ಲೇಖಕ   :   ಬೆ.ಗೋ ರಮೇಶ್.
ಜನನ   :    1945 ಆಗಸ್ಟ್ 22 , ಮೈಸೂರು ಜಿ , ಕೃಷ್ಣರಾಜನಗರ ತಾ . ದೊಡ್ಡಹನಸೋಗೆ ಗ್ರಾಮ.
ವಿದ್ಯಾಭ್ಯಾಸ   :  ಬಿ.ಇ. ಪಧವೀದರರು.
ಕೃತಿಗಳು : ಕನ್ನಡದಲ್ಲಿ 500 ಕ್ಕಿಂತಲೂ ಹೆಚ್ಚು ಕೃತಿಗಳು  ವಿಶ್ವವಿಖ್ಯಾತ ಮಹಿಳೆಯರು , ನಮ್ಮ ಗಮಕಿಗಳು , ಕನ್ನಡ ಕವಿರತ್ನತ್ರಯರು, ವಿಜ್ಞಾನಿಗಳ & ದೇಶಭಕ್ತರ ಜೀವನ ಚರಿತ್ರೆಗಳು , ವಚನಸಾಗರ.
ಪ್ರಶಸ್ತಿಗಳು : ವಚನ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 600 ವಚನಗಳ ಸಂಕಲನ ವಚನಸಾಗರ ಕೃತಿಗೆ ಸರ್ ಎಂ.ವಿ. ನವರತ್ನ ಪ್ರಶಸ್ತಿ , ಡೆಪ್ಯುಟಿ ಚನ್ನಬಸಪ್ಪ ರಾಜ್ಯ ಪ್ರಶಸ್ತಿ  ಪ್ರಸ್ತುತ ಪಾಠವನ್ನು ಇದರ ಪ್ರಸಿದ್ಧ ವ್ಯಕ್ತಿಗಳ ಬಾಳಿನಲ್ಲಿ ಒಂದು ಘಟನೆ ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ.

ಅ. ಆವರಣದಲ್ಲಿ ಕೊಟ್ಟಿರುವ ಪದಗಳಲ್ಲಿ ಸೂಕ್ತವಾದುದನ್ನು ಆರಿಸಿ ಬಿಟ್ಟಸ್ಥಳ ಭರ್ತಿಮಾಡಿರಿ.
(ಪಾಲಿಶ್, ಕಾಸು, ಕಾಗದ, ಚೂರು, ತಪ್ಪಿನದಾರಿ ).
1. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಗಬೇಕು ಎಂದೆನಿಸಿತು.
2. ಪ್ರಸಾದರು ಅವರಿಗೆಲ್ಲ ಅಷ್ಟಷ್ಟು ಕಾಸು ಕೊಟ್ಟರು.
3. ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು.
4. ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡೂ ಆಗಿತ್ತು.
ಆ . ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ರಚಿಸಿರಿ
ರಾಷ್ಟ್ರಪತಿ : ‘ ಅಬ್ದುಲ್ ಕಲಾಂ ‘ ನಮ್ಮ ರಾಷ್ಟ್ರಪತಿಗಳಾಗಿದ್ದರು.
ಕಾಸು : ಕಾಸು ಈಗ ಚಲಾವಣೆಯಲ್ಲಿ ಇಲ್ಲ.
ಶಿಸ್ತು : ಮಕ್ಕಳಿಗೆ ಚಿಕ್ಕವಯಸಿನಲ್ಲಿಯೇ ಸರಿಯಾದ ಶಿಸ್ತು ಬೆಳೆಸಬೇಕಾಗಿರುವುದು ತಂದೆ – ತಾಯಿಯ ಕರ್ತವ್ಯವೂ ಕೂಡ ಹೌದು.
ದಾರಿ : ನಾವು ಸರಿಯಾದ ದಾರಿಯಲ್ಲಿ ನಡೆದರೆ ಗುರಿ ತಲುಪಬಹುದು.

ಇ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ರಾಜೇಂದ್ರ ಪ್ರಸಾದರು ತಾವು ಯಾರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು?
ರಾಜೇಂದ್ರ ಪ್ರಸಾದರು ತಮ್ಮನ್ನು ಜನರ ಸೇವಕ ಎಂದು ಹೇಳಿಕೊಳ್ಳುತ್ತಿದ್ದರು.
2. ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ, ಪ್ರಸಾದರು ಏನನ್ನು ಕೊಟ್ಟರು?
ಪ್ರಸಾದರು ಪುಸ್ತಕದ ಪುಟಗಳನ್ನು ಹರಿದ ಮಕ್ಕಳಿಗೆ ಕಾಸು ಕೊಟ್ಟರು.
3. ಯಾವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ಹೇಳಿದರು?
ಪುಸ್ತಕದ ಪುಟಗಳನ್ನು ಹರಿದು ಹಾಕುವುದು ಒಳ್ಳೆಯ ಅಭ್ಯಾಸವಲ್ಲ ಎಂದು ಪ್ರಸಾದರು ಮಕ್ಕಳಿಗೆ ತಿಳಿ ಹೇಳಿದರು.
4. ಜಾಮಿಯಾ ಮಿಲಿಯಾ ಎಲ್ಲಿದೆ?.
 ಜಾಮಿಯಾ ಮಿಲಿಯಾ ದೆಹಲಿಯಲ್ಲಿದೆ.
5. ಜಾಕಿರ್ ಹುಸೇನರು ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಯಾವ ವೇಷ ಹಾಕಿದರು?
ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್ ಹುಸೇನರು ಬೂಟ್ ಪಾಲಿಶ್ ಮಾಡುವವನ ವೇಶ ಹಾಕಿದರು.

ಈ ಕೆಳಗಿನ ವಾಕ್ಯಗಳನ್ನು ಯಾರು ಯಾರಿಗೆ ಹೇಳಿದರು?
1. “ ನೋಡಿ ಮಕ್ಕಳೇ , ಪುಸ್ತಕಗಳು ಜ್ಞಾನ ಭಂಡಾರ. ”
ಈ ಮಾತನ್ನು ರಾಜೇಂದ್ರ ಪ್ರಸಾದರು ಮಕ್ಕಳಿಗೆ ಹೇಳಿದರು.
 2.“ ತಾತಾ , ನಾವು ಇನ್ನು ಮುಂದೆ ಎಂದೂ ಪುಸ್ತಕಗಳ ಪುಟಗಳನ್ನು ಹರಿಯುವುದಿಲ್ಲ.” 
 ಮಕ್ಕಳು,ರಾಜೇಂದ್ರ ಪ್ರಸಾದರಿಗೆ ಈ ಮಾತನ್ನು ಹೇಳಿದರು.
ಉ . ಕೆಳಗಿನ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
1. ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವವನ್ನು ವಿವರಿಸಿರಿ.
ಉತ್ತರ : ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವ ಪ್ರಶಂಸನೀಯವಾಗಿದ್ದು , ಅವರದು ಜನಕ ಮಹಾರಾಜನಂತೆ ಋಷಿ ಸದೃಶ ಜೀವನ , ಅವರು ಕೋಪವನ್ನು ಹತ್ತಿಕ್ಕಬಲ್ಲವರಾಗಿದ್ದು ಬಾಳಿನಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆ ಇವುಗಳಿಗೆ ಭಾರಿ ಮಹತ್ವ ನೀಡುತ್ತಿದ್ದರು. ತಾವು ` ಜನರ ಸೇವಕ ‘ ಎಂದು ಹೇಳಿಕೊಳ್ಳುತ್ತಿದ್ದರು.
2. ವಿದ್ಯಾರ್ಥಿಗಳಿಗೆ ಬುದ್ಧಿ ಕಲಿಸಲು ಜಾಕಿರ್‌ಹುಸೇನ್ ಏನು ಮಾಡಿದರು?
ಉತ್ತರ : ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ಜಾಕಿರ್ ಹುಸೇನ್‌ರವರು ವಿಶ್ವವಿದ್ಯಾನಿಲಯದ ಪ್ರವೇಶದ್ವಾರದಲ್ಲಿ ಒಬ್ಬ ಬೂಟ್ ಪಾಲಿಶ್ ಹಾಕುವವನ ವೇಶದಲ್ಲಿ , ಕೈಯಲ್ಲಿ ಪಾಲಿಶ್ ಡಬ್ಬಿ , ಬ್ರಷ್ ಹಿಡಿದು ಕುಳಿತಿದು , ಒಂದಿಬ್ಬರಿಗೆ ಪಾಲಿಶ್ ಕೂಡ ಮಾಡಿದ್ದರು.

