನ ಮೊದಲಾದವು ಪ್ರಮುಖ ನಾಟಕಗಳು.
ಪ್ರಶಸ್ತಿಗಳು : ಐದು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಇವರ ಋತುವಿಲಾಸ ಅನುವಾದಿತ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ದೇವರಾಜ ಬಹದ್ದೂರ್ ಪ್ರಶಸ್ತಿಗಳನ್ನು ಪಡೆದಿರುವ ಇವರು ಕನ್ನಡದಲ್ಲಿ ಕಥನ ಕವನಗಳು ಎಂಬ ವಿಷಯದ ಬಗೆಗೆ ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿಗಳಿಸಿದ್ದಾರೆ.

ಪದಗಳ ಅರ್ಥ.
ಬಿಸಿಲು ಮಚ್ಚು - ಬಿಸಿಲು ಮಾಳಿಗೆ:
ಬಡಿಗೆ – ದೊಣ್ಣೆ, ಕೋಲು:
ಪೋರ – ಹುಡುಗ:
ಗೂಢಚಾರ - ಗುಪ್ತಚರ:
ಶೋಧ ಹುಡುಕು:
ಮಾಹಿತಿ ತಿಳಿವಳಿಕೆ, ವಿವರಣೆ:
ಲೋಕಾಭಿರಾಮ-ಸಹಜವಾಗಿ;
ಎಕ್ಕಡ - ಪಾದುಕೆ, ಪಾದರಕ್ಷೆ;
ಪಾಶ - ಹಗ್ಗ;
ಪರಾಂಬರಿಸು - ಗಮನಿಸು, ಪರಿಶೀಲಿಸು;
ಕ್ರೀಡಾಗಾರ - ಕ್ರೀಡಾಂಗಣ:
ಹೆಬ್ಬಾಗಿಲು - ಮಹಾದ್ವಾರ:
ಪಥ್ಯ ಆಹಾರದ ಕಟ್ಟುಪಾಡು, ಯೋಗ್ಯವಾದುದು;
ತಮಾಷೆ -ಹಾಸ್ಯ:
ಕೊಂಚ - ಸ್ವಲ್ಪ:
ಫಟಿಂಗ- ತುಂಟ, ಭಂಡ:
ತಾರಮ್ಮಯ್ಯ - ಅಂಗೈ ಆಡಿಸು:
ವಾತಾಯನ-ಕಿಟಕಿ:
ಕೂಸು - ಮಗು:
ಹಾಲಾಹಲ : ಕ್ಷೀರ - ಹಾಲು;
ಮಥಿಸು - ಕಡೆ;
ಸಂಕೋಲೆ - ಸರಪಳಿ:
ಅಪರಂಜಿ - ಬಂಗಾರ:
ಯಾಗ- ಯಜ್ಞ:
ತೊಯ್ - ನೆನೆ. ಒದ್ದೆಯಾಗು;
ಸೆರೆಮನೆ ಬಂದೀಖಾನೆ :
ಪೀಡೆ - ತೊಂದರೆ;
ಬೊಗಳೆ-ಕೆಲಸಕ್ಕೆ ಬಾರದ ಮಾತು, ಪೊಳ್ಳು ಹರಟೆ;
ಅಷ್ಟಮೀ - ಎಂಟನೆಯ:
ಕೋಶ ಭಂಡಾರ;
ಪಟ್ಟ-ಸಿಂಹಾಸನ;
ಪಗಡಿ- ಕಾಣಿಕೆ, ಗೌರವ:
ಪಿಳ್ಳಂಗೋವಿ - ಕೊಳಲು:
ಸ್ನೇಹಿತ - ಗೆಳೆಯ, ಸಂಗಾತಿ, ಜತೆಗಾರ:
ಪಿಳ್ಳೆ - ಮಗು.
ಅ ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ:
1. ಕೃಷ್ಣ ಯಾರ ಸೊಂಟವನ್ನು ಮುರಿದನು?
ಕೃಷ್ಣನು ಶಕಟನ ಸೊಂಟವನ್ನು ಮುರಿದನು.

2. ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಏನಾದ?
ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಬೇಲದ ಹಣ್ಣು ಬಡಿಯೋ ಬಡಿಗೆಯಾದನು.

3. ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಯಾರು ? ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಶೈಲಿಕ ಮತ್ತು ದುರ್ವಿಧ ಎಂಬ ಗೂಢಚಾರರು . 4. ವಸುದೇವನಿಗೆ ಮಕ್ಕಳ ವಿಚಾರ ಹೇಳಿದವರು ಯಾರು?
ವಸುದೇವನಿಗೆ ಅವನ ಮಕ್ಕಳ ವಿಚಾರವನ್ನು ಅಕ್ರೂರನು ಹೇಳಿದನು.

5. ವಸುದೇವ ಹೇಳುವಂತೆ ರಾಜಕಾರ್ಯ ಹೇಗಿರುತ್ತದೆ?
ವಸುದೇವ ಹೇಳುವಂತೆ ರಾಜಕಾರ್ಯವು ಹತ್ತು ಜನ ಕೂತಾಗ ಜೋಲಿ , ಏಕಾಂಗಿಯಾಗಿದ್ದಾಗ ಒತ್ತಿದರೂ ಮುಚ್ಚದ ರೆಪ್ಪೆ.

6. ನಂದ ಯಾರೆಂದು ಕಂಸ ಹೇಳುತ್ತಾನೆ?
ನಂದ ದೇವಕಿಯ ಗಂಡ ವಸುದೇವನ ಬಾಲ್ಯಸ್ನೇಹಿತ , ಪರಮಾಪ್ತ ಪ್ರಾಣಮಿತ್ರ.

ಆ ) ಕೊಡುವ ಪುಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ.
1. ಕೃಷ್ಣ ಯಾರು ಯಾರನ್ನು ಕೊಂದ?.
ಕೃಪ್ಪನು ಹಾಲು ಕೊಡಲು ಹೋದ ಪೂತನಿಯ ರಕ್ತ ಹೀರಿ ಕೊಂದನು . ಸವಾರಿ ಮಾಡು ಎಂದು ಬೆನ್ನೊಡಿದ ಶಕಟನ ಸೊಂಟ ಮುರಿದು ಕೊಂದನು . ತೃಣಾವರ್ತ ಆಟದ ಬುಗುರಿಯಾಗಿಸಾವನ್ನಪ್ಪಿದ . ಧೇನುಕ ಬೇಲದ ಹಣ್ಣು ಬಡಿಯೊ ಬಡಿಗೆಯಂತೆ ಬಡಿದು ಕೊಂದನು.

2. ಕ್ರೀಡಾಗಾರದಲ್ಲಿ ಆಗಿದ್ದ ಗುಪ್ತ ಏರ್ಪಾಡು ಏನು?
ಕ್ರೀಡಾಗಾರದ ಹೆಬ್ಬಾಗಿಲಿನ ಬಾಗಿಲುವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ ಮಾಡಿ , ಬಾಗಿಲವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ .. ಬಾಗಿಲವಾಡದ ಕಮಾನಿನ ಮೇಲೆ ಗಾಜಿನ ರಾಜಗೋಪುರ ಅದೇನಾದ್ರೂ ತಲೇ ಮೇಲೆ ಬಿತ್ತು ಅಂದ್ರೆ ಶ್ರೀಮದ್ ರಮಾರಮಣ ಗೋವಿಂದಾ ಗೋವಿಂದ.

3. ವಸುದೇವನು ತನ್ನ ಮಕ್ಕಳನ್ನು ನೆನೆದು ವ್ಯಥಪಟ್ಟ ಬಗೆ ಹೇಗೆ?
ವಸುದೇವನು ತನ್ನ ಮಕ್ಕಳನ್ನು ನೆನೆಸಿಕೊಂಡು ಹದಿನಾರು ‘ ವರ್ಷಗಳಿಂದ ಅವರನ್ನು ನೋಡದೆ ತಪಿಸುತ್ತಿದ್ದನು. ತಮ್ಮ ಮಕ್ಕಳನ್ನು ತಾವು ಅಡಿಸಲಿಲ್ಲ , ಆರೈಕೆ ಮಾಡಲಿಲ್ಲ , ತೊದಲು ನುಡಿ ಕೇಳಲಿಲ್ಲ ತೂಗಲಿಲ್ಲ , ಜೋಗುಳ ಹಾಡಲಿಲ್ಲ ಎಂದು ವ್ಯಥೆ ಪಟ್ಟನು.