ಊ . ವಚನ ಬದಲಿಸಿ ಬರೆಯಿರಿ.
ಗಿಡ – ಗಿಡಗಳು.
ತಮ್ಮಂದಿರು – ತಮ್ಮ.
ಪತ್ರಗಳು – ಪತ್ರ.
ಮಗು – ಮಕ್ಕಳು.

ಋ . ಪುಲ್ಲಿಂಗ ಅಥವಾ ಸ್ತ್ರೀಲಿಂಗ ರೂಪಕ್ಕೆ ಪರಿವರ್ತಿಸಿ ಬರೆಯಿರಿ.
ಅವನು- ಅವಳು.
ಇವಳು – ಇವಳು.
ಗೌಡತಿ- ಗೌಡ.
ಶರಣ – ಶರಣೆ.

ಎ . ಕೆಳಗಿನವುಗಳಿಗೆ ನಾಲ್ಕು ಉದಾಹರಣೆಗಳನ್ನು ಕೊಡಿರಿ.
ಅನ್ವರ್ಥನಾಮ: ವ್ಯಾಪಾರಿ, ಕುಂಟ, ಶಿಕ್ಷಕ.
ರೂಢನಾಮ: ನದಿಗಳು, ದೇಶ,  ಪರ್ವತ, ಶಾಲೆ.
ಅಂಕಿತನಾಮ : ಕೂಡಲಸಂಗಮದೇವ,  ಪುರಂದರವಿಠಲ, ಶ್ರೀ ಚೆನ್ನ ಮಲ್ಲಿಕಾರ್ಜುನ ,ಶಾಂತಿಪ್ರಿಯ.
ಅ. ಸರಿಯಾದ ಪದಗಳನ್ನು ಆಯ್ಕೆ ಮಾಡಿ ಬಿಟ್ಟ ಸ್ಥಳ ತುಂಬಿರಿ. 
1. ರಾಜನು ಒಡ್ಡೋಲಗ ವನ್ನು ಅಲ್ಲಿಗೇ ಪರಿಸಮಾಪ್ತಿಗೊಳಿಸಿದ. (ಓಡೋಲಗ , ಬಡೋಲಗ, ಓಲಗ).
2. ಸೇವಕಿ ಚುರುಕು ಬುದ್ಧಿಯವಳು.( ಮುರುಕು, ತಳುಕು, ಚುರುಕು).
3. ಮಂತ್ರಿ ಅರಮನೆಗೆ ಬಂದು ರಾಜನ ಕಾಲಿಗೆ ಬಿದ್ದು ನಿಜಾಂಶ ಹೇಳಿದ. ( ನಿಜಾಂಶ, ಸತ್ಯಾಂಶ , ಮಿಥ್ಯಾಮಶ )
4. ರಾಜನಿಗೆ ಗಂಧರ್ವಸೇನ ತೀರಿದ ವಿಷಯ ತಿಳಿಸಿದ್ದು ಮಂತ್ರಿ . (ಮಂತ್ರಿ, ರಾಣಿ, ಸೇವಕಿ)
5. ಅಂತಃಪುರ ಇದರ ಅರ್ಥ ರಾಣಿವಾಸ  (ರಾಣಿವಾಸ, ಸೇವಕಿಯರವಾಸ, ರಾಜಗೃಹ.)

ಆ . ಈ ಪದಗಳ ಅರ್ಥ ಬರೆಯಿರಿ. 
ನಿಟ್ಟುಸಿರು : ದೀರ್ಘವಾಗಿ ಬಿಡುವ ಉಸಿರು .
ಪರಿಸಮಾಪ್ತಿ :ಕೊನೆ, ಮುಕ್ತಾಯ .  ಮಾರ್ನುಡಿ : ಪ್ರತಿಯಾಗಿ ಮಾತನಾಡು, ಮಾತಿಗೆ ಮಾತುನಾಡುವುದು. 
ಉದ್ಧರಿಸು : ಹೇಳು , ಹೊರಗೆಡಹು.

ಇ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರಿ .
1. ಮಂತ್ರಿ ಅಳುತ್ತಾ ರಾಜನ ಬಳಿ ಏನೆಂದು ಹೇಳಿದ ? 
ಉತ್ತರ : ಮಂತ್ರಿಯು – “ ಗಂಧರ್ವ ಸೇನರು ತೀರಿಕೊಂಡರಂತೆ ” ಎಂದು, ಅಳುತ್ತಾ ರಾಜನ ಬಳಿ ಬಂದು ಹೇಳಿದ, 

2. ಗಂಧರ್ವಸೇನ ತೀರಿಕೊಂಡ ವಿಷಯವನ್ನು ರಾಜ ಯಾರಿಗೆ ಹೇಳಿದ ?
 ಉತ್ತರ : ರಾಜ ರಾಣಿವಾಸದವರಿಗೆ, ಗಂಧರ್ವಸೇನ ತೀರಿಕೊಂಡ ವಿಷಯವನ್ನು ಹೇಳಿದನು.

3. ರಾಣಿಯ ಸೇವಕಿ ಏನೆಂದು ಆಲೋಚನೆ ಮಾಡಿದಳು ?
ಉತ್ತರ : ನಮ್ಮ ಮಹಾರಜರಿಗೂ, ಆ ಗಂಧರ್ವ ಸೇನರಿಗೂ ಏನು ಸಂಬಂಧ?, ಎಂದು ರಾಣಿಯ ಸೇವಕಿ ಆಲೋಚನೆ ಮಾಡಿದಳು.

4. ರಾಣಿಯರು ನಗಲು ಕಾರಣವೇನು ? 
ಉತ್ತರ :  ರಾಣಿಯರು ನಗಲು, ರಾಜ ಮತ್ತು ಅವನ ಆಸ್ಥಾನಿಕರ ಮೂರ್ಖತನ ಕಾರಣವಾಯಿತು.

ಈ ಕೆಳಗಿನ ಪ್ರಶ್ನೆಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ .
1. ರಾಜನ ಒಡ್ಡೋಲಗ ನಡೆದ ಪ್ರಸಂಗವನ್ನು ವಿವರಿಸಿರಿ.  ರಾಜನ ಒಡೋಲಗದಲ್ಲಿ ನಡೆದ ಪ್ರಸಂಗವೆಂದರೆ ‘ ರಾಜ್ಯದ ಒಡೋಲಗ ನಡೆಯುತ್ತಿದ್ದಾಗ ಮಂತ್ರಿ ಗಟ್ಟಿಯಾಗಿ ಅಳುತ್ತಾ ಬಂದು , ಸಿಂಹಾಸನವನ್ನು ಚುಂಬಿಸಿ , ಭೂಮಿಯನ್ನು ಮುಟ್ಟಿ ನಮಸ್ಕರಿಸಿ ತನ್ನ ನಾಲಿಗೆಯನ್ನು ಉದ್ದ ಮಾಡಿ ಮಹಾರಾಜರೇ ಗಂಧರ್ವ ಸೇನರು ತೀರಿಕೊಂಡರಂತೆ‘ ಎಂದು ಉದ್ಗರಿಸುತ್ತಾ ಮೂರ್ಛ ಹೋದ . ರಾಜನು ಒಡೋಲಗವನ್ನು ಅಲ್ಲಿಗೆ ಪರಿಸಮಾಪ್ತಿಗೊಳಿಸಿ ಕಣ್ಣೀರು ಸುರಿಸುತ್ತಾ ಗಂಧರ್ವಸೇನರ ಆತ್ಮಶಾಂತಿಗೆ ನಾಲ್ಕು ದಿನಗಳ ಕಾಲ ರಾಜ್ಯಾದ್ಯಂತ ಎಲ್ಲರೂ ಶೋಕಾಚರಣೆ ಮಾಡಬೇಕೆಂದು ಆಜ್ಞಾಪಿಸಿದನು. ಮಂತ್ರಿಯ ಆರೈಕೆಗೆ ವೈದ್ಯರನ್ನು ಕರೆಸಿ ಉಪಚರಿಸುವಂತೆ ರಾಜಭಟರಿಗೆ ತಿಳಿಸಿ ಅಂತಃಪುರಕ್ಕೆ ಬಂದು ಅಲ್ಲಿಯೂ ಕರುಳುಕಿತ್ತು ಬರುವಮತೆ ಅಳತೊಡಗಿದನು.

ಉ. ಸಂದರ್ಭ ಸಹಿತ ವಿವರಿಸಿರಿ.
1.“ ರಾಜ ಅಲ್ಲಿಯೂ ಕರುಳು ಕಿತ್ತು ಬರುವಂತೆ ಅಳತೊಡಗಿದ . ” 
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು ‘ ಜಾನಪದ ಕಥೆ’ಯಿಂದ ಆರಿಸಲಾದ ‘ ಗಂಧರ್ವಸೇನ ‘ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ . 

ಸಂದರ್ಭ : ಪ್ರಸ್ತುತ ಈ ವಾಕ್ಯವನ್ನು ಕತೆಯನ್ನು ರಚಿಸಿದ ಕಥೆಗಾರ ರಾಜನ ಬಗ್ಗೆ ಕೇಳುಗರಿಗೆ , ಓದುಗರಿಗೆ ( ಮಕ್ಕಳಿಗೆ ) ಹೇಳುತ್ತಿದ್ದಾರೆ . 

ಸ್ವಾರಸ್ಯ : ಗಂಧರ್ವಸೇನ ಸತ್ತನೆಂಬ ವಿಷಯ ತಿಳಿದು , ಹಾಗೂ ಮಂತ್ರಿ ಅಳುತ್ತಾ ಮೂರ್ಛ ಹೋದುದ ಕಂಡು , ರಾಜನು ಕೂಡ ಅಳುತ್ತಾ , ರಾಣಿವಾಸದವರಿಗೆ ವಿಷಯ ತಿಳಿಸಿ ಅಲ್ಲಿಯೂ ಕರುಳು ಕಿತ್ತು ಬರುವಂತೆ ಅಳತೊಡಗಿದ . ವಿಶೇಷತೆ : ಭಾಷೆ ಸರಳವಾಗಿದೆ . ಸುಲಭವಾಗಿದೆ .

2.“ ಸ್ವಾಮಿ , ಅವರು ಯಾರು ? ಏನಾಗಿದ್ದರು ? ಎಂದು ನನಗೆ ತಿಳಿಯದು.” 
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು ‘ ಜಾನಪದ ಕಥೆ’ಯಿಂದ ಆರಿಸಲಾದ ‘ ಗಂಧರ್ವಸೇನ ‘ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ . 

ಸಂದರ್ಭ : ಈ ವಾಕ್ಯವನ್ನು ಪಡೆಯುವ ಮುಖ್ಯಸ್ಥ ಮಂತ್ರಿಗೆ ಗಂಧರ್ವಸೇನನ ಬಗ್ಗೆ ಹೇಳುತ್ತಾ ಈ ವಾಕ್ಯವನ್ನು ಹೇಳಿದ್ದಾನೆ . 

ಸ್ವಾರಸ್ಯ
: ಗಂಧರ್ವಸೇನಾ ಯಾರು ಎಂಬುದು ತನಗೇನು ತಿಳಿದಿಲ್ಲವೆಂದು , ಅವರು ಏನಾಗಿದ್ದರು ಎಂದು ಕೂಡ ತನಗೆ ಗೊತ್ತಿಲ್ಲ ಎಂಬ ಬಗ್ಗೆ ಮಂತ್ರಿಯವರಿಗೆ ತಳಿಸಿದನು . ತನ್ನ ಹೆಂಡತಿ ಹೇಳಿದ ವಿಷಯವನ್ನು ತಮಗೆ ತಿಳಿದಿರಲೆಂದು ಹೇಳಿದ ಎಂಬುದಾಗಿ ಹೇಳುತ್ತಾನೆ.

ಸ್ವಾರಸ್ಯ : ಪಡೆಯ ಮುಖ್ಯಸ್ಥನ ಮೂರ್ಖತನ ಇಲ್ಲಿ ತಿಳಿದು ಬಂದಿದೆ.
  3.“ ನಿನ್ನೆ ರಾತ್ರಿ ಕಣ್ಣು ಮುಚೊಂಬಿಟ್ಟ. ” 
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು ‘ ಜಾನಪದ ಕಥೆ’ಯಿಂದ ಆರಿಸಲಾದ ‘ ಗಂಧರ್ವಸೇನ ‘ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ. 

 ಸಂದರ್ಭ : ಈ ವಾಕ್ಯವನ್ನು ಮಡಿವಾಳ , ‘ ಗಂಧರ್ವಸೇನ ‘ ಎಂಬ ತನ್ನ ಕತ್ತೆಯು ಹಿಂದಿನ ರಾತ್ರಿ ತೀರಿಕೊಂಡ ಬಗ್ಗೆ , ಮಂತ್ರಿ , ಪಡೆಯ ಮುಖ್ಯಸ್ಥ, ಹಾಗೂ ಆತನ ಹೆಂಡತಿಗೆ ಹೇಳಿದಳು . 

ವಿವರಣೆ
: ‘ ಗಂಧರ್ವಸೇನ ‘ ಎಂಬುದು ಮಡಿವಾಳಿ ತನ್ನ ಕತ್ತೆಗೆ ಇಟ್ಟ ಪ್ರೀತಿಯ ಹೆಸರು , ಅದು ಹಿಂದಿನ ದಿನ ಸತ್ತು ಹೋದ ಕಾರನ ಮಗನಂತೆ ಸಾಕಿದ್ದ ಅದನ್ನು ಕಳೆದುಕೊಂಡು ದುಃಖಪಡುತ್ತಾ ಹಿಂದಿನ ದಿನ ರಾತ್ರಿ ಅದು ಸತ್ತು ಹೋಯಿತೆಂದು ಅಳುತ್ತಾ ತಿಳಿಸಿದಳು .