4. ಕಂಸ ತಂಗಿಯ ಮೇಲಿನ ಪ್ರೀತಿ ಎಂಥದೊಂದು ಹೇಳಿಕೊಂಡಿದ್ದಾನೆ?
ಕಂಸನು ತನಗೆ ತನ್ನ ತಂಗಿಯ ಮೇಲೆ ಅಪಾರ ಪ್ರೀತಿಯಿದೆ ಆದ್ದರಿಂದಲೇ ಸಂಕೊಲೆ ಹಾಕಿಸಿದರೂ ಅದನ್ನು ಶುದ್ಧ ಅಪರಂಜಿಯಿಂದ ಮಾಡಿದ್ದು , ಕೊರಳಿಗೆ ಮೂರಳೆ , ಕೈಗೆ ಎರಡೆಳೆ , ಕಾಲಿಗೆ ಒಂದೆಳೆಯನ್ನು – ಈ ಎಲ್ಲವನ್ನು ಚಿನ್ನದಿಂದಲೇ ಮಾಡಿಸಿರುವುದು . ಮಾಡಿಸಿ 25 ವರ್ಷಗಳಾದರೂ ಸ್ವಲ್ಪವೂ ಕಪ್ಪಾಗಿಲ್ಲ ಅದು ಪ್ರೀತಿ ಅಂದರೆ ಎಂದು ದೇವಕಿ – ವಸುದೇವನ ಮುಂದೆ ಹೇಳಿಕೊಂಡಿದ್ದಾನೆ.

ಇ ) ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು ಐದು ವಾಕ್ಯ ಉತ್ತರಿಸಿ:
1 . ಗೂಢಚಾರರು ಯಾವುದರ ಬಗ್ಗೆ ಶೋಧನೆ ಮಾಡುತ್ತಿದ್ದಾರೆ ? ವಿವರಿಸಿ.
ಕೃಷ್ಣನು ಯಾರು , ಗೊಲ್ಲರ ಹುಡುಗನಾದ ಕೃಷ್ಮನಿಗೆ ರಾಕ್ಷಸರನ್ನೆಲ್ಲಾ ಸಾಯಿಸುವ ಅಗಾಧವಾದ ಶಕ್ತಿಯು ಎಲ್ಲಿಂದ ಬಂತು . ಯಾರು ಅವನಿಗೆ ಈ ಶಕ್ತಿಯನ್ನು ಕೊಟ್ಟಿದ್ದಾರೆ ಎಂಬುದರ ಬಗೆ ಗೂಢಚಾರರು ಶೋಧನೆ ಮಾಡುತ್ತಿದ್ದರು. ಕೃಷ್ಣನ ತೊಂದರೆಯನ್ನು ಸಹಿಸಲಾರದೆ ಅವನನ್ನು ಹೇಗಾದರೂ ಮಾಡಿ ಸಾಯಸಿಬೇಕೆಂದು ಕಂಸನು ನಾನಾ ತರಹ ಉಪಾಯಗಳನ್ನು ಹೂಡುತ್ತಾನೆ . ಚಿಕ್ಕ ಮಗು ಎಂದು ಪೂತನಿಯನ್ನು ಕಳಿಸಿರುತ್ತಾನೆ . ನಂತರ ಶಕಟ , ತೃಣಾವರ್ತ , ಧೇನುಕ ಮೊದಲಾದ ರಾಕ್ಷಸರೆಲ್ಲ ಸತ್ತು ಹೋಗುತ್ತಾರೆ . ಅಗಾಧವಾದ ಗೋವರ್ಧನ ಬೆಟ್ಟವನ್ನು ಯಕಶ್ಚಿತ್ ಛತ್ರಿಯಾಗಿ ಮಾಡಿಕೊಂಡ ಕೃಷ್ಣನ ಬಗ್ಗೆ ಕಂಸನಿಗೆ ತುಂಬಾ ಕೋಪವಿರುತ್ತದೆ . ಆದ್ದರಿಂದ ಅವನು ಯಾರು , ಏನು ಎಂದು – ವಿಚಾರಿಸಲು ಗುಪ್ತಾಚರರನ್ನು ನೇಮಿಸಲು ಕಂಸನು ತನ್ನ ಮಂತ್ರಿಗೆ ಹೇಳಿರುತ್ತಾನೆ . ಅವರು ಅವನ ಬಗ್ಗೆ ತಿಳಿದುಕೊಳ್ಳುವ ಶೋಧನೆ ಕೊನೆ ಹಂತಕ್ಕೆ ಬಂದಿದೆ ಎಂದು ಮಂತ್ರಿಯು ಹೇಳುತ್ತಾನೆ.

2. ಕೃಷ್ಣನನ್ನು ಕೊಲ್ಲಲು ದುರ್ವಿಧ – ಶೈಲಿಕರು ಮಾಡಿದ್ದ – ಏರ್ಪಾಡುಗಳೇನು?
ಕೃಷ್ಣ ತನ್ನ ಶತೃ , ಕೃಷ್ಣನಿಂದ ತನಗೆ ಸಾವು ಬರಬಹುದೆಂದು ಭಯದಿಂದ ಕಂಸನ್ನು ಕೃಷ್ಣನನ್ನು ಸಾಯಿಸಲು ಅನೇಕ ಉಪಾಯಗಳನ್ನು ಹೂಡುತ್ತಾನೆ . ಆದರೆ ಸಾಯಿಸಲೆಂದು ಹೋದವರೇ ಸತ್ತು ಹೋಗುತ್ತಿದ್ದುದನ್ನು ಕಂಡು ಈ ಹೊಸ ಉಪಾಯವಾದ ‘ ಬಿಲ್ಲಹಬ್ಬ ‘ ವನ್ನು ಆಯೋಚಿಸಿರುತ್ತಾರೆ . ಬಿಲ್ಲಹಬ್ಬಕ್ಕೆ ಬರುವ ಸ್ಪರ್ಧಾರ್ಥಿಗಳಲ್ಲಿ ಕೃಷ್ಣನೂ ಒಬ್ಬನಾಗಿರುತ್ತಾನೆ . ಕ್ರೀಡಾಂಗಣದ ಹೆಬ್ಬಾಗಿಲಿನ ಬಾಗಿಲವಾಡದ ಕಮಾನಿಗೆ ಕಿರುಗತ್ತಿ ಅಲಂಕಾರ , ಅದರ ಮೇಲೆ ಗಾಜಿ ರಾಜಗೋಪುರವಿರುವ ಏರ್ಪಾಡು ಆಗಿರುತ್ತದೆ .ಕೃಷ್ಣ ಆ ದ್ವಾರದಲ್ಲಿ ಬರುವಾಗ ಒಂದು ಸಣ್ಣ ಕೀಲಿ ಕೈಯನ್ನು ಎಳೆಯುವ ಸಿದ್ಧತೆ ಮಾಡಿರುತ್ತಾರೆ , ಆ ಕೀಲಿ ಕೈ ಎಳೆದರೆ ಮೇಲಿನ ರಾಜಗೊಪುರದ ಸಮೇತ ಕೆಳಗೆ ಬೀಳುವಾಗ ಕಿರುಗತ್ತಿಯು ತಲೆಯ ಮೇಲೆ ಬಿದ್ದು ಕೆಳಗಿರುವ ವ್ಯಕ್ತಿ ಸಾಯುವಂತೆ ಮಾಡಿರುತ್ತಾರೆ . ಪಟ್ಟದ ಆನೆಯಾದ ಕುವಲಯಾಪೀಡಕ್ಕೆ ಔಪ . ಆಕ್ರಮಣ ಮಾಡುವಂತೆ ತರಬೇತಿ ಕೊಟ್ಟಿರುತ್ತಾರೆ . ಈ ರೀತಿ ಕೃಷ್ಣನನ್ನು ಕೋಲನ್ನು ದುರ್ವಿಧ – ಶೈಲಿಕರು ಯೋಜನೆ ಹೂಡಿರುತ್ತಾರೆ.