ಸ್ವಾರಸ್ಯ
: ಪ್ರಾಣಿಗಳ ಬಗ್ಗೆ ಇದ್ದ ಪ್ರೇಮ ಪ್ರೀತಿ ಸರಳ – ಸಹಜ ಭಾಷೆಯಲ್ಲಿ ವ್ಯಕ್ತವಾಗಿದೆ .

4.“ ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು .” 
ಆಯ್ಕೆ : ಪ್ರಸ್ತುತ ಈ ವಾಕ್ಯವನ್ನು ‘ ಜಾನಪದ ಕಥೆ’ಯಿಂದ ಆರಿಸಲಾದ ‘ ಗಂಧರ್ವಸೇನ ‘ ಎಂಬ ಕಥೆಯಿಂದ ಆಯ್ದುಕೊಳ್ಳಲಾಗಿದೆ . 

ಸಂದರ್ಭ : ಈ ವಾಕ್ಯವನ್ನು ಕಥೆಯ ಸಂಕಲನಗಾರರು ರಾಜ ಹಾಗೂ ಆತನ ಆಸ್ಥಾನಿಕರ ಮೂರ್ಖತನದ ಬಗ್ಗೆ ಬರೆಯುತ್ತಾ ‘ ಗಂಧರ್ವಸೇನ ‘ ಬಗ್ಗೆ ನಿಜಾಂಶ ತಿಳಿದಾಗ ರಾಣಿವಾಸದಲ್ಲಿ ಉಂಟಾದ ನಗುವನ್ನು ಕಂಡು ಬರೆದಿದ್ದಾರೆ.

ವಿವರಣೆ : ಕುರಿಗಳು ಯಾವಾಗಲೂ ತಲೆ ಬಗ್ಗಿಸಿ ಹೋಗುತ್ತಿರುತ್ತವೆ . ಮುಂದೆ ಹೋಗುವ ಕುರಿ ಹೇಗೆ ಸಾಗುವುದೋ ಅದನ್ನೆ ಎತರ ಕುರಿಗಳು ಹಿಂಬಾಲಿಸುವುವು . ಮೂರ್ಖತನಕ್ಕೆ ಉದಾಹರಣೆಯಾಗಿದೆ . ಈ ಗಾದೆಯನ್ನು ಇಲ್ಲಿ ವಿವರಿಸಲಾಗಿದೆ.

ಸ್ವಾರಸ್ಯ
: ಹಾಸ್ಯಸ್ಪದವಾದ ಗಾದೆ ಮಾತು ಇದಾಗಿದೆ .

ಊ . ಕೆಳಗಿನವುಗಳನ್ನು ನುಡಿಗಟ್ಟು , ಗಾದೆ , ಒಗಟುಗಳಾಗಿ ವಿಂಗಡಿಸಿ ಬರೆಯಿರಿ .
1.ಮೂಗು ತೂರಿಸು,
2. ಕೇಳಿದ ಕಿವಿ ಊರಿಗೆ ಮಾರಿ ತಂದಿತು,
3. ಕಾಲಿಗೆ ಬುದ್ಧಿಹೇಳು,
4. ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೆ ಬುರುಡೆ,
5. ಬೆನ್ನಿಗೆ ಚೂರಿ ಹಾಕು,
6. ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು,
7. ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ,    8. ತಲೆ ಹಾಕು,
9. ಮುಚ್ಚಿಟ್ಟದ್ದು ಮಣ್ಣಿನ ಪಾಲು,
10. ಕರುಳು ಹಿಂಡು,
11. ಮಂಕು ಬೂದಿ,
12. ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು.

ನುಡಿಗಟ್ಟುಗಳು.
ಮೂಗು ತೂರಿಸುಕಾಲಿಗೆ.
ಕಾಲಿಗೆ ಬುದ್ಧಿಹೇಳು.
ಬೆನ್ನಿಗೆ ಚೂರಿ ಹಾಕು.
ಕರುಳು ಹಿಂಡು.

ಗಾದೆಗಳು.
ಕೇಳಿದ ಕಿವಿ ಊರಿಗೆ ಮಾರಿ ತಂದಿತು.
ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲಾ ಬಿದ್ದವು.
ಮುಚ್ಚಿಟ್ಟದ್ದು ಮಣ್ಣಿನ ಪಾಲು.

ಒಗಟುಗಳು.
ದಾಸ್ ಬುರುಡೆ ದೌಲತ್ ಬುರುಡೆ ಲೋಕಕ್ಕೆಲ್ಲ ಎರಡೆ ಬುರುಡೆ.
ಚಿನ್ನದ ಪೆಟ್ಟಿಗೆಯಲ್ಲಿ ಬೆಳ್ಳಿ ಲಿಂಗ.
ಚಿಕ್ಕ ತೋಟ ಚೂರು ಕಸ ಬಿದ್ದರೆ ಹಾಳು. 
ಲೇಖಕ : ವಿ.ಎಸ್ . ಶಿರಹಟ್ಟಿಮಠರು.
ಜನನ  : 01-02-1953 , ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ.
ಕೃತಿಗಳು:  ನಾಟಕಗಳು : ತುಂಬದ ಕೊಡ , ನರಗುಂದ ಬಂಡಾಯ , ಮಾಡಿದ್ದುಣ್ಣೆ ಮಾರಾಯ , ಗುಣವಂತ.
ರಾಜಕುಮಾರ ಮುಂತಾದ 60 ಕ್ಕೂ ಹೆಚ್ಚಿನ ಮಕ್ಕಳ ನಾಟಕ ರಚಿಸಿದ್ದಾರೆ.
ಪ್ರಶಸ್ತಿಗಳು: 2002 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಸ್ತುತ ಪಾಠವನ್ನು ಇವರ ಹೂವಿನ ಹಂದರ ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ. 

ಅ . ಈ ಪದಗಳಿಗೆ ಎರಡು ಸಮಾನಾರ್ಥಕ ಪದಗಳನ್ನು ಬರೆಯಿರಿ.
ಗೆಳೆಯ : ಮಿತ್ರ , ಸ್ನೇಹಿತ.
ಹೆಂಡತಿ : ಪತ್ನಿ , ಮಡದಿ.
ರಾಜ : ಅರಸ , ರಾಯ.
ದುಡಿಮೆ : ಪರಿಶ್ರಮ , ಶ್ರಮಿಸು.

ಆ . ಈ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.
ಪರಮಮಿತ್ರ : ದುರ್ಯೋಧನನ ಪರಮ ಮಿತ್ರ ಕರ್ಣ.

ವಿಶ್ರಾಂತಿ : ನನಗೆ ಈಗ ಸ್ವಲ್ಪ ಹೊತ್ತು ವಿಶ್ರಾಂತಿ ಬೇಕು .

ಸತ್ಕಾರ : ಮನೆಗೆ ಅಥತಿಗಳು ಬಂದಾಗ ಅವರನ್ನು ಸತ್ಕರಿಸುವುದು ನಮ್ಮ ಸಂಸ್ಕೃತಿ . 

ಸಂತೋಷ : ಪರೀಕ್ಷೆಯಲ್ಲಿ ನನಗೆ ಹೆಚ್ಚಿನ ಅಂಕ ಬಂದುದರಿಂದ ನನಗೆ ಬಹಳ ಸಂತೋಷವಾಗಿದೆ.

ಶ್ರಮಿಸು : ರೈತರು ಹೊಲ – ಗದ್ದೆಗಳಲ್ಲಿ ಬಹಳವಾಗಿ ಶ್ರಮಿಸುತ್ತಾರೆ. 

ಇ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
1. ಸುಧಾಮ ಯಾವುದನ್ನು ಮಾನವಧರ್ಮ ಎನ್ನುತ್ತಾನೆ ?
 ಉತ್ತರ : ಸುಧಾಮನು "ಜೀವನದಲ್ಲಿ ಬಂದುದ್ದನ್ನು ಅನುಭವಿಸಲೇಬೇಕು , ಅದೇ ಮಾನವ ಧರ್ಮ” ಎಂಬುದಾಗಿ ಹೇಳುತ್ತಾನೆ.

2. ಯಾರಿಗಾಗಿ ಶ್ರೀಕೃಷ್ಣನ ಬಳಿ ಸಹಾಯ ಕೇಳಲು ಸುಧಾಮನ ಪತ್ನಿ ಹೇಳುತ್ತಾಳೆ ? 
ಉತ್ತರ : ಸುಧಾಮನ ಪತ್ನಿ, ಮಕ್ಕಳಿಗಾಗಿ ಶ್ರೀ ಕೃಷ್ಣನ ಬಳಿ ಸಹಾಯ ಕೇಳಲು ಹೇಳುತ್ತಾಳೆ.

3. ಸುಧಾಮನ ಕಣ್ಣಲ್ಲಿ ನೀರು ಏಕೆ ಬಂತು ?
 ಉತ್ತರ : ಶ್ರೀ ಕೃಷ್ಣ ಸುಧಾಮನನ್ನು ಕೈ ಹಿಡಿದು ಒಳಗೆ ಕರೆದುಕೊಂಡು ಬಂದಾಗ ಸುಧಾಮನ ಕಣ್ಣಲ್ಲಿ ಸಂತೋಷದಿಂದ ನೀರು ಬಂತು. 

4. ಮನೆಗೆ ಮರಳಿದ ಸುಧಾಮನು ಏನನ್ನು ಕಂಡನು ?
ಉತ್ತರ : ಮನೆಗೆ ಮರಳಿದ ಸುಧಾಮನು ತನ್ನ ಮನೆಯ ಜಾಗದಲ್ಲಿ ದೊಡ್ಡ ಅರಮನೆ ಇದ್ದದ್ದನ್ನು ಹೆಂಡತಿ ಮಕ್ಕಳು ರೇಷ್ಮೆ ವಸ್ತ್ರ ಧರಿಸಿ , ಮೈಮೇಲೆ ಚಿನ್ನದ ಒಡವೆಗಳನ್ನು ಧರಿಸಿದ್ದನ್ನು ಕಂಡನು . 

5. ಸುಧಾಮನ ಮನೆಯನ್ನು ಕಟ್ಟಿಸಿದವರು ಯಾರು ?
ಉತ್ತರ : ಶ್ರೀ ಕೃಷ್ಣ ನು, ಸುಧಾಮನ ಮನೆಯನ್ನು ಕಟ್ಟಿಸಿದವರು. 

ಈ ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ . 
1. ಕೃಷ್ಣ – ಸುಧಾಮರು ಗುರುಕುಲದಲ್ಲಿ ಕಳೆದ ದಿನಗಳನ್ನು ಪರಸ್ಪರ ನೆನಪಿಸಿಕೊಂಡದ್ದು ಹೇಗೆ ?
 ಉತ್ತರ : ಕೃಷ್ಣ ಸುಧಾಮರು ಗುರುಕುಲದಲ್ಲಿ ಒಟ್ಟಿಗೆ ಊಟ ಮಾಡುತ್ತಿದ್ದದ್ದು . ಕಟ್ಟಿಗೆ ತರಲು ಹೋಗುತ್ತಿದ್ದದ್ದು , ಗುರುಮಾತೆ ಕೊಟ್ಟಿದ್ದ ಹುರಿ

2. ಕೃಷ್ಣನು ಸುಧಾಮನಿಗೆ ಮನೆ ಕಟ್ಟಿಸಿಕೊಟ್ಟ ಸಂದರ್ಭವನ್ನು ವಿವರಿಸಿರಿ.
ಉತ್ತರ : ಕೃಷ್ಣನು ಸುಧಾಮನಿಗೆ ಮನೆ ಕಟ್ಟಿಸಿಕೊಟ್ಟ ಸಂದರ್ಭವನ್ನು ಸುಧಾಮನ ಹೆಂಡತಿ , ಶ್ರೀ ಕೃಷ್ಣನು ಮನೆ ಕಟ್ಟಿಸಿದ ರೀತಿಯನ್ನು ಈ ರೀತಿ ವಿವರಿಸಿದಳು , “ ನೀವು ದ್ವಾರಕ ನಗರ ತಲುಪಿದ ದಿನವೇ ಅಲ್ಲಿಂದ ಸೇವಕರ ದಂಡು ಬಂತು , ಬೇಕಾದ ಎಲ್ಲಾ ವಸ್ತುಗಳನ್ನು ತಂದರು , ಚಕ ಚಕಾಂತ ಮನೆ ನಿರ್ಮಿಸಿದರು . ನಮಗೆಲ್ಲ ಹೊಸ ಉಡುಪು , ಆಭರಣಗಳನ್ನು ಸಹ ಕೊಟ್ಟರು ”.

ಉ . ಕೆಳಗಿನ ಮಾತುಗಳನ್ನು ಯಾರು , ಯಾರಿಗೆ , ಯಾವಾಗ ಹೇಳಿದರು ? 
1. ನನ್ನನ್ನು ಕಂಡರೆ ಅವನಿಗೆ ಅಪಾರ ಪ್ರೀತಿ , ಸ್ನೇಹ , ಗೌರವ 
ಉತ್ತರ : ಈ ಮಾತನ್ನು ಸುಧಾಮನು ಶ್ರೀ ಕೃಷ್ಣನ ಬಳಿ ಸಹಾಯ ಕೇಳಲು ಹೇಳಿದ ತನ್ನ ಹೆಂಡತಿಗೆ ಹೇಳಿದನು .

2. ಹಸಿದಿರುವ ಮಕ್ಕಳಿಗೋಸ್ಕರನಾದರೂ ಹೋಗಿ ಕೇಳಿ 
 ಉತ್ತರ : ಈ ಮಾತನ್ನು ಸುಧಾಮನ ಹೆಂಡತಿ , ಸುಧಾಮನ ಆಪ್ತಮಿತ್ರನಾಗಿರುವ ಶ್ರೀ ಕೃಷ್ಣನ ಬಳಿ ಸಹಯ ಕೇಳಲು ಹೇಳಿದಾಗ ಮಿತ್ರನ ಬಳಿ ಕೇಳಿದರೆ ಸ್ವಾಭಿಮಾನಕ್ಕೆ ಧಕ್ಕೆ ಬರುವುದು ಸ್ನೇಹದ ದುರುಪಯೋಗವಾಗುವುದೆಂದು ಯೋಚಿಸುತ್ತದ್ದ ಸಂದರ್ಭದಲ್ಲಿ ಸುಧಾಮನಿಗೆ ಹೇಳುತ್ತಾನೆ.

3. ನನಗೆ ಗುರುಕುಲದ ಜೀವನ ನೆನಪಾಗುತ್ತದೆ .  ಉತ್ತರ : ನನಗೆ ಗುರುಕುಲದ ಜೀವನ ನೆನಪಾಗುತ್ತದೆ ಸಹಾಯ ಕೇಳಲೆಂದು ಬಂದ ಸುಧಾಮನು , ತನ್ನ ಬಡತನದ ಬಗ್ಗೆ ಹೇಗೆ ಹೇಳುವುದು ? ಏನೆಂದು ಸಹಾಯ ಕೇಳುವುದೆಂದು ಯೋಚಿಸುತ್ತಿರುವಾಗಲೇ ಶ್ರೀ ಕೃಷ್ಣನು ಸುಧಾಮನ ಬಳಿ ಬಂದು ಯೋಗಕ್ಷೇಮ ವಿಚಾರಿಸುತ್ತಾ ತಾವಿಬ್ಬರು ಈ ವಾಕ್ಯವನ್ನು ಸುಧಾಮನಿಗೆ ಹೇಳಿದನು.