3. ಕಂಸ ದೇವಕಿಯಿಂದ ಕೃಷ್ಮನ ಬಗ್ಗೆ ತಿಳಿಯಲು ಹೋಗಿ , ನಿರಾಶನಾದದ್ದು ಹೇಗೆ?
ಕಂಸನು ದೇವಕಿಯ ಅಷ್ಟಮ ಪುತ್ರ , ತನ್ನನ್ನು ಕೊಲ್ಲುತ್ತಾನೆ ಎಂಬ ಮಾತಿನಿಂದ ಕಳವಳ ಪಟ್ಟುಕೊಂಡು ಅವನಿಗಾಗಿ ಹುಡುಕುತ್ತಿರುತ್ತಾನೆ . ದೇವಕಿಯನೇ ಎಲ್ಲಿ ಬಚ್ಚಿಟ್ಟಿದ್ದೀಯಾ ಹೇಳು , ಹೇಳಿದರೆ ನನ್ನ ರಾಜ್ಯವನ್ನೆಲ್ಲಾ ಕೊಟ್ಟು ಬಿಡುತ್ತೇನೆ , ರಾಜ್ಯ , ಕೋಶ , ಪಗಡಿ ಎಲ್ಲವನ್ನೂ ನಿನ್ನ ಗಂಡನಿಗೆ ಕೊಡುತ್ತೇನೆ ಹೇಳು ಎಂದಾಗ ಅಸಹಾಯಕಳಾದ ಅವಳು ಅಳುತ್ತಾಳೆ . ಗೋಕುಲದಲ್ಲಿರುವ ಕೃಷ್ಮ ನಿನ್ನ ಮಗನೇ ಎಂದಾಗ ಅಲ್ಲ ಎಂದು ಹೇಳುತ್ತಾಳೆ . ಪರಿಪರಿಯಾಗಿ ಬೇಡಿಕೊಂಡರೂ ಏನೂ ವಿಷಯ ಗೊತ್ತಾಗದೆ ನಿರಾಶನಾಗಿ ಹಿಂತಿರುಗುತ್ತಾನೆ.

ಈ ವಾಕ್ಯಗಳನ್ನು ಹೇಳಿಕೆಗಳನ್ನು ಯಾರು ಯಾರಿಗೆ . ಯಾವಾಗಿ ಹೇಳಿದರು / ತಿಳಿಸಿರಿ.
1 .” ಹೌದು ಒಡೆಯ – ಕ್ರೀಡಾಂಗಣಕ್ಕೆ ಇರೋರು ಒಂದೇ ಹೆಬ್ಬಾಗಿಲು“
ಈ ಮಾತನ್ನು ಕಂಸನಿಗೆ ಕೃಷ್ಣನನ್ನು ಸಾಯಿಸಲು ತಾನು ಮಾಡಿಸಿದ ಏರ್ಪಡಿಸಿದ ಬಗ್ಗೆ ಹೇಳುವಾಗ ಹೇಳಿದ ಮಾತು.

2 . ” ಮಂಡೇಲಿ ಕೊಂಚ ಮಾಂಸ ಇರಬೇಕು.
ಈ ಮಾತನ್ನು ಕಂಸನು ಮಂತ್ರಿಗೆ ಹೇಳಿದನು . ಕಂಸನು ಕೃಷ್ಣನ ಬಗ್ಗೆ ತಿಳಿದುಕೊಳ್ಳಬೇಕೆಂದು ಮತಿಯನ್ನು ಕರೆದು ಕೂರಲು ಹೇಳಿದಾಗ ಮಂತ್ರಿಯು ವಿನಯವಾಗಿ ನಿರಾಕರಿಸಿದ ಸಂದರ್ಭದಲ್ಲಿ ಹೇಳಿದ್ದು.

3. ” ನಿಮ್ಮ ಅಣ್ಣನಿಗೆ ಸ್ವಲ್ಪ ಹಾಲಾದರೂ ಕೊಡು?
ಈ ಮಾತನ್ನು ಕಂಸನು ತಮ್ಮನ್ನು ನೋಡಲು ಬಂದಾಗ ವಸುದೇವ ದೇವಕಿಗೆ ಹೇಳಿದ ಮಾತು.

4. ” ಕೊಲ್ಲಲು ಬಂದವರನ್ನೆಲ್ಲಾ ಅವನೇ ಕೊಂದುಬಿಟ್ಟ”
ಕಂಸ ದೇವಕಿಯ ಹತ್ತಿರ ಕೃಪ್ಪನ ಬಗ್ಗೆ ಹೇಳುವಾಗ ಈ ಮಾತನ್ನು ಹೇಳಿದನು.