4. ನಿಮಗೂ ರೇಷ್ಮೆ ಬಟ್ಟೆ ಕೊಟ್ಟಿದ್ದಾರೆ.   ಉತ್ತರ : ಶ್ರೀ ಕೃಷ್ಣನಿಂದ ಬೀಳ್ಕೊಂಡು ಏನೂ ಕೇಳದೆ ಬಂದ ಸುಧಾಮ ತನ್ನ ಪುಟ್ಟ ಗುಡಿಸಲ ಜಾಗದಲ್ಲಿ ಅರಮನೆ ಇದ್ದದ್ದು ಹೆಂಡತಿ ಮಕ್ಕಳು ರೇಷ್ಮೆ ಉಡುಗೆ – ತೊಡುಗೆ ಹಾಗೂ ಉಡವುಗಳನ್ನು ಧರಿಸಿದ್ದನ್ನು ಕಂಡು ಆಶ್ಚರ್ಯಪಟ್ಟನು . ಆಗ ಸುಧಾಂನ ಮಗ ಓಡಿ ಬಂದು ಈ ಮಾತನ್ನು ಸುಧಾಮನಿಗೆ ಹೇಳಿದನು .
ಅ . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ:
1. ಡಾ.ರಾಜಕುಮಾರ್ ಅವರು ಜನಿಸಿದ್ದು ಯಾವಾಗ?
ಉತ್ತರ : 1929 ರ ಏಪ್ರಿಲ್ 24 ರಂದು ಡಾ. ರಾಜಕುಮಾರ್‌ರವರು ಜನಿಸಿದರು.
2. ರಾಜಕುಮಾರರ ಹುಟ್ಟೂರು ಯಾವುದು?
ಉತ್ತರ : ರಾಜ್‌ಕುಮಾರ್‌ರ ಹುಟ್ಟೂರು ಚಾಮರಾಜ ನಗರ ಜಿಲ್ಲೆಯ ತಾಳವಾಡಿ ಪಕ್ಕದ ಗಾಜನೂರು.
3. ರಾಜಕುಮಾರ್‌ ಅವರ ತಂದೆ – ತಾಯಿಯ ಹೆಸರೇನು?
ಉತ್ತರ : ರಾಜಕುಮಾರರ ತಂದೆ ಸಿಂಗನಲ್ಲೂರೂ ಶ್ರೀ ಪುಟ್ಟಸ್ವಾಮಯ್ಯನವರು . ತಾಯಿ ಶ್ರೀಮತಿ ಲಕ್ಷ್ಮಮ್ಮನವರು.
4. ಗುಬ್ಬಿ ವೀರಣ್ಣನವರ ಕಂಪನಿ ಹೆಸರೇನು?
ಉತ್ತರ : ಗುಬ್ಬಿ ವೀರಣ್ಣನವರ ಕಂಪನಿ ಹೆಸರು “ ಗುಬ್ಬಿ ವೀರಣ್ಣ ನಾಟಕ ಕಂಪನಿ”
5. ರಾಜಕುಮಾರರು ಮೊದಲು ನಾಯಕನಟರಾದ ಸಿನಿಮಾ ಯಾವುದು?
ಉತ್ತರ : ‘ ಬೇಡರ ಕಣ್ಣಪ್ಪ ‘ ಎಂಬುದು ರಾಜಕುಮಾರರು ಮೊದಲು ನಾಯಕ ನಟರಾಗಿ ನಟಿಸಿದ ಸಿನಿಮಾ.
6. ರಾಜಕುಮಾರ್ ಅವರ ಶ್ರೀಮತಿಯವರ ಹೆಸರೇನು?
ಉತ್ತರ : ರಾಜಕುಮಾರ್ ಅವರ ಶ್ರೀಮತಿಯವರ ಹೆಸರು ಪಾರ್ವತಿ.
7. 1992 ರಲ್ಲಿ ಕರ್ನಾಟಕ ಸರ್ಕಾರವು ರಾಜಕುಮಾರರಿಗೆ ನೀಡಿದ ಪ್ರಶಸ್ತಿ ಯಾವುದು?
ಉತ್ತರ : 1992 ರಲ್ಲಿ ‘ ಕರ್ನಾಟಕ ರತ್ನ ‘ ಪ್ರಶಸ್ತಿ ಯನ್ನು ಕರ್ನಾಟಕ ಸರ್ಕಾರವು ರಾಜಕುಮಾರರಿಗೆ ನೀಡಿ ಗೌರವಿಸಿತು.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : 
1. ಊರಿನ ಜನರು ಮುತ್ತುರಾಜ ಜನಿಸಿದಾಗ ಏಕೆ ಸಂಭ್ರಮಪಟ್ಟರು?
 ಉತ್ತರ : ಏಪ್ರಿಲ್ ತಿಂಗಳು ಸುಡು ಬಿಸಿಲು , ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ಜೋರಾಗಿ ಮಳೆ ಬಂದದ್ದರಿಂದ ತುಂಬಾ ಸಂತೋಷವಾಯಿತು . ಭೂಮಿ ತಂಪಾಯಿತು . ಇಂತಹ ತಣ್ಣನೆ ಹೊತ್ತಿನಲ್ಲಿ ಮುತ್ತುರಾಜ ಜನಿಸಿದಾಗ ಸಹಜವಾಗಿಯೇ ಜನರಿಗೆ ಇಳೆಗೆ ಮಳೆಯನ್ನು ತಂದ ಕಂದ ಎಂದು ಹೆಮ್ಮೆಯುಂಟಾಯಿತು . ಆದ್ದರಿಂದ ಅವರೆಲ್ಲಾ ಸಂಭ್ರಮಪಟ್ಟರು.

2.‘ ಮುತ್ತುರಾಜ ‘ ಎಂಬ ಹೆಸರಿಡಲು ಕಾರಣವೇನು?
 ಉತ್ತರ : ಅವರ ತಂದೆ ಮುತ್ತತ್ತಿ ರಾಯರಿಗೆ ಹರಕೆ ಹೊತ್ತಿದ್ದರು.ಆ ಹರಕೆಯಿಂದಲೆ ಗಂಡು ಮಗು ಹುಟ್ಟಿದೆ ಮತ್ತು ಅವರಿಗೆ ಮಗನಿಗೆ ರಾಜ ಎಂಬ ಹೆಸರಿಡಬೇಕು ಎಂಬ ಮಹದಾಸೆಯಿತ್ತು . ಆದ್ದರಿಂದ ಮುತ್ತುರಾಜ ಎಂಬ ಹೆಸರಿಟ್ಟರು.

3. ಬಾಲ್ಯದಲ್ಲಿ ಮುತ್ತುರಾಜನಿಗೆ ಒದಗಿದ ಅನುಭವಗಳಾವುವು?
ಉತ್ತರ : ಇವರ ಬಾಲ್ಯವು ಗಾಜನೂರಿನ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಕಳೆಯಿತು . ತೀರಾ ಅಪರೂಪಕ್ಕೆ ನಂಜನಗೂಡು ಹಾಗೂ ಇನ್ನೂ ಅಪರೂಪಕ್ಕೆ ಮೈಸೂರಿನ ದರ್ಶನವಾಗುತ್ತಿತ್ತು . ಬಡತನ , ಹಸಿವು , ಜಗಳ , ಜಾತ್ರೆ , ಪೂಜೆ , ಉತ್ಸವ , ಹೊಲ , ತೋಟ , ಕಾಡುತೊರೆ , ಬಂಧು – ಬಳಗ , ತಾಯಿಯ ವಾತ್ಸಲ್ಯಧಾರೆ ಇವೆಲ್ಲವೂ ಸಹಜವಾಗಿ ದೊರೆತಿತ್ತು.