ಉ ) ಹೊಂದಿಸಿ ಬರೆಯಿರಿ:
1. ಒಡೆಯ - ಕುವಲಯಾಪೀಡ ( 4 )
2. ಶಿಲ್ಪ - ಶಕಟ ( )
3. ವೈದ್ಯ - ಗೋವರ್ಧನ ( 5 )
4. ಆನೆ - ದುರ್ವಿಧ ( 3 )
5. ಬೆಟ್ಟ - ಶೈಲಿಕ ( 2 )
ಧೇನುಕ ( )
ಕಂಸ ( 1 )
ಕೃತಿಕಾರರ ಪರಿಚಯ.
ಕವಿ : ಎ.ಆರ್. ಮಣಿಕಾಂತ್.
ಸ್ಥಳ : ಮಂಡ್ಯಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯಿತನಹಳ್ಳಿಯಲ್ಲಿ ಜನಿಸಿದರು.
ಎಂಜಿನಿಯರಿಂಗ್ ಪದವೀಧರರಾದ ಇವರು ಪತ್ರಿಕೋದ್ಯೋಗಿಯಾಗಿ ಕೆಲಸಮಾಡುತ್ತಿದ್ದಾರೆ. 'ಹಾಯ್ ಬೆಂಗಳೂರು', 'ಸಂಯುಕ್ತ ಕರ್ನಾಟಕ', 'ವಿಜಯ ಕರ್ನಾಟಕ' ಪತ್ರಿಕೆಗಳಲ್ಲಿ ಕೆಲಸಮಾಡಿ ಈಗ 'ಕನ್ನಡಪ್ರಭ' ಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿದ್ದಾರೆ. ಆ ಪತ್ರಿಕೆಯಲ್ಲಿ 'ಭಾವತೀರಯಾನ' ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. 'ಉಭಯಕುಶಲೋಪರಿ ಸಾಂಪ್ರತ', 'ಹಾಡು ಹುಟ್ಟಿದ ಸಮಯ', 'ಮರೆಯಲಿ ಹ್ಯಾಂಗ', 'ಈ ಗುಲಾಬಿಯು ನಿನಗಾಗಿ' 'ಅಪ್ಪ ಅಂದ್ರೆ ಆಕಾಶ' ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. 'ಸಂಕ್ರಾಂತಿಯಂದು ಸುಖ-ದುಃಖ' ಈ ಪ್ರಬಂಧವನ್ನು ಮಣಿಕಾಂತ್ ಅವರ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಎಂಬ ಕೃತಿಯಿಂದ ಆರಿಸಲಾಗಿದೆ.

ಪದಗಳ ಅರ್ಥ:
ಸಂಕ್ರಾಂತಿ-ದಾಟುವಿಕೆ, ಸೂರನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವ ದಿನ; ಕಿಚ್ಚು-ಬೆಂಕಿ: 'ಟೂ' ಬಿಡು-ಮಾತುಬಿಡು: ಪಟೇಲ-ಹಿಂದೆ ಊರಿನ ಕ್ಷೇಮಸಮಾಚಾರಗಳನ್ನು ನೋಡಿಕೊಳ್ಳುತ್ತಿದ್ದ ಹಿರಿಯ: ಮೀಯು-ಸ್ನಾನ ಮಾಡು; ತರಹೇವಾರಿ-ವಿಧವಿಧವಾದ; ಬ್ಯುಸಿ-ಬಿಡುವಿಲ್ಲದಿರುವುದು (ಇಂಗ್ಲೀಷ್ ಪದ): ಪ್ಯಾಕ್ ಮಾಡು-ಪೊಟ್ಟಣ ಕಟ್ಟು; ರೆಡಿಮೇಡ್-ಸಿದ್ಧವಾದ; ಫ್ಯಾಬ್ ಮಾಲ್-ಆಧುನಿಕ ಮಾರುಕಟ್ಟೆಯ ಒಂದು ರೂಪ.

ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ :
1. ಸಂಕ್ರಾಂತಿ ಯಾವ ರೀತಿಯ ಹಬ್ಬ?
ಸಂಕ್ರಾಂತಿ ಹಳ್ಳಿಗರ ಮಧ್ಯೆಯೇ ಸೃಷ್ಟಿಯಾದ ಹಬ್ಬ ಸಂಕ್ರಾಂತಿ ಜಾನುವಾರುಗಳಿಗೆ ಮೀಸಲಾದ ವಿಶೇಷ ಹಬ್ಬ.

2 . ಕಿಚ್ಚು ಹಾಯಿಸುವುದು ಎಂದರೆ ಏನು?
ಕಿಚ್ಚು ಹಾಯಿಸುವುದು ಎಂದರೆ ದನಕರುಗಳನ್ನು ಬೆಂಕಿಯಲ್ಲಿ ಜಿಗಿಸುವುದು.

3. ಹಳ್ಳಿಗಳಲ್ಲಿ ಪಟೇಲರು ಏನು ಕೊಡಿಸಿ ರಾಜಿ ಮಾಡುತ್ತಿದ್ದರು?
ಹಳ್ಳಿಗಳಲ್ಲಿ ಪಟೇಲರು ವರ್ಷದ ಕೊನೆಯಲ್ಲಿ ಜಗಳವಾಡಿದವರನ್ನು ಒಂದೆಡೆ ಸೇರಿಸಿ , ಅವರಿಂದ ಇವರಿಗೆ, ಇವರಿಂದ ಅವರಿಗೆ ಎಳ್ಳು ಬೆಲ್ಲ ಕೊಡಿಸಿ ರಾಜಿ ಮಾಡಿಸುತ್ತಿದ್ದರಂತೆ.

4. ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಏನು ಬಂದು ನಿಂತಿದೆ?
ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಟ್ರಾಕ್ಟರ್ ಬಂದು ನಿಂತಿದೆ.

5. ನಮ್ಮ ಸಂಕ್ರಾಂತಿಯಲ್ಲಿ ಏನು ಇರಬೇಕು?
ನಮ್ಮ ಸಂಕ್ರಾಂತಿಯಲ್ಲಿ ಸಂಸ್ಕೃತಿ ಸಂಪ್ರದಾಯಗಳ – ಜೊತೆ ಸಮೃದಿ ಐಶ್ವರ್ಯಗಳು, ಸಂಭ್ರಮ , ಸೊಬಗು ತುಂಬಿರಬೇಕು.

ಆ . ಕೆಳಗಿನ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. ಸಂಕ್ರಾಂತಿಯಲ್ಲಿ ದನಕರುಗಳಿಗೆ ಏನು ಮಾಡಲಾಗುತ್ತದೆ?
ಸಂಕ್ರಾಂತಿ , ದಂದು ದನ – ಕರುಗಳ ಮೈ ತೊಳೆದು , ಕೊರಳಿಗೆ ಗೆಜ್ಜೆ ಕಟ್ಟಿ ಕೊಂಬಿಗೆ ಬಣ್ಣ ಬಳಿದು , ಟೇಪು ಕಟ್ಟಿ , ಹೂವು ಮುಡಿಸಿ , ತರಹೇವಾರಿ ಬಲೂನ್ ಕಟ್ಟಿ ಶೃಂಗಾರ ಮಾಡುತ್ತಿದ್ದರು.

2. ಸಂಕ್ರಾಂತಿಯಲ್ಲಿ ಎಳ್ಳು , ಬೆಲ್ಲ , ಕೊಬ್ಬರಿ ಏಕೆ ಮಾಡಲಾಗುತ್ತದೆ?
ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮ ಒಡೆದಿರುತ್ತದೆ . ದೇಹದಲ್ಲಿಕೊಬ್ಬಿನ ಅಂಶ ಕಡಿಮೆಯಾಗಿರುತ್ತದೆ . ಸಂಕ್ರಾಂತಿಯಂದು ಎಳ್ಳು , ಬೆಲ್ಲ , ಕೊಬ್ಬರಿಯನ್ನು ತಿಂದರೆ ಕಳೆದು ಹೋದ ಕೊಬ್ಬಿನ ಅಂಶ ಬೇಗನೆ ಸಿಗುತ್ತದೆ . ಎಳ್ಳು ಬೆಲ್ಲ ಕೊಬ್ಬರಿಯಲ್ಲಿ ಅತ್ಯಧಿಕ ಕೊಬ್ಬಿನ ಅಂಶವಿರುವುದರಿಂದ ಸಂಕ್ರಾಂತಿಯ ನೆಪದಲ್ಲಿ ಈ ಮಿಶ್ರಣವನ್ನು ತಿನ್ನುತ್ತಾರೆ . ಆಗ ದೇಹದ ಚರ್ಮ ತಂತಾನೇ ಸರಿಹೋಗುತ್ತದೆ .. !