4. ರಂಗಭೂಮಿಯೊಂದಿಗೆ ರಾಜಕುಮಾರರ ಬಾಂಧವ್ಯ ಯಾವ ಬಗೆಯದು?
ಉತ್ತರ : ರಂಗಭೂಮಿಯು ಇವರ ಮೊದಲ ಆಡುಂಬೊಲ ಎಂದರೆ ಆಟದ ಬಯಲಾಗಿತ್ತು . ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ಬಾಲ ಕಲಾವಿದನಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು . ನಂತರ ಸುಬ್ಬಯ್ಯನಾಯ್ಡುರವರ ‘ ಶ್ರೀ ಸಾಹಿತ್ಯ ಸಾಮ್ರಾಜ್ಯ ‘ ಎಂಬ ನಾಟಕ ಸಂಸ್ಥೆಗೆ ಸೇರಿ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದು ಎವರ ಬದುಕಿನಲ್ಲಿ ಮಹತ್ವದ ದಿನಗಳಾಗಿದ್ದವು.

5. ರಾಜಕುಮಾರರಿಗೆ ಯಾವ ಯಾವ ಗೌರವ ಪುರಸ್ಕಾರ ಲಭಿಸಿವೆ?
 ಉತ್ತರ : ರಾಜಕುಮಾರರಿಗೆ ಗೌರವ ಡಾಕ್ಟರೇಟ್ , ಪದ್ಮಭೂಷಣ , ಗುಬ್ಬಿ ವೀರಣ್ಣ ಪ್ರಶಸ್ತಿ , ಕರ್ನಾಟಕ ರತ್ನ ಮತ್ತು ಡಾ . ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಹೀಗೆ ಅನೇಕ ಗೌರವ ಪುರಸ್ಕಾರಗಳು ಲಭಿಸಿವೆ.

6. ಅಭಿಮಾನಿಗಳು ರಾಜಕುಮಾರರಿಗೆ ನೀಡಿರುವ ಬಿರುದುಗಳನ್ನು ಹೆಸರಿಸಿ.
ಉತ್ತರ : ಇವರ ಅಭಿಮಾನಿಗಳು ಕಲಾ ಕೌಸ್ತುಭ , ಗಾನ ಗಂಧರ್ವ , ನಟ ಸಾರ್ವಭೌಮ , ಕಲಾ ಕೇಸರಿ , ಕನ್ನಡದ ಕಣ್ಮಣಿ , ವರನಟ , ರಸಿಕರ ರಾಜ ಮುಂತಾದ ಅನೇಕ ಬಿರುದುಗಳನ್ನು ನೀಡಿ ತಮ್ಮ ಪ್ರೀತಿಯನ್ನು ತೋರಿದ್ದಾರೆ.

ಇ . ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ :
1. ರಾಜಕುಮಾರ್ ಅವರ ಬಾಲ್ಯ ಜೀವನ ಹೇಗಿತ್ತು?
ಉತ್ತರ : ರಾಜಕುಮಾರ್‌ರವರು ಅವರ ತಂದೆ ತಾಯಿಗೆ ಮೊದಲ ಮಗನಾಗಿ , ಮುತ್ತತ್ತಿರಾಯನ ಕೃಪೆಯಿಂದ ಜನಿಸಿದ ಕೂಸು ಹುಟ್ಟಿದಾಗ ಕೆಂಪಗೆ, ಹಸಿ ಬೆಣ್ಣೆಯಂತಿದ್ದ ಹಸುಗೂಸು , ನೋಡಿದವರ ಕಣ್ಮನ ಸೆಳೆಯುವ ರೂಪ , ಮನೆಯವರಿಗೆ ಬಲು ಪ್ರೀತಿ , ಎಲ್ಲರೂ ಮುದ್ದಾಡುವವರೇ ಹೀಗೆ ಎಲ್ಲರ ಕಣ್ಮಣಿಯಾಗಿ ಬೆಳೆದರು . ಪ್ರಕೃತಿಯ ಮಡಿಲಲ್ಲಿ ಅಕ್ಕರೆಯ ಮಗುವಾಗಿ ಎಲ್ಲಾ ಹಳ್ಳಿಯ ಹುಡುಗರಂತೆ ಸ್ವಾಭಾವಿಕವಾಗಿ ಇವರ ಬಾಲ್ಯವಿತ್ತು.

2. ಭಕ್ತಿ ಪ್ರಧಾನ ಚಿತ್ರಗಳಲ್ಲಿ ರಾಜಕುಮಾರ್ ನಿರ್ವಹಿಸಿದ ಪಾತ್ರಗಳಾವುವು?
ಉತ್ತರ : ಭಕ್ತಿ ಪ್ರದಾನ ಚಿತ್ರಗಳಲ್ಲಿ ರಾಜಕುಮಾರರು ಎಲ್ಲಾ ಪಾತ್ರಗಳನ್ನೂ ಮಾಡಿದ್ದಾರೆ . ಅವರು ನಿರ್ವಹಿಸದೆ ಇರುವ ಪಾತ್ರವೇ ಇಲ್ಲ ಎಂದರೂ ತಪ್ಪಾಗಲಾರದು . ಪ್ರಮುಖವಾದ ಭಕ್ತಿ ಪ್ರದಾನ ಚಿತ್ರಗಳು ಭಕ್ತ ವಿಜಯ , ಹರಿ ಭಕ್ತ . ಓಹಿಲೇಶ್ವರ , ಕೃಷ್ಣಗಾರುಡಿಗೆ , ಧರ್ಮವಿಜಯ , ದಶಾವತಾರ ಶ್ರೀ ಶೈಲ ಮಹಾತ್ಮ , ಕಬೀರ್ , ಭಕ್ತ ಚೇತ , ತುಕಾರಾಂ , ಭೂಕೈಲಾಸದಲ್ಲಿ ರಾವಣನಾಗಿ , ಮೋಹಿನಿ ಭಸ್ಮಾಸುರದಲ್ಲಿ ಭಸ್ಮಾಸುರನಾಗಿ ,ಭಕ್ತ ಕುಂಬಾರದಲ್ಲಿ ಕುಂಬಾರನಾಗಿ , ಬಬ್ರುವಾಹನನಾಗಿ ಹೀಗೆ ಹೆಸರಿಸಲಾಗದಷ್ಟು ಪಾತ್ರಗಳನ್ನು ಮಾಡಿದ್ದಾರೆ.