3. ಸಂಕ್ರಾಂತಿಯ ದಿನದಿಂದ ಸೂರ್ಯನ ಚಲನೆ – ಹೇಗಿರುತ್ತದೆ ?
ಸಂಕ್ರಾಂತಿ ದಿನದಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸ್ವಲ್ಪ ಸ್ವಲ್ಪ ಸಂಚರಿಸಲುಶುರುವಿಡುತ್ತಾನೆ. ಸಂಕ್ರಾಂತಿಯ ಮರುದಿನದಿಂದಲೇ ಹಗಲು ದೀರ್ಘವಾಗುತ್ತದೆ. ರಾತ್ರಿಯ ಅವಧಿ ಸಹಜವಾಗಿಯೇ ಕಡಿಮೆಯಾಗುತ್ತದೆ. ಉತ್ತರಾಯಣ ಪುಣ್ಯಕಾಲ ಬರೋದು ವರ್ಷದಲ್ಲಿ ಒಂದು ದಿನಮಾತ್ರ. ಅಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆಯಿದೆ.

4. ಇಂದಿನ ಕಾಲದಲ್ಲಿ ಎಳ್ಳು – ಬೆಲ್ಲ ನೀಡುವುದು ಹೇಗಿರುತ್ತದೆ?
ಇಂದು ಎಳ್ಳು – ಬೆಲ್ಲ ನೀಡುವುದು ಪ್ರತಿಷ್ಮೆಯ ವಿಚಾರವಾಗಿದೆ . ಜಾಸ್ತಿ ಎಳ್ಳು – ಬೆಲ್ಲ ಕೊಟ್ಟವರೇ ಶ್ರೀಮಂತರು ಎಂಬಂತಾಗಿದೆ . ದೊಡ್ಡದಾಗಿ ಕಾಣಲೆಂದು ದಪ್ಪ ದಪ್ಪ ಸಕ್ಕರೆ ಅಚ್ಚು ಸೇರಿಸಿ ಎಳ್ಳು – ಬೆಲ್ಲ ಪ್ಯಾಕ್ ಮಾಡುತ್ತಿದ್ದಾರೆ. ರೆಡಿಮೇಡ್ ಎಳ್ಳು ಬೆಲ್ಲದ ಪ್ಯಾಕ್‌ಗಳು ಪ್ರಾಬ್ ಮಾಲ್‌ಗಳಲ್ಲಿ ಧಾರಾಳವಾಗಿ ದೊರಕುತ್ತಿವೆ ಕಳಪೆ ಮಾಲಾದರೂ ಎಲ್ಲರೂ ಇದನ್ನೇ ಹಂಚಲು ಮುಂದಾಗುತ್ತಾರೆ . ಮುಖವಾಡದೊಂದಿಗೆ ಬದುಕುವ ಜನ ಇದನ್ನು ಒಪ್ಪಿಕೊಂಡಿದ್ದಾರೆ.

ಇ ) ಹೊಂದಿಸಿ ಬರೆಯಿರಿ:
1. ಯುಗಾದಿ – ಎಳ್ಳು – ಬೆಲ್ಲ (6).
2. ದೀಪಾವಳಿ – ದಸರಾ (5).
3. ರಂಜಾನ್ – ಯೇಸು ಹುಟ್ಟಿದ ದಿನ (4).
4. ಕ್ರಿಸ್‌ಮಸ್ – ಬೇವು – ಬೆಲ್ಲ (1).
5. ವಿಜಯದಶಮಿ – ಬೆಳಕಿನ ಹಬ್ಬ (2).
6. ಮಕರ ಸಂಕ್ರಾಂತಿ – ಉಪವಾಸದ ಪರ್ವದಿನ (3).
Please enable JavaScript in your browser to complete this form.
Full Name
Scroll to Top