3. ಗಾಯನಕ್ಷೇತ್ರಕ್ಕೆ ರಾಜಕುಮಾರರ ಸೇವೆಯನ್ನು ವಿವರಿಸಿ.
ಉತ್ತರ : ರಾಜಕುಮರರು ಒಳ್ಳೆಯ ಗಾಯಕರೂ ಹೌದು , ಚಿಕ್ಕಂದಿನಿಂದಲೂ ರಂಗ ಭೂಮಿಯ ಹಾಡುಗಳಲ್ಲಿ ಪರಿಣಿತರು. ಸೋದರ ಮಾವಂದಿರಿಂದ ಸಂಗೀತ ಪಾಠದ ತಾಲೀಮು ( ಅಭ್ಯಾಸ ) , ಒಳ್ಳೆಯ ಕಂಠಸಿರಿ ಹೀಗಾಗಿ ಸಾವಿರಾರು ಚಿತ್ರ ಗೀತೆ ಭಕ್ತಿ ಗೀತೆಗಳನ್ನು ಹಾಡಿದ್ದಾರೆ . ಭಾವ ಗೀತೆಗಳನ್ನು ಸಹ ಹಾಡಿದ್ದಾರೆ . ಇವರು ಅನೇಕ ಚಲನ ಚಿತ್ರದ ಹಾಡುಗಳು ಅಪಾರ ಜನಪ್ರಿಯತೆಯನ್ನು ಗಳಿಸಿದೆ . ಸಂಪತ್ತಿಗೆ ಸವಾಲ್ ಚಿತ್ರದ ‘ ಯಾರೇ ಕೂಗಾಡಲೀ ಹಾಡಿನಿಂದ ಪ್ರಸಿದ್ದಿ ಪಡೆದರು . ನಾದಮಯ ಹಾಡಿಗೆ ‘ ರಾಷ್ಟ್ರ ಪ್ರಶಸ್ತಿ ಬಂದಿದೆ . ಈ ರೀತಿ ಗಾಯನ ಕ್ಷೇತ್ರದಲ್ಲಿಯೂ ಒಳ್ಳೆಯ ಸೇವೆಯನ್ನು ಸಲ್ಲಿಸಿದ್ದಾರೆ.

4. ರಾಜಕುಮಾರ್ ಅವರು ಕನ್ನಡಿಗರಲ್ಲಿ ಮನೆಮಾತಾಗಿರುವುದರ ವೈಶಿಷ್ಟ್ಯವನ್ನು ತಿಳಿಸಿ.
ಉತ್ತರ : ರಾಜಕುಮಾರ್‌ ಶ್ರೇಷ್ಠ ನಟ , ಶ್ರೇಷ್ಠ ಗಾಯಕ , ಅಲ್ಲದೆ ಒಳ್ಳೆಯ ಹೃದಯವಂತ ಮನುಷ್ಯರಾಗಿದ್ದರು . ಕನ್ನಡಿಗರನ್ನು ಅಭಿಮಾನಿ ದೇವರೆಂದು ಕರೆಯುತ್ತಿದ್ದರು . ಇವರು ವಿನಯವಂತಿಕೆಗೆ ಸರಳತೆಗೆ ಹೆಸರು ವಾಸಿಯಾಗಿದ್ದಾರೆ . ಎಲ್ಲರನ್ನೂ ಪ್ರೀತಿಸುತ್ತಿದ್ದರು. ಇವರ ಸಹೃದಯತೆಗೆ ಮನ ಸೋಲದವರೇ ಇರಲಿಲ್ಲ . ಇಂದಿಗೂ ಇವರು ಎಲ್ಲರ ಪ್ರೀತಿ ಪಾತ್ರರಾಗಿ , ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ .ಎಲ್ಲರೂ ಇವರನ್ನು ಇಷ್ಟಪಡುತ್ತಾರೆ.

ಈ ಸಂದರ್ಭ ಸೂಚಿಸಿ:
1. ಇಳೆಗೆ ಮಳೆಯನ್ನು ಕರೆತಂದ ಕಂದ.
ಉತ್ತರ : ಈ ವಾಕ್ಯವನ್ನು ರಾಜ್‌ಕುಮಾರ್‌ರವರು ಹುಟ್ಟಿದಾಗ ಜನರ ಮನದಲ್ಲಿ ಮೂಡಿ ಬಂದ ಭಾವನೆ ಹಾಗೂ ಪರಸ್ಪರ ಈ ಮಾತನ್ನು ವಿನಿಮಯ ಮಾಡಿಕೊಂಡಿದ್ದಾರೆ.

2. ಅಪರೂಪಕ್ಕೆ ಮೈಸೂರಿನ ದರ್ಶನವೂ ಆಗುತ್ತಿತ್ತು.
 ಉತ್ತರ : ರಾಜಕುಮಾರರ ಬಾಲ್ಯದಲ್ಲಿ ಅವರ ಹುಟ್ಟೂರಾದ ದೊಡ್ಡ ಗಾಜನೂರಿನಿಂದ ನಂಜನಗೂಡಿಗೆ ಮತ್ತು ಅಪರೂಪಕ್ಕೆ ಮೈಸೂರಿಗೆ ಕರೆದುಕೊಂಡು ಹೋಗುತ್ತಿದ್ದರು ಎಂಬುದನ್ನು ತಿಳಿಸುವ ಸಂದರ್ಭದಲ್ಲಿ ಬಂದಿದೆ.

3. ಮುತ್ತುರಾಜನ ಹೆಸರನ್ನು ‘ ರಾಜಕುಮಾರ್ ‘ ಎಂದು ಬದಲಾಯಿಸಿದರು.
ಉತ್ತರ : ಇವರ ಮೊದಲ ಚಿತ್ರದ ನಿರ್ದೇಶಕರಾದ ಎಚ್.ಎಲ್.ಎನ್ .ಸಿಂಹರವರು ಇವರ ಹೆಸರನ್ನು ‘ ರಾಜ್ ಕುಮಾರ್ ‘ ಎಂದು ಬದಲಾಯಿಸಿದರು . ಮುತ್ತುರಾಜ್ ಎಂಬುದು ಸಿನಿಮಾರಂಗಕ್ಕೆ ಬೇಡ , ಸಿನಿಮಾರಂಗದಲ್ಲಿ ರಾಜಕುಮಾರನಾಗಿ ಬೆಳೆಯಲಿ ಎಂಬ ಹಾರೈಕೆಯೊಂದಿಗೆ ಹೆಸರನ್ನು ಬದಲಾಯಿಸಿದರು.

ಉ . ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಉತ್ತರಗಳಿಂದ ತುಂಬಿರಿ.
ರಾಜಕುಮಾರ್ ಅವರಿಗೆ ತಂದೆ ತಾಯಿ ಮುತ್ತುರಾಜು ಎಂದು ನಾಮಕರಣ ಮಾಡಿದ್ದರು.
ರಂಗಭೂಮಿಯು ಮುತ್ತುರಾಜನ ಮೊದಲ ಆಡುಂಬೊಲ.
ರಾಜಕುಮಾರ್‌ ನಾಯಕನಟರಾಗಿ ಅಭಿನಯಿಸಿದ ಮೊದಲ ಚಿತ್ರ ಬೇಡರ ಕಣ್ಣಪ್ಪ.
ಜೀವನ ಚೈತ್ರ ಚಿತ್ರದ ಗಾಯನಕ್ಕೆ ರಾಜಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿತು.
ರಾಜಕುಮಾರ್ ಅವರಿಗೆ ‘ ಕರ್ನಾಟಕ ರತ್ನ ‘ ಪುರಸ್ಕಾರ ದೊರೆತದ್ದು ರಲ್ಲಿ 1992 .

ಊ . ಹೊಂದಿಸಿ ಬರೆಯಿರಿ. 
ಮೊದಲ ಹೆಸರು  –   ಮುತ್ತುರಾಜ.
ಮೊದಲ ಚಿತ್ರ –   ಬೇಡರ ಕಣ್ಣಪ್ಪ.
ರಾಷ್ಟ್ರಪ್ರಶಸ್ತಿ–   ಜೀವನಚೈತ್ರ.
ಬದಲಾದ ಹೆಸರು–   ರಾಜಕುಮಾರ್.
Scroll to Top